ಬೆಂಗಳೂರು: ಕಾಲ್ ಪಿಕ್ ಮಾಡಿಲ್ಲವೆಂದು ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ ಪತಿರಾಯ, ಕುದಿಯೋ ಎಣ್ಣೆ ಸುರಿದು ಸಾಕ್ಷ್ಯನಾಶಕ್ಕೆ ಯತ್ನಿಸಿ ಅರೆಸ್ಟ್ ಆಗಿರುವ ಘಟನೆ ಬೆಂಗಳೂರಿನ (Bengaluru) ಮೈಕೋ ಲೇಔಟ್ನ ಬಿಳೇಕಹಳ್ಳಿಯಲ್ಲಿ ನಡೆದಿದೆ.
ಬಿಹಾರ ಮೂಲದ ರಂಜಿತ್ ಕುಮಾರ್ ಗುಪ್ತಾ ಬಂಧಿತ ಆರೋಪಿ. ಈತ ತನ್ನ ಪತ್ನಿ ಗುಂಜಾ ಮದೇಷಿಯಾ (38) ಜೊತೆ ಮೈಕೋ ಲೇಔಟ್ನ ಬಿಳೇಕಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ. ಫೋನ್ ಕರೆ ಸ್ವೀಕರಿಸುವುದಿಲ್ಲ ಎಂಬ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ನಿನ್ನೆ ಬೆಳಿಗ್ಗೆ ಮಕ್ಕಳು ಶಾಲೆಗೆ ತೆರಳಿದ ಬಳಿಕ ಮತ್ತೆ ಗಲಾಟೆ ಶುರುವಾಗಿದೆ.
ಆಕ್ರೋಶಗೊಂಡ ರಂಜಿತ್, ಪತ್ನಿ ಮೇಲೆ ಹಲ್ಲೆ ನಡೆಸಿ ವೇಲ್ ಹಾಗೂ ಸೀರೆಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಇದನ್ನ ಆಕಸ್ಮಿಕ ಸಾವು ಎಂದು ಬಿಂಬಿಸಲು ಮತ್ತು ಮೃತದೇಹ ವಿರೂಪಗೊಳಿಸಲು ದೇಹದ ಮೇಲೆ ಬಿಸಿ ಎಣ್ಣೆ ಎರಚಿ ಚರ್ಮ ಸುಲಿಯಲು ಯತ್ನಿಸಿದ್ದಾನೆ. ಇದನ್ನೂ ಓದಿ: ಕಡವೆ ಬೇಟೆಯಾಡಿ ಮಾಂಸ ಕತ್ತರಿಸುವಾಗ ಅಧಿಕಾರಿಗಳ ದಾಳಿ – ಮೂವರು ಅರೆಸ್ಟ್
ದಂಪತಿಯ ಜಗಳದ ಬಗ್ಗೆ ಮನೆ ಮಾಲೀಕರು ನೀಡಿದ ಮಾಹಿತಿಯನ್ನಾಧರಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಸದ್ಯ ಆರೋಪಿಯನ್ನು ಮೈಕೋ ಲೇಔಟ್ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈತನ ಕೋಪಕ್ಕೆ ಇತ್ತ ಅಪ್ಪನೂ ಇಲ್ಲದೇ ಅಮ್ಮನೂ ಇಲ್ಲದೆ ಮಕ್ಕಳು ಮಾತ್ರ ಬಡವಾಗಿವೆ. ಇದನ್ನೂ ಓದಿ: ಭೀಕರ ಬರ ಎದುರಿಸುತ್ತಿದ್ದರೂ ರಾಮದುರ್ಗ, ಸವದತ್ತಿಯನ್ನು ಕೈಬಿಟ್ಟ ಸರ್ಕಾರ – ಅನ್ನದಾತರಿಗೆ ಆಘಾತ
ದಶಕಗಳ ಅಂತರದಲ್ಲಿ, ದೆಹಲಿಯ ಒಂದೇ ಆಸ್ಪತ್ರೆಯಲ್ಲಿ ಮೂರು ಮಗು ಹುಟ್ಟುತ್ತವೆ.
ಮೊದಲ ಮಗು 1970 ರಲ್ಲಿ ಜನಿಸುತ್ತದೆ. ಅಂದಿನ ಕಾನೂನಿನ ಪ್ರಕಾರ, ಆ ಮಗುವಿನ ಪೋಷಕರು ಯಾರು ಅಥವಾ ಎಲ್ಲಿಂದ ಬಂದಿದ್ದಾರೆ ಎಂಬುದನ್ನು ಪರಿಗಣಿಸದೆ, ಹುಟ್ಟಿದ ತಕ್ಷಣವೇ ಅದು ಭಾರತೀಯ ಪೌರತ್ವವನ್ನು ಪಡೆಯುತ್ತದೆ.
ಎರಡನೇ ಮಗು 1995 ರಲ್ಲಿ ಜನಿಸುತ್ತದೆ. ಅಷ್ಟರಲ್ಲಿ ಕಾನೂನು ಬದಲಾಗಿರುತ್ತದೆ. ಮಗುವಿನ ತಂದೆ-ತಾಯಿಯಲ್ಲಿ ಕನಿಷ್ಠ ಒಬ್ಬರಾದರೂ ಈಗಾಗಲೇ ಭಾರತದ ಪೌರರಾಗಿದ್ದರೆ ಮಾತ್ರ ಆ ಮಗುವಿಗೆ ಪೌರತ್ವ ಸಿಗುತ್ತದೆ.
ಮೂರನೇ ಮಗು 2010 ರಲ್ಲಿ ಜನಿಸುತ್ತದೆ. ಈ ಬಾರಿ ನಿಯಮ ಇನ್ನಷ್ಟು ಬಿಗಿಯಾಗಿದೆ. ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಪೌರರಾಗಿರಬೇಕು, ಅಥವಾ ಒಬ್ಬರು ಪೌರರಾಗಿದ್ದು ಇನ್ನೊಬ್ಬರು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿಲ್ಲ ಎಂದು ದೃಢಪಟ್ಟಿರಬೇಕು.
ಇದನ್ನೂ ಓದಿ: ಒಂದು ದೇಶ, ಬಹುವಾಸ್ತವಗಳು; ಭಾರತದೊಳಗೆ ಇವೆ ಹಲವು ಭಾರತಗಳು
ಒಂದೇ ಆಸ್ಪತ್ರೆ. ಒಂದೇ ನಗರ. ಆದರೆ ‘ಭಾರತೀಯ’ ಎಂಬ ಒಂದೇ ಗುರಿಯನ್ನು ತಲುಪಲು ಮೂರು ಸಂಪೂರ್ಣ ಭಿನ್ನವಾದ ಕಾನೂನು ಮಾರ್ಗಗಳು!
ನಮ್ಮಲ್ಲಿ ಹೆಚ್ಚಿನವರು ಇದರ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ, ಏಕೆಂದರೆ ನಮಗೆ ಆ ಅಗತ್ಯವೇ ಬಂದಿರುವುದಿಲ್ಲ. ಬಹುತೇಕ ಭಾರತೀಯರಿಗೆ ಪೌರತ್ವ ಎಂಬುದು ನಾವು ಬೆಳೆದ ವಾತಾವರಣದಷ್ಟೇ ಸಹಜವಾದದ್ದು. ಆದರೆ ಎಲ್ಲೋ ಒಂದು ನಿರ್ದಿಷ್ಟ ಅರ್ಜಿ ನಮೂನೆಯಲ್ಲಿನ ದಿನಾಂಕವು, ನಮ್ಮಲ್ಲಿ ಪ್ರತಿಯೊಬ್ಬರೂ ಪೌರತ್ವಕ್ಕೆ ಹೇಗೆ ಅರ್ಹರಾಗುತ್ತೇವೆ ಎಂಬುದನ್ನು ನಿಖರವಾಗಿ ನಿರ್ಧರಿಸಿದೆ. ಆ ಅರ್ಜಿ ನಮೂನೆಯನ್ನು ಮೂಲತಃ ಯಾವುದರ ಆಧಾರದ ಮೇಲೆ ನಿರ್ಮಿಸಲಾಗಿದೆ ಎಂದು ತಿಳಿದುಕೊಳ್ಳುವುದು ಅಗತ್ಯ.
ಇದರ ಮೂಲ ಬಿಂದು ಇರುವುದು ಸ್ವತಃ ನಮ್ಮ ಸಂವಿಧಾನದಲ್ಲಿ — ಜನವರಿ 26, 1950 ರಂದು ಅಳವಡಿಸಿಕೊಂಡ ವಿಧಿಗಳು (Articles) 5 ರಿಂದ 11 ರವರೆಗೆ. ಈ ವಿಧಿಗಳನ್ನು ಎಂದಿಗೂ ಶಾಶ್ವತ ವ್ಯವಸ್ಥೆಯಾಗಿ ಮಾಡಲು ಉದ್ದೇಶಿಸಿರಲಿಲ್ಲ. ಲಕ್ಷಾಂತರ ಜನರನ್ನು ಹೊಸದಾಗಿ ರಚಿಸಲಾದ ಗಡಿಯಾದ್ಯಂತ ಚದುರಿಸಿದ ದೇಶ ವಿಭಜನೆಯ ನಂತರ, ಸಂವಿಧಾನ ಜಾರಿಗೆ ಬಂದ ದಿನದಂದು ಯಾರು ಪೌರರಾಗಿದ್ದರು ಎಂಬುದನ್ನು ಇತ್ಯರ್ಥಪಡಿಸುವ ಒಂದು ಬಾರಿಯ ನಿರ್ಧಾರ ಅದಾಗಿತ್ತು. ತದನಂತರ, ವಿಧಿ 11 ಪ್ರಸ್ತುತ ನಿಯಮಾವಳಿಗಳನ್ನು ರಚಿಸುವ ನಿರಂತರ ಜವಾಬ್ದಾರಿಯನ್ನು ಸಂಸತ್ತಿಗೆ ನೀಡಿತು. ಸಂಸತ್ತು ಆ ಕೆಲಸವನ್ನು 1955 ರಲ್ಲಿ ‘ಪೌರತ್ವ ಕಾಯ್ದೆ’ಯ (Citizenship Act) ಮೂಲಕ ಮಾಡಿತು ಮತ್ತು ಅಂದಿನಿಂದ ಹಲವಾರು ಬಾರಿ ಅದನ್ನು ತಿದ್ದುಪಡಿ ಮಾಡಿದೆ — ಮುಖ್ಯವಾಗಿ 1986, 2003 ಮತ್ತು 2019 ರಲ್ಲಿ.
ಆ ನಿಯಮಾವಳಿಯು ಭಾರತೀಯ ಪೌರತ್ವವನ್ನು ಪಡೆಯಲು ಐದು ಬಾಗಿಲುಗಳನ್ನು ಒದಗಿಸುತ್ತದೆ: ಜನನದ ಮೂಲಕ (by birth), ವಂಶಪಾರಂಪರ್ಯದ ಮೂಲಕ (by descent), ನೋಂದಣಿಯ ಮೂಲಕ (by registration), ದೇಶೀಕರಣದ ಮೂಲಕ (by naturalisation) ಅಥವಾ ಹೊಸ ಪ್ರದೇಶವನ್ನು ಭಾರತಕ್ಕೆ ಸೇರಿಸಿಕೊಳ್ಳುವ ಮೂಲಕ (by incorporation of territory).
ಜನನದ ನಿಯಮಗಳು ಹೆಚ್ಚು ಬದಲಾವಣೆಗೆ ಒಳಪಟ್ಟಿವೆ. ಅದನ್ನು ನಮ್ಮ ಮೂರು ಮಕ್ಕಳು ಅನುಭವಿಸಿದ ರೀತಿಯಲ್ಲೇ ಕಾಣಬಹುದು — ಆರಂಭಿಕ ದಶಕಗಳಲ್ಲಿ ಇದ್ದ ಮುಕ್ತ ‘ಜಸ್ ಸೋಲಿ’ (jus soli – ಹುಟ್ಟಿದ ಸ್ಥಳದ ಆಧಾರ) ಮಾನದಂಡದಿಂದ, ಇಂದಿನ ಹೆಚ್ಚು ಷರತ್ತುಬದ್ಧ ವ್ಯವಸ್ಥೆಯವರೆಗೆ, ಇದು ‘ಜಸ್ ಸ್ಯಾಂಗ್ವಿನಿಸ್’ (jus sanguinis – ರಕ್ತಸಂಬಂಧ/ಪೋಷಕರ ಪೌರತ್ವದ ಆಧಾರ) ನಿಯಮಕ್ಕೆ ಹತ್ತಿರದಲ್ಲಿದೆ. ಅಂದರೆ ನೀವು ಎಲ್ಲೋ ಜನಿಸಿದ ತಕ್ಷಣ ಪೌರತ್ವ ಸಿಗುವುದಿಲ್ಲ, ಬದಲಿಗೆ ನಿಮ್ಮ ಪೋಷಕರ ಪೌರತ್ವದ ಸ್ಥಿತಿಯನ್ನು ಆಧರಿಸಿ ನಿರ್ಧರಿಸಲಾಗುತ್ತದೆ.
ಈ ಉದ್ದಕ್ಕೂ ಒಂದು ತತ್ವವು ಬದಲಾಗದೆ ಉಳಿದಿದೆ: ಭಾರತವು ಏಕ ಪೌರತ್ವವನ್ನು (Single Citizenship) ಮಾತ್ರ ಗುರುತಿಸುತ್ತದೆ. ಬೇರೆ ದೇಶಗಳಲ್ಲಿ ಒಬ್ಬ ವ್ಯಕ್ತಿಯು ಅಮೆರಿಕ ಮತ್ತು ಬ್ರಿಟನ್ ಎರಡೂ ಪಾಸ್ಪೋರ್ಟ್ಗಳನ್ನು ಹೊಂದಿರುವಂತೆ, ಇಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲ. ಒಬ್ಬ ಭಾರತೀಯ ಪೌರನು ಸ್ವಇಚ್ಛೆಯಿಂದ ಮತ್ತೊಂದು ದೇಶದ ಪೌರತ್ವವನ್ನು ಪಡೆದರೆ, ಭಾರತೀಯ ಕಾನೂನು ಅವರ ಭಾರತೀಯ ಪೌರತ್ವವನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸುತ್ತದೆ. ಇದೇ ಕಾರಣಕ್ಕೆ, ‘ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ’ (OCI) ಕಾರ್ಡ್ನಲ್ಲಿ “ಸಿಟಿಜನ್” (ಪೌರ) ಎಂಬ ಪದವಿದ್ದರೂ, ಅದು ನಿಜವಾದ ಪೌರತ್ವವಲ್ಲ. ಇದು ಆಜೀವ ವೀಸಾ ಮತ್ತು ಕೆಲವು ಪ್ರಾಯೋಗಿಕ ಹಕ್ಕುಗಳನ್ನು ನೀಡುತ್ತದೆಯೇ ಹೊರತು ಮತದಾನದ ಹಕ್ಕು, ಪಾಸ್ಪೋರ್ಟ್ ಅಥವಾ ಸಂವಿಧಾನದ ಅಡಿಯಲ್ಲಿ ಪೂರ್ಣ ಪ್ರಮಾಣದ ಸ್ಥಾನಮಾನವನ್ನು ನೀಡುವುದಿಲ್ಲ.
ಇದನ್ನೂ ಓದಿ: ಸರ್ಕಾರಕ್ಕೆ ಪಾವತಿಸುವ ಜನರ ತೆರಿಗೆ ಹಣ ವಾಸ್ತವದಲ್ಲಿ ಎಲ್ಲಿಗೆ ಹೋಗುತ್ತದೆ, ಏನಾಗುತ್ತದೆ? ಇಲ್ಲಿದೆ ಅದರ ಕುತೂಹಲಕಾರಿ ಪಯಣ
ಇತ್ತೀಚಿನ ಪ್ರಮುಖ ಬದಲಾವಣೆಯೆಂದರೆ 2019 ರ ‘ಪೌರತ್ವ ತಿದ್ದುಪಡಿ ಕಾಯ್ದೆ’ (CAA). ಇದು ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ 2014 ರ ಅಂತ್ಯದ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ವಲಸಿಗರಿಗೆ ಪೌರತ್ವ ಪಡೆಯಲು ವೇಗದ ಮಾರ್ಗವನ್ನು ತೆರೆಯಿತು. ಇದು ಇತ್ತೀಚಿನ ಭಾರತೀಯ ರಾಜಕೀಯದಲ್ಲಿ ಅತ್ಯಂತ ಚರ್ಚಿತ ವಿಷಯಗಳಲ್ಲಿ ಒಂದಾಗಿದೆ. ಆಶ್ರಯವಿಲ್ಲದ ಪೀಡಿತ ಅಲ್ಪಸಂಖ್ಯಾತರಿಗೆ ಇದು ಸುರಕ್ಷಿತ ಕಾನೂನು ಮಾರ್ಗವನ್ನು ಒದಗಿಸುತ್ತದೆ ಎಂದು ಬೆಂಬಲಿಸುವವರು ವಾದಿಸುತ್ತಾರೆ. ಆದರೆ, ಧರ್ಮವನ್ನು ಆಧಾರವಾಗಿಟ್ಟುಕೊಂಡು ಪೌರತ್ವ ನೀಡುವುದು ಸಂವಿಧಾನದ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ವಿಮರ್ಶಕರು ವಾದಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇಬ್ಬರೂ ಒಂದೇ ಸಂವಿಧಾನವನ್ನು ವಿಭಿನ್ನವಾಗಿ ಅರ್ಥೈಸಿಕೊಂಡು ತಮ್ಮ ವಾದಗಳನ್ನು ಮಂಡಿಸುತ್ತಿದ್ದಾರೆ. ಆ ಚರ್ಚೆ ಇಂದಿಗೂ ಇತ್ಯರ್ಥವಾಗಿಲ್ಲ, ಮತ್ತು ಅದನ್ನು ಇತ್ಯರ್ಥಪಡಿಸುವುದು ಈ ಲೇಖನದ ಉದ್ದೇಶವಲ್ಲ.
ಎಲ್ಲಾ ತಿದ್ದುಪಡಿಗಳು ಮತ್ತು ವಾದಗಳ ನಡುವೆ ಗಮನಿಸಬೇಕಾದ ಮೂಲಭೂತ ಸತ್ಯವೇನೆಂದರೆ: ಭಾರತದಲ್ಲಿ ಪೌರತ್ವವನ್ನು ಎಂದಿಗೂ ಕೇವಲ ಜನಾಂಗೀಯ ಅಥವಾ ಧಾರ್ಮಿಕ ಪರಂಪರೆಯಾಗಿ ಹಸ್ತಾಂತರಿಸಲಾಗಿಲ್ಲ. ಅದನ್ನು ಒಂದು ಕಾನೂನಾಗಿ ಬರೆಯಲಾಗಿದೆ, ಮರುಬರೆಯಲಾಗಿದೆ ಮತ್ತು ಚರ್ಚಿಸಲಾಗಿದೆ; ಅದಕ್ಕಾಗಿಯೇ ಅಧಿಕಾರ ನೀಡಿದ ಸಂವಿಧಾನದ ಅಡಿಯಲ್ಲಿ ಸಂಸತ್ತು ಈ ಕಾರ್ಯವನ್ನು ಮಾಡಿದೆ. ಇದು ಹಿಂದೆ ಬದಲಾಗಿದೆ. ಮುಂದೆ ಮತ್ತೆ ಬದಲಾಗಬಹುದು.
ಈಗಲೂ ಎಲ್ಲೋ ಒಂದು ಆಸ್ಪತ್ರೆಯಲ್ಲಿ ಮತ್ತೊಂದು ಮಗು ಜನಿಸುತ್ತಿದೆ — ನಮ್ಮಲ್ಲಿ ಯಾರೂ ಬರೆಯದ ಮತ್ತು ನಮ್ಮಲ್ಲಿ ಕೆಲವೇ ಜನರು ಮಾತ್ರ ಓದಿರುವ ನಿಯಮದ ಪ್ರಕಾರ ಆ ಮಗು ಭಾರತದ ಪೌರನಾಗುತ್ತಿದೆ.
ಆ ನಿಯಮದ ಬಗ್ಗೆ ಮುಂದಿನ ಅಭಿಪ್ರಾಯಕ್ಕೆ ಬರುವ ಮೊದಲು, ಕನಿಷ್ಠ ಒಮ್ಮೆಯಾದರೂ ಅದನ್ನು ಓದುವುದು ಒಳ್ಳೆಯದು.
ಆಧಾರಗಳು: ಭಾರತದ ಸಂವಿಧಾನ, ವಿಧಿಗಳು 5-11; ಪೌರತ್ವ ಕಾಯ್ದೆ, 1955, ಮತ್ತು ಅದರ 1986, 2003 ಮತ್ತು 2019 ರ ತಿದ್ದುಪಡಿಗಳು; ಗೃಹ ಸಚಿವಾಲಯ, ಭಾರತ ಸರ್ಕಾರ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಮಂಗಳೂರು, (ಸೆಪ್ಟೆಂಬರ್ 18): ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆದಿದ್ದು, ಕರಾವಳಿಗರ ಹಲವು ಬೇಡಿಕೆಗಳು ಈಡೇರುವ ಸಾಧ್ಯತೆಗಳಿವೆ. ನಗರದ ಪಡೀಲ್ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ದಲ್ಲಿ ನಡೆಯಲಿರುವ ಐತಿಹಾಸಿಕ ಸಚಿವ ಸಂಪುಟ ಸಭೆ ಅಂತ್ಯವಾಗಿದ್ದು, ಉಡುಪಿ, ಮಂಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಹಾಗಾದ್ರೆ, ಸಭೆಯಲ್ಲಿ ಏನೆಲ್ಲಾ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎನ್ನುವುದನ್ನು ಸ್ವತಃ ಸಿಎಂ ಡಿಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಳ್ಳುತ್ತಿರುವುದನ್ನು ನೇರ ಪ್ರಸಾರದಲ್ಲಿ ನೋಡಿ.
ಇಸ್ಲಾಮಾಬಾದ್: ಖೈಬರ್ ಪಖ್ತುಂಕ್ವಾದ ಕೊಹಟ್ ಜಿಲ್ಲೆಯಲ್ಲಿರೋ ಮಸೀದಿಯಲ್ಲಿ (Mosque) ಪ್ರಾರ್ಥನೆ ವೇಳೆ ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ.
ಖೈಬರ್ ಪಖ್ತುಂಕ್ವಾದಲ್ಲಿರೋ (Khyber Pakhtunkhwa) ಪೊಲೀಸ್ ಲೈನ್ಸ್ ಬಳಿಯ ಮಸೀದಿಯಲ್ಲಿ ಶುಕ್ರವಾರ (ಇಂದು) ಪ್ರಾರ್ಥನೆ ವೇಳೆ ಸ್ಫೋಟ ಸಂಭವಿಸಿದೆ. ಪ್ರಬಲ ಸ್ಫೋಟದಲ್ಲಿ (Mega Explosion) ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬೆನ್ನಲ್ಲೇ ಸ್ಫೋಟದ ತೀವ್ರತೆಯನ್ನ ತೋರಿಸುವ ಹಲವಾರು ವಿಡಿಯೋಗಳು ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸ್ಫೋಟ ಸಂಭವಿಸಿದ ಬೆನ್ನಲ್ಲೇ ಸ್ಥಳೀಯರು ಕೂಡ ನೆರವಿಗೆ ಧಾವಿಸಿರೋದು ವಿಡಿಯೋದಲ್ಲಿ ಕಂಡುಬಂದಿದೆ.
ಈಗಾಗಲೇ ಸ್ಥಳೀಯ ಆಡಳಿತ ಮತ್ತು ಪೊಲೀಸರನ್ನೊಳಗೊಂಡ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪರಿಸ್ಥಿತಿಯನ್ನ ಅವಲೋಕಿಸುತ್ತಿದ್ದು, ಗಾಯಾಳುಗಳನ್ನ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ‘ರೆಸ್ಕ್ಯೂ 1122 ಖೈಬರ್ ಪಖ್ತುಂಕ್ವಾ’ದ ವಕ್ತಾರ ಬಿಲಾಲ್ ಅಹ್ಮದ್ ಫೈಜಿ ತಿಳಿಸಿದ್ದಾರೆ.
ಸದ್ಯಕ್ಕೆ ಯಾವುದೇ ಗುಂಪು ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ, ಇದು ‘ಇತ್ತೆಹಾದ್-ಉಲ್-ಮುಜಾಹಿದೀನ್ ಪಾಕಿಸ್ತಾನ’ (IMP) ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿ ಇರಬೇಕು ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿದೆ.
ಕಳೆದ ವರ್ಷದ ಏಪ್ರಿಲ್ನಲ್ಲಿ ರಚನೆಯಾದ ಈ ಉಗ್ರ ಸಂಘಟನೆಯು ಪಾಕಿಸ್ತಾನದ ಭದ್ರತಾ ಪಡೆಗಳ ವಿರುದ್ಧ ಸಮರ ಸಾರಿದೆ. ‘ತೆಹ್ರೀಕ್-ಎ-ತಾಲೀಬಾನ್ ಪಾಕಿಸ್ತಾನ’ (TTP) ದ ಪ್ರತಿಸ್ಪರ್ಧಿಯಾಗಿದೆ.
– ಧರ್ಮ ಜನರನ್ನು ಒಗ್ಗೂಡಿಸುತ್ತದೆ, ಬಂಧಿಸುವುದಿಲ್ಲ ಎಂದ RSS ಮುಖ್ಯಸ್ಥ
ಭೋಪಾಲ್: ಧರ್ಮ ಎನ್ನುವುದು ಜನರನ್ನು ಬಂಧಿಸುವುದಲ್ಲ, ಬದಲಾಗಿ ಎಲ್ಲರನ್ನು ಒಗ್ಗೂಡಿಸುವ ಶಕ್ತಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಹೇಳಿದರು. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ‘ಯುವ ಧರ್ಮ ಸಂಸತ್–2026’ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಧರ್ಮ ಮತ್ತು ‘ರಿಲಿಜನ್’ ನಡುವೆ ದೊಡ್ಡ ವ್ಯತ್ಯಾಸವಿದೆ ಎಂದು ಭಾಗವತ್ ವಿವರಿಸಿದರು. ‘ರಿಲಿಜನ್’ ಎಂಬ ಪದದ ಅರ್ಥ ಹಾಗೂ ಧರ್ಮದ ಪರಿಕಲ್ಪನೆ ಒಂದೇ ಅಲ್ಲ. ಧರ್ಮವನ್ನು ಅದರ ಮೂಲ ಅರ್ಥದಿಂದ ಬೇರ್ಪಡಿಸಿ ನೋಡಿದಾಗ ಸಾಮಾಜಿಕ ಹಾಗೂ ಸಾಂಪ್ರದಾಯಿಕ ಸಂಘರ್ಷಗಳಿಗೆ ಕಾರಣವಾಗಬಹುದು ಎಂದು ಅವರು ಹೇಳಿದರು. ಇದನ್ನೂ ಓದಿ: ನಿವೃತ್ತಿಯ ದಿನವೇ 1.01 ಕೋಟಿ ದೇಣಿಗೆ – PM CARESಗೆ ನ್ಯಾ.ಅವನೀಂದ್ರ ಕುಮಾರ್ ಸಿಂಗ್ ಕೊಡುಗೆ
ಭಾರತದ ಪರಂಪರೆಯಲ್ಲಿ ಧರ್ಮವು ಸತ್ಯ, ಕರ್ತವ್ಯ, ನೈತಿಕತೆ ಮತ್ತು ಎಲ್ಲರ ಕಲ್ಯಾಣದೊಂದಿಗೆ ಸಂಬಂಧ ಹೊಂದಿದೆ. ‘ನಾವು ಬದುಕಬೇಕು, ಎಲ್ಲರನ್ನೂ ಬದುಕಲು ಬಿಡಬೇಕು’ ಎಂಬುದು ಭಾರತೀಯ ಚಿಂತನೆಯ ಪ್ರಮುಖ ಅಂಶವಾಗಿದೆ. ಧರ್ಮದ ಉದ್ದೇಶ ಜನರನ್ನು ವಿಭಜಿಸುವುದಲ್ಲ, ಸಮಾಜವನ್ನು ಒಗ್ಗೂಡಿಸುವುದಾಗಿದೆ ಎಂದು ಪ್ರತಿಪಾದಿಸಿದರು.
ಯುವಕರು ಧರ್ಮದ ಬಗ್ಗೆ ಚಿಂತನೆ ನಡೆಸುತ್ತಿರುವುದು ಸಂತಸದ ವಿಚಾರ. ಧರ್ಮದ ಅರಿವು ವಯಸ್ಸಾದ ಬಳಿಕ ಪಡೆಯಬೇಕಾದ ವಿಷಯವಲ್ಲ. ಜೀವನದ ಆರಂಭದಿಂದಲೇ ಧರ್ಮವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಯಬೇಕು ಎಂದು ಭಾಗವತ್ ಹೇಳಿದರು.
ಮನುಷ್ಯ ತನ್ನ ಇಚ್ಛೆಯಂತೆ ಎಲ್ಲವೂ ನಡೆಯಬೇಕು ಎಂಬ ಭಾವನೆಯಲ್ಲಿರುತ್ತಾನೆ. ಆದರೆ ಸೃಷ್ಟಿ ತನ್ನದೇ ಆದ ಪ್ರಕೃತಿ ಮತ್ತು ಧರ್ಮದ ಶಾಶ್ವತ ನಿಯಮಗಳಂತೆ ನಡೆಯುತ್ತದೆ. ಹೀಗಾಗಿ ಯುವಕರು ‘ಎಲ್ಲವೂ ನನಗೆ ಗೊತ್ತು’ ಎಂಬ ಅಹಂಕಾರವನ್ನು ಬದಿಗಿಟ್ಟು, ಮನಸ್ಸನ್ನು ತೆರೆದಿಟ್ಟುಕೊಂಡು ಸತ್ಯವನ್ನು ಅರಿಯುವ ಪ್ರಯತ್ನ ಮಾಡಬೇಕು ಎಂದು ಭಾಗವತ್ ಸಲಹೆ ನೀಡಿದರು. ಧರ್ಮವನ್ನು ಅರ್ಥ ಮಾಡಿಕೊಳ್ಳುವುದು ಜೀವನಪೂರ್ತಿ ನಡೆಯುವ ಅನ್ವೇಷಣೆಯಾಗಿದೆ ಎಂದರು. ಇದನ್ನೂ ಓದಿ:
ಧರ್ಮದ ಕುರಿತು ಅರಿವು ಪಡೆಯುವ ಮುನ್ನ ಮನಸ್ಸನ್ನು ಪೂರ್ವಗ್ರಹಗಳಿಂದ ಮುಕ್ತಗೊಳಿಸಬೇಕು. ವಿನಯ, ಆತ್ಮಚಿಂತನೆ ಮತ್ತು ನಿರಂತರ ಕಲಿಕೆಯ ಮೂಲಕ ಧರ್ಮದ ನಿಜವಾದ ಅರ್ಥವನ್ನು ಅರಿಯಬಹುದು ಎಂದು ಅವರು ಹೇಳಿದರು.
ಭೋಪಾಲ್: ಭಾರತದ ಚೀತಾ ಸಂರಕ್ಷಣಾ ಯೋಜನೆಗೆ ಮತ್ತೊಂದು ಮಹತ್ವದ ಮೈಲಿಗಲ್ಲು ದೊರೆತಿದ್ದು, ಭಾರತದಲ್ಲೇ ಹುಟ್ಟಿದ ಹೆಣ್ಣು ಚೀತಾ KGP12 ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.
ಹೌದು.. ಪ್ರಾಜೆಕ್ಟ್ ಚೀತಾ ಆರಂಭವಾಗಿ ನಾಲ್ಕು ವರ್ಷ ಪೂರ್ಣಗೊಂಡ ಬೆನ್ನಲ್ಲೇ ಈ ಸಂತಸದ ಸುದ್ದಿ ಹೊರಬಿದ್ದಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಭಾರತದಲ್ಲೇ ಹುಟ್ಟಿದ ಹೆಣ್ಣು ಚೀತಾ KGP12 ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.
ಈ ಮೂಲಕ ಭಾರತದಲ್ಲಿ ಹುಟ್ಟಿ, ಇಲ್ಲಿನ ಕಾಡಿನಲ್ಲೇ ಸಂತಾನೋತ್ಪತ್ತಿ ಮಾಡಿದ ಚೀತಾ ಎಂಬ ಹೆಗ್ಗಳಿಕೆಗೆ KGP12 ಪಾತ್ರವಾಗಿದೆ. ಸೆಪ್ಟೆಂಬರ್ 17, 2022ರಂದು ಭಾರತದಲ್ಲಿ ಚೀತಾಗಳ ಪುನರ್ಪರಿಚಯ ಯೋಜನೆ ಆರಂಭವಾಗಿತ್ತು.
ಇದೀಗ ಭಾರತದಲ್ಲೇ ಹುಟ್ಟಿದ ಚೀತಾ ಕಾಡಿನ ನೈಸರ್ಗಿಕ ಪರಿಸರದಲ್ಲಿ ಮರಿಗಳಿಗೆ ಜನ್ಮ ನೀಡಿರುವುದು ಯೋಜನೆಯ ಮುಂದಿನ ಹಂತಕ್ಕೆ ಮಹತ್ವದ ಬೆಳವಣಿಗೆಯಾಗಿದೆ.
ಲೇಹ್ನಲ್ಲಿ ಚೀತಾ ಹೆಲಿಕಾಪ್ಟರ್ ಅಪಘಾತ: ಪವಾಡಸದೃಶ್ಯ ಬದುಕುಳಿದ ಮೇಜರ್ ಜನರಲ್; ಸೆಲ್ಫಿ ವೈರಲ್!KGP12 ಹಿನ್ನಲೆ
KGP12, ಗಾಮಿನಿ ಎಂಬ ಹೆಣ್ಣು ಚೀತಾದ ಮೊದಲ ಸಂತತಿಯ ಎರಡನೇ ಮರಿಯಾಗಿದೆ. ಗಾಮಿನಿಯನ್ನು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿತ್ತು. KGP12ಗೆ ಸುಮಾರು 25 ತಿಂಗಳ ವಯಸ್ಸಿದ್ದಾಗಲೇ ಅದು ಕಾಡಿನಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವಾಲಯದ ಅಧಿಕೃತ ಮಾಹಿತಿ ತಿಳಿಸಿದೆ.
ಕಾಡಿನಲ್ಲೇ ಚೀತಾ ಮರಿಗಳ ಜನನ
ಚೀತಾಗಳನ್ನು ಭಾರತಕ್ಕೆ ಪುನರ್ಪರಿಚಯಿಸಿದ ಬಳಿಕ ಕಾಡಿನ ನೈಸರ್ಗಿಕ ಪರಿಸರದಲ್ಲಿ ದಾಖಲಾಗಿರುವ ಮೊದಲ ಸಂತಾನೋತ್ಪತ್ತಿ ಘಟನೆ ಇದಾಗಿದೆ. ಅದರಲ್ಲೂ ಭಾರತದಲ್ಲೇ ಹುಟ್ಟಿದ ಹೆಣ್ಣು ಚೀತಾ ಕಾಡಿನಲ್ಲಿ ಮರಿಗಳಿಗೆ ಜನ್ಮ ನೀಡಿರುವುದು ಯೋಜನೆಯ ಪ್ರಮುಖ ಗುರಿಯಾದ ನೈಸರ್ಗಿಕ ಪರಿಸ್ಥಿತಿಯಲ್ಲಿ ಚೀತಾಗಳ ಬದುಕುಳಿಯುವಿಕೆ ಮತ್ತು ಸಂತಾನೋತ್ಪತ್ತಿ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ವನ್ಯಜೀವಿ ತಜ್ಞರ ಪ್ರಕಾರ, ಕಾಡಿನಲ್ಲಿ ಸ್ವಾಭಾವಿಕವಾಗಿ ಸಂತಾನೋತ್ಪತ್ತಿ ನಡೆಯುವುದು ಚೀತಾಗಳು ಭಾರತೀಯ ಪರಿಸರಕ್ಕೆ ಹೊಂದಿಕೊಳ್ಳುತ್ತಿರುವುದರ ಪ್ರಮುಖ ಸೂಚಕವಾಗಿದೆ. KGP12 ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಡಿನಲ್ಲೇ ವಾಸಿಸುತ್ತಿದ್ದು, ಇದೀಗ ತನ್ನ ಮೊದಲ ಸಂತಾನಕ್ಕೆ ಜನ್ಮ ನೀಡಿದೆ.
ಭಾರತದಲ್ಲಿ ಚೀತಾಗಳ ಸಂಖ್ಯೆ ಏರಿಕೆ
ಈ ನಾಲ್ಕು ಮರಿಗಳ ಜನನದೊಂದಿಗೆ ದೇಶದಲ್ಲಿನ ಚೀತಾಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಕುನೋ ರಾಷ್ಟ್ರೀಯ ಉದ್ಯಾನ ಹಾಗೂ ಮಧ್ಯಪ್ರದೇಶದ ಇತರ ಚೀತಾ ವಾಸಸ್ಥಳಗಳಲ್ಲಿ ಚೀತಾ ಸಂರಕ್ಷಣಾ ಕಾರ್ಯಕ್ರಮ ವಿಸ್ತರಿಸುತ್ತಿದೆ. ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಈ ಬೆಳವಣಿಗೆಯನ್ನು ಚೀತಾ ಸಂರಕ್ಷಣಾ ಪ್ರಯತ್ನಗಳಲ್ಲಿನ ಮಹತ್ವದ ಸಾಧನೆ ಎಂದು ಬಣ್ಣಿಸಿದ್ದಾರೆ.
ಕುನೋ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು, ವನ್ಯಜೀವಿ ನಿರ್ವಹಣಾ ಸಿಬ್ಬಂದಿ, ಪಶುವೈದ್ಯರು ಮತ್ತು ಕ್ಷೇತ್ರ ಸಿಬ್ಬಂದಿಯ ನಿರಂತರ ಪರಿಶ್ರಮವನ್ನು ಅವರು ಶ್ಲಾಘಿಸಿದ್ದಾರೆ.
2022ರಲ್ಲಿ ನಮೀಬಿಯಾದಿಂದ ಚೀತಾಗಳನ್ನು ಭಾರತಕ್ಕೆ ಕರೆತರುವ ಮೂಲಕ ಆರಂಭವಾದ ಪ್ರಾಜೆಕ್ಟ್ ಚೀತಾ ಇದೀಗ ಭಾರತದಲ್ಲೇ ಹುಟ್ಟಿದ ಎರಡನೇ ತಲೆಮಾರಿನ ಚೀತಾಗಳ ಸಂತಾನೋತ್ಪತ್ತಿಯ ಹಂತ ತಲುಪಿದೆ. KGP12ಗೆ ಜನಿಸಿರುವ ನಾಲ್ಕು ಮರಿಗಳು ಈ ಯೋಜನೆಯ ಮುಂದಿನ ಪಯಣಕ್ಕೆ ಹೊಸ ನಿರೀಕ್ಷೆ ಮೂಡಿಸಿವೆ.
ಈ ಮರಿಗಳ ಜನನದೊಂದಿಗೆ ಭಾರತದಲ್ಲಿ ಹುಟ್ಟಿ ಬದುಕುಳಿದಿರುವ ಚೀತಾಗಳ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಸದ್ಯ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 53 ಚೀತಾಗಳಿದ್ದು, ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯದಲ್ಲಿ 3 ಚೀತಾಗಳಿವೆ. ಚೀತಾಗಳಿಗೆ ಮೂರನೇ ತಾಣವಾಗಿ ರಾಣಿ ದುರ್ಗಾವತಿ ಹುಲಿ ಸಂರಕ್ಷಿತ ಪ್ರದೇಶವನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಚೀತಾಗಳನ್ನು ಅಲ್ಲಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಲಿದೆ.
– 70 ಕೆಜಿ ಮಾಂಸ, ಬಂದೂಕು ಜಪ್ತಿ
ಚಿಕ್ಕಮಗಳೂರು: ಲಕ್ಕವಳ್ಳಿ (Lakkavalli) ವಲಯದ ಎಂ.ಸಿ.ಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ಕಡವೆ (Sambar Deer) ಬೇಟೆಯಾಡಿ, ಮಾಂಸವನ್ನು ಕತ್ತರಿಸುತ್ತಿದ್ದ ವೇಳೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಎಂಸಿ ಹಳ್ಳಿಯ ಕಿರಣ್, ಗೋವಿಂದರಾಜು ಹಾಗೂ ಭದ್ರಾವತಿಯ ಮಣಿಕಂಠ ಬಂಧಿತ ಆರೋಪಿಗಳು. ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಾಲ್ವರು ಪರಾರಿಯಾಗಿದ್ದು, ಅವರ ಪತ್ತೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ. ಈ ಸಂಬಂಧ ಎಂಸಿ ಹಳ್ಳಿ ಕ್ವಾಟ್ರಸ್ನ ಪ್ರವೀಣ್, ಪ್ರಭು ಸೇರಿದಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹೊಸನಗರ | ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್
ದಾಳಿ ವೇಳೆ, ಸುಮಾರು 70 ಕೆಜಿ ಕಡವೆ ಮಾಂಸ, ತಲೆ ಹಾಗೂ ಕಾಲುಗಳ ಸಮೇತ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಒಂದು ನಾಡ ಬಂದೂಕು, ಒಂದು ದ್ವಿಚಕ್ರ ವಾಹನ, ಬೇಟೆಗೆ ಬಳಸಿದ್ದ ಕತ್ತಿ, ಚಾಕು, ಚೂರಿ ಹಾಗೂ ಹೆಡ್ಲೈಟ್ ಸೇರಿದಂತೆ ವಿವಿಧ ವಸ್ತುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಲಕ್ಕವಳ್ಳಿ ವಲಯದ, ವಲಯ ಅರಣ್ಯಾಧಿಕಾರಿ ಇಂದು ಜಿ.ಎಸ್, ಎಂ.ಸಿ.ಹಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಚನ್ನೇಗೌಡ ಜಿ.ಟಿ, ಲಕ್ಕವಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮನೋಜ್ ಕೆ.ಎಸ್, ಎಂ.ಸಿ.ಹಳ್ಳಿ ಗಸ್ತಿನ ಗಸ್ತು ಅರಣ್ಯ ಪಾಲಕ ಸಂತೋಷ್ ಎಂ.ಬಿ, ಲಕ್ಕವಳ್ಳಿ ಗಸ್ತಿನ ಗಸ್ತು ಅರಣ್ಯ ಪಾಲಕರಾದ ಬಾಲರಾಜ್, ಪುನೀತ್, ವಿಶ್ವನಾಥ್, ಅರಣ್ಯ ವೀಕ್ಷಕಿ ಕುಮಾರಿ ಶೋಭಾ ಸೇರಿದಂತೆ ಲಕ್ಕವಳ್ಳಿ ವಲಯದ ಸಿಬ್ಬಂದಿ ಭಾಗಿಯಾಗಿದ್ದರು. ಇದನ್ನೂ ಓದಿ: ವಿದ್ಯುತ್ ಹಾಯಿಸಿ ಎರಡು ಜಿಂಕೆಗಳ ಬೇಟೆ – ಮೂವರು ಆರೋಪಿಗಳು ಅರೆಸ್ಟ್
ಬಲಿಷ್ಠ ಭಾರತ ತಂಡದ ವಿರುದ್ಧದ ಟಿ20 ಸರಣಿಯಲ್ಲಿ 0-3 ಅಂತರದ ಸೋಲು ಕಂಡ ನಂತರ, ತಮ್ಮ ತಂಡದ ಸಾಮರ್ಥ್ಯವನ್ನು ಭಾರತವು ಅಳೆದು ಪರೀಕ್ಷಿಸಿದೆ ಎಂದು ಅಫ್ಘಾನಿಸ್ತಾನದ ಮುಖ್ಯ ಕೋಚ್ ರಿಚರ್ಡ್ ಪೈಬಸ್ ಹೇಳಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ತಂಡವು ಕೇವಲ 94 ರನ್ಗಳಿಗೆ ಆಲೌಟ್ ಆದ ಬಳಿಕ, ತಮ್ಮ ವೈಫಲ್ಯವನ್ನು ಮರೆಮಾಚಲು ಯಾವುದೇ ದಾರಿ ಉಳಿದಿಲ್ಲ ಎಂದು ಅವರು ಒಪ್ಪಿಕೊಂಡರು.
ಫೆಬ್ರುವರಿಯಲ್ಲಿ ನಡೆದ ಟಿ20 ವಿಶ್ವಕಪ್ನ ಗುಂಪು ಹಂತದ ಪಂದ್ಯದ ನಂತರ ಅಫ್ಘಾನಿಸ್ತಾನ ತಂಡವು ದೀರ್ಘಕಾಲದ ವಿರಾಮದ ಬಳಿಕ ಆಡಿದೆ; ಭಾರತ ವಿರುದ್ಧದ ಈ ಸೋಲು, ಕ್ರಿಕೆಟ್ನ ಅತಿ ಚಿಕ್ಕ ಮಾದರಿಯಲ್ಲಿ ತಂಡವು ಸದ್ಯ ಯಾವ ಹಂತದಲ್ಲಿದೆ ಎಂಬುದನ್ನು ತೋರಿಸಿದೆ. 'ನಾವು ಇನ್ನೂ ಸಾಕಷ್ಟು ಸುಧಾರಣೆಗಳನ್ನು ಮಾಡಿಕೊಳ್ಳಬೇಕಿದೆ. ವಿಶ್ವಕಪ್ ನಂತರ ಇದೇ ನಮ್ಮ ಮೊದಲ ಟಿ20 ಸರಣಿ ಎಂದು ನಾನು ಈ ಹಿಂದೆ ಹೇಳಿದ್ದೆ. ಇದು ನಿಜಕ್ಕೂ ದೀರ್ಘ ವಿರಾಮವಾಗಿತ್ತು. ತಂಡದ ಕೆಲ ಆಟಗಾರರು ಅಂದಿನಿಂದ ಇದೇ ಮೊದಲ ಬಾರಿಗೆ ತಂಡಕ್ಕೆ ಮರಳಿದ್ದಾರೆ. ನಮ್ಮ ಸಾಮರ್ಥ್ಯವನ್ನು ಅಳೆಯಲಾಗಿದೆ ಮತ್ತು ಪರೀಕ್ಷಿಸಲಾಗಿದೆ; ನಮ್ಮಲ್ಲಿರುವ ಕೊರತೆಗಳು ಎಲ್ಲಿವೆ ಎಂಬುದು ನಮಗೆ ಈಗ ತಿಳಿದಿದೆ. ಇನ್ನು ನಾವು ಆ ಕೊರತೆಗಳನ್ನು ಸರಿಪಡಿಸುವ ಕೆಲಸ ಆರಂಭಿಸಬೇಕಿದೆ' ಎಂದರು.
'ನಮ್ಮ ಪ್ರದರ್ಶನ ಕಳಪೆಯಾಗಿತ್ತು. ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ಅವಕಾಶ ಸಿಕ್ಕಿದ್ದು ನಮಗೆ ಸಂತೋಷ ತಂದಿತ್ತು. ಆರಂಭಿಕ 10 ಓವರ್ಗಳಲ್ಲಿ ಬೌಲಿಂಗ್ ಮೇಲೆ ನಮಗೆ ನಿಯಂತ್ರಣವಿರಲಿಲ್ಲ; ಆ ಸಮಯದಲ್ಲಿ ಅಭಿಷೇಕ್ ಮತ್ತು ಸಂಜು ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು. ಆದರೆ, 10 ರಿಂದ 20ನೇ ಓವರ್ಗಳ ಅವಧಿಯಲ್ಲಿ ನಾವು ತೋರಿದ ಚೇತರಿಕೆ ನನಗೆ ನಿಜಕ್ಕೂ ತೃಪ್ತಿ ನೀಡಿತು. ನಮ್ಮ ಆಟದಲ್ಲಿ ಕಂಡುಬಂದ ಆ ಹೋರಾಟದ ಮನೋಭಾವ ಅದ್ಭುತವಾಗಿತ್ತು; ಫೀಲ್ಡಿಂಗ್ನಲ್ಲಿ ನಮ್ಮ ಕೌಶಲ ಮತ್ತು ಉದ್ದೇಶಗಳು ಕೂಡ ಉತ್ತಮವಾಗಿದ್ದವು' ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಪೈಬಸ್ ಹೇಳಿದರು.
ಭಾರತದ ಇನಿಂಗ್ಸ್ನ ಅಂತಿಮ 60 ಎಸೆತಗಳಲ್ಲಿ ಅಫ್ಘಾನಿಸ್ತಾನ 79 ರನ್ಗಳನ್ನು ಬಿಟ್ಟುಕೊಟ್ಟಿತಾದರೂ ವಿಶೇಷವಾಗಿ ಅಭಿಷೇಕ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್ನಿಂದಾಗಿ ಪವರ್-ಪ್ಲೇನಲ್ಲೇ 100 ರನ್ಗಳು ಬಂದವು. ಬೌಲಿಂಗ್ನಲ್ಲಿನ ಅಸ್ಥಿರತೆ ಬಗ್ಗೆ ಪೈಬಸ್ ಅಸಮಾಧಾನ ವ್ಯಕ್ತಪಡಿಸಿದರು. 'ಅಂತಿಮ 10 ಓವರ್ಗಳಲ್ಲಿ ನಮ್ಮ ಫೀಲ್ಡಿಂಗ್ ಅತ್ಯುತ್ತಮವಾಗಿತ್ತು ಎಂದು ನನಗೆ ಅನ್ನಿಸಿತು. ರಶೀದ್ ಅದಕ್ಕೆ ಮುಂಚೂಣಿಯಲ್ಲಿದ್ದರು; ಅವರ ಪ್ರದರ್ಶನ ಅದ್ಭುತವಾಗಿತ್ತು. ಇನ್ನು ಬ್ಯಾಟಿಂಗ್ ವಿಷಯಕ್ಕೆ ಬಂದರೆ, ನಾವು 220 ರನ್ಗಳ ಗುರಿಯನ್ನು ಬೆನ್ನಟ್ಟಬೇಕಿತ್ತು' ಎಂದರು.
India vs Afghanistan: ಅಭಿಷೇಕ್ ಅಬ್ಬರಕ್ಕೆ ಅಫ್ಘಾನ್ ಧೂಳೀಪಟ; 127 ರನ್ಗಳ ಭರ್ಜರಿ ಜಯ, T20 ಸರಣಿ ಕ್ಲೀನ್ ಸ್ವೀಪ್'ಗುರಿಯನ್ನು ಬೆನ್ನಟ್ಟಿ ತಲುಪುವುದೇ ಇಂಟೆಂಟ್ ಆಗಿರುತ್ತದೆ. ಸ್ಕೋರ್ಬೋರ್ಡ್ನ ಒತ್ತಡವಿರುತ್ತದೆ ಮತ್ತು ಪ್ರತಿ ಓವರ್ಗೆ 11 ರನ್ಗಳ ವೇಗದಲ್ಲಿ ಆಡಬೇಕಾಗುತ್ತದೆ; ಇಲ್ಲಿ ತಪ್ಪಿಸಿಕೊಳ್ಳಲು ಯಾವುದೇ ದಾರಿಯಿರುವುದಿಲ್ಲ. ಅಂತಿಮವಾಗಿ ಗುರಿ ತಲುಪಲು ವಿಫಲರಾದರೆ, 150 ರನ್ ಗಳಿಸಿದರೂ ರನ್-ರೇಟ್ನಲ್ಲಿ ಹಿಂದುಳಿದಿದ್ದರೆ ವ್ಯರ್ಥವಾಗುತ್ತದೆ' ಎಂದು ಹೇಳಿದರು.
'ನಾವು ನಮ್ಮ ಆಟದ ಯೋಜನೆಯನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಬೇಕಿತ್ತು. ಆದರೆ ನಮಗೆ ಅದರಲ್ಲಿ ಯಶಸ್ಸು ಸಿಗಲಿಲ್ಲ. ಆರಂಭಿಕ ಆಟಗಾರರಾದ ಇಬ್ರಾಹಿಂ ಮತ್ತು ಗುರ್ಬಾಜ್ ಅವರ ವಿಷಯದಲ್ಲಿ, ಆಕ್ರಮಣಕಾರಿ ಆಟವಾಡುವ ನಮ್ಮ ಉದ್ದೇಶ ಮತ್ತು ಮನಸ್ಥಿತಿ ಉತ್ತಮವಾಗಿತ್ತು ಎಂದು ನನಗೆ ಅನ್ನಿಸಿತು. ಭಾರತದ ಆರಂಭಿಕ ಬೌಲರ್ಗಳ ವಿರುದ್ಧ ನಾವು ಉತ್ತಮವಾಗಿ ಆಡಿದೆವು. ಆದರೆ ಆ ಸ್ಥಿರತೆಯನ್ನು ಕಾಯ್ದುಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ' ಎಂದು ಅವರು ತಿಳಿಸಿದರು.
'ಸಮಸ್ಯೆಯು ಬ್ಯಾಟಿಂಗ್ ಕ್ರಮಾಂಕಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಒತ್ತಡದ ಪರಿಸ್ಥಿತಿಯಲ್ಲಿ ಆಟವನ್ನು ಕಾರ್ಯಗತಗೊಳಿಸುವುದಕ್ಕೆ (execution) ಸಂಬಂಧಿಸಿದ್ದು. ಆರಂಭಿಕರಾಗಿ ಇಬ್ರಾಹಿಂ ಮತ್ತು ಗುರ್ಬಾಜ್ ಈಗಾಗಲೇ ನೆಲೆಗೊಂಡಿರುವ ಜೋಡಿಯಾಗಿದ್ದಾರೆ. ನಮ್ಮ ಆಟದ ಧೋರಣೆ ಅಥವಾ ಉದ್ದೇಶವು ಈ ಬಾರಿ ಉತ್ತಮವಾಗಿತ್ತು ಎಂದು ನನಗೆ ಅನ್ನಿಸಿತು. ಹಿಂದಿನ ಪಂದ್ಯದಲ್ಲಿ ನಾವು ಅತಿಯಾದ ನಿಷ್ಕ್ರಿಯತೆಯನ್ನು ತೋರಿದ್ದೆವು ಮತ್ತು ಭಾರತೀಯ ಬೌಲರ್ಗಳಿಗೆ ನಮ್ಮ ಮೇಲೆ ಸುಲಭವಾಗಿ ಹಿಡಿತ ಸಾದಿಸಲು ಅವಕಾಶ ನೀಡಿದ್ದೆವು ಎಂದು ನನಗೆ ಅನಿಸಿತ್ತು. ಹಾಗಾಗಿ, ಭಾರತದ ಬೌಲಿಂಗ್ ದಾಳಿಯನ್ನು ನಾವು ಎದುರಿಸಿದ ರೀತಿ ನನಗೆ ತೃಪ್ತಿ ತಂದಿದೆ. 220 ರನ್ಗಳ ಗುರಿಯನ್ನು ಬೆನ್ನಟ್ಟುವಾಗ ನೀವು ನಿರಂತರವಾಗಿ ಮುನ್ನಡೆಯುತ್ತಲೇ ಇರಬೇಕು. ಹೀಗಾಗಿ, ನಮ್ಮ ಎಲ್ಲ ಆಟಗಾರರು ಸುಧಾರಿಸಿಕೊಳ್ಳಬೇಕಾದ ಅಂಶಗಳಿವೆ. ಬೌಲಿಂಗ್ನ ವಿಷಯದಂತೆಯೇ, ಭಾರತದಂತಹ ಪ್ರಬಲ ಬೌಲಿಂಗ್ ಪಡೆಯ ವಿರುದ್ಧ ಆಡುವಾಗ—ಅದರಲ್ಲೂ ಜಸ್ಪ್ರೀತ್ ಮತ್ತು ಅಕ್ಷರ್ ಅವರಂತಹ ವಿಶ್ವದರ್ಜೆಯ ಬೌಲರ್ಗಳನ್ನು ಎದುರಿಸುವಾಗ—ನಿಮ್ಮ ಆಟದ ಯೋಜನೆಗಳ ಬಗ್ಗೆ ನೀವು ಅತ್ಯಂತ ಸ್ಪಷ್ಟತೆಯನ್ನು ಹೊಂದಿರಬೇಕಾಗುತ್ತದೆ' ಎಂದರು.
'ಹಾಗಾಗಿ ನಮಗೆ ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ. ಇಲ್ಲಿಗೆ ಬಂದು, ವಿಶ್ವದ ಅತ್ಯುತ್ತಮ T20 ತಂಡದ ವಿರುದ್ಧ ಆಡುವುದು ಮತ್ತು ಒತ್ತಡದ ಪರಿಸ್ಥಿತಿಯಲ್ಲಿ ಆಡುವುದು ಹೇಗಿರುತ್ತದೆ ಎಂಬುದನ್ನು ಅರಿಯುವುದು ಬಹಳ ಮುಖ್ಯ; ಏಕೆಂದರೆ ಇದು ಲೀಗ್ ಕ್ರಿಕೆಟ್ ಅಲ್ಲ ಅಥವಾ ಕೆಳ ಶ್ರೇಯಾಂಕದ ತಂಡಗಳ ವಿರುದ್ಧದ ಅಂತರರಾಷ್ಟ್ರೀಯ ಪಂದ್ಯವೂ ಅಲ್ಲ. ಇದೊಂದು ಅತ್ಯುನ್ನತ ಮಟ್ಟದ ಪರೀಕ್ಷೆಯಾಗಿದೆ. ಹೀಗಾಗಿ, ನಾವು ಯಾವ ವಿಷಯಗಳಲ್ಲಿ ಸುಧಾರಣೆ ಮಾಡಿಕೊಳ್ಳಬೇಕು ಎಂಬುದು ನಮಗೆ ಸ್ಪಷ್ಟವಾಗಿ ಅರಿವಾಗುತ್ತಿದೆ. ಪಂದ್ಯದ ಮೇಲೆ ಹಿಡಿತ ಸಾಧಿಸಲು ಯಾವ ರೀತಿಯ ಕೌಶಲಗಳು ಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ನಮ್ಮ ಕ್ರಿಕೆಟಿಗರಿಗೆ, ಅದರಲ್ಲೂ ವಿಶೇಷವಾಗಿ ನಮ್ಮ ಬೌಲರ್ಗಳಿಗೆ ಇದೊಂದು ಉತ್ತಮ ಅವಕಾಶ. ಇಂತಹ ಅನುಭವ ಸಿಗುವವರೆಗೂ, ಆ ವಿಷಯದ ನೈಜ ಸ್ವರೂಪ ಏನೆಂಬುದು ನಮಗೆ ತಿಳಿಯುವುದಿಲ್ಲ'
ಬೆಂಗಳೂರು: ರಾಜ್ಯದ ಜನರಿಗೆ ದಿನೇ ದಿನೇ ಒಂದಿಲ್ಲೊಂದು ರೀತಿಯಲ್ಲಿ ಬೆಲೆ ಏರಿಕೆ ಬಿಸಿ ತಟ್ಟುತ್ತಲೇ ಇದೆ. ಇದೀಗ ಹಾಲು ಉತ್ಪಾದಕರ ಒಕ್ಕೂಟ ಲೀಟರ್ ಹಾಲಿಗೆ 8 ರೂ. ಏರಿಕೆ (Milk Price) ಮಾಡುವಂತೆ ಡಿಮ್ಯಾಂಡ್ ಮಾಡಿದೆ.
ಈಗಾಗಲೇ ಅಗತ್ಯ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಗಳಿಂದ ಕಂಗಾಲಾಗಿರುವ ಜನ ಸಾಮಾನ್ಯರಿಗೆ ಮತ್ತೊಂದು ಆಘಾತ ಕಾದಿದೆ. ಕಳೆದ ವರ್ಷವಷ್ಟೇ ಏರಿಕೆ ಕಂಡಿದ್ದ ನಂದಿನಿ ಹಾಲಿನ (Nandini Milk) ದರ ಈಗ ಮತ್ತೆ ಬೆಲೆ ಏರಿಕೆಗೆ ಸೈಲೈಂಟ್ ಆಗಿ ಸಜ್ಜಾಗಿದೆ. ಬರೋಬ್ಬರಿ ಲೀಟರ್ಗೆ 8 ರೂ ಏರಿಕೆಗೆ ಹಾಲು ಉತ್ಪಾದಕರ ಸಂಘ ಪ್ರಸ್ತಾವನೆ ಇಟ್ಟಿದೆ. ಇದನ್ನೂ ಓದಿ: ಭೀಕರ ಬರ ಎದುರಿಸುತ್ತಿದ್ದರೂ ರಾಮದುರ್ಗ, ಸವದತ್ತಿಯನ್ನು ಕೈಬಿಟ್ಟ ಸರ್ಕಾರ – ಅನ್ನದಾತರಿಗೆ ಆಘಾತ
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಂಡ್ಯ, ಶಿವಮೊಗ್ಗ, ಚಾಮರಾಜನಗರ, ತುಮಕೂರು ಸೇರಿದಂತೆ ಹಲವು ಹಾಲು ಉತ್ಪಾದಕರ ಒಕ್ಕೂಟ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಪ್ರತಿ ಲೀಟರ್ ಹಾಲಿಗೆ 8 ರೂ. ಹಾಗೂ ರೈತರ ಪ್ರೋತ್ಸಾಹ ಧನವನ್ನು 8 ರೂ.ಗೆ ಏರಿಸಲು ಒತ್ತಾಯಿಸಿದೆ. ಕಳೆದ 8 ತಿಂಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ರೈತರ ಹಿತ ಕಾಪಾಡಬೇಕು. ಹೀಗಾಗಿ ದರ ಏರಿಕೆ ಮಾಡಬೇಕು. ಬೆಲೆ ಹೆಚ್ಚಳ ಮಾಡದಿದ್ದರೆ ಮೂರು ದಿನದಲ್ಲಿ ವಿಧಾನಸೌಧ ಚಲೋ ಮಾಡ್ತೀವಿ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಇನ್ನು ಹಾಲಿನ ದರ ಏರಿಕೆ ಪ್ರಸ್ತಾವನೆಗೆ ಒಕ್ಕೂಟ ನಾನಾ ಕಾರಣಗಳನ್ನು ನೀಡಿದೆ. ರಾಜ್ಯದಲ್ಲಿ ತೀವ್ರ ಬರಗಾಲ ಇದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರೈತರಿಗೆ ನೆರವಾಗಲು ದರ ಏರಿಕೆ ಮಾಡಬೇಕೆಂದು ಆಗ್ರಹಿಸಿವೆ.ಇದನ್ನೂ ಓದಿ: ನಿವೃತ್ತಿಯ ದಿನವೇ 1.01 ಕೋಟಿ ದೇಣಿಗೆ – PM CARESಗೆ ನ್ಯಾ.ಅವನೀಂದ್ರ ಕುಮಾರ್ ಸಿಂಗ್ ಕೊಡುಗೆ
ಹಾಲಿನ ದರ ಏರಿಕೆ ಪ್ರಸ್ತಾವನೆಗೆ ಕಾರಣ:
ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಶೇ.70ರಷ್ಟು ಮಳೆ ಕೊರತೆ ಉಂಟಾಗಿದೆ. ಇದರಿಂದ ಹುಲ್ಲಿನ ಕೊರತೆಯಾಗಿದ್ದು, ಪಶು ಆಹಾರದ ಕಚ್ಚಾ ಸಾಮಗ್ರಿ, ಮೆಕ್ಕೆಜೋಳ, ಇಂಡಿ-ಬೂಸಾದ ದರ ಶೇ.25ರಷ್ಟು ಏರಿಕೆಯಾಗಿದೆ. ರಾಸುಗಳಿಗೆ ಬಳಸುವ ನೆಲಹಾಸು ದರ ಹೆಚ್ಚಳವಾಗಿದ್ದು, ಪೆಟ್ರೋಲ್, ಡೀಸೆಲ್ ದರವೂ ಏರಿಕೆಯಾಗಿದೆ. ಹೀಗಾಗಿ ದರ ಏರಿಕೆ ಮಾಡಬೇಕು ಎಂದು ಒಕ್ಕೂಟ ಪ್ರಸ್ತಾವನೆ ಇಟ್ಟಿದೆ. ಒಟ್ಟಾರೆ, ರಾಜ್ಯದ ಜನರಿಗೆ ದರ ಏರಿಕೆಯ ಬಿಸಿ ಸುಡುತ್ತಿರುವಾಗಲೇ ಮತ್ತೊಂದು ಶಾಕ್ ಸಿಗೋದು ಬಹುತೇಕ ಖಚಿತವಾಗಿದೆ.ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ಇನ್ಸ್ಟಾದಲ್ಲಿ ಅವಹೇಳನ; ಯುವಕನಿಗೆ ಹೈಕೋರ್ಟ್ ತರಾಟೆ
ರಾಜ್ಯದಲ್ಲಿ ಒಕ್ಕಲಿಗ ಮತಗಳನ್ನು ಕೇವಲ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಭಾವದಿಂದಲೇ ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಗುರುವಾರ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಜನರು ಕೇವಲ ಶಿವಕುಮಾರ್ ಅವರನ್ನು ನೋಡಿ ಮತ ಹಾಕುವುದಿಲ್ಲ.
ದೇವೇಗೌಡರನ್ನೂ ನೋಡಿಕೊಂಡು ಮತ ಹಾಕುತ್ತಾರೆ. ಸಿದ್ದರಾಮಯ್ಯ ಬಲಿಷ್ಠರಾಗಿದ್ದರೆ ಕಾಂಗ್ರೆಸ್ ಬಲಿಷ್ಠವಾಗಿರುತ್ತದೆ.
ಸಿದ್ದರಾಮಯ್ಯ ದುರ್ಬಲರಾದರೆ ಕಾಂಗ್ರೆಸ್ ದುರ್ಬಲವಾಗುತ್ತದೆ. ಅಷ್ಟೇ ಎಂದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
ಮಡಿಕೇರಿ: ಕೊಡಗಿನಲ್ಲಿ ಒಂದು ಕಡೆ ಕಾಡಾನೆಗಳ (Wild Elephant) ಹಾವಳಿ ಇದ್ದರೆ ಮತ್ತೊಂದು ಕಡೆ ಹುಲಿ ದಾಳಿಯ ಆತಂಕವೂ ಹೆಚ್ಚಾಗಿದೆ. ಕಳೆದ ಎರಡು ದಿನಗಳಲ್ಲಿ 2 ಪ್ರತ್ಯೇಕ ಗ್ರಾಮಗಳಲ್ಲಿ ಹುಲಿ ದಾಳಿ ನಡೆಸಿ ಹಸುಗಳನ್ನ ಕೊಂದು ಹಾಕಿದೆ.
ಹಾಡಹಗಲೇ ಹುಲಿ (Tiger) ಗ್ರಾಮಗಳತ್ತ ಬರುತ್ತಿರುವ ಹಿನ್ನೆಲೆ ರೈತರು ಹಾಗೂ ಗ್ರಾಮಸ್ಥರು ಜೀವ ಭಯದಲ್ಲಿ ದಿನ ಕಳೆಯುವಂತಾಗಿದೆ.
ಎರಡು ದಿನಗಳ ಹಿಂದೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪೊರಡು ಗ್ರಾಮದ ಕಾವೇರಪ್ಪ ಅವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಇದರ ಬೆನ್ನಲ್ಲೇ ಗುರುವಾರ (ಸೆ.17) ಸಂಜೆ 4 ಗಂಟೆ ಸುಮಾರಿಗೆ ಮೈತಾಡಿ ಗ್ರಾಮದ ಭೀಮಯ್ಯ ಅವರ ಹಸುವಿನ ಮೇಲೂ ಹುಲಿ ದಾಳಿ ನಡೆಸಿ ಬಲಿ ಪಡೆದಿದೆ.
ಎರಡು ದಿನದ ಅಂತರದಲ್ಲಿ ಎರಡು ಗ್ರಾಮಗಳಲ್ಲಿ ಹುಲಿ ದಾಳಿ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹಗಲು ಹೊತ್ತಿನಲ್ಲೇ ಹುಲಿ ಗ್ರಾಮಗಳತ್ತ ಬರುತ್ತಿರುವುದರಿಂದ ಜನರು ಕೃಷಿ ಕೆಲಸ ಸೇರಿದಂತೆ ತಮ್ಮ ದೈನಂದಿನ ಚಟುವಟಿಕೆಗಳಿಗೆ ತೆರಳಲು ಭಯಪಡುವಂತಾಗಿದೆ.
ಬೆಳಗಾವಿ: ರಾಜ್ಯ ಸರ್ಕಾರದ ಬರಪೀಡಿತ (Drought) ತಾಲೂಕುಗಳ ಘೋಷಣಾ ಪಟ್ಟಿಯಲ್ಲಿ ಭಾರಿ ಯಡವಟ್ಟು ಮುಂದುವರಿದಿದ್ದು, ಮಳೆಯಿಲ್ಲದೆ ಕಂಗಾಲಾಗಿರುವ ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ (Ramadurga) ಹಾಗೂ ಸವದತ್ತಿ (Savadatti) ತಾಲೂಕುಗಳಿಗೆ ಸರ್ಕಾರ ಮತ್ತೆ ತಣ್ಣೀರೆರಚಿದೆ.
ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ತಾಲೂಕುಗಳ ಎರಡನೇ ಪಟ್ಟಿಯಲ್ಲೂ ಈ ಎರಡೂ ಬರಪೀಡಿತ ತಾಲೂಕುಗಳು ನಾಪತ್ತೆಯಾಗಿದ್ದು, ಅನ್ನದಾತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ರಾಯಬಾಗ, ಕಿತ್ತೂರು, ನಿಪ್ಪಾಣಿ, ಮೂಡಲಗಿ, ಯರಗಟ್ಟಿ ತಾಲೂಕುಗಳನ್ನು ನೂತನವಾಗಿ ಬರ ಪಟ್ಟಿಗೆ ಸೇರ್ಪಡೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ ವಾಸ್ತವದಲ್ಲಿ ತೀವ್ರ ಮಳೆ ಕೊರತೆ ಹಾಗೂ ಅಂತರ್ಜಲ ಕುಸಿತದಿಂದ ಕಂಗಾಲಾಗಿರುವ ಸವದತ್ತಿ ಮತ್ತು ರಾಮದುರ್ಗ ತಾಲೂಕುಗಳನ್ನು ಎರಡನೇ ಪಟ್ಟಿಯಲ್ಲೂ ಸೇರಿಸದೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಇದನ್ನೂ ಓದಿ: ಮತ್ತೆ 23 ತಾಲೂಕುಗಳು ಬರ ಪೀಡಿತ : ಸರ್ಕಾರ ಅಧಿಕೃತ ಘೋಷಣೆ
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಖುದ್ದು ರಾಮದುರ್ಗ ಮತ್ತು ಸವದತ್ತಿ ಭಾಗಗಳಿಗೆ ಭೇಟಿ ನೀಡಿ ಒಣಗಿದ ಬೆಳೆಗಳು ಹಾಗೂ ಬರ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದ್ದರು. ಸ್ವತಃ ಉಸ್ತುವಾರಿ ಸಚಿವರೇ ವೀಕ್ಷಣೆ ನಡೆಸಿದ್ದರೂ ಈ ಎರಡೂ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸದಿರುವುದು ಸ್ಥಳೀಯ ರೈತರಿಗೆ ನುಂಗಲಾರದ ತುತ್ತಾಗಿದೆ.
ಬರ ಪರಿಹಾರ, ಬೆಳೆ ವಿಮೆ ಹಾಗೂ ಕುಡಿಯುವ ನೀರಿನ ನೆರವಿನ ನಿರೀಕ್ಷೆಯಲ್ಲಿದ್ದ ರಾಮದುರ್ಗ ಮತ್ತು ಸವದತ್ತಿ ರೈತರಿಗೆ ಸರ್ಕಾರದ ಈ ತಾರತಮ್ಯದ ನಿರ್ಧಾರ ಭಾರಿ ನಿರಾಸೆ ಮೂಡಿಸಿದ್ದು, ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಗ್ರಾಹಕರಿಗೆ ಮತ್ತೆ ಹಾಲಿನ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದ್ದು, ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ ₹8 ರಿಂದ ₹10 ರವರೆಗೆ ಹೆಚ್ಚಿಸಬೇಕು ಎಂದು ಹಾಲು ಒಕ್ಕೂಟಗಳು ರಾಜ್ಯ ಸರ್ಕಾರ ಹಾಗೂ ಕೆಎಂಎಫ್ಗೆ ಪ್ರಸ್ತಾವನೆ ಸಲ್ಲಿಸಿದೆ. ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ ಹಾಗೂ ಬೆಂಗಳೂರು ಹಾಲು ಒಕ್ಕೂಟ ಜಂಟಿಯಾಗಿ ಈ ಬೇಡಿಕೆಯನ್ನು ಇಟ್ಟಿದ್ದು, ರೈತರ ಹಿತರಕ್ಷಣೆಗಾಗಿ ದರ ಹೆಚ್ಚಳ ಅನಿವಾರ್ಯ ಎಂದು ಹೇಳಿವೆ. ಆ ಕುರಿತ ವರದಿ ಇಲ್ಲಿದೆ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಮೂಲ್ ರಾಮನಗರ ಕ್ಷೇತ್ರದ ನಿರ್ದೇಶಕ ಪಿ. ನಾಗರಾಜು, ತೀವ್ರ ಸಂಕಷ್ಟದಲ್ಲಿರುವ ಹೈನುಗಾರರನ್ನು ಮತ್ತು ಹಾಲಿನ ಒಕ್ಕೂಟಗಳನ್ನು ನಷ್ಟದಿಂದ ರಕ್ಷಿಸಲು ನಂದಿನಿ ಹಾಲಿನ ದರವನ್ನು ತಕ್ಷಣವೇ ಕನಿಷ್ಠ ₹8 ರಿಂದ ₹10 ರಷ್ಟು ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು. ಅದರಂತೆ, ಈ ದರ ಏರಿಕೆ ಬೇಡಿಕೆಯನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ 3 ದಿನಗಳ ಕಾಲಾವಕಾಶ (ಡೆಡ್ಲೈನ್) ನೀಡಿದ್ದು, ಒಂದು ವೇಳೆ ಸರ್ಕಾರ ದರ ಹೆಚ್ಚಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ಸೆಪ್ಟೆಂಬರ್ 22 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆಗೂ ರೈತ ಸಂಘಟನೆಗಳು ಸಜ್ಜಾಗಿವೆ.
ದರ ಏರಿಕೆಯ ಬೇಡಿಕೆಗೆ ಕಾರಣವೇನು?
ಮೇವಿನ ತೀವ್ರ ಕೊರತೆ: ರಾಜ್ಯದಲ್ಲಿ ಎದುರಾಗಿರುವ ಬರಗಾಲದ ಪರಿಸ್ಥಿತಿಯಿಂದಾಗಿ ದನಕರುಗಳಿಗೆ ಮೇವಿನ ತೀವ್ರ ಅಭಾವ ಸೃಷ್ಟಿಯಾಗಿದೆ.
ಉತ್ಪಾದನಾ ವೆಚ್ಚ ಹೆಚ್ಚಳ: ಪಶು ಆಹಾರದ ಬೆಲೆಗಳು ಗಗನಕ್ಕೇರಿವೆ. ಹಸುಗಳ ಹಟ್ಟಿಗೆ ಬಳಸುವ ರಬ್ಬರ್ ಮ್ಯಾಟ್ ಸೇರಿದಂತೆ ಹೈನುಗಾರಿಕೆಗೆ ಬೇಕಾಗುವ ಪರಿಕರಗಳ ವೆಚ್ಚ ದುಪ್ಪಟ್ಟಾಗಿದೆ.
ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ದರ: ನೆರೆಹೊರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಇಂದಿಗೂ ತುಂಬಾ ಕಡಿಮೆಯಿದ್ದು, ಪ್ರಸ್ತುತ ವೆಚ್ಚ ನಿಭಾಯಿಸುವುದು ಹೈನುಗಾರರಿಗೆ ನಷ್ಟದ ಹಾದಿಯಾಗಿದೆ ಎಂದು ಒಕ್ಕೂಟಗಳು ವಾದಿಸಿವೆ.
ಮುಂದುವರೆದು, ಹಾಲು ಒಕ್ಕೂಟಗಳ ಈ ಪ್ರಸ್ತಾವನೆಗೆ ಸರ್ಕಾರ ಇನ್ನೂ ಅಧಿಕೃತ ಅಸ್ತು ಎಂದಿಲ್ಲ. ಆದರೆ, ಒಂದು ವೇಳೆ ಸರ್ಕಾರ ಒಕ್ಕೂಟಗಳ ಒತ್ತಡಕ್ಕೆ ಮಣಿದು ದರ ಏರಿಕೆಗೆ ಅನುಮತಿ ನೀಡಿದರೆ, ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರ ಹಾಗೂ ಮಧ್ಯಮ ವರ್ಗದ ಜೇಬಿಗೆ ಮತ್ತೊಂದು ಭಾರಿ ಹೊರೆ ಬೀಳಲಿದೆ. ಅದರಂತೆ, ಕೆಎಂಎಫ್ ಮನವಿಯ ಮೇರೆಗೆ ಮುಖ್ಯಮಂತ್ರಿಗಳು ಹಾಗೂ ಸಹಕಾರ ಸಚಿವರು ಚರ್ಚಿಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಹೊರಬೀಳಬೇಕಿದೆ.
Ration Card e-KYC ಮಾಡಿಸಲು ಮುಗಿಬಿದ್ದ ಜನರಿಗೆ ಕೊನೆಗೂ ಸಿಕ್ತು ಬಿಗ್ ರಿಲೀಫ್! ಇ-ಕೆವೈಸಿ ಗಡುವು ವಿಸ್ತರಿಸಿದ ಸರ್ಕಾರ; ಕೊನೆಯ ದಿನಾಂಕ ಯಾವಾಗ?ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಉತ್ತೇಜಿಸಲು ರಿಲಯನ್ಸ್ ಫೌಂಡೇಶನ್ (Reliance Foundation) 2026-27ನೇ ಶೈಕ್ಷಣಿಕ ಸಾಲಿನ ‘ಯುಜಿ (UG) ವಿದ್ಯಾರ್ಥಿವೇತನ’ಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ದೇಶಾದ್ಯಂತ ಒಟ್ಟು 5,000 ವಿದ್ಯಾರ್ಥಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರು ನಿಗದಿತ ದಿನಾಂಕದೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಹತಾ ಮಾನದಂಡಗಳು:- ಕೋರ್ಸ್: 2026-27ನೇ ಶೈಕ್ಷಣಿಕ ವರ್ಷದಲ್ಲಿ ಯಾವುದೇ ವಿಭಾಗದಲ್ಲಿ (Degree Streams) ನಿಯಮಿತ ಹಾಗೂ ಪೂರ್ಣಾವಧಿ (Regular Full-time) ಪದವಿಯ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು.
- ಶೈಕ್ಷಣಿಕ ಅಂಕಗಳು: 12ನೇ ತರಗತಿ ಅಥವಾ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 60 ರಷ್ಟು ಅಂಕಗಳನ್ನು ಗಳಿಸಿರಬೇಕು.
- ಆದಾಯ ಮಿತಿ: ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ. 2.5 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಆಯ್ಕೆಯಾದ 5,000 ವಿದ್ಯಾರ್ಥಿಗಳಿಗೆ ಅವರ ಪದವಿ ಅಧ್ಯಯನದ ಅವಧಿಯಲ್ಲಿ ಗರಿಷ್ಠ ರೂ. 2 ಲಕ್ಷದವರೆಗೆ ವಿದ್ಯಾರ್ಥಿವೇತನ ಸಹಾಯಧನ ಸಿಗಲಿದೆ. ಈ ಮೊತ್ತವನ್ನು ಕಾಲೇಜು ಶುಲ್ಕ, ಹಾಸ್ಟೆಲ್ ವೆಚ್ಚ, ಪುಸ್ತಕಗಳು ಅಥವಾ ಲ್ಯಾಪ್ಟಾಪ್ ಖರೀದಿಯಂತಹ ಶೈಕ್ಷಣಿಕ ಅಗತ್ಯಗಳಿಗೆ ಬಳಸಿಕೊಳ್ಳಬಹುದು.
ಇದನ್ನೂ ಓದಿ: ಕಾಲೇಜಿನಲ್ಲಿ ರಾತ್ರಿ ಕಾವಲುಗಾರನ ಕೆಲಸ ಮಾಡುತ್ತಲೇ ಓದಿ ಸತತ 3 ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಸಾಧಕ!
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?ಅಭ್ಯರ್ಥಿಗಳ ಆಯ್ಕೆಯನ್ನು ಮುಖ್ಯವಾಗಿ ‘ಮೆರಿಟ್-ಕಮ್-ಮೀನ್ಸ್’ (ಪ್ರತಿಭೆ ಮತ್ತು ಆರ್ಥಿಕ ಸ್ಥಿತಿ) ಆಧಾರದ ಮೇಲೆ ನಡೆಸಲಾಗುತ್ತದೆ. ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಆನ್ಲೈನ್ ಆಪ್ಟಿಟ್ಯೂಡ್ ಟೆಸ್ಟ್ (Aptitude Test) ಗೆ ಹಾಜರಾಗಬೇಕಿರುತ್ತದೆ. ಆಪ್ಟಿಟ್ಯೂಡ್ ಪರೀಕ್ಷೆಯ ಅಂಕಗಳು, 12ನೇ ತರಗತಿಯ ಸಾಧನೆ ಮತ್ತು ಅರ್ಜಿ ನಮೂನೆಯಲ್ಲಿ ನೀಡಲಾದ ವೈಯಕ್ತಿಕ ವಿವರಗಳನ್ನು ಮೌಲ್ಯಮಾಪನ ಮಾಡಿ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ:ಅರ್ಹ ಅಭ್ಯರ್ಥಿಗಳು scholarships.reliancefoundation.org ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 5 ಕೊನೆಯ ದಿನಾಂಕವಾಗಿದೆ. ಆನ್ಲೈನ್ ಅರ್ಜಿಯ ಜೊತೆಗೆ ಸಾಮರ್ಥ್ಯ ಪರೀಕ್ಷೆಯನ್ನು (Aptitude Test) ಪೂರ್ಣಗೊಳಿಸಿದರೆ ಮಾತ್ರ ಅರ್ಜಿಯನ್ನು ಸಂಪೂರ್ಣವೆಂದು ಪರಿಗಣಿಸಲಾಗುತ್ತದೆ.
ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ ಬಾಸ್ ಕನ್ನಡ ಮನೆ ಆಟ ಮತ್ತು ಗಲಾಟೆಗಳಿಗೆ ಹೆಸರುವಾಸಿಯಾಗಿದೆ. ಇದೀಗ ಹೊಸ ಪ್ರೋಮೋ ಹೊರಬಿದ್ದಿದ್ದು, ಟಾಸ್ಕ್ ಒಂದರಲ್ಲಿ ಸಂಚಾಲಕರ ನಿರ್ಧಾರವೇ ದೊಡ್ಡ ಗೊಂದಲ ಹಾಗೂ ಮಾತಿನ ಚಕಮಕಿಗೆ ಕಾರಣವಾಗಿದೆ. ಅಲ್ಲದೆ, ಗಗನ್ ಚಿನ್ನಪ್ಪ ಅವರ ನಿರ್ಧಾರ ಸಾಕಷ್ಟು ಕುತೂಹಲ ಮೂಡಿಸಿದೆ.
ಗಗನ್ ಅವರು ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದಾರೆ. ಅಲ್ಲದೆ, ಉಸ್ತುವಾರಿಯ ನಿರ್ಧಾರ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಉಸ್ತುವಾರಿ ವೈಷ್ಣವಿ ಅವರು ಜಗದೀಶ್ ಬಂದು ಬಜರ್ ಒತ್ತಿದರು ಎಂದು ಘೋಷಿಸಿದ್ದಾರೆ. ಆದರೆ, ಇದಕ್ಕೆ ಒಪ್ಪದ ಗಗನ್ ಚಿನ್ನಪ್ಪ ತಾವು ಮೊದಲು ಬಜರ್ ಒತ್ತಿದ್ದಾಗಿ ಪ್ರಬಲವಾಗಿ ವಾದಿಸಿದ್ದಾರೆ.
‘ನಾನು ಯಾವತ್ತೂ ಗೇಮ್ನಲ್ಲಿ ಮೋಸ ಮಾಡಲ್ಲ’ ಎಂದು ಗಗನ್ ಕಿರುಚಾಡುತ್ತಾ ತಮ್ಮ ಪಾಯಿಂಟ್ ಅನ್ನು ಸಮರ್ಥಿಸಿಕೊಂಡರು. ಆ ಬಳಿಕ ತಾಂಡವ್ ಮೊದಲು ಬಜರ್ ಒತ್ತಿದ್ದರು. ಈ ವೇಳೆ ವೈಷ್ಣವಿ, ಗಗನ್ ಚಿನ್ನಪ್ಪ ಮೊದಲು ಬಜರ್ ಒತ್ತಿದ್ದು ಎಂದರು. ಆಗ ಗಗನ್ ಸೈಲೆಂಟ್ ಆಗಿ ಇದ್ದರು. ಇದು ಪ್ರಶ್ನೆಯನ್ನು ಹುಟ್ಟುಹಾಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅಭಿಷೇಕ್ ಶರ್ಮಾ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಕೇವಲ 34 ಎಸೆತಗಳನ್ನು ಎದುರಿಸಿದ ಅಭಿಷೇಕ್ 11 ಸಿಕ್ಸರ್ಗಳು ಮತ್ತು 9 ಬೌಂಡರಿಗಳ ಸಹಿತ 108 ರನ್ಗಳ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್ಗಾಗಿ ಅಭಿಷೇಕ್ಗೆ ‘ಪಂದ್ಯಶ್ರೇಷ್ಠ' ಮತ್ತು ‘ಸರಣಿಶ್ರೇಷ್ಠ' ಪ್ರಶಸ್ತಿಯೂ ಲಭಿಸಿತು. ಹಾಗೆಯೇ ಅಭಿಷೇಕ್ ಬರೋಬ್ಬರಿ 7 ದಾಖಲೆಗಳನ್ನು ನಿರ್ಮಿಸಿದರು(PC-PTI).
ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿದರು. ಈ ಮೂಲಕ ಭಾರತದ ಪರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆ ಅಭಿಷೇಕ್ ಪಾಲಾಗಿದೆ. ಇದಕ್ಕೂ ಮೊದಲು ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. 2017 ರಲ್ಲಿ ಇಂದೋರ್ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು(PC-PTI).
ಇದರ ಜೊತೆಗೆ ಐಸಿಸಿಯ ಪೂರ್ಣಾವಧಿ ಸದಸ್ಯತ್ವ ಹೊಂದಿರುವ ತಂಡಗಳ ಪಟ್ಟಿಯಲ್ಲಿ ಅತಿ ವೇಗದ ಟಿ20 ಶತಕ ಬಾರಿಸಿದ ದಾಖಲೆಯೂ ಅಭಿಷೇಕ್ ಪಾಲಾಗಿದೆ. ಇದಕ್ಕೂ ಮೊದಲು, ಈ ದಾಖಲೆಯನ್ನು ಸಿಕಂದರ್ ರಜಾ ಮತ್ತು ಫಿನ್ ಅಲೆನ್ ಜಂಟಿಯಾಗಿ ಹೊಂದಿದ್ದರು. ಇವರಿಬ್ಬರು ತಲಾ 33 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಹಾಗೆಯೇ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಮೂರನೇ ಅತಿ ವೇಗದ ಶತಕವೂ ಇದಾಗಿದೆ(PC-PTI).
ಈ ಪಂದ್ಯದಲ್ಲಿ ಮೊದಲ ಆರು ಓವರ್ಗಳಲ್ಲಿ ಅಂದರೆ ಪವರ್ಪ್ಲೇನಲ್ಲಿ ಅಭಿಷೇಕ್ ಅದ್ಭುತ ಬ್ಯಾಟಿಂಗ್ ಮಾಡಿದರು. ಪವರ್ಪ್ಲೇನಲ್ಲಿ ಕೇವಲ 22 ಎಸೆತಗಳಲ್ಲಿ 76 ರನ್ ಬಾರಿಸಿದರು. ಈ ಮೂಲಕ ಪುರುಷರ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಪವರ್ಪ್ಲೇ ಸಮಯದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು. ಇದಕ್ಕೂ ಮೊದಲು, ಈ ದಾಖಲೆ ಪೋರ್ಚುಗಲ್ನ ಕುಲ್ದೀಪ್ ಘೋಲಿಯಾ ಅವರ ಹೆಸರಿನಲ್ಲಿತ್ತು. 2023 ರಲ್ಲಿ ಮಾಲ್ಟಾ ವಿರುದ್ಧದ ಪವರ್ಪ್ಲೇನಲ್ಲಿ ಅವರು 25 ಎಸೆತಗಳಲ್ಲಿ 74 ರನ್ ಸಿಡಿಸಿದ್ದರು(PC-PTI).
ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್, 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಅಭಿಷೇಕ್ 6ನೇ ಬಾರಿಗೆ 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ(PC-PTI).
ಇದು ಟಿ20 ಕ್ರಿಕೆಟ್ನಲ್ಲಿ ಅಭಿಷೇಕ್ ಶರ್ಮಾ ಅವರ 10 ನೇ ಶತಕವಾಗಿದ್ದು, ಈ ಮೂಲಕ ವಿರಾಟ್ ಕೊಹ್ಲಿ ಅವರ 10 ಟಿ20 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಭಿಷೇಕ್ ಈಗ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್ಮನ್ ಆಗುವ ಅವಕಾಶವನ್ನು ಹೊಂದಿದ್ದಾರೆ. ಹಾಗೆ ಮಾಡಲು ಅವರಿಗೆ ಇನ್ನೂ ಒಂದು ಶತಕದ ಅಗತ್ಯವಿದೆ(PC-PTI).
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಅಭಿಷೇಕ್ ಶರ್ಮಾ ಒಟ್ಟು 22 ಸಿಕ್ಸರ್ಗಳನ್ನು ಬಾರಿಸಿದರು. ಈ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಭಾರತೀಯ ಬ್ಯಾಟ್ಸ್ಮನ್ ಒಬ್ಬರು ಬಾರಿಸಿದ ಅತಿ ಹೆಚ್ಚು ಸಿಕ್ಸರ್ಗಳ ದಾಖಲೆಯನ್ನು ಅಭಿಷೇಕ್ ಸರಿಗಟ್ಟಿದ್ದಾರೆ. ಈ ಮೊದಲು ಅಂದರೆ 2025 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಭಿಷೇಕ್ ಅವರೇ 22 ಸಿಕ್ಸರ್ಗಳನ್ನು ಬಾರಿಸಿದ್ದರು(PC-PTI).
ಅಭಿಷೇಕ್ ಶರ್ಮಾ ತಮ್ಮ ಶತಕದ ಶೇಕಡಾ 94.44 ರಷ್ಟು ರನ್ಗಳನ್ನು ಬೌಂಡರಿಗಳ ಮೂಲಕವೇ ಕಲೆಹಾಕಿದರು. ಇದರೊಂದಿಗೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಶತಕ ಗಳಿಸಿದ ಬ್ಯಾಟ್ಸ್ಮನ್ಗಳಲ್ಲಿ ಬೌಂಡರಿಗಳ ಮೂಲಕ ಗಳಿಸಿದ ಅತಿ ಹೆಚ್ಚು ರನ್ ಇದಾಗಿದೆ. ಈ ವಿಷಯದಲ್ಲಿ ಅಭಿಷೇಕ್ ಟರ್ಕಿಯ ಮೊಹಮ್ಮದ್ ಫಹಾದ್ ಅವರನ್ನು ಹಿಂದಿಕ್ಕಿದ್ದಾರೆ(PC-PTI).
ಡೆಹ್ರಾಡೂನ್: 2006ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿಥಾರಿ ಹತ್ಯಾಕಾಂಡ ಪ್ರಕರಣದೊಂದಿಗೆ ಸುಮಾರು ಎರಡು ದಶಕಗಳಿಂದ ಗುರುತಿಸಿಕೊಂಡಿದ್ದ ಆರೋಪಿ ಸುರೇಂದ್ರ ಕೋಲಿ (50) ಹರಿದ್ವಾರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಶುಕ್ರವಾರ ಭೂಪತ್ವಾಲಾ ಪ್ರದೇಶದ ಚಹಾ ಅಂಗಡಿಯೊಂದರಲ್ಲಿ ಆತನ ಮೃತದೇಹ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಸಾವಿಗೆ ಕಾರಣ ಹಾಗೂ ಸುತ್ತಮುತ್ತಲಿನ ಪರಿಸ್ಥಿತಿಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿದ್ವಾರ ಸಿಟಿ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲ್ ಮಾತಾ ದೇವಸ್ಥಾನದ ಎದುರಿನ ಚಹಾ ಅಂಗಡಿಯಲ್ಲಿ ಕೋಲಿಯ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮೃತದೇಹವನ್ನು ವಶಕ್ಕೆ ಪಡೆದು, ಸುತ್ತಮುತ್ತಲಿನವರನ್ನು ವಿಚಾರಣೆ ನಡೆಸಿದ್ದಾರೆ.
ಪೊಲೀಸರ ಪ್ರಕಾರ, ಕೋಲಿ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಭಿಕಿಯಾಸೈನ್ ಪ್ರದೇಶದ ಮಂಗ್ರುಖಾಲ್ ಗ್ರಾಮದ ಶಂಕು ರಾಮ್ ಅವರ ಪುತ್ರ. ಪ್ರಾಥಮಿಕವಾಗಿ ಇದು ಆತ್ಮಹತ್ಯೆ ಪ್ರಕರಣವೆಂದು ಕಂಡುಬರುತ್ತಿದೆ. ಆದರೆ ಸಾವಿಗೆ ಕಾರಣ ಹಾಗೂ ಅದಕ್ಕೆ ಕಾರಣವಾದ ಪರಿಸ್ಥಿತಿಗಳ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ- ಚಾಕುವಿನಿಂದ ಇರಿದು ಕೊಲೆ; ನಾಯಿಗಳು ಭಾಗಶಃ ತಿಂದಿದ್ದ ಮೃತದೇಹ ಹೊಲದಲ್ಲಿ ಪತ್ತೆ!ಆತ್ಮಹತ್ಯೆಗೆ ಕಾರಣವಾಗಿರಬಹುದಾದ ಯಾವುದೇ ನಿರ್ದಿಷ್ಟ ವಿಚಾರವನ್ನು ಪೊಲೀಸರು ಸದ್ಯ ಬಹಿರಂಗಪಡಿಸಿಲ್ಲ.
ಪ್ರಾಥಮಿಕ ವಿಚಾರಣೆಯ ಪ್ರಕಾರ, ಕೋಲಿ ಕಳೆದ ಕೆಲವು ತಿಂಗಳುಗಳಿಂದ ಹರಿದ್ವಾರದಲ್ಲಿ ವಾಸಿಸುತ್ತಿದ್ದ. ಇದಕ್ಕೂ ಮೊದಲು ರೋಷನಾಬಾದ್ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ನಾಲ್ಕು ದಿನಗಳ ಹಿಂದಷ್ಟೇ ಭೂಪತ್ವಾಲಾ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದ ಆತ, ಮೃತದೇಹ ಪತ್ತೆಯಾದ ಚಹಾ ಅಂಗಡಿಯನ್ನು ನಡೆಸಲು ಆರಂಭಿಸಿದ್ದ ಎಂದು ತಿಳಿದುಬಂದಿದೆ.
ಕಳೆದ ಕೆಲವು ವಾರಗಳಲ್ಲಿ ಕೋಲಿಯ ಸಂಪರ್ಕದಲ್ಲಿದ್ದವರು ಯಾರು, ಆತನ ಚಲನವಲನ ಹೇಗಿತ್ತು ಮತ್ತು ಯಾವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹತ್ಯಾಕಾಂಡ
ನೋಯ್ಡಾದ ಸೆಕ್ಟರ್ 31ರ ಉದ್ಯಮಿ ಮೊನಿಂದರ್ ಸಿಂಗ್ ಪಂಧೇರ್ ಮನೆಯಲ್ಲಿ ಕೋಲಿ ಮನೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ. 2006ರ ಡಿಸೆಂಬರ್ 29ರಂದು ಪಂಧೇರ್ ಅವರ ಮನೆಯ ಹಿಂಭಾಗದ ಚರಂಡಿಯಲ್ಲಿ ಹಲವು ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಅವುಗಳಲ್ಲಿ ಮಕ್ಕಳು ಮತ್ತು ನಿಥಾರಿ ಪ್ರದೇಶದಿಂದ ಕಾಣೆಯಾಗಿದ್ದ ಯುವತಿಯರ ಅವಶೇಷಗಳೂ ಇದ್ದವು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ಅವಶೇಷಗಳ ಪತ್ತೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಪ್ರಕರಣದ ತನಿಖೆ ಹಲವು ವರ್ಷಗಳ ಕಾಲ ಮುಂದುವರಿದು, ಅನೇಕ ಪ್ರಕರಣಗಳಲ್ಲಿ ವಿಚಾರಣೆ ನಡೆಯಿತು. ಹಲವಾರು ಪ್ರಕರಣಗಳಲ್ಲಿ ಕೋಲಿಗೆ ಮರಣದಂಡನೆ ವಿಧಿಸಲಾಗಿತ್ತು. ಆದರೆ 2023ರ ಅಕ್ಟೋಬರ್ನಲ್ಲಿ ಅಲಹಾಬಾದ್ ಹೈಕೋರ್ಟ್, ಗಂಭೀರ ತನಿಖಾ ಲೋಪಗಳು ಹಾಗೂ ಸಾಕಷ್ಟು ಸಾಕ್ಷ್ಯಗಳ ಕೊರತೆಯನ್ನು ಉಲ್ಲೇಖಿಸಿ, ತನ್ನ ಮುಂದೆ ವಿಚಾರಣೆಗೆ ಬಂದಿದ್ದ ಪ್ರಕರಣಗಳಲ್ಲಿ ಕೋಲಿ ಮತ್ತು ಪಂಧೇರ್ ಅವರನ್ನು ಖುಲಾಸೆಗೊಳಿಸಿತ್ತು.
2025ರ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಉಳಿದಿದ್ದ ಪ್ರಕರಣದಲ್ಲಿಯೂ ಕೋಲಿಯನ್ನು ಖುಲಾಸೆಗೊಳಿಸಿ ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಇದರೊಂದಿಗೆ ಹಲವು ವರ್ಷಗಳ ಕಾನೂನು ಹೋರಾಟದ ಬಳಿಕ ಕೋಲಿಗೆ ಕಾನೂನಾತ್ಮಕ ಸ್ವಾತಂತ್ರ್ಯ ದೊರೆತಿತ್ತು.
ಆರು ತಿಂಗಳ ಮಗುವಿನ ಮೇಲೆ ಪಿಟ್ ಬುಲ್ ನಾಯಿ ದಾಳಿ: ರಸ್ತೆಯಲ್ಲಿ ಎಳೆದಾಡಿ ಗಾಯಗೊಳಿಸಿದ ರಕ್ಕಸ ರೂಪದ ಶ್ವಾನ; ವಿಡಿಯೋ ವೈರಲ್ಕುಟುಂಬಕ್ಕೂ ತೀವ್ರ ಸಂಕಷ್ಟ
ಕಾನೂನಾತ್ಮಕವಾಗಿ ಬಿಡುಗಡೆಯಾದರೂ, ನಿಥಾರಿ ಪ್ರಕರಣದ ಕಳಂಕದ ನೆರಳು ಕೋಲಿಯ ಕುಟುಂಬದ ಮೇಲೂ ವರ್ಷಗಳ ಕಾಲ ಉಳಿದಿತ್ತು ಎನ್ನಲಾಗಿದೆ. ಕೋಲಿಯ ತಾಯಿ ಕುಂತಿ ದೇವಿ ಸುಮಾರು ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಪತ್ನಿ ಶಾಂತಿ ದೇವಿ ಸುಮಾರು ಒಂದು ದಶಕದ ಹಿಂದೆ ಇಬ್ಬರು ಮಕ್ಕಳೊಂದಿಗೆ ಮಂಗ್ರುಖಾಲ್ ಗ್ರಾಮವನ್ನು ತೊರೆದಿದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
“ಕುಟುಂಬಕ್ಕೆ ಈ ಅವಮಾನವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟವಾಗಿತ್ತು. ಅವರು ನಿರಂತರವಾಗಿ ಅವಮಾನ ಎದುರಿಸುತ್ತಿದ್ದರು” ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಗ್ರಾಮದಲ್ಲಿರುವ ಕೋಲಿಯ ಕುಟುಂಬದ ಪೂರ್ವಿಕರ ಮನೆ ಇದೀಗ ಪಾಳುಬಿದ್ದ ಸ್ಥಿತಿಯಲ್ಲಿದೆ. 2014ರಲ್ಲಿ ಕೋಲಿಯ ಗಲ್ಲು ಶಿಕ್ಷೆ ಜಾರಿಯಾಗುವ ಸಾಧ್ಯತೆ ಎದುರಾದ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ್ ಸಿಂಗ್ ರಾವತ್ ಕಾನೂನು ನೆರವಿಗೆ ಮುಂದಾಗಿದ್ದರು.
“ನಾನು ವಕೀಲರನ್ನು ಸಂಪರ್ಕಿಸಿ, ತಡರಾತ್ರಿಯಲ್ಲಿಯೂ ನ್ಯಾಯಾಲಯ ತೆರೆಯುವಂತೆ ಮಾಡಿದ್ದೆ. ಒಂದು ಪ್ರಕರಣದಲ್ಲಿ ಗಲ್ಲು ಶಿಕ್ಷೆ ಜಾರಿಗೊಳಿಸಿದರೆ ಉಳಿದ ಪ್ರಕರಣಗಳ ವಿಚಾರಣೆಯ ಮೇಲೆ ಪರಿಣಾಮ ಬೀರಬಹುದು ಎಂದು ವಾದಿಸಿದ್ದೆವು. ನ್ಯಾಯಾಲಯ ನಮ್ಮ ವಾದವನ್ನು ಪರಿಗಣಿಸಲು ಒಪ್ಪಿಕೊಂಡಿತ್ತು” ಎಂದು ರಾವತ್ ಸ್ಮರಿಸಿಕೊಂಡಿದ್ದಾರೆ.
ನಿಥಾರಿ ಹತ್ಯಾಕಾಂಡ ಪ್ರಕರಣವು ದೇಶದ ಅತ್ಯಂತ ಕಳವಳಕಾರಿ ಅಪರಾಧ ತನಿಖೆಗಳಲ್ಲಿ ಒಂದಾಗಿ ಉಳಿದಿದ್ದು, ಅದರ ಸಂತ್ರಸ್ತರ ಕುಟುಂಬಗಳನ್ನು ಇಂದಿಗೂ ಕಾಡುತ್ತಿದೆ. ಇದೀಗ ಸುರೇಂದ್ರ ಕೋಲಿಯ ಸಾವಿನೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ದುರಂತ ಅಧ್ಯಾಯ ಅಂತ್ಯಗೊಂಡಿದೆ.
ಅಮಿತಾಬ್ ಬಚ್ಚನ್, ಭಾರತೀಯ ಚಿತ್ರರಂಗದ ದಿಗ್ಗಜ ನಟ. ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿ. ಜೊತೆಗೆ ಅಪಾರ ದೈವ ಭಕ್ತರೂ ಸಹ. ಅಯೋಧ್ಯೆ ರಾಮಮಂದಿರ ನಿರ್ಮಾಣದ ಸಂದರ್ಭದಲ್ಲಿ ಅಪಾರ ಸಂತಸವನ್ನು ಹಂಚಿಕೊಂಡಿದ್ದ ಅಮಿತಾಬ್ ಬಚ್ಚನ್, ಇದೀಗ ಅಯೋಧ್ಯೆಯಲ್ಲಿ ಮಹತ್ಕಾರ್ಯವೊಂದನ್ನು ಮಾಡಲು ಮುಂದಾಗಿದ್ದಾರೆ. ಸೇವಾ ಕಾರ್ಯವೊಂದಕ್ಕೆ ಅಮಿತಾಬ್ ಬಚ್ಚನ್ ಕೈ ಹಾಕಿದ್ದು, ತಂದೆಯ ಹೆಸರಿನಲ್ಲಿ ಕಾರ್ಯವೊಂದನ್ನು ಅಮಿತಾಬ್ ಅವರು ಕೈಗೆತ್ತಿಕೊಂಡಿದ್ದಾರೆ.
ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ಜಮೀನು ತೆಗೆದುಕೊಂಡಿದ್ದು ಕೆಲ ತಿಂಗಳುಗಳ ಹಿಂದೆ ಸಾಕಷ್ಟು ಸುದ್ದಿ ಆಗಿತ್ತು. ಅಮಿತಾಬ್ ಬಚ್ಚನ್ ಮಾತ್ರವೇ ಅಲ್ಲದೆ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಅಯೋಧ್ಯೆಯಲ್ಲಿ ಜಮೀನು ಖರೀದಿಸಿದ್ದರು. ಈ ಬಗ್ಗೆ ಸಾಕಷ್ಟು ಟೀಕೆಯೂ ವ್ಯಕ್ತವಾಗಿತ್ತು. ಆದರೆ ಇದೀಗ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ಜನಪರವಾದ, ವಿಶೇಷವಾಗಿ ರಾಮಭಕ್ತರಿಗೆ ಅನುಕೂಲ ಆಗುವಂತೆ ಕಾರ್ಯವೊಂದನ್ನು ಮಾಡಲು ಮುಂದಾಗಿದ್ದಾರೆ. ಅಯೋಧ್ಯೆಯಲ್ಲಿ ಬಚ್ಚನ್ ಅವರು ಧರ್ಮಶಾಲೆಯೊಂದನ್ನು ನಿರ್ಮಿಸುತ್ತಿದ್ದಾರೆ.
ತಮ್ಮ ತಂದೆಯವರಾದ ಕವಿ ಹರಿವಂಶರಾಯ್ ಬಚ್ಚನ್ ಅವರ ಸ್ಮರಣಾರ್ಥ ಅಯೋಧ್ಯೆಯಲ್ಲಿ ಧರ್ಮಶಾಲೆಯನ್ನು ಅಮಿತಾಬ್ ಬಚ್ಚನ್ ನಿರ್ಮಿಸಲಿದ್ದಾರೆ. ಪ್ರಸ್ತಾವಿತ ಕಟ್ಟಡದ ವಿನ್ಯಾಸಕ್ಕೆ ಅನುಮೋದನೆ ಕೋರಿ ಈಗಾಗಲೇ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಅನುಮೋದನೆ ಸಿಕ್ಕೊಡನೆ ಧರ್ಮಶಾಲೆ ನಿರ್ಮಾಣ ಪ್ರಾರಂಭ ಆಗಲಿದೆ.
ಇದನ್ನೂ ಓದಿ:‘ಧುರಂಧರ್ 2’ ಸಿನಿಮಾದಿಂದ ನಿಂತೇ ಹೋಯ್ತು ಅಮಿತಾಬ್ ಬಚ್ಚನ್ ಸಿನಿಮಾ
ಈ ಪ್ರಸ್ತಾವಿತ ಧರ್ಮಶಾಲೆಯು 20ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರಲಿದ್ದು, ದಶರಥ ಪಥದ ಉದ್ದಕ್ಕೂ ಇರುವ ‘ದಿ ಸರಾಯು’ ಯೋಜನೆಯ ಭಾಗವಾಗಿ ಅಮಿತಾಬ್ ಬಚ್ಚನ್ ಅವರು ಸುಮಾರು 15 ಕೋಟಿ ರೂ.ಗಳಿಗೆ ಖರೀದಿಸಿದ ಜಾಗದಲ್ಲಿ ಈ ಧರ್ಮಶಾಲೆಯನ್ನು ನಿರ್ಮಾಣ ಮಾಡುವ ಕುರಿತಾಗಿ ಯೋಜನೆ ಸಿದ್ಧವಾಗುತ್ತಿದೆ. ಅನುಮೋದನೆಗೆ ಸಲ್ಲಿಸಿರುವ ನಕ್ಷೆಯ ಬಗ್ಗೆ ಆಕ್ಷೇಪಣೆಗಳಿದ್ದರೆ 15 ದಿನಗಳೊಳಗೆ ಸಲ್ಲಿಸುವಂತೆ ಕೋರಿ ಎಡಿಎ ಸಾರ್ವಜನಿಕ ಅಧಿಸೂಚನೆಯನ್ನು ಹೊರಡಿಸಿದೆ. ಈ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಪ್ರಾಧಿಕಾರವು ಅನುಮೋದನೆ ನೀಡುವ ನಿರೀಕ್ಷೆಯಿದೆ.
ದೇಶದ ವಿವಿಧ ಭಾಗಗಳ ಅನೇಕ ಗಣ್ಯರು ಅಯೋಧ್ಯೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ಎಡಿಎ ಉಪಾಧ್ಯಕ್ಷ ಅನುರಾಗ್ ಜೈನ್ ತಿಳಿಸಿದ್ದಾರೆ. 20ಕ್ಕೂ ಹೆಚ್ಚು ಕೊಠಡಿಗಳ ಧರ್ಮಶಾಲೆಗಾಗಿ ಬಚ್ಚನ್ ಅವರ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಪ್ರಸ್ತುತ ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಮುಕ್ತವಾಗಿರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅಯೋಧ್ಯೆಗೆ ಭೇಟಿ ನೀಡುವ ಭಕ್ತರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ, ಸರಿಯಾದ ಪ್ರಕ್ರಿಯೆಯ ನಂತರ ನಕ್ಷೆಗೆ ಅನುಮೋದನೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇತ್ತೀಚೆಗೆ ಬಾಲಿವುಡ್ ನಟಿ ಕತ್ರೀನಾ ಕೈಫ್ (Katrina Kaif) ಅವರ ಔಟ್ಲುಕ್ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ(Social Media) ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಈ ಕುರಿತು ಮಾಜಿ ಸಂಸದೆ ಹಾಗೂ ನಟಿ ರಮ್ಯಾ (Actress Ramya) ಖಡಕ್ ಉತ್ತರ ನೀಡಿದ್ದಾರೆ.
ತಾಯಿಯಾದ ಬಳಿಕ ಸಹಜವಾಗಿ ಅವರ ತೂಕ ಏರಿಕೆಯಾಗಿದ್ದು, ಇತ್ತೀಚೆಗೆ ಅಂಬಾನಿ ನಿವಾಸದ ಗಣೇಶೋತ್ಸವಕ್ಕೆ ಪತಿ ವಿಕ್ಕಿ ಕೌಶಲ್ ಜೊತೆ ಆಗಮಿಸಿದ್ದ ವೇಳೆ ಅವರು ಕ್ಯಾಮೆರಾ ಕಣ್ಣುಗಳಿಗೆ ಪೋಸ್ ಕೊಟ್ಟಿದ್ದರು. ಆದರೆ, ಈ ಬದಲಾದ ಲುಕ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಾಡಿ ಶೇಮಿಂಗ್ ಮಾಡುವ ಪೋಸ್ಟ್ಗಳು ಹಾಗೂ ಹೋಲಿಕೆ ಮಾಡುವ ಟ್ರೋಲ್ಗಳು ಹರಿದಾಡುತ್ತಿವೆ.
ಈ ವಿಚಾರದ ಕುರಿತು ಇದೀಗ ನಟಿ ಮತ್ತು ಮಾಜಿ ಸಂಸದೆ ರಮ್ಯಾ ಅವರು ತಮ್ಮ ಎಕ್ಸ್ ಖಾತೆಯ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಕತ್ರೀನಾ ಕೈಫ್ ಬಾಡಿ ಶೇಮಿಂಗ್ಗೆ ಸಂಬಂಧಿಸಿದಂತೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಿರುಸಿನ ಚರ್ಚೆ ಉಂಟಾಗಿದ್ದು, ಪರ-ವಿರೋಧದ ಬ್ಯಾಟಿಂಗ್ ಶುರುವಾಗಿದೆ. ಈ ಚರ್ಚೆಗಳಲ್ಲಿ ಕತ್ರೀನಾ ಅವರ ಬ್ಯಾಂಕ್ ಬ್ಯಾಲೆನ್ಸ್, ವಯಸ್ಸು ಮತ್ತು ಸಾಧನೆಯನ್ನು ಎಳೆದು ತರಲಾಗುತ್ತಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಮ್ಯಾ, ಮಹಿಳೆಯ ದೇಹದ ಕುರಿತ ಚರ್ಚೆ ಮತ್ತು ಹೋಲಿಕೆ ಮಾಡುವುದೇ ತಪ್ಪು ಎಂದು ತಮ್ಮ ಖಡಕ್ ನಿಲುವು ವ್ಯಕ್ತಪಡಿಸಿದ್ದಾರೆ.
ಮಹಿಳೆಗೆ ʻಪ್ರೈಮ್ ಹಂತʼ (ಅತ್ಯುತ್ತಮ ಹಂತ) ಮತ್ತು ʻಮುಕ್ತಾಯದ ಹಂತʼ ಎಂದು ವಿಂಗಡಿಸಿ ಪೋಸ್ಟ್ ಹಾಕುವ ವಿಚಾರದ ವಿರುದ್ಧ ಅವರು ಕಿಡಿಕಾರಿದ್ದಾರೆ.
ಮಹಿಳೆಯ ಅತ್ಯುತ್ತಮ ಹಂತ ಎನ್ನುವ ಮಾತು ಆಕೆಗೆ ಮುಕ್ತಾಯದ ದಿನ ಇದೆ ಎನ್ನುವಂತೆ ಬಿಂಬಿಸುತ್ತದೆ. ಅತ್ಯುತ್ತಮ ಹಂತವೆಂದರೆ ಕೇವಲ ಮ್ಯಾಗಜೀನ್ ಮುಖಪುಟದ ಮಾಡೆಲ್ನಂತೆ ಕಾಣುವ ಕೆಲವೇ ವರ್ಷಗಳು ಎಂದು ನಿರ್ಧರಿಸಿದವರು ಯಾರು ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ಇನ್ಸ್ಟಾದಲ್ಲಿ ಅವಹೇಳನ; ಯುವಕನಿಗೆ ಹೈಕೋರ್ಟ್ ತರಾಟೆ
ಮಹಿಳೆಗೆ ಗರ್ಭಧಾರಣೆ, ಋತುಬಂಧದ ಪೂರ್ವದ ಹಂತ ಹಾಗೂ ಜೀವನದ ವಿವಿಧ ಘಟ್ಟಗಳಲ್ಲಿ ದೇಹ ಬದಲಾಗುತ್ತದೆ. ಅದು ಅವನತಿಯಲ್ಲ, ಬದಲಿಗೆ ಅದು ಬದುಕುವ ಕ್ರಮವಾಗಿದೆ. ʼಅತ್ಯುತ್ತಮ ಹಂತʼ ಎಂದರೆ ಕೇವಲ ಸಣ್ಣ ಸೊಂಟದ ಅಳತೆಯಲ್ಲ; ಅದು ಶಕ್ತಿ, ವಿವೇಕ, ಕೆಲಸ, ಸಂತೋಷ ಮತ್ತು ಆಕೆ ಕಟ್ಟಿಕೊಂಡಿರುವ ಎಲ್ಲವೂ ಆಗಿದೆ. ಕತ್ರಿನಾ ಸದ್ಯ ತಮ್ಮ ಅತ್ಯುತ್ತಮ ಹಂತದಲ್ಲಿದ್ದಾರೆ. ಪ್ರತಿಯೊಬ್ಬ ಮಹಿಳೆಯೂ ಹುಟ್ಟಿದ ದಿನದಿಂದ ಹಿಡಿದು ಜೀವನದ ಕೊನೆಯ ದಿನದವರೆಗೂ ಅತ್ಯುತ್ತಮ ಹಂತದಲ್ಲಿಯೇ ಇರುತ್ತಾಳೆ.
ಕತ್ರೀನಾ ಪರ ವಹಿಸುವ ಭರದಲ್ಲಿ ʻʻಆಕೆಯ ಬ್ಯಾಂಕ್ ಬ್ಯಾಲೆನ್ಸ್ ನೋಡಿʼʼ ಎನ್ನುವವರನ್ನು ತರಾಟೆಗೆ ತೆಗೆದುಕೊಂಡಿರುವ ರಮ್ಯಾ, “ಹಾಗಾದರೆ ಕಡಿಮೆ ಹಣವಿರುವ ಮಹಿಳೆಯನ್ನು ದೇಹದ ಆಕಾರದ ಕಾರಣಕ್ಕೆ ಅವಮಾನಿಸಬಹುದೇ?” ಎಂದು ಪ್ರಶ್ನಿಸಿದ್ದಾರೆ.
ಮಗುವಿನ ಕಾರಣಕ್ಕೆ ತೂಕ ಏರಿಕೆಯ ಸಮರ್ಥನೆಗೆ ವಿರೋಧ:
“ಆಕೆಗೆ ಮಗುವಾಗಿದೆ, ಹಾಗಾಗಿ ಆ ತೂಕ ಸರಿ” ಎನ್ನುವ ವಾದವನ್ನು ಅರ್ಥಹೀನ ಎಂದಿರುವ ರಮ್ಯಾ, “ಒಂದು ವೇಳೆ ಮಗು ಆಗಿರದಿದ್ದರೆ ಆ ತೂಕ ತಪ್ಪಾಗುತ್ತಿತ್ತೇ?” ಎಂದು ವಾದಿಸಿದ್ದಾರೆ. ದೇಹದ ಆಕಾರದ ಬಗ್ಗೆ ಅವಮಾನಿಸಬಾರದು ಎನ್ನುವ ವಿಷಯದಲ್ಲಿ ಮಹಿಳೆಯ ದೇಹಕ್ಕೆ ಯಾವುದೇ ಬ್ಯಾಂಕ್ ಬ್ಯಾಲೆನ್ಸ್ ಅಥವಾ ನಿರ್ದಿಷ್ಟ ಕಾರಣದ ಅಗತ್ಯವಿಲ್ಲ. ಇದಕ್ಕೆ ಯಾವುದೇ ಷರತ್ತುಗಳಾಗಲಿ, ವಿನಾಯಿತಿಗಳಾಗಲಿ ಇಲ್ಲ. ದೇಹದ ಆಕಾರವನ್ನು ನೋಡಿ ಅವಮಾನಿಸುವುದು ತಪ್ಪು, ಅಷ್ಟೇ ವಿಚಾರ ಎಂದು ರಮ್ಯಾ ತಮ್ಮ ಪೋಸ್ಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಗಣೇಶೋತ್ಸವದ ರೋಚಕ ಕಥೆ ‘ಜನ್ಮೋತ್ಸವ’ ಚಿತ್ರದ ಟ್ರೇಲರ್ ರಿಲೀಸ್
ಕೋಲ್ಕತ್ತಾ, ಸೆಪ್ಟೆಂಬರ್ 18: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನಲ್ಲಿ ಭುಗಿಲೆದ್ದಿರುವ ತೀವ್ರ ಆಂತರಿಕ ಬಂಡಾಯ ಮತ್ತು ಪಕ್ಷದ ನಿಯಂತ್ರಣದ ಜಟಾಪಟಿಯ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ಮಹತ್ವದ ಆದೇಶ ಹೊರಡಿಸಿದೆ. ಪಕ್ಷದ ಮೂಲ ಹೆಸರು ‘ಅಖಿಲ ಭಾರತ ತೃಣಮೂಲ ಕಾಂಗ್ರೆಸ್’ ಮತ್ತು ಸಾಂಪ್ರದಾಯಿಕ ಚಿಹ್ನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ . ಮುಂಬರುವ ಉಪಚುನಾವಣೆಗಳಿಗಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ‘ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಹೆಸರು ಹಾಗೂ ‘ಫುಟ್ಬಾಲ್ ಆಟಗಾರ’ ಚಿಹ್ನೆ ನೀಡಲಾಗಿದ್ದರೆ, ಋತಬ್ರತಾ ಬ್ಯಾನರ್ಜಿ ಮತ್ತು ಅರೂಪ್ ರಾಯ್ ಬೆಂಬಲಿತ ಬಂಡಾಯ ಬಣಕ್ಕೆ ‘ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್’ ಹೆಸರು ಹಾಗೂ ‘ಲಕೋಟೆ’ (Envelope) ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ.
ಮಧ್ಯಂತರ ಮತ್ತು ತಾತ್ಕಾಲಿಕ ಆದೇಶ: ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಎರಡೂ ಬಣಗಳನ್ನು ಮಾನ್ಯತೆ ಪಡೆದ ಪಕ್ಷಗಳೆಂದು ಪರಿಗಣಿಸಲಾಗಿದ್ದು, ಅಕ್ಟೋಬರ್ 6 ರಂದು ನಡೆಯಲಿರುವ ನಂದಿಗ್ರಾಮ ಮತ್ತು ರೆಜಿನಗರ ಉಪಚುನಾವಣೆಗಳಿಗೆ ಈ ಹೊಸ ಹೆಸರು ಮತ್ತು ಚಿಹ್ನೆಗಳು ಅನ್ವಯಿಸಲಿವೆ.
ವಿವಾದದ ಮೂಲ ಕಾರಣ: ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಿಂಧುತ್ವ ಮತ್ತು ಸಾಂಸ್ಥಿಕ ಅಧಿಕಾರವೇ ಕಿತ್ತಾಟಕ್ಕೆ ಕಾರಣ. ಹಾಲಿ ಸಮಿತಿಯ ಅವಧಿ 2025ರ ಫೆಬ್ರವರಿಯಲ್ಲೇ ಮುಕ್ತಾಯಗೊಂಡಿದೆ ಎಂದು ಬಂಡಾಯ ಬಣ ವಾದಿಸಿದರೆ, ಸಂವಿಧಾನ ತಿದ್ದುಪಡಿ ಮೂಲಕ ಸಮಿತಿಯ ಅಧಿಕಾರಾವಧಿಯನ್ನು 3 ರಿಂದ 5 ವರ್ಷಕ್ಕೆ ವಿಸ್ತರಿಸಲಾಗಿದೆ ಎಂದು ಮಮತಾ ಬಣದ ಪರವಾಗಿ ಸಂಸದ ಡೆರೆಕ್ ಒ’ಬ್ರೇನ್ ವಾದಿಸಿದ್ದರು.
ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶ 1968 ರ ಪ್ಯಾರಾಗ್ರಾಫ್ 15 ರ ಅಡಿಯಲ್ಲಿ ಅಂತಿಮ ತೀರ್ಪು ಬರುವವರೆಗೂ ಉಭಯ ಬಣಗಳು ನೀಡಿದ ಆದ್ಯತೆಯ ಪಟ್ಟಿಯ ಆಧಾರದ ಮೇಲೆ ಈ ಮಧ್ಯಂತರ ಚಿಹ್ನೆಗಳನ್ನು ನಿಗದಿಪಡಿಸಲಾಗಿದೆ.
ಮತ್ತಷ್ಟು ಓದಿ: ಸುವೇಂದು ರಾಜೀನಾಮೆಯಿಂದ ತೆರವಾದ ನಂದಿಗ್ರಾಮದಲ್ಲಿ ಮತ್ತೆ ಮಮತಾ ಸ್ಪರ್ಧೆ ಸಾಧ್ಯತೆ: ಟಿಎಂಸಿ ಚಿಹ್ನೆ ಜಟಾಪಟಿಯ ನಡುವೆ ಕದನ ಕುತೂಹಲ
ರಾಹುಲ್ ಗಾಂಧಿ ಆರೋಪ: ಮೊದಲು ಶಿವಸೇನೆ, ನಂತರ ಎನ್ಸಿಪಿ, ಈಗ ಟಿಎಂಸಿ. ಪ್ರಜಾಪ್ರಭುತ್ವವನ್ನು ಹಾಳುಮಾಡಲು ಬಿಜೆಪಿ ಮತ್ತು ಚುನಾವಣಾ ಆಯೋಗ ಪ್ರತಿಪಕ್ಷಗಳನ್ನು ಒಡೆಯುತ್ತಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಾಬುಲ್ ಸುಪ್ರಿಯೋ ಪ್ರಶ್ನೆ: ಪಕ್ಷಾಂತರ ಮತ್ತು ಆಂತರಿಕ ಬಂಡಾಯದ ರಾಜಕೀಯ ನೈತಿಕತೆಯನ್ನು ಪ್ರಶ್ನಿಸಿ, ಸ್ವಯಂಚಾಲಿತ ಅನರ್ಹತೆಯ ಕಾನೂನು ಅಗತ್ಯ ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ತಿರುಗೇಟು: ಟಿಎಂಸಿ ತನ್ನದೇ ಆಂತರಿಕ ಭ್ರಷ್ಟಾಚಾರ ಮತ್ತು ಕಲಹದಿಂದ ಒಡೆದುಹೋಗುತ್ತಿದ್ದು, ಆಯೋಗ ನಿಯಮಾನುಸಾರ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ಮುಖಂಡ ದಿಲೀಪ್ ಘೋಷ್ ಸಮರ್ಥಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಮಾದರಿಯ ಪುನರಾವರ್ತನೆ: ಮಹಾರಾಷ್ಟ್ರದಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ vs ಏಕನಾಥ್ ಶಿಂಧೆ) ಮತ್ತು ಎನ್ಸಿಪಿ (ಶರದ್ ಪವಾರ್ vs ಅಜಿತ್ ಪವಾರ್) ನಡುವಿನ ತಿಕ್ಕಾಟದ ಸಂದರ್ಭದಲ್ಲೂ ಚುನಾವಣಾ ಆಯೋಗವು ಮೂಲ ಚಿಹ್ನೆಗಳನ್ನು ಫ್ರೀಜ್ ಮಾಡಿ ಇದೇ ರೀತಿಯ ಮಧ್ಯಂತರ ಹೆಸರು ಹಾಗೂ ಚಿಹ್ನೆಗಳನ್ನು ನೀಡಿತ್ತು. ಆ ನಂತರ ಶಾಸಕಾಂಗ ಹಾಗೂ ಸಂಘಟನಾ ಬಲದ ಆಧಾರದ ಮೇಲೆ ಅಂತಿಮ ನಿರ್ಧಾರ ಪ್ರಕಟಿಸಲಾಗಿತ್ತು.
ನಂದಿಗ್ರಾಮ ಉಪಚುನಾವಣೆಯ ಮಹತ್ವ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ನಂದಿಗ್ರಾಮ ಅತ್ಯಂತ ಹೈವೋಲ್ಟೇಜ್ ಕ್ಷೇತ್ರವಾಗಿದ್ದು, ಈ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಬಣ ಮತ್ತು ಬಂಡಾಯ ಬಣ ಪರಸ್ಪರ ಹೊಸ ಚಿಹ್ನೆಗಳೊಂದಿಗೆ ಮುಖಾಮುಖಿಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
‘ಫುಟ್ಬಾಲ್’ ಮತ್ತು ‘ಖೇಲಾ ಹೋಬೆ’ ನಂಟು: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಅತ್ಯಂತ ಜನಪ್ರಿಯ ರಾಜಕೀಯ ಘೋಷಣೆ ‘ಖೇಲಾ ಹೋಬೆ’ (ಆಟ ಶುರುವಾಗಿದೆ). ಇದೀಗ ಕಾಕತಾಳೀಯ ಎಂಬಂತೆ ಮಮತಾ ಬಣಕ್ಕೆ ‘ಫುಟ್ಬಾಲ್ ಆಟಗಾರ’ನ ಚಿಹ್ನೆಯೇ ಸಿಕ್ಕಿರುವುದು ಅವರ ಬೆಂಬಲಿಗರಲ್ಲಿ ಪ್ರಚಾರದ ಹೊಸ ಅಸ್ತ್ರವಾಗಿ ಮಾರ್ಪಟ್ಟಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಸೆಪ್ಟೆಂಬರ್ 18: ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಠಿಣ ನಿಲುವು ತಳೆದಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್ಟಿಎ) ಆಡಳಿತ ಶೈಲಿ ಮತ್ತು ಪರೀಕ್ಷಾ ಸುರಕ್ಷತೆಯನ್ನು ಖುದ್ದಾಗಿ ಪರಿಶೀಲಿಸಲು, ಸುಪ್ರೀಂ ಕೋರ್ಟ್ ಎನ್ಟಿಎ ಕಚೇರಿಗೆ ಸ್ವತಃ ಭೇಟಿ ನೀಡುವ ಚಿಂತನೆ ನಡೆಸಿದೆ. ಇದರ ಜೊತೆಗೆ, ಸಂಸ್ಥೆಯ ಮೂಲಭೂತ ಸುಧಾರಣೆಗಾಗಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ಇದುವರೆಗಿನ ಸುಧಾರಣಾ ಪ್ರಗತಿಯ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ನ್ಯಾಯಪೀಠ ನಿರ್ದೇಶಿಸಿದೆ.
ಎನ್ಟಿಎ ಕಚೇರಿಗೆ ಸದ್ಯದಲ್ಲೇ ಭೇಟಿ:
ಎನ್ಟಿಎ ಪರೀಕ್ಷೆಗಳನ್ನು ನಡೆಸುವ ವಿಧಾನ, ತಂತ್ರಜ್ಞಾನ ವ್ಯವಸ್ಥೆ ಮತ್ತು ದತ್ತಾಂಶ ಭದ್ರತೆಯ ನೈಜ ಸ್ಥಿತಿಯನ್ನು ಪರಿಶೀಲಿಸಲು ತನಿಖಾಧಿಕಾರಿಗಳು ಹಾಗೂ ನ್ಯಾಯಪೀಠದ ಪ್ರತಿನಿಧಿಗಳು ಕಚೇರಿಗೆ ನೇರವಾಗಿ ಭೇಟಿ ನೀಡುವ ಕುರಿತು ಸುಪ್ರೀಂ ಕೋರ್ಟ್ ಸುಳಿವು ನೀಡಿದೆ. ಪರೀಕ್ಷೆಯನ್ನು ನಡೆಸಲು ಮಾಡಿದ ಸುಧಾರಣೆಗಳನ್ನು ನಿಜವಾಗಿಯೂ ಅನುಷ್ಠಾನಗೊಳಿಸಲಾಗಿದೆಯೇ ಎಂದು ನೋಡಲು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು ಎನ್ಟಿಎ ಕಚೇರಿಗೆ ವೈಯಕ್ತಿಕವಾಗಿ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಸೂಚಿಸಿದೆ. ವಿಚಾರಣೆಯ ಸಮಯದಲ್ಲಿ, ಪರೀಕ್ಷೆಯನ್ನು ನಡೆಸಲು ವಿನ್ಯಾಸಗೊಳಿಸಲಾದ ವ್ಯವಸ್ಥೆಯು ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ, ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಮತ್ತು ಅದಕ್ಕೆ ಸಾಕಷ್ಟು ಮಾನವಶಕ್ತಿ ಮತ್ತು ಇತರ ಅಗತ್ಯ ವ್ಯವಸ್ಥೆಗಳು ಲಭ್ಯವಿದೆಯೇ ಎಂದು ನೋಡಲು ಬಯಸುವುದಾಗಿ ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ: ‘ನಮ್ಮ ಮುಂದೆ ಎಲ್ಲರೂ ಸಮಾನರು’; ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ತುರ್ತು ವಿಚಾರಣೆ ಕೋರಿಕೆಗೆ ಸುಪ್ರೀಂ ಕೋರ್ಟ್ ಅಸಮಾಧಾನ
ಎನ್ಟಿಎ ತಾಂತ್ರಿಕ ಹಾಗೂ ಕಾರ್ಯಾಚರಣೆಯ ಸುಧಾರಣೆಗಾಗಿ ರಚಿಸಲಾದ ನಂದನ್ ನಿಲೇಕಣಿ ಸಮಿತಿಯು, ಪರೀಕ್ಷಾ ಭದ್ರತೆಯನ್ನು ಬಲಪಡಿಸಲು ಕೈಗೊಂಡಿರುವ ಕ್ರಮಗಳ ವಿವರವಾದ ಪ್ರಗತಿ ವರದಿಯನ್ನು ಸಲ್ಲಿಸಲು ಕೋರ್ಟ್ ಸೂಚಿಸಿದೆ. ಹಾಗೇ, ಈ ಶಿಫಾರಸುಗಳು ಕೇವಲ ವರದಿಗೆ ಸೀಮಿತವಾಗಿರಬಾರದು, ಇದನ್ನು ಅನುಷ್ಠಾನಕ್ಕೂ ತರಬೇಕು ಎಂದು ಕೋರ್ಟ್ ಹೇಳಿದೆ.
ಎನ್ಟಿಎ ತನ್ನ ಸುಧಾರಣಾ ವರದಿಗಳು ಮತ್ತು ಅಫಿಡವಿಟ್ಗಳನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು, ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮುಂಬರುವ ಪರೀಕ್ಷೆಗಳ ಭದ್ರತೆಯ ಕುರಿತು ವಿಶ್ವಾಸ ಮೂಡುತ್ತದೆ ಎಂದು ಕೋರ್ಟ್ ತಿಳಿಸಿದೆ.
ಇದನ್ನೂ ಓದಿ: NEET-PG 2026: ನೀಟ್–ಪಿಜಿ ಪರೀಕ್ಷೆಯ ವೇಳೆ ವಿದ್ಯುತ್ ಕಡಿತ; ಸೆಪ್ಟೆಂಬರ್ 5ಕ್ಕೆ ಮರುಪರೀಕ್ಷೆ ನಡೆಸಲು ನಿರ್ಧಾರ!
ಹಂತ-ಹಂತದ ಅನುಷ್ಠಾನ:
ಕೇವಲ ವರದಿಗಳನ್ನು ಸಿದ್ಧಪಡಿಸುವುದಷ್ಟೇ ಸಾಲದು, ಮುಂದಿನ ವರ್ಷದ ನೀಟ್-ಯುಜಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳು ಆರಂಭವಾಗುವ ಮೊದಲೇ ಎಲ್ಲಾ ಡಿಜಿಟಲ್ ಹಾಗೂ ಭದ್ರತಾ ಸುಧಾರಣೆಗಳು ಸಂಪೂರ್ಣವಾಗಿ ಜಾರಿಗೆ ಬರಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇತ್ತೀಚಿನ ದಿನಗಳಲ್ಲಿ ಬಹುತೇಕ ಕಾರುಗಳಲ್ಲಿ (Car) 4 ಸಿಲಿಂಡರ್ ಎಂಜಿನ್ಗಳನ್ನು ಕಾಣಬಹುದು. ಸಣ್ಣ ಹ್ಯಾಚ್ಬ್ಯಾಕ್ ಕಾರುಗಳಿಂದ ಹಿಡಿದು ಎಸ್ಯುವಿ ಮತ್ತು ದೊಡ್ಡ ವಾಹನಗಳವರೆಗೂ ಈ ರೀತಿಯ ಎಂಜಿನ್ ಬಳಕೆಯಲ್ಲಿದೆ. ಹಿಂದೆ 6 ಅಥವಾ 8 ಸಿಲಿಂಡರ್ಗಳ ದೊಡ್ಡ ಎಂಜಿನ್ಗಳಿಗೆ ಹೆಚ್ಚು ಆದ್ಯತೆ ಇತ್ತು. ಆದರೆ ಇಂಧನ ಉಳಿತಾಯ, ಕಡಿಮೆ ತೂಕ ಮತ್ತು ಸಮತೋಲಿತ ಕಾರ್ಯಕ್ಷಮತೆಯಂತಹ ಕಾರಣಗಳಿಂದ 4 ಸಿಲಿಂಡರ್ ಎಂಜಿನ್ಗಳು ಹೆಚ್ಚು ಸಾಮಾನ್ಯವಾಗಿವೆ. ಹಾಗಾದರೆ 4 ಸಿಲಿಂಡರ್ ಎಂಜಿನ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ?.
ಎಂಜಿನ್ನಲ್ಲಿರುವ ಸಿಲಿಂಡರ್ ಎಂದರೇನು?ಸರಳವಾಗಿ ಹೇಳುವುದಾದರೆ, ಸಿಲಿಂಡರ್ ಎಂದರೆ ಎಂಜಿನ್ನೊಳಗೆ ಇಂಧನದಿಂದ ಶಕ್ತಿ ಉತ್ಪತ್ತಿಯಾಗುವ ಪ್ರಮುಖ ಭಾಗ. ಇದರೊಳಗೆ ಪಿಸ್ಟನ್ ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತಿರುತ್ತದೆ. ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ನಲ್ಲಿ ಗಾಳಿ ಮತ್ತು ಇಂಧನದ ದಹನದಿಂದ ಉಂಟಾಗುವ ಒತ್ತಡ ಪಿಸ್ಟನ್ನ್ನು ಚಲಿಸುತ್ತದೆ. ಪಿಸ್ಟನ್ನ ಈ ಚಲನೆಯನ್ನು ಕ್ರ್ಯಾಂಕ್ಶಾಫ್ಟ್ ಚಕ್ರದ ರೀತಿಯ ತಿರುಗುವ ಚಲನೆಯಾಗಿ ಪರಿವರ್ತಿಸುತ್ತದೆ. ಇದೇ ಶಕ್ತಿ ಮುಂದಿನ ಹಂತದಲ್ಲಿ ವಾಹನದ ಚಕ್ರಗಳನ್ನು ತಿರುಗಿಸಲು ಸಹಾಯ ಮಾಡುತ್ತದೆ.
ಪ್ರತಿಯೊಂದು ಸಿಲಿಂಡರ್ನಲ್ಲೂ ಪಿಸ್ಟನ್, ಗಾಳಿ ಒಳಗೆ ಬರಲು ಮತ್ತು ಹೊರಹೋಗಲು ಸಹಾಯ ಮಾಡುವ ಕವಾಟಗಳು ಸೇರಿದಂತೆ ಹಲವು ಪ್ರಮುಖ ಭಾಗಗಳಿರುತ್ತವೆ. ಪೆಟ್ರೋಲ್ ಎಂಜಿನ್ನಲ್ಲಿ ಸ್ಪಾರ್ಕ್ ಪ್ಲಗ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.
4 ಸಿಲಿಂಡರ್ ಎಂಜಿನ್ ಹೇಗೆ ಕೆಲಸ ಮಾಡುತ್ತದೆ?4 ಸಿಲಿಂಡರ್ ಎಂಜಿನ್ನಲ್ಲಿ ನಾಲ್ಕು ಸಿಲಿಂಡರ್ಗಳಿರುತ್ತವೆ. ಸಾಮಾನ್ಯವಾಗಿ ಇವುಗಳನ್ನು ಒಂದೇ ಸಾಲಿನಲ್ಲಿ ಜೋಡಿಸಲಾಗಿರುತ್ತದೆ. ಇದನ್ನು ಇನ್ಲೈನ್ 4 ಅಥವಾ ಸ್ಟ್ರೇಟ್ 4 ಎಂಜಿನ್ ಎಂದು ಕರೆಯಲಾಗುತ್ತದೆ. ನಾಲ್ಕು ಸಿಲಿಂಡರ್ಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುವುದರಿಂದ ಎಂಜಿನ್ನ ಕಾರ್ಯಾಚರಣೆ ಹೆಚ್ಚು ಸಮತೋಲಿತವಾಗಿರುತ್ತದೆ.
ಚೀನಾದ ಟಾಪ್ 10 ಕಾರುಗಳಲ್ಲಿ ಒಂದೂ ಪೆಟ್ರೋಲ್ ಕಾರಿಲ್ಲ; ಹಾಗಾದ್ರೆ ಯಾವ ಕಾರು?
ಎಂಜಿನ್ ಕೆಲಸ ಮಾಡುವಾಗ ಪ್ರತಿಯೊಂದು ಸಿಲಿಂಡರ್ನಲ್ಲೂ ಮುಖ್ಯವಾಗಿ ನಾಲ್ಕು ಹಂತಗಳು ನಡೆಯುತ್ತವೆ. ಮೊದಲ ಹಂತದಲ್ಲಿ ಗಾಳಿ ಮತ್ತು ಇಂಧನ ಒಳಗೆ ಬರುತ್ತದೆ. ಎರಡನೇ ಹಂತದಲ್ಲಿ ಪಿಸ್ಟನ್ ಮೇಲಕ್ಕೆ ಚಲಿಸಿ ಅದನ್ನು ಸಂಕುಚಿತಗೊಳಿಸುತ್ತದೆ. ಮೂರನೇ ಹಂತದಲ್ಲಿ ದಹನದಿಂದ ಉಂಟಾಗುವ ಒತ್ತಡ ಪಿಸ್ಟನ್ನ್ನು ಕೆಳಕ್ಕೆ ತಳ್ಳುತ್ತದೆ. ಇದರಿಂದ ಎಂಜಿನ್ಗೆ ಶಕ್ತಿ ಸಿಗುತ್ತದೆ. ನಾಲ್ಕನೇ ಹಂತದಲ್ಲಿ ಉರಿದ ಅನಿಲಗಳು ಎಂಜಿನ್ನಿಂದ ಹೊರಗೆ ಹೋಗುತ್ತವೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
4 ಸಿಲಿಂಡರ್ ಎಂಜಿನ್ನ ಪ್ರಯೋಜನಗಳೇನು?ಈ ಎಂಜಿನ್ಗಳ ಪ್ರಮುಖ ಪ್ರಯೋಜನವೆಂದರೆ ಗಾತ್ರ ಮತ್ತು ಕಾರ್ಯಕ್ಷಮತೆಯ ನಡುವೆ ಉತ್ತಮ ಸಮತೋಲನ ಸಿಗುವುದು. 6 ಅಥವಾ 8 ಸಿಲಿಂಡರ್ ಎಂಜಿನ್ಗಳಿಗೆ ಹೋಲಿಸಿದರೆ 4 ಸಿಲಿಂಡರ್ ಎಂಜಿನ್ ಸಾಮಾನ್ಯವಾಗಿ ಹಗುರವಾಗಿರುತ್ತದೆ. ಇದರಿಂದ ವಾಹನದ ಒಟ್ಟಾರೆ ತೂಕ ಕಡಿಮೆಯಾಗಲು ಸಹಾಯವಾಗುತ್ತದೆ. ಕಡಿಮೆ ತೂಕದ ಜೊತೆಗೆ ಇಂಧನ ಬಳಕೆಯೂ ಕಡಿಮೆಯಾಗುತ್ತದೆ.
ಇದಲ್ಲದೆ, ಇಂತಹ ಎಂಜಿನ್ಗಳನ್ನು ತಯಾರಿಸುವುದು ಮತ್ತು ನಿರ್ವಹಿಸುವುದು ದೊಡ್ಡ ಎಂಜಿನ್ಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಕಡಿಮೆ ವೆಚ್ಚದಾಯಕವಾಗಿರುತ್ತದೆ. ದೈನಂದಿನ ನಗರ ಸಂಚಾರ ಮತ್ತು ದೀರ್ಘ ಪ್ರಯಾಣ ಎರಡಕ್ಕೂ 4 ಸಿಲಿಂಡರ್ ಎಂಜಿನ್ ಹೊಂದಿರುವ ಹಲವು ಕಾರುಗಳು ಸೂಕ್ತವಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, (ಸೆಪ್ಟೆಂಬರ್ 18): ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅಕ್ರಮ ಸಂಪತ್ತು ಮತ್ತು ಶೋಕಿ ಜೀವನದ ಒಂದೊಂದೇ ಕರಾಳ ಮುಖಗಳು ಸಿಐಡಿ ತನಿಖೆಯಲ್ಲಿ ಬಯಲಾಗುತ್ತಿವೆ. ಲೂಟಿ ಮಾಡಿದ ಹಣದಲ್ಲಿ ಗೆಳತಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕೊಡಿಸಿರುವುದು ಹಾಗೂ ಆಪ್ತರಿಂದ ವಿದೇಶ ಪ್ರವಾಸದ ಆಫರ್ ಪಡೆದುಕೊಂಡಿರುವುದು ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಹೌದು… ಈ ಹಿಂದೆ ಜುಲೈ ತಿಂಗಳಲ್ಲಿ ಬೆಂಗಳೂರಿನ ಪ್ರತಿಷ್ಠಿತ ಜ್ಯುವೆಲ್ಲರಿಯೊಂದರಲ್ಲಿ ಖರೀದಿಸಿದ್ದ 26 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಸಿಐಡಿ ಅಧಿಕಾರಿಗಳು ಈಗಾಗಲೇ ಜಪ್ತಿ ಮಾಡಿದ್ದರು.. ಈಗ ಓಂ ಲಕ್ಷ್ಮಿ ಕೋ-ಆಪರೇಟಿವ್ ಸೊಸೈಟಿಯ ಅನುಮಾನಾಸ್ಪದ ಹಣ ವರ್ಗಾವಣೆ ಪರಿಶೀಲನೆ ನಡೆಸುವಾಗ, ಅದೇ ಗೆಳತಿಗೆ ಮತ್ತೆ 30 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಖರೀದಿಸಿಕೊಟ್ಟಿರುವುದು ಪತ್ತೆಯಾಗಿದೆ.
ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಒಲಿಂಪಿಕ್ಸ್ನಲ್ಲಿ ಪದಕ ಗೆದ್ದವರು, ವಿಶ್ವ ಚಾಂಪಿಯನ್ಷಿಪ್ನಲ್ಲಿ ಮಿಂಚಿದವರು, ಹಿಂದಿನ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪದಕದ ಬೇಟೆಗೆ ಬಲ ತುಂಬಿದವರು... ಹೀಗೆ ಅನುಭವ ಜೊತೆ ಯುವ ಪ್ರತಿಭೆಗಳ ಸಂಗಮದೊಂದಿಗೆ ಭಾರತ 2026ರ ಏಷ್ಯನ್ ಗೇಮ್ಸ್ ಆಡಲು ಸಜ್ಜಾಗಿದೆ.
ಜಪಾನ್ನ ಐಚಿ–ನಗೋಯಾದಲ್ಲಿ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ 20ನೇ ಏಷ್ಯನ್ ಗೇಮ್ಸ್ ನಡೆಯಲಿದೆ. 2023ರ ಹಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಭಾರತ 28 ಚಿನ್ನ ಸೇರಿ ದಾಖಲೆಯ 107 ಪದಕಗಳನ್ನು ಗೆದ್ದಿತ್ತು. ಹೀಗಾಗಿ ಈ ಬಾರಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನದ ಮೇಲೆ ನಿರೀಕ್ಷೆ ಹೆಚ್ಚಿದೆ.
ಭಾರತ ಕಳಿಸಿರುವ ಏಷ್ಯನ್ ಗೇಮ್ಸ್ನಲ್ಲಿ ಒಲಿಂಪಿಕ್ ಪದಕ ವಿಜೇತರಾದ ಪಿ.ವಿ. ಸಿಂಧು, ಮನು ಭಾಕರ್, ಮೀರಾಬಾಯಿ ಚಾನು, ಲವ್ಲಿನಾ ಬೊರ್ಗೊಹೈನ್ ಮತ್ತು ಅಮನ್ ಸೆಹ್ರಾವತ್ ಸೇರಿದಂತೆ ಹಲವು ಪ್ರಮುಖ ಕ್ರೀಡಾಪಟುಗಳಿದ್ದಾರೆ.
ಮನು ಭಾಕರ್: ಒಲಿಂಪಿಕ್ನಲ್ಲಿ ಎರಡು ಪದಕಶೂಟಿಂಗ್ನಲ್ಲಿ ಭಾರತದ ಪ್ರಮುಖ ಕ್ರೀಡಾಪಟು ಆಗಿರುವ ಮನು ಭಾಕರ್ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಹಾಗೂ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಒಂದೇ ಒಲಿಂಪಿಕ್ಸ್ನಲ್ಲಿ ಎರಡು ಪದಕ ಪಡೆದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಹಾಂಗ್ಝೌ ಏಷ್ಯನ್ ಗೇಮ್ಸ್ನ ಮಹಿಳೆಯರ 25 ಮೀ. ಪಿಸ್ತೂಲ್ ತಂಡ ವಿಭಾಗದಲ್ಲೂ ಮನು ಚಿನ್ನ ಗೆದ್ದಿದ್ದರು. ಈಗ ಮತ್ತೊಂದು ಏಷ್ಯನ್ ಗೇಮ್ಸ್ನಲ್ಲಿ ಅವರು ಭಾರತದ ಶೂಟಿಂಗ್ ತಂಡದ ಪ್ರಮುಖ ಆಟಗಾರ್ತಿಯಾಗಿದ್ದಾರೆ.
@font-face{font-family:'PrajavaniTextRegular';src:url('https://fea.assettype.com/tpml/assets/PrajavaniTextRegular.woff2') format('woff2');font-weight:400;font-style:normal;font-display:swap;}@font-face{font-family:'PvHeadlineSemibold3';src:url('https://fea.assettype.com/tpml/assets/PvHeadlineSemibold3.woff2') format('woff2');font-weight:600;font-style:normal;font-display:swap;} .dh-inline-infographic{max-width:900px;margin:0 auto;background-color:#ffffff;border-radius:8px;box-shadow:0 2px 8px rgba(0,0,0,0.1);overflow:hidden;font-family:'PrajavaniTextRegular',serif;text-align:left;position:relative} .dh-inline-infographic .embed-header{background-color:#B82831;color:#ffffff;padding:18px;text-align:center} .dh-inline-infographic .embed-header h2{margin:0;font-family:'PvHeadlineSemibold3',serif;font-size:20.02px;line-height:1.3} .dh-inline-infographic .main-concept{padding:14px 18px;border-left:4px solid #FFC314;margin:12px 18px 4px;background-color:#FFF4DB;font-size:18.2px} .dh-inline-infographic .main-concept-title{font-weight:bold;margin-bottom:4px;text-transform:uppercase;letter-spacing:0;font-size:15.600000000000001px;color:#A32530} .dh-inline-infographic .main-concept-text{font-size:18.2px;line-height:1.5} .dh-inline-infographic .section-label{padding:4px 18px 0;font-size:15.600000000000001px;text-transform:uppercase;letter-spacing:0;color:#666} .dh-inline-infographic .section-label.stats-section{padding:0 18px 0;margin-top:-10px} .dh-inline-infographic .stats-grid{display:flex;flex-wrap:wrap;gap:6px;padding:4px 18px 4px;background-color:#ffffff;margin-bottom:0} .dh-inline-infographic .stat-card{flex:1 1 calc(20% - 6px);min-width:120px;background:linear-gradient(90deg,#B82831 0%,#8B1F29 100%);color:#ffffff;border-radius:6px;padding:8px 8px;text-align:center;box-shadow:0 2px 6px rgba(184,40,49,0.22);transition:transform 0.2s ease,box-shadow 0.2s ease} .dh-inline-infographic .stat-value{font-size:26px;font-weight:700;font-family:'PvHeadlineSemibold3',serif;margin-bottom:2px;line-height:1.1} .dh-inline-infographic .stat-label{font-size:11.700000000000001px;text-transform:uppercase;letter-spacing:0;color:rgba(255,255,255,0.9);opacity:1;line-height:1.2} .dh-inline-infographic .stat-card:hover{transform:translateY(-1px);box-shadow:0 3px 8px rgba(184,40,49,0.26)} .dh-inline-infographic .inf-disclaimer{padding:0 18px 0;text-align:center;font-size:11px;color:#999;font-style:italic} .dh-inline-infographic .inf-collapsible{border:2px solid #B82831;border-radius:8px;margin:0;padding:0;display:block;overflow:hidden;background-color:#ffffff} .dh-inline-infographic .inf-collapsible:not([open]){border-color:transparent;background:linear-gradient(#ffffff,#ffffff) padding-box,linear-gradient(90deg,#B82831,#FFC314,#B82831,#FFC314,#B82831) border-box;background-size:100% 100%,300% 300%;animation:inf-border-move 6s linear infinite} .dh-inline-infographic .inf-collapsible[open]{border-color:#B82831;background:#ffffff;animation:none} .dh-inline-infographic .inf-summary{list-style:none;cursor:pointer;display:block;margin:0;padding:0;width:100%} .dh-inline-infographic .inf-summary::-webkit-details-marker{display:none} .dh-inline-infographic .inf-summary::marker{content:""} .dh-inline-infographic .inf-collapsed-card{display:flex;align-items:stretch;justify-content:flex-start;gap:0;padding:0;background:linear-gradient(135deg,#FFF4DB 0%,#FFF8E1 100%);border-bottom:1px solid rgba(0,0,0,0.06)} .dh-inline-infographic .inf-collapsed-title{font-family:'PvHeadlineSemibold3',serif;font-size:20.02px;color:#8B1F29;letter-spacing:0;text-transform:uppercase;margin:0 0 4px} .dh-inline-infographic .inf-collapsed-subtitle{font-family:'PrajavaniTextRegular',serif;font-size:14.559999999999999px;color:#4b4b4b} .dh-inline-infographic .inf-collapsed-text{min-width:0;flex:1 1 auto;padding:14px 18px} .dh-inline-infographic .inf-collapsed-title,.dh-inline-infographic .inf-collapsed-subtitle{overflow-wrap:anywhere} .dh-inline-infographic .inf-toggle-shell{flex:0 0 58px;min-width:58px;display:flex;align-items:center;justify-content:center;background-color:#FFF4DB;border-left:1px solid rgba(255,195,20,0.25)} .dh-inline-infographic .inf-collapsed-btn{background-color:transparent;color:#8B1F29;padding:0;border-radius:0;font-size:16px;line-height:1;letter-spacing:0.02em;flex:1 1 auto;text-align:center;min-width:0;display:inline-flex;align-items:center;justify-content:center;transition:background-color 0.2s ease,transform 0.2s ease} .dh-inline-infographic .inf-less{display:none} .dh-inline-infographic details[open] .inf-more{display:none} .dh-inline-infographic details[open] .inf-less{display:inline} .dh-inline-infographic .inf-body{padding-bottom:4px} .dh-inline-infographic .inf-summary:focus-visible{outline:3px solid #FFC314;outline-offset:-3px} .dh-inline-infographic .inf-arrow{width:14px;height:14px;display:block;stroke:currentColor;stroke-width:2.2;fill:none;stroke-linecap:round;stroke-linejoin:round;transform-origin:50% 50%;transition:transform 0.3s ease,filter 0.3s ease,stroke-width 0.3s ease,width 0.3s ease,height 0.3s ease} .dh-inline-infographic .inf-summary:hover .inf-collapsed-card{background:linear-gradient(135deg,#FFEEB3 0%,#FFF4DB 100%)} .dh-inline-infographic .inf-summary:hover .inf-toggle-shell{background-color:#FFE9A0} .dh-inline-infographic .inf-summary:hover .inf-arrow{transform:translateY(2px)} .dh-inline-infographic .inf-header-toggle{display:none} .dh-inline-infographic .inf-summary .embed-header{display:none} .dh-inline-infographic details[open] .inf-collapsed-card{display:none} .dh-inline-infographic details[open] .inf-summary{display:grid;grid-template-columns:minmax(0,1fr) 58px;align-items:stretch;margin:0;padding:0} .dh-inline-infographic details[open] .inf-summary .embed-header{display:block;grid-column:1;grid-row:1;padding-right:18px} .dh-inline-infographic details[open] .inf-header-toggle{display:inline-flex;grid-column:2;grid-row:1;position:static;z-index:5;align-self:stretch;width:58px;height:auto;min-height:100%;align-items:center;justify-content:center;border-radius:0;background-color:#B82831;border-left:2px solid rgba(255,195,20,0.25);color:#ffffff;box-shadow:inset 0 0 0 1px rgba(255,255,255,0.1);transition:all 0.3s ease} .dh-inline-infographic details[open] .inf-header-toggle:hover{background-color:#B82831;border-left-color:rgba(255,195,20,0.35);box-shadow:inset 0 0 0 1px rgba(255,255,255,0.2)} .dh-inline-infographic details[open] .inf-header-toggle .inf-arrow{transform:rotate(180deg);width:16px;height:16px;stroke-width:2.5;filter:drop-shadow(0 1px 2px rgba(0,0,0,0.15))} .dh-inline-infographic details[open] .inf-header-toggle:hover .inf-arrow{transform:rotate(180deg) translateY(2px)} .dh-inline-infographic .faq-list{display:flex;flex-direction:column;padding:8px 18px 6px;gap:12px;background-color:#ffffff;margin:0 0 18px}.dh-inline-infographic .faq-item{border-radius:8px;background-color:#FFF8E1;box-shadow:0 1px 4px rgba(0,0,0,0.06);overflow:hidden;transition:transform 0.2s ease,box-shadow 0.2s ease,background-color 0.2s ease}.dh-inline-infographic .faq-item:hover{background-color:#FFEEB3;transform:translateY(-2px);box-shadow:0 2px 6px rgba(0,0,0,0.12)}.dh-inline-infographic .faq-row{list-style:none;display:grid;grid-template-columns:minmax(0,1fr) 24px;gap:10px;align-items:start;padding:12px 12px 8px;cursor:pointer}.dh-inline-infographic .faq-row::-webkit-details-marker{display:none}.dh-inline-infographic .faq-row::marker{content:""}.dh-inline-infographic .faq-copy{min-width:0}.dh-inline-infographic .faq-question{margin:0;font-family:'PvHeadlineSemibold3',serif;font-size:19.5px;line-height:1.32;color:#8B1F29;overflow-wrap:anywhere;word-break:break-word}.dh-inline-infographic .faq-toggle{display:flex;align-items:center;justify-content:center;align-self:start;color:#A32530;width:24px;height:24px}.dh-inline-infographic .faq-arrow{width:16px;height:16px;display:block;stroke:currentColor;stroke-width:2.2;fill:none;stroke-linecap:round;stroke-linejoin:round;transition:transform 0.25s ease}.dh-inline-infographic .faq-item[open] .faq-arrow{transform:rotate(180deg)}.dh-inline-infographic .faq-answer-shell{padding:0 12px 12px}.dh-inline-infographic .faq-answer{margin:0;font-size:16.900000000000002px;line-height:1.6;color:#23424a;overflow-wrap:anywhere;word-break:break-word} @keyframes inf-border-move{0%{background-position:0 0,0% 50%}100%{background-position:0 0,100% 50%}} @media (prefers-color-scheme: dark){ .dh-inline-infographic{background-color:#1a1a1a;box-shadow:0 2px 8px rgba(0,0,0,0.5);color:#e0e0e0} .dh-inline-infographic .embed-header{background-color:#8B1F29} .dh-inline-infographic .main-concept{background-color:#2a2418;border-left-color:#FFC314} .dh-inline-infographic .main-concept-title{color:#FF5055} .dh-inline-infographic .main-concept-text{color:#e0e0e0} .dh-inline-infographic .section-label{color:#aaa} .dh-inline-infographic .stats-grid{background-color:#1a1a1a} .dh-inline-infographic .stat-card{background:linear-gradient(90deg,#B8911A 0%,#8B1F29 100%);box-shadow:0 2px 6px rgba(0,0,0,0.4)} .dh-inline-infographic .inf-disclaimer{color:#777} .dh-inline-infographic .inf-collapsible{background-color:#1a1a1a;border-color:#8B1F29} .dh-inline-infographic .inf-collapsible[open]{background:#1a1a1a;border-color:#8B1F29} .dh-inline-infographic .inf-collapsed-card{background:linear-gradient(135deg,#2a2418 0%,#22201a 100%);border-bottom-color:rgba(255,255,255,0.08)} .dh-inline-infographic .inf-collapsed-title{color:#FF5055} .dh-inline-infographic .inf-collapsed-subtitle{color:#bbb} .dh-inline-infographic .inf-toggle-shell{background-color:#2a2418;border-left-color:#8B6914} .dh-inline-infographic .inf-collapsed-btn{color:#FFC314} .dh-inline-infographic details[open] .inf-header-toggle{background-color:#8B1F29} .dh-inline-infographic .inf-summary:hover .inf-collapsed-card{background:linear-gradient(135deg,#3a2f1f 0%,#2a2418 100%)} .dh-inline-infographic .inf-summary:hover .inf-toggle-shell{background-color:#3a2f1f} .dh-inline-infographic .faq-list{background-color:#1a1a1a}.dh-inline-infographic .faq-item{background-color:#2d2d2d;box-shadow:0 1px 4px rgba(0,0,0,0.3);border:1px solid rgba(255,255,255,0.06)}.dh-inline-infographic .faq-question{color:#FF5055}.dh-inline-infographic .faq-toggle{color:#FF5055}.dh-inline-infographic .faq-answer{color:#e0e0e0}.dh-inline-infographic .faq-item:hover{background-color:#383838;box-shadow:0 2px 6px rgba(0,0,0,0.4)} } @media (max-width:700px){ .dh-inline-infographic .main-concept{margin-left:12px;margin-right:12px;padding-left:12px;padding-right:12px} .dh-inline-infographic .section-label,.dh-inline-infographic .section-label.stats-section,.dh-inline-infographic .stats-grid,.dh-inline-infographic .inf-disclaimer{padding-left:12px;padding-right:12px} .dh-inline-infographic .stat-card{flex:1 1 calc(33.333% - 6px);min-width:100px} .dh-inline-infographic .inf-collapsed-card{gap:0;padding:0} .dh-inline-infographic .inf-collapsed-text{padding:12px} .dh-inline-infographic .inf-collapsed-title{font-size:17.94px} .dh-inline-infographic .inf-collapsed-subtitle{font-size:13.520000000000001px} .dh-inline-infographic .inf-toggle-shell{flex-basis:50px;min-width:50px} .dh-inline-infographic details[open] .inf-summary{grid-template-columns:minmax(0,1fr) 50px} .dh-inline-infographic details[open] .inf-summary .embed-header{padding-right:12px} .dh-inline-infographic details[open] .inf-header-toggle{width:50px} .dh-inline-infographic .faq-list{padding-left:12px;padding-right:12px} .dh-inline-infographic .main-concept{margin-left:10px;margin-right:10px;padding:12px 12px 12px 14px}.dh-inline-infographic .main-concept-title{font-size:14.3px}.dh-inline-infographic .main-concept-text{font-size:16.900000000000002px;line-height:1.55}.dh-inline-infographic .section-label{padding-top:8px;padding-bottom:4px}.dh-inline-infographic .faq-list{gap:10px;padding-left:10px;padding-right:10px}.dh-inline-infographic .faq-item{border-radius:10px}.dh-inline-infographic .faq-row{grid-template-columns:minmax(0,1fr) 22px;gap:8px;padding:11px 11px 6px}.dh-inline-infographic .faq-question{font-size:19.5px;line-height:1.28}.dh-inline-infographic .faq-toggle{width:22px;height:22px}.dh-inline-infographic .faq-arrow{width:14px;height:14px}.dh-inline-infographic .faq-answer-shell{padding:0 11px 11px}.dh-inline-infographic .faq-answer{font-size:16.25px;line-height:1.58}.dh-inline-infographic .stats-grid{padding-left:10px;padding-right:10px;gap:8px}.dh-inline-infographic .stat-card{flex:1 1 100%;min-width:0;padding:10px 10px}.dh-inline-infographic .stat-value{font-size:23.400000000000002px}.dh-inline-infographic .stat-label{font-size:11.700000000000001px} }ಸಂಕ್ಷಿಪ್ತ ಮಾಹಿತಿ – ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶAsian Games: ಸಿಂಧು, ಮನು, ಮೀರಾಬಾಯಿ, ಕ್ರಿಕೆಟ್ ತಂಡಗಳ ಮೇಲೆ ಎಲ್ಲರ ಕಣ್ಣುಒಂದು ಸಾಲಿನಲ್ಲಿಜಪಾನ್ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ಗೆ ಪಿ.ವಿ. ಸಿಂಧು, ಮನು ಭಾಕರ್ ಸೇರಿದಂತೆ ಅನುಭವಿ ಮತ್ತು ಯುವ ಕ್ರೀಡಾಪಟುಗಳೊಂದಿಗೆ ಭಾರತ ಭರ್ಜರಿಯಾಗಿ ಸಜ್ಜಾಗಿದೆ.ಏನು? ಏಕೆ? ಹೇಗೆ?2026ರ ಏಷ್ಯನ್ ಗೇಮ್ಸ್ ಯಾವಾಗ ಮತ್ತು ಎಲ್ಲಿ ನಡೆಯಲಿದೆ?20ನೇ ಏಷ್ಯನ್ ಗೇಮ್ಸ್ ಜಪಾನ್ನ ಐಚಿ-ನಗೋಯಾದಲ್ಲಿ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ನಡೆಯಲಿದೆ.
ಭಾರತೀಯ ಕ್ರೀಡಾಪಟುಗಳ ಮೇಲೆ ಈ ಬಾರಿ ಏಕೆ ಹೆಚ್ಚಿನ ನಿರೀಕ್ಷೆ ಇದೆ?2023ರ ಹಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಭಾರತ 28 ಚಿನ್ನದ ಪದಕಗಳೊಂದಿಗೆ ಒಟ್ಟು 107 ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದರಿಂದ ಈ ಬಾರಿ ನಿರೀಕ್ಷೆ ಹೆಚ್ಚಿದೆ.
ಪದಕದ ಭರವಸೆ ನೀಡಿರುವ ಪ್ರಮುಖ ಕ್ರೀಡಾಪಟುಗಳು ಯಾರು?ಪಿ.ವಿ. ಸಿಂಧು, ಮನು ಭಾಕರ್, ಮೀರಾಬಾಯಿ ಚಾನು, ಲವ್ಲಿನಾ ಬೊರ್ಗೊಹೈನ್, ಅಮನ್ ಸೆಹ್ರಾವತ್, ಲಕ್ಷ್ಯ ಸೇನ್ ಮತ್ತು ಜ್ಯೋತಿ ಸುರೇಖಾ ವೆನ್ನಂ ಅವರಂತಹ ತಾರೆಯರು ತಂಡದಲ್ಲಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ಯಾರು ವಹಿಸಿದ್ದಾರೆ?ಮಹಿಳಾ ತಂಡವನ್ನು ಹರ್ಮನ್ಪ್ರೀತ್ ಕೌರ್ ಮತ್ತು ಪುರುಷರ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದಾರೆ; ಎರಡೂ ತಂಡಗಳು ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿವೆ.
ನೀರಾಜ್ ಚೋಪ್ರಾ ಏಕೆ ಏಷ್ಯನ್ ಗೇಮ್ಸ್ನಿಂದ ಹೊರಗುಳಿದಿದ್ದಾರೆ?ಅಭ್ಯಾಸದ ವೇಳೆ ಗಾಯಗೊಂಡಿರುವ ಕಾರಣ ನೀರಾಜ್ ಚೋಪ್ರಾ ಅವರು ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸುತ್ತಿಲ್ಲ.
(function(){var script=document.currentScript;var list=script&&script.previousElementSibling;if(!list||list.__faqAccordionBound)return;list.__faqAccordionBound=true;list.addEventListener("toggle",function(event){var item=event.target;if(!item||!item.classList||!item.classList.contains("faq-item")||!item.open)return;var items=list.querySelectorAll(".faq-item[open]");for(var i=0;i
ಭೋಪಾಲ್: ಮಧ್ಯಪ್ರದೇಶ ಹೈಕೋರ್ಟ್ನ (Madhya Pradesh High Court) ನ್ಯಾಯಮೂರ್ತಿ ಅವನೀಂದ್ರ ಕುಮಾರ್ ಸಿಂಗ್ ಅವರು 36 ವರ್ಷಗಳ ನ್ಯಾಯಾಂಗ ಸೇವೆಯ ಬಳಿಕ ನಿವೃತ್ತರಾದ ದಿನವೇ ಸಮಾಜಮುಖಿ ನಿರ್ಧಾರಗಳನ್ನು ಘೋಷಿಸಿದ್ದಾರೆ. ತಮ್ಮ ಜಿಪಿಎಫ್ನ 1.01 ಕೋಟಿ ರೂ.ಯನ್ನು ಪಿಎಂ ಕೇರ್ಸ್ ನಿಧಿಗೆ (PM CARES Fund) ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ.
ಜಬಲ್ಪುರದಲ್ಲಿ (Jabalpur) ನಡೆದ ಹೈಕೋರ್ಟ್ನ ಫುಲ್ ಕೋರ್ಟ್ ಬೀಳ್ಕೊಡುಗೆ (Farewell) ಸಮಾರಂಭದಲ್ಲಿ ಮಾತನಾಡಿದ ಜಸ್ಟಿಸ್ ಸಿಂಗ್, ತಮ್ಮ ಜಿಪಿಎಫ್ನ 1.01 ಕೋಟಿ ರೂ.ಯನ್ನು ಪಿಎಂ ಕೇರ್ಸ್ ನಿಧಿಗೆ (PM CARES Fund) ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ. ತಮ್ಮ ಜೀವನದ ಸಂಪಾದನೆ ಮತ್ತು ಮರಣಾನಂತರ ತಮ್ಮ ದೇಹವನ್ನೂ ಸಮಾಜಕ್ಕೆ ಸಮರ್ಪಿಸುವ ಇಚ್ಛೆ ವ್ಯಕ್ತಪಡಿಸಿದರು. ತನ್ನಷ್ಟಕ್ಕೆ ತಾನೇ ಬದುಕಿದರೆ ಏನು ಪ್ರಯೋಜನ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: PUBLiC TV Impact – ಪುತ್ರಿಯ ಮೇಲೆ ಕ್ರಮ ಕೈಗೊಳ್ಳದ್ದಕ್ಕೆ ಬಾಗಲಕೋಟೆ ಡಿಎಚ್ಒ ಯರಗಲ್ ಅಮಾನತು!
ಜಸ್ಟಿಸ್ ಅವನೀಂದ್ರ ಕುಮಾರ್ ಸಿಂಗ್ ಹಾಗೂ ಅವರ ಪತ್ನಿ, ತಮ್ಮ ದೇಹವನ್ನು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ ಬಳಸುವ ಉದ್ದೇಶದಿಂದ ಜಬಲ್ಪುರ ವೈದ್ಯಕೀಯ ಕಾಲೇಜಿನಲ್ಲಿ ದೇಹದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆಯೇ ಈ ನೋಂದಣಿ ಮಾಡಿಸಿಕೊಂಡಿರುವುದಾಗಿ ಅವರು ಬೀಳ್ಕೊಡುಗೆ ಸಮಾರಂಭದಲ್ಲಿ ತಿಳಿಸಿದರು. ಜೀವನಪೂರ್ತಿ ನ್ಯಾಯಾಂಗ ಕರ್ತವ್ಯ ನಿರ್ವಹಿಸಿದ ದೇಹವು ಮುಂದಿನ ವೈದ್ಯರ ಜ್ಞಾನಾರ್ಜನೆಗೆ ಉಪಯೋಗವಾಗಬೇಕು ಎಂಬುದು ತಮ್ಮ ಆಶಯ ಎಂದು ಹೇಳಿದ್ದಾರೆ.
ಜಸ್ಟಿಸ್ ಅವನೀಂದ್ರ ಕುಮಾರ್ ಸಿಂಗ್ ಅವರು 1990ರಲ್ಲಿ ಸಿವಿಲ್ ಜಡ್ಜ್ ಆಗಿ ನ್ಯಾಯಾಂಗ ಸೇವೆ ಆರಂಭಿಸಿದ್ದರು. ಬಳಿಕ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅವರು ಮೇ 2023ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸುಮಾರು ಮೂರು ವರ್ಷಗಳ ಕಾಲ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಬಳಿಕ ಸೆಪ್ಟೆಂಬರ್ 17 ರಂದು ನಿವೃತ್ತರಾದರು.ಇದನ್ನೂ ಓದಿ: ಮಾನವ ಕಳ್ಳಸಾಗಣೆ ಪ್ರಕರಣ: 8 ಬಾಂಗ್ಲಾದೇಶಿ ಸೇರಿ 9 ಮಂದಿಗೆ ಜೀವಾವಧಿ
ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಯಶಸ್ಸು ಕಂಡವರು ದುನಿಯಾ ವಿಜಯ್. ಈ ಮೊದಲು ‘ಸಲಗ’ ಹಾಗೂ ‘ಭೀಮ’ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ಈಗ ‘ಸಿಟಿ ಲೈಟ್ಸ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಮೊದಲೆರಡು ಸಿನಿಮಾಗಳಲ್ಲಿ ನಿರ್ದೇಶನದ ಜೊತೆಗೆ ಸ್ವತಃ ನಟಿಸಿದ್ದ ಅವರು ಈಗ ಸಂಪೂರ್ಣವಾಗಿ ತೆರೆಹಿಂದೆ ನಿಂತು ಕೆಲಸ ಮಾಡಿದ್ದಾರೆ. ವಿಜಯ್ ಮತ್ತು ವಿಕ್ರಮ್ ಆರ್ಯ ಅವರು ಒಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ‘ಸಿಟಿ ಲೈಟ್ಸ್’ ಸಿನಿಮಾ ಹೇಗಿದೆ ಎಂಬುದನ್ನು ತಿಳಿಯಲು ಈ ವಿಮರ್ಶೆ ಓದಿ..
‘ಸಿಟಿ ಲೈಟ್ಸ್’ ಸಿನಿಮಾದ ಮೂಲಕ ದುನಿಯಾ ವಿಜಯ್ ಅವರ ಎರಡನೇ ಪುತ್ರಿ ಮೋನಿಷಾ ವಿಜಯ್ ಕುಮಾರ್ ಅವರು ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ನೀಡಿದ್ದಾರೆ. ಅವರಿಗೆ ಜೋಡಿಯಾಗಿ ವಿನಯ್ ರಾಜ್ಕುಮಾರ್ ಅವರು ಅಭಿನಯಿಸಿದ್ದಾರೆ. ಉಮಾಶ್ರೀ ಕೂಡ ಒಂದು ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನೋದ್ ಮಾಸ್ಟರ್, ಪುನೀತ್, ವೀರ ದೇವರಾಜ್, ವಸಂತಾ ಕೃಷ್ಣಮೂರ್ತಿ ಮುಂತಾದ ಕಲಾವಿದರು ಪಾತ್ರವರ್ಗದಲ್ಲಿ ಇದ್ದಾರೆ.
ದುನಿಯಾ ವಿಜಯ್ ಅವರ ನಿರ್ದೇಶನದ ಸಿನಿಮಾಗಳಲ್ಲಿ ಕಥೆ ಮತ್ತು ಪಾತ್ರಗಳ ಹಿನ್ನೆಲೆ ಬಹಳ ಭಿನ್ನವಾಗಿರುತ್ತದೆ ಎಂಬುದು ಖಚಿತ. ‘ಸಲಗ’ ಮತ್ತು ‘ಭೀಮ’ ಸಿನಿಮಾಗಳನ್ನು ನೋಡಿದವರಿಗೆ ಅದು ಸ್ಪಷ್ಟವಾಗಿ ತಿಳಿದಿರುತ್ತದೆ. ಈಗ ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಕೂಡ ಅವರು ಅಂಥದ್ದೇ ಒಂದು ಡಿಫರೆಂಟ್ ಲೋಕವನ್ನು ಅನಾವರಣ ಮಾಡಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ಬಗ್ಗೆ ಒಂದಷ್ಟು ಸಿನಿಮಾಗಳಲ್ಲಿ ಈಗಾಗಲೇ ತೋರಿಸಲಾಗಿದೆ. ಆದರೆ ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಮೆಜೆಸ್ಟಿಕ್ ಏರಿಯಾದ ಇನ್ನೊಂದು ಕರಾಳ ಮುಖವನ್ನು ತೆರೆದಿಡಲಾಗಿದೆ. ಮೋನಿಷಾ ಅವರಿಗೆ ಮೊದಲ ಸಿನಿಮಾದಲ್ಲಿಯೇ ಡಿಫರೆಂಟ್ ಆದಂತಹ ಪಾತ್ರ ಸಿಕ್ಕಿದೆ. ಅದನ್ನು ಅವರು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮೋನಿಷಾ ಅವರು ಕಾಣಿಸಿಕೊಳ್ಳುವುದೇ ಮಧ್ಯಂತರದ ವೇಳೆಗೆ. ಆದರೂ ಕೂಡ ಅವರ ಪಾತ್ರವೇ ಸಿನಿಮಾದಲ್ಲಿ ಹೈಲೈಟ್ ಆಗಿದೆ.
ಊರಿನಿಂದ ಕೆಲಸ ಹುಡುಕಿಕೊಂಡು ಮೆಜೆಸ್ಟಿಕ್ಗೆ ಬರುವ ಶಿವ ಎಂಬ ಯುವಕನಾಗಿ ವಿನಯ್ ರಾಜ್ಕುಮಾರ್ ಅವರು ನಟಿಸಿದ್ದಾರೆ. ಅಲ್ಲಿ ಶಿವನಿಗೆ ಹಲವು ತಾಪತ್ರಯಗಳು ಎದುರಾಗುತ್ತವೆ. ಅದರ ನಡುವೆಯೇ, ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕುವ ಅಮಾಯಕ ಹೆಣ್ಣು ಮಗಳಾಗಿ ಮೋನಿಷಾ ಕಾಣಿಸಿಕೊಂಡಿದ್ದಾರೆ. ಈ ಎರಡೂ ಪಾತ್ರಗಳು ಆಕಸ್ಮಿಕವಾಗಿ ಭೇಟಿ ಆಗುತ್ತವೆ. ಅಲ್ಲಿಂದ ಮುಂದೇನಾಗುತ್ತದೆ ಎಂಬುದೇ ‘ಸಿಟಿ ಲೈಟ್ಸ್’ ಕಹಾನಿ.
ಒಂದು ಲವ್ ಸ್ಟೋರಿ, ತೃತೀಯ ಲಿಂಗಿಗಳ ತಳಮಳ, ಪುಡಿ ರೌಡಿಗಳ ಅಟ್ಟಹಾಸ, ರಾಜಕೀಯದವರ ಭ್ರಷ್ಟಾಚಾರ, ಪೊಲೀಸರ ಕಳ್ಳಾಟ, ವೇಶ್ಯೆಯರ ಬದುಕಿನ ಸಂಕಟ ಸೇರಿದಂತೆ ಹಲವು ಅಂಶಗಳನ್ನು ಬೆರೆಸಿ ‘ಸಿಟಿ ಲೈಟ್ಸ್’ ಸಿನಿಮಾ ಮಾಡಲಾಗಿದೆ. ಎಲ್ಲವನ್ನೂ ಒಂದಕ್ಕೊಂದು ತಳುಕು ಹಾಕಿಕೊಂಡಿರುವ ರೀತಿಯಲ್ಲಿ ಕಥೆ ಹೆಣೆಯಲಾಗಿದೆ. ಸಸ್ಪೆನ್ಸ್ ಮೂಡಿಸುತ್ತಾ, ಆ್ಯಕ್ಷನ್ ತೋರಿಸುತ್ತಾ, ಸಂದೇಶ ನೀಡುತ್ತಾ ಈ ಕಥೆ ಸಾಗುತ್ತದೆ. ಹಲವು ಅಂಶಗಳ ಮಿಶ್ರಣದ ಬದಲು ನಿರ್ದಿಷ್ಟ ವಿಷಯದ ಮೇಲೆ ಕಥೆ ಕೇಂದ್ರೀಕೃತ ಆಗಿದ್ದರೆ ಸಿನಿಮಾ ಇನ್ನಷ್ಟು ಆಪ್ತವೆಸಿಕೊಳ್ಳುತ್ತಿತ್ತು. ಕೆಲವು ದೃಶ್ಯಗಳಲ್ಲಿ ಸ್ವಲ್ಪ ವಿವರಣೆ ಬೇಕಿತ್ತು ಎನಿಸುತ್ತದೆ.
ಇದನ್ನೂ ಓದಿ: ‘ಸಿಟಿ ಲೈಟ್ಸ್’ ಬೆಂಬಲಿಸಿದ ದೊಡ್ಮನೆಯವರಿಗೆ ದುನಿಯಾ ವಿಜಯ್ ಧನ್ಯವಾದ: ವಿಡಿಯೋ
ಪಟಪಟನೆ ಸಾಗುವ ಗುಣ ಈ ಸಿನಿಮಾಗಿದೆ. 2 ಗಂಟೆ 9 ನಿಮಿಷಗಳ ಅವಧಿಯಲ್ಲಿ ಎಲ್ಲವನ್ನೂ ತೋರಿಸಲಾಗಿದೆ. ಗೊಂದಲಕ್ಕೆ ಅವಕಾಶ ನೀಡದ ರೀತಿಯಲ್ಲಿ ನಿರ್ದೇಶಕ ದುನಿಯಾ ವಿಜಯ್ ಅವರು ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಹಾಸ್ಯಕ್ಕಾಗಿಯೂ ಒಂದಷ್ಟು ದೃಶ್ಯಗಳನ್ನು ಮೀಸಲಿಡಲಾಗಿದೆ. ಆದರೆ ಲವ್, ಸೆಂಟಿಮೆಂಟ್, ಕ್ರೈಂ ಹಾಗೂ ಆ್ಯಕ್ಷನ್ ದೃಶ್ಯಗಳಿಗೆ ಹೋಲಿಸಿದರೆ ಕಾಮಿಡಿ ದೃಶ್ಯಗಳು ಅಷ್ಟೇನೂ ಕೈ ಹಿಡಿದಿಲ್ಲ. ಆ ಬಗ್ಗೆ ಸ್ವಲ್ಪ ಗಮನ ಹರಿಸುವ ಅವಶ್ಯಕತೆ ಇತ್ತು.
ಇತರೆ ಸಿನಿಮಾಗಳಲ್ಲಿ ಕಾಣಿಸುವ ಪಾತ್ರಗಳಿಗಿಂತ ದುನಿಯಾ ವಿಜಯ್ ನಿರ್ದೇಶನದ ಸಿನಿಮಾಗಳಲ್ಲಿ ಇರುವ ಪಾತ್ರಗಳು ಡಿಫರೆಂಟ್ ಆಗಿರುತ್ತವೆ. ಅಂಥ ಪಾತ್ರಗಳು ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಕೂಡ ಮುಂದುವರಿದಿವೆ. ಆ ರೀತಿಯ ಪಾತ್ರಗಳ ಕಾರಣದಿಂದಲೇ ಈ ಚಿತ್ರಕ್ಕೆ ಬೇರೆ ರೀತಿಯ ಫೀಲ್ ಸಿಕ್ಕಿದೆ. ಇನ್ನು, ತಾಂತ್ರಿಕ ವರ್ಗದಲ್ಲಿ ಚರಣ್ ರಾಜ್ ಅವರ ಸಂಗೀತ, ಶಿವ ಸೇನಾ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಅವರ ಸಂಕಲನ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇಟಲಿಯ ಐಷಾರಾಮಿ ಫ್ಯಾಷನ್ ಉತ್ಪನ್ನಗಳ ಕಂಪನಿ ‘ಫೆಂಡಿ’ ಇತ್ತೀಚಿಗೆ ₹8.3 ಲಕ್ಷದಿಂದ ₹9 ಲಕ್ಷವರೆಗಿನ ಹ್ಯಾಂಡ್ಬ್ಯಾಗ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಬ್ಯಾಗ್ ಸಂಪೂರ್ಣವಾಗಿ ಬಣ್ಣ ಬಣ್ಣದ ಕಸೂತಿ, ಕನ್ನಡಿ, ಮಣಿಗಳಿಂದ ಕೂಡಿದೆ. ಅಲ್ಲದೇ ಥೇಟ್ ಬಂಜಾರ ಸಮುದಾಯದ ಸಾಂಪ್ರದಾಯಿಕ ಬ್ಯಾಗ್ಗಳನ್ನೇ ಹೋಲುವಂತಿದೆ. ನವರಾತ್ರಿ ಸಮಯದಲ್ಲಿ ₹500ಕ್ಕೆ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಇದೇ ರೀತಿಯ ಬ್ಯಾಗ್ಗಳ ಅಂಗಡಿಗಳನ್ನು ಕಾಣಬಹುದು.
ಇದೇ ಕಾರಣಕ್ಕೆ ಸದ್ಯ ‘ಫೆಂಡಿ’ ಕಂಪನಿಯ ಬ್ಯಾಗ್ ಚರ್ಚೆಗೆ ಗ್ರಾಸವಾಗಿದೆ. ಭಾರತದ ಕಸುಬುದಾರಿಕೆಯಿಂದ ಸ್ಪೂರ್ತಿ ಪಡೆದು, ಯಾವುದೇ ಕ್ರೆಡಿಟ್ ಕೊಡದೆ ಫೆಂಡಿ, ಈ ಬ್ಯಾಗ್ಗಳನ್ನು ಬಿಡುಗಡೆ ಮಾಡಿದೆ ಎಂದು ಇತರ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ಗಳು ಆರೋಪಿಸಿವೆ.
ಧ್ವನಿಯೆತ್ತಿದ ಭಾರತದ ಉದ್ಯಮಿಗಳು
ಫೆಂಡಿ ಬ್ಯಾಗ್ ಬಗ್ಗೆ ಆರ್ಪಿಜಿ ಗ್ರೂಪ್ನ ಮುಖ್ಯಸ್ಥ ಹರ್ಷ್ ಗೋಯೆಂಕಾ ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಭಾರತೀಯ ಕುಶಲಕರ್ಮಿಗಳಿಗೆ ಮನ್ನಣೆ ನೀಡದಿರುವ ವಿಷಯವಿದು. ‘ಪ್ರಡಾ‘ ಸಂಸ್ಥೆಯ ಕೊಲ್ಹಾಪುರಿ ಚಪ್ಪಲಿ ವಿವಾದದಂತೆ ಇದು ನಿಜವಾಗಿಯೂ ಸಾಂಸ್ಕೃತಿಕ ಸ್ವಾಧೀನತೆ ಪ್ರಕರಣವೇ, ಅಥವಾ ಇದರ ಹಿಂದೆ ಇನ್ನೂ ಹೆಚ್ಚಿನ ವಿಷಯವಿದೆಯೇ ಎಂದು ಪ್ರಶ್ನೆಯೆತ್ತಿದ್ದಾರೆ.
This is a case of cultural appropriation & not in good taste. Repackaging India’s traditional craft as luxury, without credit to the artisans who created and preserved it, undermines our authentic talent and heritage. Indian craftsmanship deserves recognition, not imitation. https://t.co/42pENpp10F
— Kiran Mazumdar-Shaw (@kiranshaw) September 15, 2026ಫೆಂಡಿ ಪರಿಚಯಿಸಿದ ಬ್ಯಾಗ್ ಹೇಗಿದೆ?
ಅಧಿಕೃತ ವೆಬ್ಸೈಟ್ನಲ್ಲಿ ಬ್ಯಾಗ್ನ ಬಗ್ಗೆ ಬರೆದುಕೊಂಡಿರುವ ಫೆಂಡಿ, ‘ಇದು ಕಸೂತಿ ಮತ್ತು ಕನ್ನಡಿಗಳನ್ನು ಹೊಂದಿರುವ ‘ಮಲ್ಟಿಕಲರ್ ರೀ-ಎಡಿಷನ್ ಬ್ಯಾಗ್’ ಅಥವಾ ‘ಬ್ಯಾಗೆಟ್ 26424’ (Baguette 26424) ಆಗಿದೆ. ಇದು 1997ರಲ್ಲಿ ಮೊದಲ ಬಾರಿಗೆ ಪರಿಚಯಿಸಲ್ಪಟ್ಟಿತ್ತು. ಇದೀಗ ಇದರ ಮೂಲ ಆವೃತ್ತಿಯಾದ ‘26424’ ಆಧರಿಸಿ, ‘ಫಾಲ್/ವಿಂಟರ್ 2026-27’ ಎನ್ನುವ ಹೊಸ ರೂಪದಲ್ಲಿ ಮರುಸೃಷ್ಟಿಸಲಾಗಿದೆ’ ಎಂದು ಬರೆದುಕೊಂಡಿದೆ.
‘ಈ ಬ್ಯಾಗ್ಅನ್ನು ಕೈಗಳ ಮೂಲಕ ರೂಪಿಸಲಾಗಿದೆ. ಇದರಲ್ಲಿ 39,500 ಮಣಿಗಳು ಮತ್ತು 475 ಕನ್ನಡಿಗಳಿವೆ. ಇದನ್ನು ತಯಾರಿಸಲು 138 ಗಂಟೆ ಸಮಯ ಹಿಡಿದೆ. ಈ ಬ್ಯಾಗ್ ಕೇವಲ ಕಸೂತಿಯಿಂದ ಕೂಡಿಲ್ಲ, ಬದಲಾಗಿ ಕರುವಿನ ಚರ್ಮದಿಂದ ತಯಾರಿಸಿದ ಗಾಢ ಕಂದು ಬಣ್ಣದ ಭುಜದ ಪಟ್ಟಿಯನ್ನು ಹೊಂದಿದೆ. ಇದನ್ನು ಇಟಲಿಯಲ್ಲಿ ತಯಾರಿಸಲಾಗಿದೆ’ ಎಂದು ವೆಬ್ಸೈಟ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಫೆಂಡಿ, ಇದನ್ನು ‘ನವರಾತ್ರಿ ಬ್ಯಾಗ್’ ಎಂದು ಹೇಳಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇದು ‘ನವರಾತ್ರಿ ಬ್ಯಾಗ್’ ಎಂದು ಹೆಸರು ಪಡೆದುಕೊಂಡಿದೆ.
ಏಪ್ರಿಲ್ನಲ್ಲೇ ವಿಡಿಯೊ ಹಂಚಿಕೊಂಡಿದ್ದ ಫೆಂಡಿ
ಬ್ಯಾಗ್ ತಯಾರಿಕೆಯ ಬಗ್ಗೆ ಕಳೆದ ಏಪ್ರಿಲ್ನಲ್ಲಿ ವಿಡಿಯೊ ಹಂಚಿಕೊಂಡಿದ್ದ ಫೆಂಡಿ, ‘ಕಸುಬುದಾರಿಕೆಯು ವಿನ್ಯಾಸವಾಗಿ ಪರಿವರ್ತನೆಗೊಂಡಾಗ, ‘ಚಾಣಕ್ಯ’ದ ನುರಿತ ಕುಶಲಕರ್ಮಿಗಳ ಕೈಚಳಕದಿಂದ ಮಣಿಗಳು ಮತ್ತು ಕನ್ನಡಿಗಳು ಹೇಗೆ ವಿಶಿಷ್ಟ ಕಲಾಕೃತಿಗಳಾಗಿ ರೂಪುಗೊಳ್ಳುತ್ತವೆ ಎಂಬುದನ್ನು ಕಂಡುಕೊಳ್ಳಿ’ ಎಂದು ಬರೆದುಕೊಂಡಿತ್ತು.
ಅಂದಹಾಗೆ ವರದಿಗಳ ಪ್ರಕಾರ 'ಚಾಣಕ್ಯ ಇಂಟರ್ನ್ಯಾಷನಲ್’ ಎನ್ನುವುದು ಮುಂಬೈ ಮೂಲದ ಕರಕುಶಲ ಸಂಸ್ಥೆಯಾಗಿದೆ. ಹೀಗಾಗಿ ಇದನ್ನೂ ಭಾರತೀಯರೇ ಸಂಯೋಜನೆಯಲ್ಲಿ ತಯಾರಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಕಂಪನಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
When craftsmanship becomes design
Discover how sequins, beads, and mirrors are transformed into unique works of art through the skilled hands of Chanakya artisans#FENDI pic.twitter.com/SzcVBIwVcM
ದಿವಂಗತ ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ನಿಧನದ ಸಮಯದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಬೆಂಗಳೂರಿನ ಯುವಕ ರಿತ್ವಿಕ್ ಶರ್ಮಾನಿಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ರಿತ್ವಿಕ್ ಶರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಕಟು ಪದಗಳಿಂದ ಅಸಮಾಧಾನ ವ್ಯಕ್ತಪಡಿಸಿತ್ತು.
ಸಾಮಾಜಿಕ ಮಾಧ್ಯಮಗಳನ್ನು ಬಳಸಲು ಮುಕ್ತ ಅವಕಾಶವಿದೆ ಎಂದ ಮಾತ್ರಕ್ಕೆ ಇಂತಹ ವಿಕೃತ ಸಂದೇಶಗಳನ್ನು ಪೋಸ್ಟ್ ಮಾಡುತ್ತೀರಾ?. ಪುನೀತ್ ರಾಜ್ಕುಮಾರ್ ಅವರು ಮೇರುನಟ ಡಾ. ರಾಜ್ಕುಮಾರ್ ಅವರ ಪುತ್ರ. ಅವರು ನಿಧನರಾದ ಸಂದರ್ಭದಲ್ಲಿ ಇಂತಹ ಆಕ್ಷೇಪಾರ್ಹ ಪದ ಬಳಕೆ ಮಾಡಬಹುದೇ? ಯಾವ ರೀತಿಯ ಪದ ಬಳಸಲಾಗಿದೆ ಎಂಬುದು ನಿಮಗೆ ಗೊತ್ತೇ? ಎಂದು ಪ್ರಶ್ನಿಸಿ ತೀವ್ರ ಆಕ್ರೋಶ ಹೊರಹಾಕಿತು. ಇದನ್ನೂ ಓದಿ: ಗಣೇಶೋತ್ಸವದ ರೋಚಕ ಕಥೆ ‘ಜನ್ಮೋತ್ಸವ’ ಚಿತ್ರದ ಟ್ರೇಲರ್ ರಿಲೀಸ್
ಅರ್ಜಿದಾರ ರಿತ್ವಿಕ್ ಪರ ವಕೀಲೆ ಪದ್ಮಾವತಿ ವಾದ ಮಂಡಿಸಿ, ಕಕ್ಷಿದಾರರಾದ ರಿತ್ವಿಕ್ ಲಂಡನ್ನಲ್ಲಿ ಹುಟ್ಟಿ ಬೆಳೆದಿದ್ದು, ಎರಡು ವರ್ಷಗಳ ಹಿಂದಷ್ಟೇ ಭಾರತಕ್ಕೆ ಮರಳಿದ್ದಾರೆ. ಅವರಿಗೆ ಈ ಪೋಸ್ಟ್ನ ಗಂಭೀರ ಪರಿಣಾಮಗಳ ಅರಿವಿರಲಿಲ್ಲ. ಈ ಪೋಸ್ಟ್ ಅನ್ನು ಆತನ ಸ್ನೇಹಿತ ಮಾಡಿದ್ದಾನೆ. ಆದರೂ ತನ್ನ ಪ್ರಮಾದವನ್ನು ಒಪ್ಪಿಕೊಂಡು ರಿತ್ವಿಕ್ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.
ಪ್ರಸ್ತುತ ಅರ್ಥಶಾಸ್ತ್ರದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಕ್ರಿಮಿನಲ್ ಮೊಕದ್ದಮೆಯಿಂದ ರಿತ್ವಿಕ್ ಶೈಕ್ಷಣಿಕ ಮತ್ತು ವೃತ್ತಿ ಭವಿಷ್ಯಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಕನ್ನಡ ಸಿನಿಮಾ ರಂಗಕ್ಕೆ ಮರಾಠಿ ಸೂಪರ್ ಸ್ಟಾರ್ ಉಪೇಂದ್ರ ಲಿಮಾಯೆ ಎಂಟ್ರಿ
ರಿತ್ವಿಕ್ ದುರ್ವರ್ತನೆಗೆ ಕಟು ಶಬ್ದಗಳಿಂದ ಚಾಟಿ ಬೀಸಿದ ನ್ಯಾಯಪೀಠ ಅಂತಿಮವಾಗಿ ವಿದ್ಯಾಭ್ಯಾಸ ಮತ್ತು ಭವಿಷ್ಯದ ದೃಷ್ಟಿಯಿಂದ ಆತನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದೆ.
ಏನಿದು ಕೇಸ್?
ಪುನೀತ್ ರಾಜ್ಕುಮಾರ್ ಅವರು ನಿಧನರಾದ ಬೆನ್ನಲ್ಲೇ, ನವೆಂಬರ್ 1, 2021 ರಂದು ಕಿಂಗ್ಫಿಷರ್ ಬಿಯರ್ ಬಾಟಲಿಯ ಫೋಟೋ ಹಾಕಿ ಅದರ ಮೇಲೆ ಅತ್ಯಂತ ಆಕ್ಷೇಪಾರ್ಹ ಸಾಲನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಕುರಿತು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ (IT) ಕಾಯ್ದೆ ಸೆಕ್ಷನ್ 67 ಮತ್ತು ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಚಾಮರಾಜನಗರ, ಸೆಪ್ಟೆಂಬರ್ 18: ಇತ್ತೀಚೆಗೆ ಹನೂರು ಅರಣ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶೂಟೌಟ್ಗೆ ಮೂವರು ಬೇಟೆಗಾರರು ಮೃತಪಟ್ಟ ಘಟನೆ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆ ಬಳಿಕವೂ ಅರಣ್ಯದಲ್ಲಿ ಕಳ್ಳಬೇಟೆ ಮುಂದುವರಿದಿದೆ ಎನ್ನಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲೇ 40ಕ್ಕೂ ಹೆಚ್ಚು ಬೇಟೆಗಾರರು ಇನ್ನು ಸಕ್ರೀಯರಾಗಿದ್ದಾರೆ ಎನ್ನುವ ಸ್ಫೋಟಕ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ನಿಟ್ಟಿನಲ್ಲಿ ಕಾಡುಗಳ್ಳರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಅರಣ್ಯ ಸಿಬ್ಬಂದಿ ಇದೀಗ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿದೆ. ಆ ಮೂಲಕ ಕರ್ನಾಟಕದ ಕಾಡುಗಳ ರಕ್ಷಣೆಗೆ ವಿಶೇಷ ತರಬೇತಿ ಪಡೆದ ‘ಬೆಲ್ಜಿಯನ್ ಸ್ನಿಫರ್ ಡಾಗ್’ಗಳ ಬಲ ಲಭಿಸಿದೆ.
ಮೇಲುಕಾಮನಹಳ್ಳಿ ಕ್ಯಾಂಪ್ನಲ್ಲಿ ಕಠಿಣ ತರಬೇತಿರಾಜ್ಯದ ಅರಣ್ಯಗಳಲ್ಲಿ ಹೆಚ್ಚಿರುವ ಕಳ್ಳಬೇಟೆ ಮತ್ತು ಕಾಡುಗಳ್ಳತನವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಅರಣ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ಬಂಡೀಪುರದ ಮೇಲುಕಾಮನಹಳ್ಳಿ ಕ್ಯಾಂಪ್ನಲ್ಲಿ ಅರಣ್ಯ ಸಿಬ್ಬಂದಿ 10 ಹೆಣ್ಣು ಬೆಲ್ಜಿಯನ್ ಸ್ನಿಫರ್ ಶ್ವಾನಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.
ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಬೇಟೆಗಾರರು ಇನ್ನು ಸಕ್ರೀಯ: ಸ್ಫೋಟಕ ವಿಚಾರ ಬೆಳಕಿಗೆ
ಇನ್ನು ಇದಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕಾಡುಗಳ್ಳತನ ಹೆಚ್ಚಾದ ಹಿನ್ನಲೆ ಅರಣ್ಯ ಸಿಬ್ಬಂದಿ ಹೊಸ ತಂತ್ರ ಕೂಡ ಬಳಸುತ್ತಿದ್ದಾರೆ.
ಐದು ಹುಲಿ ಸಂರಕ್ಷಿತ ಪ್ರದೇಶಗಳಿಗೆ ಶ್ವಾನಗಳ ನಿಯೋಜನೆತರಬೇತಿ ಪಡೆದ ಈ ಸ್ನಿಫರ್ ಡಾಗ್ಗಳನ್ನು ರಾಜ್ಯದ ಪ್ರಮುಖ ಐದು ಹುಲಿ ಸಂರಕ್ಷಿತ ಪ್ರದೇಶಗಳ ಕಾವಲಿಗೆ ಹಂಚಿಕೆ ಮಾಡಲಾಗುತ್ತಿದೆ. ಬಂಡೀಪುರ, ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್ಟಿ), ಭದ್ರಾ, ಕಾಳಿ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಿಗೆ ತಲಾ ಐದು ಶ್ವಾನಗಳನ್ನು ವಿತರಿಸಲಾಗುತ್ತಿದೆ.
.liveTvWebbx { background: #fff; margin-bottom: 10px; } .liveTvWebbx span { display: flex; align-items: center; justify-content: center; background: #dc0000; padding: 5px 0; } .liveTvWebbx span a { color: #fff; font-size: 22px; display: flex; align-items: center; justify-content: center; font-weight: 600; line-height: 28px; text-decoration: none; } .liveTvWebbx span a:hover{color:#fff;} .liveTvWebbx span a svg { width: 2rem; height: 2rem; margin-right: 5px; display: inline-block; flex-shrink: 0; vertical-align: middle; fill: none; stroke: #fff; stroke-width: 2; stroke-linecap: round; stroke-linejoin: round; transform-origin: center; animation: livePulse 1.3s ease-in-out infinite; } @keyframes livePulse { 0% { transform: scale(1); opacity: 1; } 50% { transform: scale(1.08); opacity: 1; } 100% { transform: scale(1); opacity: 1; } } .liveTvWebbx iframe, .liveTvWebbx amp-iframe { width: 100%; height: auto; aspect-ratio: 16 / 9; display: block; border: none; } LIVE TV document.addEventListener('DOMContentLoaded', function () { let liveTV = document.querySelector('.live-tv-tracking'); if (liveTV) { liveTV.addEventListener('click', function () { if (typeof dataLayer !== 'undefined') { dataLayer.push({ 'event': 'article_live_tv_click', 'widget_name': 'article_live_tv', 'click_location': 'article' }); } }); } }); ಅಪರಾಧ ಪತ್ತೆಯಲ್ಲಿ ಮುಂಚೂಣಿ; ಕಾಡುಗಳ್ಳರಲ್ಲಿ ನಡುಕಇನ್ನು ಈ ಬೆಲ್ಜಿಯನ್ ಸ್ನಿಫರ್ ತಳಿಯ ಶ್ವಾನಗಳು ಅತ್ಯಂತ ತೀಕ್ಷ್ಣವಾದ ವಾಸನೆ ಗ್ರಹಿಸುವ ಶಕ್ತಿ ಹಾಗೂ ಅತಿ ವೇಗವಾಗಿ ಓಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿವೆ. ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಮುಂಚೂಣಿಯಲ್ಲಿರುವ ಈ ಶ್ವಾನಗಳ ಆಗಮನದಿಂದಾಗಿ, ಅರಣ್ಯ ಪ್ರದೇಶದಲ್ಲಿ ಅಕ್ರಮ ಕೃತ್ಯವೆಸಗುವ ಕಾಡುಗಳ್ಳರಿಗೆ ನಡುಕ ಶುರುವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ನವದೆಹಲಿ: ನೀಟ್ (NEET) ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸುವ ಮತ್ತು ಸುಧಾರಣೆ ಮಾಡುವ ಉದ್ದೇಶದಿಂದ ಉದ್ಯಮಿ ನಂದನ್ ನಿಲೇಕಣಿ ನೇತೃತ್ವದಲ್ಲಿ 'ಉನ್ನತ ಮಟ್ಟದ ಕಾರ್ಯಪಡೆ'ಯನ್ನು ರಚಿಸಲಾಗಿದೆ. ಈ ಸಮಿತಿಯು ವ್ಯಾಪಕ ಸಮಾಲೋಚನೆಗಳನ್ನು ನಡೆಸಿದ್ದು, ಈ ತಿಂಗಳ ಅಂತ್ಯದ ವೇಳೆಗೆ ತನ್ನ ಮೊದಲ ಮಧ್ಯಂತರ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
'ಸ್ವೀಕರಿಸಲಾದ ಎಲ್ಲ ಸಲಹೆಗಳು ಮತ್ತು ಪ್ರಸ್ತಾವನೆಗಳನ್ನು ಪರಿಶೀಲನೆಗಾಗಿ ಸಮಿತಿಗೆ ನೀಡಲಾಗಿದೆ. ಇಸ್ರೋ (ISRO) ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್ ಅವರ ನೇತೃತ್ವದ ಹಿಂದಿನ ಸಮಿತಿ ಸದಸ್ಯರೊಂದಿಗೂ ಈ ಸಮಿತಿಯು ಚರ್ಚಿಸಿದೆ ಎಂದು ಸರ್ಕಾರದ ಹಿರಿಯ ವಕೀಲರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠಕ್ಕೆ ತಿಳಿಸಿದರು.
ಈವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವಂತೆ ಪೀಠವು ನೀಲೇಕಣಿ ಸಮಿತಿಗೆ ನೆರವಾಗುತ್ತಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (DoPT) ಜಂಟಿ ಕಾರ್ಯದರ್ಶಿಗೆ ಸೂಚಿಸಿತು.
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (NEET) ನಡೆಸುವ ಸಂಪೂರ್ಣ ಪ್ರಕ್ರಿಯೆಯನ್ನು ಸಾಂಸ್ಥಿಕಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಗಮನಹರಿಸಬೇಕೆಂಬುದೇ ಈ ವಿಷಯದಲ್ಲಿ ಅತ್ಯಂತ ಪ್ರಮುಖವಾದ ಅಂಶವಾಗಿದೆ ಎಂದು ಪೀಠವು ಮೆಹ್ತಾ ಅವರಿಗೆ ತಿಳಿಸಿತು.
'ಸಂಪೂರ್ಣ ವ್ಯವಸ್ಥೆಯ ಸ್ಥಿರತೆಯೇ ಅತ್ಯಂತ ಮುಖ್ಯ ಎಂಬುದನ್ನು ನೀವು ಅರಿಯಬೇಕು. ಇಲ್ಲಿ ಶಾಶ್ವತ ವ್ಯವಸ್ಥೆ, ಶಾಶ್ವತ ಸಿಬ್ಬಂದಿ ಮತ್ತು ಶಾಶ್ವತ ವಿಭಾಗಗಳು ಇರಬೇಕು. ನಿಯೋಜನೆ ಮೂಲಕದ ನೇಮಕಾತಿಗಳು ಅತ್ಯಂತ ಕಡಿಮೆ ಇರಬೇಕು. ಆಗ ಮಾತ್ರ ಒಂದು ಶಾಶ್ವತ ಸ್ವರೂಪದ ವ್ಯವಸ್ಥೆ ರೂಪುಗೊಳ್ಳಲು ಸಾಧ್ಯ' ಎಂದು ನ್ಯಾಯಪೀಠ ಮೆಹ್ತಾ ಅವರಿಗೆ ಹೇಳಿತು.
ಪರೀಕ್ಷಾ ವ್ಯವಸ್ಥೆ ಸುಧಾರಣೆ: ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚನೆ; ಪ್ರಧಾನಿ ಮೋದಿ ಘೋಷಣೆ! Videoಎನ್ಟಿಎ (NTA)ಯ ನೂತನ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪರಿಶೀಲಿಸಲು, ಅದರ ಹೊಸದಾಗಿ ಮೇಲ್ದರ್ಜೆಗೇರಿಸಲಾದ ಕೇಂದ್ರ ಅಥವಾ ಸೌಲಭ್ಯಕ್ಕೆ ತಾವೂ ಹಾಗೂ ನ್ಯಾಯಮೂರ್ತಿ ಅರಾಧೆ ಅವರೂ ಖುದ್ದಾಗಿ ಭೇಟಿ ನೀಡಿ ವೀಕ್ಷಿಸಲು ಬಯಸುವುದಾಗಿ ನ್ಯಾಯಮೂರ್ತಿ ನರಸಿಂಹ ಹೇಳಿದರು.
ಶಿಕ್ಷಣ ಇಲಾಖೆಯು ಹೊಸ ಹಾಗೂ ಉನ್ನತೀಕರಿಸಿದ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದೆ.
'ಈ ರಚನೆಯ ಶಾಶ್ವತತೆಯನ್ನು ಖಚಿತಪಡಿಸಲಾಗಿದೆ. ಆದಾಗ್ಯೂ, ಸದ್ಯಕ್ಕೆ ಮಾನವ ಸಂಪನ್ಮೂಲದ ಲಭ್ಯತೆಯನ್ನು ಭಾಗಶಃ ಮಾತ್ರ ಖಚಿತಪಡಿಸಿಕೊಳ್ಳಲಾಗಿದೆ' ಎಂದು ಮೆಹ್ತಾ ಹೇಳಿದರು.
NTAಯಲ್ಲಿನ ಸುಧಾರಣೆಗಳನ್ನು ಸಾಂಸ್ಥಿಕಗೊಳಿಸುವ ಅಗತ್ಯವನ್ನು ಗಮನಿಸಿದ ಸುಪ್ರೀಂ ಕೋರ್ಟ್, ಆಗಸ್ಟ್ 19 ರಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನವೊಂದನ್ನು ನೀಡಿತು. ರಾಧಾಕೃಷ್ಣನ್ ಸಮಿತಿ ಮತ್ತು ನಿಲೇಕಣಿ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ಕೈಗೊಂಡ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
'ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್' (FAIMA) ಪರವಾಗಿ ವಕೀಲೆ ತನ್ವಿ ದುಬೆ ಅವರು ಸಲ್ಲಿಸಿದ್ದ ಅರ್ಜಿಯನ್ನೂ ಒಳಗೊಂಡಂತೆ, ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ಬಿಮಾನ ಬಾಂಗ್ಲಾದೇಶ ಏರ್ಲೈನ್ಸ್ನ ವಿಮಾನದೊಳಗೆ ಇಬ್ಬರು ಪ್ರಯಾಣಿಕರು ಹೊಡೆದಾಡಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಮಾನವು ಲಂಡನ್ನಿಂದ ಬಾಂಗ್ಲಾದೇಶಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇಬ್ಬರು ಪ್ರಯಾಣಿಕರ ನಡುವಿನ ವಾಗ್ವಾದ ಬಳಿಕ ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಿರುಗಿತು.
ಈ ಘಟನೆಯಿಂದ ವಿಮಾನದಲ್ಲಿದ್ದ ಇತರ ಪ್ರಯಾಣಿಕರಲ್ಲಿ, ಅದರಲ್ಲೂ ಮಕ್ಕಳು ಮತ್ತು ವೃದ್ಧರಲ್ಲಿ ಆತಂಕ ಉಂಟಾಯಿತು. ಸೆಪ್ಟೆಂಬರ್ 16, 2026ರಂದು ತಾನು ಆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದುದಾಗಿ ತಿಳಿಸಿರುವ ಉದ್ದಿನ್ ಅಲಿಮ್ ಎಂಬ ವ್ಯಕ್ತಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ದುಬೈಗೆ ತೆರಳಬೇಕಿದ್ದ ಸ್ಪೈಸ್ಜೆಟ್ ವಿಮಾನಗಳ ವಿಳಂಬ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ!ಫೇಸ್ಬುಕ್ನಲ್ಲಿ ವಿಡಿಯೊ ಹಂಚಿಕೊಂಡ ಅಲಿಮ್, “ನಾನು ಸೆಪ್ಟೆಂಬರ್ 16ರಂದು ಬಿಮಾನ ಬಾಂಗ್ಲಾದೇಶ ಏರ್ಲೈನ್ಸ್ನ ವಿಮಾನದಲ್ಲೇ ಇದ್ದೆ. ವಿಮಾನ ಹಾರಾಟದಲ್ಲಿದ್ದಾಗ ಅತ್ಯಂತ ಆತಂಕಕಾರಿ ಘಟನೆಯೊಂದಕ್ಕೆ ನಾನು ಸಾಕ್ಷಿಯಾದೆ. ಪ್ರಯಾಣಿಕರ ನಡುವೆ ಹೊಡೆದಾಟ ಆರಂಭವಾಗಿ, ವಿಮಾನದೊಳಗೆ ಭಯದ ವಾತಾವರಣ ನಿರ್ಮಾಣವಾಯಿತು ಎಂದು ಬರೆದಿದ್ದಾರೆ.
ವಿಮಾನದಲ್ಲಿ ಮಕ್ಕಳು ಮತ್ತು ವೃದ್ಧರು ಇದ್ದಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಆತಂಕಕಾರಿಯಾಗಿಸಿತು. ಈ ಘಟನೆಯೊಂದಿಗೆ ಅವರಿಗೆ ಯಾವುದೇ ಸಂಬಂಧವಿರಲಿಲ್ಲ. ಆದರೂ ಅವರು ಈ ವರ್ತನೆಯನ್ನು ಕಣ್ಣಾರೆ ನೋಡಬೇಕಾಯಿತು ಹಾಗೂ ಇದರಿಂದ ಉಂಟಾದ ಭಯ ಮತ್ತು ಒತ್ತಡವನ್ನು ಎದುರಿಸಬೇಕಾಯಿತು. ಸಾವಿರಾರು ಅಡಿ ಎತ್ತರದಲ್ಲಿ ಹಾರುತ್ತಿರುವಾಗ, ಅಪಾಯಕಾರಿ ಪರಿಸ್ಥಿತಿಯಿಂದ ಸುಮ್ಮನೆ ದೂರ ಸರಿಯಲು ಸಾಧ್ಯವಾಗದ ಸ್ಥಿತಿಯನ್ನು ಊಹಿಸಿ ನೋಡಿ ಎಂದು ಅಲಿಮ್ ಹೇಳಿದ್ದಾರೆ.
A mid-air fistfight broke out aboard a Biman Bangladesh Airlines flight from London to Dhaka. Two passengers got into a heated argument that escalated into a physical fight, reports said.
A video circulating online shows two men exchanging blows as fellow passengers looked on… pic.twitter.com/5grjg8vvAn
ವಿಮಾನ ಹತ್ತುವಾಗ ಪ್ರತಿಯೊಬ್ಬರೂ ಸುರಕ್ಷಿತವಾಗಿರುವ ಭಾವನೆಯನ್ನು ನಿರೀಕ್ಷಿಸುತ್ತಾರೆ. ಆದರೆ, ಏಕಾಏಕಿ ಪ್ರಯಾಣಿಕರು ಪರಸ್ಪರ ಹೊಡೆದಾಡಿಕೊಳ್ಳುವುದನ್ನು ನೋಡುವುದು ಅತ್ಯಂತ ಭಯಾನಕ ಅನುಭವ ಎಂದು ಅವರು ಹೇಳಿದ್ದಾರೆ. ತಾನು ಅಲ್ಲಿಯೇ ಇದ್ದು, ನಡೆದ ಘಟನೆಯನ್ನು ಸ್ವತಃ ಕಣ್ಣಾರೆ ನೋಡಿದ್ದೇನೆ ಎಂದು ಅಲಿಮ್ ತಿಳಿಸಿದ್ದಾರೆ.
ವಿಡಿಯೊದಲ್ಲಿ ಇಬ್ಬರು ವ್ಯಕ್ತಿಗಳು ಮೊದಲು ವಾಗ್ವಾದ ನಡೆಸಿ, ಬಳಿಕ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಹೊಡೆದಾಟದ ವೇಳೆ ಒಂದು ಹಂತದಲ್ಲಿ ಪ್ರಯಾಣಿಕರೊಬ್ಬರ ಟಿ-ಶರ್ಟ್ ಹರಿದುಹೋಗಿದೆ.
ನಂತರ ಕ್ಯಾಬಿನ್ ಸಿಬ್ಬಂದಿ ಹಾಗೂ ಇತರ ಪ್ರಯಾಣಿಕರು ಮಧ್ಯಪ್ರವೇಶಿಸಿ, ಇಬ್ಬರನ್ನೂ ಬೇರ್ಪಡಿಸಲು ಪ್ರಯತ್ನಿಸಿದ್ದಾರೆ.
ಈ ಕುರಿತು ಬಿಮಾನ ಬಾಂಗ್ಲಾದೇಶ ಏರ್ಲೈನ್ಸ್ನ ಸಾರ್ವಜನಿಕ ಸಂಪರ್ಕ ವಿಭಾಗದ ಜನರಲ್ ಮ್ಯಾನೇಜರ್ ಮಹಬುಬುದ್ದೀನ್ ಅಹ್ಮದ್ , ‘ಢಾಕಾ ಟ್ರಿಬ್ಯೂನ್’ಗೆ ಪ್ರತಿಕ್ರಿಯಿಸಿ, ಈ ವಿಚಾರದ ಬಗ್ಗೆ ನನಗೆ ಇನ್ನೂ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಬಾಲಿವುಡ್ನ ಪ್ರಸಿದ್ಧ ನಟ ವಿಕ್ರಾಂತ್ ಮಾಸ್ಸಿ ತಮ್ಮ ‘ಮುಸಾಫಿರ್ ಕೆಫೆ’ ಯಶಸ್ಸಿನ ನಂತರ ಉದ್ಯಮ ರಂಗಕ್ಕೆ ಕಾಲಿಡುತ್ತಿದ್ದಾರೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಸುಂದರ ಮಡಿಲಲ್ಲಿ ‘ಮುಸಾಫಿರ್ ಕೆಫೆ’ ಮಾದರಿಯ ಎರಡು ಕೆಫೆಗಳನ್ನು ತೆರೆಯಲು ಅವರು ಸಜ್ಜಾಗಿದ್ದಾರೆ. ಈ ಕೆಫೆಗಳ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದ್ದು ಪ್ರೇಕ್ಷಕರಲ್ಲಿ ಮತ್ತು ಪ್ರವಾಸಿಗರಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ.
ವಿಕ್ರಾಂತ್ ಮಾಸ್ಸಿ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಾದ ‘ಹೋಮ್ ಮೇಡ್ ಸ್ಟೋರೀಸ್’ ಮೂಲಕ ಈ ಯೋಜನೆ ಜಾರಿಗೆ ತರುತ್ತಿದ್ದಾರೆ. ಸರಣಿಯಲ್ಲಿ ಕಾಣಿಸಿಕೊಂಡಿದ್ದ ಕೆಫೆಯನ್ನೇ ಹೋಲುವಂತೆ ಈ ನೈಜ ಕೆಫೆಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ತೆರೆಯ ಮೇಲೆ ಕಂಡ ರಮಣೀಯ ವಾತಾವರಣವನ್ನು ಪ್ರವಾಸಿಗರು ನೇರವಾಗಿ ಅನುಭವಿಸಲು ಈ ಕೆಫೆಗಳು ಸಾಕ್ಷಿಯಾಗಲಿವೆ.
ಈ ವಿಶೇಷ ಕೆಫೆಗಳ ಜೊತೆಗೆ ಸುಮಾರು 20 ಕೊಠಡಿಗಳನ್ನು ಸಹ ನಿರ್ಮಿಸಲಾಗುತ್ತಿದೆ. ದೇಶದ ನಾನಾ ಭಾಗಗಳಿಂದ ಬರುವ ಕಲಾವಿದರು ಇಲ್ಲಿ ತಂಗಲು ವ್ಯವಸ್ಥೆ ಮಾಡಲಾಗುತ್ತದೆ. ಕಲಾವಿದರು ತಮ್ಮ ಹೊಸ ಯೋಜನೆಗಳ ಮೇಲೆ ಕೆಲಸ ಮಾಡಲು ಈ ಸ್ಥಳ ಅತ್ಯಂತ ಸೂಕ್ತ ವಾತಾವರಣ ಒದಗಿಸಲಿದೆ.
ಆರಂಭದಿಂದಲೂ ಹಿಮಾಚಲ ಪ್ರದೇಶದಲ್ಲಿ ಕೆಫೆ ತೆರೆಯುವುದು ವಿಕ್ರಾಂತ್ ಅವರ ಕನಸಾಗಿತ್ತು. ಅವರ ಪತ್ನಿ ಶೀತಲ್ ಠಾಕೂರ್ ಹಿಮಾಚಲ ಪ್ರದೇಶದ ಮೂಲದವರಾಗಿದ್ದಾರೆ. ಧರ್ಮಕೋಟ್ ಅಥವಾ ಧರ್ಮಶಾಲಾ ಸುತ್ತಮುತ್ತ ಕೆಫೆ ಆರಂಭಿಸುವ ಇಚ್ಛೆಯನ್ನು ಅವರು ಈ ಹಿಂದೆ ಹಂಚಿಕೊಂಡಿದ್ದರು.
ಇದನ್ನೂ ಓದಿ: ‘ನೆನಪಿಟ್ಟುಕೊಳ್ಳಿ, ಹಣ ಇದ್ರೆ ಮಾತ್ರ ನಿಮಗೆ ಗೌರವ’; ಯುವ ಜನತೆ ಎಚ್ಚರಿಸಿದ ವಿಕ್ರಾಂತ್ ಮಾಸ್ಸಿ
ನೆಟ್ಫ್ಲಿಕ್ಸ್ನಲ್ಲಿ ಬಂದ ‘ಮುಸಾಫಿರ್ ಕೆಫೆ’ ಸರಣಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೇ ಶೈಲಿಯ ಕೆಫೆಗಳು ಇದೀಗ ನೈಜ ರೂಪ ಪಡೆಯುತ್ತಿರುವುದು ಅಭಿಮಾನಿಗಳಿಗೆ ತೀವ್ರ ಸಂತಸ ತಂದಿದೆ. ಬಣ್ಣದ ಲೋಕದ ಜೊತೆಗೆ ನಟ ವಿಕ್ರಾಂತ್ ಮಾಸ್ಸಿ ಉದ್ಯಮದಲ್ಲೂ ಹೊಸ ಹೆಜ್ಜೆ ಇಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಏಷ್ಯನ್ ಗೇಮ್ಸ್ 2026 ರ ಮಹಿಳಾ ಕ್ರಿಕೆಟ್ ಕ್ವಾರ್ಟರ್ ಫೈನಲ್ನಲ್ಲಿ ಇಂದು ಭಾರತ ಹಾಗೂ ಜಪಾನ್ ಮಹಿಳಾ ತಂಡಗಳು ಎದುರಾಗಿದ್ದವು. ಐಸಿಸಿ ರ್ಯಾಂಕಿಂಗ್ನಲ್ಲಿ 39ನೇ ಸ್ಥಾನದಲ್ಲಿರುವ ಜಪಾನ್, ಮೂರನೇ ಸ್ಥಾನದಲ್ಲಿರುವ ಟೀಂ ಇಂಡಿಯಾಕ್ಕೆ ಸುಲಭ ತುತ್ತಾಗಲಿದೆ ಎಂಬುದು ಈ ಮೊದಲೇ ಗೊತ್ತಿತ್ತು. ಅದರಂತೆ ಏಕಪಕ್ಷೀಯವಾಗಿ ಜಪಾನ್ ತಂಡವನ್ನು ಮಣಿಸಿದ ಹರ್ಮನ್ಪ್ರೀತ್ ಕೌರ್ ಪಡೆ ಸೆಮಿಫೈನಲ್ಗೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಪಾನ್ ಕೇವಲ 57 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 8 ವಿಕೆಟ್ಗಳ ಜಯ ಸಾಧಿಸಿತು.
ಸ್ಪಿನ್ ದಾಳಿಗೆ ನಲುಗಿದ ಜಪಾನ್ಮೊದಲು ಬ್ಯಾಟಿಂಗ್ ಮಾಡಿದ ಜಪಾನ್ ತಂಡಕ್ಕೆ ಭಾರತದ ಸ್ಪಿನ್ನರ್ಗಳ ಮುಂದೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಅದರಲ್ಲೂ ಅದ್ಭುತ ಫಾರ್ಮ್ನಲ್ಲಿರುವ ಎಡಗೈ ಸ್ಪಿನ್ನರ್ ಶ್ರೀ ಚರಣಿ ಸ್ಪಿನ್ಗೆ ಜಪಾನ್ ತಂಡದ ಬಳಿ ಉತ್ತರವಿರಲಿಲ್ಲ. ಚರಣಿ ಕೇವಲ 10 ರನ್ ನೀಡಿ 4 ವಿಕೆಟ್ಗಳನ್ನು ಪಡೆದು ತಮ್ಮ ಟಿ20 ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದರು. ಇತ್ತ ಜಪಾನ್ ತಂಡದ ಇಡೀ ಇನ್ನಿಂಗ್ಸ್ನಲ್ಲಿ ಕೇವಲ ಮೂರು ಬೌಂಡರಿಗಳು ಮಾತ್ರ ದಾಖಲಾಗಿದ್ದು, ಭಾರತದ ಭಿಗಿ ಬೌಲಿಂಗ್ಗೆ ಹಿಡಿದ ಕೈಗನ್ನಡಿಯಾಗಿತ್ತು.
ಜಪಾನ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳದಿದ್ದರೂ, ಇತ್ತ ಸರಾಗವಾಗಿ ರನ್ ಕೂಡ ಕಲೆಹಾಕಲಿಲ್ಲ. ಮೊದಲ ವಿಕೆಟ್ಗೆ 24 ರನ್ ಕಲೆಹಾಕಿತು. ಈ 24 ರನ್ ಬಾರಿಸಲು ಮೊದಲ ಆರು ಓವರ್ಗಳನ್ನು ವ್ಯಯಿಸಲಾಯಿತು. ನಂತರ ಏಳನೇ ಓವರ್ನಲ್ಲಿ ದಾಳಿಗಿಳಿದ ಶ್ರೀ ಚರಣಿ ಸತತ ಎಸೆತಗಳಲ್ಲಿ ಆರಂಭಿಕ ಆಟಗಾರ್ತಿ ಹರುಣ ಇವಾಸಕಿ ಮತ್ತು ನಾಯಕಿ ಮೈ ಯಾನಗಿಡಾ ಅವರನ್ನು ಔಟ್ ಮಾಡಿದರು. ಇನ್ನೊಂದು ತುದಿಯಿಂದ ಅರೆಕಾಲಿಕ ಆಫ್-ಸ್ಪಿನ್ನರ್ ಶಫಾಲಿ ವರ್ಮಾ ಕೂಡ ಬಿಗಿಯಾದ ಬೌಲಿಂಗ್ ಮಾಡಿ 13 ರನ್ಗಳಿಗೆ 2 ವಿಕೆಟ್ಗಳನ್ನು ಪಡೆದರು.
ಏಷ್ಯನ್ ಗೇಮ್ಸ್ಗೆ ಟೀಂ ಇಂಡಿಯಾದಲ್ಲಿ 1 ಬದಲಾವಣೆ
ಶಫಾಲಿ ಬಿರುಗಾಳಿಯ ಇನ್ನಿಂಗ್ಸ್ಈ ಗುರಿಗೆ ಪ್ರತಿಯಾಗಿ, ಶಫಾಲಿ ವರ್ಮಾ ಭಾರತಕ್ಕೆ ತ್ವರಿತ ಆರಂಭ ನೀಡಿದರು. ಆದಾಗ್ಯೂ, ಇನ್ನೊಂದು ತುದಿಯಲ್ಲಿ ಎರಡು ವಿಕೆಟ್ಗಳು ಬೇಗನೆ ಬಿದ್ದವು. ನಂತರ ಶಫಾಲಿ ವರ್ಮಾ, ರಿಚಾ ಘೋಷ್ ಅವರೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಇನ್ನಿಂಗ್ಸ್ನಲ್ಲಿ, ಶೆಫಾಲಿ ವರ್ಮಾ 15 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ಗಳನ್ನು ಒಳಗೊಂಡಂತೆ 40 ರನ್ ಬಾರಿಸಿ ಅಜೇಯರಾಗಿ ಉಳಿದರೆ, ರಿಚಾ ಘೋಷ್ 6 ಎಸೆತಗಳಲ್ಲಿ ಅಜೇಯ 12 ರನ್ಗಳ ಇನ್ನಿಂಗ್ಸ್ ಆಡಿದರು. ಪರಿಣಾಮವಾಗಿ, ಭಾರತ 5 ಓವರ್ಗಳಲ್ಲಿ (30 ಎಸೆತಗಳು) 2 ವಿಕೆಟ್ಗಳ ನಷ್ಟಕ್ಕೆ ಈ ಗುರಿ ತಲುಪಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿಮಂಡ್ಯ, (ಸೆಪ್ಟೆಂಬರ್ 18): ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರು ಫ್ಲೈಓವರ್ ಮೇಲಿಂದ ಕೆಳಕ್ಕೆ ಬಿದ್ದಿದೆ. ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಮಂಡ್ಯ ಸಮೀಪದ ಉಮ್ಮಡಹಳ್ಳಿ ಗೇಟ್ ಬಳಿ ಇರುವ ಫ್ಲೈಓವರ್ ಮೇಲೆ ಕಾರು ವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಫ್ಲೈಓವರ್ನಿಂದ ಕೆಳಗೆ ಬಿದ್ದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಂಜನಾ(32) ಸಾವಪ್ಪಿದ್ದಾರೆ. ಫ್ಲೈಓವರ್ನಿಂದ ಕಾರು ಕೆಳಗೆ ಬಿದ್ದಾಗ ಅಂಜನಾ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮಂಡ್ಯ ಸೆಂಟ್ರಲ್ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು ಕೇಂದ್ರ ಕಾರಾಗೃಹ ಅಂದರೆ ಪರಪ್ಪನ ಅಗ್ರಹಾರದಲ್ಲಿ ಸರ್ಕಾರಕ್ಕೆ ಆದಾಯ ತರಲು ಹಾಗೂ ಖೈದಿಗಳು ಬಿಡುಗಡೆಯಾದ ನಂತರ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ 'ನವ ಸಂಕಲ್ಪ ಬೇಕರಿ' ಎಂಬ ನೂತನ ಬೇಕರಿ ಘಟಕವನ್ನು ಆರಂಭಿಸಲಾಗಿದೆ.
ಬಂದಿಖಾನೆ ಮತ್ತು ಸುಧಾರಣಾ ಸೇವೆಗಳ ಪೊಲೀಸ್ ಮಹಾನಿರ್ದೇಶಕ (DGP) ಅಲೋಕ್ ಕುಮಾರ್ ನಿನ್ನೆ ಸೆಪ್ಟೆಂಬರ್ 17ರಂದು ಈ ಬೇಕರಿ ಘಟಕವನ್ನು ಉದ್ಘಾಟಿಸಿದರು. HCL ಫೌಂಡೇಶನ್ ಸಹಯೋಗದೊಂದಿಗೆ ‘ನವ ಸಂಕಲ್ಪ ಬೇಕರಿ ಆನ್ ವೀಲ್ಸ್’ (ಸಂಚಾರಿ ಬೇಕರಿ) ಸೇವೆಯನ್ನು ಸಹ ಪರಪ್ಪನ ಅಗ್ರಹಾರದ ಗರಿಷ್ಠ ಭದ್ರತಾ ಕಾರಾಗೃಹದಲ್ಲಿ ಆರಂಭಿಸಲಾಗಿದೆ.
ಪ್ರಿಯಾಂಕ್ ಖರ್ಗೆ ಪರಪ್ಪನ ಅಗ್ರಹಾರ ಜೈಲು ಸೇರುವ ಕಾಲ ಹತ್ತಿರ ಬಂದಿದೆ: ಪ್ರತಾಪ್ ಸಿಂಹ ತಿರುಗೇಟುಈ ಸಂಚಾರಿ ಬೇಕರಿ ಮೂಲಕ ಉತ್ತಮ ಗುಣಮಟ್ಟದ ಬೇಕರಿ ಉತ್ಪನ್ನಗಳನ್ನು ಬೆಂಗಳೂರಿನ ವಿವಿಧ ನ್ಯಾಯಾಲಯಗಳ ಆವರಣ ಮತ್ತು ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ಸೂಚಿಸಲಾಗಿದೆ.
ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ತರಬೇತಿ ಪೂರ್ಣಗೊಳಿಸಿದ ಶಿಕ್ಷೆಗೊಳಗಾದ ಖೈದಿಗಳಿಗೆ ತರಬೇತಿ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು. ಡಿಜಿಪಿ ಅಲೋಕ್ ಕುಮಾರ್ ಅವರು ಬೇಕರಿ ಉತ್ಪನ್ನಗಳನ್ನು ಪರಿಶೀಲಿಸಿ, ಅವುಗಳ ರುಚಿ ಮತ್ತು ಗುಣಮಟ್ಟವನ್ನು ಮೆಚ್ಚಿದರು. ಖೈದಿಗಳೊಂದಿಗೆ ಸಂವಾದ ನಡೆಸಿ ಉತ್ಪನ್ನಗಳ ತಯಾರಿಕೆಯಲ್ಲಿ ನೈರ್ಮಲ್ಯ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಈ ಯೋಜನೆಯು ದೇಶದ ಜೈಲಿನಲ್ಲಿ ಸ್ಥಾಪಿಸಲಾದ ಆಧುನಿಕ ಬೇಕರಿ ಘಟಕಗಳಲ್ಲಿ ಒಂದಾಗಿದ್ದು, ಖೈದಿಗಳಲ್ಲಿ ಕೌಶಲ್ಯ ಬೆಳಸುವ ಜೊತೆಗೆ ಅವರ ಭವಿಷ್ಯಕ್ಕೆ ಹೊಸ ಭರವಸೆ ನೀಡುವ ಉದ್ದೇಶ ಹೊಂದಿದೆ.
ಡಾರ್ಜಿಲಿಂಗ್: ಸುಂದರ ಕ್ಷಣಗಳನ್ನು ಕಳೆಯಲು ಡಾರ್ಜಿಲಿಂಗ್ನ ಸಿತಾಂಗ್ಗೆ ಹನಿಮೂನ್ಗೆ ತೆರಳಿದ್ದ ನವವಿವಾಹಿತ ದಂಪತಿಗಳ ಬದುಕು ಕ್ಷಣಾರ್ಧದಲ್ಲಿ ನರಕ ಸದೃಶವಾಗಿದೆ.
ಅಲ್ಲಿನ ಖಾಸಗಿ ಹೋಮ್ಸ್ಟೇಯೊಂದರಲ್ಲಿ ನಡೆದ ಭೀಕರ ಬೆಂಕಿ ಅವಘಡದಲ್ಲಿ ನವವಿವಾಹಿತೆ ನಿಕಿತಾ ಸಹಾ ತೀವ್ರವಾಗಿ ಗಾಯಗೊಂಡಿದ್ದು, ಶೇಕಡಾ 60 ರಷ್ಟು ಸುಟ್ಟ ಗಾಯಗಳೊಂದಿಗೆ ಸಿಲಿಗುರಿ ಆಸ್ಪತ್ರೆಯ ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಹೊಸದಾಗಿ ವಿವಾಹವಾಗಿದ್ದ ಸೌವಿಕ್ ದಾಸ್ ಮತ್ತು ನಿಖಿತಾ ಸಹಾ ದಂಪತಿ ಸೆಪ್ಟೆಂಬರ್ 13, 2026ರಂದು ಕೂರ್ಸಿಯಾಂಗ್ನ ಸಿಟ್ಟಾಂಗ್ ಔರಾ ಹೋಂಸ್ಟೇಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಹೋಮ್ಸ್ಟೇಯ ಹೊರಾಂಗಣದಲ್ಲಿ ಬಾರ್ಬೆಕ್ಯೂ ವ್ಯವಸ್ಥೆಯ ಬಳಿ ದಂಪತಿಗಳು ಕುಳಿತಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಉರಿಯುತ್ತಿದ್ದ ಬೆಂಕಿಗೆ ನೇರವಾಗಿ ಲೈಟರ್ ಫ್ಲೂಯಿಡ್ ಸುರಿದಿದ್ದಾನೆ.
ಇದರ ಪರಿಣಾಮವಾಗಿ ಕ್ಷಣಾರ್ಧದಲ್ಲಿ ಭಾರಿ ಬೆಂಕಿಯ ಜ್ವಾಲೆಯು (Fireball) ನಿಕಿತಾ ಅವರ ಮೇಲೆ ಚಿಮ್ಮಿ, ಅವರನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ.
ಮದುವೆಯಾದ ಎರಡು ದಿನಕ್ಕೇ ಕುಟುಂಬಸ್ಥರಿಂದಲೇ ನವವಿವಾಹಿತೆ ಕಿಡ್ನಾಪ್; Video ವೈರಲ್ಈ ಅವಘಡದಲ್ಲಿ ನಿಖಿತಾ ಅವರಿಗೆ ಸುಮಾರು ಶೇ.60ರಷ್ಟು ಸುಟ್ಟ ಗಾಯಗಳಾಗಿದ್ದು, ಅವರನ್ನು ತುರ್ತು ಚಿಕಿತ್ಸೆಗಾಗಿ ಸಿಲಿಗುರಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ನಡುವೆ ಘಟನೆ ವೇಳೆ ಪತ್ನಿಯನ್ನು ರಕ್ಷಿಸಲು ಮುಂದಾದ ಸೌವಿಕ್ ಅವರ ಕೈಗೂ ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಇಡೀ ಭೀಕರ ದೃಶ್ಯವು ಹೋಮ್ಸ್ಟೇಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಬೆನ್ನಲ್ಲೇ ಸೌವಿಕ್ ಅವರು ಹೋಂಸ್ಟೇ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಹೋಂಸ್ಟೇಯಲ್ಲಿ ಅಗ್ನಿಶಾಮಕ ಸಾಧನಗಳು ಇರಲಿಲ್ಲ ಹಾಗೂ ಅವಘಡದ ಬಳಿಕ ನೆರವು ನೀಡಲು ವಿಳಂಬ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರು ಬೆನ್ನಲ್ಲೇ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಹೋಂಸ್ಟೇಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೆ, ಹೋಂಸ್ಟೇ ಮ್ಯಾನೇಜರ್, ಅಲ್ಲಿನ ಸಿಬ್ಬಂದಿ ತಮ್ಮಿಂದ ಸಾಧ್ಯವಾದಷ್ಟು ತಕ್ಷಣವೇ ನೆರವು ನೀಡಲು ಪ್ರಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆಪಲ್ನ (Apple) ಹೊಸ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಸ್ಮಾರ್ಟ್ಫೋನ್ಗಳು ಇಂದಿನಿಂದ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಿವೆ. ಸೆಪ್ಟೆಂಬರ್ 9ರಂದು ಬಿಡುಗಡೆಯಾದ ಈ ಫೋನ್ಗಳ ಮುಂಗಡ ಬುಕ್ಕಿಂಗ್ ಸೆಪ್ಟೆಂಬರ್ 12ರಂದು ಆರಂಭವಾಗಿತ್ತು. ಇದೀಗ ಗ್ರಾಹಕರು ಆಪಲ್ ಮಳಿಗೆಗಳು, ವಿವಿಧ ಆನ್ಲೈನ್ ತಾಣಗಳು ಹಾಗೂ ಎಲೆಕ್ಟ್ರಾನಿಕ್ಸ್ ಮಳಿಗೆಗಳಿಂದ ಫೋನ್ ಖರೀದಿಸಬಹುದು. ಬ್ಲಿಂಕಿಟ್ ಮತ್ತು ಜೆಪ್ಟೊದಂತಹ ತ್ವರಿತ ವಿತರಣಾ ಸೇವೆಗಳ ಮೂಲಕವೂ ಐಫೋನ್ 18 ಪ್ರೊ ಸರಣಿಯನ್ನು ಖರೀದಿಸುವ ಅವಕಾಶವಿದೆ.
ಐಫೋನ್ 18 ಪ್ರೊ ಬೆಲೆ ಎಷ್ಟು?ಭಾರತದಲ್ಲಿ ಐಫೋನ್ 18 ಪ್ರೊ 256 ಜಿಬಿ ಸಂಗ್ರಹ ಸಾಮರ್ಥ್ಯದ ಮಾದರಿಗೆ ರೂ. 1,64,900 ಆರಂಭಿಕ ಬೆಲೆ ನಿಗದಿಪಡಿಸಲಾಗಿದೆ. 512 ಜಿಬಿ ಮಾದರಿಗೆ ರೂ. 1,89,900, 1 ಟಿಬಿ ಮಾದರಿಗೆ ರೂ. 2,39,900 ಹಾಗೂ 2 ಟಿಬಿ ಮಾದರಿಗೆ ರೂ. 3,14,900 ಬೆಲೆ ಇದೆ.
ಇನ್ನು ಐಫೋನ್ 18 ಪ್ರೊ ಮ್ಯಾಕ್ಸ್ 256 ಜಿಬಿ ಮಾದರಿಗೆ ರೂ. 1,79,900 ಆರಂಭಿಕ ಬೆಲೆ ಇದೆ. 512 ಜಿಬಿ ಮಾದರಿಗೆ ರೂ. 2,04,900, 1 ಟಿಬಿ ಮಾದರಿಗೆ ರೂ. 2,54,900 ಹಾಗೂ 2 ಟಿಬಿ ಮಾದರಿಗೆ ರೂ. 3,29,900 ಬೆಲೆ ನಿಗದಿಯಾಗಿದೆ.
ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಆಫರ್:ಐಫೋನ್ 18 ಪ್ರೊ ಸರಣಿ ಖರೀದಿಸುವವರಿಗೆ ವಿವಿಧ ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ಗಳ ಮೂಲಕ ರೂ. 7,000ವರೆಗೆ ಹಣ ವಾಪಸ್ ಪಡೆಯುವ ಅವಕಾಶವಿದೆ. ಅಮೆರಿಕನ್ ಎಕ್ಸ್ಪ್ರೆಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಸ್ಬಿಐ ಕಾರ್ಡ್ಗಳ ಮೇಲೆ ಈ ಕೊಡುಗೆ ಲಭ್ಯವಿದೆ.
ಇದರ ಜತೆಗೆ ಅರ್ಹ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮೂಲಕ ಆರು ತಿಂಗಳವರೆಗೆ ಬಡ್ಡಿ ರಹಿತ ಕಂತಿನ ಸೌಲಭ್ಯವನ್ನೂ ಪಡೆಯಬಹುದು. ಹಳೆಯ ಫೋನ್ ಬದಲಾಯಿಸಿ ಹೊಸ ಐಫೋನ್ ಖರೀದಿಸುವವರಿಗೆ ಆಪಲ್ನ ಬದಲಾವಣೆ ಯೋಜನೆಯಡಿ ಸಾಧನದ ಸ್ಥಿತಿ ಮತ್ತು ಮಾದರಿಯನ್ನು ಆಧರಿಸಿ ರೂ. 81,500ವರೆಗೆ ಮೌಲ್ಯ ಸಿಗಬಹುದು.
ಐಫೋನ್ 18 ಪ್ರೋ, ಮ್ಯಾಕ್ಸ್ ಫೋನ್ಗಳು ಇಂದು ಬಿಡುಗಡೆ; ದೇಶಾದ್ಯಂತ ಆ್ಯಪಲ್ ಸ್ಟೋರ್ಗಳಲ್ಲಿ ಫೋನ್ಪ್ರಿಯರ ದಂಡು
ಎಲ್ಲೆಲ್ಲಿ ಖರೀದಿಸಬಹುದು?ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಅನ್ನು ಆಪಲ್ನ ಅಧಿಕೃತ ಮಳಿಗೆಗಳ ಜತೆಗೆ ಅಮೆಜಾನ್, ಫ್ಲಿಪ್ಕಾರ್ಟ್ ಮತ್ತು ಇತರ ಆನ್ಲೈನ್ ಮಾರಾಟ ತಾಣಗಳಲ್ಲೂ ಖರೀದಿಸಬಹುದು. ಬ್ಲಿಂಕಿಟ್, ಜೆಪ್ಟೊ ಸೇರಿದಂತೆ ತ್ವರಿತ ವಿತರಣಾ ಸೇವೆಗಳಲ್ಲೂ ಫೋನ್ ಲಭ್ಯವಿದೆ. ಆಫ್ಲೈನ್ನಲ್ಲಿ ಆಪಲ್ನ ಅಧಿಕೃತ ಮಾರಾಟಗಾರರು ಹಾಗೂ ಕ್ರೋಮಾ, ವಿಜಯ್ ಸೇಲ್ಸ್ನಂತಹ ಪ್ರಮುಖ ಎಲೆಕ್ಟ್ರಾನಿಕ್ಸ್ ಮಳಿಗೆಗಳಲ್ಲಿ ಖರೀದಿಸಬಹುದು.
ಒಟ್ಟಿನಲ್ಲಿ, ಐಫೋನ್ 18 ಪ್ರೊ ಸರಣಿಯ ಮಾರಾಟ ಭಾರತದಲ್ಲಿ ಆರಂಭವಾಗಿದ್ದು, ಸಾಮಾನ್ಯ ಮಳಿಗೆಗಳ ಜತೆಗೆ ತ್ವರಿತ ವಿತರಣಾ ಸೇವೆಗಳಲ್ಲೂ ಖರೀದಿಗೆ ಲಭ್ಯವಾಗಿರುವುದು ಈ ಬಾರಿಯ ವಿಶೇಷತೆ. ವಿವಿಧ ಬ್ಯಾಂಕ್ಗಳ ಕೊಡುಗೆ, ಕಂತಿನ ಸೌಲಭ್ಯ ಮತ್ತು ಹಳೆಯ ಫೋನ್ ಬದಲಾವಣೆ ಯೋಜನೆಯನ್ನೂ ಗ್ರಾಹಕರು ಬಳಸಿಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಸೆಪ್ಟೆಂಬರ್ 18: ರಾಜ್ಯದಲ್ಲಿ ಹಾಲಿನ ದರ ಮತ್ತೆ ಏರಿಕೆಯಾಗುವ ಸಾಧ್ಯತೆಗಳಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆ ಬೀಳುವ ಆತಂಕ ಎದುರಾಗಿದೆ. ಹಾಲು ಉತ್ಪಾದಕರು ಪ್ರತಿ ಲೀಟರ್ಗೆ 8 ರೂ. ದರ ಹೆಚ್ಚಳ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈಗಾಗಲೇ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಳಲುತ್ತಿರುವ ಗ್ರಾಹಕರಿಗೆ ಹಾಲಿನ ದರ ಏರಿಕೆಯು ನೇರವಾಗಿ ಪರಿಣಾಮ ಬೀರಲಿದೆ. ಹಾಲು ಉತ್ಪಾದಕರಾದ ಬಮುಲ್, ಚಮುಲ್, ಮಂಡ್ಯ ಮಿಲ್ಕ್ ಹಾಗೂ ತುಮಕೂರು ಸೇರಿದಂತೆ ವಿವಿಧ ಹಾಲು ಒಕ್ಕೂಟಗಳು ದರ ಏರಿಕೆಗೆ ಆಗ್ರಹಿಸಿವೆ.
ದರ ಏರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ಹಾಲು ಉತ್ಪಾದಕರು ಸಿದ್ಧತೆ ನಡೆಸಿದ್ದಾರೆ. ಸೆಪ್ಟೆಂಬರ್ 22ರಂದು ರಾಜ್ಯಾದ್ಯಂತ ರೈತರು ಒಗ್ಗಟ್ಟಾಗಿ ಒತ್ತಡ ಹೇರಲು ಕರೆ ನೀಡಲಾಗಿದೆ. ಮೂರು ದಿನಗಳ ಒಳಗೆ ಬೆಲೆ ಏರಿಕೆ ಮಾಡಿಲ್ಲ ಅಂದರೆ ಪ್ರತಿ ಜಿಲ್ಲೆಯಿಂದ ‘ವಿಧಾನ ಸೌಧ ಚಲೋ’ ಮಾಡ್ತೀವಿ ಎಂದು ಸರ್ಕಾರಕ್ಕೆ ಹಾಲು ಒಕ್ಕೂಟಗಳು ಗಡುವು ವಿಧಿಸಿರುವುದಾಗಿ ಕೆಎಂಎಫ್ ಮಾಜಿ ನಿರ್ದೇಶಕ ವೀರಭದ್ರಬಾಬು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ತೀವ್ರ ಬರಗಾಲ, ಶೇ 70 ರಷ್ಟು ಮಳೆ ಕೊರತೆ, ಹೀಗಾಗಿ ಹುಲ್ಲಿನ ಕೊರತೆ ಕೊರತೆ, ಪಶುಆಹಾರದ ಕಚ್ಚಾ ಸಾಮಾಗ್ರಿ ಮೆಕ್ಕೆ ಜೋಳ, ಇಂಡಿ ಬೂಸಾ, ಕಾಕಂಬಿ ದರ ಶೇ25 ರಷ್ಟು ಏರಿಕೆ, ರಾಸುಗಳಿಗೆ ಬಳಸುವ ನೆಲಹಾಸು ದರ ಏರಿಕೆ, ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಕಚ್ಚಾತೈಲ ಪೆಟ್ರೋಲ್ ಡಿಸೇಲ್ ದರ ವೂ ಏರಿಕೆಯಾಗಿದೆ. ಈ ಕಾರಣಗಳಿಂದ ಹಾಲಿನ ದರ ಹೆಚ್ಚಿಸಬೇಕು ಎಂಬುದು ಉತ್ಪಾದಕರ ಆಗ್ರಹವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು: ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಪದ್ಮಭೂಷಣ ಅನಂತ್ ನಾಗ್ ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಈ ವಿಷಯ ಹಂಚಿಕೊಂಡಿರುವ 78 ವರ್ಷದ ಹಿರಿಯ ನಟ, ತಮ್ಮ ನಿವೃತ್ತಿಯ ನಿರ್ಧಾರಕ್ಕೂ ತಮ್ಮ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾದ್ರೆ, ದಶಕಗಳ ಕಾಲ ತಮ್ಮ ನೈಜ ಅಭಿನಯದ ಮೂಲಕ ಜನಮನ ಗೆದ್ದಿದ್ದ ಈ ಅದ್ಭುತ ಪ್ರತಿಭೆ, ಇದ್ದಕ್ಕಿದ್ದಂತೆ ನಟನೆಯಿಂದ ದೂರವಾಗಲು ಕಾರಣವೇನು? ಆ ಕುರಿತ ವರದಿ ಇಲ್ಲಿದೆ:
ಅನಂತ್ ನಾಗ್ ಚಿತ್ರರಂಗದಿಂದ ದೂರವಾಗಿದ್ಯಾಕೆ?
ಕಳದೆ ಮೂರು ನಾಲ್ಕು ವರ್ಷಗಳಿಂದ ಅನಂತ್ ನಾಗ್ ಅವರು ಚಿತ್ರರಂಗದಿಂದ ದೂರ ಇರುವುದನ್ನು ನೋಡಿ ಅನೇಕರು ಅವರಿಗೆ ಆರೋಗ್ಯ ಸಮಸ್ಯೆ ಇರಬಹುದು ಎಂದುಕೊಂಡಿದ್ದರು. ಆದರೆ ಇದನ್ನು ಸ್ಪಷ್ಟವಾಗಿ ನಿರಾಕರಿಸಿರುವ ಅವರು, "ನನ್ನ ನಿರ್ಧಾರಕ್ಕೂ ನನ್ನ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ, ನಾನು ಆರೋಗ್ಯವಾಗಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಇಂದಿನ ಸಿನಿಮಾಗಳು ಕೇವಲ ಕೋಟಿಗಟ್ಟಲೆ ಬಾಕ್ಸ್ ಆಫೀಸ್ ಕಲೆಕ್ಷನ್, ಕೋಟಿಗಳ ಲೆಕ್ಕಾಚಾರ ಮತ್ತು ಬಜೆಟ್ ಮೇಲಷ್ಟೇ ಗಮನ ಹರಿಸುತ್ತಿವೆಯೇ ಹೊರತು ಕಥೆಯ ಆಳಕ್ಕಲ್ಲ ಎಂದು ಬೇಸರ ವ್ಯಕ್ತಪಡಿಸಿ, "ಒಂದು ಕಾಲದಲ್ಲಿ ಸಿನಿಮಾಗಳು ಜ್ಞಾನ, ಶಿಕ್ಷಣ ಮತ್ತು ಮನರಂಜನೆಯ ಸಮತೋಲನವಾಗಿದ್ದವು, ಆದರೆ ಈಗ ಆ ಮೌಲ್ಯಗಳು ಕಣ್ಮರೆಯಾಗಿದ್ದು, ಈ ರೀತಿಯ ಕೇವಲ ಹಣದ ಬೆನ್ನಟ್ಟುವ ವಾತಾವರಣ ತಮಗೆ ಇಷ್ಟವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಮುಂದುವರೆದು, 2021 ಮತ್ತು 2022 ರ ಅವಧಿಯಲ್ಲಿ ಅನಂತ್ ನಾಗ್ ನಟಿಸಿದ ಐದೂ ಸಿನಿಮಾಗಳು ವಾಣಿಜ್ಯಿಕವಾಗಿ ಸೋತವು. ಆ ಸಮಯದಲ್ಲಿ ಅವರು, "ಇಷ್ಟೇ ಸಾಕು, ಇನ್ಮುಂದೆ ನಾನು ನಟಿಸುವುದಿಲ್ಲ" ಎಂದು ತಾವಾಗಿಯೇ ಚಿತ್ರರಂಗದಿಂದ ದೂರ ಸರಿದರು ಎನ್ನಲಾಗಿದೆ. ಸದ್ಯ ಕಳೆದ 3 ವರ್ಷಗಳಿಂದ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ.
'ಪ್ರಶಸ್ತಿಯನ್ನು ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಅರ್ಪಿಸುತ್ತೇನೆ': ಹಿರಿಯ ನಟ ಅನಂತ್ ನಾಗ್ಏತನ್ಮಧ್ಯೆ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಅನಂತ್ ನಾಗ್ ಅವರು 'ಅಂಕುರ್' ನಂತಹ ಕಲಾತ್ಮಕ ಸಿನಿಮಾಗಳಿಂದ ಹಿಡಿದು 'ಕೆಜಿಎಫ್: ಚಾಪ್ಟರ್ 1' ನಂತಹ ಬ್ಲಾಕ್ಬಸ್ಟರ್ ವಾಣಿಜ್ಯ ಸಿನಿಮಾಗಳವರೆಗೆ ತಮ್ಮ ಅದ್ಭುತ ನಟನೆಯಿಂದ ಮನೆಮಾತಾಗಿದ್ದಾರೆ. ಜೊತೆಗೆ, ಅವರ 50 ವರ್ಷಗಳ ಸುದೀರ್ಘ ಸಿನಿ ಪಯಣವನ್ನು ಗೌರವಿಸಿ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಅವರಿಗೆ ದೇಶದ ಅತ್ಯುನ್ನತ ಚಲನಚಿತ್ರ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಿದ್ದು, ಇದನ್ನು ಗುಜರಾತ್ನ ಕೆವಾಡಿಯಾದಲ್ಲಿ ನಡೆಯಲಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ಸಜ್ಜನ-ಸರಳ ವ್ಯಕ್ತಿತ್ವದ ಅನಂತ್ ನಾಗ್ ಮೇಲೆ ಕೊಲೆ ಯತ್ನ: ಮಗಳನ್ನ ಶಾಲೆಗೆ ಕರೆದೊಯ್ಯುತ್ತಿದ್ದಾಗಲೇ ದಾಳಿ; ಅಂದು ನಡೆದ ಘಟನೆಗೆ ಬೆಚ್ಚಿ ಬಿದ್ದ ಕುಟುಂಬ!ಕೇಂದ್ರ ಲೋಕಸೇವಾ ಆಯೋಗವು (UPSC) 2027ರ ಸಂಯೋಜಿತ ಭೂ-ವಿಜ್ಞಾನಿ (Combined Geo-Scientist) ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿಯ ಮೂಲಕ ಗಣಿ ಸಚಿವಾಲಯದ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ಹಾಗೂ ಜಲಶಕ್ತಿ ಸಚಿವಾಲಯದ ಕೇಂದ್ರೀಯ ಅಂತರ್ಜಲ ಮಂಡಳಿ (CGWB) ಯಲ್ಲಿ ಖಾಲಿಯಿರುವ ಒಟ್ಟು 127 ಗ್ರೂಪ್ A ಮತ್ತು ಗ್ರೂಪ್ B ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 22 ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ವಿಭಾಗದ ಹುದ್ದೆಗಳು:ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI – ವರ್ಗ I) ಅಡಿಯಲ್ಲಿ ಒಟ್ಟು 111 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಗ್ರೂಪ್-ಎ ವಿಭಾಗದಲ್ಲಿ 29 ಭೂವಿಜ್ಞಾನಿ (Geologist) ಹಾಗೂ 07 ಕೆಮಿಸ್ಟ್ (Chemist) ಹುದ್ದೆಗಳಿವೆ. ಇವುಗಳ ಜೊತೆಗೆ ಗ್ರೂಪ್-ಬಿ ವಿಭಾಗದಲ್ಲಿ 34 ಸಹಾಯಕ ಭೂವಿಜ್ಞಾನಿ (Assistant Geologist), 35 ಸಹಾಯಕ ಭೂಭೌತಶಾಸ್ತ್ರಜ್ಞ (Assistant Geophysicist) ಹಾಗೂ 06 ಸಹಾಯಕ ರಸಾಯನಶಾಸ್ತ್ರಜ್ಞ (Assistant Chemist) ಹುದ್ದೆಗಳು ಸೇರಿವೆ.
ಕೇಂದ್ರೀಯ ಅಂತರ್ಜಲ ಮಂಡಳಿ (CGWB) ವಿಭಾಗದ ಹುದ್ದೆಗಳು:ಕೇಂದ್ರೀಯ ಅಂತರ್ಜಲ ಮಂಡಳಿ (CGWB – ವರ್ಗ II) ಅಡಿಯಲ್ಲಿ ಒಟ್ಟು 16 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಗ್ರೂಪ್-ಎ ವಿಭಾಗದಡಿಯಲ್ಲಿ 05 ವಿಜ್ಞಾನಿ-ಬಿ/ಜಲಭೂವಿಜ್ಞಾನ (Scientist-B / Hydrogeology), 01 ವಿಜ್ಞಾನಿ-ಬಿ/ರಾಸಾಯನಿಕ (Scientist-B / Chemical) ಮತ್ತು 01 ವಿಜ್ಞಾನಿ-ಬಿ/ಜಿಯೋಫಿಸಿಕ್ಸ್ (Scientist-B / Geophysics) ಹುದ್ದೆಗಳಿವೆ. ಗ್ರೂಪ್-ಬಿ ವಿಭಾಗದಲ್ಲಿ 07 ಸಹಾಯಕ ಜಲವಿಜ್ಞಾನಿ (Assistant Hydrogeologist), 01 ಸಹಾಯಕ ರಸಾಯನಶಾಸ್ತ್ರಜ್ಞ ಹಾಗೂ 01 ಸಹಾಯಕ ಭೂಭೌತಶಾಸ್ತ್ರಜ್ಞ ಹುದ್ದೆಗಳು ಖಾಲಿಯಿವೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ವಿವರ:ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಭೂವಿಜ್ಞಾನ, ಅನ್ವಯಿಕ ಭೂವಿಜ್ಞಾನ, ಭೂಭೌತಶಾಸ್ತ್ರ, ಅನ್ವಯಿಕ ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ಜಲಭೂವಿಜ್ಞಾನ ಮುಂತಾದ ಸಂಬಂಧಿತ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ (M.Sc) ಅಥವಾ ಸಂಯೋಜಿತ ಎಂ.ಎಸ್ಸಿ (Integrated M.Sc) ಪೂರ್ಣಗೊಳಿಸಿರಬೇಕು. ಅರ್ಜಿದಾರರ ವಯಸ್ಸು ಜನವರಿ 1, 2027 ಕ್ಕೆ ಅನ್ವಯಿಸುವಂತೆ 21 ರಿಂದ 32 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಾವಳಿಗಳ ಪ್ರಕಾರ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಇದನ್ನೂ ಓದಿ: ಕಾಲೇಜಿನಲ್ಲಿ ರಾತ್ರಿ ಕಾವಲುಗಾರನ ಕೆಲಸ ಮಾಡುತ್ತಲೇ ಓದಿ ಸತತ 3 ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಸಾಧಕ!
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ:ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಪುರುಷ ಅಭ್ಯರ್ಥಿಗಳಿಗೆ ರೂ. 200 ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಮಹಿಳೆಯರು, ಎಸ್ಸಿ, ಎಸ್ಟಿ ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ. ಆಯ್ಕೆ ಪ್ರಕ್ರಿಯೆಯು 3 ಹಂತಗಳಲ್ಲಿ ನಡೆಯಲಿದೆ: ಮೊದಲಿಗೆ 400 ಅಂಕಗಳ ವಸ್ತುನಿಷ್ಟ ಮಾದರಿಯ ಪೂರ್ವಭಾವಿ ಪರೀಕ್ಷೆ (Prelims) ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/3 ರಷ್ಟು ಋಣಾತ್ಮಕ ಅಂಕ ಕಡಿತಗೊಳಿಸಲಾಗುತ್ತದೆ. ನಂತರ 600 ಅಂಕಗಳ ಲಿಖಿತ ಮುಖ್ಯ ಪರೀಕ್ಷೆ (Mains) ಹಾಗೂ 200 ಅಂಕಗಳ ವ್ಯಕ್ತಿತ್ವ ಪರೀಕ್ಷೆ (Interview) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 22 ಕೊನೆಯ ದಿನಾಂಕವಾಗಿದೆ. ಪೂರ್ವಭಾವಿ ಪರೀಕ್ಷೆಯು (Prelims) ಜನವರಿ 10, 2027 ರಂದು ಹಾಗೂ ಮುಖ್ಯ ಪರೀಕ್ಷೆಯು (Mains) 2027ರ ಜೂನ್ 19 ಮತ್ತು 20 ರಂದು ನಡೆಯಲಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಸೆಪ್ಟೆಂಬರ್ 18: ಬೈಕ್ಗೆ ಡಿಕ್ಕಿ ಹೊಡೆದ ಬಳಿಕವೂ ಕಾರು ನಿಲ್ಲಿಸದೆ ಬೈಕ್ ಸಮೇತ ಸವಾರನನ್ನು ಕಾರಿನಲ್ಲಿ ಎಳೆದೊಯ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ನೀಲಿ ಬಣ್ಣದ ಹೋಂಡಾ ಅಮೇಜ್ ಸೆಡಾನ್ ಕಾರು ರಸ್ತೆಯಲ್ಲಿ ಕಿಡಿಗಳನ್ನು ಹೊತ್ತಿಸುತ್ತಾ ಸಾಗುತ್ತಿದ್ದ ದೃಶ್ಯವನ್ನು ಹಿಂಬದಿಯ ಸ್ಕೂಟರ್ ಸವಾರರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಕಾರು ನಿಲ್ಲಿಸಿದ ತಕ್ಷಣವೇ ಸಾರ್ವಜನಿಕರು 73 ವರ್ಷದ ಚಾಲಕನನ್ನು ಹೊರಗೆಳೆದು ತರಾಟೆಗೆ ತೆಗೆದುಕೊಂಡಿದ್ದು, ಪೊಲೀಸರು ಆತನನ್ನು ಬಂಧಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಗುರುವಾರ ತಡರಾತ್ರಿ ರಸ್ತೆ ಬದಿಯಲ್ಲಿ ತಪಸ್ ಎಂಬ ಯುವಕ ಬೈಕ್ ಮೇಲೆ ಹೋಗುತ್ತಿದ್ದಾಗ ಈ ಕಾರು ರಭಸವಾಗಿ ಬಂದು ಡಿಕ್ಕಿ ಹೊಡೆದಿದೆ. ಆಘಾತಕ್ಕೆ ಸವಾರ ಕೆಳಗೆ ಬಿದ್ದರೂ, ಬೈಕ್ ಕಾರಿನ ಕೆಳಭಾಗದಲ್ಲಿ ಸಿಲುಕಿಕೊಂಡಿದೆ. ಆದರೂ ಕಾರು ನಿಲ್ಲಿಸದ ವೃದ್ಧ, ಅರ್ಧ ಕಿಲೋಮೀಟರ್ ದೂರ ಬೈಕನ್ನು ರಸ್ತೆಗೆ ಉಜ್ಜುತ್ತಾ ಎಳೆದೊಯ್ದಿದ್ದಾರೆ.
ಹಿಂದಿನಿಂದ ಬಂದ ಸ್ಕೂಟರ್ ಸವಾರರು ಕಾರು ನಿಲ್ಲಿಸು ಎಂದು ಕೂಗುತ್ತಾ ಬೆನ್ನಟ್ಟಿದ್ದಾರೆ. ಕಾರು ನಿಂತ ತಕ್ಷಣವೇ ಮಹಿಳೆಯೊಬ್ಬರು ಬಾಗಿಲು ತೆರೆದು ವೃದ್ಧನನ್ನು ಹೊರಗೆ ಎಳೆದಿದ್ದಾರೆ. ವಸಂತ್ ಕುಂಜ್ ನಿವಾಸಿ ವೇಣು ಗೋಪಾಲ್ (73) ಎಂದು ಗುರುತಿಸಲಾದ ಆ ವೃದ್ಧ, ಕಾರಿನೊಳಗೆ ಕೈಮುಗಿದು ಕುಳಿತಿದ್ದರೂ ಕುಪಿತಗೊಂಡ ಜನರು ಕಾಲರ್ ಹಿಡಿದು ಹೊರಗೆ ಎಳೆದು ತಳ್ಳಾಡಿ ಹಲ್ಲೆ ನಡೆಸಿದ್ದಾರೆ. ತಪ್ಪಾಗಿದ್ದರೆ ಕಾರು ನಿಲ್ಲಿಸಬೇಕಿತ್ತು, ನಾನೇನಾದರೂ ಕಾರಿನಡಿ ಸಿಲುಕಿದ್ದರೆ ಸಾಯುತ್ತಿದ್ದೆ ಎಂದು ಬೈಕ್ ಸವಾರ ಆಕ್ರೋಶ ಹೊರಹಾಕಿದ್ದಾನೆ.
ಮತ್ತಷ್ಟು ಓದಿ: ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಯುವತಿಯ ಕಿಡ್ನಾಪ್ಗೆ ಯತ್ನ, ಪೊಲೀಸ್-ಜಡ್ಜ್ ಕಾರು ಸೇರಿ ನೂರಾರು ವಾಹನಗಳಿಗೆ ಡಿಕ್ಕಿ!
ಮದ್ಯ ಸೇವಿಸಿರಲಿಲ್ಲ: ಘಟನಾ ಸ್ಥಳಕ್ಕೆ ಬಂದ ದೆಹಲಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆತ ಮದ್ಯ ಸೇವಿಸಿರಲಿಲ್ಲ ಎಂಬುದು ದೃಢಪಟ್ಟಿದೆ. ಅಪಘಾತದ ಆಘಾತ ಮತ್ತು ಗಾಬರಿಯಿಂದ ಆತ ಕಾರು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿರಬಹುದು ಎಂದು ಶಂಕಿಸಲಾಗಿದೆ.
ವಿಡಿಯೋ
CAR DRAGS BIKE FOR SEVERAL METRES IN DELHI’S RK PURAM
A video from RK Puram, Delhi shows a car dragging a motorcycle trapped underneath it on Africa Avenue Road.
The incident took place on September 17. Delhi Police said the motorcycle rider fell after the car hit his parked… pic.twitter.com/Dkfx8CEXQu
— contentkikamii (@contentkikamii) September 18, 2026
ಕಾನೂನು ಕ್ರಮ: ಆರೋಪಿ ವೇಣು ಗೋಪಾಲ್ ವಿರುದ್ಧ ಅತಿವೇಗ ಮತ್ತು ಅಜಾಗರೂಕ ಚಾಲನೆ ಹಾಗೂ ಇತರರ ಜೀವಕ್ಕೆ ಅಪಾಯ ತಂದೊಡ್ಡಿರುವ ಆರೋಪದಡಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೆಹಲಿಯಲ್ಲಿ ವಾಹನಗಳ ಕೆಳಗೆ ಸಿಲುಕಿದವರನ್ನು ಕಿಲೋಮೀಟರ್ಗಟ್ಟಲೆ ಎಳೆದೊಯ್ಯುವ ಇಂತಹ ಘಟನೆಗಳು ಈ ಹಿಂದೆಯೂ ನಡೆದಿವೆ. 2023 ರ ಕುಖ್ಯಾತ ಕಾಂಝಾವಾಲಾ ಪ್ರಕರಣದಲ್ಲಿ ಯುವತಿಯೊಬ್ಬಳನ್ನು ಕಾರಿನ ಕೆಳಗೆ ಹಲವು ಕಿಲೋಮೀಟರ್ ಎಳೆದೊಯ್ದು ಆಕೆ ದಾರುಣವಾಗಿ ಸಾವನ್ನಪ್ಪಿದ್ದ ಘಟನೆಯನ್ನು ಮತ್ತೆ ನೆನಪಿಸಿದೆ.
ಪೊಲೀಸರ ಎಚ್ಚರಿಕೆ: ಅಪಘಾತ ಸಂಭವಿಸಿದಾಗ ಭಯದಿಂದ ವಾಹನ ನಿಲ್ಲಿಸದೆ ಓಡಿಸಲು ಪ್ರಯತ್ನಿಸುವುದು ಇನ್ನಷ್ಟು ಭೀಕರ ಅನಾಹುತಗಳಿಗೆ ಕಾರಣವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ವಾಹನ ನಿಲ್ಲಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇಡೀ ಕುಟುಂಬಕ್ಕೆ ಇಷ್ಟವಾಗುವಂತಹ ವಿಭಿನ್ನ ರುಚಿಯ ಖಾದ್ಯ ಸವಿಯಬೇಕೆಂದರೆ ಫಿಶ್ ಫ್ರೈಡ್ ರೈಸ್ ಒಮ್ಮೆ ಪ್ರಯತ್ನಿಸಿ. ಮಸಾಲೆಯುಕ್ತ ಮೀನಿನ ತುಂಡುಗಳೊಂದಿಗೆ ತರಕಾರಿ, ಅನ್ನ ಸೇರಿ ಸಿದ್ಧವಾಗುವ ಈ ಖಾದ್ಯ ರುಚಿಯಲ್ಲಿ ಯಾವುದೇ ಹೋಟೆಲ್ ಶೈಲಿಯ ಫ್ರೈಡ್ ರೈಸ್ಗಿಂತ ಕಡಿಮೆಯಿಲ್ಲ. ಕಡಿಮೆ ಸಮಯದಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ರೆಸಿಪಿ ಮೀನು ಪ್ರಿಯರಿಗೆ ಖಂಡಿತ ಇಷ್ಟವಾಗುತ್ತದೆ.
ಬೇಕಾಗುವ ಪದಾರ್ಥಗಳು...
ಬಾಸ್ಮತಿ ಅಕ್ಕಿ – 2 ಬಟ್ಟಲು
ಮೀನು – 250 ಗ್ರಾಂ
ಈರುಳ್ಳಿ – 1
ಕ್ಯಾರೆಟ್ – 1
ಕ್ಯಾಪ್ಸಿಕಂ – 1
ಹಸಿಮೆಣಸಿನಕಾಯಿ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಸೋಯಾ ಸಾಸ್ – 1 ಚಮಚ
ಮೆಣಸಿನ ಪುಡಿ – 1 ಚಮಚ
ಅರಿಶಿನ – ¼ ಚಮಚ
ಗರಂ ಮಸಾಲೆ – ½ ಚಮಚ
ನಿಂಬೆಹಣ್ಣಿನ ರಸ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯವಿರುವಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ...
ಮೊದಲು ಮೀನು ತುಂಡುಗಳನ್ನು ಸ್ವಚ್ಛವಾಗಿ ತೊಳೆದು ಅದಕ್ಕೆ ಉಪ್ಪು, ಅರಿಶಿನ, ಮೆಣಸಿನ ಪುಡಿ ಮತ್ತು ನಿಂಬೆಹಣ್ಣಿನ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 15–20 ನಿಮಿಷ ಮ್ಯಾರಿನೇಟ್ ಮಾಡಿ.
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮ್ಯಾರಿನೇಟ್ ಮಾಡಿದ ಮೀನು ತುಂಡುಗಳನ್ನು ಹಾಕಿ ಎರಡೂ ಬದಿಗಳೂ ಚೆನ್ನಾಗಿ ಬೇಯುವವರೆಗೆ ಹುರಿದು ತೆಗೆದಿಡಿ.
ಬಾಸ್ಮತಿ ಅಕ್ಕಿಯನ್ನು ಬೇಯಿಸಿ ಅನ್ನವನ್ನು ತಣ್ಣಗಾಗಲು ಬಿಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಬಳಿಕ ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಸೇರಿಸಿ ಹೆಚ್ಚಿನ ಉರಿಯಲ್ಲಿ ಕೆಲವು ನಿಮಿಷ ಹುರಿಯಿರಿ.
ಇದಕ್ಕೆ ಸೋಯಾ ಸಾಸ್, ಸ್ವಲ್ಪ ಉಪ್ಪು ಮತ್ತು ಗರಂ ಮಸಾಲೆ ಹಾಕಿ ಮಿಶ್ರಣ ಮಾಡಿ. ನಂತರ ಬೇಯಿಸಿದ ಅನ್ನವನ್ನು ಸೇರಿಸಿ ಅನ್ನ ನುಣ್ಣಗಾಗದಂತೆ ನಿಧಾನವಾಗಿ ಕಲಸಿ. ಕೊನೆಯಲ್ಲಿ ಹುರಿದ ಮೀನು ತುಂಡುಗಳನ್ನು ಸಣ್ಣದಾಗಿ ಮುರಿದು ಅನ್ನಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಕರವಾದ ಫಿಶ್ ಫ್ರೈಡ್ ರೈಸ್ ಸವಿಯಲು ಸಿದ್ಧ.
ಬೆಂಗಳೂರು: ಟಿ. ನರಸೀಪುರದ ಪ್ರಕರಣ ಕಾಂಗ್ರೆಸ್ ಸರ್ಕಾರದ ಸಂವಿಧಾನ ವಿರೋಧಿ ಮತ್ತು ಹಿಂದೂ ವಿರೋಧಿ ಆಡಳಿತ ಮನಸ್ಥಿತಿಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಈಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಶಾಂತಿ ಸಭೆಯನ್ನು ವರದಿ ಮಾಡಲು ಸ್ಥಳೀಯ ಮಾಧ್ಯಮದ ಪ್ರತಿನಿಧಿಯನ್ನು ಠಾಣೆಯಿಂದಲೇ ಕರೆಯಲಾಗಿತ್ತು. ಅದೇ ಸಭೆಯ ವಿಡಿಯೋ ಪ್ರಸಾರವಾದ ಬಳಿಕ, ಇದೀಗ ಆ ವಿಡಿಯೋ ಮಾಡಿದ್ದ ಪತ್ರಕರ್ತನ ಮೇಲೆಯೇ FIR ದಾಖಲಿಸಲಾಗಿದೆ. ಇದು ಯಾವ ನ್ಯಾಯ? ಮಾನ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಉತ್ತರಿಸಿ ಎಂದಿದ್ದಾರೆ.
ವಿಡಿಯೋದಲ್ಲಿನ ಪೊಲೀಸ್ ಅಧಿಕಾರಿಯ ಹೇಳಿಕೆ ಸರಿಯಾಗಿತ್ತು, ಕಾನೂನುಬದ್ಧವಾಗಿತ್ತು ಎಂದು ಇಡೀ ರಾಜ್ಯ ಕಾಂಗ್ರೆಸ್ ಸರ್ಕಾರವೇ ಸಮರ್ಥಿಸಿಕೊಳ್ಳುತ್ತಿದ್ದರೆ, ಆ ಹೇಳಿಕೆಯನ್ನು ವರದಿ ಮಾಡಿದ ಪತ್ರಕರ್ತನ ವಿರುದ್ಧ FIR ದಾಖಲಿಸಿರುವುದರ ಆಧಾರವೇನು? ಸಭೆಯಲ್ಲಿ ಆಡಿದ ಮಾತನ್ನೇ ದಾಖಲಿಸಿ ಪ್ರಸಾರ ಮಾಡಲಾಗಿದೆ. ಮಾಧ್ಯಮದ ಬಾಯಿ ಮುಚ್ಚಿಸಲು FIR ಎಂಬ ಅಸ್ತ್ರ ಪ್ರಯೋಗಿಸುವುದು ಯಾವ ಪಾಳೇಗಾರಿಕೆ ಮನಸ್ಥಿತಿ? ಎಂದು ಪ್ರಶ್ನಿಸಿದ್ದಾರೆ,
ಇದು ಕೇವಲ ಒಬ್ಬ ಪತ್ರಕರ್ತನ ವಿಷಯವಲ್ಲ. ಇದು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ. ಮಾಧ್ಯಮ ಸ್ವಾತಂತ್ರ್ಯ ಎಲ್ಲಿದೆ ಪ್ರಶ್ನಿಸುವ ಹಕ್ಕು ಎಲ್ಲಿದೆ? ಸರ್ಕಾರದ ಕ್ರಮಗಳನ್ನು ವರದಿ ಮಾಡುವ ಸ್ವಾತಂತ್ರ್ಯ ಎಲ್ಲಿದೆ?
ಟಿ. ನರಸೀಪುರದ ಈ ಪ್ರಕರಣ ಕಾಂಗ್ರೆಸ್ ಸರ್ಕಾರದ ಸಂವಿಧಾನ ವಿರೋಧಿ ಮತ್ತು ಹಿಂದೂ ವಿರೋಧಿ ಆಡಳಿತ ಮನಸ್ಥಿತಿಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.
ಶಾಂತಿ ಸಭೆಯನ್ನು ವರದಿ ಮಾಡಲು ಸ್ಥಳೀಯ ಮಾಧ್ಯಮದ ಪ್ರತಿನಿಧಿಯನ್ನು ಠಾಣೆಯಿಂದಲೇ ಕರೆಯಲಾಗಿತ್ತು. ಅದೇ ಸಭೆಯ ವಿಡಿಯೋ ಪ್ರಸಾರವಾದ ಬಳಿಕ, ಇದೀಗ ಆ ವಿಡಿಯೋ ಮಾಡಿದ್ದ ಪತ್ರಕರ್ತನ ಮೇಲೆಯೇ FIR… pic.twitter.com/kugf1Gszgi
ಇದೇನು ತುರ್ತು ಪರಿಸ್ಥಿತಿ ಕಾಲವೇ? ಹಿಂದೂಗಳು ತಮ್ಮ ಹಬ್ಬಗಳನ್ನು ಆಚರಿಸಲು ಸರ್ಕಾರದ ಅನುಮತಿ, ಅಧಿಕಾರಿಗಳ ಅನುಮತಿ, ಪೊಲೀಸರ ಅನುಮತಿ ಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಧಿಕಾರಿಗಳು ಆಡಿದ ಮಾತುಗಳನ್ನು ಮಾಧ್ಯಮದಲ್ಲಿ ಪ್ರಸಾರ ಮಾಡಿದರೆ ಪತ್ರಕರ್ತರ ಮೇಲೆ FIr ಎಂದು ಕಿಡಿ ಕಾರಿದ್ದಾರೆ.
ಹಿಂದೂಗಳ ಹಕ್ಕುಗಳ ಮೇಲೆ ನಿರ್ಬಂಧ, ಪ್ರಶ್ನಿಸುವ ಮಾಧ್ಯಮದ ಮೇಲೆ ಪ್ರಕರಣ — ಇದೇನಾ ಕಾಂಗ್ರೆಸ್ ಸರ್ಕಾರದ ‘ಜಾತ್ಯತೀತ’ ಆಡಳಿತ, ಇತ್ತೀಚೆಗೆ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿದಾಗ, ನನ್ನ ವಿರುದ್ಧ ಜಾತಿಯ ವಿಚಾರವನ್ನು ಮುಂದಿಟ್ಟಿದ್ದ ಇದೇ ಕಾಂಗ್ರೆಸ್ ಸರ್ಕಾರ ಇಂದು ಒಬ್ಬ ದಲಿತ ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಿರುವುದು ಎಷ್ಟು ಸರಿ? ದಲಿತರ ಹೆಸರಿನಲ್ಲಿ ರಾಜಕೀಯ ಬೆಳೆ ಬೇಯಿಸಲು ಯತ್ನಿಸುವ ಕಾಂಗ್ರೆಸ್ಗೆ ದಲಿತ ಪತ್ರಕರ್ತನ ಅಭಿವ್ಯಕ್ತಿ ಸ್ವಾತಂತ್ರ್ಯ ಮಾತ್ರ ಕಾಣುವುದಿಲ್ಲವೇ ಅಥವಾ ಕುರುಡನಂತೆ ನಾಟಕ ಮಾಡುತ್ತಿದೆಯೇ..??
ನಾನು ವಿರೋಧ ಪಕ್ಷದ ನಾಯಕನಾಗಿ ಸ್ಪಷ್ಟವಾಗಿ ಹೇಳುತ್ತೇನೆ. ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತಂದರೆ, ಪತ್ರಕರ್ತರನ್ನು ಬೆದರಿಸಿದರೆ, ಪ್ರಶ್ನಿಸುವ ಧ್ವನಿಯನ್ನು FIR ಮೂಲಕ ಹತ್ತಿಕ್ಕಲು ಪ್ರಯತ್ನಿಸಿದರೆ, ನಾನು ಮಾಧ್ಯಮದವರೊಂದಿಗೆ ಸದಾ ನಿಲ್ಲುತ್ತೇನೆ. ಮಾನ್ಯ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಪತ್ರಕರ್ತ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ತನಿಖೆ ನಡೆಯಲಿ. ಆದರೆ ಅಧಿಕಾರಿಗಳ ಹೇಳಿಕೆಯನ್ನು ದಾಖಲಿಸಿ ವರದಿ ಮಾಡಿದ ಕಾರಣಕ್ಕೆ ಪತ್ರಕರ್ತನನ್ನೇ ಆರೋಪಿ ಮಾಡುವ ಕ್ರಮ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಮೊದಲು ಹಿಂದೂಗಳ ಹಕ್ಕುಗಳ ಬಗ್ಗೆ ಉತ್ತರಿಸಲಿ. ನಂತರ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಉತ್ತರಿಸಲಿ. ಕೊನೆಗೆ ಸಂವಿಧಾನವನ್ನು ಗೌರವಿಸುತ್ತೀರೋ, ಅಥವಾ ಅಧಿಕಾರದ ಅಹಂಕಾರವನ್ನೇ ಸಂವಿಧಾನಕ್ಕಿಂತ ಮೇಲಿಡುತ್ತೀರೋ ಎಂಬುದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಲಿ. ಸರ್ಕಾರ ಕೂಡಲೇ ಈ ಪ್ರಕರಣದ ಬಗ್ಗೆ ಪಾರದರ್ಶಕ ತನಿಖೆ ನಡೆಸಿ, FIR ದಾಖಲಿಸಿರುವ ಆಧಾರವನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು.ಮಾಧ್ಯಮದ ಧ್ವನಿಯನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವವನ್ನು ಸದ್ದಡಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಬಾಗಲಕೋಟೆ: ಸುಳ್ಳು ಹಾಜರಾತಿ ತೋರಿಸಿದ್ದ ಪುತ್ರಿ ಡಾ.ಅಂಕಿತಾ ಯರಗಲ್ ಅವರಿಗೆ ವೇತನ ಪಾವತಿಸಿರುವ ತಂದೆ, ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ ಯರಗಲ್ ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಶಿಸ್ತು ಪ್ರಾಧಿಕಾರಿ ಮತ್ತು ಆಯುಕ್ತ ಗುರುದತ್ತ ಹೆಗಡೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕರ್ತವ್ಯ ಲೋಪ ಎಸಗಿರುವುದು, ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು, ಅಧಿಕಾರ ದುರುಪಯೋಗ ಮಾಡಿಕೊಂಡಿರುವುದರಿಂದ ಇಲಾಖೆ ವಿಚಾರಣೆ ಬಾಕಿ ಇರಿಸಿ, ತಕ್ಷಣದಿಂದ ಜಾರಿಗೆ ಬರುವಂತ ಅಮಾನತು ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿ 2025 ಮಾರ್ಚ್ನಲ್ಲಿ ರೋಗಲಕ್ಷಣಶಾಸ್ತ್ರ ವಿಭಾಗಕ್ಕೆ ಪ್ರವೇಶ ಪಡೆದಿರುವ ಡಿಎಚ್ಇ ಡಾ.ರಾಜಕುಮಾರ ಯರಗಲ್ ಅವರ ಪುತ್ರಿ ಡಾ.ಅಂಕಿತಾ ಯರಗಲ್ ತರಗತಿಗೆ ಹಾಜರಾಗುತ್ತಿದ್ದಾರೆ. ಇನ್ನೊಂದೆಡೆ ಮಾರ್ಚ್ನಿಂದ ಜುಲೈವರೆಗೆ ‘ನಮ್ಮ ಕ್ಲಿನಿಕ್’ನಲ್ಲಿಯೂ ಹಾಜರಾತಿ ಹಾಕಿ ಪ್ರತಿ ತಿಂಗಳು ₹75 ಸಾವಿರ ವೇತನ ಪಡೆದಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಸೆ.12ರಂದು ‘ಎರಡು ಕಡೆ ಹಾಜರಾತಿ: ವೇತನ ಪಾವತಿ’ ಕುರಿತು ವಿಶೇಷ ವರದಿ ಪ್ರಕಟವಾಗಿತ್ತು.
ಜಿಲ್ಲಾ ಪಂಚಾಯಿತಿ ಸಿಇಒ ಸೂಚನೆ ಮೇರೆಗೆ ಡಿಎಚ್ಒ ರಾಜಕುಮಾರ ಯರಗಲ್, ಡಾ.ಅಂಕಿತಾ ಯರಗಲ್ ಅವರು, ನಮ್ಮ ಕ್ಲಿನಿಕ್ನ ಕರ್ತವ್ಯದಿಂದ ಬಿಡುಗಡೆ ಮಾಡಿದ್ದರು.
ಬೆಂಗಳೂರು: ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದು, ಅನುಷ್ಠಾನದಲ್ಲಿ ಸಂಪೂರ್ಣ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು (ಸೆಪ್ಟೆಂಬರ್ 17) ಯುವ ಕಾಂಗ್ರೆಸ್ 'ವಿಶ್ವ ನಿರುದ್ಯೋಗ ದಿನ'ವನ್ನಾಗಿ ಆಚರಿಸುತ್ತಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ತಿಳಿಸಿದರು.
ನಗರದ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಮೆಲೋಡಿ ಚಾಕೋಲೇಟ್ ವಿತರಿಸುವ ಮೂಲಕ ಮೋದಿಯವರ ಜನ್ಮದಿನವನ್ನು ಆಚರಿಸಲಾಯಿತು. ಈ ವೇಳೆ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರು ಮೋದಿಯವರಿಗೆ ವಿಡಂಬನಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ಕೋರುವ ಪೋಸ್ಟರ್ ಹಾಗೂ ಬ್ಯಾನರ್ ಗಳನ್ನು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಮಂಜುನಾಥ್ ಗೌಡ, ‘ಉದ್ಯೋಗಕ್ಕಾಗಿ ವರ್ಷಗಟ್ಟಲೆ ತಯಾರಿ ನಡೆಸುವ ಯುವಕರು ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನೇಮಕಾತಿ ವಿಳಂಬದಿಂದ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಯುವಕರ ಕೈಗೆ ಉದ್ಯೋಗ ನೀಡಲಾಗದ ಸರ್ಕಾರ ದೇಶದ ಭವಿಷ್ಯವನ್ನು ಹೇಗೆ ಕಟ್ಟುತ್ತದೆ?. ನಿರುದ್ಯೋಗದ ಹೆಚ್ಚಳಕ್ಕೆ ಕಾರಣವಾದ ಮೋದಿಯವರನ್ನು ಮುಂದಿನ ಪೀಳಿಗೆ ನಿರುದ್ಯೋಗದ ಪಿತಾಮಹ ಎಂದು ಕರೆಯುವುದು ನಿಶ್ಚಿತ’ ಎಂದು ತಿಳಿಸಿದರು.
‘ನೀತಿ ಆಯೋಗದ ಇತ್ತೀಚಿನ Reimagining Skilling for Viksit Bharat@2047 ವರದಿ ಪ್ರಕಾರ, ದೇಶದಲ್ಲಿ 15–29 ವರ್ಷದೊಳಗಿನ ಸುಮಾರು 8.7 ಕೋಟಿ ಯುವಕರು ಶಿಕ್ಷಣ, ಉದ್ಯೋಗ ಅಥವಾ ತರಬೇತಿಯಲ್ಲಿ ತೊಡಗಿಸಿಕೊಂಡಿಲ್ಲ. ಜೊತೆಗೆ, ಕೇಂದ್ರ ಸರ್ಕಾರದ 80 ಸಚಿವಾಲಯ ಮತ್ತು ಇಲಾಖೆಗಳಲ್ಲೇ 8.23 ಲಕ್ಷಕ್ಕೂ ಹೆಚ್ಚು ಮಂಜೂರಾದ ನಾಗರಿಕ ಹುದ್ದೆಗಳು ಖಾಲಿ ಉಳಿದಿರುವುದು RTI ಮಾಹಿತಿಯಿಂದ ಬಹಿರಂಗವಾಗಿದೆ’ ಎಂದು ಮಾಹಿತಿ ನೀಡಿದರು.
ಈ ವೇಳೆ ನೆರೆದಿದ್ದ ನೂರಾರು ಯುವಕರು 'ಉದ್ಯೋಗ ಕೇಳಿದ ಯುವಕರಿಗೆ ‘ಪಕೋಡಾ’ ನೀಡಿದ ಪ್ರಧಾನಿಗೆ ಜನ್ಮದಿನದ ಶುಭಾಶಯಗಳು. ‘ಉದ್ಯೋಗ ಎಲ್ಲಿದೆ?’ ಎಂಬ ಪ್ರಶ್ನೆಗೆ 11 ವರ್ಷಗಳ 'ಮೌನ-ಮೋದಿ'ಗೆ ಶುಭಾಶಯಗಳು!', 'ನಿರುದ್ಯೋಗದ ಪಿತಾಮಹ ನರೇಂದ್ರ ಮೋದಿಗೆ ಜನ್ಮದಿನದ ಶುಭಾಶಯಗಳು!' ಎಂಬ ನಾನಾ ರೀತಿಯ ಪ್ಲೇಕಾರ್ಡ್ ಹಿಡಿದು, ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.
ಮುಂಬೈ: ಭಾರತದಲ್ಲಿ ‘ಆ್ಯಪಲ್ ಪೇ’ ಪಾವತಿ ಸೇವೆಯನ್ನು ಆರಂಭಿಸಲು ಆ್ಯಪಲ್ ಸಿದ್ಧತೆ ನಡೆಸಿದ್ದು, ಮೊದಲ ಹಂತದಲ್ಲಿ ಆ್ಯಕ್ಸಿಸ್ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ಗಳಿಗೆ ಈ ಸೇವೆ ಲಭ್ಯವಾಗಲಿದೆ ಎಂದು ಈ ಬಗ್ಗೆ ಮಾಹಿತಿ ಇರುವ ಮೂರು ಮೂಲಗಳು ತಿಳಿಸಿದ್ದಾಗಿ ‘ರಾಯಿಟರ್ಸ್’ ವರದಿ ಮಾಡಿದೆ.
ಹೊಸ ಸರಣಿಯ ಆ್ಯಪಲ್ ಬಿಡುಗಡೆಗೂ ಮೊದಲು ಐಫೋನ್ 17ರ ಬೆಲೆ ಇಳಿಕೆ!ಮುಂದಿನ ತಿಂಗಳಲ್ಲೇ ಸೇವೆ ಆರಂಭವಾಗುವ ಸಾಧ್ಯತೆಯಿದ್ದು, ಆರಂಭದಲ್ಲಿ ಒಂದು ಪ್ರಮುಖ ಬ್ಯಾಂಕ್ನೊಂದಿಗೆ ಮಾತ್ರ ಆ್ಯಪಲ್ ಒಪ್ಪಂದ ಮಾಡಿಕೊಳ್ಳಲಿದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತಕ್ಕೆ ಕಾಲಿಡುವದು ಆ್ಯಪಲ್ ಪಾಲಿಗೆ ಮಹತ್ವದ ಹೆಜ್ಜೆಯಾಗಲಿದೆ. ಪ್ರಪಂದ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತದಲ್ಲಿ ಇದುವರೆಗೆ ಆ್ಯಪಲ್ ಪೇ ಸೇವೆ ಲಭ್ಯವಿರಲಿಲ್ಲ.
ದೇಶದ ನಾಲ್ಕನೇ ಅತಿದೊಡ್ಡ ಕ್ರೆಡಿಟ್ ಕಾರ್ಡ್ ವಿತರಕನಾಗಿರುವ ಮುಂಬೈ ಮೂಲದ ಆ್ಯಕ್ಸಿಸ್ ಬ್ಯಾಂಕ್ ನೊಂದಿಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಜುಲೈನಲ್ಲಿ ಬ್ಯಾಂಕ್ನ ಸಕ್ರಿಯ ಕ್ರೆಡಿಟ್ ಕಾರ್ಡ್ಗಳ ಸಂಖ್ಯೆ 1.626 ಕೋಟಿ ಇತ್ತು. ಎಚ್ಡಿಎಫ್ಸಿ ಬ್ಯಾಂಕ್, ಎಸ್ಬಿಐ ಕಾರ್ಡ್ಸ್ ಮತ್ತು ಐಸಿಐಸಿಐ ಬ್ಯಾಂಕ್ ಇದಕ್ಕಿಂತ ಮುಂದಿವೆ.
ಆ್ಯಪಲ್: ಐಫೋನ್ ಹೊರತುಪಡಿಸಿ ಬಹುತೇಕ ಉತ್ಪನ್ನಗಳ ಬೆಲೆ ಭಾರಿ ಏರಿಕೆಆ್ಯಪಲ್ ಪೇ ಸೇವೆಯನ್ನು ವಿಸ್ತರಿಸಲು ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಜತೆಗೂ ಆ್ಯಪಲ್ ಮಾತುಕತೆ ನಡೆಸಿದೆ. ಆದರೆ ಒಪ್ಪಂದ ಇನ್ನೂ ಅಂತಿಮವಾಗಿಲ್ಲ ಮೂಲಗಳು ತಿಳಿಸಿವೆ. ಈ ಮಾತುಕತೆಗಳು ಖಾಸಗಿಯಾಗಿರುವುದರಿಂದ ಮೂಲಗಳು ಹೆಸರು ಬಹಿರಂಗಪಡಿಸಲು ನಿರಾಕರಿಸಿವೆ.
ಆ್ಯಪಲ್ ಪೇ ಮೂಲಕ ಐಫೋನ್ ಬಳಕೆದಾರರು ಯಾವುದೇ ಪ್ರತ್ಯೇಕ ಆ್ಯಪ್ ಇಲ್ಲದೆ, ಫೋನ್ನಲ್ಲಿ ಸುರಕ್ಷಿತವಾಗಿ ಸಂಗ್ರಹವಾಗಿರುವ ಕಾರ್ಡ್ ವಿವರಗಳನ್ನು ಬಳಸಿಕೊಂಡು ಟ್ಯಾಪ್ ಮಾಡಿ ಪಾವತಿ ಮಾಡಬಹುದು.
ಭಾರತದಲ್ಲಿ ಆ್ಯಪಲ್ ಪೇ ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸಲು ಆ್ಯಪಲ್ ಯೋಜಿಸಿದೆ. ಇತರ ದೇಶಗಳಲ್ಲಿನ ಮಾದರಿಯಂತೆ, ಪ್ರತಿ ಬ್ಯಾಂಕ್ನೊಂದಿಗೆ ಪ್ರತ್ಯೇಕ ಒಪ್ಪಂದ ಮಾಡಿಕೊಂಡು ಮುಂದಿನ ದಿನಗಳಲ್ಲಿ ಹೆಚ್ಚಿನ ಬ್ಯಾಂಕ್ಗಳನ್ನು ಸೇವೆಗೆ ಸೇರಿಸಿಕೊಳ್ಳಲಿದೆ ಎಂದು ಮೂಲವೊಂದು ತಿಳಿಸಿದೆ.
ಆಧಾರ: ರಾಯಿಟರ್ಸ್
ಟಿಮ್ ಕುಕ್ ಮುಂದಾಳತ್ವದಲ್ಲಿ ಗಮನಾರ್ಹ ಸಾಧನೆ ಕಂಡ ಆ್ಯಪಲ್ತುಮಕೂರು: ‘ಡಿ.ಕೆ.ಶಿವಕುಮಾರ್ ಒಕ್ಕಲಿಗರ ಲೀಡರ್ ಅಂತ ತಾನೇ ಕಾಂಗ್ರೆಸ್ ಪಕ್ಷ ಅವರನ್ನು ಮುಖ್ಯಮಂತ್ರಿ ಮಾಡಿರೋದು’ ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
‘ಡಿಕೆಶಿ ನೋಡಿ ಒಕ್ಕಲಿಗರೆಲ್ಲಾ ಕಾಂಗ್ರೆಸ್ಗೆ ಮತ ಹಾಕಲ್ಲ. ಅವರು ಈಗ ಸಿಎಂ ಆಗಿರುವ ಕಾರಣಕ್ಕೆ ಶೇ 5ರಷ್ಟು ಒಕ್ಕಲಿಗರ ಮತಗಳು ಕಾಂಗ್ರೆಸ್ಗೆ ಬರಬಹುದು. ಅದರಿಂದ ಪಕ್ಷ ಗೆಲ್ಲಬೇಕಲ್ಲ’ ಎಂದು ಅವರು ಈಚೆಗೆ ನೀಡಿದ್ದ ಹೇಳಿಕೆ ಕುರಿತಾಗಿ ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪಿಎಲ್ಡಿ ಬ್ಯಾಂಕ್ಗೆ ನಷ್ಟ, ಸಾಲ ಪಾವತಿಗೆ ರಾಜಣ್ಣ ಮನವಿ‘ಡಿ.ಕೆ.ಶಿವಕುಮಾರ್ ಒಂದು ಪ್ರಬಲ ಕೋಮಿನ ನಾಯಕ ಎಂದು ಭಾವಿಸಿ ಕಾಂಗ್ರೆಸ್ ಅವರನ್ನು ಸಿಎಂ ಮಾಡಿದೆ. ಅವರು ನಾಯಕರು ಅಂತ ಜನರು ಒಪ್ಪುತ್ತಾರೋ ಬಿಡುತ್ತಾರೋ ಎಂಬುದು ಚುನಾವಣೆ ನಡೆದಾಗ ತಾನೇ ಗೊತ್ತಾಗುವುದು’ ಎಂದು ವ್ಯಂಗ್ಯಮಿಶ್ರಿತ ಧ್ವನಿಯಲ್ಲಿ ಪ್ರಶ್ನಿಸಿದರು.
‘ಸಿದ್ದರಾಮಯ್ಯ ಅವರಿಂದ ಈಗ ಕಾಂಗ್ರೆಸ್ಗೆ ಮತಗಳು ಬರಲ್ಲ ರೀ... ಈಗ ಎಲ್ಲಾ ಡಿ.ಕೆ.ಶಿವಕುಮಾರ್ ಅವರದ್ದೇ. ಸಿದ್ದರಾಮಯ್ಯ ಸಿಎಂ ಇದ್ದಾಗ ಕುರುಬರೆಲ್ಲರೂ ಕಾಂಗ್ರೆಸ್ಗೆ ಮತ ಹಾಕಿಲ್ಲವೇ? ಅದೇರೀತಿ, ಈಗ ಡಿಕೆಶಿ ಸಿಎಂ ಆಗಿದ್ದು ಒಕ್ಕಲಿಗರೆಲ್ಲರೂ ಕಾಂಗ್ರೆಸ್ಗೆ ಮತ ಹಾಕುತ್ತಾರೆ’ ಎಂದರು.
‘ನನ್ನ ಮಾತು ಎಷ್ಟು ನಡೆಯುತ್ತೆ, ಎಷ್ಟು ನಡೆಯಲ್ಲ ಗೊತ್ತು’ ಎಂಬ ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಸಿದ್ದರಾಮಯ್ಯ ಅವರ ಯಾವ ಮಾತು ನಡೆದಿದ್ಯೋ, ಇಲ್ಲವೋ ಅನ್ನೋದನ್ನು ಅವರೇ ಹೇಳಲು ಶಕ್ತರು’ ಎಂದರು.
ಸುರ್ಜೇವಾಲಾ ಭೇಟಿಯಾದ ರಾಜಣ್ಣ‘ಸಿದ್ದರಾಮಯ್ಯ ಅವರು ಅಹಿಂದ ಪ್ರಶ್ನಾತೀತ ನಾಯಕ. ಅವರು ಪಕ್ಷದಲ್ಲಿ ಸಕ್ರಿಯವಾಗಿರುತ್ತಾರೆ. ಅಪೆಕ್ಸ್ ಬ್ಯಾಂಕ್ಗೆ ನನ್ನನ್ನು ಅಧ್ಯಕ್ಷ ಮಾಡಲು ಅವರು ಪ್ರಯತ್ನ ಪಟ್ಟಿದ್ದರು. ಅವರ ಪ್ರಯತ್ನಕ್ಕೆ ಫಲ ಸಿಕ್ಕಲಿಲ್ಲ. ಈ ಒಂದು ಕಾರಣ ಇಟ್ಟುಕೊಂಡು ಅವರ ಮಾತು ಪಕ್ಷದಲ್ಲಿ ನಡೆಯುವುದಿಲ್ಲ ಎನ್ನುವುದು ಸರಿಯಲ್ಲ’ ಎಂದರು.
ಮಹಿಳಾ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಯಾವುದೂ ದೊಡ್ಡದಲ್ಲ. ನನಗಿರುವ ಮಾಹಿತಿ ಪ್ರಕಾರ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗುತ್ತದೆ. ನಾನು ಮಹಿಳಾ ಮೀಸಲಾತಿ ಪರ ಇದ್ದೇನೆ’ ಎಂದರು.
ನಾಗೇಂದ್ರ 2ನೇ ಬಾರಿ ಬಲಿಪಶು: ಶಾಸಕ ಕೆ.ಎನ್. ರಾಜಣ್ಣ
ಕಲಬುರಗಿಯ ಹೈಕೋರ್ಟ್ ವೃತ್ತದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ 9 ಅಡಿ ಎತ್ತರದ ಮೂರ್ತಿಯನ್ನು ಅಭಿಮಾನಿಗಳು ರಾತ್ರೋರಾತ್ರಿ ಪ್ರತಿಷ್ಠಾಪಿಸಿದ್ದಾರೆ.
ಹೈಕೋರ್ಟ್ ಕ್ರಾಸ್ ಬಳಿ, ಈ ಹಿಂದೆ 'ಸಿದ್ದರಾಮಯ್ಯ ವೃತ್ತ' ಎಂದು ಹೆಸರಿಸಲಾದ ಸ್ಥಳದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಯಾವುದೇ ಕಾನೂನುಬದ್ಧ ಅನುಮತಿ ಪಡೆಯದೆ ಈ ಪ್ರತಿಮೆ ಸ್ಥಾಪಿಸಲಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು, ಬಿಗಿ ಪೊಲೀಸ್ ಬಂದೋಬಸ್ತ್ನೊಂದಿಗೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಪ್ರತಿಮೆ ತೆರವುಗೊಳಿಸಿದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಪಾಲಿಕೆಯ ಅನುಮತಿಯಿಲ್ಲದೆ ಯಾರೂ ಪ್ರತಿಮೆಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ;
ಸಿದ್ದರಾಮಯ್ಯನವರೇ ಆದರೂ ಇಂತಹ ಚಟುವಟಿಕೆಗಳನ್ನು ಒಪ್ಪುವುದಿಲ್ಲ ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ‘ವಿಶ್ವ ನಿರುದ್ಯೋಗ ದಿನ’ವಾಗಿ ಆಚರಿಸಿ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದು ಟೀಕಿಸಿದೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಯುವ ಕಾಂಗ್ರೆಸ್ ಮುಖಂಡರು, ಈ ಆಚರಣೆಯ ಅಂಗವಾಗಿ ‘ಮೆಲೋಡಿ’ ಚಾಕೊಲೇಟ್ಗಳನ್ನು ಹಂಚಿದರು. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಪ್ರಧಾನಿಯನ್ನು ಗುರಿಯಾಗಿಸಿಕೊಂಡ ವ್ಯಂಗ್ಯಾತ್ಮಕ ಹುಟ್ಟುಹಬ್ಬದ ಸಂದೇಶಗಳಿರುವ ಪೋಸ್ಟರ್ಗಳು ಮತ್ತು ಬ್ಯಾನರ್ಗಳನ್ನು ಬಿಡುಗಡೆ ಮಾಡಿದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ, ಉದ್ಯೋಗಕ್ಕಾಗಿ ಹಲವು ವರ್ಷಗಳಿಂದ ಸಿದ್ಧತೆ ನಡೆಸುತ್ತಿರುವ ಯುವಕರು ಪರೀಕ್ಷಾ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ನೇಮಕಾತಿ ವಿಳಂಬದಿಂದಾಗಿ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ‘ವಿಶ್ವ ನಿರುದ್ಯೋಗ ದಿನ’ವಾಗಿ ಆಚರಿಸಿ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದು ಟೀಕಿಸಿದೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಯುವ ಕಾಂಗ್ರೆಸ್ ಮುಖಂಡರು, ಈ ಆಚರಣೆಯ… pic.twitter.com/twHfWHkqPR
ಯುವಕರಿಗೆ ಉದ್ಯೋಗ ಕಲ್ಪಿಸಲು ಸಾಧ್ಯವಾಗದ ಸರ್ಕಾರ ದೇಶದ ಭವಿಷ್ಯವನ್ನು ಹೇಗೆ ನಿರ್ಮಿಸುತ್ತದೆ, ನಿರುದ್ಯೋಗ ಹೆಚ್ಚಳಕ್ಕೆ ಕಾರಣವಾದ ನರೇಂದ್ರ ಮೋದಿಯವರನ್ನು ಮುಂದಿನ ಪೀಳಿಗೆ ‘ನಿರುದ್ಯೋಗದ ಪಿತಾಮಹ’ ಎಂದು ಕರೆಯುವುದು ಖಚಿತ ಎಂದು ಅವರು ಹೇಳಿದರು.
ನೀತಿ ಆಯೋಗದ ಇತ್ತೀಚಿನ ‘Reimagining Skilling for Viksit Bharat@2047’ ವರದಿಯನ್ನು ಉಲ್ಲೇಖಿಸಿದ ಅವರು, 15ರಿಂದ 29 ವರ್ಷ ವಯಸ್ಸಿನ ಸುಮಾರು 8.7 ಕೋಟಿ ಯುವಕರು ಶಿಕ್ಷಣ, ಉದ್ಯೋಗ ಅಥವಾ ತರಬೇತಿಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ವರದಿ ತಿಳಿಸಿದೆ ಎಂದರು.
ಕೇಂದ್ರ ಸರ್ಕಾರದ 80 ಸಚಿವಾಲಯಗಳು ಮತ್ತು ಇಲಾಖೆಗಳ ವ್ಯಾಪ್ತಿಯಲ್ಲಿ ಮಂಜೂರಾಗಿರುವ 8.23 ಲಕ್ಷಕ್ಕೂ ಅಧಿಕ ನಾಗರಿಕ ಹುದ್ದೆಗಳು ಖಾಲಿ ಉಳಿದಿವೆ ಎಂಬ ಆರ್ಟಿಐ ಮಾಹಿತಿಯನ್ನೂ ಅವರು ಉಲ್ಲೇಖಿಸಿದರು.
'PayTM ಅಂದ್ರೆ ಪೇ ಟು ಮೋದಿ ಎಂದರ್ಥ; 10 ವರ್ಷದ ಹಿಂದೆಯೇ ರಾಹುಲ್ ಗಾಂಧಿ ಎಚ್ಚರಿಸಿದ್ದರು'ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. “ಉದ್ಯೋಗ ಕೇಳಿದ ಯುವಕರಿಗೆ ‘ಪಕೋಡಾ’ ನೀಡಿದ ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯಗಳು!”, “11 ವರ್ಷಗಳಿಂದ ‘ಉದ್ಯೋಗ ಎಲ್ಲಿದೆ?’ ಎಂಬ ಪ್ರಶ್ನೆಗೆ ಮೌನವಾಗಿರುವ ‘ಮೌನ ಮೋದಿ’ಗೆ ಹುಟ್ಟುಹಬ್ಬದ ಶುಭಾಶಯಗಳು!” ಹಾಗೂ “ನಿರುದ್ಯೋಗದ ಪಿತಾಮಹ ನರೇಂದ್ರ ಮೋದಿಗೆ ಹುಟ್ಟುಹಬ್ಬದ ಶುಭಾಶಯಗಳು!” ಎಂಬ ಘೋಷಣೆಗಳನ್ನು ಕೂಗಿದರು.
ಬೆಂಗಳೂರು, ಸೆಪ್ಟೆಂಬರ್ 18: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳ ಪುನರ್ವಸತಿ ಮತ್ತು ಕೌಶಲ್ಯಾಭಿವೃದ್ಧಿಗಾಗಿ ಕರ್ನಾಟಕ ಕಾರಾಗೃಹ ಇಲಾಖೆಯು ಪರಪ್ಪನ ಅಗ್ರಹಾರ ಜೈಲಿನಲ್ಲಿ ನವ ಸಂಕಲ್ಪ ಬೇಕರಿ ಆರಂಭಿಸಿದ್ದು, ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಇದರ ಲೋಕಾರ್ಪಣೆ ನೆರವೇರಿಸಿದ್ದಾರೆ. ಇದೇ ವೇಳೆ ನವ ಸಂಕಲ್ಪ ಬೇಕರಿ ಆನ್ ವೀಲ್ಸ್ಗೂ ಚಾಲನೆ ನೀಡಲಾಗಿದೆ. ಹೊಸ ಸಜಾ ಬಂಧಿಗಳಿಗೆ ಬೇಕರಿ ಉತ್ಪನ್ನ ತಯಾರಿಕೆ ತರಬೇತಿ ನೀಡಲಾಗಿದ್ದು, ತರಬೇತಿ ಪೂರ್ಣಗೊಳಿಸಿದ ಬಂಧಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವೂ ನಡೆದಿದೆ.
ಬೆಂಗಳೂರು ವಿವಿಧ ನ್ಯಾಯಾಲಯಗಳ ಆವರಣ, ಬಸ್ ನಿಲ್ದಾಣಗಳಲ್ಲಿ ಬೇಕರಿ ಆನ್ ವೀಲ್ಸ್ ಮೂಲಕ ಬೇಕರಿ ಉತ್ಪನ್ನಗಳ ಮಾರಾಟಕ್ಕೆ ನಿರ್ಧರಿಸಲಾಗಿದ್ದು, ಆ ಮೂಲಕ ಆದಾಯ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಜೈಲಿನಿಂದ ರಿಲೀಸ್ ಬಳಿಕವೂ ಬಂಧಿಗಳು ಸ್ವಾವಲಂಬಿ ಜೀವನ ನಡೆಸಲು ಇದು ಸಹಾಯ ಆಗಲಿದೆ. 2026ರ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ನಡೆದ ಮುಖ್ಯ ಸಮಾರಂಭದಲ್ಲಿ, ರಾಜ್ಯಪಾಲರು ಸೇರಿದಂತೆ ಹಲವು ಗಣ್ಯರಿಗೆ ಕೈದಿಗಳು ತಯಾರಿಸಿದ ತಿಂಡಿ-ತಿನಿಸುಗಳನ್ನು ಉಪಹಾರವಾಗಿ ಉಣಬಡಿಸಲಾಗಿತ್ತು.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಮೊಬೈಲ್ 1 ಲಕ್ಷ ರೂ.ಗೆ ಸೇಲ್
Rebuilding lives & giving hope for the future must be at the core of Prison & Correctional Administration
New Bakery unit and Bakery on wheels takes off at Bangalore Central Prison . Thnx for all assistance HCL E -Haat . Well done Team Anshu Kumar,IPS @ BCP
Still long way to go pic.twitter.com/dBonXheswZ
— alok kumar (@alokkumar6994) September 18, 2026
ನವ ಸಂಕಲ್ಪ ಬೇಕರಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಂಚಿಕೊಂಡಿರುವ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಹೊಸ ಬೇಕರಿ ಘಟಕ ಹಾಗೂ ‘ಬೇಕರಿ ಆನ್ ವೀಲ್ಸ್’ ಸೇವೆಗೆ ಚಾಲನೆ ನೀಡಲಾಗಿದೆ. ಇದಕ್ಕೆ ಅಗತ್ಯ ಸಹಕಾರ ನೀಡಿದ HCL ಇ-ಹಾಟ್ಗೆ ಧನ್ಯವಾದಗಳು. ಐಪಿಎಸ್ ಅಧಿಕಾರಿ ಅನುಶ್ ಕುಮಾರ್ ಹಾಗೂ ಬೆಂಗಳೂರು ಕೇಂದ್ರ ಕಾರಾಗೃಹದ ಇಡೀ ತಂಡಕ್ಕೆ ಅಭಿನಂದನೆಗಳು. ಇನ್ನೂ ಬಹಳ ದೂರ ಸಾಗಬೇಕಿದೆ ಎಂದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಸಿಗಡಿ ಪ್ರಿಯರಿಗೆ ಸಿಗಡಿ ಫ್ರೈ ಎಂದರೆ ಬಾಯಲ್ಲಿ ನೀರೂರಿಸುವ ಖಾದ್ಯ. ಖಾರ, ಮಸಾಲೆ ಹಾಗೂ ಈರುಳ್ಳಿಯ ಸುವಾಸನೆಯೊಂದಿಗೆ ಗರಿಗರಿಯಾಗಿ ತಯಾರಿಸುವ ಸಿಗಡಿ ಫ್ರೈ ಅನ್ನದ ಜೊತೆ ಮಾತ್ರವಲ್ಲದೆ ರೊಟ್ಟಿ, ಚಪಾತಿಯೊಂದಿಗೂ ಸವಿಯಲು ರುಚಿಕರವಾಗಿರುತ್ತದೆ. ಮನೆಯಲ್ಲೇ ಕಡಿಮೆ ಸಮಯದಲ್ಲಿ ಸರಳವಾಗಿ ತಯಾರಿಸಬಹುದಾದ ಈ ಸಿಗಡಿ ಫ್ರೈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು...
ಸಿಗಡಿ – 500 ಗ್ರಾಂ
ಈರುಳ್ಳಿ – 2
ಹಸಿಮೆಣಸಿನಕಾಯಿ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಖಾರದ ಪುಡಿ – 1½ ಚಮಚ
ಅರಿಶಿಣ – ½ ಚಮಚ
ದನಿಯಾ ಪುಡಿ – 1 ಚಮಚ
ಜೀರಿಗೆ ಪುಡಿ – ½ ಚಮಚ
ಗರಂ ಮಸಾಲೆ – ½ ಚಮಚ
ನಿಂಬೆ ರಸ – 1 ಚಮಚ
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2–3 ಚಮಚ
ಮಾಡುವ ವಿಧಾನ...
ಮೊದಲಿಗೆ ಸಿಗಡಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ ನೀರಿನಲ್ಲಿ ತೊಳೆದು, ನೀರು ಸಂಪೂರ್ಣವಾಗಿ ಬಸಿದುಕೊಳ್ಳಿ. ಸಿಗಡಿಗೆ ಅರಿಶಿಣ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಇದನ್ನು ಸುಮಾರು 15 ನಿಮಿಷಗಳ ಕಾಲ ನೆನೆಯಲು ಬಿಡಿ.
ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ.
ನಂತರ ಮಸಾಲೆ ಹಚ್ಚಿದ ಸಿಗಡಿಯನ್ನು ಬಾಣಲೆಗೆ ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಸಿಗಡಿಯಿಂದ ನೀರು ಹೊರಬಂದರೆ ಅದು ಆವಿಯಾಗುವವರೆಗೆ ಹುರಿಯಿರಿ. ಬಳಿಕ ಗರಂ ಮಸಾಲೆ ಪುಡಿ ಸೇರಿಸಿ ಚೆನ್ನಾಗಿ ಕಲಸಿ.
ಸಿಗಡಿ ಚೆನ್ನಾಗಿ ಬೆಂದು ಮಸಾಲೆ ಸಿಗಡಿಗೆ ಅಂಟಿಕೊಂಡು ಸ್ವಲ್ಪ ಗರಿಗರಿಯಾಗುವವರೆಗೆ 5–7 ನಿಮಿಷಗಳ ಕಾಲ ಹುರಿಯಿರಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನಿಂಬೆ ರಸ ಹಾಕಿ ಕಲಸಿ. ಇದೀಗ ರುಚಿಯಾದ ಸಿಗಡಿ ಫ್ರೈ ಸವಿಯಲು ಸಿದ್ಧ.
ಟಿಪ್ಸ್...
ಸಿಗಡಿಯನ್ನು ಹೆಚ್ಚಿನ ಉರಿಯಲ್ಲಿ ಬೇಯಿಸಿದರೆ ಗಟ್ಟಿಯಾಗಬಹುದು. ಆದ್ದರಿಂದ ಮಧ್ಯಮ ಉರಿಯಲ್ಲಿ ಬೇಯಿಸಿ, ಸಿಗಡಿ ಬಣ್ಣ ಬದಲಾಗಿ ಚೆನ್ನಾಗಿ ಬೇಯುತ್ತಿದ್ದಂತೆ ಉರಿಯನ್ನು ಆರಿಸುವುದು ಉತ್ತಮ.
ವಾಷಿಂಗ್ಟನ್ (ಅಮೆರಿಕ): ತಾನು ಮಾಡಿದರೆ ಸಂಸಾರ, ಬೇರೆಯವರು ಮಾಡಿದರೆ ವ್ಯಭಿಚಾರ ಎಂಬಂತೆ ವರ್ತಿಸುವುದು ಅಮೆರಿಕಕ್ಕೆ ಹೊಸದೇನಲ್ಲ. ಅದರಂತೆ, ರಷ್ಯಾ ವಿಚಾರದಲ್ಲಿಯೂ ಅಮೆರಿಕದ ಈ ಕಪಟ ಬುದ್ದಿ ಮತ್ತೆ ಜಗ್ಗಜಾಹೀರಾಗಿದೆ. ಒಂದೆಡೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಇತರ ದೇಶಗಳ ವಿರುದ್ಧ ಕಠಿಣ ಆರ್ಥಿಕ ಕ್ರಮ ಕೈಗೊಳ್ಳಲು ಮುಂದಾಗಿರುವ ಅಮೆರಿಕ, ಮತ್ತೊಂದೆಡೆ ತನ್ನ ಸ್ವಂತ ಪರಮಾಣು ರಿಯಾಕ್ಟರ್ಗಳ ಅಗತ್ಯಕ್ಕಾಗಿ ರಷ್ಯಾದಿಂದ ಯುರೇನಿಯಂ ಆಮದು ಮಾಡಿಕೊಳ್ಳಲು ಮಾತ್ರ ರಹಸ್ಯವಾಗಿ ವಿನಾಯಿತಿ ನೀಡಿದೆ. ಈ ಮೂಲಕ ಇಡೀ ಜಗತ್ತಿಗೆ ನೀತಿಯ ಪಾಠ ಹೇಳಿ, ತನ್ನ ಸ್ವಾರ್ಥಕ್ಕಾಗಿ ನಿಯಮಗಳನ್ನೇ ಗಾಳಿಗೆ ತೂರಿದ ಅಮೆರಿಕದ ಅಸಲಿ ಬೂಟಾಟಿಕೆಯು ಚರ್ಚೆಗೆ ಗ್ರಾಹಸವಾಗಿದೆ. ಆ ಕುರಿತ ವರದಿ ಇಲ್ಲಿದೆ:
ರಷ್ಯಾ ತೈಲ ಖರೀದಿದಾರರ ವಿರುದ್ಧ ಅಮೆರಿಕ ಕಠಿಣ ಕ್ರಮ
ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಇತ್ತೀಚೆಗೆ ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಅಂಡ್ ಇರಾನ್ ಆಕ್ಟ್ 2026 ಎಂಬ ಪ್ರಮುಖ ಮಸೂದೆಯನ್ನು ಅಂಗೀಕರಿಸಿದೆ. ಈ ಹೊಸ ನಿಯಮದ ಪ್ರಕಾರ, ರಷ್ಯಾದಿಂದ ಕಚ್ಚಾ ತೈಲ ಅಥವಾ ನೈಸರ್ಗಿಕ ಅನಿಲವನ್ನು ಖರೀದಿಸುವ ಅಥವಾ ರಷ್ಯಾದ ಮೇಲಿನ ನಿರ್ಬಂಧಗಳನ್ನು ತಪ್ಪಿಸಲು ಸಹಾಯ ಮಾಡುವ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷರು ಶೇಕಡಾ 100 ರಷ್ಟು ಭಾರಿ ಸುಂಕ ಅಥವಾ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಬಹುದು. ಅದರಂತೆ, ರಷ್ಯಾದಿಂದ ರಿಯಾಯಿತಿ ದರದಲ್ಲಿ ಇಂಧನ ಖರೀದಿಸುತ್ತಿರುವ ಭಾರತ ಮತ್ತು ಚೀನಾ ಸೇರಿದಂತೆ ಪ್ರಮುಖ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಈ ಮಸೂದೆಯನ್ನು ತರಲಾಗಿದೆ.
ಯುರೇನಿಯಂ ಖರೀದಿಗೆ ಅಮೆರಿಕದ 'ರಹಸ್ಯ ವಿನಾಯಿತಿ'
ಮತ್ತೊಂದೆಡೆ, ರಷ್ಯಾದ ತೈಲ ಕೊಳ್ಳುವ ಇತರ ದೇಶಗಳಿಗೆ ದಂಡ ವಿಧಿಸುವ ಇದೇ ಕಾಯ್ದೆಯಲ್ಲಿ, ಅಮೆರಿಕ ತನ್ನದೇ ಆದ ಪರಮಾಣು ಅಗತ್ಯಗಳಿಗಾಗಿ ರಷ್ಯಾದಿಂದ ಯುರೇನಿಯಂ ಖರೀದಿಸಲು ವಿಶೇಷ ವಿನಾಯಿತಿಯನ್ನು ಕಾಯ್ದಿರಿಸಿಕೊಂಡಿದೆ. ಈ ಮಸೂದೆಯ ಸೆಕ್ಷನ್ 114 ರ ಪ್ರಕಾರ, ಅಮೆರಿಕ-ರಷ್ಯಾ ನಾಗರಿಕ ಪರಮಾಣು ಸಹಕಾರ ಒಪ್ಪಂದಗಳ ಅಡಿಯಲ್ಲಿ ನಡೆಯುವ ಚಟುವಟಿಕೆಗಳಿಗೆ ಯಾವುದೇ ಕಠಿಣ ನಿರ್ಬಂಧಗಳು ಅನ್ವಯಿಸುವುದಿಲ್ಲ. ಅದರಂತೆ, ಅಮೆರಿಕದ ಪರಮಾಣು ರಿಯಾಕ್ಟರ್ಗಳಿಗೆ ಅಗತ್ಯವಿರುವ ಲೋ-ಎನ್ರಿಚ್ಡ್ ಯುರೇನಿಯಂ ಮತ್ತು ವೈದ್ಯಕೀಯ ಐಸೊಟೋಪ್ಗಳ ಆಮದಿಗೆ ವಿಶೇಷ ವಿನಾಯಿತಿ ಮತ್ತು ರಿಯಾಯಿತಿ ವ್ಯವಸ್ಥೆಗಳನ್ನು ಮುಂದುವರಿಸಲಾಗಿದೆ.
ಅಮೆರಿಕಾ ಸುಂಕ ಬೆದರಿಕೆಗೆ ಜಗ್ಗದ ಭಾರತ: 140 ಕೋಟಿ ಜನರ ಹಿತಾಸಕ್ತಿ ಮುಖ್ಯ; ಇಂಧನ ಭದ್ರತೆ ಕಾಪಾಡಲು ಅಗತ್ಯ ಕ್ರಮ ಎಂದ MEAಹಾಗಾದ್ರೆ, ಅಮೆರಿಕ ಈ ದ್ವಂದ್ವ ನೀತಿ ಅನುಸರಿಸುತ್ತಿರುವುದು ಯಾಕೆ?
ಅಮೆರಿಕವು ತನ್ನ ಒಟ್ಟು ವಿದ್ಯುತ್ ಉತ್ಪಾದನೆಯ ಸುಮಾರು ಐದನೇ ಒಂದು ಭಾಗವನ್ನು (20%) ಪರಮಾಣು ಶಕ್ತಿಯಿಂದ ಪಡೆಯುತ್ತದೆ. ಈ ಪರಮಾಣು ಸ್ಥಾವರಗಳಿಗೆ ಬೇಕಾಗುವ ಸಮೃದ್ಧ ಯುರೇನಿಯಂ ಇಂಧನಕ್ಕಾಗಿ ಅಮೆರಿಕ ಇಂದಿಗೂ ರಷ್ಯಾದ ಮೇಲೆ ಶೇಕಡಾ 20 ಕ್ಕಿಂತ ಹೆಚ್ಚು ಅವಲಂಬಿತವಾಗಿದೆ. ಅದರಲ್ಲೂ, ರಷ್ಯಾದ ಸರಕಾರಿ ಸ್ವಾಮ್ಯದ ರೊಸಾಟಮ್ ಸಂಸ್ಥೆಯನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಅಮೆರಿಕದಲ್ಲೇ ವಿದ್ಯುತ್ ಬಿಕ್ಕಟ್ಟು ಸೃಷ್ಟಿಯಾಗುವ ಆತಂಕವಿದೆ.
ಹೀಗಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ರಷ್ಯಾದ ಇಂಧನ ಪೂರೈಕೆ ಸರಪಳಿಯನ್ನು ತಕ್ಷಣವೇ ಬದಲಾಯಿಸುವುದು ಕಷ್ಟ ಎಂಬ ಕಾರಣಕ್ಕೆ ಅಮೆರಿಕ ಇತರ ದೇಶಗಳಿಗೆ ತೈಲ ನಿರ್ಬಂಧ ಹೇರುತ್ತಿದ್ದರೂ, ರಷ್ಯಾದಿಂದ ತನಗೆ ಬೇಕಾದ ಯುರೇನಿಯಂ ಹರಿವನ್ನು ಮಾತ್ರ ಸುರಕ್ಷಿತವಾಗಿ ಕಾಯ್ದುಕೊಂಡಿದೆ.
ಭಾರತ ಸೇರಿ ರಷ್ಯಾದ ಇತರ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಶೇ.100 ಸುಂಕ: ಮಸೂದೆಗೆ ಅಮೆರಿಕ ಸಂಸತ್ತು ಅನುಮೋದನೆನವದೆಹಲಿ, ಸೆಪ್ಟೆಂಬರ್ 18: ಅಂತರರಾಷ್ಟ್ರೀಯ ರೇಟಿಂಗ್ ಏಜೆನ್ಸಿ ಮೂಡೀಸ್ (Moody’s) ಭಾರತದ ಆರ್ಥಿಕತೆ ಬಗ್ಗೆ ನಿರೀಕ್ಷೆ ಹೆಚ್ಚಿಸಿಕೊಂಡಿದೆ. ಪಶ್ಚಿಮ ಏಷ್ಯಾದ ಸಂಘರ್ಷದ ಪರಿಸ್ಥಿತಿಯ ನಡುವೆಯೂ ಭಾರತದ ಆರ್ಥಿಕತೆಯು ಉತ್ತಮ ದೃಢತೆಯನ್ನು ಪ್ರದರ್ಶಿಸುತ್ತಿದೆ ಎಂದು ತಿಳಿಸಿರುವ ಅದು, ಪ್ರಸ್ತುತ ಹಣಕಾಸು ವರ್ಷದ ಭಾರತದ ಜಿಡಿಪಿ (GDP) ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 6 ರಿಂದ ಶೇ. 7 ಕ್ಕೆ ಏರಿಸಿದೆ.
ಜಾಗತಿಕ ಅಸ್ಥಿರತೆಗಳ ನಡುವೆಯೂ ಭಾರತವು ಇತರ G-20 ದೇಶಗಳಿಗಿಂತ ವೇಗವಾಗಿ ಬೆಳೆಯುತ್ತಿರುವುದನ್ನು ಮೂಡೀಸ್ ಕೊಂಡಾಡಿದೆ.
ಮೂಡೀಸ್ ಪ್ರಕಾರ ಭಾರತದ ಉತ್ತಮ ಬೆಳವಣಿಗೆಗೆ ಪ್ರಮುಖ ಕಾರಣಗಳಿವು- ಬಲವಾದ ಖಾಸಗಿ ಅನುಭೋಗ (Private consumption).
- ಸಾರ್ವಜನಿಕ ಮೂಲಭೂತ ಸೌಕರ್ಯಗಳ ಮೇಲಿನ ವೆಚ್ಚದಿಂದ ಬಲವಾದ ಬಂಡವಾಳ ರಚನೆ.
- ಖಾಸಗಿ ವಲಯದ ಹೂಡಿಕೆಯಲ್ಲಿ ಸಂಭವಿಸಲಿರುವ ಚೇತರಿಕೆ.
- ಸೇವಾ ವಲಯದಲ್ಲಿ (Services sector) ಮುಂದುವರಿದಿರುವ ಉತ್ತಮ ಪ್ರಗತಿ.
ಇದನ್ನೂ ಓದಿ: ಸೆಮಿಕಂಡಕ್ಟರ್ ಭವಿಷ್ಯ ನಿರ್ಮಿಸಲು ಹೊರಟ ಭಾರತ; 1.27 ಲಕ್ಷ ಕೋಟಿ ರೂ ವೆಚ್ಚದ ಸೆಮಿಕಾನ್ 2.0 ಚಾಲನೆ
ಮೂಡೀಸ್ನಿಂದ ಈ ಎಚ್ಚರಿಕೆಯೂ ಇದೆ..ಜಾಗತಿಕ ಇಂಧನ ಬೆಲೆಗಳ ಏರಿಕೆ ಮತ್ತು ಎಲ್ ನಿನೋ (El Niño) ಪರಿಣಾಮದಿಂದ ಉಂಟಾಗುವ ಆಹಾರ ಪದಾರ್ಥಗಳ ಬೆಲೆ ಏರಿಕೆಯು ಹಣದುಬ್ಬರ ಹಾಗೂ ಒಟ್ಟಾರೆ ಬೆಳವಣಿಗೆಗೆ ಸವಾಲಾಗಿರಬಹುದು ಎಂದು ಸಂಸ್ಥೆ ಎಚ್ಚರಿಸಿದೆ.
ಭಾರತದ ಆರ್ಥಿಕತೆಯ ಆರೋಗ್ಯಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಪೆಟ್ಟು ಹೆಚ್ಚು ತಾಕದಿರಲೆಂದು ಭಾರತವು ಇಂಧನ ಖರೀದಿ ಮೂಲಗಳನ್ನು ವಿಸ್ತಾರಗೊಳಿಸಿದೆ. ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಹೆಚ್ಚಿಸಿದೆ. ಇದರ ಜೊತೆಗೆ, ದೇಶೀಯ ಬೇಡಿಕೆಯು ಬ್ಯಾಕಪ್ ರೀತಿ ಆರ್ಥಿಕತೆಗೆ ಶಾಕ್ಗಳನ್ನು ತಡೆದುಕೊಳ್ಳಬಲ್ಲುದು.
ಇದನ್ನೂ ಓದಿ: ಭಾರತದ ಮೇಲೆ ಅಮೆರಿಕ ಶೇ. 100 ಟ್ಯಾರಿಫ್ ಹಾಕುವ ಭೀತಿ; ಬೃಹತ್ ಸುಂಕದ ತಡೆ ಬಂದರೆ ಭಾರತಕ್ಕಾಗುವ ಹಾನಿ ದೊಡ್ಡದೇ
ಅಲ್ಲದೇ, ಜಿಡಿಪಿ ಉತ್ತಮ ಬೆಳವಣಿಗೆ ಮುಂದುವರಿದಿದೆ. 2025ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಜಿಡಿಪಿ ಶೇ 7.3ರಷ್ಟು ಹೆಚ್ಚಿತ್ತು. 2026ರ ಕ್ಯಾಲೆಂಡರ್ ವರ್ಷದ ಮೊದಲ ಆರು ತಿಂಗಳು ಜಿಡಿಪಿ ಬೆಳವಣಿಗೆ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 8.2ರಷ್ಟು ಹೆಚ್ಚಿರುವುದು ಗಮನಾರ್ಹ. ಆರ್ಥಿಕತೆಯ ಇಂಥ ಕೆಲ ಪ್ರಮುಖ ಸಕಾರಾತ್ಮಕ ಅಂಶಗಳು ಮೂಡೀಸ್ನ ನಿರೀಕ್ಷೆ ಹೆಚ್ಚಲು ಕಾರಣವಾಗಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಮನೆಯಲ್ಲಿರುವ (Home Clean) ಸ್ವಿಚ್ ಬೋರ್ಡ್ಗಳ ಮೇಲೆ ದಿನಕಳೆದಂತೆ ಧೂಳು ಮತ್ತು ಕೊಳೆ ಸಂಗ್ರಹವಾಗುವುದು ಸಾಮಾನ್ಯ. ಅದರಲ್ಲೂ ಅಡುಗೆಮನೆಯಲ್ಲಿರುವ ಸ್ವಿಚ್ ಬೋರ್ಡ್ಗಳ ಮೇಲೆ ಎಣ್ಣೆಯ ಜಿಡ್ಡು, ಹೊಗೆ ಹಾಗೂ ಧೂಳು ಸೇರಿಕೊಂಡು ಬೋರ್ಡ್ಗಳು ಕಪ್ಪಾಗಿ ಕಾಣಿಸಬಹುದು. ಎಷ್ಟೇ ಉಜ್ಜಿದರೂ ಕೆಲವು ಕಲೆಗಳು ಸುಲಭವಾಗಿ ಹೋಗುವುದಿಲ್ಲ. ಆದರೆ ಇದನ್ನು ಸ್ವಚ್ಛಗೊಳಿಸುವಾಗ ವಿದ್ಯುತ್ ಸುರಕ್ಷತೆಯ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಮುಖ್ಯ.
ಮೊದಲು ವಿದ್ಯುತ್ ಸಂಪರ್ಕ ಕಡಿತಗೊಳಿಸಿಸ್ವಿಚ್ ಬೋರ್ಡ್ ಸ್ವಚ್ಛಗೊಳಿಸುವ ಮೊದಲು ಮನೆಯ ಮುಖ್ಯ ವಿದ್ಯುತ್ ಸ್ವಿಚ್ನ್ನು ಆಫ್ ಮಾಡಬೇಕು. ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಸ್ವಚ್ಛಗೊಳಿಸುವ ಕೆಲಸ ಆರಂಭಿಸಿ. ತೇವವಾದ ಕೈಗಳಿಂದ ಸ್ವಿಚ್ ಬೋರ್ಡ್ ಮುಟ್ಟಬಾರದು. ವಿದ್ಯುತ್ ಇರುವ ಸಂದರ್ಭದಲ್ಲಿ ನೀರು ಅಥವಾ ತೇವಾಂಶ ಬಳಸುವುದು ಅಪಾಯಕಾರಿಯಾಗಬಹುದು.
ಮೊದಲು ಒಣ ಬಟ್ಟೆಯಿಂದ ಧೂಳು ತೆಗೆಯಿರಿಸ್ವಚ್ಛಗೊಳಿಸುವ ಮೊದಲ ಹಂತವಾಗಿ ಮೃದುವಾದ ಒಣ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಬೋರ್ಡ್ ಮೇಲಿರುವ ಧೂಳನ್ನು ನಿಧಾನವಾಗಿ ತೆಗೆಯಿರಿ. ಸ್ವಿಚ್ಗಳ ಅಂಚುಗಳಲ್ಲಿ ಸಿಲುಕಿರುವ ಧೂಳನ್ನು ತೆಗೆಯಲು ಮೃದುವಾದ ಪೇಂಟಿಂಗ್ ಬ್ರಷ್ನಂತಹ ಸಾಧನವನ್ನೂ ಬಳಸಬಹುದು. ಈ ಹಂತದಲ್ಲಿ ನೀರು ಅಥವಾ ಯಾವುದೇ ದ್ರವ ಕ್ಲೀನರ್ಗಳನ್ನು ನೇರವಾಗಿ ಬಳಸಬಾರದು.
ಕ್ವಿಕ್ ವೈಟ್ ಲಾಸ್ನಿಂದ ದೇಹದಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ? ಕೂದಲು, ಮುಖ, ಸ್ನಾಯುಗಳ ಮೇಲೂ ಪರಿಣಾಮ!
ಜಿಡ್ಡು ಇದ್ದರೆ ಹೊರಭಾಗ ಮಾತ್ರ ಒರೆಸಿಸ್ವಿಚ್ ಬಟನ್ಗಳ ಹೊರಭಾಗದಲ್ಲಿ ಹೆಚ್ಚು ಕೊಳೆ ಅಥವಾ ಜಿಡ್ಡು ಇದ್ದರೆ, ಬಟ್ಟೆಯನ್ನು ಸ್ವಲ್ಪ ಮಾತ್ರ ತೇವಗೊಳಿಸಿ, ಅದರಲ್ಲಿ ನೀರು ಉಳಿಯದಂತೆ ಚೆನ್ನಾಗಿ ಹಿಂಡಿ. ನಂತರ ಸ್ವಿಚ್ ಬೋರ್ಡ್ನ ಹೊರಭಾಗದ ಪ್ಲಾಸ್ಟಿಕ್ ಭಾಗವನ್ನು ಮಾತ್ರ ನಿಧಾನವಾಗಿ ಒರೆಸಬಹುದು. ಸ್ವಚ್ಛಗೊಳಿಸಿದ ತಕ್ಷಣ ಒಣ ಬಟ್ಟೆಯಿಂದ ಮತ್ತೆ ಒರೆಸಿ. ಮುಖ್ಯವಾಗಿ ನೀರಿನ ಹನಿಗಳು ಸ್ವಿಚ್ಗಳ ನಡುವಿನ ಸಂದು ಅಥವಾ ಒಳಭಾಗಕ್ಕೆ ಹೋಗದಂತೆ ಎಚ್ಚರಿಕೆ ವಹಿಸಬೇಕು.
ನೀರನ್ನು ನೇರವಾಗಿ ಸ್ಪ್ರೇ ಮಾಡಬೇಡಿಸ್ವಿಚ್ ಬೋರ್ಡ್ ಮೇಲೆ ನೇರವಾಗಿ ನೀರು ಅಥವಾ ಕ್ಲೀನಿಂಗ್ ದ್ರವವನ್ನು ಸ್ಪ್ರೇ ಮಾಡಬಾರದು. ಒದ್ದೆಯಾದ ಬಟ್ಟೆ ಅಥವಾ ಸ್ಪಾಂಜ್ನಿಂದ ಬೋರ್ಡ್ನ್ನು ಜೋರಾಗಿ ಉಜ್ಜುವುದನ್ನೂ ತಪ್ಪಿಸಬೇಕು. ಕಲೆ ತೆಗೆಯಲು ಚಾಕು, ಪಿನ್ ಅಥವಾ ಇತರ ಹರಿತವಾದ ವಸ್ತುಗಳನ್ನು ಬಳಸುವುದು ಅಪಾಯಕಾರಿ. ಇವುಗಳಿಂದ ಬೋರ್ಡ್ಗೆ ಹಾನಿಯಾಗುವುದರ ಜೊತೆಗೆ ವಿದ್ಯುತ್ ಸಂಪರ್ಕದ ಭಾಗಗಳಿಗೂ ಸಮಸ್ಯೆಯಾಗಬಹುದು.
ಸ್ವಚ್ಛಗೊಳಿಸುವ ಸಂದರ್ಭದಲ್ಲಿ ನೀರು ಅಥವಾ ತೇವಾಂಶ ಬೋರ್ಡ್ನ ಒಳಭಾಗಕ್ಕೆ ಹೋಗಿದೆ ಎಂದು ಅನುಮಾನ ಬಂದರೆ ತಕ್ಷಣ ವಿದ್ಯುತ್ ಸಂಪರ್ಕವನ್ನು ಆನ್ ಮಾಡಬಾರದು. ಎಲೆಕ್ಟ್ರಿಷಿಯನ್ರನ್ನು ಕರೆಸಿ ಬೋರ್ಡ್ನ್ನು ಪರಿಶೀಲಿಸಿದ ನಂತರವೇ ವಿದ್ಯುತ್ ಸಂಪರ್ಕ ನೀಡುವುದು ಸುರಕ್ಷಿತ. ಅದೇ ರೀತಿ ಸ್ವಿಚ್ ಬೋರ್ಡ್ನಲ್ಲಿ ಬಿರುಕು, ಸುಟ್ಟ ಗುರುತು ಅಥವಾ ಸಡಿಲ ಸಂಪರ್ಕ ಕಂಡುಬಂದರೆ ಮೊದಲು ಎಲೆಕ್ಟ್ರಿಷಿಯನ್ರಿಂದ ಸರಿಪಡಿಸಿಕೊಳ್ಳಿ ಅಥವಾ ಅಗತ್ಯವಿದ್ದರೆ ಹೊಸ ಬೋರ್ಡ್ ಅಳವಡಿಸಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಉಜ್ಜಯಿನಿ: 'ಧರ್ಮ'ವನ್ನು ಕೇವಲ "ವೃದ್ಧರಿಗೆ ಸಂಬಂಧಿಸಿದ ವಿಷಯ" ಎಂದು ಕೆಲವರು ಭಾವಿಸಿರುವ ಇಂದಿನ ಕಾಲದಲ್ಲಿ, ಯುವಜನರು (ಜೆನ್ ಝೆಡ್) ಅದರ ಬಗ್ಗೆ ಚರ್ಚಿಸುತ್ತಿರುವುದನ್ನು ಕಂಡು ತಮಗೆ ಸಂತೋಷವಾಗಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶುಕ್ರವಾರ ಹೇಳಿದರು.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ 'ಯುವ ಧರ್ಮ ಸಂಸತ್'ನಲ್ಲಿ ಸುಮಾರು 1,700 ಯುವ ವಿದ್ಯಾರ್ಥಿಗಳು ಅಥವಾ 'ಜೆನ್ ಝೆಡ್' ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ಧರ್ಮವು ನಮ್ಮ ಡಿಎನ್ಎ ಮತ್ತು ನಡವಳಿಕೆಯಲ್ಲಿ ಹಾಸುಹೊಕ್ಕಾಗಿದ್ದು, ನಮ್ಮ ಕಾರ್ಯಗಳಿಗೆ ಮಾರ್ಗದರ್ಶನ ನೀಡುತ್ತದೆ ಎಂದು ಪ್ರತಿಪಾದಿಸಿದರು.
'ಧರ್ಮ'ವನ್ನು ಮತ-ಪಂಥಗಳಿಗಿಂತಲೂ ಮಿಗಿಲಾದದ್ದು ಎಂದು ಬಣ್ಣಿಸಿದ ಅವರು; ಮತ-ಪಂಥಗಳು ಮನುಷ್ಯನನ್ನು ಬಂಧಿಸಿದರೆ, ಧರ್ಮವು ಮುಕ್ತಿಯತ್ತ ಕೊಂಡೊಯ್ಯುತ್ತದೆ ಎಂದು ಹೇಳಿದರು.
'ಧರ್ಮ'ವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಬಯಸುವವರು ತಮ್ಮ ಪೂರ್ವಗ್ರಹಪೀಡಿತ ಅಭಿಪ್ರಾಯಗಳನ್ನು ಬದಿಗಿರಿಸಬೇಕು ಎಂದು ಹೇಳಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥರು, ಯುವಜನರು ಅಂತಹ ಪೂರ್ವಗ್ರಹಗಳನ್ನು ತೊರೆಯಬೇಕು. ಅಧರ್ಮವು ಅರಣ್ಯನಾಶಕ್ಕೆ ಕಾರಣವಾಗಿದೆ ಮತ್ತು ಮಾನವ ಅಸ್ತಿತ್ವಕ್ಕೆ ಬೆದರಿಕೆಯೊಡ್ಡಿದೆ ಎಂದರು.
'ದ್ವೇಷವಲ್ಲ, ಶುದ್ಧ- ಉದಾತ್ತ ಪ್ರೀತಿಯೇ RSS ಸಂಘಟನೆಯ ಅಡಿಪಾಯ': ಯುಕೆಯಲ್ಲಿ ಮೋಹನ್ ಭಾಗವತ್ಯುವ ಧರ್ಮ ಸಂಸತ್ನಲ್ಲಿ ಸುಮಾರು 300 ವಿದ್ವಾಂಸರು, ಶಿಕ್ಷಕರು, ಸಂಶೋಧಕರು ಮತ್ತು ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸೆಪ್ಟೆಂಬರ್ 19 ರಂದು ನಡೆಯಲಿರುವ ಸಮಾರೋಪ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.
ಆಯೋಜಕರ ಪ್ರಕಾರ, ಕಾಶಿ, ಅಯೋಧ್ಯೆ, ಮಥುರಾ, ಹರಿದ್ವಾರ ಮತ್ತು ಕಾಂಚೀಪುರದಲ್ಲಿ ನಡೆದ ಕಾರ್ಯಕ್ರಮಗಳ ನಂತರ ಇದು 'ಯುವ ಧರ್ಮ ಸಂಸತ್'ನ ಆರನೇ ಆವೃತ್ತಿಯಾಗಿದೆ. ಮುಂದಿನ ವರ್ಷ ಈ ಕಾರ್ಯಕ್ರಮವು ದ್ವಾರಕಾದಲ್ಲಿ ನಡೆಯಲಿದೆ.
ಬೆಂಗಳೂರು: ನಗರದ ಹೊರವಲಯದಲ್ಲಿರುವ ದೊಡ್ಡಬಳ್ಳಾಪುರದ ಲಾಡ್ಜ್ ಒಂದರಲ್ಲಿ 21 ವರ್ಷದ ಮಹಿಳೆಯೊಬ್ಬರು ಬುಧವಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಆಕೆಯ ಪತಿಯೇ ಆಕೆಯನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮೃತ ಮಹಿಳೆಯನ್ನು ಖಾಸಗಿ ಕಂಪನಿಯೊಂದರಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ 21 ವರ್ಷದ ವಿದ್ಯಾ ಎಂದು ಗುರುತಿಸಲಾಗಿದೆ. ಆಕೆ ಮತ್ತು ಆಕೆಯ ಪತಿ, ಆನಂದ್, ಗೌರಿಬಿದನೂರಿನವರಾಗಿದ್ದರು. ಅವರಿಗೆ ಒಂದು ಮಗುವಿದೆ. ಪೊಲೀಸರ ಪ್ರಕಾರ, ಆನಂದ್ ಬುಧವಾರ ಮಧ್ಯಾಹ್ನ ದೊಡ್ಡಬಳ್ಳಾಪುರದ ಬಸವ ಭವನದ ಸಮೀಪವಿರುವ ಲಾಡ್ಜ್ಗೆ ಭೇಟಿ ನೀಡಿ, ಸಂಜೆ ಅಲ್ಲಿಂದ ಹೊರಟುಹೋಗಿದ್ದರು.
ಅಂದು ರಾತ್ರಿ ಲಾಡ್ಜ್ ಸಿಬ್ಬಂದಿ ಕೊಠಡಿಯ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅನುಮಾನಗೊಂಡ ಅವರು ನಕಲಿ ಕೀಲಿಯ ಸಹಾಯದಿಂದ ಬಾಗಿಲು ತೆರೆದಾಗ, ವಿದ್ಯಾ ಹಾಸಿಗೆಯ ಮೇಲೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಕಂಡುಬಂದಿದೆ.
ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ- ಚಾಕುವಿನಿಂದ ಇರಿದು ಕೊಲೆ; ನಾಯಿಗಳು ಭಾಗಶಃ ತಿಂದಿದ್ದ ಮೃತದೇಹ ಹೊಲದಲ್ಲಿ ಪತ್ತೆ!ವಿದ್ಯಾ ಅವರ ಗುರುತಿನ ಚೀಟಿಗೆ ಅಳವಡಿಸಿದ್ದ ಪಟ್ಟಿಯಿಂದ ಆನಂದ್ ಆಕೆಯನ್ನು ಉಸಿರುಗಟ್ಟಿಸಿ ಕೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆನಂದ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಪೊಲೀಸರ ಪ್ರಕಾರ, ಈ ದಂಪತಿ ಸಣ್ಣಪುಟ್ಟ ವಿಷಯಗಳಿಗೂ ಆಗಾಗ್ಗೆ ಜಗಳವಾಡುತ್ತಿದ್ದರು. ಜೂನ್ ತಿಂಗಳಲ್ಲಿ, ವಿದ್ಯಾ ನಾಪತ್ತೆಯಾಗಿದ್ದಾರೆ ಎಂದು ಆನಂದ್ ಸ್ಥಳೀಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪೊಲೀಸರು ಕೆಲ ದಿನಗಳ ನಂತರ ಆಕೆಯನ್ನು ಪತ್ತೆಹಚ್ಚಿ ದಂಪತಿಗೆ ಸಮಾಲೋಚನೆ ನಡೆಸಿದ್ದರು. ಆದಾಗ್ಯೂ, ದಂಪತಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ್ದರು. ವಿದ್ಯಾ ಅಪ್ರಾಪ್ತಳಾಗಿದ್ದಾಗಲೇ ಆನಂದ್ ಆಕೆಯನ್ನು ವಿವಾಹವಾಗಿದ್ದರು ಎಂಬುದು ತಿಳಿದುಬಂದ ನಂತರ, ಆತನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.
ಕಟ್ಮಂಡು, ಸೆಪ್ಟೆಂಬರ್ 18: ಮನುಷ್ಯನನ್ನು ತನಗಿಂತಲೂ ಹೆಚ್ಚಾಗಿ ಪ್ರೀತಿಸುವ ಏಕೈಕ ಜೀವಿ ನಾಯಿ. ತನ್ನ ಮಾಲೀಕನ ಮುಖದಲ್ಲಿನ ಸಣ್ಣ ನಗುವಿಗೆ ಬಾಲ ಅಲ್ಲಾಡಿಸುತ್ತಾ, ಅವರು ತೋರಿಸುವ ಪ್ರೀತಿಯ ನೆರಳಲ್ಲೇ ಬದುಕುವ ಅಂತಹ ಮೂಕ ಪ್ರಾಣಿಯೊಂದಕ್ಕೆ, ತಾನು ನಂಬಿದ ಮನುಷ್ಯರೇ ಅಷ್ಟು ಘೋರ ಸಾವಿನ ಶಿಕ್ಷೆ ವಿಧಿಸಬಹುದು ಎಂದು ಆ ಮುಗ್ಧ ಜೀವ ಕನಸಿನಲ್ಲೂ ಯೋಚಿಸಿರಲಿಕ್ಕಿಲ್ಲ.
ನೇಪಾಳದ ಬಜಂಗ್ ಜಿಲ್ಲೆಯ ಸೇತಿ ನದಿಯ ಪಂಕೋಟಕ್ ಸೇತುವೆಯ ಮೇಲೆ ಆ ದಿನ ನಡೆದದ್ದು ಕೇವಲ ಒಂದು ಅಪರಾಧವಲ್ಲ, ಬದಲಾಗಿ ಮನುಷ್ಯತ್ವಕ್ಕೇ ಬಿದ್ದ ಕಪ್ಪು ಚುಕ್ಕೆ. ಆ ಮಹಿಳೆ ಸೇತುವೆಯತ್ತ ಬರುತ್ತಿದ್ದಾಗಲೂ, ಆ ಶ್ವಾನ ಯಾವುದೇ ಪ್ರತಿರೋಧ ತೋರದೆ, ಎಂದಿನಂತೆಯೇ ಶಾಂತವಾಗಿ ಆಕೆಯ ಜೊತೆಯೇ ಹೆಜ್ಜೆ ಹಾಕಿತ್ತು. ಆದರೆ, ಆ ಸೇತುವೆಯ ಅಂಚಿನಲ್ಲಿ ನಿಂತು ತನ್ನನ್ನು ಅಷ್ಟು ಎತ್ತರದಿಂದ ರಭಸವಾಗಿ ಹರಿಯುವ ನದಿಗೆ ತಳ್ಳಲಾಗುತ್ತದೆ ಎಂದು ಆ ಜೀವಕ್ಕೆ ಹೇಗೆ ತಾನೇ ತಿಳಿದೀತು.
ಬೇಡ, ಹಾಗೆ ಮಾಡಬೇಡಿ, ಎಂದು ಪಕ್ಕದಲ್ಲಿದ್ದ ಪಶುವೈದ್ಯ ನಬಿನ್ ಪಾಂಡೆ ಅಂಗಲಾಚಿ ಬೇಡಿಕೊಂಡರೂ ಆಕೆಯ ಕಣ್ಣಿಗೆ ಕರುಣೆ ಕಾಣಿಸಲಿಲ್ಲ. ಕ್ಷಣಾರ್ಧದಲ್ಲಿ ಆ ಮೂಕ ಪ್ರಾಣಿಯನ್ನು ನೀರಿನ ರಭಸದ ಪ್ರವಾಹಕ್ಕೆ ಎಸೆದುಬಿಡಲಾಯಿತು. ಮೇಲಿಂದ ಕೆಳಕ್ಕೆ ಬೀಳುವ ಆ ನಡುಗುವ ಕ್ಷಣದಲ್ಲೂ, ಅದು ತಾನು ನಂಬಿದ ಅದೇ ಮನುಷ್ಯರನ್ನೇ ದಿಟ್ಟಿಸಿ ನೋಡುತ್ತಿತ್ತೇನೋ. ಕಲ್ಲಿನ ನಡುವೆ ಉಕ್ಕಿ ಹರಿಯುತ್ತಿದ್ದ ಪ್ರವಾಹದಲ್ಲಿ ಸ್ವಲ್ಪ ಹೊತ್ತು ಉಸಿರಾಡಲು, ಈಜಿ ದಡ ಸೇರಲು ಅದು ಹರಸಾಹಸ ಪಟ್ಟಿತು, ಕೊನೆಗೆ ರಕ್ಕಸ ನದಿಯ ಅಲೆಗಳೊಳಗೆ ಸದಾಕಾಲ ಕಣ್ಮರೆಯಾಗಿಹೋಯಿತು.
ದೀಪಾವಳಿಯ ವೇಳೆ ನಾಯಿಗಳಿಗೆ ಹೂವಿನ ಮಾಲೆಯಿಟ್ಟು, ತಿಲಕವಿಟ್ಟು ‘ಕುಕುರ್ ತಿಹಾರ್’ ಎಂದು ದೈವಿಕವಾಗಿ ಪೂಜಿಸುವ ಪವಿತ್ರ ನೆಲದಲ್ಲೇ ಈ ಕ್ರೌರ್ಯ ನಡೆದಿರುವುದು ಎದೆ ಕಲಕುವಂತಿದೆ. ಅದು ಕಚ್ಚಿತ್ತು ಎಂಬ ಒಂದೇ ಒಂದು ಒಣ ಕಾರಣಕ್ಕೆ ಒಂದು ಜೀವವನ್ನು ನದಿಗೆಸೆಯುವಷ್ಟು ಕ್ರೂರಿಗಳಾಗಿದ್ದಾರೆ.
ಮತ್ತಷ್ಟು ಓದಿ: ಜನರ ಗೋಳು ಕೇಳದ ಅಧಿಕಾರಿಗಳಿಗೆ ವಿಶಿಷ್ಟ ಪಾಠ: ನಾಸಿಕ್ ಪಾಲಿಕೆ ಅಧಿಕಾರಿ ಕಚೇರಿಯೊಳಗೆ ನಾಯಿಗಳ ಬಿಟ್ಟ ಯುವಸೇನಾ ಕಾರ್ಯಕರ್ತರು
ಸೇತುವೆಯ ಮೇಲಿಂದ ಮುಗ್ಧ ನಾಯಿಯೊಂದನ್ನು ರಭಸವಾಗಿ ಹರಿಯುವ ನದಿಗೆ ಮಹಿಳೆಯೊಬ್ಬಳು ನಿರ್ದಯವಾಗಿ ಎಸೆದಿರುವ ಕರುಳು ಹಿಂಡುವ ಆಘಾತಕಾರಿ ಘಟನೆ ನೇಪಾಳದ ಬಜಂಗ್ ಜಿಲ್ಲೆಯಲ್ಲಿ ನಡೆದಿದೆ. ಸೆಪ್ಟೆಂಬರ್ 2 ರಂದು ಜೈಪೃಥ್ವಿ ಪುರಸಭೆಯ ಚೈನ್ಪುರ ಪ್ರದೇಶದಲ್ಲಿ ನಡೆದ ಈ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜಗತ್ತಿನಾದ್ಯಂತ ಪ್ರಾಣಿಪ್ರಿಯರು ಮತ್ತು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಆರೋಪಿ ಮಹಿಳೆಯ ವಿರುದ್ಧ ತನಿಖೆ ಚುರುಕುಗೊಳಿಸಿದ್ದಾರೆ.
ವಿಡಿಯೋ
A woman was allegedly seen throwing a pet dog into the Seti River near Pankot Bridge. pic.twitter.com/YvnfDUTABU
— Ghar Ke Kalesh (@gharkekalesh) September 17, 2026
ಪಂಕೋಟಕ್ ಸೇತುವೆಯ ಮೇಲೆ ನಾಯಿಯನ್ನು ಎಳೆದುಕೊಂಡು ಬಂದ ಮಹಿಳೆ, ಸ್ಥಳೀಯರು ತಡೆಯಲು ಯತ್ನಿಸಿದರೂ ಕ್ಯಾರೆ ಎನ್ನದೆ ಅದನ್ನು ಸೇತಿ ನದಿಯ ಭೀಕರ ಪ್ರವಾಹಕ್ಕೆ ಎಸೆದಿದ್ದಾಳೆ. ಸ್ಥಳೀಯ ಜಾತ್ರೆಯ ಫೋಟೋ ತೆಗೆಯಲು ಬಂದಿದ್ದ ಪಶುವೈದ್ಯ ನಬಿನ್ ಪಾಂಡೆ ಈ ಕೃತ್ಯವನ್ನು ಕಣ್ಣಾರೆ ಕಂಡು ಮಹಿಳೆಯನ್ನು ತಡೆಯಲು ಯತ್ನಿಸಿದ್ದರು. ಆದರೆ ಆಕೆ ಕೇಳದೆ ನಾಯಿಯನ್ನು ಕೆಳಕ್ಕೆ ಎಸೆದಿದ್ದು, ನೀರಿನ ರಭಸಕ್ಕೆ ನಾಯಿ ಸ್ವಲ್ಪ ದೂರ ಕೊಚ್ಚಿಹೋಗಿ ನಂತರ ಕಣ್ಮರೆಯಾಗಿದೆ.
ಪೊಲೀಸ್ ತನಿಖೆ ಆರಂಭ: ಘಟನೆಯ ವಿಡಿಯೋ ಫೇಸ್ಬುಕ್ನಲ್ಲಿ ಹರಿದಾಡುತ್ತಿದ್ದಂತೆ ಬಜಂಗ್ ಜಿಲ್ಲಾ ಪೊಲೀಸ್ ಕಚೇರಿ ಮಾಹಿತಿ ಅಧಿಕಾರಿ ದೀಪಕ್ ಬಿಶ್ತ್ ನೇತೃತ್ವದಲ್ಲಿ ಪ್ರಕರಣದ ತನಿಖೆ ಆರಂಭವಾಗಿದ್ದು, ವಿಡಿಯೋ ಆಧರಿಸಿ ಆ ಮಹಿಳೆಯನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ನೇಪಾಳದ ದಂಡ ಸಂಹಿತೆಯ ಪ್ರಕಾರ ಪ್ರಾಣಿಗಳಿಗೆ ಕ್ರೂರವಾಗಿ ಹಿಂಸೆ ನೀಡುವುದು ಅಥವಾ ಅಮಾನವೀಯವಾಗಿ ಕೊಲ್ಲುವುದು ಶಿಕ್ಷಾರ್ಹ ಅಪರಾಧವಾಗಿದ್ದು, ದಂಡ ಮತ್ತು ಜೈಲು ಶಿಕ್ಷೆಗೆ ಅವಕಾಶವಿದೆ.
ನೇಪಾಳದಲ್ಲಿ ದೀಪಾವಳಿಯ ಸಂದರ್ಭದಲ್ಲಿ ‘ಕುಕುರ್ ತಿಹಾರ್’ ಹಬ್ಬವನ್ನು ಆಚರಿಸಿ, ನಾಯಿಗಳಿಗೆ ಹೂವಿನ ಮಾಲೆ ಹಾಕಿ ತಿಲಕವಿಟ್ಟು ಪೂಜಿಸುವ ಪವಿತ್ರ ಸಂಪ್ರದಾಯವಿದೆ. ಶ್ವಾನಗಳನ್ನು ದೈವಿಕವಾಗಿ ಕಾಣುವ ನೆಲದಲ್ಲೇ ಇಂತಹ ಕ್ರೂರ ಕೃತ್ಯ ನಡೆದಿರುವುದು ಸಾರ್ವಜನಿಕರ ಆಘಾತ ಮತ್ತು ನೋವನ್ನು ದುಪ್ಪಟ್ಟು ಮಾಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತೆಂಗಿನಕಾಯಿ ಒಡೆದ ಬಳಿಕ ಉಳಿಯುವ ಚಿಪ್ಪು. ಬಹುತೇಕ ಮನೆಗಳಲ್ಲಿ ಅದು ಕಸ. ಕೆಲವೆಡೆ ಒಲೆಗೆ ಇಂಧನ. ಆದರೆ ಕೇರಳಂನ ಯುವ ಉದ್ಯಮಿ ಮರಿಯಾ ಕುರಿಯಾಕೋಸ್ ಅವರಿಗೆ ಅದೇ ಚಿಪ್ಪಿನಲ್ಲಿ ಒಂದು ಉದ್ಯಮದ ಅವಕಾಶ ಕಂಡಿತು.
ಇಂದು ಆ ‘ಕಸ’ದಿಂದಲೇ 110ಕ್ಕೂ ಹೆಚ್ಚು ಬಗೆಯ ಉತ್ಪನ್ನಗಳನ್ನು ರೂಪಿಸುತ್ತಿರುವ ತೆಂಗಾ ಕೋಕೊ, ದೇಶೀಯ ಮಾರುಕಟ್ಟೆಯ ಜತೆಗೆ ವಿದೇಶಗಳಿಗೂ ಉತ್ಪನ್ನಗಳನ್ನು ಕಳುಹಿಸುತ್ತಿದೆ.
ಸ್ವಂತ ಉಳಿತಾಯ ₹5 ಸಾವಿರ ಹೂಡಿಕೆಯಿಂದ ಆರಂಭವಾದ ಉದ್ಯಮ ಈಗ ಸುಮಾರು ₹3.5 ಕೋಟಿ ವಾರ್ಷಿಕ ವಹಿವಾಟಿನ ಹಂತಕ್ಕೆ ಬೆಳೆದಿದೆ.
ಆದರೆ ಈ ಯಶಸ್ಸಿನ ಹಿಂದೆ ಇದ್ದದ್ದು ಒಂದು ದಿನದಲ್ಲಿ ಹೊಳೆದ ಆಲೋಚನೆಯಲ್ಲ. ಅವಕಾಶವನ್ನು ಹುಡುಕುವ ಮನಸ್ಸು, ಪ್ರಯೋಗ ಮಾಡುವ ಧೈರ್ಯ, ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮತ್ತು ಹಲವು ಬಾರಿ ಎದುರಾದ ‘ಇದು ಸಾಧ್ಯವೇ?’ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಿದ ಸುದೀರ್ಘ ಪಯಣ. ಇವುಗಳನ್ನು ಮರಿಯಾ ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.
ಏನಾದರೂ ಸಾಧಿಸಬೇಕೆಂಬ ಛಲವೇ ಉದ್ಯಮಕ್ಕೆ ದಾರಿಮರಿಯಾ ಅವರಿಗೆ ಆರಂಭದಿಂದಲೂ ತಮ್ಮದೇ ಆದ ಏನಾದರೂ ಮಾಡಬೇಕು ಎಂಬ ಆಸೆ ಇತ್ತು. ಆದರೆ ಏನು ಮಾಡಬೇಕು ಎಂಬ ಸ್ಪಷ್ಟತೆ ಇರಲಿಲ್ಲ.
ಮರಿಯಾ ಅವರ ಆರಂಭವೇ ರೋಚಕ. ಶಾಲಾ ಶಿಕ್ಷಣವನ್ನು ಕೇರಳಂನಲ್ಲಿ ಪೂರ್ಣಗೊಳಿಸಿದ ಅವರು, ನಂತರ ಮುಂಬೈನ ಸೇಂಟ್ ಝೇವಿಯರ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪದವಿ ಪಡೆದರು. ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಪಡೆದ ಅವರು ನಂತರ ಹಾರಿದ್ದು ಸ್ಪೇನ್ಗೆ. ಅಲ್ಲಿ ಎಂಬಿಎ ಪೂರ್ಣಗೊಳಿಸಿದ ಅವರು, ಮುಂಬೈಗೆ ಮರಳಿದರು. ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ನಂತರ ಸ್ಟಾರ್ಟ್ಅಪ್ನಲ್ಲಿ ದುಡಿದ ಅನುಭವ. ಕನಸನ್ನು ನನಸಾಗಿಸಲು ಮಾರಿಯಾ ಅವರಿಗೆ ಇಷ್ಟು ಸಾಕಿತ್ತು.
ಉತ್ತಮ ಶಿಕ್ಷಣ, ನಗರ ಜೀವನ, ವಿದೇಶದ ಅನುಭವ. ಮುಂದೆ ಸುಲಭವಾಗಿ ಸಾಗಬಹುದಾದ ವೃತ್ತಿಜೀವನ ಅವರ ಮುಂದಿತ್ತು. ಆದರೆ ಮಾರಿಯಾ ಅವರ ಮನಸ್ಸಿನಲ್ಲಿ ಬೇರೆ ಪ್ರಶ್ನೆ ಮೂಡಿತ್ತು. ಅದರಲ್ಲೂ ಪ್ರಕೃತಿ ಮತ್ತು ಸುಸ್ಥಿರತೆಯನ್ನು ಆಧಾರವಾಗಿಟ್ಟುಕೊಂಡು ಏನಾದರೂ ಮಾಡಬೇಕು ಎಂಬ ಆಲೋಚನೆ ಗಟ್ಟಿಯಾಯಿತು.
ಕೇರಳಂ ಎಂದರೆ ತೆಂಗು ಹಾಗೂ ತೆಂಗಿನ ಉತ್ಪನ್ನಗಳು. ಎಳನೀರು, ತೆಂಗಿನ ನಾರು, ಎಲೆ... ಹೀಗೆ ಹಲವು ಸಾಧ್ಯತೆಗಳ ಕುರಿತ ಆಲೋಚನೆಗಳು ಮಾರಿಯಾ ಅವರ ತಲೆಯಲ್ಲಿ ಹಾದುಹೋದವು. ತಾಳೆ ಎಲೆಯ ಉತ್ಪನ್ನಗಳನ್ನು ಆರಂಭಿಸಿದರು. ಇ–ಕಾಮರ್ಸ್ ವೇದಿಕೆಯಲ್ಲಿ ಮಾರಾಟ ಮಾಡಲೂ ಯತ್ನಿಸಿದ್ದರು. ಆದರೆ, ಆ ಸಂದರ್ಭದಲ್ಲೇ ಅವರ ಗಮನ ಸೆಳೆದಿದ್ದು ಮನೆಯಲ್ಲಿದ್ದ ತೆಂಗಿನ ಚಿಪ್ಪು ಮತ್ತು ಎಣ್ಣೆ ಗಿರಣಿಯಲ್ಲಿ ತ್ಯಾಜ್ಯವೆಂದು ಹಣೆಪಟ್ಟಿ ಹೊತ್ತು ತ್ಯಾಜ್ಯವಾಗಿ ಬಿದ್ದಿದ್ದ ತೆಂಗಿನ ಚಿಪ್ಪಿನ ರಾಶಿ. ಅದು ತ್ಯಾಜ್ಯವಾಗಿ ಕಾಣದೆ, ಮಾರಿಯಾ ಅವರಿಗೆ ಕಲಾಕೃತಿ ಉತ್ಪನ್ನವಾಗಿ ಕಂಡಿತು.
ತೆಂಗಾ ಕೋಕೊ ತಂಡದೊಂದಿಗೆ ಮರಿಯಾ ಕುರಿಯಾಕೋಸ್
ಮನೆಯಲ್ಲೇ ಮೊದಲ ಪ್ರಯೋಗಮೊದಲ ಉತ್ಪನ್ನ ತಯಾರಿಸಲು ದೊಡ್ಡ ಯಂತ್ರಗಳಿರಲಿಲ್ಲ. ದೊಡ್ಡ ಬಂಡವಾಳವೂ ಇರಲಿಲ್ಲ. ಮನೆಯಲ್ಲೇ ಒಂದು ತೆಂಗಿನ ಚಿಪ್ಪನ್ನು ತೆಗೆದುಕೊಂಡು, ಸಾಮಾನ್ಯ ಸಾಧನಗಳನ್ನು ಬಳಸಿ ಅದನ್ನು ಸಮವಾಗಿ ಕತ್ತರಿಸಿದರು. ನಂತರ ಸ್ಯಾಂಡ್ಪೇಪರ್ ಬಳಸಿ ಸವರಿ, ತೆಂಗಿನ ಎಣ್ಣೆಯಿಂದ ಹೊಳಪು ನೀಡಿದರು.
‘ಹೀಗೆ ರೂಪುಗೊಂಡದ್ದು ಒಂದು ಸರಳ ಬೌಲ್. ಅದನ್ನು ತಂದೆ-ತಾಯಿಗೆ ತೋರಿಸಿದೆ. ಅವರಿಗೆ ಇಷ್ಟವಾಯಿತು. ‘ಇದರಿಂದ ಏನಾದರೂ ಮಾಡಬಹುದು’ ಎಂಬ ವಿಶ್ವಾಸ ಮೂಡಿತು ಎಂದು ಮರಿಯಾ ಆತ್ಮವಿಶ್ವಾಸದಿಂದ ಹೇಳಿದರು.
‘ಉದ್ಯಮ ಆರಂಭಿಸಲು ಅಗತ್ಯವಿದ್ದು ಹಣಕ್ಕಾಗಿ ಸಾಲ ಮಾಡಲು ಹಿಂದೇಟು ಹಾಕಿದೆ. ಹಿಂದೆ ಕಂಪನಿಯಲ್ಲಿ ದುಡಿದು ಕೂಡಿಟ್ಟಿದ್ದ ₹4,000ದಿಂದ ₹5,000 ಅನ್ನೇ ಹೂಡಿದೆ. ಕಚ್ಚಾ ವಸ್ತುವಿಗೆ ಆರಂಭದಲ್ಲಿ ದೊಡ್ಡ ಖರ್ಚೇ ಇರಲಿಲ್ಲ. ಮನೆಯ ಸುತ್ತಮುತ್ತಲಿನ ತೆಂಗಿನ ಮರಗಳಿಂದ ಸಿಗುತ್ತಿದ್ದ ಚಿಪ್ಪುಗಳನ್ನು ಬಳಸುತ್ತಿದ್ದರು. ಬೇಕಾಗಿದ್ದ ಸಣ್ಣಪುಟ್ಟ ಸಾಧನಗಳಿಗೆ ಕೆಲವು ನೂರು, ಕೆಲವು ಸಾವಿರ ರೂಪಾಯಿ ಖರ್ಚಾಯಿತು. ಚಿಪ್ಪಿಗೆ ರೂಪ ನೀಡುವ ಕೆಲಸದಲ್ಲಿ ತಂದೆ, ತಾಯಿಯೇ ನೆರವಾಯಿತು’ ಎಂದು ತೆಂಗಾ ಕೋಕೊ ಪಯಣವನ್ನು ವಿವರಿಸಿದರು.
50 ಉತ್ಪನ್ನಗಳ ಆರ್ಡರ್... 500 ಚಿಪ್ಪುಗಳ ಹುಡುಕಾಟಉದ್ಯಮ ಆರಂಭಿಸಿದ ನಂತರ ಎದುರಾದ ಮೊದಲ ದೊಡ್ಡ ಸವಾಲು ಮಾರುಕಟ್ಟೆಯದ್ದಲ್ಲ. ಉತ್ಪಾದನೆಯದ್ದಾಗಿತ್ತು. ಮೊದಲ ದೊಡ್ಡ ಆರ್ಡರ್ ಸುಮಾರು 50 ಉತ್ಪನ್ನಗಳದ್ದು. ಆದರೆ ಎಲ್ಲವೂ ಒಂದೇ ಗಾತ್ರ ಮತ್ತು ಗುಣಮಟ್ಟದಲ್ಲಿರಬೇಕಿತ್ತು. ಅದಕ್ಕಾಗಿ ಸುಮಾರು 400ರಿಂದ 500 ತೆಂಗಿನ ಚಿಪ್ಪುಗಳನ್ನು ಪರಿಶೀಲಿಸಬೇಕಾಯಿತು. ಕೆಲಸ ಪೂರ್ಣಗೊಳಿಸಲು ಬರೋಬ್ಬರಿ ನಾಲ್ಕು ವಾರಗಳು ಬೇಕಾದವು. ಅದರಿಂದ ಲಭ್ಯವಾದ ₹45 ಸಾವಿರಕ್ಕಾಗಿ ಪಟ್ಟ ಶ್ರಮ ಅಷ್ಟಿಷ್ಟಲ್ಲ.
ಆದರೆ, ಈಗ ಸಿಕ್ಕಿರುವ 50 ಆರ್ಡರ್ ಇಷ್ಟು ಕಷ್ಟವಾದರೆ, ಐನೋರು ಅಥವಾ ಸಾವಿರಕ್ಕೆ ಬೇಡಿಕೆ ಬಂದಾಗ ಏನು ಮಾಡುತ್ತೀಯಾ ಎಂಬ ಅಮ್ಮನ ಪ್ರಶ್ನೆ ಸರಳವೆನಿಸಿದರೂ, ಉತ್ತರ ಹುಡುಕುವುದು ಸುಲಭವಾಗಿರಲಿಲ್ಲ ಎಂದು ನೆನೆಯುತ್ತಾರೆ ಮರಿಯಾ.
ತೆಂಗಾ ಕೊಕೊ ಉತ್ಪನ್ನಗಳು
ಮನೆಯಿಂದ ಹೊರಬಂದ ಉದ್ಯಮಕೇರಳದಲ್ಲಿ ತೆಂಗಿನ ಚಿಪ್ಪಿನಿಂದ ಸಾಂಪ್ರದಾಯಿಕ ವಸ್ತುಗಳನ್ನು ತಯಾರಿಸುತ್ತಿದ್ದ ಕುಶಲಕರ್ಮಿಗಳನ್ನು ಮರಿಯಾ ಹುಡುಕಲು ಆರಂಭಿಸಿದರು. ಪ್ಲಾಸ್ಟಿಕ್ ಮತ್ತು ಸ್ಟೀಲ್ ಉತ್ಪನ್ನಗಳ ಸ್ಪರ್ಧೆಯಿಂದ ಈ ಸಾಂಪ್ರದಾಯಿಕ ಕಲೆ ನಿಧಾನವಾಗಿ ಕುಗ್ಗುತ್ತಿತ್ತು. ಕೆಲಸ ಬಿಟ್ಟು ಬೇರೆ ಉದ್ಯೋಗಗಳಿಗೆ ತೆರಳುತ್ತಿದ್ದ ಕುಶಲಕರ್ಮಿಗಳಿದ್ದರು.
ಅವರನ್ನು ಸಂಪರ್ಕಿಸಿ, ಆಧುನಿಕ ಗ್ರಾಹಕರಿಗೆ ಬೇಕಾದ ವಿನ್ಯಾಸಗಳನ್ನು ಕಲಿಸಿದರು. ಸಾಂಪ್ರದಾಯಿಕ ಕೌಶಲಕ್ಕೆ ಆಧುನಿಕ ವಿನ್ಯಾಸ ಮತ್ತು ಮಾರುಕಟ್ಟೆಯ ಅಗತ್ಯವನ್ನು ಜೋಡಿಸಿದರು. ಒಂದು ಆರ್ಡರ್ನ ಕೆಲಸವನ್ನು ಒಬ್ಬರೇ ಮಾಡುವ ಬದಲು, ಹಲವರ ನಡುವೆ ಹಂಚುವ ವ್ಯವಸ್ಥೆ ರೂಪಿಸಿದರು. 1,000 ಉತ್ಪನ್ನಗಳ ಆರ್ಡರ್ ಬಂದರೆ ಆರು-ಏಳು ಕುಶಲಕರ್ಮಿಗಳಿಗೆ ಕೆಲಸ ಹಂಚಿ, ಐದು-ಆರು ದಿನಗಳಲ್ಲಿ ಪೂರ್ಣಗೊಳಿಸುವ ಮಟ್ಟಕ್ಕೆ ವ್ಯವಸ್ಥೆ ಬೆಳೆಯಿತು ಎಂಬುದು ಮರಿಯಾ ಅವರ ಕಥೆ.
ಸಾಂಪ್ರದಾಯಿಕ ಕಲೆ, ಆಧುನಿಕ ಮಾರುಕಟ್ಟೆತೆಂಗಿನ ಚಿಪ್ಪಿನಿಂದ ವಸ್ತುಗಳನ್ನು ತಯಾರಿಸುವುದು ಮರಿಯಾ ಕಂಡುಹಿಡಿದ ಹೊಸ ಕಲೆಯೇನೂ ಅಲ್ಲ. ಕೇರಳದಲ್ಲಿ ಇದಕ್ಕೆ ಸುದೀರ್ಘ ಸಾಂಪ್ರದಾಯಿಕ ಹಿನ್ನೆಲೆಯಿದೆ. ಆದರೆ ಮರಿಯಾ ಮಾಡಿದ್ದು ಬೇರೆ.
‘ಸಾಂಪ್ರದಾಯಿಕ ಉತ್ಪನ್ನಗಳನ್ನು ಕೇವಲ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಬದಲು, ನಗರ ಪ್ರದೇಶಗಳ ಮತ್ತು ವಿದೇಶಗಳ ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಅವುಗಳನ್ನು ಮರುರೂಪಿಸಿದೆ. ಬೌಲ್, ಕಪ್, ಕ್ಯಾಂಡಲ್ ಹೋಲ್ಡರ್, ಪ್ಲಾಂಟರ್, ಸೋಪ್ ಡಿಶ್, ಕಿಚನ್ ಉತ್ಪನ್ನಗಳು, ಕಂಟೈನರ್ಗಳು, ಹೋಮ್ ಡೆಕೋರ್ ಸೇರಿದಂತೆ ಹಲವು ಉತ್ಪನ್ನಗಳು ರೂಪುಗೊಂಡವು. ಸರಳತೆ ಮತ್ತು ಸಹಜತೆಯನ್ನು ಉಳಿಸಿಕೊಂಡು ಹೊಸ ಉತ್ಪನ್ನಗಳ ವಿನ್ಯಾಸಕ್ಕೆ ಒತ್ತು ನೀಡಲಾಯಿತು. ಅತಿ ಸಂಕೀರ್ಣ ವಿನ್ಯಾಸಗಳ ಬದಲು ದೊಡ್ಡ ಪ್ರಯಾಣದಲ್ಲಿ ತಯಾರಿಸಬಹುದಾದ ವಿನ್ಯಾಸಗಳಿಗೆ ಆದ್ಯತೆ ನೀಡಿದೆ’ ಎಂದು ತಮ್ಮ ಉದ್ಯಮ ಬೆಳೆದ ಹಾದಿಯನ್ನು ಮರಿಯಾ ವಿವರಿಸಿದರು.
ಮೂರು ಗಂಟೆ ಬೇಕು ಒಂದು ಕಲಾಕೃತಿಗೆ‘ಒಂದು ತೆಂಗಿನ ಚಿಪ್ಪು ಉತ್ಪನ್ನವಾಗುವ ಹಂತ ಅಷ್ಟು ಸುಲಭದ ಕೆಲಸವಲ್ಲ. ಚಿಪ್ಪನ್ನು ಆಯ್ಕೆ ಮಾಡುವುದು, ನೆನೆಸುವುದು, ಹೊರಗಿನ ನಾರು ತೆಗೆಯುವುದು, ಗ್ರೈಂಡಿಂಗ್, ಬಫಿಂಗ್, ಹೀಟ್ ಟ್ರೀಟ್ಮೆಂಟ್, ಪಾಲಿಶಿಂಗ್ ಸೇರಿದಂತೆ ಹಲವು ಹಂತಗಳಿವೆ. ಉತ್ಪನ್ನದ ವಿನ್ಯಾಸ ಮತ್ತು ಫಿನಿಶಿಂಗ್ಗೆ ಅನುಗುಣವಾಗಿ ಸುಮಾರು ಮೂರು ಗಂಟೆಯವರೆಗೂ ಸಮಯ ಬೇಕಾಗುತ್ತದೆ’ ಎಂದೆನ್ನುತ್ತಾರೆ ಮರಿಯಾ.
‘ಇಲ್ಲಿ ಮತ್ತೊಂದು ವಿಶೇಷತೆ ಇದೆ. ಚಿಪ್ಪಿಗೆ ಹೊಳಪು ನೀಡಲು ರಾಸಾಯನಿಕಗಳನ್ನು ಬಳಸಲಾಗುತ್ತಿಲ್ಲ. ಬದಲಿಗೆ ಚಿಪ್ಪಿನ ಸಹಜ ಗುಣವನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರ ಹಿಂದೆ ಕುಶಲಕರ್ಮಿಗಳ ಕೈಚಳಕವೂ ಅಡಗಿದೆ. ಇದಕ್ಕಾಗಿ 30 ಮಹಿಳೆಯರ ತಂಡವು ಪಾಲಕ್ಕಾಡ್ನ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಬಹುತೇಕರು ಅನನುಭವಿಗಳು. ತೆಂಗಾ ಕೋಕೊದಲ್ಲೇ ಇವರಿಗೆ ತರಬೇತಿ ನೀಡಲಾಯಿತು. ಇದರೊಂದಿಗೆ ಕೇರಳದ ಹಲವೆಡೆ ಮನೆಯಲ್ಲೇ ಕೆಲಸ ಮಾಡುವ ಹಾಗೂ ನಮ್ಮ ಬೇಡಿಕೆಗಳಿಗೆ ಅನುಗುಣವಾಗಿ ಉತ್ಪನ್ನ ನೀಡುವ ತಂಡವೂ ಇದೆ’ ಎಂದು ತಮ್ಮ ಉದ್ಯಮದ ಒಳಹೂರಣವನ್ನು ಅವರು ವಿವರಿಸಿದರು.
ಈ ಎಲ್ಲದರಿಂದ ತೆಂಗಾ ಕೋಕೊ ದಿನಕ್ಕೆ ಐದು ಸಾವಿರ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಒಂದೇ ರೀತಿಯ ಉತ್ಪನ್ನಗಳ ಉತ್ಪಾದನೆಯನ್ನು ತಿಂಗಳಿಗೆ ಒಂದು ಲಕ್ಷದಷ್ಟು ತಲುಪಿದೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ಕೇವಲ ಆನ್ಲೈನ್ ಅಂಗಡಿಯಲ್ಲತೆಂಗಾ ಕೋಕೊ ಎಂದರೆ ಕೇವಲ ವೈಯಕ್ತಿಕ ಗ್ರಾಹಕರಿಗೆ ಉತ್ಪನ್ನ ಮಾರಾಟ ಮಾಡುವ ಆನ್ಲೈನ್ ಅಂಗಡಿ ಅಲ್ಲ. ಚಿಲ್ಲರೆ ವ್ಯಾಪಾರ ಮಾಡುವವರಿಗೆ ಗುಣಮಟ್ಟದ ಉತ್ಪನ್ನ ನೀಡುವ ಬಿ2ಬಿ ಸಂಸ್ಥೆ ತೆಂಗಾ ಕೋಕೊ. ರಫ್ತು-ಆಮದು ಸಂಸ್ಥೆಗಳು, ಹೋಮ್ ಡೆಕೋರ್ ಅಂಗಡಿಗಳು, ಕಾರ್ಪೊರೇಟ್ ಗಿಫ್ಟಿಂಗ್ ಸಂಸ್ಥೆಗಳು, ಹೋಟೆಲ್ಗಳು, ರೆಸಾರ್ಟ್ಗಳು, ಕೇಟರಿಂಗ್ ಮತ್ತು ಈವೆಂಟ್ ಸಂಸ್ಥೆಗಳು, ಶಾಲೆಗಳು ಸೇರಿದಂತೆ ಹಲವು ಕ್ಷೇತ್ರಗಳಿಗೆ ಉತ್ಪನ್ನಗಳನ್ನು ಪೂರೈಸಲಾಗುತ್ತದೆ.
‘ಇಲ್ಲಿರುವ ಮತ್ತೊಂದು ಗಮನಾರ್ಹ ಸಂಗತಿ ಎಂದರೆ. ತೆಂಗಾ ಕೋಕೊದಲ್ಲಿ ತಯಾರಾಗುವ ಎಲ್ಲದಕ್ಕೂ ದೊಡ್ಡ ಮಟ್ಟದ ಶ್ರಮ ಬೇಡ. ಹಲವು ಬಳಸಿ ಬಿಸಾಡುವ ಉತ್ಪನ್ನಗಳಿವೆ. ಇವುಗಳ ತಯಾರಿಕೆಗೆ ಕಡಿಮೆ ಸಮಯ ಸಾಕು. ಇನ್ನೂ ಹಲವರು ಶಾಶ್ವತವಾಗಿ ಮನೆಯ ಕಪಾಟು ಅಥವಾ ಮೇಜಿನ ಮೇಲೆ ಅಲಂಕರಿಸುತ್ತವೆ. ಅವುಗಳಿಗೆ ಹೆಚ್ಚು ಸಮಯ ಬೇಕು. ಇವುಗಳನ್ನು ಅತ್ಯಂತ ಯೋಜಿತವಾಗಿಯೇ ಹಂಚಲಾಗಿದೆ’ ಎನ್ನುತ್ತಾರೆ ಮರಿಯಾ.
ಮೊದಲ ವಿದೇಶಿ ಗ್ರಾಹಕ ವೆಬ್ಸೈಟ್ ಮೂಲಕವಿದೇಶಿ ಮಾರುಕಟ್ಟೆಯ ಬಾಗಿಲು ಕೂಡ ಒಂದು ದಿನದಲ್ಲಿ ತೆರೆದಿಲ್ಲ. ಅಂತರ್ಜಾಲ ತಾಣ ನಿರ್ಮಿಸುವಾಗಲೇ ವಿದೇಶಿ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು, ಸುಸ್ಥಿರ ಹಾಗೂ ನೈಸರ್ಗಿಕ ಉತ್ಪನ್ನಗಳನ್ನು ಹುಡುಕುವವರಿಗೆ ಸುಲಭವಾಗಿ ತೆಂಗಾ ಕೋಕೊ ಸಿಗುವಂತೆ ಯೋಜನೆ ರೂಪಿಸಿ ಅಭಿವೃದ್ಧಿಪಡಿಸಲಾಯಿತು.
‘ಮೊದಲ ಅಂತಾರಾಷ್ಟ್ರೀಯ ಗ್ರಾಹಕರು ವೆಬ್ಸೈಟ್ ಮೂಲಕವೇ ಸಂಪರ್ಕಿಸಿದರು. ನಂತರ B2B ವ್ಯಾಪಾರ ಮೇಳಗಳಲ್ಲಿ ಭಾಗವಹಿಸಿದೆ. ಇ-ಮೇಲ್, ಕರೆಗಳು ಮತ್ತು ನೇರ ಸಂಪರ್ಕದ ಮೂಲಕ ಗ್ರಾಹಕರನ್ನು ಹುಡುಕಿದೆ. ಇಲ್ಲಿ ಉತ್ಪನ್ನ ಎಷ್ಟೇ ಉತ್ತಮವಾಗಿರಲಿ, ಅದನ್ನು ಗ್ರಾಹಕರಿಗೆ ತಲುಪಿಸಲು ಅದಕ್ಕಿಂತಲೂ ಉತ್ಪಮವಾದ ಮಾರುಕಟ್ಟೆ ವ್ಯವಸ್ಥೆ ರೂಪಿಸುವುದು ಅಷ್ಟೇ ಮುಖ್ಯ’ ಎನ್ನುವುದು ಮರಿಯಾ ಅವರ ಮಂತ್ರ.
ಸದ್ಯ ಚಿಪ್ಪಿನ ದರ ದುಬಾರಿಯಾಗಿದೆ. ಪ್ರತಿ ಕೆ.ಜಿ. ಚಿಪ್ಪಿಗೆ ₹36ರಂತೆ ಖರೀದಿಸಲಾಗುತ್ತಿದೆ. ಆದರೆ ಅವೆಲ್ಲವೂ ಕಲಾಕೃತಿಯಾಗುತ್ತವೆ ಎನ್ನಲಾಗದು. ಅದರಲ್ಲೂ ಶೋಧಿಸಿ ಉತ್ಮವಾದದ್ದನ್ನು ಆಯ್ಕೆ ಮಾಡುವ ಸವಾಲು ಇದ್ದೇ ಇದೆ ಎಂದು ಹೇಳಲು ಮರೆಯರು ಮರಿಯಾ.
ಸಾಲ ಪಡೆಯದಿದ್ದುದೇ ದೊಡ್ಡ ಪಾಠವಾಯ್ತುಆರಂಭದಲ್ಲಿ ಸಾಲ ಪಡೆಯುವುದರ ಬಗ್ಗೆ ಮರಿಯಾ ಬಹಳ ಎಚ್ಚರಿಕೆಯಿಂದಿದ್ದೆ. ಮೂರನೇ ವರ್ಷದ ಹೊತ್ತಿಗೆ ಆರ್ಡರ್ಗಳು ಹೆಚ್ಚಾಗಿ, ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ವಸ್ತು ಖರೀದಿಸುವ ಅಗತ್ಯ ಬಂದಾಗ ಸ್ನೇಹಿತರು ಮತ್ತು ಕುಟುಂಬದವರಿಂದ ಸುಮಾರು ₹10 ಲಕ್ಷ ಹಣ ಪಡೆದೆ. ಆದರೆ ಇದುವೇ ನನ್ನ ವೃತ್ತಿ ಬದುಕಿನ ಬಹುದೊಡ್ಡ ಪಾಠವಾಗಿದೆ. ಆರಂಭದಲ್ಲೇ ಈ ಕೆಲಸ ಮಾಡಿದ್ದರೆ, ಸಂಸ್ಥೆ ಈ ಹಂತ ತಲುಪಲು ಇಷ್ಟು ವರ್ಷಗಳ ಕಾಲ ಕಾಯುವ ಅಗತ್ಯ ಇರಲಿಲ್ಲ’ ಎಂಬುದು ಮರಿಯಾ ಅವರು ಅನುಭವದ ಮಾತು.
‘ಮಾರುಕಟ್ಟೆ ಮತ್ತು ಆದಾಯದ ಬಗ್ಗೆ ಸಾಕಷ್ಟು ಮಾಹಿತಿ ಇದ್ದು, ಹೂಡಿಕೆಯ ಲಾಭದ ಸಾಧ್ಯತೆ ಸ್ಪಷ್ಟವಾಗಿದ್ದರೆ ಲೆಕ್ಕಾಚಾರದ ಅಪಾಯ ಎದುರಿಸಿ, ಉದ್ಯಮದ ಬೆಳವಣಿಗೆಯನ್ನು ವೇಗಗೊಳಿಸಬಹುದು ಎಂಬುದು ಅವರ ಅನುಭವ.
ಈಗ ಎದುರಿರುವುದು ಚೀನಾದ ಸವಾಲು‘ಉದ್ಯಮ ಬೆಳೆದಂತೆ ಸವಾಲುಗಳೂ ಬದಲಾಗಿವೆ. ಇಂದು ತೆಂಗಾ ಕೋಕೊ ಎದುರಿಸುತ್ತಿರುವ ಪ್ರಮುಖ ಸವಾಲು ಜಾಗತಿಕ ಸ್ಪರ್ಧೆ. ವಿಶೇಷವಾಗಿ ಚೀನಾ ಮತ್ತು ಇಂಡೋನೇಷ್ಯಾದಂತಹ ದೇಶಗಳಲ್ಲಿ ಕಾರ್ಮಿಕ ವೆಚ್ಚ ಕಡಿಮೆ ಇರುವುದರಿಂದ ದೊಡ್ಡ ಪ್ರಮಾಣದಲ್ಲಿ ಹಾಗೂ ಕಡಿಮೆ ದರದಲ್ಲಿ ಉತ್ಪನ್ನಗಳನ್ನು ತಯಾರಿಸುವ ಸಾಧ್ಯತೆ ಇದೆ’ ಎಂದು ತಮ್ಮ ಮುಂದಿರುವ ಇಂದಿನ ಸವಾಲುಗಳನ್ನು ಮರಿಯಾ ಅವರು ವಿವರಿಸಿದರು.
ಅದರ ಜತೆಗೆ ಉತ್ಪಾದನಾ ದಕ್ಷತೆ ಹೆಚ್ಚಿಸುವುದು, ಕಚ್ಚಾ ವಸ್ತುಗಳ ಪೂರೈಕೆ ವ್ಯವಸ್ಥೆಯನ್ನು ಉತ್ತಮಗೊಳಿಸುವುದು ಮತ್ತು ಉತ್ಪಾದನಾ ಪ್ರಕ್ರಿಯೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದು ನಮ್ಮ ಮುಂದಿರುವ ಗುರಿಗಳಾಗಿವೆ ಎಂದರು.
‘50ರಿಂದ 1 ಲಕ್ಷಕ್ಕೆ ಬಂದಿದ್ದೇವೆ’2020ರ ಆರಂಭದ ದಿನಗಳನ್ನು ನೆನಪಿಸಿಕೊಂಡರೆ ಈಗಿನ ತೆಂಗಾ ಕೋಕೊ ದೊಡ್ಡ ಬದಲಾವಣೆಯಂತೆ ಕಾಣುತ್ತದೆ. ಒಂದು ಕಾಲದಲ್ಲಿ 50 ಒಂದೇ ಗಾತ್ರದ ಉತ್ಪನ್ನಗಳನ್ನು ತಯಾರಿಸಲು 400-500 ಚಿಪ್ಪುಗಳನ್ನು ಹುಡುಕಬೇಕಾಗಿತ್ತು. ಇಂದು ಒಂದೇ ರೀತಿಯ ಗಾತ್ರದ ಸುಮಾರು ಒಂದು ಲಕ್ಷ ಉತ್ಪನ್ನಗಳನ್ನು ತಿಂಗಳಿಗೆ ತಯಾರಿಸುವ ಮಟ್ಟಕ್ಕೆ ವ್ಯವಸ್ಥೆ ಬೆಳೆದಿದೆ. ಆರಂಭದಲ್ಲಿದ್ದ ಗೊಂದಲ ಹಾಗೂ ಅನಿಶ್ಚಿತತೆ ಈಗಿಲ್ಲವಾದರೂ, ಸವಾಲುಗಳು ಎದುರಾಗುತ್ತಲೇ ಇವೆ. ಅವಕಾಶ ಯಾವಾಗಲೂ ಹೊಸ ವಸ್ತುವಿನಲ್ಲೇ ಇರಬೇಕೆಂದೇನೂ ಇಲ್ಲ. ನಮ್ಮ ಸುತ್ತಲಿರುವ, ಯಾರೂ ಗಮನಿಸದ ವಸ್ತುವಿನಲ್ಲೂ ಇರಬಹುದು. ಅದನ್ನು ಗುರುತಿಸುವ ಕಣ್ಣು ಮತ್ತು ಪ್ರಯತ್ನಿಸುವ ಧೈರ್ಯ ಬೇಕಷ್ಟೇ ಎನ್ನುವುದು ಉದ್ಯಮ ಆರಂಭಿಸುವವರಿಗೆ ಮರಿಯಾ ಕುರಿಯಾಕೋಸ್ ಅವರ ಸಲಹೆ.
ಇನ್ನು ಕರ್ನಾಟಕದ ವಿಷಯಕ್ಕೆ ಬಂದಲ್ಲಿ, ರಾಜ್ಯದಲ್ಲಿ 1.5 ಲಕ್ಷ ಎಕರೆ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಕಳೆದ ವರ್ಷ 4.5 ಲಕ್ಷ ಕ್ವಿಂಟಾಲ್ ಕೊಬ್ಬರಿ ಉತ್ಪಾದನೆ ದಾಖಲಾಗಿದೆ. ಅಂದರೆ ರಾಜ್ಯದಲ್ಲೂ ಮಾರಿಯಾ ಅವರಂತೆ ಯಶಸ್ವಿ ಉದ್ಯಮಿಯಾಗುವ ಅವಕಾಶ ಎಷ್ಟಿದೆ ಎಂಬುದನ್ನು ಊಹಿಸಬಹುದು.
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್ಟಿಎ) ಯುಜಿಸಿ–ನೆಟ್ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ವಿಷಯಗಳ ಮರುಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ.
ಮರುಪರೀಕ್ಷೆ ಬರೆದ ಅಭ್ಯರ್ಥಿಗಳು ಯುಜಿಸಿ–ನೆಟ್ ಅಧಿಕೃತ ವೆಬ್ಸೈಟ್ನಲ್ಲಿ ಅಂಕಪಟ್ಟಿ ಪರಿಶೀಲಿಸಿ ಡೌನ್ಲೋಡ್ ಮಾಡಿಕೊಳ್ಳಬಹುದು. ಮೂಲ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ಹಲವು ದೋಷಗಳಿವೆ ಎಂಬ ದೂರುಗಳು ಬಂದ ಹಿನ್ನೆಲೆ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಮರುಪರೀಕ್ಷೆ ನಡೆಸಿತ್ತು.
ಇಂಗ್ಲಿಷ್ ಮತ್ತು ವಾಣಿಜ್ಯ ವಿಷಯಗಳ ಮರುಪರೀಕ್ಷೆ ಸೆಪ್ಟೆಂಬರ್ 9ರಂದು ನಡೆದಿದ್ದರೆ, ಸಮಾಜಶಾಸ್ತ್ರ ಪರೀಕ್ಷೆ ಸೆಪ್ಟೆಂಬರ್ 10ರಂದು ನಡೆದಿತ್ತು.
ದೇಶದ 272 ನಗರಗಳ 454 ಪರೀಕ್ಷಾ ಕೇಂದ್ರಗಳಲ್ಲಿ ಮರುಪರೀಕ್ಷೆ ನಡೆಸಲಾಗಿತ್ತು. ಮೂರು ವಿಷಯಗಳಿಗೆ ಒಟ್ಟು 1,96,491 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅವರಲ್ಲಿ 1,20,355 ಮಂದಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಎನ್ಟಿಎ ತಿಳಿಸಿದೆ.
ಪರೀಕ್ಷೆ ನಡೆದ ಸಮಯಇಂಗ್ಲಿಷ್ ಪರೀಕ್ಷೆಯು ಸೆಪ್ಟೆಂಬರ್ 9ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ನಡೆದಿತ್ತು.
ಅದೇ ದಿನ ವಾಣಿಜ್ಯ ವಿಷಯದ ಪರೀಕ್ಷೆ ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ನಡೆದಿತ್ತು.
ಸಮಾಜಶಾಸ್ತ್ರ ಪರೀಕ್ಷೆಯು ಸೆಪ್ಟೆಂಬರ್ 10ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ನಡೆದಿತ್ತು.
ಅಭ್ಯರ್ಥಿಗಳು ugcnet.nta.nic.in ವೆಬ್ಸೈಟ್ಗೆ ಭೇಟಿ ನೀಡಬೇಕು
ಮುಖಪುಟದಲ್ಲಿರುವ ‘Candidate Activity’ ವಿಭಾಗವನ್ನು ಓಪನ್ ಮಾಡಬೇಕು.
ಅಲ್ಲಿ ‘UGC-NET June 2026 Score Card (Re-Examination)’ ಲಿಂಕ್ ಅನ್ನು ಆಯ್ಕೆ ಮಾಡಬೇಕು.
ನಂತರ ಅಗತ್ಯ ಲಾಗಿನ್ ವಿವರಗಳನ್ನು ನಮೂದಿಸಿದರೆ ಅಂಕಪಟ್ಟಿ ಲಭ್ಯವಾಗಲಿದೆ.
ಅದರಲ್ಲಿ ವಿಷಯ, ಪಡೆದ ಅಂಕ ಮತ್ತು ಅರ್ಹತಾ ಸ್ಥಿತಿಯನ್ನು ಪರಿಶೀಲಿಸಿ, ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಅಧಿಕೃತ ವೆಬ್ಸೈಟ್: ugcnet.nta.nic.in
ನಿಶಿನ್ (ಜಪಾನ್): ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರ ಆಲ್ರೌಂಡ್ ಪ್ರದರ್ಶನ ಮತ್ತು ಎಡಗೈ ಸ್ಪಿನ್ನರ್ ಎನ್ ಶ್ರೀ ಚರಣಿ ಅವರ ಮಾರಕ ಬೌಲಿಂಗ್ ನೆರವಿನಿಂದ, ಹಾಲಿ ಚಿನ್ನದ ಪದಕ ವಿಜೇತ ಭಾರತ ತಂಡವು ಶುಕ್ರವಾರ ಇಲ್ಲಿ ನಡೆದ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಪಂದ್ಯದಲ್ಲಿ ಜಪಾನ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ಗೆ ಪ್ರವೇಶಿಸಿತು.
ಚರಣಿ (4/10) ಮತ್ತು ಶಫಾಲಿ (2/13) ಉತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಜಪಾನ್ ತಂಡವನ್ನು ಕೇವಲ 57 ರನ್ಗಳಿಗೆ ಆಲೌಟ್ ಮಾಡಿದರು. ಬಳಿಕ ಭಾರತವು ಕೇವಲ ಐದು ಓವರ್ಗಳಲ್ಲಿ ಗುರಿಯನ್ನು ತಲುಪಿ, ಸೆಪ್ಟೆಂಬರ್ 20 ರಂದು ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲು ಸಜ್ಜಾಯಿತು.
ಅತ್ಯಲ್ಪ ಮೊತ್ತದ ಗುರಿ ಬೆನ್ನಟ್ಟುವಲ್ಲಿ ಶಫಾಲಿ (15 ಎಸೆತಗಳಲ್ಲಿ ಅಜೇಯ 40 ರನ್) ಮತ್ತು ರಿಚಾ ಘೋಷ್ (6 ಎಸೆತಗಳಲ್ಲಿ 12 ರನ್) ಪ್ರಮುಖ ಪಾತ್ರ ವಹಿಸಿದರು.
ಆದಾಗ್ಯೂ, ಆರಂಭಿಕ ಆಟಗಾರ್ತಿ ಗುಣಲನ್ ಕಮಲಿನಿ ಮತ್ತು ಮೂರನೇ ಕ್ರಮಾಂಕದ ಬ್ಯಾಟರ್ ಭಾರತಿ ಫುಲ್ಮಾಲಿ ಅವರನ್ನು ಔಟ್ ಮಾಡುವ ಮೂಲಕ ಜಪಾನ್ ತಂಡವೂ ಸಂಭ್ರಮದ ಕ್ಷಣಗಳನ್ನು ಕಂಡಿತು.
ಅತ್ಯಂತ ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡುವ ಸವಾಲಿದ್ದರೂ, ಎರಡು ವಿಕೆಟ್ ಕಬಳಿಸಿದರೂ ಜಪಾನ್ ತಂಡವು ಶಫಾಲಿ ಮತ್ತು ಘೋಷ್ ಅವರಂತಹ ಉನ್ನತ ದರ್ಜೆಯ ಆಟಗಾರ್ತಿಯರನ್ನು ತಡೆಯಲು ಸಾಧ್ಯವಾಗಲಿಲ್ಲ; ಇವರಿಬ್ಬರೂ ಯಾವುದೇ ಹೆಚ್ಚಿನ ಪ್ರಯಾಸವಿಲ್ಲದೆ ಭಾರತಕ್ಕೆ ಗೆಲುವು ತಂದುಕೊಟ್ಟರು.
ಜಪಾನ್ ತಂಡವನ್ನು 50 ರನ್ಗಳ ಆಸುಪಾಸಿನ ಮೊತ್ತಕ್ಕೆ ಸೀಮಿತಗೊಳಿಸಿದ ಶ್ರೇಯಸ್ಸು, ಹೆಚ್ಚಾಗಿ ಚರಣಿ ನೇತೃತ್ವದ ಭಾರತೀಯ ಸ್ಪಿನ್ನರ್ಗಳಿಗೆ ಸಲ್ಲುತ್ತದೆ.
Women's Asia Cup 2026: ಲಂಕಾವನ್ನು 72 ರನ್ಗಳಿಂದ ಬಗ್ಗುಬಡಿದು, ದಾಖಲೆಯ 8ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡ ಭಾರತ! -
A convincing 8️⃣-wicket win for #TeamIndia in the quarter-final to seal a spot in the final four
Scorecard ▶️ https://t.co/MIoR07Vyms #AsianGames pic.twitter.com/UANuW4ThHW
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ತಂಡ, ಜಪಾನ್ ಬ್ಯಾಟರ್ಗಳಿಗೆ ಮುಕ್ತವಾಗಿ ಬ್ಯಾಟ್ ಬೀಸಲು ಯಾವುದೇ ಅವಕಾಶ ನೀಡಲಿಲ್ಲ; ಆತಿಥೇಯ ತಂಡದ ಇನಿಂಗ್ಸ್ನಲ್ಲಿ ಕೇವಲ ಮೂರು ಬೌಂಡರಿಗಳು ದಾಖಲಾದದ್ದೇ ಇದಕ್ಕೆ ಸಾಕ್ಷಿ.
ಉನ್ನತ ಮಟ್ಟದ ತಂಡಗಳ ವಿರುದ್ಧ ಆಡುವ ಅಥವಾ ನಿಯಮಿತವಾಗಿ ತರಬೇತಿ ಪಡೆಯುವ ಅವಕಾಶವನ್ನೂ ಅಪರೂಪಕ್ಕೆ ಮಾತ್ರ ಪಡೆಯುವ ಜಪಾನೀಸ್ ಬ್ಯಾಟರ್ಗಳಿಗೆ, ಇನಿಂಗ್ಸ್ನಾದ್ಯಂತ ರನ್ ಗಳಿಕೆಯ ವೇಗವನ್ನು ಹೆಚ್ಚಿಸಲು ಸಾಧ್ಯವಾಗಲಿಲ್ಲ.
ಟಿ20 ಮಾದರಿಯಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಎಡಗೈ ಸ್ಪಿನ್ನರ್ ಚರಣಿ, ಏಳನೇ ಓವರ್ನಲ್ಲಿ ಸತತ ಎಸೆತಗಳಲ್ಲಿ ಆರಂಭಿಕ ಆಟಗಾರ್ತಿ ಹರುನಾ ಇವಾಸಕಿ (10) ಮತ್ತು ನಾಯಕಿ ಮಾಯಿ ಯನಗಿಡಾ ಅವರ ವಿಕೆಟ್ಗಳನ್ನು ಕಬಳಿಸುವ ಮೂಲಕ ಈ ಮಾದರಿಯಲ್ಲಿನ ತಮ್ಮ ಅತ್ಯುತ್ತಮ ಮೊಮೆಂಟಮ್ ಅನ್ನು ಮುಂದುವರಿಸಿದರು.
ಇನಿಂಗ್ಸ್ನ ಅಂತಿಮ ಹಂತದಲ್ಲಿ (ಕೊನೆಯ 10 ಓವರ್ಗಳಲ್ಲಿ), ಜಪಾನ್ ತಂಡವು ಮತ್ತಷ್ಟು ಕುಸಿತ ಕಂಡಾಗ ಸ್ಪಿನ್ನರ್ ಶಫಾಲಿ ವರ್ಮಾ (2/13) ಕೂಡ ವಿಕೆಟ್ ಪಡೆದವರ ಪಟ್ಟಿಗೆ ಸೇರ್ಪಡೆಗೊಂಡರು.
ಶಫಾಲಿ, ಜಪಾನ್ ಪರ ಗರಿಷ್ಠ 25 ರನ್ ಗಳಿಸಿದ್ದ ಅಯಾಕಾ ಕಟೊ-ಸ್ಟಾಫರ್ಡ್ ಹಾಗೂ ಶಿಮಾಕೊ ಕಟೊ ಅವರನ್ನು ಕ್ರಮವಾಗಿ 15 ಮತ್ತು 17ನೇ ಓವರ್ಗಳಲ್ಲಿ ಔಟ್ ಮಾಡಿದರು; ದೊಡ್ಡ ಹೊಡೆತಗಳಿಗೆ (ಏರಿಯಲ್ ಶಾಟ್ಸ್) ಮುಂದಾದ ಇವರ ಪ್ರಯತ್ನಗಳು ಭಾರತೀಯ ಫೀಲ್ಡರ್ಗಳ ಕೈಸೇರುವ ಮೂಲಕ ಅಂತ್ಯಗೊಂಡವು.
ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ದಿಢೀರ್ ಆಗಿ ಹಣದ ಪ್ರವಾಹ ಹೆಚ್ಚಾಗಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವ ಹಲವು ಬೆಳವಣಿಗೆಗಳ ಪರಿಣಾಮವಾಗಿ, ಹಿಂದೆಂದೂ ಕಾಣದಷ್ಟು ಪ್ರಮಾಣದ ಹೆಚ್ಚುವರಿ ಹಣ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹರಿದಾಡುತ್ತಿದೆ.
ಇದು ದೂರದ ಯಾವುದೋ ತಾಂತ್ರಿಕ ವ್ಯತ್ಯಯವಲ್ಲ—ನಿರ್ವಹಣೆಯಿಲ್ಲದೆ ಬಿಟ್ಟರೆ ಸಾಮಾನ್ಯ ಜನರ ಮೇಲೂ ಪರಿಣಾಮ ಬೀರುವ ಆರ್ಥಿಕ ವಾಸ್ತವ. ಇಂತಹ ಹೆಚ್ಚುವರಿ ದ್ರವ್ಯತೆ ಸಾಲ ಪಡೆಯುವ ವೆಚ್ಚ, ಉಳಿತಾಯದ ಮೇಲಿನ ಪ್ರತಿಫಲ ಹಾಗೂ ಹಣದ ಖರೀದಿ ಸಾಮರ್ಥ್ಯದಲ್ಲಿ ಬದಲಾವಣೆ ತರಬಹುದು.
ದೇಶದ ಹಣದ ಪೂರೈಕೆಯನ್ನು ನಿರ್ವಹಿಸುವುದು ಮತ್ತು ಚಿಲ್ಲರೆ ಹಣದುಬ್ಬರವನ್ನು ನಿಗದಿತ ವ್ಯಾಪ್ತಿಯೊಳಗೆ ಇರಿಸುವ ಜವಾಬ್ದಾರಿ ಭಾರತೀಯ ರಿಸರ್ವ್ ಬ್ಯಾಂಕ್ ಮೇಲಿದೆ. ಹೀಗಾಗಿ ಅದರ ಮುಂದಿರುವ ಕಾರ್ಯ ಸವಾಲಿನದ್ದಾಗಿದೆ. ಆದರೆ, ಈ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಹಲವು ಸಾಮಾನ್ಯವಲ್ಲದ ಪ್ರಶ್ನೆಗಳು ಉದ್ಭವಿಸಿವೆ.
ಅವುಗಳಲ್ಲಿ ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಬ್ಯಾಂಕ್ಗಳಿಗೆ ಸಾಲ ನೀಡಲು ಹಣದ ಅಗತ್ಯವಿರುವಾಗ ಆರ್ಬಿಐ ಏಕೆ ಹಣವನ್ನು ಹಿಂಪಡೆಯಬೇಕು?
ಸದ್ಯ ಬ್ಯಾಂಕ್ಗಳ ಬಳಿ ಹಣದ ಕೊರತೆ ಇಲ್ಲ; ಬದಲಾಗಿ, ಅಗತ್ಯಕ್ಕಿಂತ ಹೆಚ್ಚಿನ ಹೆಚ್ಚುವರಿ ಹಣವಿದೆ. ಭಾರತದ ಬ್ಯಾಂಕ್ಗಳ ಮೂಲಕ ಎಷ್ಟು ಹಣ ಚಲಾವಣೆಯಾಗಬೇಕು ಎಂಬುದನ್ನು ಆರ್ಬಿಐ ನಿರ್ವಹಿಸುತ್ತದೆ. ಇದನ್ನು ಬಳಸಿಕೊಂಡು ಅಲ್ಪಾವಧಿಯ ಬಡ್ಡಿದರಗಳನ್ನು ನಿಯಂತ್ರಿಸುತ್ತದೆ. ಬ್ಯಾಂಕ್ಗಳು ಠೇವಣಿಗಳನ್ನು ಸ್ವೀಕರಿಸಿ, ಆ ಹಣದ ಬಹುಪಾಲನ್ನು ಸಾಲವಾಗಿ ನೀಡುತ್ತವೆ. ಆದರೆ ದೈನಂದಿನ ಹಣದ ಕೊರತೆಯನ್ನು ಸರಿದೂಗಿಸಲು ಬ್ಯಾಂಕ್ಗಳು ಪರಸ್ಪರ ರಾತ್ರೋರಾತ್ರಿ ಸಾಲ ನೀಡುತ್ತವೆ.
ಬ್ಯಾಂಕ್ಗಳ ಬಳಿ ಹೆಚ್ಚುವರಿ ಹಣ ತುಂಬಾ ಹೆಚ್ಚಾದಾಗ ಏನಾಗುತ್ತದೆ?
ಬ್ಯಾಂಕ್ಗಳ ಬಳಿ ಹೆಚ್ಚುವರಿ ಹಣ ಹೆಚ್ಚಾದಾಗ, ಅದನ್ನು ಸಾಲವಾಗಿ ನೀಡಲು ಬ್ಯಾಂಕ್ಗಳ ನಡುವೆ ಪೈಪೋಟಿ ಉಂಟಾಗುತ್ತದೆ ಮತ್ತು ಬಡ್ಡಿದರಗಳು ಇಳಿಯುತ್ತವೆ. ಸೆಪ್ಟೆಂಬರ್ ಆರಂಭದಲ್ಲಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಮಾರು ₹9.7 ಲಕ್ಷ ಕೋಟಿ ಹೆಚ್ಚುವರಿ ಹಣವಿತ್ತು. ಒಂದು ಹಂತದಲ್ಲಿ ಇದು ₹10 ಲಕ್ಷ ಕೋಟಿಯನ್ನೂ ದಾಟಿ, ಸುಮಾರು ₹11 ಲಕ್ಷ ಕೋಟಿಯ ಸಮೀಪಕ್ಕೆ ತಲುಪಿತ್ತು.
ಕಾಲ್ ಮನಿ ದರವು ರೆಪೊ ದರಕ್ಕಿಂತ ತುಂಬಾ ಕೆಳಗೆ ಇಳಿದರೆ, ಒಟ್ಟಾರೆ ಆರ್ಥಿಕತೆಯಲ್ಲಿನ ಬಡ್ಡಿದರಗಳ ಮೇಲೆ ಆರ್ಬಿಐ ಹೊಂದಿರುವ ನಿಯಂತ್ರಣ ದುರ್ಬಲವಾಗುತ್ತದೆ.
ಬ್ಯಾಂಕ್ಗಳ ಬಳಿ ಹೆಚ್ಚುವರಿ ಹಣ ಹೆಚ್ಚಾದಾಗ ಏನಾಗುತ್ತದೆ?
ಬ್ಯಾಂಕ್ಗಳ ಬಳಿ ಹೆಚ್ಚಿನ ಪ್ರಮಾಣದ ಹೆಚ್ಚುವರಿ ಹಣವಿದ್ದಾಗ, ಅದನ್ನು ಸಾಲವಾಗಿ ನೀಡಲು ಅವು ಪೈಪೋಟಿ ನಡೆಸುತ್ತವೆ. ಇದರಿಂದ ಬಡ್ಡಿದರಗಳು ಕಡಿಮೆಯಾಗುತ್ತವೆ. ಸೆಪ್ಟೆಂಬರ್ ಆರಂಭದಲ್ಲಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಮಾರು ₹9.7 ಲಕ್ಷ ಕೋಟಿ ಹೆಚ್ಚುವರಿ ದ್ರವ್ಯತೆ ಇತ್ತು. ಒಂದು ಹಂತದಲ್ಲಿ ಅದು ₹10 ಲಕ್ಷ ಕೋಟಿಯನ್ನು ದಾಟಿ, ಸುಮಾರು ₹11 ಲಕ್ಷ ಕೋಟಿಯನ್ನೂ ತಲುಪಿತ್ತು. ಕಾಲ್ ಮನಿ ದರವು ರೆಪೊ ದರಕ್ಕಿಂತ ಬಹಳ ಕೆಳಗೆ ಕುಸಿದರೆ, ಆರ್ಥಿಕತೆಯಲ್ಲಿನ ಬಡ್ಡಿದರಗಳ ಮೇಲೆ ಆರ್ಬಿಐ ಹೊಂದಿರುವ ನಿಯಂತ್ರಣ ದುರ್ಬಲಗೊಳ್ಳುತ್ತದೆ.
ಬಾಂಡ್ಗಳನ್ನು ಮಾರಾಟ ಮಾಡುವುದರಿಂದ ಈ ಹೆಚ್ಚುವರಿ ದ್ರವ್ಯತೆ ಹೇಗೆ ಕಡಿಮೆಯಾಗುತ್ತದೆ?
ಬ್ಯಾಂಕ್ವೊಂದು ಆರ್ಬಿಐನಿಂದ ಬಾಂಡ್ ಖರೀದಿಸಿದಾಗ, ಅದು ರೂಪಾಯಿ ಹಣವನ್ನು ಆರ್ಬಿಐಗೆ ನೀಡುತ್ತದೆ ಮತ್ತು ಪ್ರತಿಯಾಗಿ ಬಾಂಡ್ ಪಡೆಯುತ್ತದೆ. ಹೀಗಾಗಿ ಆ ಹಣವು ಬಾಂಡ್ನ ಅವಧಿ ಮುಗಿಯುವವರೆಗೆ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿಯುತ್ತದೆ.
ಹಾಗಾದರೆ ಆರ್ಬಿಐ ಬ್ಯಾಂಕ್ಗಳಿಂದ 1 ಲಕ್ಷ ಕೋಟಿ ಹಿಂಪಡೆಯುತ್ತಿರುವುದು ಏಕೆ?
ಹೌದು. ಸೆಪ್ಟೆಂಬರ್ 17ರಿಂದ ಆರಂಭಿಸಿ ಮೂರು ಹಂತಗಳಲ್ಲಿ ₹1 ಲಕ್ಷ ಕೋಟಿ ಮೌಲ್ಯದ ಸರ್ಕಾರಿ ಬಾಂಡ್ಗಳನ್ನು ಮಾರಾಟ ಮಾಡುವ ಮೂಲಕ ಆರ್ಬಿಐ ಹೆಚ್ಚುವರಿ ಹಣವನ್ನು ಹಿಂಪಡೆಯುತ್ತಿದೆ. ಬ್ಯಾಂಕ್ಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಈ ಬಾಂಡ್ಗಳನ್ನು ಖರೀದಿಸಲು ಆರ್ಬಿಐಗೆ ಹಣ ಪಾವತಿಸುತ್ತವೆ. ಈ ಪಾವತಿ ನೇರವಾಗಿ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹಣವನ್ನು ಹೊರತೆಗೆದುಕೊಳ್ಳುತ್ತದೆ.
ಈ ಬಾಂಡ್ಗಳ ಮಾರಾಟದ ನಿಖರ ವೇಳಾಪಟ್ಟಿ ಏನು?
ಬಾಂಡ್ಗಳನ್ನು ಮೂರು ಹಂತಗಳಲ್ಲಿ ಮಾರಾಟ ಮಾಡಲಾಗುತ್ತಿದೆ:
ಸೆಪ್ಟೆಂಬರ್ 17, 2026: ₹50,000 ಕೋಟಿ — ಮೊದಲ ಮತ್ತು ಅತಿದೊಡ್ಡ ಹಂತ
ಸೆಪ್ಟೆಂಬರ್ 21, 2026: ₹25,000 ಕೋಟಿ — ಎರಡನೇ ಹಂತ
ಸೆಪ್ಟೆಂಬರ್ 28, 2026: ₹25,000 ಕೋಟಿ — ಮೂರನೇ ಹಂತ
ಇದುವರೆಗೆ ಹಣಕಾಸು ಮಾರುಕಟ್ಟೆಗಳು ಹೇಗೆ ಪ್ರತಿಕ್ರಿಯಿಸಿವೆ?
ಮೊದಲ ಹಂತದ ಬಾಂಡ್ ಮಾರಾಟಕ್ಕೂ ಮುನ್ನವೇ ಬಾಂಡ್ಗಳ ಯೀಲ್ಡ್ಗಳು ಏರಿಕೆಯಾಗಿದ್ದವು. ಮೊದಲ ಹಂತದ ಬಾಂಡ್ಗಳಿಗೆ ನಿರೀಕ್ಷೆಗಿಂತ ಹೆಚ್ಚಿನ ಬಿಡ್ಗಳು ಬಂದಿದ್ದವು. ಅದರ ಹಿಂದಿನ ವಾರದಲ್ಲಿ ಭಾರತದ 10 ವರ್ಷಗಳ ಸರ್ಕಾರಿ ಬಾಂಡ್ ಯೀಲ್ಡ್ ಜೂನ್ 2026ರ ಬಳಿಕ ಮೊದಲ ಬಾರಿಗೆ ಶೇ.7ರ ಗಡಿ ದಾಟಿತ್ತು. ಐದು ವರ್ಷಗಳ ಬಾಂಡ್ ಯೀಲ್ಡ್ ಒಂದೇ ವಹಿವಾಟಿನ ಅವಧಿಯಲ್ಲಿ 22 ಬೇಸಿಸ್ ಪಾಯಿಂಟ್ಗಳಷ್ಟು ಏರಿಕೆಯಾಗಿತ್ತು.
ಹೆಚ್ಚಿನ ಯೀಲ್ಡ್ಗಳು ಇತರ ಕಡೆಗಳಲ್ಲಿ ಸಾಲ ಪಡೆಯುವ ವೆಚ್ಚವನ್ನು ಹೆಚ್ಚಿಸಬಹುದು. ಆದರೆ ಆರ್ಬಿಐ ಬಾಂಡ್ಗಳನ್ನು ಮಾರಾಟ ಮಾಡಿದೆ ಎಂಬ ಕಾರಣಕ್ಕೆ ಸಾಲದ ಬಡ್ಡಿದರಗಳು ತಕ್ಷಣವೇ ಏರಿಕೆಯಾಗುವುದಿಲ್ಲ.
ಆರ್ಬಿಐ ಬಡ್ಡಿದರಗಳನ್ನು ಹೆಚ್ಚಿಸುತ್ತಿದೆಯೇ?
ಇಲ್ಲ. ಇದು ಆರ್ಬಿಐನ ರೆಪೊ ದರವನ್ನು ಬದಲಿಸುವ ಕ್ರಮವಲ್ಲ. ಪ್ರಸ್ತುತ ರೆಪೊ ದರ ಶೇ.5.25ರಷ್ಟಿದ್ದು, ಮಾರುಕಟ್ಟೆ ಬಡ್ಡಿದರಗಳನ್ನು ನಿರ್ಧರಿಸಲು ಆರ್ಬಿಐ ಇದನ್ನು ಪ್ರಮುಖ ನೀತಿ ದರವಾಗಿ ಬಳಸುತ್ತದೆ.
ಆದರೆ, ಈ ಕ್ರಮ ಪರೋಕ್ಷವಾಗಿ ಮಾರುಕಟ್ಟೆಯ ಹಣಕಾಸು ಪರಿಸ್ಥಿತಿಯನ್ನು ಬಿಗಿಗೊಳಿಸಬಹುದು. ಏಕೆಂದರೆ ಬ್ಯಾಂಕ್ಗಳ ಬಳಿ ಹೆಚ್ಚುವರಿ ಹಣ ಕಡಿಮೆಯಾದರೆ, ಪರಸ್ಪರ ಸಾಲ ಪಡೆಯಲು ಅವು ಹೆಚ್ಚಿನ ಬಡ್ಡಿ ಪಾವತಿಸಬೇಕಾಗಬಹುದು.
ಬ್ಯಾಂಕ್ಗಳು ಪರಸ್ಪರ ನೀಡುವ ರಾತ್ರೋರಾತ್ರಿ ಸಾಲದ ಮೇಲಿನ ಬಡ್ಡಿದರವನ್ನು ಕಾಲ್ ಮನಿ ದರ ಎಂದು ಕರೆಯಲಾಗುತ್ತದೆ. ಈ ದರವು ತನ್ನ ಪ್ರಮುಖ ನೀತಿ ದರವಾದ ರೆಪೊ ದರಕ್ಕೆ ಸಮೀಪದಲ್ಲೇ ಇರುವಂತೆ ಆರ್ಬಿಐ ಬಯಸುತ್ತದೆ.
ಹಣದುಬ್ಬರವು ಈ ನಿರ್ಧಾರದಲ್ಲಿ ಪಾತ್ರವಹಿಸುತ್ತದೆಯೇ?
ಹಣದುಬ್ಬರವು ಈ ಕ್ರಮಕ್ಕೆ ನೇರ ಕಾರಣವಲ್ಲ. ಆದರೆ ಆರ್ಬಿಐಗೆ ಲಭ್ಯವಿರುವ ಅವಕಾಶದ ಮೇಲೆ ಅದು ಪ್ರಭಾವ ಬೀರುತ್ತದೆ. ಚಿಲ್ಲರೆ ಹಣದುಬ್ಬರವು ಜುಲೈನ ಶೇ.4.45ರಿಂದ ಆಗಸ್ಟ್ನಲ್ಲಿ ಶೇ.4.82ಕ್ಕೆ ಏರಿಕೆಯಾಗಿದೆ. ಆಹಾರ ಹಣದುಬ್ಬರವೂ ಶೇ.5.95ಕ್ಕೆ ಏರಿದೆ.
ಇವೆರಡೂ ಆರ್ಬಿಐ ನಿಗದಿಪಡಿಸಿರುವ ಶೇ.2ರಿಂದ 6ರ ಗುರಿ ವ್ಯಾಪ್ತಿಯೊಳಗೇ ಇದ್ದರೂ, ಶೇ.4ರ ಗುರಿಗಿಂತ ಮೇಲಿವೆ. ಅದರಲ್ಲೂ ಸಗಟು ಹಣದುಬ್ಬರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದು ಗಮನಾರ್ಹವಾಗಿದೆ.
ಈ ಹಿಂದೆ ಆರ್ಬಿಐ ಇಂತಹ ಕ್ರಮಗಳನ್ನು ಕೈಗೊಂಡಿದೆಯೇ?
ಹೌದು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ದ್ರವ್ಯತೆಯ ಏರಿಳಿತಗಳನ್ನು ನಿರ್ವಹಿಸಲು ಕೇಂದ್ರ ಬ್ಯಾಂಕ್ಗಳು ಸಾಮಾನ್ಯವಾಗಿ ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳನ್ನು (Open Market Operations) ಬಳಸುತ್ತವೆ. ಇದರ ಭಾಗವಾಗಿ ಸರ್ಕಾರಿ ಬಾಂಡ್ಗಳನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದು ನಡೆಯುತ್ತದೆ.
2016ರ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಏನಾಯಿತು?
2016ರ ನವೆಂಬರ್ನಲ್ಲಿ ನಡೆದ ನೋಟು ಅಮಾನ್ಯೀಕರಣದ ಬಳಿಕ ಭಾರತದಲ್ಲಿ ಇದಕ್ಕೆ ಸ್ಪಷ್ಟ ಉದಾಹರಣೆ ಕಂಡುಬಂದಿತ್ತು. ಆಗ ಸರ್ಕಾರ ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ರಾತ್ರೋರಾತ್ರಿ ಚಲಾವಣೆಯಿಂದ ಹಿಂಪಡೆದಿತ್ತು.
ಹಣವು ಅತ್ಯಂತ ವೇಗವಾಗಿ ಬ್ಯಾಂಕ್ಗಳ ಠೇವಣಿಗಳಿಗೆ ಹರಿದುಬಂದ ಪರಿಣಾಮ, ದ್ರವ್ಯತೆ ಸಾಮಾನ್ಯ ಮಟ್ಟಕ್ಕಿಂತ ಬಹಳ ಹೆಚ್ಚಾಯಿತು. ಇದರಿಂದ ಅಲ್ಪಾವಧಿಯ ಬಡ್ಡಿದರಗಳು ಶೂನ್ಯಕ್ಕೆ ಸಮೀಪಿಸುವ ಅಪಾಯ ಎದುರಾಗಿತ್ತು.
ಮೊದಲಿಗೆ, ಬ್ಯಾಂಕ್ಗಳು ಹೊಂದಿದ್ದ ಎಲ್ಲಾ ಹೆಚ್ಚುವರಿ ಠೇವಣಿಗಳನ್ನು ತಾತ್ಕಾಲಿಕವಾಗಿ ಶೇ.100ರ ನಗದು ಮೀಸಲು ಅವಶ್ಯಕತೆಯಡಿ ಯಾವುದೇ ಬಡ್ಡಿ ನೀಡದೆ ಆರ್ಬಿಐನಲ್ಲಿ ಇರಿಸುವಂತೆ ಸೂಚಿಸಲಾಯಿತು.
ನಂತರ ಹೆಚ್ಚುವರಿ ಹಣವನ್ನು ಹೀರಿಕೊಳ್ಳಲು ಸರ್ಕಾರಕ್ಕೆ ನಿರ್ದಿಷ್ಟವಾಗಿ ಬಾಂಡ್ಗಳನ್ನು ಹೊರಡಿಸಲು ಅವಕಾಶ ನೀಡುವ ಮಾರುಕಟ್ಟೆ ಸ್ಥಿರೀಕರಣ ಯೋಜನೆ (Market Stabilisation Scheme - MSS) ಯನ್ನು ಬಳಸಲಾಯಿತು.
MSS ಬಾಂಡ್ಗಳ ಮಿತಿಯನ್ನು ₹30,000 ಕೋಟಿಯಿಂದ ₹6 ಲಕ್ಷ ಕೋಟಿಗೆ, ಅಂದರೆ 20 ಪಟ್ಟು ಹೆಚ್ಚಿಸಲಾಯಿತು. ಇದರಿಂದ ಆರ್ಬಿಐಗೆ ಅಗತ್ಯ ಕ್ರಮ ಕೈಗೊಳ್ಳಲು ಹೆಚ್ಚಿನ ಅವಕಾಶ ದೊರೆಯಿತು.
2017ರ ಜನವರಿ ಮಧ್ಯಭಾಗದಲ್ಲಿ ಬಾಕಿ ಉಳಿದಿದ್ದ ಅಲ್ಪಾವಧಿಯ MSS ಬಿಲ್ಗಳ ಮೊತ್ತ ₹5 ಲಕ್ಷ ಕೋಟಿಗೂ ಹೆಚ್ಚಾಗಿತ್ತು. ಹೆಚ್ಚುವರಿ ಹಣವನ್ನು ಸಂಪೂರ್ಣವಾಗಿ ಹಿಂಪಡೆಯಲು ಆರ್ಬಿಐ ನಂತರವೂ ಸುಮಾರು ಒಂದು ವರ್ಷದ ಕಾಲ ಮುಕ್ತ ಮಾರುಕಟ್ಟೆಯಲ್ಲಿ ಬಾಂಡ್ಗಳನ್ನು ಮಾರಾಟ ಮಾಡಿತು. ಒಂದೇ ಹಂತದಲ್ಲಿ ₹90,000 ಕೋಟಿ ಮೌಲ್ಯದ ಬಾಂಡ್ಗಳನ್ನು ಮಾರಾಟ ಮಾಡಲಾಗಿತ್ತು.
ಅಮೆರಿಕದಂತಹ ಇತರ ದೇಶಗಳು ಇಂತಹ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಿವೆ?
ಕೊರೋನಾ ಸಾಂಕ್ರಾಮಿಕದ ನಂತರದ ಉತ್ತೇಜನ ಕ್ರಮಗಳ ಹಿನ್ನೆಲೆಯಲ್ಲಿ ಅಮೆರಿಕವೂ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿತ್ತು. ಆರ್ಥಿಕತೆಯನ್ನು ಬೆಂಬಲಿಸಲು ಬಾಂಡ್ಗಳನ್ನು ಖರೀದಿಸಿದ ಪರಿಣಾಮ, ಅಮೆರಿಕದ ಫೆಡರಲ್ ರಿಸರ್ವ್ನ ಬ್ಯಾಲೆನ್ಸ್ ಶೀಟ್ 2020ಕ್ಕೂ ಮುನ್ನ ಸುಮಾರು 4 ಟ್ರಿಲಿಯನ್ ಡಾಲರ್ನಷ್ಟಿದ್ದದ್ದು 2022ರ ವೇಳೆಗೆ ಸುಮಾರು 8 ಟ್ರಿಲಿಯನ್ ಡಾಲರ್ಗೆ ಏರಿಕೆಯಾಗಿತ್ತು.
ಇದರ ಪರಿಣಾಮವಾಗಿ ಬ್ಯಾಂಕ್ಗಳು ಮತ್ತು ಮನಿ-ಮಾರ್ಕೆಟ್ ಫಂಡ್ಗಳ ಬಳಿ ಸುರಕ್ಷಿತವಾಗಿ ಹೂಡಿಕೆ ಮಾಡಲು ಸಾಧ್ಯವಾಗುವ ಸ್ಥಳಗಳಿಗಿಂತ ಹೆಚ್ಚಿನ ಪ್ರಮಾಣದ ಹಣ ಸಂಗ್ರಹವಾಗಿತ್ತು.
ಹೆಚ್ಚುವರಿ ಹಣವನ್ನು ಹೀರಿಕೊಳ್ಳಲು ಅಮೆರಿಕದ ಫೆಡ್ ಯಾವ ಸಾಧನವನ್ನು ಬಳಸಿತು?
ಫೆಡ್ನ ಓವರ್ನೈಟ್ ರಿವರ್ಸ್ ರೆಪೊ (Overnight Reverse Repo) ಸೌಲಭ್ಯ ಹೆಚ್ಚುವರಿ ಹಣವನ್ನು ಹೀರಿಕೊಳ್ಳುವ ಪ್ರಮುಖ ಸಾಧನವಾಯಿತು.
ಫಂಡ್ಗಳು ತಮ್ಮ ಹಣವನ್ನು ರಾತ್ರೋರಾತ್ರಿ ಫೆಡ್ನಲ್ಲಿ ಇರಿಸಿ, ಪ್ರತಿಯಾಗಿ ಖಜಾನೆ ಭದ್ರತಾ ಪತ್ರಗಳನ್ನು ಪಡೆಯುತ್ತಿದ್ದವು. ಮರುದಿನ ಅವುಗಳನ್ನು ಮರಳಿ ಖರೀದಿಸುತ್ತಿದ್ದವು.
ಈ ಸೌಲಭ್ಯವನ್ನು ಬಳಸುವ ಪ್ರಮಾಣವು 2021ರಲ್ಲಿ ಬಹುತೇಕ ಶೂನ್ಯದಿಂದ 2022ರ ಅಂತ್ಯದ ವೇಳೆಗೆ ಸುಮಾರು 2.5ರಿಂದ 2.7 ಟ್ರಿಲಿಯನ್ ಡಾಲರ್ಗಳ ಗರಿಷ್ಠ ಮಟ್ಟಕ್ಕೆ ಏರಿತು. ನಂತರ ಫೆಡ್ ತನ್ನ ಬ್ಯಾಲೆನ್ಸ್ ಶೀಟ್ ಅನ್ನು ಕುಗ್ಗಿಸುತ್ತಿದ್ದಂತೆ ಅದು ಮತ್ತೆ ಶೂನ್ಯದ ಸಮೀಪಕ್ಕೆ ಇಳಿಯಿತು.
ಕೇಂದ್ರ ಬ್ಯಾಂಕ್ಗಳ ಕಾರ್ಯಾಚರಣೆಗಳಿಂದ ದೊರೆಯುವ ಪ್ರಮುಖ ಸಂದೇಶವೇನು?
ಭಾರತದಲ್ಲಿ 2016ರಲ್ಲಿ, 2018-19ರಲ್ಲಿ ಹಾಗೂ ಸಾಂಕ್ರಾಮಿಕದ ನಂತರ ಅಮೆರಿಕದಲ್ಲಿ ನಡೆದ ಬೆಳವಣಿಗೆಗಳನ್ನು ಗಮನಿಸಿದರೆ, ಎಲ್ಲ ಸಂದರ್ಭಗಳಲ್ಲೂ ಕೇಂದ್ರ ಬ್ಯಾಂಕ್ಗಳು ಬಾಂಡ್ಗಳ ಮಾರಾಟ ಅಥವಾ ಖರೀದಿಯನ್ನು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಹಣದ ಹರಿವನ್ನು ನಿರ್ವಹಿಸುವ ಸಾಧನವಾಗಿ ಬಳಸಿವೆ.
ಇದರ ಉದ್ದೇಶ ಪ್ರಮುಖ ನೀತಿ ದರವನ್ನು ಬದಲಿಸುವುದಲ್ಲ. ಬದಲಾಗಿ, ಹಣದುಬ್ಬರ ಅಥವಾ ಹಣಕಾಸು ಅಸ್ಥಿರತೆಗೆ ಕಾರಣವಾಗದೆ, ಗುರಿಯಾಗಿರಿಸಿದ ಬಡ್ಡಿದರವನ್ನು ಬೆಂಬಲಿಸುವಷ್ಟು ಪ್ರಮಾಣದ ಹಣ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇರುವಂತೆ ನೋಡಿಕೊಳ್ಳುವುದಾಗಿದೆ.
ಸಾಮಾನ್ಯ ಬ್ಯಾಂಕ್ ಗ್ರಾಹಕರಿಗೆ ಇದರ ಅರ್ಥವೇನು?
ಸಾಮಾನ್ಯ ಬ್ಯಾಂಕ್ ಗ್ರಾಹಕರಿಗೆ ಈ ಎಲ್ಲ ಬೆಳವಣಿಗೆಗಳಿಂದ ಸಿಗುವ ಸಂದೇಶ ಒಂದೇ ರೀತಿಯಾಗಿದೆ. ಬ್ಯಾಂಕ್ ಖಾತೆಗಳಿಂದ ಯಾವುದೇ ಹಣವನ್ನು ನೇರವಾಗಿ ಕಡಿತಗೊಳಿಸಲಾಗುವುದಿಲ್ಲ ಮತ್ತು ಸಾಲದ EMIಗಳು ಸ್ವಯಂಚಾಲಿತವಾಗಿ ಬದಲಾಗುವುದಿಲ್ಲ.
ಬದಲಾಗಬಹುದಾದದ್ದು, ಕೆಲವೊಮ್ಮೆ ಸ್ವಲ್ಪ ವಿಳಂಬದೊಂದಿಗೆ, ಸಾಲ ಪಡೆಯುವ ಒಟ್ಟಾರೆ ವೆಚ್ಚ. ಹಾಗೆಯೇ ಬಾಂಡ್ ಯೀಲ್ಡ್ಗಳು ಮತ್ತು ಮಾರುಕಟ್ಟೆ ಬಡ್ಡಿದರಗಳು ವ್ಯವಸ್ಥೆಯಲ್ಲಿನ ಹೆಚ್ಚುವರಿ ಹಣದ ಪ್ರಮಾಣಕ್ಕೆ ಅನುಗುಣವಾಗಿ ಬದಲಾಗುವಾಗ, ಉಳಿತಾಯ ಮಾಡುವವರಿಗೆ ದೊರೆಯುವ ಠೇವಣಿ ಬಡ್ಡಿದರಗಳ ಮೇಲೂ ಪರಿಣಾಮ ಬೀರಬಹುದು.
ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಮೊಬೈಲ್ ನೆಟ್ ವರ್ಕ್ ಜಾಮರ್ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಸಂಪುಟ ಸಭೆ ನಡೆಯುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ 'ಪ್ರಜಾಸೌಧ’ಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ವಕೀಲರನ್ನು ಪೊಲೀಸರು ನ್ಯಾಯಲಯದ ಆವರಣದಲ್ಲೇ ಶುಕ್ರವಾರ ವಶಕ್ಕೆ ಪಡೆದರು.
ಮಂಗಳೂರಲ್ಲಿ ಸಂಪುಟ ಸಭೆ: 'ಅಂಬಾರಿ'ಯಲ್ಲಿ ಬಂದ ಸಿಎಂ, ಸಚಿವರಿಗೆ ಅದ್ದೂರಿ ಸ್ವಾಗತಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಿಂದ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ನೇತೃತ್ವದಲ್ಲಿ ವಕೀಲರು ಪ್ರಜಾಸೌಧದತ್ತ ಮೆರವಣಿಗೆಯಲ್ಲಿ ಹೊರಟಿದ್ದರು. ಸ್ಥಳದಲ್ಲಿದ್ದ ಪೊಲೀಸರು ಅವರನ್ನು ವಶಕ್ಕೆ ಪಡೆದು ಪೊಲೀಸ್ ವಾಹನಗಳಲ್ಲಿ ಕರೆದೊಯ್ದರು.
ಜೈಲಿನಲ್ಲಿ ಅಳವಡಿಸಲಾಗಿರುವ ಮೊಬೈಲ್ ನೆಟ್ ವರ್ಕ್ ಜಾಮರ್ಗಳಿಂದಾಗಿ ಸಮೀಪದಲ್ಲೇ ಇರುವ ನ್ಯಾಯಾಲಯ ಆವರಣದಲ್ಲೂ ಮೊಬೈಲ್ ನೆಟ್ವರ್ಕ್ ಮತ್ತು ಇಂಟರ್ನೆಟ್ ಸಂಪರ್ಕ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ. ವಕೀಲರ ದೈನಂದಿನ ವೃತ್ತಿ ಹಾಗೂ ಕೋರ್ಟ್ ಕಲಾಪಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ವಕೀಲರು ತಿಳಿಸಿದ್ದಾರೆ.
ಜಾಮರ್ ವ್ಯಾಪ್ತಿಯನ್ನು ಜೈಲು ಆವರಣಕ್ಕಷ್ಟೇ ಸೀಮಿತಗೊಳಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ವೇಳೆ ಪ್ರತಿಭಟನೆ ನಡೆಸುತ್ತೇವೆ: ವಕೀಲರ ಸಂಘದ ಎಚ್ಚರಿಕೆಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಹಿರಿಯ ನಟ ಅನಂತ್ ನಾಗ್, ತಾವು ಮತ್ತೆ ಬಣ್ಣದ ಪ್ರಪಂಚಕ್ಕೆ ಮರಳುವ ಯಾವುದೇ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಶಸ್ತಿ ಬಂದ ಖುಷಿಯ ನಡುವೆಯೇ, ಇಂದಿನ ಸಿನಿಮಾ ರಂಗದ ಬದಲಾದ ಆದ್ಯತೆಗಳು ಮತ್ತು ಕಥೆಗಳ ಕಳಪೆ ಗುಣಮಟ್ಟದ ಬಗ್ಗೆ ಅವರು ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.
ಚಿತ್ರರಂಗದಲ್ಲಿ ಕಥೆ ಮತ್ತು ವಿಷಯ ಆಧಾರಿತ ಸಿನಿಮಾಗಳಿಗಿಂತ ಕೇವಲ ಬಾಕ್ಸ್ ಆಫೀಸ್ ಕಲೆಕ್ಷನ್ ಹಾಗೂ ಹಣಕ್ಕೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಅನಂತ್ ನಾಗ್ ವಿಮರ್ಶಿಸಿದ್ದಾರೆ. ಇತ್ತೀಚೆಗೆ ಕಥೆಗಳ ಗುಣಮಟ್ಟ ಸಂಪೂರ್ಣವಾಗಿ ಕುಸಿಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿಷಯ ಅವರಿಗೆ ತೀವ್ರ ಬೇಸರ ಮೂಡಿಸಿದೆ.
‘ನಾನು ಒಪ್ಪಿಕೊಂಡ ಕೊನೆಯ ಐದೂ ಸಿನಿಮಾಗಳು ಸೋತವು. ಆ ಕ್ಷಣವೇ ನನಗೆ ಅನಿಸಿತು – ಇಷ್ಟಕ್ಕೇ ಸಾಕು, ಇದನ್ನೆಲ್ಲಾ ಬಿಟ್ಟುಬಿಡಬೇಕು. ನಾನು ಇನ್ಮುಂದೆ ನಟಿಸಬಾರದು ಎಂದು ನಿರ್ಧರಿಸಿದೆ’ ಎಂದು ತಮ್ಮ ನಿವೃತ್ತಿಯ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ಅಲ್ಲದೆ, ತಾವು ನಟನೆಯಿಂದ ದೂರವುಳಿಯಲು ಯಾವುದೇ ಆರೋಗ್ಯ ಸಮಸ್ಯೆ ಕಾರಣವಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಪೀಳಿಗೆಯ ಯಾವುದೇ ಸಮಕಾಲೀನ ನಿರ್ದೇಶಕರ ಜೊತೆ ಕೆಲಸ ಮಾಡಲು ತಮಗೆ ಆಸಕ್ತಿ ಇಲ್ಲ ಎಂದಿರುವ ಅವರು, ಉತ್ತಮ ವಿಷಯ ಮತ್ತು ಪ್ರೇಕ್ಷಕರನ್ನು ಕಡೆಗಣಿಸಿ ಬರೀ ಕಲೆಕ್ಷನ್ ಬೆನ್ನತ್ತಿರುವ ಇಂದಿನ ಸಿನಿಮಾ ಸಂಸ್ಕೃತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಅನಂತ್ ನಾಗ್ ಅವರು ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು. ಅವರು ಇಷ್ಟು ಕಠಿಣ ನಿರ್ಧರ ತೆಗೆದುಕೊಂಡಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರು ಚಿತ್ರರಂಗಕ್ಕೆ ಮರಳಬೇಕು ಎಂಬುದು ಅನೇಕರ ಕೋರಿಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬೆಂಗಳೂರು, ಸೆಪ್ಟೆಂಬರ್ 18: ಪ್ರತಿದಿನ 40 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಕ್ಕೆ ಅವಲಂಬಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ತೀರಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಬಿಎಂಟಿಸಿಗೆ ಡೀಸೆಲ್ ಸರಬರಾಜು ಮಾಡುವ ತೈಲ ಕಂಪನಿಗಳಿಗೆ ನಾಲ್ಕೈದು ತಿಂಗಳಿನಿಂದ ಹಣ ಪಾವತಿ ಮಾಡಿಲ್ಲ. ಹೀಗಾಗಿ ತಿಂಗಳೊಳಗೆ ದುಡ್ಡು ನೀಡದಿದ್ದರೆ, ಡೀಸೆಲ್ ಸಪ್ಲೈ ನಿಲ್ಲಿಸೋದಾಗಿ ಕಂಪನಿಗಳು ತಿಳಿಸಿವೆ. ಒಂದೊಮ್ಮೆ ಪರಿಸ್ಥಿತಿ ಅಲ್ಲಿಯವರೆಗೆ ಹೋದಲ್ಲಿ ಬಿಎಂಟಿಸಿ ಬಸ್ಸುಗಳು ಡಿಪೋಗಳಲ್ಲೇ ನಿಲ್ಲುವುದು ಗ್ಯಾರಂಟಿ ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ಆತಂಕ ವ್ಯಕ್ತಪಡಿಸಿದ್ದಾರೆ.
‘4 ನಿಗಮಗಳಿಗೆ ಶಕ್ತಿ ಯೋಜನೆಯ 5 ಸಾವಿರ ಕೋಟಿ ಹಣ ಬಾಕಿ’ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರದಿಂದ ಶಕ್ತಿ ಯೋಜನೆಯ 5 ಸಾವಿರ ಕೋಟಿ ಹಣ ಪಾವತಿಯಾಗದೆ ಬಾಕಿ ಉಳಿದಿದೆ. ಈ ಪೈಕಿ ಬಿಎಂಟಿಸಿಗೇ ಒಂದು ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಬಾಕಿ ಇದೆ. ಬಿಎಂಟಿಸಿಯಲ್ಲಿರುವ 5,169 ಡೀಸೆಲ್ ಬಸ್ಸುಗಳಿಗೆ ಪ್ರತಿದಿನ ಸರಾಸರಿ 2.5 ಲಕ್ಷ ಲೀಟರ್ ಡೀಸೆಲ್ ಬೇಕಾಗುತ್ತದೆ. ಇದರಿಂದ ಪ್ರತಿದಿನ ತೈಲ ಕಂಪನಿಗಳಿಗೆ 2ರಿಂದ 3 ಕೋಟಿ ರೂಪಾಯಿಗಳಷ್ಟು ಹಣ ಪಾವತಿ ಮಾಡಬೇಕಾಗುತ್ತದೆ. ಆದರೆ ಕಳೆದ ನಾಲ್ಕೈದು ತಿಂಗಳಿನಿಂದ ಹಣ ಪಾವತಿ ಮಾಡದ ಹಿನ್ನೆಲೆ ಸುಮಾರು 600 ಕೋಟಿ ರೂಪಾಯಿಯಷ್ಟು ಬಾಕಿ ಉಳಿದುಕೊಂಡಿದೆ. ಒಂದೊಮ್ಮೆ ಕಂಪನಿಗಳು ಇಂಧನ ಸರಬರಾಜು ನಿಲ್ಲಿಸಿದರೆ ಪ್ರಯಾಣಿಕರಿಗೆ ಬಹಳ ತೊಂದರೆಯಾಗಲಿದೆ ಎಂದು ಜಗದೀಶ್ ಹೇಳಿದ್ದಾರೆ.
.liveTvWebbx { background: #fff; margin-bottom: 10px; } .liveTvWebbx span { display: flex; align-items: center; justify-content: center; background: #dc0000; padding: 5px 0; } .liveTvWebbx span a { color: #fff; font-size: 22px; display: flex; align-items: center; justify-content: center; font-weight: 600; line-height: 28px; text-decoration: none; } .liveTvWebbx span a:hover{color:#fff;} .liveTvWebbx span a svg { width: 2rem; height: 2rem; margin-right: 5px; display: inline-block; flex-shrink: 0; vertical-align: middle; fill: none; stroke: #fff; stroke-width: 2; stroke-linecap: round; stroke-linejoin: round; transform-origin: center; animation: livePulse 1.3s ease-in-out infinite; } @keyframes livePulse { 0% { transform: scale(1); opacity: 1; } 50% { transform: scale(1.08); opacity: 1; } 100% { transform: scale(1); opacity: 1; } } .liveTvWebbx iframe, .liveTvWebbx amp-iframe { width: 100%; height: auto; aspect-ratio: 16 / 9; display: block; border: none; } LIVE TV document.addEventListener('DOMContentLoaded', function () { let liveTV = document.querySelector('.live-tv-tracking'); if (liveTV) { liveTV.addEventListener('click', function () { if (typeof dataLayer !== 'undefined') { dataLayer.push({ 'event': 'article_live_tv_click', 'widget_name': 'article_live_tv', 'click_location': 'article' }); } }); } });ಇದನ್ನೂ ಓದಿ: 4,500 ಇವಿ ಬಸ್ ಸೇರ್ಪಡೆಗೆ ಅಸ್ತು: ಬಿಎಂಟಿಸಿ ಚಾಲಕರನ್ನೇ ನೇಮಿಸಲು ನೌಕರರ ಪಟ್ಟು, ಹೋರಾಟದ ಎಚ್ಚರಿಕೆ
ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಅನುದಾನ ನೀಡದೇ ಇದ್ದಲ್ಲಿ ಬಿಎಂಟಿಸಿ ಉಳಿಯಲು ಸಾಧ್ಯವಿಲ್ಲ. ಬಿಡಿ ಭಾಗಗಳ ಕೊರತೆ ವಿಚಾರದಲ್ಲಿಯೂ ಇದೇ ಸ್ಥಿತಿ ಮುಂದುವರಿದ್ದು, ಪ್ರತಿಯೊಂದು ಡಿಪೋಗಳೂ ಇಂತಹುದ್ದೇ ಸಮಸ್ಯೆಯಿಂದ ಬಳಲುತ್ತಿವೆ. ರಾಜ್ಯದ ಜನರ ಜೀವದ ಜೊತೆ ಸರ್ಕಾರ ಚೆಲ್ಲಾಟ ನಡೆಸುತ್ತಿದ್ದು, ಶಕ್ತಿ ಯೋಜನೆ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕಿದೆ. ಸರ್ಕಾರದ ವಿರುದ್ಧ ಮಾತನಾಡಲು ಸಾರಿಗೆ ನೌಕರರು ಹೆದರುತ್ತಿದ್ದಾರೆಯಾದರೂ ಸಾರಿಗೆ ಸಂಘಟನೆಗಳು ಈ ಬಗ್ಗೆ ಧ್ವನಿ ಎತ್ತುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಮಂಗಳೂರು: ರಾಜ್ಯ ಸಚಿವ ಸಂಪುಟ ಸಭೆಗೆ ಆಗಮಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಎಲ್ಲ ಸಚಿವರು ನಗರದ ಕದ್ರಿ ದೇವಸ್ಥಾನದಲ್ಲಿ ಮಂಜುನಾಥ ದೇವರಿಗೆ ಪೂಜೆ ಸಲ್ಲಿಸಿ, ಐರಾವತ ಕ್ಲಬ್ ಕ್ಲಾಸ್ ಬಸ್ನಲ್ಲಿ ಸರ್ಕ್ಯೂಟ್ ಹೌಸ್ಗೆ ತೆರಳಿದರು.
ಅಲ್ಲಿಂದ ವಿಶೇಷ ತೆರೆದ ಅಂಬಾರಿ ಬಸ್ನಲ್ಲಿ ಹೊರಟ ಸಿಎಂ ಹಾಗೂ ಸಚಿವರನ್ನು ಪಂಪ್ವೆಲ್ ಸರ್ಕಲ್ನಿಂದ ಮೆರವಣಿಗೆಯಲ್ಲಿ ಕರೆ ತರಲಾಯಿತು.
ರಣ ಬಿಸಿಲಿನಲ್ಲೂ ಉತ್ಸಾಹದಲ್ಲಿದ್ದ ಡಿಕೆಶಿ ಜನರತ್ತ ಕೈ ಬೀಸುತ್ತ ಸಾಗಿದರು.
ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ರಿಜ್ವಾನ್ ಅರ್ಷದ್ ಪರಸ್ಪರ ಚರ್ಚಿಸುತ್ತ, ಆಗಾಗ ಮುಗುಳ್ನಗುತ್ತ ಜನರತ್ತ ಕೈ ಬೀಸಿದರು. ಶಿವರಾಜ ತಂಗಡಗಿ, ರುದ್ರಪ್ಪ ಲಮಾಣಿ, ಇತರರು ತಲೆಗೆ ಬಿಳಿ ಹ್ಯಾಟ್ ಹಾಕಿಕೊಂಡು ಬಿಸಿಲಿನಿಂದ ರಕ್ಷಣೆ ಪಡೆದರು.
ದಾರಿಯುದ್ದಕ್ಕೂ ನಿಂತಿದ್ದ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ಸಿಎಂ, ಸಚಿವರ ಪರ ಘೋಷಣೆ ಕೂಗಿದರು.
ಪಂಪ್ ವೆಲ್ ನ ಮಹಾವೀರ ವೃತ್ತದಿಂದ ಪಡೀಲ್ ಪ್ರಜಾಸೌಧದ ವರೆಗೆ ಅಲ್ಲಲ್ಲಿ ಕರಾವಳಿಯ ಚಂಡೆವಾದನ, ಹುಲಿವೇಷ, ಗಾರುಡಿಗೊಂಬೆ ಬಳಗಗಳು, ಕೊರಗರ ಕೊಳಲು ವಾದನ, ಬ್ಯಾಂಡ್ ವಾದ್ಯ ತಂಡದವರು ಸಚಿವ ಸಂಪುಟ ಸದಸ್ಯರಿಗೆ ಸ್ವಾಗತ ಕೋರಿದರು. ಅಲ್ಲಲ್ಲಿ ಸಂಗೀತ ರಸಮಂಜರಿ, ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಬೆಂಗಳೂರು: ಇದೇ ಸೆಪ್ಟೆಂಬರ್ 30 ರಿಂದ ಸಿನಿಮಾ ಟಿಕೆಟ್ ಬೆಲೆ ಹೆಚ್ಚಾಗೋದು ಪಕ್ಕಾ! ಯಾಕಂದ್ರೆ, ರಾಜ್ಯಸರ್ಕಾರವು ಈ ಹಿಂದೆ ಜಾರಿಗೆ ತಂದಿದ್ದ ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ, 2024ರ ಅಡಿಯಲ್ಲಿ, ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ಗಳ ಮೇಲೆ ಶೇಕಡಾ 2 ರಷ್ಟು ಹೆಚ್ಚುವರಿ ಸೆಸ್ (ಉಪಕರ) ವಿಧಿಸುವ ನಿಯಮವು ಸೆಪ್ಟೆಂಬರ್ 30 ರಿಂದ ಜಾರಿ ಮಾಡಿದೆ. ಇದರಿಂದಾಗಿ ರಾಜ್ಯದ ಸಿನಿಪ್ರಿಯರಿಗೆ ಟಿಕೆಟ್ ದರದಲ್ಲಿ ಮತ್ತಷ್ಟು ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಈ ಹೆಚ್ಚುವರಿ ಸೆಸ್ ವಿಧಿಸುತ್ತಿರುವುದು ಯಾಕೆ?
ರಾಜ್ಯ ಸರ್ಕಾರವು ಜಾರಿಗೆ ತಂದಿರುವ 'ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ-2024' ಅಡಿಯಲ್ಲಿ ಈ ಸೆಸ್ ಸಂಗ್ರಹಿಸಲಾಗುತ್ತಿದೆ. ಇದರಿಂದ ಬರುವ ಹಣವನ್ನು, ಕನ್ನಡ ಚಿತ್ರರಂಗದ ಕಾರ್ಮಿಕರು, ತಂತ್ರಜ್ಞರು ಮತ್ತು ಸಾಂಸ್ಕೃತಿಕ ಕಲಾವಿದರ ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ನೆರವಿಗಾಗಿ ಪ್ರತ್ಯೇಕ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಈ ನಿಧಿಗೆ ಹಣ ಸಂಗ್ರಹಿಸುವ ಉದ್ದೇಶದಿಂದ ಸಿನಿಮಾ ಟಿಕೆಟ್ಗಳ ಮೇಲೆ 2% ಸೆಸ್ ವಿಧಿಸಲಾಗುತ್ತಿದೆ. ಅದರಲ್ಲೂ, ಈ ಸೆಸ್ ಕೇವಲ ಥಿಯೇಟರ್ ಟಿಕೆಟ್ಗಳಿಗೆ ಮಾತ್ರವಲ್ಲದೆ, ಒಟಿಟಿ ಚಂದಾದಾರಿಕೆ ಮತ್ತು ದೂರದರ್ಶನ ವಾಹಿನಿಗಳ ಆದಾಯದ ಮೇಲೂ ಅನ್ವಯವಾಗುವ ಸಾಧ್ಯತೆಯಿದೆ.
ಟಿಕೆಟ್ ದರ ಎಷ್ಟು ಹೆಚ್ಚಾಗಬಹುದು?
ಕರ್ನಾಟಕದ ಎಲ್ಲಾ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳು ಮತ್ತು ಐಷಾರಾಮಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೂ ಇದು ಅನ್ವಯಿಸುತ್ತದೆ. ಅದರಂತೆ, ಪ್ರಸ್ತುತ ಇರುವ ಟಿಕೆಟ್ ದರದ ಮೇಲೆ ಶೇ. 2 ರಷ್ಟು ಸೆಸ್ ಬೀಳಲಿದೆ. ಉದಾಹರಣೆಗೆ, ನೀವು ₹250 ಬೆಲೆಯ ಟಿಕೆಟ್ ಖರೀದಿಸಿದರೆ ₹5 ಹೆಚ್ಚುವರಿ ಸೆಸ್ ಸೇರಿದಂತೆ ಒಟ್ಟು ₹255 ಪಾವತಿಸಬೇಕಾಗಬಹುದು. ಮತ್ತೊಂದಡೆ, ಚಿತ್ರಮಂದಿರಗಳ ಮಾಲೀಕರು ಈ ಹೊರೆಯನ್ನು ತಾವೇ ಭರಿಸಬೇಕೇ ಅಥವಾ ಗ್ರಾಹಕರಿಗೆ ವರ್ಗಾಯಿಸಬೇಕೇ ಎಂಬ ಬಗ್ಗೆಯೂ ಚರ್ಚಿಸುತ್ತಿದ್ದಾರೆ.
1969ರಿಂದ ಇಲ್ಲಿಯವರೆಗೆ... ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ...ಮುಂದುವರೆದು, ಸರ್ಕಾರದ ಈ ನಿರ್ಧಾರಕ್ಕೆ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಮಾಲೀಕರ ಒಕ್ಕೂಟವಾದ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತೀವ್ರ ಕಳವಳ ವ್ಯಕ್ತಪಡಿಸಿದೆ ಮತ್ತು ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದೆ. ಅದರಂತೆ, ಜಿಎಸ್ಟಿ ವ್ಯವಸ್ಥೆಯು ತೆರಿಗೆಯ ಮೇಲೆ ತೆರಿಗೆ ಬೀಳುವುದನ್ನು ತಡೆಯಲು ಬಂದಿರುವುದಾಗಿದೆ. ಆದರೆ ಈಗಾಗಲೇ ಜಿಎಸ್ಟಿ ವ್ಯಾಪ್ತಿಯಲ್ಲಿರುವ ಸಿನಿಮಾ ಟಿಕೆಟ್ಗಳ ಮೇಲೆ ಮತ್ತೆ ಸೆಸ್ ವಿಧಿಸುವುದು ಜಿಎಸ್ಟಿ ಮೂಲ ತತ್ವಕ್ಕೆ ವಿರುದ್ಧವಾಗಿದೆ ಎಂದು MAI ಅಧ್ಯಕ್ಷ ಕಮಲ್ ಜಿಯಾಂಚಂದಾನಿ ತಿಳಿಸಿದ್ದಾರೆ.
ಏತನ್ಮಧ್ಯೆ, ಈ ಮೊದಲು ಸರ್ಕಾರವು ಸೆಪ್ಟೆಂಬರ್ 1 ರಿಂದಲೇ ಸೆಸ್ ಸಂಗ್ರಹಿಸುವಂತೆ ಸುತ್ತೋಲೆ ಹೊರಡಿಸಿತ್ತು. ಆದರೆ, ಕಾಯ್ದೆಯು ಅಧಿಕೃತವಾಗಿ ಜಾರಿಗೆ ಬರುವ ಮುನ್ನವೇ ಸುತ್ತೋಲೆ ಹೊರಡಿಸಿದ್ದನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಒಕ್ಕೂಟವು ಹೈಕೋರ್ಟ್ ಮೆಟ್ಟಿಲೇರಿತ್ತು. ಆಗ ತಾಂತ್ರಿಕ ಕಾರಣಗಳಿಂದಾಗಿ ಕರ್ನಾಟಕ ಹೈಕೋರ್ಟ್ ಆ ಸುತ್ತೋಲೆಯನ್ನು ರದ್ದುಗೊಳಿಸಿತ್ತು. ಇದೀಗ ಸರ್ಕಾರ ಎಲ್ಲ ಸಿದ್ಧತೆಗಳೊಂದಿಗೆ ಸೆಪ್ಟೆಂಬರ್ 30 ರಿಂದ ಅಧಿಕೃತವಾಗಿ ಜಾರಿಗೊಳಿಸಲು ಮುಂದಾಗಿದೆ.
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ.
ಪ್ರಿಯಾಂಕಾ ಉಪೇಂದ್ರ ಮಕ್ಕಳಾದ ಐಶ್ವರ್ಯ ಹಾಗೂ ಆಯುಷ್ ಗಣೇಶ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.
ನಟ ಉಪೇಂದ್ರ ಕುಟುಂಬ ಒಟ್ಟಾಗಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಟ ಉಪೇಂದ್ರ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.
ಗಣೇಶನ ಮೂರ್ತಿ ಮುಂದೆ ನಿಂತುಕೊಂಡು ನಟ ಉಪೇಂದ್ರ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
ದಕ್ಷಿಣ ವಲಯ ಬಾಕ್ಸಿಂಗ್ ಚಾಂಪಿಯನ್ಷಿಪ್ಗೆ ಬಂದ 100ಕ್ಕೂ ಹೆಚ್ಚು ಬಾಕ್ಸರ್ಗಳಿಗೆ ಮಲಗಲು ಹಾಸಿಗೆ ಇಲ್ಲದೆ ನೆಲದ ಮೇಲೆ ವಿಶ್ರಾಂತಿ ಪಡೆಯುವ ಪರಿಸ್ಥಿತಿ ಉಂಟಾಯಿತು.
ಅಧಿಕಾರಿಗಳಿಗೆ ನೀಡಿರುವ ಸೌಲಭ್ಯಗಳೇನು?ತರಬೇತುದಾರರಿಗೆ ಹವಾನಿಯಂತ್ರಿತ (AC) ಕೊಠಡಿಗಳನ್ನು ನೀಡಲಾಗಿದ್ದರೆ, 35ಕ್ಕೂ ಹೆಚ್ಚು ಫೆಡರೇಷನ್ ಅಧಿಕಾರಿಗಳಿಗೆ ಹೋಟೆಲ್ಗಳಲ್ಲಿ ಉಳಿದುಕೊಳ್ಳಲು ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ.
ಕ್ರೀಡಾಪಟುಗಳು ಎದುರಿಸುತ್ತಿರುವ ಸಮಸ್ಯೆಗಳೇನು?ವಸತಿ ಕೊಠಡಿಗಳಲ್ಲಿ ಲಾಕರ್ ವ್ಯವಸ್ಥೆ ಇಲ್ಲ, ಶೌಚಾಲಯಗಳು ಸ್ವಚ್ಛವಾಗಿಲ್ಲ ಮತ್ತು ಬಟ್ಟೆ ಒಣಗಿಸಲು ಸೂಕ್ತ ಜಾಗವಿಲ್ಲ ಎಂದು ಕ್ರೀಡಾಪಟುಗಳು ದೂರಿದ್ದಾರೆ.
ಕೆಎಬಿಎ ನೀಡಿದ ಸಮರ್ಥನೆ ಏನು?ಮೊದಲ ಬಾರಿಗೆ ಆಯೋಜಿಸುತ್ತಿರುವ ಈ ಚಾಂಪಿಯನ್ಷಿಪ್ನಲ್ಲಿ ನೆಲದ ಮೇಲೆ ಹಾಸಿಗೆ ಹಾಕಿ ಮಲಗುವುದು ಅಸಾಮಾನ್ಯವಲ್ಲ ಎಂದು ಕೆಎಬಿಎ ಪ್ರಧಾನ ಕಾರ್ಯದರ್ಶಿ ಸಾಯಿ ಸತೀಶ್ ಸಮರ್ಥಿಸಿಕೊಂಡಿದ್ದಾರೆ.
ಸ್ವಚ್ಛತೆಯ ಕೊರತೆಗೆ ಕಾರಣವೇನು?ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಸಿನಿಮಾಗೆ ಸಂಬಂಧಿತ ಕಾರ್ಯಕ್ರಮದಿಂದಾಗಿ ಕೊಠಡಿಗಳ ಸ್ವಚ್ಛತೆಯಲ್ಲಿ ಸಮಸ್ಯೆಯಾಗಿತ್ತು, ಈಗ ಅದನ್ನು ಸರಿಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
(function(){var script=document.currentScript;var list=script&&script.previousElementSibling;if(!list||list.__faqAccordionBound)return;list.__faqAccordionBound=true;list.addEventListener("toggle",function(event){var item=event.target;if(!item||!item.classList||!item.classList.contains("faq-item")||!item.open)return;var items=list.querySelectorAll(".faq-item[open]");for(var i=0;iಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮಕೈಗೊಳ್ಳಲಾಗಿದೆ. ಜಾಮರ್ಗಳ ಭದ್ರತಾ ಕಾರ್ಯಕ್ಕೆ ಧಕ್ಕೆಯಾಗದಂತೆ ಆಂಟೆನಾ ವಿನ್ಯಾಸ ಮತ್ತು ಸಾಮರ್ಥ್ಯದಲ್ಲಿ ಅಗತ್ಯ ಹೊಂದಾಣಿಕೆ ಮಾಡಲಾಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆ. ಜಿಲ್ಲಾ ಕಾರಾಗೃಹದ ಆವರಣದಲ್ಲಿ ಅಳವಡಿಸಿರುವ ಮೊಬೈಲ್ ಸಿಗ್ನಲ್ ಜಾಮರ್ಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಕಾರಾಗೃಹದ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಮೊಬೈಲ್ ಸಂಪರ್ಕದ ಮೇಲೆ ಅನಗತ್ಯ ಪರಿಣಾಮ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆಯನ್ನು ಪರಿಹರಿಸಲು ಅಗತ್ಯ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ನಡೆಯುವ ಪ್ರಜಾಸೌಧಕ್ಕೆ ಮುತ್ತಿಗೆ ಯತ್ನ:CPM ಕಾರ್ಯಕರ್ತರ ವಶಕ್ಕೆಕಾರಾಗೃಹದೊಳಗೆ ಜಾಮರ್ಗಳು ತಮ್ಮ ಉದ್ದೇಶಿತ ಭದ್ರತಾ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದರ ಜೊತೆಗೆ, ಸುತ್ತಮುತ್ತಲಿನ ಸಾರ್ವಜನಿಕರಿಗೆ ಮೊಬೈಲ್ ಸಂಪರ್ಕ ಸೇವೆಗಳಲ್ಲಿ ಉಂಟಾಗುತ್ತಿರುವ ಅನಗತ್ಯ ವ್ಯತ್ಯಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ಉದ್ದೇಶದಿಂದ ಮತ್ತಷ್ಟು ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ಸಚಿವರು ಮಾಹಿತಿ ನಿಡಿದ್ದಾರೆ.
ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ಸಮನ್ವಯ ಸಾಧಿಸಿ, ಮೊಬೈಲ್ ನೆಟ್ವರ್ಕ್ ಸೇವೆಗಳ ಮೇಲೆ ಜಾಮರ್ಗಳಿಂದ ಉಂಟಾಗುತ್ತಿರುವ ಪರಿಣಾಮವನ್ನು ತಗ್ಗಿಸಲು ಅಗತ್ಯವಿರುವ ತಾಂತ್ರಿಕ ಹೊಂದಾಣಿಕೆಗಳನ್ನು ಮಾಡಲಾಗುತ್ತಿದೆ.
'ಕಾರಾಗೃಹದ ಭದ್ರತೆ ಅತ್ಯಂತ ಮುಖ್ಯವಾಗಿರುವಂತೆಯೇ, ಕಾರಾಗೃಹದ ಸುತ್ತಮುತ್ತ ವಾಸಿಸುವ ಸಾರ್ವಜನಿಕರಿಗೆ ಮತ್ತು ಇತರ ಬಳಕೆದಾರರಿಗೆ ಮೊಬೈಲ್ ಸಂಪರ್ಕ ಸೇವೆಯಲ್ಲಿ ಅನಗತ್ಯ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳುವುದೂ ಅಗತ್ಯ. ಈ ಎರಡೂ ಅಗತ್ಯಗಳ ನಡುವೆ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ತಾಂತ್ರಿಕ ಪರಿಹಾರಗಳನ್ನು ಕೈಗೊಳ್ಳಲಾಗುತ್ತಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ..
'ಜಂಟಿ ತಾಂತ್ರಿಕ ಸಮೀಕ್ಷೆಯ ಆಧಾರದ ಮೇಲೆ ಈಗಾಗಲೇ ಅಗತ್ಯ ಹೊಂದಾಣಿಕೆಗಳನ್ನು ಕೈಗೊಳ್ಳಲಾಗಿದೆ. ಟೆಲಿಕಾಂ ಸೇವಾ ಪೂರೈಕೆದಾರರೊಂದಿಗೆ ಸಮನ್ವಯದಿಂದ ಮತ್ತಷ್ಟು ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ' ಎಂದು ಅವರು ಹೇಳಿದ್ದಾರೆ.
ಸಚಿವ ಸಂಪುಟ ಸಭೆಗೂ ಮುನ್ನ ಕದ್ರಿ ದೇಗುಲಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ, ಸಚಿವರುತುಮಕೂರು, ಸೆಪ್ಟೆಂಬರ್ 18: ಕ್ಷೇತ್ರ ಮರುವಿಂಗಡಣೆ ಖಚಿತವಾಗಿದ್ದು, ಮಧುಗಿರಿ ಕ್ಷೇತ್ರ ರಚನೆಯಾದರೆ ತಾವು ಚುನಾವಣೆಗೆ ಸ್ಪರ್ಧಿಸುವುದಾಗಿ ಮಾಜಿ ಸಚಿವ, ಶಾಸಕ ಕೆಎನ್ ರಾಜಣ್ಣ ಶುಕ್ರವಾರ ಹೇಳಿದ್ದಾರೆ. ಮಹಿಳಾ ಮೀಸಲಾತಿ ವಿಧೇಯಕಕ್ಕೂ ತಮ್ಮ ಬೆಂಬಲವಿದೆ ಎಂದು ಅವರು ತಿಳಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ರಾಜಣ್ಣ, ಕ್ಷೇತ್ರ ಮರುವಿಂಗಡಣೆ ಬಳಿಕ ಮಧುಗಿರಿ ಉಪವಿಭಾಗಕ್ಕೆ ಒಂದು ಲೋಕಸಭಾ ಕ್ಷೇತ್ರ ಬರುವ ಸಾಧ್ಯತೆಯಿದೆ. ಆಗ ತಾವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಯಾವುದೇ ವಿಧೇಯಕ ಅಂಗೀಕಾರವಾಗುವುದು ಕಷ್ಟವಲ್ಲ. ತಾವು ಮಹಿಳಾ ಮೀಸಲಾತಿ ವಿಧೇಯಕದ ಪರವಾಗಿರುವುದಾಗಿ ಹೇಳಿದ್ದಾರೆ. ವಿಶೇಷವೆಂದರೆ, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿರಲಿಲ್ಲ. ಇದೀಗ ಕಾಂಗ್ರೆಸ್ ಹೈಕಮಾಂಡ್ ನಿಲುವಿಗೂ ಮೀರಿ ರಾಜಣ್ಣ ಮಹಿಳಾ ಮೀಸಲಾತಿ ವಿಧೇಯಕ ಪರ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮುಂದುವರಿಸಿದ ರಾಜಣ್ಣಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದದ ಪ್ರಶ್ನಾತೀತ ನಾಯಕರು ಎಂದು ರಾಜಣ್ಣ ಹೇಳಿದ್ದಾರೆ. ಸಿದ್ದರಾಮಯ್ಯ ಬಲವಾಗಿದ್ದರೆ ಕಾಂಗ್ರೆಸ್ ಪಕ್ಷವೂ ಬಲವಾಗಿರುತ್ತದೆ. ಅವರು ದುರ್ಬಲರಾದರೆ ಪಕ್ಷವೂ ದುರ್ಬಲಗೊಳ್ಳುತ್ತದೆ ಎಂದು ಗುರುವಾರ ಮಧುಗಿರಿಯಲ್ಲಿ ಹೇಳಿಕೆ ನೀಡಿದ್ದರು. ಇದೀಗ ಮುಂದುವರಿದು, ಸಿದ್ದರಾಮಯ್ಯ ಅವರು ತಮ್ಮನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಲು ಪ್ರಯತ್ನಿಸಿದ್ದರು. ಆದರೆ ಆ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅವರ ಮಾತು ನಡೆಯುವುದಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ವಿಚಾರದಲ್ಲಿ ತಮಗೆ ಯಾವುದೇ ಹಿನ್ನಡೆಯಾಗಿಲ್ಲ ಎಂದಿರುವ ಅವರು, ಸಿದ್ದರಾಮಯ್ಯ ಅವರ ಪ್ರಯತ್ನಕ್ಕೆ ಫಲ ಸಿಗದಿರುವುದನ್ನು ವೈಯಕ್ತಿಕ ಹಿನ್ನಡೆಯಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. ‘ನಾನೀಗ ಮುಖ್ಯಮಂತ್ರಿ ಅಲ್ಲ, ನನ್ನ ಮಾತು ಎಷ್ಟು ನಡೆಯುತ್ತದೆ? ಎಷ್ಟು ನಡೆಯುವುದಿಲ್ಲ ಎಂಬುದು ನನಗೆ ಮಾತ್ರ ಗೊತ್ತು’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಗುರುವಾರ ಮಾರ್ಮಿಕವಾಗಿ ಹೇಳಿದ್ದರು.
ಇಂದು ರಾಜಣ್ಣ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತುಮಕೂರಿಗೆ ಆಗಮಿಸಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಕಾರ್ಯಕ್ರಮಗಳ ಬಳಿಕ ಸಿದ್ದರಾಮಯ್ಯ ಅವರು ತುಮಕೂರಿನ ಕ್ಯಾತಸಂದ್ರದಲ್ಲಿರುವ ರಾಜಣ್ಣ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ರಾಜಣ್ಣ ನಿವಾಸದಲ್ಲೇ ಊಟ ಮಾಡಲಿದ್ದು, ಊಟದ ವೇಳೆ ರಾಜಕೀಯ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಸ್ಟ್ರಾಂಗ್ ಇದ್ರೆ ಕಾಂಗ್ರೆಸ್ ಪಕ್ಷವೂ ಸ್ಟ್ರಾಂಗ್, ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಜಿಂಬಾಬ್ವೆಯಲ್ಲಿ 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರೂ, 15 ವರ್ಷದ ಪ್ರತಿಭಾವಂತ ಆಟಗಾರ ವೈಭವ್ ಸೂರ್ಯವಂಶಿ ಇದೀಗ ತಮ್ಮ ಅವಕಾಶಕ್ಕಾಗಿ ಕಾಯಬೇಕಿದೆ; ಏಕೆಂದರೆ ಆಯ್ಕೆ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಅವರಿಗಿಂತ ಮುಂದಿದ್ದಾರೆ. ಗುರುವಾರವಷ್ಟೇ ಭಾರತ ತಂಡ 3-0 ಅಂತರದಿಂದ ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಆಡುವ ಅವಕಾಶ ಸಿಗಲಿಲ್ಲ. ಶ್ರೇಯಸ್ ಅಯ್ಯರ್ ನೇತೃತ್ವದ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಲಿರುವ ಮುಂಬರುವ ಏಷ್ಯನ್ ಗೇಮ್ಸ್ನಲ್ಲೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.
ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರ ಹಿಂದಿನ ಪ್ರದರ್ಶನಗಳನ್ನು ಪರಿಗಣಿಸಿ ಸದ್ಯಕ್ಕೆ ಅವರನ್ನೇ ಮುಂದುವರಿಸುವ ಸಾಧ್ಯತೆಯಿರುವುದರಿಂದ, ಸೂರ್ಯವಂಶಿ ಅವರು ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಗುರುವಾರ ಸ್ಪಷ್ಟಪಡಿಸಿದರು. ಯುಕೆ ಪ್ರವಾಸದ ವೇಳೆ ಸ್ಯಾಮ್ಸನ್ ಮತ್ತು ಸೂರ್ಯವಂಶಿ ಅವರ ವಿಷಯದಲ್ಲಿ ತಂಡದ ಆಡಳಿತ ಮಂಡಳಿಯು ಅನುಸರಿಸಿದ ನಿಲುವು ಚರ್ಚೆಗೆ ಗ್ರಾಸವಾಯಿತು; ಏಕೆಂದರೆ, ಇಬ್ಬರಿಗೂ ತಲಾ ಮೂರು ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕರೂ, ಯಾರೊಬ್ಬರೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ.
ಜಿಂಬಾಬ್ವೆ ಪ್ರವಾಸದಲ್ಲಿ ಸ್ಯಾಮ್ಸನ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು; ಆ ಸರಣಿಯಲ್ಲಿ ಅಭಿಷೇಕ್ ಅವರೊಂದಿಗೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಸೂರ್ಯವಂಶಿ ಒಟ್ಟು 151 ರನ್ ಗಳಿಸಿ 'ಸರಣಿ ಶ್ರೇಷ್ಠ ಆಟಗಾರ' ಪ್ರಶಸ್ತಿಗೆ ಭಾಜನರಾದರು. ಆದರೆ, ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಬಲಗೈ ಬ್ಯಾಟರ್ ತಂಡಕ್ಕೆ ಮರಳಿದ ಪರಿಣಾಮ, ಸೂರ್ಯವಂಶಿ ಅವರು ಬೆಂಚ್ಗೆ ಸೀಮಿತಗೊಳ್ಳಬೇಕಾಯಿತು.
'ವೈಭವ್ ವಿಷಯದಲ್ಲಿ, ಅವರು ತಮ್ಮ ಅವಕಾಶಕ್ಕಾಗಿ ಕಾಯಲೇಬೇಕು ಎಂಬುದು ಸ್ಪಷ್ಟವಾದ ವಿಷಯ. ಅವರಲ್ಲಿರುವ ಪ್ರತಿಭೆ ನಮಗೆ ತಿಳಿದಿದೆ; ಅವರು ಏನು ಮಾಡಬಲ್ಲರು ಎಂಬುದು ನಮಗೆ ಗೊತ್ತು. ಆದರೆ, ತಂಡಕ್ಕೆ ಹೊಸದಾಗಿ ಸೇರಿದವರಿಗಿಂತ, ಹಲವು ವರ್ಷಗಳಿಂದ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವವರು ಸಹಜವಾಗಿಯೇ ಮುಂದಿರುತ್ತಾರೆ. ಅವರಿಗೆ ಯಾವಾಗ ಅವಕಾಶ ಸಿಗುತ್ತದೆಯೋ, ಆಗ ಅವರಿಗೆ ದೀರ್ಘಕಾಲ ಆಡುವ ಅವಕಾಶವೂ ಸಿಗುತ್ತದೆ' ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಗಂಭೀರ್ ತಿಳಿಸಿದರು.
'ಪೈಪೋಟಿ ಏನಿದ್ದರೂ ಹೊರಜಗತ್ತಿಗೆ': ಆರಂಭಿಕ ಸ್ಥಾನಕ್ಕಾಗಿ ವೈಭವ್ ಸೂರ್ಯವಂಶಿ ಜೊತೆಗಿನ ಪೈಪೋಟಿ ಕುರಿತು ಸಂಜು ಸ್ಯಾಮ್ಸನ್'ಭಾರತೀಯ ಕ್ರಿಕೆಟ್ನ ಮೂಲ ಸ್ವರೂಪವೇ ಇದಾಗಿದೆ. ನಮಗೆ ಪೈಪೋಟಿ ಬೇಕು, ಡ್ರೆಸ್ಸಿಂಗ್ ರೂಮ್ನಲ್ಲಿ ಅಂತಹ ಪ್ರತಿಭೆ ಇರಬೇಕೆಂದು ನಾವು ಬಯಸುತ್ತೇವೆ. ಆದರೆ ಕೆಲವೊಮ್ಮೆ ಕ್ರಿಕೆಟ್ನಲ್ಲಿ ಪರಿಸ್ಥಿತಿ ಹೀಗೆಯೇ ಇರುತ್ತದೆ. ಆಟಗಾರ 15 ವರ್ಷದವರಾಗಿರಲಿ ಅಥವಾ 30 ವರ್ಷದವರಾಗಿರಲಿ, ಅವಕಾಶಕ್ಕಾಗಿ ಕಾಯಲೇಬೇಕಾಗುತ್ತದೆ' ಎಂದು ಅವರು ಹೇಳಿದರು.
ಅತ್ಯಂತ ಕಠಿಣ ನಿರ್ಧಾರವಾಗಿತ್ತು
ಯುಕೆ ಪ್ರವಾಸದ ವೇಳೆ, ಇಂಗ್ಲೆಂಡ್ ವಿರುದ್ಧ ಒಂದು ಮತ್ತು ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳಲ್ಲಿ ಕಡಿಮೆ ರನ್ ಗಳಿಸಿದ ನಂತರ ಸಂಜು ಸ್ಯಾಮ್ಸನ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಯಿತು. ಇದರಿಂದಾಗಿ ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡುವಂತಾಯಿತು; ಆದರೆ, ಈ ಯುವ ಆಟಗಾರ ಕೂಡ ಸತತ ಮೂರು ಪಂದ್ಯಗಳಲ್ಲಿ ವಿಫಲರಾದಾಗ ಅವರನ್ನು ತಂಡದಿಂದ ಕೈಬಿಡಲಾಯಿತು.
ಆದಾಗ್ಯೂ, ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಎರಡು ಅರ್ಧಶತಕಗಳನ್ನು ಗಳಿಸುವ ಮೂಲಕ ಸ್ಯಾಮ್ಸನ್ ತಮ್ಮ ಪ್ರದರ್ಶನವನ್ನು ಸುಧಾರಿಸಿಕೊಂಡರು. ಇಂಗ್ಲೆಂಡ್ ಪ್ರವಾಸದಲ್ಲಿ ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಟ್ಟ ನಿರ್ಧಾರವು, ತಮ್ಮ ಇಲ್ಲಿಯವರೆಗಿನ ಕೋಚಿಂಗ್ ವೃತ್ತಿಜೀವನದಲ್ಲೇ ಅತ್ಯಂತ ಕಠಿಣ ನಿರ್ಧಾರವಾಗಿತ್ತು ಎಂದು ಗಂಭೀರ್ ಹೇಳಿದರು.
'ಸ್ಯಾಮ್ಸನ್ ತಮ್ಮ ಸಾಮರ್ಥ್ಯವೇನೆಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ನಾನು ಭಾವಿಸುತ್ತೇನೆ. ಪ್ರತಿಭೆಯಿಲ್ಲದೆ ಯಾರೂ ವಿಶ್ವಕಪ್ನಲ್ಲಿ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆಗಲು ಸಾಧ್ಯವಿಲ್ಲ, ಹಾಗಾಗಿ ಅವರು ತಮ್ಮ ಅರ್ಹತೆಯನ್ನು ಸಾಬೀತುಪಡಿಸಿದ್ದಾರೆ. ಸಹಜವಾಗಿಯೇ ಅದು ಕಠಿಣವಾಗಿತ್ತು; ನನ್ನ ಕೋಚಿಂಗ್ ವೃತ್ತಿಜೀವನದಲ್ಲಿ ನಾನು ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರ ಬಹುಶಃ ಅದೇ ಆಗಿರಬಹುದು- ಅಂದರೆ, ಅದಕ್ಕೂ ಮುನ್ನ ಅವರು ನೀಡಿದ್ದ ಪ್ರದರ್ಶನದ ಕಾರಣದಿಂದಾಗಿ ಅವರನ್ನು ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಕೈಬಿಟ್ಟಿದ್ದು' ಎಂದು ಗಂಭೀರ್ ಹೇಳಿದರು.
'ಆದರೆ ಕೆಲವೊಮ್ಮೆ ಆಟಗಾರರ ಸದ್ಯದ ಫಾರ್ಮ್ ಕೂಡ ಮುಖ್ಯವಾಗುತ್ತದೆ. ನನ್ನ ದೃಷ್ಟಿಯಲ್ಲಿ, ವಿಶ್ವಕಪ್ ಸಮಯದಲ್ಲಿ ನಾವಿದ್ದ ಸಂಯೋಜನೆಯನ್ನೇ ಮತ್ತೆ ಮುಂದುವರಿಸಲು ನಾನು ಬಯಸಿದ್ದೆ; ಏಕೆಂದರೆ ಮೂರು-ನಾಲ್ಕು ಬಾರಿ ವಿಫಲರಾದ ಮಾತ್ರಕ್ಕೆ ಆ ಆಟಗಾರರು ಕಳಪೆ ಆಟಗಾರರಾಗಿಬಿಡುವುದಿಲ್ಲ. ಒಂದು ವಿಶ್ವಕಪ್ನಿಂದ ಮತ್ತೊಂದು ವಿಶ್ವಕಪ್ವರೆಗೆ ಸೋಲನ್ನೇ ಕಾಣದೆ ಪ್ರಶಸ್ತಿ ಗೆದ್ದ ತಂಡವದು. ಕೇವಲ ಒಂದು ಸರಣಿಯ ಪ್ರದರ್ಶನದಿಂದಾಗಿ ಆ ತಂಡದ ಸಾಮರ್ಥ್ಯವೇ ಬದಲಾಗಿಬಿಡುವುದಿಲ್ಲ ಮತ್ತು ಆ ಆಟಗಾರರು ಕಳಪೆ ಆಟಗಾರರಾಗಿ ಪರಿವರ್ತನೆಗೊಳ್ಳುವುದಿಲ್ಲ' ಎಂದು ಅವರು ಹೇಳಿದರು.
ಸಪ್ಟೆಂಬರ್ 20ರಿಂದ ಸಪ್ಟೆಂಬರ್ 26, 2026ರವರೆಗೆ ಪ್ರೇಮದಲ್ಲಿ ವಿರೋಧ, ಭಾವನೆಯ ನಿಯಂತ್ರಣ, ಮಾತಿಗೆ ಸ್ಪಂದನೆ, ಹಳೆಯ ಪ್ರೇಮದ ಸ್ಮರಣೆ, ಹಿರಿಯರಿಂದ ತಿಳಿವಳಿಕೆ ಇವೆಲ್ಲ ಈ ವಾರದ ಪ್ರೇಮ ಭವಿಷ್ಯ.
ಮೇಷ ರಾಶಿ:ಈ ವಾರ ಪ್ರೀತಿಯಲ್ಲಿ ನಿಮ್ಮ ಮಾತಿಗೆ ಹೆಚ್ಚಿನ ಮಹತ್ವ ಸಿಗುತ್ತದೆ. ಮನಸ್ಸಿನಲ್ಲಿರುವ ವಿಷಯವನ್ನು ನೇರವಾಗಿ ಹೇಳಲು ಅವಕಾಶ ದೊರೆಯಬಹುದು. ಹಿಂದೆ ಉಂಟಾದ ಸಣ್ಣ ಅಸಮಾಧಾನವನ್ನು ಮಾತುಕತೆಯಿಂದ ಪರಿಹರಿಸಬಹುದು. ಅವಿವಾಹಿತರಿಗೆ ಪರಿಚಯವೊಂದು ನಿಧಾನವಾಗಿ ಆಕರ್ಷಣೆಯಾಗಿ ಬದಲಾಗಬಹುದು. ಆದರೆ ಕೋಪದ ಕ್ಷಣದಲ್ಲಿ ಕಠಿಣ ಮಾತು ಆಡದಿರುವುದು ಒಳಿತು.
ವೃಷಭ ರಾಶಿ:ಶುಕ್ರನ ಅನುಕೂಲಕರ ಚಲನೆಯಿಂದ ಪ್ರೇಮಜೀವನದಲ್ಲಿ ಮೃದುತ್ವ ಹೆಚ್ಚಾಗುತ್ತದೆ. ಸಂಗಾತಿಯಿಂದ ನಿರೀಕ್ಷಿಸಿದ್ದ ಸ್ಪಂದನೆ ದೊರೆಯುವ ಸಾಧ್ಯತೆ ಇದೆ. ದೂರವಾಗಿದ್ದವರು ಮತ್ತೆ ಸಂಪರ್ಕಿಸಲು ಪ್ರಯತ್ನಿಸಬಹುದು. ಕುಟುಂಬದ ವಿರೋಧವಿರುವ ಪ್ರೇಮದಲ್ಲಿ ನಿಧಾನವಾಗಿ ಪರಿಸ್ಥಿತಿ ಸುಧಾರಿಸಬಹುದು. ಹೊಸ ಸಂಬಂಧ ಆರಂಭಿಸುವವರು ವ್ಯಕ್ತಿಯ ಮಾತಿಗಿಂತ ಅವರ ನಡೆನುಡಿಯನ್ನು ಗಮನಿಸುವುದು ಉತ್ತಮ.
ಮಿಥುನ ರಾಶಿ:ಈ ವಾರ ಮಾತುಗಳೇ ನಿಮ್ಮ ಪ್ರೇಮಜೀವನದ ಮುಖ್ಯ ಕೀಲಿಯಾಗುತ್ತವೆ. ಸಂದೇಶ, ದೂರವಾಣಿ ಅಥವಾ ನೇರ ಸಂಭಾಷಣೆಯಿಂದ ಬಹುಕಾಲದಿಂದ ಇದ್ದ ಗೊಂದಲ ನಿವಾರಣೆಯಾಗಬಹುದು. ಹೊಸ ಪರಿಚಯವೊಂದು ಮನಸ್ಸಿನಲ್ಲಿ ಕುತೂಹಲ ಮೂಡಿಸಬಹುದು. ಆದರೆ ತಕ್ಷಣವೇ ಭಾವನಾತ್ಮಕ ನಿರ್ಧಾರ ತೆಗೆದುಕೊಳ್ಳಬೇಡಿ. ಹಳೆಯ ಸಂಗಾತಿಯೊಂದಿಗೆ ಪುನಃ ಮಾತುಕತೆ ಸಾಧ್ಯ.
ಕರ್ಕಾಟಕ ರಾಶಿ:ಗುರು ಮತ್ತು ಕುಜನ ಪ್ರಭಾವದಿಂದ ಪ್ರೀತಿಯಲ್ಲಿ ಭಾವನಾತ್ಮಕತೆ ಹೆಚ್ಚಿರುತ್ತದೆ. ಸಂಗಾತಿಯ ಬಗ್ಗೆ ಕಾಳಜಿ ಹೆಚ್ಚಾದರೂ, ಸಣ್ಣ ವಿಷಯವನ್ನೂ ದೊಡ್ಡದಾಗಿ ತೆಗೆದುಕೊಳ್ಳುವ ಸಾಧ್ಯತೆ ಇದೆ. ವಿವಾಹದ ಬಗ್ಗೆ ಯೋಚಿಸುತ್ತಿರುವವರಿಗೆ ಕುಟುಂಬದಲ್ಲಿ ಚರ್ಚೆ ಆರಂಭವಾಗಬಹುದು. ದೂರದಲ್ಲಿರುವ ಪ್ರಿಯ ವ್ಯಕ್ತಿಯಿಂದ ಸಂತೋಷದ ಸುದ್ದಿ ಬರಬಹುದು. ಹಳೆಯ ನೋವನ್ನು ಮತ್ತೆ ಎತ್ತಿಕೊಳ್ಳದೆ ಮುಂದಿನ ಜೀವನದ ಬಗ್ಗೆ ಮಾತನಾಡಿದರೆ ಸಂಬಂಧ ಗಟ್ಟಿಯಾಗುತ್ತದೆ.
ಸಿಂಹ ರಾಶಿ:ಈ ವಾರ ಪ್ರೀತಿಯಲ್ಲಿ ಸ್ವಾಭಿಮಾನ ಮತ್ತು ಭಾವನೆಗಳ ನಡುವೆ ಸಂಘರ್ಷ ಉಂಟಾಗಬಹುದು. ಸಂಗಾತಿ ನಿಮ್ಮ ನಿರೀಕ್ಷೆಯಂತೆ ನಡೆದುಕೊಳ್ಳದಿದ್ದರೆ ಅಸಮಾಧಾನ ಮೂಡಬಹುದು. ಆದರೂ ಹೃದಯಪೂರ್ವಕ ಸಂಭಾಷಣೆಯಿಂದ ಪರಿಸ್ಥಿತಿ ಸುಧಾರಿಸುತ್ತದೆ. ಅವಿವಾಹಿತರಿಗೆ ಸ್ನೇಹದ ವಲಯದಿಂದಲೇ ಆಕರ್ಷಕ ಪರಿಚಯ ಬರಬಹುದು. ಹಳೆಯ ಸಂಬಂಧಕ್ಕೆ ಸಂಬಂಧಿಸಿದ ನಿರ್ಧಾರದಲ್ಲಿ ಆತುರ ಬೇಡ.
ಕನ್ಯಾ ರಾಶಿ:ಈ ವಾರ ಪ್ರೀತಿಯಲ್ಲಿ ಸ್ಪಷ್ಟತೆ ಪಡೆಯುವ ಕಾಲ. ನಿಮ್ಮ ಮನಸ್ಸಿನಲ್ಲಿದ್ದ ಅನುಮಾನಗಳಿಗೆ ಉತ್ತರ ಸಿಗಬಹುದು. ಸಂಗಾತಿಯೊಂದಿಗೆ ಭವಿಷ್ಯದ ಯೋಜನೆ ಕುರಿತು ಗಂಭೀರವಾಗಿ ಮಾತನಾಡುವ ಸಂದರ್ಭ ಬರುತ್ತದೆ. ವಿವಾಹಕ್ಕೆ ಸಂಬಂಧಿಸಿದ ಮಾತುಕತೆ ಮುಂದುವರಿಯಬಹುದು. ಅವಿವಾಹಿತರಿಗೆ ಕೆಲಸ ಅಥವಾ ಅಧ್ಯಯನದ ಮೂಲಕ ಹೊಸ ವ್ಯಕ್ತಿಯ ಪರಿಚಯವಾಗಬಹುದು. ಅತಿಯಾಗಿ ವಿಶ್ಲೇಷಿಸುವ ಸ್ವಭಾವದಿಂದ ಸುಂದರ ಕ್ಷಣಗಳನ್ನು ಕಳೆದುಕೊಳ್ಳದಿರಿ.
ತುಲಾ ರಾಶಿ:ಶುಕ್ರನ ಅನುಕೂಲಕರ ಸ್ಥಿತಿಯಿಂದ ಈ ವಾರ ಪ್ರೀತಿಯ ವಿಷಯದಲ್ಲಿ ಆಕರ್ಷಣೆ ಮತ್ತು ಆತ್ಮೀಯತೆ ಹೆಚ್ಚಾಗಬಹುದು. ಸಂಗಾತಿಯಿಂದ ವಿಶೇಷ ಗಮನ ದೊರೆಯಬಹುದು. ಒಟ್ಟಿಗೆ ಪ್ರವಾಸ ಅಥವಾ ಭೇಟಿಯ ಯೋಜನೆ ಮೂಡಬಹುದು. ಅವಿವಾಹಿತರಿಗೆ ಮನಸ್ಸಿಗೆ ಹತ್ತಿರವಾಗುವ ವ್ಯಕ್ತಿಯ ಪರಿಚಯ ಸಾಧ್ಯ. ಆದರೆ ಹಿಂದಿನ ಸಂಬಂಧದ ಅನುಭವವನ್ನು ಹೊಸ ವ್ಯಕ್ತಿಯೊಂದಿಗೆ ಹೋಲಿಸಬೇಡಿ.
ವೃಶ್ಚಿಕ ರಾಶಿ:ಶುಕ್ರನ ಪ್ರಭಾವದಿಂದ ಪ್ರೀತಿಯಲ್ಲಿ ಆಳವಾದ ಭಾವನೆಗಳು ಜಾಗೃತವಾಗುತ್ತವೆ. ನಿಮ್ಮ ಮನಸ್ಸನ್ನು ಸಂಪೂರ್ಣವಾಗಿ ವ್ಯಕ್ತಪಡಿಸಬೇಕೆಂಬ ಆಸೆ ಹೆಚ್ಚಬಹುದು. ಸಂಗಾತಿಯೊಂದಿಗೆ ಆತ್ಮೀಯತೆ ಹೆಚ್ಚಾದರೂ ಅನುಮಾನ ಅಥವಾ ಅತಿಯಾದ ವಿಚಾರಣೆ ಸಮಸ್ಯೆ ತರಬಹುದು. ಹಳೆಯ ಪ್ರೇಮದ ನೆನಪು ಮರಳಿ ಬರಬಹುದು. ಅವಿವಾಹಿತರಿಗೆ ಆಕರ್ಷಣೆ ಬಲವಾಗಿರುತ್ತದೆ. ಆದರೆ ಸಂಬಂಧದ ಭವಿಷ್ಯವನ್ನು ನಿರ್ಧರಿಸುವ ಮೊದಲು ಎದುರಿನ ವ್ಯಕ್ತಿಯ ಸ್ವಭಾವವನ್ನು ಅರಿಯಿರಿ.
ಧನುಸ್ಸು ರಾಶಿ:ಈ ವಾರ ಪ್ರೀತಿಯಲ್ಲಿ ನಿಧಾನವಾದರೂ ಅರ್ಥಪೂರ್ಣ ಬೆಳವಣಿಗೆ ಕಂಡುಬರಬಹುದು. ದೂರವಿರುವ ಸಂಗಾತಿಯೊಂದಿಗೆ ಸಂಪರ್ಕ ಹೆಚ್ಚಾಗಬಹುದು. ಕುಟುಂಬದ ಸದಸ್ಯರೊಬ್ಬರು ನಿಮ್ಮ ಪ್ರೇಮ ವಿಚಾರಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ. ಹಳೆಯ ತಪ್ಪುಗಳನ್ನು ಚರ್ಚಿಸುವಾಗ ಆರೋಪಕ್ಕಿಂತ ಪರಿಹಾರಕ್ಕೆ ಆದ್ಯತೆ ನೀಡಿ. ಅವಿವಾಹಿತರಿಗೆ ಸ್ನೇಹದಿಂದ ಪ್ರೇಮದತ್ತ ಸಾಗುವ ಅವಕಾಶವಿದೆ. ಮನಸ್ಸಿನ ಗೊಂದಲ ಕಡಿಮೆಯಾಗಿ ಸಂಬಂಧದ ಬಗ್ಗೆ ಸ್ಪಷ್ಟ ನಿರ್ಧಾರ ಮೂಡಬಹುದು.
ಇದನ್ನೂ ಓದಿ: ರವಿ ಸಿಂಹ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಕರ ರಾಶಿ:ಮನಸ್ಸಿನಲ್ಲಿ ಇಟ್ಟುಕೊಂಡಿರುವ ಪ್ರೀತಿಯ ಮಾತನ್ನು ಹೇಳಲು ಈ ವಾರ ಸೂಕ್ತ ಸಂದರ್ಭ ದೊರೆಯಬಹುದು. ಸಂಗಾತಿಯೊಂದಿಗೆ ಭವಿಷ್ಯದ ಜವಾಬ್ದಾರಿಗಳ ಬಗ್ಗೆ ಚರ್ಚೆ ನಡೆಯಬಹುದು. ಹಿಂದೆ ದೂರವಾದ ವ್ಯಕ್ತಿಯೊಂದಿಗೆ ಮತ್ತೆ ಸಂಭಾಷಣೆ ಆರಂಭವಾಗುವ ಸಾಧ್ಯತೆ ಇದೆ. ಆದರೆ ಹಳೆಯ ನೋವುಗಳನ್ನು ಪುನಃ ನೆನಪಿಸಿಕೊಂಡರೆ ಸಂಬಂಧದಲ್ಲಿ ಒತ್ತಡ ಹೆಚ್ಚಾಗಬಹುದು.
ಕುಂಭ ರಾಶಿ:ಈ ವಾರ ಪ್ರೀತಿಯಲ್ಲಿ ಅನಿರೀಕ್ಷಿತ ತಿರುವುಗಳು ಕಂಡುಬರಬಹುದು. ನಿರೀಕ್ಷಿಸದ ವ್ಯಕ್ತಿಯಿಂದ ಸಂದೇಶ ಅಥವಾ ಸಂಪರ್ಕ ಬರಬಹುದು. ಈಗಾಗಲೇ ಸಂಬಂಧದಲ್ಲಿರುವವರಿಗೆ ಸಂಗಾತಿಯ ವರ್ತನೆಯಲ್ಲಿ ಹೊಸ ಬದಲಾವಣೆ ಗೋಚರಿಸಬಹುದು. ಕ್ಷಣಿಕ ಆಕರ್ಷಣೆಯನ್ನು ಶಾಶ್ವತ ಪ್ರೀತಿ ಎಂದು ಭಾವಿಸುವ ಮುನ್ನ ಸಮಯ ನೀಡಿ. ಸ್ನೇಹದಿಂದ ಪ್ರೀತಿಯತ್ತ ಸಾಗುವ ಸಂಬಂಧದಲ್ಲಿ ಒಳ್ಳೆಯ ಬೆಳವಣಿಗೆ ಸಾಧ್ಯ.
ಮೀನ ರಾಶಿ:ಶನಿ ಪ್ರಭಾವದಿಂದ ಪ್ರೀತಿಯಲ್ಲಿ ಸ್ವಲ್ಪ ಗಂಭೀರತೆ ಮತ್ತು ಆತ್ಮಪರಿಶೀಲನೆ ಹೆಚ್ಚಾಗಬಹುದು. ಸಂಗಾತಿಯೊಂದಿಗೆ ಭವಿಷ್ಯ, ವಿವಾಹ ಅಥವಾ ಜವಾಬ್ದಾರಿಗಳ ಬಗ್ಗೆ ಚರ್ಚೆ ನಡೆಯಬಹುದು. ತಡವಾಗುತ್ತಿದೆ ಎಂಬ ಭಾವನೆ ಬಂದರೂ ಆತುರದ ನಿರ್ಧಾರ ಬೇಡ. ಹಳೆಯ ಸಂಬಂಧದಿಂದ ಮನಸ್ಸಿನಲ್ಲಿ ಉಳಿದ ನೋವು ನಿಧಾನವಾಗಿ ಕಡಿಮೆಯಾಗಬಹುದು. ನಿಷ್ಠೆಯಿಂದ ನಡೆದುಕೊಂಡರೆ ಈ ವಾರ ಸಂಬಂಧದಲ್ಲಿ ವಿಶ್ವಾಸ ಮತ್ತು ಸ್ಥಿರತೆ ಹೆಚ್ಚಾಗುವ ಸಾಧ್ಯತೆ ಇದೆ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಂಗಳೂರು: ಕರಾವಳಿಗೆ ಕಾರ್ಪೊರೇಟ್ ಪರವಾದ ಖಾಸಗಿ ಸಹಭಾಗಿತ್ವದ ನೀತಿ ಬದಲಾಗಿ, ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ವಸತಿ ಕಲ್ಪಿಸುವ ಜನಪರ ಅಭಿವೃದ್ಧಿ ನೀತಿ ರೂಪಿಸಬೇಕು ಎಂದು ಆಗ್ರಹಿಸಿ ಸಿಪಿಎಂ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಸಚಿವ ಸಂಪುಟ ಸಭೆ ನಡೆಯಲಿರುವ ಪ್ರಜಾಸೌಧಕ್ಕೆ ಮೆರವಣಿಗೆಯಲ್ಲಿ ತೆರಳಿ ಮುತ್ತಿಗೆ ಹಾಕಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ನಿಮ್ಹಾನ್ಸ್ ನರರೋಗ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪಿಸಬೇಕು. ಪುತ್ತೂರು ಹಾಗೂ ಉಡುಪಿಗೆ ಸರ್ಕಾರಿ ವೈದ್ಯಕೀಯ ಕಾಲೇಜು, ಉತ್ತರ ಕನ್ನಡಕ್ಕೆ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಕರಾವಳಿ ಪ್ರವಾಸೋದ್ಯಮದಲ್ಲಿ ದೊಡ್ಡ ಉದ್ಯಮಿಗಳ ಖಾಸಗಿ ಸಹಭಾಗಿತ್ವದ ಬದಲು ಸ್ಥಳೀಯರನ್ನು ಒಳಗೊಂಡ ನೀತಿ ರೂಪಿಸಬೇಕು. ಪರಿಸರ ಮತ್ತು ಜನಸಂಸ್ಕೃತಿಗೆ ಧಕ್ಕೆಯಾಗದಂತೆ ಸ್ಥಳೀಯ ಯುವಜನರಿಗೆ ಉದ್ಯೋಗ ಸಿಗುವಂತೆ ಪ್ರವಾಸೋದ್ಯಮ ಬೆಳೆಸಬೇಕು. ಕ್ಯಾಸಿನೊ, ಜೂಜಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಅಡಿಕೆ, ತೆಂಗು, ರಬ್ಬರ್ ಆಧಾರಿತ ಉದ್ಯಮಗಳಿಗೆ ಆದ್ಯತೆ, ಮಂಗಳೂರು ಮೀನುಗಾರಿಕಾ ಧಕ್ಕೆಯ ವಿಸ್ತರಣೆ, ಮೀನುಗಾರಿಕಾ ಬಂದರುಗಳಲ್ಲಿ ಮೂಲಸೌಕರ್ಯ, ಅಳಿವೆ ಬಾಗಿಲುಗಳಲ್ಲಿ ಹೂಳೆತ್ತುವುದು ಹಾಗೂ ನಾಡದೋಣಿ ಮೀನುಗಾರರ ಸಮಸ್ಯೆ ಪರಿಹರಿಸಬೇಕು. ಮೀನುಗಾರಿಕೆ ಉತ್ಪನ್ನಗಳ ಕಿರು ಉದ್ಯಮಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕ ರಂಗ ಸೇರಿದಂತೆ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಡ್ಡಾಯಗೊಳಿಸಬೇಕು. ಸರೋಜಿನಿ ಮಹಿಷಿ ವರದಿಯನ್ನು ಅಗತ್ಯ ಮಾರ್ಪಾಡುಗಳೊಂದಿಗೆ ಜಾರಿಗೊಳಿಸಬೇಕು. ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೆ ಕೇರಳ ಮಾದರಿಯಲ್ಲಿ ಕಲ್ಯಾಣ ಯೋಜನೆ ಜಾರಿಗೊಳಿಸಬೇಕು. ಸರಳೀಕೃತ ಮರಳು ಮತ್ತು ಕೆಂಪುಕಲ್ಲು ಗಣಿಗಾರಿಕೆ ನೀತಿ ಜಾರಿಗೆ ತರಬೇಕು. ವಸತಿ ರಹಿತರಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಪಿಯು, ಪದವಿ, ವೃತ್ತಿಪರ ಹಾಗೂ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಬೇಕು. ತಾಲ್ಲೂಕು ಮಟ್ಟದಲ್ಲಿ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಬೇಕು. ಹೊಸ ಖಾಸಗಿ ವಿಶ್ವವಿದ್ಯಾಲಯಗಳಿಗೆ ಅವಕಾಶ ನೀಡಬಾರದು. ತುಳುವಿಗೆ ಅಧಿಕೃತ ಭಾಷೆಯ ಮಾನ್ಯತೆ ನೀಡಬೇಕು ಎಂದರು.
ಕೊರಗ, ಮಲೆಕುಡಿಯ, ಕುಡುಬಿ ಸೇರಿದಂತೆ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು. ಕೊರಗ ಸಮುದಾಯದ ಬೇಡಿಕೆಗಳನ್ನು ಈಡೇರಿಸಬೇಕು. ಮಹಮ್ಮದ್ ಪೀರ್ ವರದಿ ಜಾರಿಗೊಳಿಸಿ, ಅರಣ್ಯ ಹಕ್ಕು ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಪರಿಶಿಷ್ಟರಿಗೆ ಡಿಸಿ ಮನ್ನಾ ಭೂಮಿ ಹಂಚಿಕೆ ಮಾಡಬೇಕು. ಕಸ್ತೂರಿ ರಂಗನ್ ವರದಿ ಜಾರಿ ಕೈಬಿಡಬೇಕು ಎಂದು ಒತ್ತಾಯಿಸಿದರು.
ಮಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಮೇಲ್ಸೇತುವೆ, ರಸ್ತೆ ವಿಸ್ತರಣೆ, ವರ್ತುಲ ರಸ್ತೆಗಳು ಹಾಗೂ ಮೆಟ್ರೊ ರೈಲು ಯೋಜನೆ ಜಾರಿಗೊಳಿಸಬೇಕು. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು. ಕೋಮು ಸೌಹಾರ್ದತೆ ಹಾಗೂ ಸಹಬಾಳ್ವೆಗಾಗಿ ವಿಶೇಷ ಕಾರ್ಯಯೋಜನೆ ರೂಪಿಸಬೇಕು ಎಂದರು.
ಕರಾವಳಿಯ ನದಿ, ಸಮುದ್ರಗಳನ್ನು ಕೈಗಾರಿಕಾ ಮಾಲಿನ್ಯದಿಂದ ರಕ್ಷಿಸಬೇಕು. ಸಂಸ್ಕರಿಸದ ತ್ಯಾಜ್ಯ ನೀರು ಹರಿಸುವುದನ್ನು ತಡೆಯಬೇಕು. ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಅಗತ್ಯ ಪ್ರಮಾಣದ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪಿಸಬೇಕು. ಮೀನುಗಾರಿಕೆ ಉತ್ಪನ್ನಗಳ ಉದ್ಯಮಗಳು ಹಾಗೂ ಫಿಶ್ಮಿಲ್ಗಳಿಗೆ ಪ್ರತ್ಯೇಕ ಕೈಗಾರಿಕಾ ವಲಯ ಸ್ಥಾಪಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ನವದೆಹಲಿ, ಸೆಪ್ಟೆಂಬರ್ 18: ವಿದೇಶಾಂಗ ಸಚಿವಾಲಯವು ಪಾಸ್ಪೋರ್ಟ್ ಕಾಯ್ದೆಗೆ ತಿದ್ದುಪಡಿ ತಂದಿದ್ದು, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಸ್ಪೋರ್ಟ್ ಸಿಂಧುತ್ವದ ನಿಯಮವನ್ನು ಬದಲಾಯಿಸಿದೆ. ಇನ್ನು ಮುಂದೆ ಮಗುವಿಗೆ 18 ವರ್ಷ ತುಂಬಿದ ತಕ್ಷಣ ಆ ಪಾಸ್ಪೋರ್ಟ್ ಅಮಾನ್ಯವಾಗಲಿದ್ದು, ನೂತನ ನಿಯಮ ತಕ್ಷಣದಿಂದಲೇ ಜಾರಿಗೆ ಬಂದಿದೆ.
ಮಕ್ಕಳ ಪಾಸ್ಪೋರ್ಟ್ ಪಡೆಯಲು ಬಯಸುವ ಪೋಷಕರಿಗೆ ವಿದೇಶಾಂಗ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ. ಅಪ್ರಾಪ್ತರಿಗೆ ನೀಡುವ 26 ಪುಟಗಳ ಪಾಸ್ಪೋರ್ಟ್ ಸಿಂಧುತ್ವವನ್ನು ಗರಿಷ್ಠ 5 ವರ್ಷ ಅಥವಾ 18 ವರ್ಷ ವಯಸ್ಸಿನವರೆಗೆ ನಿಗದಿಪಡಿಸಲಾಗಿದ್ದು, ಅರ್ಜಿ ಶುಲ್ಕವನ್ನೂ ಪರಿಷ್ಕರಿಸಲಾಗಿದೆ.
ಹೊಸ ಸಿಂಧುತ್ವ ನಿಯಮ: 1980 ರ ಪಾಸ್ಪೋರ್ಟ್ ನಿಯಮಾವಳಿಯ ರೂಲ್ 12 (1ಎ) ತಿದ್ದುಪಡಿ ಮಾಡಲಾಗಿದೆ. ಉದಾಹರಣೆಗೆ, ಮಕ್ಕಳ 14ನೇ ವಯಸ್ಸಿನಲ್ಲಿ ಪಾಸ್ಪೋರ್ಟ್ ನೀಡಿದರೆ, 5 ವರ್ಷದ ಲೆಕ್ಕಾಚಾರದ ಪ್ರಕಾರ ಅದು 19 ವರ್ಷದವರೆಗೆ ಇರಬೇಕಿತ್ತು. ಆದರೆ ಹೊಸ ನಿಯಮದ ಪ್ರಕಾರ ಮಕ್ಕಳಿಗೆ 18 ವರ್ಷ ತುಂಬಿದ ತಕ್ಷಣವೇ ಆ ಪಾಸ್ಪೋರ್ಟ್ ಅಮಾನ್ಯವಾಗಲಿದ್ದು, ವಯಸ್ಕರ ಹೊಸ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಹಿಂದಿನ ನಿಯಮವೇನಿತ್ತು?: ಈ ಹಿಂದೆ 15 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತಿದ್ದ ಪಾಸ್ಪೋರ್ಟ್ 5 ವರ್ಷಗಳವರೆಗೆ ಅಥವಾ ಮಗುವಿಗೆ 15 ವರ್ಷ ತುಂಬುವವರೆಗೆ ಮಾತ್ರ ಮಾನ್ಯವಾಗಿರುತ್ತಿತ್ತು. ಈಗ ಆ ಮಿತಿಯನ್ನು 18 ವರ್ಷದವರೆಗೆ ವಿಸ್ತರಿಸಲಾಗಿದೆ.
ಅರ್ಜಿ ಶುಲ್ಕ ಪರಿಷ್ಕರಣೆ: ನಿಯಮ 8 (1) ರ ತಿದ್ದುಪಡಿಯಂತೆ, ಎಲ್ಲಾ ವರ್ಗದ ಪಾಸ್ಪೋರ್ಟ್ ಅರ್ಜಿಗಳಿಗೆ ನಿಗದಿಪಡಿಸಲಾದ ನವೀಕೃತ ಶುಲ್ಕ ರಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಶೆಡ್ಯೂಲ್ IV ದರಗಳನ್ನು ಅನ್ವಯಿಸಲಾಗಿದೆ.
ಮತ್ತಷ್ಟು ಓದಿ: ವಿದೇಶದಲ್ಲಿರುವ ಮತದಾರರಿಗೆ ಎಸ್ಐಆರ್ ಸಂಕಷ್ಟ: ಖುದ್ದು ವಿಚಾರಣೆಗೆ ಹಾಜರಾಗದಿದ್ದರೆ ಬೇರೇನು ಆಯ್ಕೆಗಳಿವೆ? ಇಲ್ಲಿದೆ ವಿವರ
ಪರಿಷ್ಕೃತ ಶುಲ್ಕದ ವಿವರ:
ವಯಸ್ಕರ ಸಾಮಾನ್ಯ ಪಾಸ್ಪೋರ್ಟ್ (36 ಪುಟ): 1,500 ರೂ.ನಿಂದ 2,500 ರೂ.ಗೆ ಏರಿಕೆ.
ವಯಸ್ಕರ ಜಂಬೋ ಪಾಸ್ಪೋರ್ಟ್ (60ಪುಟ): 2 ಸಾವಿರ ರೂ.ನಿಂದ 2,500 ರೂ.ಗೆ ಏರಿಕೆ.
ತತ್ಕಾಲ್ 36 ಪುಟ: 3,500 ರೂ.ನಿಂದ 5 ಸಾವಿರ ರೂ.ಗೆ ಪರಿಷ್ಕರಣೆ.
ತತ್ಕಾಲ್ 60 ಪುಟ: 4 ಸಾವಿರ ರೂ.ನಿಂದ 6 ಸಾವಿರ ರೂ.ಗೆ ಹೆಚ್ಚಳ
ಫೋಟೋ ಬದಲಾವಣೆ ಮತ್ತು ಬಯೋಮೆಟ್ರಿಕ್ಸ್ ಅಗತ್ಯ: ಮಕ್ಕಳು ಬೆಳೆದಂತೆ ಅವರ ಮುಖಚಹರೆ ಮತ್ತು ದೈಹಿಕ ಲಕ್ಷಣಗಳು ವೇಗವಾಗಿ ಬದಲಾಗುವುದರಿಂದ ಅಂತಾರಾಷ್ಟ್ರೀಯ ವಲಸೆ ನಿಯಮಗಳ (ICAO) ಅಡಿಯಲ್ಲಿ ಗುರುತು ಪತ್ತೆ ಸುಲಭಗೊಳಿಸಲು ಈ 18 ವರ್ಷದ ಸ್ಪಷ್ಟ ಮಿತಿಯನ್ನು ನಿಗದಿಪಡಿಸಲಾಗಿದೆ. ಬಾಲಕ ಅಥವಾ ಬಾಲಕಿಯ ವಯಸ್ಸು 18 ವರ್ಷ ತುಂಬುತ್ತಿದ್ದಂತೆ ವಯಸ್ಕರ ವಿಭಾಗದಲ್ಲಿ ಬಯೋಮೆಟ್ರಿಕ್ ಮತ್ತು ಬೆರಳಚ್ಚು ನೀಡಿ ಹೊಸ ಪಾಸ್ಪೋರ್ಟ್ ಪಡೆಯುವುದು ಕಡ್ಡಾಯ.
ಆನ್ಲೈನ್ ಸಲ್ಲಿಕೆ ಪ್ರಕ್ರಿಯೆ: ಪೋಷಕರು ‘ಪಾಸ್ಪೋರ್ಟ್ ಸೇವಾ’ (Passport Seva) ಪೋರ್ಟಲ್ ಅಥವಾ ‘mPassport Seva’ ಆ್ಯಪ್ ಮೂಲಕ ಈ ಪರಿಷ್ಕೃತ ನಿಯಮಗಳನ್ವಯ ತಮ್ಮ ಅಪ್ರಾಪ್ತ ಮಕ್ಕಳಿಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿಯ ಜೊತೆಗೆ ಮಗುವಿನ ಜನನ ಪ್ರಮಾಣಪತ್ರ ಮತ್ತು ಪೋಷಕರ ಪಾಸ್ಪೋರ್ಟ್ ಪ್ರತಿಗಳನ್ನು ಲಗತ್ತಿಸುವುದು ಅಗತ್ಯವಾಗಿದೆ.
ಇ-ಪಾಸ್ಪೋರ್ಟ್ (ಚಿಪ್ ಆಧಾರಿತ): ಭಾರತ ಸರ್ಕಾರವು ಭದ್ರತೆಯನ್ನು ಹೆಚ್ಚಿಸಲು ಬಯೋಮೆಟ್ರಿಕ್ ಚಿಪ್ ಆಧಾರಿತ ಇ-ಪಾಸ್ಪೋರ್ಟ್ಗಳನ್ನು ಹಂತಹಂತವಾಗಿ ಜಾರಿಗೆ ತರುತ್ತಿದ್ದು, ನೂತನ ಶುಲ್ಕ ಮತ್ತು ನಿಯಮಾವಳಿಗಳು ಸುಧಾರಿತ ತಂತ್ರಜ್ಞಾನದ ಸೇವೆ ಒದಗಿಸಲು ನೆರವಾಗಲಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತೂಕ ಇಳಿಸಿಕೊಳ್ಳುವುದು (Weight Loss) ಹಲವರ ಗುರಿಯಾಗಿರುತ್ತದೆ. ಆದರೆ ಕಡಿಮೆ ಸಮಯದಲ್ಲಿ ತುಂಬಾ ವೇಗವಾಗಿ ತೂಕ ಇಳಿಸಿಕೊಳ್ಳುವುದು ದೇಹದ ಮೇಲೆ ಕೆಲವು ಅನಿರೀಕ್ಷಿತ ಪರಿಣಾಮಗಳನ್ನು ಉಂಟುಮಾಡಬಹುದು. ತೂಕದ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ಮುಖದ ಆಕಾರದಲ್ಲಿ ಬದಲಾವಣೆ, ಕೂದಲು ಉದುರುವಿಕೆ ಹಾಗೂ ಸ್ನಾಯುಗಳ ಪ್ರಮಾಣ ಕಡಿಮೆಯಾಗುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.
ಮುಖದ ಆಕಾರ ಬದಲಾಗಬಹುದುತೂಕ ವೇಗವಾಗಿ ಇಳಿದಾಗ ಮುಖದಲ್ಲಿರುವ ಕೊಬ್ಬಿನ ಪ್ರಮಾಣವೂ ಕಡಿಮೆಯಾಗಬಹುದು. ಕೆನ್ನೆ, ಕಣ್ಣಿನ ಕೆಳಭಾಗ ಮತ್ತು ಮುಖದ ಇತರ ಭಾಗಗಳಲ್ಲಿರುವ ಕೊಬ್ಬು ಮುಖಕ್ಕೆ ತುಂಬಿದ ನೋಟ ನೀಡಲು ಸಹಾಯ ಮಾಡುತ್ತದೆ. ಈ ಕೊಬ್ಬು ಕಡಿಮೆಯಾದಾಗ ಕೆನ್ನೆಗಳು ಒಳಗೆ ಹೋದಂತೆ ಅಥವಾ ಮುಖ ಸೊರಗಿದಂತೆ ಕಾಣಿಸಬಹುದು. ಚರ್ಮವು ಹೊಸ ಆಕಾರಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುವುದರಿಂದ ಕೆಲವೊಮ್ಮೆ ಮುಖದ ಚರ್ಮ ಸಡಿಲವಾಗಿಯೂ ಕಾಣಿಸಿಕೊಳ್ಳಬಹುದು. ಇದರಿಂದ ವಯಸ್ಸು ಹೆಚ್ಚಾದಂತೆ ಕಾಣುವ ಸಾಧ್ಯತೆಯೂ ಇದೆ.
ಕೂದಲು ಉದುರುವ ಸಾಧ್ಯತೆವೇಗವಾಗಿ ತೂಕ ಇಳಿಸಿಕೊಂಡ ನಂತರ ಕೆಲವರಲ್ಲಿ ಕೂದಲು ಉದುರುವಿಕೆ ಹೆಚ್ಚಾಗಬಹುದು. ತೂಕ ಇಳಿಕೆ ಮತ್ತು ಆಹಾರದಲ್ಲಿ ಪೋಷಕಾಂಶಗಳ ಕೊರತೆಯಿಂದ ದೇಹಕ್ಕೆ ಒತ್ತಡ ಉಂಟಾಗಬಹುದು. ಇದರ ಪರಿಣಾಮವಾಗಿ ಹೆಚ್ಚಿನ ಕೂದಲಿನ ಬೇರುಗಳು ವಿಶ್ರಾಂತಿ ಹಂತಕ್ಕೆ ಹೋಗಬಹುದು. ವಿಶೇಷವೆಂದರೆ ಈ ಬದಲಾವಣೆ ತಕ್ಷಣ ಕಾಣಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ತೂಕ ಇಳಿಸಿಕೊಂಡ ಎರಡು ಅಥವಾ ಮೂರು ತಿಂಗಳ ನಂತರ ಕೂದಲು ಉದುರುವಿಕೆ ಗಮನಕ್ಕೆ ಬರಬಹುದು.
Mix Fruits: ಹಣ್ಣುಗಳನ್ನು ಮಿಕ್ಸ್ ಮಾಡಿ ತಿನ್ನುವ ಮುನ್ನ ಈ ವಿಷಯ ತಿಳಿಯಿರಿ
ಕೊಬ್ಬಿನ ಜೊತೆಗೆ ಸ್ನಾಯುಗಳೂ ಕಡಿಮೆಯಾಗಬಹುದುತೂಕ ಇಳಿಸುವಾಗ ದೇಹದಲ್ಲಿರುವ ಕೊಬ್ಬು ಮಾತ್ರ ಕಡಿಮೆಯಾಗುವುದಿಲ್ಲ. ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಇಲ್ಲದಿದ್ದರೆ ಅಥವಾ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮ ಮಾಡದಿದ್ದರೆ ಸ್ನಾಯುಗಳ ಪ್ರಮಾಣವೂ ಕಡಿಮೆಯಾಗಬಹುದು. ಇದರಿಂದ ದೇಹದ ಆಕಾರ ಬದಲಾಗುವುದರ ಜೊತೆಗೆ ಚರ್ಮಕ್ಕೆ ಒಳಗಿನಿಂದ ಸಿಗುವ ಬೆಂಬಲವೂ ಕಡಿಮೆಯಾಗಬಹುದು. ಪರಿಣಾಮವಾಗಿ ಚರ್ಮ ಕೆಲವು ಭಾಗಗಳಲ್ಲಿ ಸಡಿಲವಾಗಿ ಕಾಣಿಸಿಕೊಳ್ಳಬಹುದು.
ಆರೋಗ್ಯಕರವಾಗಿ ತೂಕ ಇಳಿಸುವುದು ಮುಖ್ಯತೂಕ ಇಳಿಸಿಕೊಳ್ಳುವಾಗ ತೂಕದ ಸಂಖ್ಯೆಯನ್ನಷ್ಟೇ ಗುರಿಯಾಗಿಸಿಕೊಳ್ಳದೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುವಂತೆ ನೋಡಿಕೊಳ್ಳುವುದು ಮುಖ್ಯ. ಸಾಕಷ್ಟು ಪ್ರೋಟೀನ್ ಇರುವ ಸಮತೋಲಿತ ಆಹಾರ ಸೇವಿಸುವುದು ಮತ್ತು ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮ ಮಾಡುವುದು ಸಹಾಯಕವಾಗಬಹುದು. ಅತಿಯಾದ ಆಹಾರ ನಿಯಂತ್ರಣ ಅಥವಾ ತ್ವರಿತ ತೂಕ ಇಳಿಕೆಯ ವಿಧಾನಗಳನ್ನು ಅನುಸರಿಸುವ ಮೊದಲು ತಜ್ಞರ ಸಲಹೆ ಪಡೆಯುವುದು ಉತ್ತಮ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯು, ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ 2026-27ನೇ ಸಾಲಿಗೆ ಖಾಲಿಯಿರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಪರಿಶೀಲಿಸಿ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.
ಆಡಿಯೋಲಜಿಸ್ಟ್ / ಸ್ಪೀಚ್ ಥೆರಪಿಸ್ಟ್ ಹುದ್ದೆಯ ವಿವರ:ಖಾಲಿಯಿರುವ 01 ಆಡಿಯೋಲಜಿಸ್ಟ್/ಸ್ಪೀಚ್ ಥೆರಪಿಸ್ಟ್ (Audiologist / Speech Therapist) ಹುದ್ದೆಗೆ RCI ನಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ Speech and Language Pathology ಯಲ್ಲಿ ಬ್ಯಾಚುಲರ್ ಡಿಗ್ರಿ (Bachelors Degree) ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 25,000 ರೂ. ವೇತನ ಸಿಗಲಿದೆ.
ಕ್ಲಿನಿಕಲ್ ಸೈಕಾಲಜಿಸ್ಟ್ ಹುದ್ದೆಯ ಅರ್ಹತೆ:ಕ್ಲಿನಿಕಲ್ ಸೈಕಾಲಜಿಸ್ಟ್ (Clinical Psychologist) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ 01 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು RCI ನಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ Child Psychology ಯಲ್ಲಿ ಮಾಸ್ಟರ್ ಡಿಗ್ರಿ (Master’s Degree) ಪೂರ್ಣಗೊಳಿಸಿರಬೇಕು. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ 2 ವರ್ಷಗಳ ಕಾರ್ಯಾನುಭವ ಇದ್ದವರಿಗೆ ಆದ್ಯತೆ ನೀಡಲಾಗುತ್ತಿದ್ದು, ಮಾಸಿಕ 25,000ರೂ. ವೇತನ ನಿಗದಿಪಡಿಸಲಾಗಿದೆ.
ಆಪ್ಟೋಮೆಟ್ರಿಸ್ಟ್ ಹುದ್ದೆಯ ವಿವರಗಳು:ಆಪ್ಟೋಮೆಟ್ರಿಸ್ಟ್ (Optometrist) ವಿಭಾಗದಲ್ಲಿ 01 ಹುದ್ದೆ ಖಾಲಿಯಿದ್ದು, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Optometry ಯಲ್ಲಿ ಬ್ಯಾಚುಲರ್ ಅಥವಾ ಮಾಸ್ಟರ್ ಡಿಗ್ರಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ಅನುಭವ ಇರುವವರಿಗೆ ಮುಂಚೂಣಿ ಆದ್ಯತೆ ಇರಲಿದ್ದು, ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ 17,278 ರೂ. ವೇತನ ನೀಡಲಾಗುತ್ತದೆ.
ಇದನ್ನೂ ಓದಿ: ಕಾಲೇಜಿನಲ್ಲಿ ರಾತ್ರಿ ಕಾವಲುಗಾರನ ಕೆಲಸ ಮಾಡುತ್ತಲೇ ಓದಿ ಸತತ 3 ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಸಾಧಕ!
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಕೊನೆಯ ದಿನಾಂಕ:ಆಸಕ್ತರು ಅಧಿಕೃತ ವೆಬ್ಸೈಟ್ udupi.nic.in ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ಪ್ರಮಾಣಪತ್ರಗಳನ್ನು ಲಗತ್ತಿಸಿ, ದಿನಾಂಕ 19/09/2026 ರ ಸಂಜೆ 4:00 ಗಂಟೆಯೊಳಗೆ ‘ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಎನ್.ಹೆಚ್.ಎಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಅಜ್ಜರಕಾಡು, ಉಡುಪಿ’ ಇಲ್ಲಿಗೆ ನೇರವಾಗಿ ಸಲ್ಲಿಸಬೇಕಾಗುತ್ತದೆ. ಈ ನೇಮಕಾತಿಯು ಸಂಪೂರ್ಣವಾಗಿ ಜಿಲ್ಲಾ ಆರೋಗ್ಯ ಸಂಘ ಉಡುಪಿ ಇದರ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನಟ ಮಹೇಶ್ ಬಾಬು ಅವರೊಂದಿಗೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ ಹೊಸ ಸಿನಿಮಾದ ಕಥೆಯನ್ನು ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ವಾರಾಣಸಿ’ ಸಿನಿಮಾದ ಚಿತ್ರೀಕರಣದಲ್ಲಿ ಮಹೇಶ್ ಬಾಬು ತೊಡಗಿಸಿಕೊಂಡಿದ್ದಾರೆ. ಕೆಲದಿನಗಳ ಹಿಂದೆ ತಾರಾ ನಟರಾದ ಅಲ್ಲು ಅರ್ಜುನ್, ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಅವರ ಹೆಸರೂ ಮುನ್ನೆಲೆಗೆ ಬಂದಿತ್ತು.
‘ಟಾಕ್ಸಿಕ್’ ಸಿನಿಮಾಗೆ 0.5 ಸ್ಟಾರ್ ರೇಟಿಂಗ್ ನೀಡಿದ ಮಹೇಶ್ ಬಾಬು ಪುತ್ರ ಗೌತಮ್‘ತೆಲುಗು ನೌ’ ವರದಿಯ ಪ್ರಕಾರ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಇತ್ತೀಚೆಗೆ ಮಹೇಶ್ ಅವರನ್ನು ಭೇಟಿಯಾಗಿದ್ದು, ಅವರೊಂದಿಗೆ ಸಿನಿಮಾದ ಕಥೆಯನ್ನು ಚರ್ಚಿಸಿದ್ದಾರೆ. ಈ ಸಿನಿಮಾ ಆ್ಯಕ್ಷನ್ ದೃಶ್ಯಗಳಿಂದ ಕೂಡಿರಲಿದೆ. ಇದರಲ್ಲಿ ಬಾಲಿವುಡ್ ಹಾಗೂ ಟಾಲಿವುಡ್ ನಟರು ನಟಿಸಲಿದ್ದಾರೆ.
ಬನ್ಸಾಲಿ ನಿರ್ದೇಶನದ ಲವ್ & ವಾರ್ ಸೆಟ್ನಲ್ಲಿ ವಿದ್ಯುತ್ ಅವಘಡ; ಸಿಬ್ಬಂದಿ ಸಾವುಸದ್ಯ ಈ ಕುರಿತು ಸಂಜಯ್ ಲೀಲಾ ಬನ್ಸಾಲಿ ಅವರು ಅಧಿಕೃತವಾಗಿ ಏನನ್ನೂ ಹೇಳಿಕೊಂಡಿಲ್ಲ. ಮಹೇಶ್ ಬಾಬು ನಟನೆಯ ‘ವಾರಾಣಸಿ’ ಸಿನಿಮಾ ಬಿಡುಗಡೆಯಾದ ಬಳಿಕ ಮುಂದಿನ ಸಿನಿಮಾದ ಚರ್ಚೆಗಳು ನಡೆಯಲಿವೆ ಎನ್ನಲಾಗಿದೆ.
ತೆಲುಗು 360 ವರದಿಯ ಪ್ರಕಾರ, ‘ವಾರಾಣಸಿ’ ಸಿನಿಮಾದ ಚಿತ್ರೀಕರಣವು ಈಗಾಗಲೇ ಪೂರ್ಣಗೊಂಡಿದೆ. ‘ವಾರಾಣಸಿ’ ಸಿನಿಮಾದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರು ‘ಮಂದಾಕಿನಿ’ ಪಾತ್ರದಲ್ಲಿ ನಟಿಸಿದ್ದಾರೆ. 2027ರ ಏಪ್ರಿಲ್ 7ಕ್ಕೆ ‘ವಾರಾಣಸಿ’ ಸಿನಿಮಾ ಬಿಡುಗಡೆಯಾಗಲಿದೆ.
ಮಂಗಳೂರು, ಸೆಪ್ಟೆಂಬರ್ 18: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಗೂ ಮುನ್ನ ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆಗೆ ಕದ್ರಿಯ ಮಂಜುನಾಥ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಪೂರ್ಣಕುಂಭದೊಂದಿಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತರು ಸ್ವಾಗತಿಸಿದ್ದಾರೆ. ಕಂದಾಯ ಇಲಾಖೆಯ ಮಹಿಳಾ ಸಿಬ್ಬಂದಿ ಹೂಮಳೆಗರೆದು ಸಿಎಂ ಅವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಪ್ಯಾರಿಸ್ (ಫ್ರಾನ್ಸ್): ಬರೋಬ್ಬರಿ 53 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳ್ಳತನವಾದರೆ ಯಾರಾದರೂ ಸುಮ್ಮನಿರುತ್ತಾರಾ? ಆದರೆ ಹಾಲಿವುಡ್ ಖ್ಯಾತ ತಾರೆ ಕಿಮ್ ಕರ್ದಾಶಿಯನ್ ಪ್ರಕರಣದಲ್ಲಿ ಪ್ಯಾರಿಸ್ ನ್ಯಾಯಾಲಯ ನೀಡಿದ ತೀರ್ಪು ಕೇಳಿದರೆ ಯಾರೂ ಕೂಡ ಒಂದು ಕ್ಷಣ ನಿಬ್ಬೆರಗಾಗುವುದು ಖಂಡಿತ. ಯಾಕಂದ್ರೆ, 2016ರಲ್ಲಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಪ್ಯಾರಿಸ್ ಹೋಟೆಲ್ ದರೋಡೆ ಪ್ರಕರಣದಲ್ಲಿ, ಸುಮಾರು ಒಂದು ದಶಕದ ಸುದೀರ್ಘ ವಿಚಾರಣೆಯ ಬಳಿಕ ನ್ಯಾಯಾಲಯ ಕಿಮ್ಗೆ ನೀಡಿದ ಪರಿಹಾರ ಮೊತ್ತ ಕೇವಲ 1 ಯೂರೋ, ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಬರೀ 105 ರೂಪಾಯಿ! ಇಷ್ಟು ದೊಡ್ಡ ಮೊತ್ತದ ನಷ್ಟ ಅನುಭವಿಸಿದ ನಟಿಗೆ ಸಿಕ್ಕಿದ್ದು ಇಷ್ಟೇನಾ ಅಥವಾ ಇದರ ಹಿಂದೆ ಬೇರೆಯದ್ದೇ ಕಾರಣವಿದೆಯಾ? ಆ ಕುತೂಹಲಕಾರಿ ಸತ್ಯ ಇಲ್ಲಿದೆ.
ಏನಿದು ಘಟನೆ?
2016 ರಲ್ಲಿ ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಭಾಗವಹಿಸಲು ಕಿಮ್ ಕರ್ದಾಶಿಯನ್ ಫ್ರಾನ್ಸ್ಗೆ ಹೋಗಿದ್ದಾಗ, ಅವರು ತಂಗಿದ್ದ ಐಷಾರಾಮಿ ಹೋಟೆಲ್ ರೂಮಿಗೆ ಬಂದೂಕುಧಾರಿ ಕಳ್ಳರು ನುಗ್ಗಿದ್ದರು. ಕಿಮ್ ಅವರ ಕೈಕಾಲು ಕಟ್ಟಿ ಹಾಕಿ, ಬಾತ್ ರೂಮಿನಲ್ಲಿ ಕೂಡಿಟ್ಟು ಭೀಕರವಾಗಿ ದರೋಡೆ ಮಾಡಲಾಗಿತ್ತು. ಈ ದರೋಡೆಯಲ್ಲಿ ಕಳ್ಳರು ಕಿಮ್ ಅವರ ₹38 ಕೋಟಿ ಮೌಲ್ಯದ ನಿಶ್ಚಿತಾರ್ಥದ ಉಂಗುರ ಸೇರಿದಂತೆ ಒಟ್ಟು ₹57 ಕೋಟಿಯಿಂದ ₹95 ಕೋಟಿಗೂ ಅಧಿಕ (ಸುಮಾರು 6 ಮಿಲಿಯನ್ ಡಾಲರ್) ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದರು.
ಹಾಗಾದ್ರೆ, ಕೇವಲ ₹105 ಪರಿಹಾರ ಸಿಕ್ಕಿದ್ದು ಏಕೆ?
ಸುದೀರ್ಘ ವಿಚಾರಣೆಯ ನಂತರ ಪ್ಯಾರಿಸ್ ನ್ಯಾಯಾಲಯವು ಈ ದರೋಡೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿತು. ಈ ಸಂದರ್ಭದಲ್ಲಿ ಕಿಮ್ ಕರ್ದಾಶಿಯನ್ ಅವರು ನ್ಯಾಯಾಲಯದ ಬಳಿ ಹಣದ ರೂಪದಲ್ಲಿ ಯಾವುದೇ ದೊಡ್ಡ ಮೊತ್ತದ ಪರಿಹಾರವನ್ನು ಕೇಳಲಿಲ್ಲ. ಬದಲಿಗೆ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಮತ್ತು ತಮಗೆ ಆದ ಅನ್ಯಾಯಕ್ಕೆ ನ್ಯಾಯ ಸಿಗಬೇಕು ಎಂಬ ಕಾರಣಕ್ಕಾಗಿ ಕೇವಲ 1 ಸಾಂಕೇತಿಕ ಯೂರೋ (€1) ಪರಿಹಾರವನ್ನು ತಾವಾಗಿಯೇ ಕೇಳಿದ್ದರು. ಅದರಂತೆ, ಕಿಮ್ ಅವರ ಮನವಿಯ ಮೇರೆಗೆ ಫ್ರೆಂಚ್ ನ್ಯಾಯಾಲಯವು ಅಪರಾಧಿಗಳಿಂದ ಕೇವಲ 1 ಯೂರೋ ಪರಿಹಾರವನ್ನು ಕೊಡಿಸಲು ಆದೇಶಿಸಿತು. ಈ ಒಂದು ಯೂರೋ ಭಾರತೀಯ ಕರೆನ್ಸಿಯಲ್ಲಿ ಸದ್ಯಕ್ಕೆ ಸುಮಾರು ₹105 ಆಗುತ್ತದೆ. ಏತನ್ಮಧ್ಯೆ, ಅವರ ಜೊತೆಗಿದ್ದ ಸ್ಟೈಲಿಸ್ಟ್ ಕೂಡ ಕೇವಲ 1 ಯೂರೋ ಪಡೆದಿದ್ದಾರೆ.
ಮುಂದುವರೆದು, ತೀರ್ಪಿನ ನಂತರ ಹೇಳಿಕೆ ಬಿಡುಗಡೆ ಮಾಡಿದ ಕಿಮ್ ಕರ್ದಾಶಿಯನ್, "ಆ ಘಟನೆ ನಮಗೆ ತೀವ್ರ ಆಘಾತ ತಂದಿತ್ತು. ಇಂದಿನ ನ್ಯಾಯಾಲಯದ ತೀರ್ಪು ನಮಗೆ ಸಿಗಬೇಕಾದ ಹಣದ ಬಗ್ಗೆ ಅಲ್ಲ, ಬದಲಿಗೆ ತಪ್ಪಿತಸ್ಥರ ಹೊಣೆಗಾರಿಕೆ ಮತ್ತು ನಮಗೆ ಸಂದ ಜಯದ ಗುರುತಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಈ ದರೋಡೆ ನಡೆದಾಗ ಹೋಟೆಲ್ನಲ್ಲಿ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದ ರಿಸೆಪ್ಷನಿಸ್ಟ್ಗೆ ನ್ಯಾಯಾಲಯವು ಸುಮಾರು ₹1 ಕೋಟಿಗೂ ಅಧಿಕ (109,516 ಯೂರೋ) ದೊಡ್ಡ ಮೊತ್ತದ ಪರಿಹಾರ ನೀಡಿದೆ. ಹಾಗೆಯೇ ಹೋಟೆಲ್ಗೆ ₹46 ಲಕ್ಷಕ್ಕೂ ಹೆಚ್ಚು (50,000 ಯೂರೋ) ನಷ್ಟ ಪರಿಹಾರ ನೀಡಲಾಗಿದೆ. ಆದರೆ, ಕಳೆದುಹೋದ ಕಿಮ್ ಕರ್ದಾಶಿಯನ್ ಅವರ ಬಹುತೇಕ ಒಡವೆಗಳು ಇಂದಿಗೂ ಪತ್ತೆಯಾಗಿಲ್ಲ.
'ನಟಿ ಮಮಿತಾ ಬೈಜುರನ್ನೇ ಮದುವೆಯಾಗುತ್ತೇನೆ, ಬೇರೆ ಮಹಿಳೆಗೆ ಜಾಗವಿಲ್ಲ, ವಯಸ್ಸಿನ ಅಂತರ ಇರಬಹುದು, ಆದ್ರೆ...'