ಮಂಗಳೂರು (ದಕ್ಷಿಣ ಕನ್ನಡ): ಕರಾವಳಿಗರ ದಶಕಗಳ ಕನಸು, ತುಳುನಾಡಿನ ಜನರ ನಿರಂತರ ಹೋರಾಟಕ್ಕೆ ಕೊನೆಗೂ ಐತಿಹಾಸಿಕ ಜಯ ಸಿಕ್ಕಿದ್ದು, ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಲು ಸರ್ಕಾರ ತೀರ್ಮಾನಿಸಿದೆ. ಇದರೊಂದಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆ ಹಾಗೂ ಕರಾವಳಿಗೆ ಹೊಸ ಪ್ರವಾಸೋದ್ಯಮ ನೀತಿ ಸೇರಿದಂತೆ ಹಲವು ತೀರ್ಮಾನಗಳನ್ನ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ತುಳು ಭಾಷೆಗೆ ಸಿಕ್ಕ ಅಧಿಕೃತ ಗೌರವ
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ (ತುಳುನಾಡು) ಜನರ ದಶಕಗಳ ಹಕ್ಕೊತ್ತಾಯವಾಗಿದ್ದ ತುಳು ಭಾಷೆಗೆ ಅಧಿಕೃತ ಸ್ಥಾನಮಾನಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ (Second Additional Official Language) ನೀಡಲು ರಾಜ್ಯ ಸರ್ಕಾರ ಅಧಿಕೃತವಾಗಿ ತೀರ್ಮಾನಿಸಿದೆ.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿ, 2,000 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಮತ್ತು ಜಾಗತಿಕವಾಗಿ ಸುಮಾರು ಒಂದು ಕೋಟಿ ಜನ ಮಾತನಾಡುವ ತುಳು ಭಾಷೆಯ ಪ್ರಗತಿ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ, ಈ ಹಿಂದೆ ಡಾ. ಮೋಹನ್ ಆಳ್ವ ನೇತೃತ್ವದ ಸಮಿತಿಯು ಸಂವಿಧಾನದ 345ನೇ ವಿಧಿಯಡಿ ಎರಡನೇ ಅಧಿಕೃತ ಭಾಷಾ ಮಾನ್ಯತೆ ನೀಡಬಹುದು ಎಂದು ವರದಿ ಸಲ್ಲಿಸಿತ್ತು. ಅದರಲ್ಲೂ, ಸರ್ಕಾರದಿಂದ ಸಿಕ್ಕಿರುವ ಈ ಮಾನ್ಯತೆಯಿಂದಾಗಿ ಇನ್ಮುಂದೆ ಕರಾವಳಿ ಭಾಗದ ಸರ್ಕಾರಿ ಸಂಸ್ಥೆಗಳು ಮತ್ತು ಕಚೇರಿಗಳಲ್ಲಿ ದೈನಂದಿನ ಆಡಳಿತಾತ್ಮಕ ಸಂವಹನಕ್ಕಾಗಿ ಕನ್ನಡದ ಜೊತೆಗೆ ತುಳು ಭಾಷೆಯನ್ನೂ ಬಳಸಲು ಅಧಿಕೃತ ಅವಕಾಶ ಸಿಗಲಿದೆ.
ತುಳು ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆ
ತುಳು ಭಾಷೆಯ ಐತಿಹಾಸಿಕತೆ, ಸಾಂಸ್ಕೃತಿಕ ಮಹತ್ವ ಹಾಗೂ ಕರಾವಳಿಯ ಜನರ ಬಹುದಿನಗಳ ಆಶಯವನ್ನು ಗೌರವಿಸಿ, ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರ ನೇತೃತ್ವದ ಕರ್ನಾಟಕ ಸರ್ಕಾರ ತುಳುವನ್ನು ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಿದೆ. ಇದು ಕೇವಲ ಒಂದು ಭಾಷೆಗೆ… pic.twitter.com/gyqJrPLweI
ದಕ್ಷಿಣ ಕನ್ನಡ ಜಿಲ್ಲೆಯ ಶೀಘ್ರ ಮಂಗಳೂರು ಜಿಲ್ಲೆ?
ತುಳು ಭಾಷೆಯ ಮಾನ್ಯತೆಯ ಜೊತೆಗೆ, ಕರಾವಳಿ ಜನರ ಬಹುದಿನಗಳ ಮತ್ತೊಂದು ಬೇಡಿಕೆಯಾದ, ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ಮುಂದಿನ ಒಂದು ತಿಂಗಳ ಒಳಗಾಗಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಇದರೊಂದಿಗೆ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಚಿವ ಸಂಪುಟವು 'ಹೊಸ ಟೂರಿಸಂ ಪಾಲಿಸಿ' ಜಾರಿಗೆ ತರಲು ಅನುಮೋದನೆ ನೀಡಿದೆ.
ಧಾರ್ಮಿಕ ಕ್ಷೇತ್ರಗಳಿಗೆ ಭರ್ಜರಿ ಅನುದಾನ
ಕರಾವಳಿ ಭಾಗದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳ ಅಭಿವೃದ್ಧಿಗೆ ಸಚಿವ ಸಂಪುಟವು ಕೋಟ್ಯಂತರ ರೂಪಾಯಿಗಳ ವಿಶೇಷ ಪ್ಯಾಕೇಜ್ ಪ್ರಕಟಿಸಿದೆ. ಅದರಂತೆ, ಕರಾವಳಿಯ ಐತಿಹಾಸಿಕ ದೇವಸ್ಥಾನಗಳು ಮತ್ತು ಮಠಗಳ ಜೀರ್ಣೋದ್ಧಾರ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ₹12 ಕೋಟಿ ವಿಶೇಷ ಅನುದಾನ ಘೋಷಿಸಲಾಗಿದೆ. ಅದರಂತೆ, ಪುತ್ತೂರು ಮಹಾಲಿಂಗೇಶ್ವರ ದೇಗುಲಕ್ಕೆ 5 ಕೋಟಿ ರೂಪಾಯಿ ಹಾಗೂ ಒಡಿಯೂರು ಮಠ, ಮಾಣಿಲ ಮಠ ಸೇರಿದಂತೆ ಹಲವು ಕ್ಷೇತ್ರಗಳಿಗೆ ತಲಾ 1 ಕೋಟಿ ರೂಪಾಯಿ ನೀಡಲಾಗಿದೆ. ಇದರೊಂದಿಗೆ, ಸೌಹಾರ್ದತೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣದ ದೃಷ್ಟಿಯಿಂದ ಕರಾವಳಿ ಭಾಗದ ಉಳ್ಳಾಲ ಸೈಯದ್ ಮದನಿ ಜುಮ್ಮಾ ಮಸೀದಿಗೆ 5 ಕೋಟಿ ರೂಪಾಯಿ ಸೇರಿದಂತೆ ವಿವಿಧ ಚರ್ಚ್, ಮಸೀದಿ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೂ ನೆರವು ಘೋಷಿಸಲಾಗಿದೆ. ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆ ಕಂಬಳಕ್ಕೆ ನೀಡುತ್ತಿದ್ದ ಅನುದಾನವನ್ನು 40 ಲಕ್ಷದಿಂದ 1 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ.
ರಾಜ್ಯದಲ್ಲಿ ಬರದ ಛಾಯೆ: ಮೋಡ ಬಿತ್ತನೆಗೆ ಎಲ್ಲ ಸಿದ್ಧತೆ ಪೂರ್ಣ, ಸೂಕ್ತ ವಾತಾವರಣಕ್ಕಾಗಿ ಕಾಯುತ್ತಿದ್ದೇವೆ- ಸಿಎಂ ಶಿವಕುಮಾರ್ಮಂಗಳೂರು, ಸೆಪ್ಟೆಂಬರ್ 18: ನಾಡಿನ ಕರಾವಳಿಯ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪಣತೊಟ್ಟಿದೆ. ಕರಾವಳಿಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಉದ್ದೇಶದೊಂದಿಗೆ ಮಂಗಳೂರಿನಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಆ ಮೂಲಕ ಕರಾವಳಿ ಭಾಗದ ಪ್ರಗತಿಗೆ ಹೊಸ ಮುನ್ನುಡಿ ಬರೆಯಲಾಗಿದೆ. ಸಭೆಯಲ್ಲಿ 40 ವಿಷಯದ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಾವು ಜನರ ಭಾವನೆ ಮೇಲೆ ರಾಜಕೀಯ ಮಾಡಲ್ಲ ಎಂದ ಸಿಎಂಸಚಿವ ಸಂಪುಟ ಸಭೆ ಬಳಿಕ ಮಂಗಳೂರಿನ ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿಎಂ ಡಿಕೆ ಶಿವಕುಮಾರ್, ತುಳುನಾಡಿನ ತಂದೆ, ತಾಯಿ ಹಾಗೂ ಯುವ ಮಿತ್ರರಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ, ‘ಈ ಜಿಲ್ಲೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದೆ. ಇಲ್ಲಿನ ಇತಿಹಾಸ ಮತ್ತು ಪರಂಪರೆಯನ್ನು ರಾಷ್ಟ್ರವೇ ಗೌರವಿಸುತ್ತದೆ. ಈ ಜಿಲ್ಲೆಗೆ ಅಳಿಲು ಸೇವೆ ಸಲ್ಲಿಸುವ ಉದ್ದೇಶದಿಂದ, ನಾನು ಅಧಿಕಾರ ವಹಿಸಿಕೊಂಡ ನಂತರ ಬೆಂಗಳೂರಿನ ಹೊರಗೆ ಪ್ರಪ್ರಥಮ ಬಾರಿಗೆ ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿ ಜನರ ಮುಂದೆ ಕೂತಿದ್ದೇನೆ. ಭಾವನಾತ್ಮಕ ವಿಚಾರಗಳಿಗಿಂತ ಜನರ ಭಾವನೆ ಮೇಲೆ ರಾಜಕೀಯ ಮಾಡಲ್ಲ’ ಎಂದು ಹೇಳಿದರು.
32,611 ಕೋಟಿ ರೂ ಅನುದಾನ; ಗ್ರಾಮೀಣ ಹಾಗೂ ಕರಾವಳಿ ಭಾಗಕ್ಕೆ ಸಮಪಾಲು‘ಸಂಪುಟ ಸಭೆಯಲ್ಲಿ 32,611 ಕೋಟಿ ರೂ ಅಭಿವೃದ್ಧಿ ಯೋಜನೆಗಳಿಗೆ ಅಧಿಕೃತ ಅನುಮೋದನೆ ನೀಡಲಾಗಿದೆ. ಈ ಪೈಕಿ 16,000 ಕೋಟಿ ರೂ ಗ್ರಾಮೀಣಾಭಿವೃದ್ಧಿಗೆ ಹಾಗೂ ಉಳಿದ 16,000 ಕೋಟಿ ರೂ ಕರಾವಳಿ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಇದರಲ್ಲಿ ರಸ್ತೆ ಅಭಿವೃದ್ಧಿಗಾಗಿಯೇ 14,000 ಕೋಟಿ ರೂ ಅನುದಾನ ಒದಗಿಸಲಾಗುವುದು’ ಎಂದು ಅವರು ತಿಳಿಸಿದರು.
.liveTvWebbx { background: #fff; margin-bottom: 10px; } .liveTvWebbx span { display: flex; align-items: center; justify-content: center; background: #dc0000; padding: 5px 0; } .liveTvWebbx span a { color: #fff; font-size: 22px; display: flex; align-items: center; justify-content: center; font-weight: 600; line-height: 28px; text-decoration: none; } .liveTvWebbx span a:hover{color:#fff;} .liveTvWebbx span a svg { width: 2rem; height: 2rem; margin-right: 5px; display: inline-block; flex-shrink: 0; vertical-align: middle; fill: none; stroke: #fff; stroke-width: 2; stroke-linecap: round; stroke-linejoin: round; transform-origin: center; animation: livePulse 1.3s ease-in-out infinite; } @keyframes livePulse { 0% { transform: scale(1); opacity: 1; } 50% { transform: scale(1.08); opacity: 1; } 100% { transform: scale(1); opacity: 1; } } .liveTvWebbx iframe, .liveTvWebbx amp-iframe { width: 100%; height: auto; aspect-ratio: 16 / 9; display: block; border: none; } LIVE TV document.addEventListener('DOMContentLoaded', function () { let liveTV = document.querySelector('.live-tv-tracking'); if (liveTV) { liveTV.addEventListener('click', function () { if (typeof dataLayer !== 'undefined') { dataLayer.push({ 'event': 'article_live_tv_click', 'widget_name': 'article_live_tv', 'click_location': 'article' }); } }); } }); ದಕ್ಷಿಣ ಕನ್ನಡ ಇನ್ಮುಂದೆ ಮಂಗಳೂರು ಜಿಲ್ಲೆ‘ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು ಜಿಲ್ಲೆ’ ಎಂದು ಬದಲಾಯಿಸುವ ಪ್ರಸ್ತಾಪವನ್ನು ಸಂಪುಟ ಸಭೆ ಪರಿಗಣಿಸಲಾಗಿದೆ. ಈ ಸಂಬಂಧ ಸಾರ್ವಜನಿಕ ಚರ್ಚೆ ಮತ್ತು ಅಭಿಪ್ರಾಯ ಸಂಗ್ರಹಕ್ಕಾಗಿ ಒಂದು ತಿಂಗಳ ಕಾಲ ಕರಡು ಅಧಿಸೂಚನೆ ಹೊರಡಿಸಲಾಗುತ್ತದೆ. ಸಾರ್ವಜನಿಕರ ಅಭಿಪ್ರಾಯ ಪಡೆದ ನಂತರ, ಒಂದು ತಿಂಗಳ ಒಳಗೆ ಅಧಿಕೃತವಾಗಿ ಜಿಲ್ಲೆಯ ಹೆಸರನ್ನು ಬದಲಾಯಿಸುವ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.
ಹೊಸ ಪ್ರವಾಸೋದ್ಯಮ ನೀತಿ‘ಮಲೆನಾಡು ಮತ್ತು ಕರಾವಳಿ ಪ್ರದೇಶಗಳನ್ನು ಒಳಗೊಂಡಂತೆ ಹೊಸ ಟೂರಿಸಂ ನೀತಿಯನ್ನು ಮೂಲಸೌಕರ್ಯ ಯೋಜನೆಯನ್ನಾಗಿ ರೂಪಿಸಿ ಜಾರಿಗೆ ತರಲಾಗುತ್ತಿದೆ. ಮೀನುಗಾರಿಕೆ, ಸಾಗರ ಅಧ್ಯಯನ ಮತ್ತು ಬ್ಲೂ ಎಕನಾಮಿಕ್ಸ್ಗಾಗಿ ಪ್ರತ್ಯೇಕ ಯೂನಿವರ್ಸಿಟಿ ಸ್ಥಾಪಿಸಲಾಗುವುದು ಹಾಗೂ ಸೀಟುಗಳ ಸಂಖ್ಯೆಯನ್ನು 60 ರಿಂದ 200ಕ್ಕೆ ಹೆಚ್ಚಿಸಲಾಗುವುದು. ಇನ್ನು ಮಂಗಳೂರಿನಲ್ಲಿ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇನ್ನು ಮುಂದಿನ 15 ತಿಂಗಳಲ್ಲಿ ರಾಜ್ಯದ 10 ರಿಂದ 12 ಜಿಲ್ಲೆಗಳಲ್ಲಿ ಇದೇ ರೀತಿ ಸಂಪುಟ ಸಭೆಗಳನ್ನು ನಡೆಸಿ ಪ್ರಾದೇಶಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಯಾವ ಯಾವ ಯೋಜನೆಗೆ ಎಷ್ಟು ಅನುದಾನ?- ಲೈಟ್ ಹೌಸ್ ಮತ್ತು ಅದರ ಸುತ್ತಮುತ್ತಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ 60.34 ಕೋಟಿ ರೂ ಅನುದಾನ.
- ಉತ್ತರ ಕನ್ನಡ ಜಿಲ್ಲೆಯ ಮಂಕಿ ಬಂದರು ಅಭಿವೃದ್ಧಿಗೆ 6,925 ಕೋಟಿ ರೂ ಅನುದಾನ.
- ಉಡುಪಿಯ ಮಲ್ಪೆ ಆಯಬದಲ್ಲಿ ಪಿಪಿಪಿ ಮಾದರಿ ಯೋಜನೆಗಾಗಿ 179 ಕೋಟಿ ರೂ ಅನುದಾನ.
- ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿ ಅಂಗವಾಗಿ ಭಾರತೀಯ ನೌಕಾಪಡೆಯಿಂದ 250 ಕೋಟಿ ರೂ ವೆಚ್ಚದಲ್ಲಿ ರನ್ವೇ ನಿರ್ಮಾಣ.
- ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕೋಟೆಪುರದಿಂದ ಚರ್ವತ್ತೂರು ಸಂಪರ್ಕ ಯೋಜನೆಗೆ ಅನುದಾನ.
ಇದನ್ನೂ ಓದಿ: ಮಂಗಳೂರು ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
- ಮಂಗಳೂರು-ಅತ್ರಾಡಿ ಮಾರ್ಗದ ಮರವೂರು ಸೇತುವೆ ಕಾಮಗಾರಿಗೆ 40 ಕೋಟಿ ರೂ ಅನುದಾನ.
- ಕಟೀಲು ರಸ್ತೆ ಅಭಿವೃದ್ಧಿಗೆ 33 ಕೋಟಿ ರೂ ಅನುದಾನ.
- ಮುಲ್ಕಿಯ ದಾಮಸ್ ಕಟ್ಟೆ ಬಳಿಯ ಪಾಲಿಮಾರ್ ಕಟ್ಟೆ ಸೇತುವೆ ನಿರ್ಮಾಣಕ್ಕೆ 25 ಕೋಟಿ ರೂ ಅನುದಾನ.
- ಬೆಳ್ತಂಗಡಿಯ ಕುವೆಟ್ಟು ಗ್ರಾಮದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ 5 ಕೋಟಿ ರೂ ಅನುದಾನ.
- ಕದ್ರಿಯ 5 ಎಕರೆ ಜಾಗದಲ್ಲಿ ‘ಮಂಗಳೂರು ಐ’ ನಿರ್ಮಾಣ.
- ಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆಗೆ 425 ಕೋಟಿ ರೂ ಅನುದಾನ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ. ಈಗಾಗಲೇ ಹಲವು ಸಾಕ್ಷ್ಯಗಳ ವಿಚಾರಣೆ ನಡೆಸಲಾಗಿದೆ. ಇದೀಗ ಪ್ರಕರಣದ ಆರೋಪಿ ಆಗಿರುವ ಪ್ರದೋಶ್, ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ಮಾಫಿ ಸಾಕ್ಷಿ ದಾಖಲಿಸಲು ಅರ್ಜಿ ಹಾಕಿದ್ದಾರೆ. ಮಾಫಿ ಸಾಕ್ಷಿಗೆ ದರ್ಶನ್ ವಿರೋಧ ವ್ಯಕ್ತಪಡಿಸಿದ್ದಾರಾದರೂ ದರ್ಶನ್ ಅರ್ಜಿಯನ್ನು ಕೋರ್ಟ್ ತಳ್ಳಿ ಹಾಕಿದೆ. ಆದರೆ ದರ್ಶನ್ ಸಲ್ಲಿಸಿದ್ದ ಮತ್ತೊಂದು ಅರ್ಜಿಯಲ್ಲಿ ದರ್ಶನ್ಗೆ ಮುನ್ನಡೆ ದೊರೆತಿದೆ. ಸಾಕ್ಷ್ಯಗಳ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಖುದ್ದು ಹಾಜರಿರಲು ದರ್ಶನ್ ಒಪ್ಪಿಗೆ ಕೇಳಿದ್ದರು. ದರ್ಶನ್ ಪರ ವಕೀಲರು ಸಹ ಈ ಬಗ್ಗೆ ಒತ್ತಾಯಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಷರತ್ತುಗಳ ಮೇರೆಗೆ ದರ್ಶನ್, ಖುದ್ದು ಹಾಜರಿಗೆ ಸಮ್ಮತಿ ನೀಡಿದೆ.
ನ್ಯಾಯಮೂರ್ತಿ ವಿ ಶ್ರೀಶಾನಂದ ಅವರಿದ್ದ ಹೈಕೋರ್ಟ್ ಪೀಠವು ಅರ್ಜಿಯ ವಿಚಾರಣೆ ನಡೆಸಿ ಆದೇಶ ನೀಡಿದ್ದು, ಮುಖ್ಯವಾದ ಸಾಕ್ಷ್ಯಗಳ ವಿಚಾರಣೆ ಇರುವ ದಿನಗಳು ದರ್ಶನ್ ಖುದ್ದು ನ್ಯಾಯಾಲಯಕ್ಕೆ ಹಾಜರಾಗಲು ಒಪ್ಪಿಗೆ ನೀಡಿದೆ. ಅಲ್ಲದೆ ಒಂದು ವರ್ಷದಲ್ಲಿ 60 ಸಾಕ್ಷ್ಯಗಳ ವಿಚಾರಣೆ ನಡೆಯಬೇಕು ಎಂದು ಸಹ ಹೈಕೋರ್ಟ್ ಹೇಳಿದೆ. ಮುಖ್ಯ ಸಾಕ್ಷ್ಯಗಳ ವಿಚಾರಣೆಗೆ ನಿಗದಿತ ದಿನಾಂಕವನ್ನು ಎರಡೂ ಕಡೆಯವರು ಚರ್ಚಿಸಿ ನಿಗದಿ ಪಡಿಸಬೇಕು ಎಂದು ಸಹ ನ್ಯಾಯಾಲಯವೂ ಸೂಚಿಸಿದೆ.
‘ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯೂ ಇರುವುದರಿಂದ ವಿಶಿಷ್ಟ ಪ್ರಕರಣ ಎಂದು ಪರಿಗಣಿಸಲಾಗುತ್ತಿದೆ. ಆದರೆ ಇದನ್ನು ಇತರೆ ಪ್ರಕರಣಗಳಿಗೆ ಉದಾಹರಣೆಯಾಗಿ ಪರಿಗಣಿಸಬಾರದು’ ಎಂದ ನ್ಯಾಯಾಲಯವು, ಭದ್ರತೆಯ ಬಗ್ಗೆ ಎತ್ತಲಾದ ಪ್ರಶ್ನೆಗೆ, ‘ಸೂಕ್ತ ಭದ್ರತೆ ಕೊಟ್ಟು ಕರೆತರುವುದು ಸರ್ಕಾರದ ಹೊಣೆ, ಈಗ ಆತ (ದರ್ಶನ್) ಆರೋಪಿ ಮಾತ್ರ, ಅಪರಾಧಿಯಾಗುವವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ ಕೋರ್ಟ್ಗಳದ್ದೂ ಭದ್ರತೆಯ ಹೊಣೆ ಇರುತ್ತದೆ’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ನಟ ದರ್ಶನ್ ಖುದ್ದು ಹಾಜರಿ ಕೋರಿ ವಕೀಲರ ಅರ್ಜಿ
‘ಪ್ರಾಸಿಕ್ಯೂಷನ್ ಎಗ್ಸಾಮಿನೇಷನ್ ಇನ್ ಚೀಫ್ ಅನ್ನು ವಿಸಿಯಲ್ಲಿ ನಡೆಸಬೇಕು, ಆದರೆ ಮುಖ್ಯ ಸಾಕ್ಷಿಗಳ ಕ್ರಾಸ್ ಎಗ್ಸಾಮಿನೇಷನ್ಗೆ ದಿನಾಂಕ ನಿಗದಿಪಡಿಸಬೇಕು, ಎರಡೂ ಕಡೆಯವರ ಸಮ್ಮತಿ ಮೇರೆಗೆ ದಿನಾಂಕ ನಿಗದಿಪಡಿಸಬೇಕು
ಆ ದಿನಗಳಂದು ದರ್ಶನ್ರನ್ನು ಖುದ್ದು ಹಾಜರುಪಡಿಸಬೇಕು, ಖುದ್ದಾಗಿ ಹಾಜರುಪಡಿಸಿದಾಗ ದಿನಾಂಕ ಮುಂದೂಡಿಕೆ ಕೇಳಬಾರದು, ಪ್ರಾಸಿಕ್ಯೂಷನ್ ಒಂದು ವರ್ಷದಲ್ಲಿ 60 ಸಾಕ್ಷಿಗಳ ವಿಚಾರಣೆ ನಡೆಸಬೇಕು. ಏಳು ಮುಖ್ಯ ಸಾಕ್ಷಿಗಳ ವಿಚಾರಣೆ ಇದರಲ್ಲಿ ಸೇರಿಸಬೇಕು. ಮುಖ್ಯ ವಿಚಾರಣೆ ಮತ್ತು ಕ್ರಾಸ್ ಎಗ್ಸಾಮಿನೇಷನ್ಗೆ ಪ್ರತ್ಯೇಕ ದಿನಾಂಕಗಳು ಇರಬೇಕು’ ಎಂದು ನ್ಯಾಯಾಲಯವು ಆದೇಶಿಸಿದೆ.
ಹೈಕೋರ್ಟ್ನ ಆದೇಶದಿಂದಾಗಿ ದರ್ಶನ್, ಕೋರ್ಟ್ಗೆ ಬರುವಂತಾಗಿದೆ. ಈ ಮೊದಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ದರ್ಶನ್ ಪರ ವಕೀಲರು, ಸಾಕ್ಷಿಗಳ ವಿಚಾರಣೆ ನಡೆಸುವಾಗ ದರ್ಶನ್ ಖುದ್ದು ಹಾಜರಿರಬೇಕು ಎಂದು ಕೇಳಿದ್ದರು. ಖುದ್ದು ಹಾಜರಿದ್ದರೆ ಕಕ್ಷಿದಾರರೊಡನೆ ಚರ್ಚಿಸುವುದು ಸುಲಭವಾಗುತ್ತದೆ. ಈಗ ವಿಡಿಯೋ ಕಾನ್ಫರೆನ್ಸ್ನಲ್ಲಿ ಅದು ಸಾಧ್ಯವಾಗುವುದಿಲ್ಲ. ವಿಡಿಯೋ ಕಾನ್ಫರೆನ್ಸ್ನಲ್ಲಿ ಖಾಸಗಿತನ ಇರುವುದಿಲ್ಲ. ಎಲ್ಲರ ಎದುರೇ ಕಕ್ಷಿದಾರರೊಟ್ಟಿಗೆ ಚರ್ಚಿಸಬೇಕಾಗುತ್ತದೆ. ಅದು ಸಾಕ್ಷಿಯ ಹೇಳಿಕೆ ಮೇಲೆ ಪ್ರಭಾವ ಬೀರುತ್ತದೆ’ ಎಂದಿದ್ದರು. ಇದೀಗ ಅರ್ಜಿಯನ್ನು ಮನ್ನಿಸಿರುವ ಹೈಕೋರ್ಟ್, ದರ್ಶನ್ ಖುದ್ದುಯ ಹಾಜರಿಗೆ ಅನುಮತಿ ನೀಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯಕರ ಸ್ನ್ಯಾಕ್ಸ್ಗಳ ಪಟ್ಟಿಯಲ್ಲಿ ಕಡಲೆಕಾಯಿ ಮತ್ತು ಪಿಸ್ತಾ ಎರಡಕ್ಕೂ ಪ್ರಮುಖ ಸ್ಥಾನವಿದೆ. ಇವೆರಡರಲ್ಲೂ ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿವೆ. ಆದರೆ ಪೌಷ್ಟಿಕಾಂಶಗಳ ಪ್ರಮಾಣದಲ್ಲಿ ಕೆಲವು ವ್ಯತ್ಯಾಸಗಳಿವೆ. ತೂಕ ನಿಯಂತ್ರಣ, ಕಣ್ಣಿನ ಆರೋಗ್ಯ ಅಥವಾ ಹೃದಯದ ಆರೋಗ್ಯದ ದೃಷ್ಟಿಯಿಂದ ನೋಡಿದಾಗ, ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಆಯ್ಕೆ ಬದಲಾಗಬಹುದು. ಹಾಗಾದರೆ ಕಡಲೆಕಾಯಿ ಅಥವಾ ಪಿಸ್ತಾ ಯಾವುದು ಯಾರಿಗೆ ಸೂಕ್ತ ಮತ್ತು ಇದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಪ್ರೋಟೀನ್ಗೆ ಕಡಲೆಕಾಯಿಸುಮಾರು 28 ಗ್ರಾಂ ಕಡಲೆಕಾಯಿಯಲ್ಲಿ ಸುಮಾರು 7 ಗ್ರಾಂ ಪ್ರೋಟೀನ್ ಸಿಗುತ್ತದೆ. ಪಿಸ್ತಾದಲ್ಲಿಯೂ ಪ್ರೋಟೀನ್ ಇದ್ದರೂ ಪ್ರಮಾಣ ಸ್ವಲ್ಪ ಕಡಿಮೆ. ಹೀಗಾಗಿ ಕಡಿಮೆ ಪ್ರಮಾಣದ ಆಹಾರದಿಂದ ಹೆಚ್ಚು ಪ್ರೋಟೀನ್ ಪಡೆಯಲು ಬಯಸುವವರಿಗೆ ಕಡಲೆಕಾಯಿ ಉಪಯುಕ್ತ ಆಯ್ಕೆಯಾಗಬಹುದು. ಆದರೆ ಸ್ನಾಯುಗಳ ಬೆಳವಣಿಗೆಗೆ ಕಡಲೆಕಾಯಿ ಮಾತ್ರ ಸಾಕಾಗುವುದಿಲ್ಲ. ಮೊಟ್ಟೆ, ಹಾಲು, ಮೊಸರು, ಬೇಳೆ, ಸೋಯಾ, ಮೀನು ಮುಂತಾದ ಇತರ ಪ್ರೋಟೀನ್ ಮೂಲಗಳನ್ನೂ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ಫೈಬರ್ಗೆ ಪಿಸ್ತಾಪಿಸ್ತಾದಲ್ಲಿ ಕಡಲೆಕಾಯಿಗಿಂತ ಸ್ವಲ್ಪ ಹೆಚ್ಚು ಫೈಬರ್ ಇರಬಹುದು. ಫೈಬರ್ ಜೀರ್ಣಕ್ರಿಯೆ, ಹೊಟ್ಟೆ ತುಂಬಿದ ಅನುಭವ ಮತ್ತು ಒಟ್ಟಾರೆ ಆಹಾರದ ಗುಣಮಟ್ಟಕ್ಕೆ ಸಹಾಯ ಮಾಡುತ್ತದೆ. ಹೆಚ್ಚಿನ ಫೈಬರ್ ಇರುವ ಆಹಾರವನ್ನು ನಿಯಮಿತವಾಗಿ ಸೇವಿಸುವುದು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ನಿರ್ವಹಣೆಗೆ ಸಹಾಯಕವಾಗಬಹುದು. ಆದರೆ ಪಿಸ್ತಾ ತಿಂದರೆ ಸಕ್ಕರೆ ಅಥವಾ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಎಂದು ಹೇಳಲಾಗುವುದಿಲ್ಲ.
ಕಣ್ಣಿನ ಆರೋಗ್ಯಕ್ಕೆ ಪಿಸ್ತಾಪಿಸ್ತಾದಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಕ್ಯಾರೋಟಿನಾಯ್ಡ್ಗಳು ಕಂಡುಬರುತ್ತವೆ. ಇವು ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಪೋಷಕಾಂಶಗಳಾಗಿವೆ. ಆದರೆ ಕಣ್ಣಿನ ದೃಷ್ಟಿ ಸಮಸ್ಯೆಗಳಿಗೆ ಪಿಸ್ತಾ ಚಿಕಿತ್ಸೆಯಲ್ಲ. ಸಮತೋಲಿತ ಆಹಾರದ ಭಾಗವಾಗಿ ಇದನ್ನು ಸೇವಿಸಬಹುದು.
ಇದನ್ನೂ ಓದಿ: Egg vs Avocado: ನಿಮ್ಮ ಆರೋಗ್ಯಕ್ಕೆ ಯಾವುದು ಬೆಸ್ಟ್ ತಿಳಿದುಕೊಳ್ಳಿ
ತೂಕ ನಿಯಂತ್ರಣಕ್ಕೆ ಯಾವುದು ಒಳ್ಳೆಯದು?ಕಡಲೆಕಾಯಿ ಮತ್ತು ಪಿಸ್ತಾ ಎರಡರಲ್ಲೂ ಕ್ಯಾಲೊರಿಗಳು ಗಮನಾರ್ಹವಾಗಿ ಕಂಡುಬರುತ್ತದೆ. ಆದರೆ ಯಾವುದೇ ಇವುಗಳನ್ನು ಸೇವನೆ ಮಾಡುವುದರಿಂದ ಮಾತ್ರ ವೇಗವಾಗಿ ತೂಕ ಇಳಿಯುತ್ತದೆ ಎಂಬುದಕ್ಕೆ ಸಾಕಷ್ಟು ಆಧಾರವಿಲ್ಲ. ತೂಕ ನಿಯಂತ್ರಣಕ್ಕೆ ಒಟ್ಟು ಕ್ಯಾಲೊರಿ ಸೇವನೆ, ಆಹಾರದ ಗುಣಮಟ್ಟ, ವ್ಯಾಯಾಮ ಮತ್ತು ನಿದ್ರೆ ಬಹಳ ಮುಖ್ಯ.
ಹೃದಯದ ಆರೋಗ್ಯಕ್ಕೆ ಒಳ್ಳೆಯದೇ?ಕಡಲೆಕಾಯಿ ಮತ್ತು ಪಿಸ್ತಾ ಎರಡರಲ್ಲೂ ಕೊಬ್ಬುಗಳು, ಫೈಬರ್ ಮತ್ತು ಇತರ ಪೋಷಕಾಂಶಗಳಿವೆ. ಇವುಗಳನ್ನು ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಿರುವ ಸ್ನ್ಯಾಕ್ಸ್ಗಳ ಬದಲಿಗೆ ಮಿತವಾಗಿ ಸೇವಿಸುವುದು ಹೃದಯ ಸ್ನೇಹಿ ಆಹಾರ ಪದ್ಧತಿಯ ಭಾಗವಾಗಬಹುದು.
ಹೇಗೆ ತಿನ್ನಬೇಕು?ಉಪ್ಪು, ಸಕ್ಕರೆ ಅಥವಾ ಹೆಚ್ಚು ಎಣ್ಣೆ ಸೇರಿಸದ ಕಡಲೆಕಾಯಿ ಅಥವಾ ಪಿಸ್ತಾವನ್ನು ಆಯ್ಕೆ ಮಾಡುವುದು ಉತ್ತಮ. ಒಂದು ಸಣ್ಣ ಮುಷ್ಟಿಯಷ್ಟು ಪ್ರಮಾಣವನ್ನು ಸ್ನ್ಯಾಕ್ ಆಗಿ ತೆಗೆದುಕೊಳ್ಳಬಹುದು. ಈಗಾಗಲೇ ಹೆಚ್ಚು ಕ್ಯಾಲೊರಿ ಸೇವಿಸುವವರು ಪ್ರಮಾಣದ ಬಗ್ಗೆ ಗಮನ ಕೊಡಬೇಕು.
ಯಾವುದರ ಆಯ್ಕೆ ಒಳ್ಳೆಯದು?ಹೆಚ್ಚು ಪ್ರೋಟೀನ್ ಬೇಕಾದರೆ ಕಡಲೆಕಾಯಿ ಉಪಯುಕ್ತ. ಫೈಬರ್ ಮತ್ತು ಲುಟೀನ್-ಜಿಯಾಕ್ಸಾಂಥಿನ್ನಂತಹ ಪೋಷಕಾಂಶಗಳನ್ನು ಪಡೆಯಲು ಪಿಸ್ತಾ ಉತ್ತಮ ಆಯ್ಕೆಯಾಗಬಹುದು. ಆದರೆ ಎರಡನ್ನೂ ಆರೋಗ್ಯಕರ ಆಹಾರದಲ್ಲಿ ಸೇರಿಸಬಹುದು. ನಿಮ್ಮ ಗುರಿ ಮತ್ತು ಒಟ್ಟು ಆಹಾರ ಪದ್ಧತಿಯನ್ನು ಗಮನಿಸಿ ಆಯ್ಕೆ ಮಾಡುವುದು ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತುಮಕೂರು, (ಸೆಪ್ಟೆಂಬರ್ 18): ತುಳುನಾಡಿನ ಜನರ ಕಳೆದ ಹಲವು ದಶಕಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಫಲ ಸಿಕ್ಕಿದೆ. ತುಳು ಇದೀಗ ಎರಡನೇ ಭಾಷೆಯಾಗಿ ಮಾಡಲು ಇಂದು (ಸೆ.18) ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ತುಳು ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಹೊರಹೊಮ್ಮಲಿದೆ. ಈ ಮೂಲಕ ತುಳು ಭಾಷಿಕರ ಹಲವು ದಶಕಗಳ ಹೋರಾಟ ಹಾಗೂ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಐತಿಹಾಸಿಕ ಜಯ ಸಿಕ್ಕಂತಾಗಿದ್ದು, ಮಂಗಳುರಿನಲ್ಲಿ ತುಳುವರ ಸಂಭ್ರಮ ಮನೆ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು: ಕರೆ ಮಾಡಿದಾಗ ಪತ್ನಿ ರಿಸೀವ್ ಮಾಡಲಿಲ್ಲ ಎಂಬ ಕಾರಣಕ್ಕೆ ಗಂಡನೇ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನ ಮೈಕೋ ಲೇಔಟ್ನ ಬಿಳೇಕಹಳ್ಳಿಯಲ್ಲಿ ನಡೆದಿದೆ.
ಗುಂಜಾ ಮದೇಷಿಯಾ (38) ಕೊಲೆಯಾದ ಮಹಿಳೆ. ಆಕೆಯ ಪತಿ ರಂಜಿತ್ ಕುಮಾರ್ ಗುಪ್ತಾ ಬಂಧಿತ ಆರೋಪಿ. ದಂಪತಿಗೆ ಇಬ್ಬರು ಮಕ್ಕಳಿದ್ದು, ಮೈಕೋ ಲೇಔಟ್ನ ಬಿಳೇಕಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗಂಡ- ಹೆಂಡತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ನಿನ್ನೆ ಬೆಳಿಗ್ಗೆ ಮಕ್ಕಳು ಶಾಲೆಗೆ ತೆರಳಿದ ಬಳಿಕ ಮತ್ತೆ ಗಲಾಟೆ ಶುರುವಾಗಿದೆ. ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ ಪತಿರಾಯ, ಕುದಿಯೋ ಎಣ್ಣೆ ಸುರಿದು ಸಾಕ್ಷ್ಯನಾಶಕ್ಕೆ ಯತ್ನಿಸಿದ್ದಾನೆ. ಇದರಿಂದ ಶವ ವಿರೂಪವಾಗಿ ಆಕಸ್ಮಿಕ ಘಟನೆ ಎಂದು ಬಿಂಬಿಸಲು ಹೋಗಿದ್ದಾನೆ. ಆದರೆ, ಇವರ ಜಗಳವನ್ನು ನೋಡಿದ್ದ ನೆರೆಹೊರೆಯವರು ಮಹಿಳೆ ಕಾಣದಿದ್ದಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Bengaluru Horror: ಮದುವೆಯಾದ ಮೂರೇ ತಿಂಗಳಿಗೆ ಪತ್ನಿ ಕೊಂದು ಬೆಡ್ಶೀಟ್ನಲ್ಲಿ ಶವ ಸುತ್ತಿಟ್ಟು ಪತಿ ಎಸ್ಕೇಪ್!ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಅಲ್ಲದೇ ರಂಜಿತ್ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಮೈಕೋ ಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈತನ ಕೋಪಕ್ಕೆ ಇತ್ತ ಅಪ್ಪನೂ ಇಲ್ಲದೇ ಅಮ್ಮನೂ ಇಲ್ಲದೆ ಮಕ್ಕಳು ಮಾತ್ರ ಬಡವಾಗಿವೆ.
ಕೊಲ್ಕತ್ತಾ, ಸೆಪ್ಟೆಂಬರ್ 18: ಪಶ್ಚಿಮ ಬಂಗಾಳದ ಹೈಪ್ರೊಫೈಲ್ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ರಂಗದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದೆ. ಮಮತಾ ಬ್ಯಾನರ್ಜಿ ಬಣದ ಅಭ್ಯರ್ಥಿ ಸಂಚಿತಾ ಪ್ರಧಾನ್ ಡೇ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಇಂದು ಮಧ್ಯಾಹ್ನ ರಾಜ್ಯ ಸಚಿವಾಲಯ ‘ನಬನ್ನ’ದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದ ಶಿಕ್ಷಕಿ ಸಂಚಿತಾ ಪ್ರಧಾನ್ ಡೇ, ನಂತರ ತಮ್ಮ ನಾಮಪತ್ರ ಹಿಂಪಡೆದರು.
ಸಂಚಿತಾ ಪ್ರಧಾನ್ ಡೇ ಮತ್ತು ಸಿಎಂ ಸುವೇಂದು ಅಧಿಕಾರಿ ಅವರ ಸಭೆಯ ನಂತರ ಈ ಅಚ್ಚರಿಯ ಬೆಳವಣಿಗೆ ನಡೆದಿದೆ. ಇದರಿಂದಾಗಿ ನಂದಿಗ್ರಾಮದಲ್ಲಿ ಆಡಳಿತಾರೂಢ ಬಿಜೆಪಿಯ ತಂತ್ರಗಾರಿಕೆ ಫಲ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ನಾಮಪತ್ರ ವಾಪಸ್ ಪಡೆಯಲು ಸೆಪ್ಟೆಂಬರ್ 16 ಕೊನೆಯ ದಿನಾಂಕವಾಗಿದ್ದರಿಂದ, ಮಮತಾ ಬ್ಯಾನರ್ಜಿ ಅವರ ಬಣಕ್ಕೆ ನಂದಿಗ್ರಾಮದಲ್ಲಿ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ನಂದಿಗ್ರಾಮ ಸೇರಿದಂತೆ 5 ವಿಧಾನಸಭಾ ಕ್ಷೇತ್ರ, 1 ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ಘೋಷಣೆ; ಅ. 6ಕ್ಕೆ ಮತದಾನ
ಮುಂಬರುವ ಅಕ್ಟೋಬರ್ 6ರ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ಹೊಸ ಪಕ್ಷದ ಹೆಸರು ಹಾಗೂ ಹೊಸ ಚಿಹ್ನೆಯನ್ನು ಹಂಚಿಕೆ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ. ಇದರಿಂದಾಗಿ ತೃಣಮೂಲ ಕಾಂಗ್ರೆಸ್ನ (TMC) ಸಾಂಪ್ರದಾಯಿಕ ಗುರುತಿನ ಮೇಲಿನ ತಕ್ಷಣದ ಹಕ್ಕನ್ನು ಮಮತಾ ಬಣ ಕಳೆದುಕೊಂಡಂತಾಗಿದೆ.
#WATCH | West Bengal | Mamata Banerjee-led faction candidate from Nandigram Sanchita Pradhan (Dey) has withdrawn her nomination for the Nandigram Assembly constituency by-election.
(Video and pic: West Bengal CMO) https://t.co/trquddnraK pic.twitter.com/32HxXCY62y
— ANI (@ANI) September 18, 2026
ಸಂಚಿತಾ ನಾಮಪತ್ರ ಹಿಂಪಡೆದಿದ್ದರೂ ನಂದಿಗ್ರಾಮದಲ್ಲಿ ಕಠಿಣ ಸ್ಪರ್ಧೆ ಏರ್ಪಟ್ಟಿದೆ. ಆಡಳಿತಾರೂಢ ಬಿಜೆಪಿ ಪರವಾಗಿ ಹಾಸಿರಾಣಿ ರಥ್, ರಿತಬ್ರತ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣದಿಂದ ಮಹಮ್ಮದ್ ಎತೇಶಾಮುಲ್ ಹಕ್, ಸಿಪಿಐ (CPI) ಯಿಂದ ಶಾಂತಿ ಗೋಪಾಲ್ ಗಿರಿ, ಕಾಂಗ್ರೆಸ್ನಿಂದ ಮಿಲನ್ ಪ್ರಧಾನ್ ಹಾಗೂ ಎಐಎಸ್ಎಫ್ನಿಂದ (AISF) ಮಹಮ್ಮದ್ ಸಬೆ ಮಿರಾಜ್ ಅಲಿ ಖಾನ್ ಕಣದಲ್ಲಿದ್ದಾರೆ.
ಇದನ್ನೂ ಓದಿ: ಟಿಎಂಸಿಯ ಮೂಲ ಹೆಸರು ಮತ್ತು ಚಿಹ್ನೆ ಫ್ರೀಜ್: ಮಮತಾ ಬಣಕ್ಕೆ ಫುಟ್ಬಾಲ್, ಬಂಡಾಯ ಬಣಕ್ಕೆ ಲಕೋಟೆ ಗುರುತು
ಸುವೇಂದು ಬಿಟ್ಟುಕೊಟ್ಟ ನಂದಿಗ್ರಾಮ:
2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಂಡು ನಂದಿಗ್ರಾಮಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಉಪಚುನಾವಣೆ ಎದುರಾಗಿದೆ.
Sanchita Pradhan (Dey) has withdrawn her nomination from the Nandigram Assembly constituency bypoll. She had filed her nomination as a candidate of the Mamata Banerjee-led faction, “Mamata All India Trinamool Congress” pic.twitter.com/cQ5swdCewd
— IANS (@ians_india) September 18, 2026
ಕೇಂದ್ರ ಚುನಾವಣಾ ಆಯೋಗದ ಪ್ರಕಾರ ಅಕ್ಟೋಬರ್ 6ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ. ನಂದಿಗ್ರಾಮದ ಜೊತೆಗೆ ರೆಜಿನಗರ ಕ್ಷೇತ್ರಕ್ಕೂ ಅಂದೇ ಉಪಚುನಾವಣೆ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಿಲೋ ಮೀಟರ್ಗಟ್ಟಲೆ ದೂರ ಚಾರಣ ಮಾಡದೇ, ಒಂದೊಳ್ಳೆ ಜಾಗಕ್ಕೆ ಭೇಟಿ ನೀಡಿ ಸಮಯ ಕಳೆಯಬೇಕು ಎಂದುಕೊಂಡರೆ ಬೆಂಗಳೂರಿನಿಂದ ಹತ್ತಿರವೇ ಇರುವ ‘ಬಸದಿ ಬೆಟ್ಟ’ಕ್ಕೆ ಭೇಟಿ ನೀಡಬಹುದು.
ಅರೇ, ಇದ್ಯಾವುದು ಬಸದಿ ಬೆಟ್ಟ ಅಂದುಕೊಂಡಿರಾ? ಅದೇ ‘ಮಂದಾರಗಿರಿ ಬೆಟ್ಟ’. ಬೆಂಗಳೂರಿನಿಂದ ಕೇವಲ 65–70 ಕಿ.ಮೀ ದೂರದಲ್ಲಿರುವ ಈ ಜಾಗದಲ್ಲಿ ಪ್ರಕೃತಿಯ ನಡುವೆ ಸಣ್ಣ ಚಾರಣ ಮಾಡಬಹುದು. ಜತೆಗೆ ಇತಿಹಾಸ ಮತ್ತು ಆಧ್ಯಾತ್ಮಿಕ ಅನುಭವವನ್ನೂ ಪಡೆಯಬಹುದು.
ತುಮಕೂರು ಜಿಲ್ಲೆಯ ಪಂಡಿತನಹಳ್ಳಿ ಬಳಿ, ಬೆಂಗಳೂರು-ತುಮಕೂರು ಹೆದ್ದಾರಿಗೆ ಈ ಜಾಗ ಹತ್ತಿರದಲ್ಲಿದೆ. ಬೆಂಗಳೂರಿನಿಂದ 1.5ರಿಂದ 2 ಗಂಟೆಗಳಲ್ಲಿ ಇಲ್ಲಿಗೆ ತಲುಪಬಹುದು. ಪ್ರಾಚೀನ ಜೈನ ದೇವಾಲಯಗಳು, ವಿಶಿಷ್ಟವಾದ ಗುರು ಮಂದಿರ, ಬಂಡೆಗಳಿಂದ ಕೂಡಿದ ಬೆಟ್ಟ ಮತ್ತು ಹತ್ತಿರದಲ್ಲಿರುವ ಶಾಂತಮಯ ಮೈದಾಳ ಕೆರೆ ಆಹ್ಲಾದಕರ ಅನುಭವ ನೀಡುತ್ತದೆ.
ದೇಗುಲ, ಬೆಟ್ಟ, ಕಲ್ಯಾಣಿ... ಒಂದು ದಿನದಲ್ಲಿ ಮೇಲುಕೋಟೆಯಲ್ಲಿ ಏನೆಲ್ಲಾ ನೋಡಬಹುದು?ವೇಣುಗೋಪಾಲ ಸ್ವಾಮಿ ದೇಗುಲ; ಬೆಂಗಳೂರಿನಿಂದ ಒಂದು ದಿನದ ಟ್ರಿಪ್ಗೆ ಇದುವೇ ಬೆಸ್ಟ್!ಮಂದಾರಗಿರಿಯ ವಿಶೇಷತೆಯೇನು?
ಮಂದಾರಗಿರಿಯ ಮುಖ್ಯ ಆಕರ್ಷಣೆಯೆಂದರೆ ಜೈನ ಪರಂಪರೆ ಮತ್ತು ವಾಸ್ತುಶಿಲ್ಪ. ಬೆಟ್ಟದ ತುದಿಯಲ್ಲಿ 12 ರಿಂದ 14ನೇ ಶತಮಾನದ ಪ್ರಾಚೀನ ಜೈನ ದೇವಾಲಯಗಳನ್ನು ಕಾಣಬಹುದು. ಬೆಟ್ಟವನ್ನು ಏರಲು 400-450 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಕಡಿದಾದ ಮೆಟ್ಟಿಲುಗಳನ್ನು ಏರುವ ಮೂಲಕ ಜೈನ ಮಂದಿರವನ್ನು ತಲುಪಬಹುದು. ಹೀಗಾಗಿ ಕುಡಿಯುವ ನೀರು ಜತೆಗಿರಿಸಿಕೊಳ್ಳುವುದು ಮತ್ತು ಆರಾಮದಾಯಕ ಪಾದರಕ್ಷೆಗಳನ್ನು ಧರಿಸುವುದು ಒಳ್ಳೆಯದು.
ಬೆಟ್ಟದ ಮೇಲೆ ನಿಂತರೆ ತಣ್ಣನೆಯ ಗಾಳಿ ಮೈಗಪ್ಪುತ್ತದೆ. ಜತೆಗೆ ಕಣ್ಣು ಹಾಯಿಸಿದಷ್ಟು ದೂರ ಕಾಣುವ ಪಂಡಿತನಹಳ್ಳಿಯ ಸುಂದರ ದೃಶ್ಯಗಳು ಮೆಟ್ಟಿಲು ಹತ್ತಿದ ಆಯಾಸವನ್ನು ನಿವಾರಿಸುತ್ತದೆ.
ವಿಶಿಷ್ಟಗುರು ಮಂದಿರ
ಮಂದಾರಗಿರಿಯ ಅತ್ಯಂತ ವಿಶಿಷ್ಟ ದೃಶ್ಯಗಳಲ್ಲಿ ಒಂದೆಂದರೆ ಬೆಟ್ಟದ ಬುಡದಲ್ಲಿರುವ ಗುರು ಮಂದಿರ. ಈ ರಚನೆಯನ್ನು ಜೈನ ಮುನಿಗಳ ಸಾಂಪ್ರದಾಯಿಕ ನವಿಲು ಗರಿಗಳ ಬೀಸಣಿಗೆಯಾದ ‘ಪಿಂಚಿ’ಯ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ರಚನೆಯು ಸುಮಾರು 81 ಅಡಿ ಎತ್ತರವಾಗಿದೆ.
ಫೋಟೊ ಕ್ಲಿಕ್ಕಿಸಿಕೊಳ್ಳಲೂ ಸೂಕ್ತವಾಗಿರುವ ಈ ಜಾಗ, ವಿಶೇಷ ಎನ್ನಿಸುವುದರಲ್ಲಿ ಎರಡು ಮಾತಿಲ್ಲ.
‘ಪಿಂಚಿ’ಯ ಆಕಾರದ ಗುರು ಮಂದಿರ
ಮೈದಾಳ ಕೆರೆ
ಮಂದಾರಗಿರಿ ಪ್ರವಾಸದಲ್ಲಿ ಸೇರಿಸಿಕೊಳ್ಳಬಹುದಾದ ಮತ್ತೊಂದು ಸ್ಥಳವೆಂದರೆ ಬೆಟ್ಟದ ಬಳಿ ಇರುವ ಮೈದಾಳ ಕೆರೆ.
ಕೆರೆ ಮತ್ತು ಸುತ್ತಮುತ್ತಲಿನ ಪರಿಸರ ಹಿತ ಅನುಭವ ನೀಡುತ್ತದೆ. ಸುತ್ತಮುತ್ತಲಿನ ಬೆಟ್ಟಗಳ ನಡುವೆ ಇರುವ ಈ ಕೆರೆ, ಪ್ರಕೃತಿ ಪ್ರೇಮಿಗಳಿಗೆ ಹೇಳಿಮಾಡಿಸಿದ ಜಾಗ.
ಆದರೆ, ಕಸವನ್ನು ಎಲ್ಲೆಂದರಲ್ಲಿ ಹಾಕದೆ, ಸುತ್ತಮುತ್ತಲಿನ ಪರಿಸರವನ್ನು ಗೌರವಿಸುವುದನ್ನು ಭೇಟಿ ನೀಡುವವರು ಮರೆಯುವಂತಿಲ್ಲ
ಮಂದಾರಗಿರಿ ಬೆಟ್ಟಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯ
ಸಾಮಾನ್ಯವಾಗಿ ಅಕ್ಟೋಬರ್ನಿಂದ ಮಾರ್ಚ್ವರೆಗೆ ಇಲ್ಲಿಗೆ ಭೇಟಿ ನೀಡಬಹುದು. ಈ ಸಮಯದಲ್ಲಿ ಪ್ರಯಾಣಿಸಲು ಮತ್ತು ಬೆಟ್ಟವನ್ನು ಹತ್ತಲು ಹವಾಮಾನವು ಹೆಚ್ಚು ಅನುಕೂಲಕರವಾಗಿರುತ್ತದೆ.
ಉತ್ತಮ ಅನುಭವಕ್ಕಾಗಿ, ಬೆಳಿಗ್ಗೆ ಬೇಗನೆ ಅಥವಾ ಇಳಿಸಂಜೆಯ ಹೊತ್ತಿಗೆ ಭೇಟಿ ನೀಡಬಹುದು. ಬೆಳಗಿನ ಸಮಯದಲ್ಲಿ ಆರಾಮವಾಗಿ ಬೆಟ್ಟವನ್ನು ಹತ್ತಬಹುದು. ಇಳಿಸಂಜೆಯ ವೇಳೆ ಸೂರ್ಯಾಸ್ತವನ್ನು ವೀಕ್ಷಿಸಲು ಇಲ್ಲಿಗೆ ತೆರಳಬಹುದು.
ಬೆಟ್ಟದ ಮೇಲಿಂದ ಕಾಣುವ ಗುರು ಮಂದಿರ
ತಲುಪುವುದು ಹೇಗೆ?
ಮಂದಾರಗಿರಿಯನ್ನು ಬೆಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವವರು ತುಮಕೂರು ಕಡೆಗೆ ಹೋಗುವ ಬಸ್ಗಳನ್ನು ಬಳಸಬಹುದು. ನಂತರ ಹತ್ತಿರದ ನಿಲ್ದಾಣದಿಂದ ಸ್ಥಳೀಯ ಸಾರಿಗೆ ಅಥವಾ ಸಣ್ಣ ನಡಿಗೆಯ ಮೂಲಕ ಹೋಗಬಹುದು. ಕಾರು ಅಥವಾ ಬೈಕ್ನಲ್ಲಿ ಹೋದರೆ ಹೆಚ್ಚು ಅನುಕೂಲ.
ಮಂದಾರಗಿರಿಯ ಸುತ್ತಮುತ್ತ ಭೇಟಿ ನೀಡಬಹುದಾದ ಹತ್ತಿರದ ಸ್ಥಳಗಳು
ದೇವರಾಯನದುರ್ಗ
ದೇವರಾಯನದುರ್ಗವು ತುಮಕೂರಿನ ಪ್ರಸಿದ್ಧ ಬೆಟ್ಟವಾಗಿದ್ದು, ಎತ್ತರದ ಬಂಡೆಗಳು, ದೇವಾಲಯಗಳು ಮತ್ತು ವೀಕ್ಷಣಾ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಸುದೀರ್ಘ ದಿನದ ಪ್ರವಾಸದ ಯೋಜನೆಯಿದ್ದರೆ, ಮಂದಾರಗಿರಿಗೆ ಹೋಗುವಾಗ ದೇವರಾಯನದುರ್ಗಕ್ಕೆ(ಡಿಡಿ ಹಿಲ್ಸ್) ಭೇಟಿ ನೀಡಬಹುದು
ನಾಮದ ಚಿಲುಮೆ
ಇದು ದೇವರಾಯನದುರ್ಗ ಪ್ರದೇಶದಲ್ಲಿರುವ ಒಂದು ನೈಸರ್ಗಿಕ ಕಾರಂಜಿ (ತೀರ್ಥೋದ್ಭವ) ಮತ್ತು ಪ್ರವಾಸಿ ಸ್ಥಳವಾಗಿದೆ. ತುಮಕೂರಿಗೆ ಭೇಟಿ ನೀಡಿದಾಗ ಈ ಜಾಗವನ್ನೂ ನೋಡಬಹುದು.
2026 ರ ಏಷ್ಯನ್ ಕ್ರೀಡಾಕೂಟದ ಮಹಿಳಾ ಕ್ರಿಕೆಟ್ ಸ್ಪರ್ಧೆಯ ಕ್ವಾರ್ಟರ್-ಫೈನಲ್ ಸುತ್ತು ಮುಗಿದಿದ್ದು, ಈ ಸುತ್ತಿನಲ್ಲಿ ಗೆದ್ದ 4 ತಂಡಗಳು ಇದೀಗ ಸೆಮಿಫೈನಲ್ಗೆ ಅರ್ಹತೆ ಪಡೆದಿವೆ. ಅದರಂತೆ ಸೆಮಿಫೈನಲ್ ಸುತ್ತಿನಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಮ್ಮ ಸ್ಥಾನಗಳನ್ನು ಖಚಿತಪಡಿಸಿಕೊಂಡಿವೆ. ಇದರಲ್ಲಿ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾದರೆ, ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಎದುರು ಬದುರಾಗಲಿವೆ.
ಮೊದಲಿಗೆ ನಾಲ್ಕು ಕ್ವಾರ್ಟರ್ ಫೈನಲ್ ಪಂದ್ಯಗಳ ಫಲಿತಾಂಶಗಳನ್ನು ನೋಡುವುದಾದರೆ, ಬಾಂಗ್ಲಾದೇಶ ಮತ್ತು ಚೀನಾ ನಡುವಿನ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಯಿತು, ಇದರಿಂದಾಗಿ ಬಾಂಗ್ಲಾದೇಶ ಸೆಮಿಫೈನಲ್ ಸ್ಥಾನವನ್ನು ಪಡೆದುಕೊಂಡಿತು. ನಂತರ ಪಾಕಿಸ್ತಾನ ಎರಡನೇ ಪಂದ್ಯದಲ್ಲಿ ಥೈಲ್ಯಾಂಡ್ ತಂಡವನ್ನು ಸೋಲಿಸಿ ಸೆಮಿಫೈನಲ್ನಲ್ಲಿ ಸ್ಥಾನ ಪಡೆದುಕೊಂಡಿತು. ನಂತರ, ಸೆಪ್ಟೆಂಬರ್ 18 ರ ಶುಕ್ರವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ, ಮಲೇಷ್ಯಾವನ್ನು ಸೋಲಿಸಿದರೆ, ಹಾಲಿ ಚಾಂಪಿಯನ್ ಟೀಂ ಇಂಡಿಯಾ, ಜಪಾನ್ ತಂಡವನ್ನು ಸೋಲಿಸಿ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ.
ಸೆಮಿಫೈನಲ್ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮೊದಲನೇ ಸೆಮಿಫೈನಲ್ ಪಂದ್ಯ ಯಾವಾಗ ನಡೆಯಲಿದೆ?ಮೊದಲನೇ ಸೆಮಿಫೈನಲ್ ಪಂದ್ಯ ಸೆಪ್ಟೆಂಬರ್ 20 ರಂದು ನಡೆಯಲಿದೆ.
ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಯಾವೆರಡು ತಂಡಗಳು ಮುಖಾಮುಖಿಯಾಗಲಿವೆ?ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಮುಖಾಮುಖಿಯಾಗಲಿವೆ.
ಮೊದಲನೇ ಸೆಮಿಫೈನಲ್ ಪಂದ್ಯ ಎಷ್ಟು ಗಂಟೆಗೆ ಆರಂಭ?ಮೊದಲನೇ ಸೆಮಿಫೈನಲ್ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 5:30 ಕ್ಕೆ ಆರಂಭವಾಗಲಿದೆ.
ಎರಡನೇ ಸೆಮಿಫೈನಲ್ ಎರಡನೇ ಸೆಮಿಫೈನಲ್ ಪಂದ್ಯ ಯಾವಾಗ ನಡೆಯಲಿದೆ?ಎರಡನೇ ಸೆಮಿಫೈನಲ್ ಪಂದ್ಯವೂ ಸೆಪ್ಟೆಂಬರ್ 20 ರಂದೇ ನಡೆಯಲಿದೆ.
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಯಾವೆರಡು ತಂಡಗಳು ಮುಖಾಮುಖಿಯಾಗಲಿವೆ?ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಮುಖಾಮುಖಿಯಾಗಲಿವೆ.
ಎರಡನೇ ಸೆಮಿಫೈನಲ್ ಪಂದ್ಯ ಎಷ್ಟು ಗಂಟೆಗೆ ಆರಂಭ?ಎರಡನೇ ಸೆಮಿಫೈನಲ್ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 10:30 ಕ್ಕೆ ಆರಂಭವಾಗಲಿದೆ.
ಎರಡೂ ಸೆಮಿಫೈನಲ್ ಪಂದ್ಯಗಳು ಜಪಾನ್ನ ನಿಶಿನ್ನಲ್ಲಿರುವ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆಯಲಿವೆ. ಎಲ್ಲಾ ಕ್ವಾರ್ಟರ್-ಫೈನಲ್ ಪಂದ್ಯಗಳು ಇದೇ ಸ್ಥಳದಲ್ಲಿ ನಡೆದಿದ್ದವು. ಸೆಮಿಫೈನಲ್ ಪಂದ್ಯಗಳ ನಂತರ, ಕಂಚಿನ ಪದಕ ಪಂದ್ಯವು ಸೆಪ್ಟೆಂಬರ್ 22 ರಂದು ಬೆಳಿಗ್ಗೆ 5:30 ಕ್ಕೆ (ಭಾರತೀಯ ಸಮಯ) ನಡೆಯಲಿದೆ. ನಂತರ ಅಂತಿಮ ಪಂದ್ಯವಾದ ಚಿನ್ನದ ಪದಕ ಪಂದ್ಯವು ಅದೇ ದಿನ ಬೆಳಿಗ್ಗೆ 10:30 ಕ್ಕೆ (ಭಾರತೀಯ ಸಮಯ) ನಡೆಯಲಿದೆ.
ಭಾರತದಲ್ಲಿ ನೀವು ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?ಭಾರತದಲ್ಲಿ, ಸೆಮಿಫೈನಲ್ ಪಂದ್ಯಗಳನ್ನು ಸೋನಿ ಸ್ಪೋರ್ಟ್ಸ್ 3 ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಈ ಪಂದ್ಯಗಳ ನೇರ ಪ್ರಸಾರವು ಸೋನಿ LIV ಅಪ್ಲಿಕೇಶನ್ ಮತ್ತು ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನಿರ್ದೇಶಕ ನಿತೀಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ‘ಜೈ ಜೈ ರಾಮ್’ ಹಾಡು ಬಿಡುಗಡೆಯಾಗಿ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದೆ. ಆದರೆ, ಈ ಭಕ್ತಿಗೀತೆಯನ್ನು ರೆಕಾರ್ಡ್ ಮಾಡಲು ಅರಿಜಿತ್ ಸಿಂಗ್ ಅವರು ಬರೋಬ್ಬರಿ 200 ಟೇಕ್ಗಳನ್ನು ತೆಗೆದುಕೊಂಡಿದ್ದಾರೆ ಎಂಬ ಕುತೂಹಲಕಾರಿ ವಿಚಾರ ಹೊರಬಿದ್ದಿದೆ.
ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ರಾಮಾಯಣ’ ಸಿನಿಮಾ ಘೋಷಣೆಯಾದ ದಿನದಿಂದಲೂ ಭಾರಿ ಸದ್ದು ಮಾಡುತ್ತಿದೆ. ಇದೀಗ ಅರಿಜಿತ್ ಸಿಂಗ್ ಅವರ ಈ ಹಾಡು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಯಾದಗಿರಿಯಲ್ಲಿ ಆಗಸ್ಟ್ 28ರವರೆಗೆ ಶ್ರೀಮದ್ ವಾಲ್ಮೀಕಿ ರಾಮಾಯಣ ಪ್ರವಚನಭಾರತೀಯ ಮಹಾಕಾವ್ಯಗಳಾದ ರಾಮಾಯಣ-ಮಹಾಭಾರತದ ಮೂಲ ಕೃತಿ ಓದಿ ಸತ್ಯದೆಡೆಗೆ ಚಿಂತನೆಅರಿಜಿತ್ ಸಿಂಗ್ ಇಷ್ಟೊಂದು ಟೇಕ್ಗಳನ್ನು ತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ಚಿತ್ರತಂಡದ ಆಪ್ತ ಮೂಲವೊಂದು ‘ಪಿಂಕ್ವಿಲ್ಲಾ’ಗೆ ತಿಳಿಸಿದೆ. ‘ಜೈ ಜೈ ರಾಮ್’ ಹಾಡನ್ನು ರೆಕಾರ್ಡ್ ಮಾಡುವಾಗ ಅರಿಜಿತ್ ಸಿಂಗ್ ಸಂಪೂರ್ಣವಾಗಿ ಭಕ್ತಿಯಲ್ಲಿ ಮುಳುಗಿದ್ದರು. ಪ್ರತಿಯೊಂದು ಟೇಕ್ನಲ್ಲೂ ಹಾಡಿನ ಆಳವಾದ ಭಾವನೆಯನ್ನು ಹುಡುಕುತ್ತಾ, ತಾವೇ ಕಳೆದುಹೋಗಿದ್ದರು. ಏಕೆಂದರೆ ಅವರಿಗೆ ಈ ಹಾಡಿನ ರೆಕಾರ್ಡಿಂಗ್ ಮುಗಿಯುವುದೇ ಇಷ್ಟವಿರಲಿಲ್ಲ. ಅಷ್ಟರ ಮಟ್ಟಿಗೆ ಅರಿಜಿತ್ ಸಿಂಗ್ ಅವರು ಹಾಡಿನಲ್ಲಿ ಮುಳುಗಿದ್ದರು’ ಎಂದು ವರದಿಯಾಗಿದೆ.
ಎ.ಆರ್. ರೆಹಮಾನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ 'ಜೈ ಜೈ ರಾಮ್" ಹಾಡು, ಪ್ರಸಿದ್ಧ ಭಜನೆ 'ಜೈ ಸಿಯಾ ರಾಮ್’ನ ಹೊಸ ರೂಪಾಂತರವಾಗಿದೆ. ಈ ಹಾಡಿಗೆ ಡಾ. ಕುಮಾರ್ ವಿಶ್ವಾಸ್ ಸಾಹಿತ್ಯ ಬರೆದಿದ್ದು, ಅರಿಜಿತ್ ಸಿಂಗ್ ಜೊತೆಗೆ ಶ್ರೇಯಾ ಘೋಷಾಲ್ ಧ್ವನಿಯಾಗಿದ್ದಾರೆ.
ಈ ಚಿತ್ರದಲ್ಲಿ ರವಿ ದುಬೆ, ಸನ್ನಿ ಡಿಯೋಲ್, ಅರುಣ್ ಗೋವಿಲ್, ಲಾರಾ ದತ್ತಾ, ರಾಕುಲ್ ಪ್ರೀತ್ ಸಿಂಗ್, ವಿವೇಕ್ ಓಬೆರಾಯ್ ಮತ್ತು ಕುನಾಲ್ ಕಪೂರ್ ಅವರೂ ತಾರಾಗಣದಲ್ಲಿದ್ದಾರೆ. ‘ರಾಮಾಯಣ’ದ ಮೊದಲ ಭಾಗ ನವೆಂಬರ್ 8 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಗಣೇಶ ಚತುರ್ಥಿಯಂದು ಬಿಡುಗಡೆಯಾದ ಹಾಡು ಯೂಟ್ಯೂಬ್ನಲ್ಲಿ 41 ಲಕ್ಷ ವೀಕ್ಷಣೆ ಪಡೆದುಕೊಂಡಿದೆ.
ಕೋವಿಡ್ ಬಳಿಕ ಭಾರತದ ಸಿನಿಮಾಗಳು ವಿಶ್ವಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿವೆ. ಅದರಲ್ಲೂ ಭಾರತದ ಪ್ರಾದೇಶಿಕ ಭಾಷೆಯ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಪ್ರೇಕ್ಷಕರನ್ನು ಸೆಳೆಯುವುದು ಮಾತ್ರವೇ ಅಲ್ಲದೆ, ಆಸ್ಕರ್ ಅಂಥಹಾ ವಿಶ್ವ ಶ್ರೇಷ್ಠ ವೇದಿಕೆಗಳಲ್ಲಿ ಸ್ಥಾನ ಪಡೆಯುತ್ತಿದೆ. ‘ಆರ್ಆರ್ಆರ್’ ಸಿನಿಮಾ ಆಸ್ಕರ್ ಅಂಗಳಕ್ಕೆ ಕಾಲಿರಿಸಿದ್ದು ಮಾತ್ರವೇ ಅಲ್ಲದೆ ಆಸ್ಕರ್ ಗೆದ್ದು ಇತಿಹಾಸ ಸೃಷ್ಟಿಸಿದೆ. ಭಾರತದ ಕೆಲ ಡಾಕ್ಯುಮೆಂಟರಿಗಳು ಸಹ ಆಸ್ಕರ್ ಗೆದ್ದಿವೆ. ಮಾತ್ರವಲ್ಲದೆ ಖುದ್ದು ಆಸ್ಕರ್, ಹಲವು ಭಾರತೀಯ ಸಿನಿಮಾಗಳನ್ನು ಗುರುತಿಸಿ ವಿಶೇಷ ಗೌರವವನ್ನು ನೀಡಿದೆ. ಹೀಗಿರುವಾಗ ಇದೀಗ ಮತ್ತೊಂದು ಆಸ್ಕರ್ ಹತ್ತಿರವಾಗುತ್ತಿದ್ದು, ಭಾರತದಿಂದ ಈ ಬಾರಿ ಅಳೆದು-ತೂಗಿ ಮರಾಠಿ ಸಿನಿಮಾ ಒಂದನ್ನು ಅಧಿಕೃತ ಆಯ್ಕೆಯನ್ನಾಗಿ ಪರಿಗಣಿಸಿ ಕಳಿಸಲಾಗಿದೆ.
99ನೇ ಆಸ್ಕರ್ ಈ ಬಾರಿ ನಡೆಯಲಿದ್ದು, ಈ ಬಾರಿಯ ಆಸ್ಕರ್ಗೆ ಭಾರತದಿಂದ ಮರಾಠಿ ಸಿನಿಮಾ ‘ಗೊಂಧಲ್’ ಭಾರತದ ಸಿನಿಮಾ ಫೆಡರೇಷನ್ ಕಳಿಸಿಕೊಟ್ಟಿದೆ. ‘ಗೊಂಧಲ್’ ಸಿನಿಮಾವು ಆಸ್ಕರ್ನ ವಿದೇಶಿ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿಗಾಗಿ ಸ್ಪರ್ಧೆ ಮಾಡಲಿದೆ. ‘ಗೊಂಧಲ್’ ಸಿನಿಮಾವು ಮಹಾರಾಷ್ಟ್ರದಲ್ಲಿ ನಡೆಯುವ ಒಂದು ಆಚರಣೆಯ ಕುರಿತಾದ ಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿದೆ. ಸಂಸ್ಕೃತಿ, ಆಚರಣೆಯನ್ನು ಸಾರುವ ಕತೆಯನ್ನು ಸಿನಿಮಾ ಒಳಗೊಂಡಿದೆ.
ಈ ಬಾರಿ ‘ಧುರಂಧರ್’ ಸಿನಿಮಾವನ್ನು ಆಸ್ಕರ್ಗೆ ಕಳಿಸಬೇಕು ಎಂಬ ಒತ್ತಡ ಜ್ಯೂರಿ ಸದಸ್ಯರ ಮೇಲಿತ್ತು. ಅದರ ಜೊತೆಗೆ ನಾಗಾ ಸಿನಿಮಾ ‘ಅಂಗ’ ಮತ್ತು ತಮಿಳು ಸಿನಿಮಾ ‘ಡೊರೊತಿ’ ಸಹ ರೇಸಿನಲ್ಲಿದ್ದವು. ಆದರೆ ಅದ್ಯಾವುದನ್ನೂ ಅಲ್ಲದೆ, ಮರಾಠಿ ಸಿನಿಮಾ ‘ಗೋಂಧಲ್’ ಅನ್ನು ಸದಸ್ಯರು ಆಯ್ಕೆ ಮಾಡಿದ್ದಾರೆ. ಭಾರತೀಯ ಸಂಸ್ಕೃತಿ, ಆಚರಣೆಗಳ ಜೊತೆಗೆ ಸಿನಿಮಾದ ಕತೆಯಲ್ಲಿರುವ ಮಾನವನ ವ್ಯಕ್ತಿತ್ವದ ಅನಾವರಣ ಈ ಸಿನಿಮಾವನ್ನು ಆಸ್ಕರ್ ಆಯ್ಕೆಗೆ ಅರ್ಹವೆಂದು ಜ್ಯೂರಿ ಸದಸ್ಯರು ಪರಿಗಣಿಸಿದ್ದಾರೆ.
ಇದನ್ನೂ ಓದಿ:‘ಆಸ್ಕರ್ ಸಿಗಲೇ ಬೇಕು’: ‘ರಾಮಾಯಣ’ ಸಿನಿಮಾವನ್ನು ಕೊಂಡಾಡಿದ ಮಹಾರಾಷ್ಟ್ರ ಸಿಎಂ
ಗೋಂಧಾಲ್ ಕತೆ ಏನು?‘ಗೋಂಧಾಲ್’ ಎಂಬುದು ರಾತ್ರಿ ಪೂರ್ತಿ ನಡೆಯುವ ಒಂದು ಪೂಜೆ ಆಚರಣೆ. ಈಗ ಆಸ್ಕರ್ಗೆ ಆಯ್ಕೆ ಆಗಿರುವ ಸಿನಿಮಾ ‘ಗೋಂಧಾಲ್’ ‘ಸುಮನ್’ ಎಂಬ ಪಾತ್ರದ ಸುತ್ತುವ ಕತೆಯನ್ನು ಒಳಗೊಂಡಿದೆ. ಹಳ್ಳಿಯೊಂದಕ್ಕೆ ಸೊಸೆಯಾಗಿ ಬರುವ ಸುಮನ್, ಪತಿ ಆನಂದ್ ಜೊತೆಗೆ ಆರಾಮದ ಜೀವನ ನಡೆಸುತ್ತಿರುತ್ತಾಳೆ. ಆದರೆ ಆಕೆ, ‘ಗೋಂಧಾಲ್’ ಆಚರಣೆಯಲ್ಲಿ ಪ್ರಮುಖನಾದ ಗೋಂಧಾಲಿ ಸಾಹೇಬ ಎಂಬಾತನ ಮೇಲೆ ಪ್ರೀತಿ ಬೆಳೆಸಿಕೊಳ್ಳುತ್ತಾಳೆ. ಆಕೆ ತನ್ನ ಪತಿಯಿಂದ ದೂರಾಗಲು ಪತಿಯ ಸಂಬಂಧಿಯೊಬ್ಬನ ಸಹಾಯ ಪಡೆಯುತ್ತಾಳೆ. ಆದರೆ ಆಕೆ ಮದುವೆ ಸಂಕೋಲೆಯಿಂದ ಸ್ವಾತಂತ್ರ್ಯ ಪಡೆಯಲು ಮಾಡುವ ಈ ಪ್ರಯತ್ನದಲ್ಲಿ ಒಂದು ಕೊಲೆ ನಡೆದು ಹೋಗುತ್ತದೆ. ಬಳಿಕ ಪ್ರತಿಯೊಬ್ಬರೂ ಸಹ ತಮ್ಮನ್ನು ತಾವು ಕಾಪಾಡಿಕೊಳ್ಳುವ ಮಾಡುವ ಪ್ರಯತ್ನಗಳು ಸಿನಿಮಾದ ಕತೆಗೆ ಥ್ರಿಲ್ಲರ್ ಗುಣವನ್ನು ಸೇರಿಸಿದೆ. ಈ ಸಿನಿಮಾವನ್ನು ಸಂತೋಷ್ ದಾವ್ಕರ್ ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಡಯಾನಾ ಎಡುಲ್ಜಿ, ಹರ್ಮನ್ಪ್ರೀತ್ ಕೌರ್ ಅವರಿಂದ ತಂಡದ ನಾಯಕತ್ವವನ್ನು ಸ್ಮೃತಿ ಮಂಧನಾ ವಹಿಸಿಕೊಳ್ಳಬೇಕು ಎಂದಿದ್ದಾರೆ. ಹರ್ಮನ್ಪ್ರೀತ್ ಅವರ ವಯಸ್ಸನ್ನು ಅವರು ಇದಕ್ಕೆ ಕಾರಣವಾಗಿ ಉಲ್ಲೇಖಿಸಿದ್ದಾರೆ. ಸದ್ಯ ಭಾರತ ತಂಡದ ನಾಯಕಿಯಾಗಿರುವ ಹರ್ಮನ್ಪ್ರೀತ್ ಅವರಿಗೆ 37 ವರ್ಷವಾಗಿದ್ದು, ಮುಂದಿನ ವಿಶ್ವಕಪ್ ನಡೆಯುವ ವೇಳೆಗೆ ಅವರಿಗೆ 40 ವರ್ಷ ಸಮೀಪಿಸಿರುತ್ತದೆ ಎಂದು ಎಡುಲ್ಜಿ ಗಮನಸೆಳೆದಿದ್ದಾರೆ.
ನಾಯಕತ್ವದ ಸುಗಮ ಹಸ್ತಾಂತರವನ್ನು ಖಚಿತಪಡಿಸಿಕೊಳ್ಳಲು, 30 ವರ್ಷದ ಮಂಧಾನಾ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಬೇಕು ಮತ್ತು ಯುವ ಆಟಗಾರ್ತಿಯೊಬ್ಬರನ್ನು ಉಪನಾಯಕಿಯನ್ನಾಗಿ ನೇಮಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
'ಸ್ಮೃತಿ ಮಂಧನಾ ಅವರು ನಾಯಕತ್ವಕ್ಕಾಗಿ ದೀರ್ಘಕಾಲದಿಂದ ಕಾಯುತ್ತಿದ್ದಾರೆ, ಹಾಗಾಗಿ ಈಗ ಅವರನ್ನು ನಾಯಕಿಯನ್ನಾಗಿ ಮಾಡಬೇಕು. ಮುಂದಿನ ವಿಶ್ವಕಪ್ ವೇಳೆಗೆ ಹರ್ಮನ್ಪ್ರೀತ್ ಕೌರ್ ಅವರಿಗೆ ಸುಮಾರು 40 ವರ್ಷ ವಯಸ್ಸಾಗಿರುತ್ತದೆ; ಆದ್ದರಿಂದ ಸ್ಮೃತಿಗೆ ದೀರ್ಘಕಾಲದವರೆಗೆ ನಾಯಕತ್ವದ ಜವಾಬ್ದಾರಿ ನೀಡುವುದು ಮತ್ತು ಇಬ್ಬರು ಯುವ ಆಟಗಾರ್ತಿಯರನ್ನು ಉಪನಾಯಕಿಯರನ್ನಾಗಿ ರೂಪಿಸುವುದು ಉತ್ತಮ. ಹರ್ಮನ್ಪ್ರೀತ್ ಅವರು ಅತ್ಯುತ್ತಮ ಸ್ಥಿತಿಯಲ್ಲಿರುವಾಗಲೇ ಘನತೆಯಿಂದ ಹುದ್ದೆಯಿಂದ ಕೆಳಗಿಳಿಯಬೇಕು; 'ಅವರು ಏಕೆ ಕೆಳಗಿಳಿಯುತ್ತಿಲ್ಲ?' ಎಂದು ಕೇಳುವ ಬದಲು ಜನರು 'ಅವರು ಏಕೆ ಕೆಳಗಿಳಿದರು?' ಎಂದು ಕೇಳುವಂತಾಗಬೇಕು' ಎಂದು ಎಡುಲ್ಜಿ 'ಮಿಡ್-ಡೇ'ಗೆ ತಿಳಿಸಿದರು.
ಮಹಿಳಾ ಟಿ20 ಕ್ರಿಕೆಟ್ ವೇಗವಾಗಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ, ಭಾರತದ ಪ್ರಮುಖ ಬ್ಯಾಟರ್ ಮಂಧಾನಾ ಅವರ ಪರಿಷ್ಕೃತ 'ಪವರ್ ಗೇಮ್' ಮತ್ತು ಸ್ಪಿನ್ನರ್ಗಳ ವಿರುದ್ಧದ ಅವರ ಪ್ರಾಬಲ್ಯವು ಯುವ ಆಟಗಾರ್ತಿಯರಿಗೆ ಮಾದರಿಯಾಗಿದೆ ಎಂದು ಮಾಜಿ ನಾಯಕಿ ಅಂಜುಮ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
'ನಿಮ್ಮ ದಾರಿಗೆ ನಾನು ಅಡ್ಡ ಬರಲ್ಲ, ನನ್ನ ದಾರಿಗೆ ನೀವು ಅಡ್ಡ ಬರಬೇಡಿ': ತಮ್ಮ ಜೀವನದ 'ಅತ್ಯಂತ ಕಠಿಣ ರಾತ್ರಿ' ಬಗ್ಗೆ ಸ್ಮೃತಿ ಮಂಧಾನಾ!ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್ನಲ್ಲಿ, ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಮಂಧಾನಾ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು ಹಾಗೂ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ಹಿಂದಿಕ್ಕಿದರು.
'ಕಳೆದ ಎರಡೂವರೆ ವರ್ಷಗಳಲ್ಲಿ ಅವರು ತನ್ನ 'ಪವರ್ ಗೇಮ್' ಅನ್ನು ಹೇಗೆ ಸುಧಾರಿಸಿಕೊಂಡಿದ್ದಾರೆ ಎಂಬುದನ್ನು ನೋಡುವುದು ನಿಜಕ್ಕೂ ಸಂತೋಷದಾಯಕ ವಿಷಯ. ಎಷ್ಟು ಸುಲಭವಾಗಿ ಮತ್ತು ಆತ್ಮವಿಶ್ವಾಸದಿಂದ ಅವರು ಚೆಂಡನ್ನು ಬೌಂಡರಿ ಆಚೆಗೆ ಕಳುಹಿಸುತ್ತಿದ್ದಾರೆ ಎಂಬುದು ಗಮನಾರ್ಹ; ಇದು ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ' ಎಂದು ಚೋಪ್ರಾ ಸುದ್ದಿಸಂಸ್ಥೆ ಪಿಟಿಐ ಜೊತೆಗಿನ ಸಂಭಾಷಣೆಯಲ್ಲಿ ಹೇಳಿದರು.
'ಆಟಗಾರರು ತಮ್ಮ ಕೌಶಲವನ್ನು ಹೇಗೆ ಸುಧಾರಿಸಿಕೊಳ್ಳಬೇಕು ಎಂಬುದರ ಕುರಿತು ನಾವು ಈ ಹಿಂದೆ ಚರ್ಚಿಸುತ್ತಿದ್ದೆವು. ನನ್ನ ಪ್ರಕಾರ, ಇದಕ್ಕಾಗಿ ನೀವು ದೂರದ ಉದಾಹರಣೆಗಳನ್ನು ಹುಡುಕಬೇಕಿಲ್ಲ; ವಿಶೇಷವಾಗಿ ಮಧ್ಯಮ ಕ್ರಮಾಂಕದ ಆಟಗಾರರು ಅಥವಾ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಯುವ ಆಟಗಾರರ ವಿಷಯದಲ್ಲಿ ಇದು ಹೆಚ್ಚು ಪ್ರಸ್ತುತ. ಎರಡು ವರ್ಷಗಳ ಹಿಂದೆ ಸ್ಮೃತಿ ಟಿ20 ಅಥವಾ 50 ಓವರ್ಗಳ ಕ್ರಿಕೆಟ್ ಅನ್ನು ಹೇಗೆ ಆಡುತ್ತಿದ್ದರು ಮತ್ತು ಈಗ ಹೇಗೆ ಆಡುತ್ತಿದ್ದಾರೆ ಎಂಬುದನ್ನು ಗಮನಿಸಿ. ವಿಶೇಷವಾಗಿ ಸ್ಪಿನ್ನರ್ಗಳ ವಿರುದ್ಧ ಅವರ ಆಟದಲ್ಲಿ ಅಸಾಧಾರಣವಾದ ಪ್ರಾಬಲ್ಯ ಎದ್ದು ಕಾಣುತ್ತದೆ' ಎಂದರು.
ವಯಸ್ಸು ಕೇವಲ ನಂಬರ್ ಅಷ್ಟೇ, ಮನಸ್ಸಿದ್ದರೆ ಎಲ್ಲವೂ ಸಾಧ್ಯ. ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ಅಜ್ಜಿಯೊಬ್ಬರು (old woman) ಸಲೀಸಾಗಿ ಕಾರು ಓಡಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅಜ್ಜಿಯ ಆತ್ಮವಿಶ್ವಾಸಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ. ಅಜ್ಜಿಯ ಡ್ರೈವಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಅಜ್ಜಿಯ ಡ್ರೈವಿಂಗ್ಗೆ ಪೊಲೀಸರೇ ಶಾಕ್ವಿಶಾಲ್ ಲೋಲತ್ರ (Vishal lolatra) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಅಜ್ಜಿಯೊಬ್ಬರು ಸಲೀಸಾಗಿ ಕಾರು ಓಡಿಸುವುದನ್ನು ಕಾಣಬಹುದು. ಕಾರು ನಿಲ್ಲಿಸಿದ ಪೊಲೀಸರು ಅಜ್ಜಿಯ ಆತ್ಮ ವಿಶ್ವಾಸ ಕಂಡು ಶಾಕ್ ಆಗಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆView this post on Instagram
A post shared by 𝕍𝕚𝕤𝕙𝕒𝕝 𝕝𝕒𝕝𝕠𝕥𝕣𝕒 (@vishal__riderz_jk14)
ಇದನ್ನೂ ಓದಿ: ಬಾಯಿ ಚಪ್ಪರಿಸಿಕೊಂಡು ಐಸ್ ಕ್ರೀಮ್ ಸವಿದ ಅಜ್ಜಿ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ಅಜ್ಜಿಯ ಪವರ್ ಎಂದಿದ್ದಾರೆ. ಇನ್ನೊಬ್ಬರು, ಪೊಲೀಸರು ಶಾಕ್, ದಾದಿ ರಾಕ್ ಎಂದು ಹೇಳಿದ್ದಾರೆ. ಮತ್ತೊಬ್ಬರು, ದಾದಿ ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹರಿದ್ವಾರ: ಉತ್ತರ ಪ್ರದೇಶದ ನೋಯ್ಡಾದಲ್ಲಿ 2006ರಲ್ಲಿ ನಡೆದ ನಿಥಾರಿ ಸರಣಿ ಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಸುರೇಂದ್ರ ಕೋಲಿ (50), ತಮ್ಮ ಚಹಾ ಅಂಗಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದ್ದಾರೆ.
ಕೋಲಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಂಡುಬಂದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ನೋಯ್ಡಾದಲ್ಲಿ ಮೋನಿಂದರ್ ಸಿಂಗ್ ಪಂಧೇರ್ ಮತ್ತು ಸುರೇಂದ್ರ ಕೋಲಿ, ಹೆಣ್ಣುಮಕ್ಕಳನ್ನು ಮನೆಗೆ ಕರೆತಂದು ಅತ್ಯಾಚಾರ ಎಸಗಿದ ಬಳಿಕ ಕೊಲೆ ಮಾಡಿ ಮೃತದೇಹಗಳನ್ನು ಚರಂಡಿಗೆ ಎಸೆದಿದ್ದರು ಎಂಬ ಆರೋಪವಿತ್ತು.
ನೋಯ್ಡಾದ ಸೆಕ್ಟರ್ 31ರಲ್ಲಿರುವ ಮೋನಿಂದರ್ ಸಿಂಗ್ ಪಂಧೇರ್ ಅವರ ಮನೆಯಲ್ಲಿ ಕೋಲಿ ಕೆಲಸ ಮಾಡುತ್ತಿದ್ದರು.
ಪ್ರಕರಣದಲ್ಲಿ ಜೈಲು ಸೇರಿದ್ದ ಪ್ರಮುಖ ಆರೋಪಿ ಮೋನಿಂದರ್ ಸಿಂಗ್ ಅವರನ್ನು ಅಲಹಾಬಾದ್ ಹೈಕೋರ್ಟ್ ಖುಲಾಸೆಗೊಳಿಸಿತ್ತು. ಅವರು 2023ರ ಅಕ್ಟೋಬರ್ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು. ಇನ್ನು 2006ರಲ್ಲಿ ಬಂಧನಕ್ಕೊಳಗಾಗಿದ್ದ ಕೋಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದರೂ ಕೊನೆಗೆ ಖುಲಾಸೆಗೊಂಡಿದ್ದರು.
ನಿಥಾರಿ ಹತ್ಯೆ ಪ್ರಕರಣ: ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ನಿಥಾರಿ ಕೊಲೆ ಪ್ರಕರಣ: ಜೈಲಿನಿಂದ ಹೊರಬಂದ ಮೋನಿಂದರ್ ಸಿಂಗ್ ಪಂಧೇರ್ ಪ್ರಕರಣದ ಹಿನ್ನೆಲೆ:ನೋಯ್ಡಾಗೆ ಸಮೀಪದ ನಿಥಾರಿ ಗ್ರಾಮದ 14 ವರ್ಷದ ರಿಂಪಾ ಸೇರಿದಂತೆ ನಾಲ್ವರು ಮಹಿಳೆಯರು ಹಾಗೂ 15 ಹೆಣ್ಣು ಮಕ್ಕಳು ಕಾಣೆಯಾಗಿದ್ದರು. ಬಳಿಕ ಅವರೆಲ್ಲರ ಅಸ್ಥಿಪಂಜರಗಳು ಪಂಧೇರ್ ಅವರ ಮನೆಯಲ್ಲಿ ಪತ್ತೆಯಾಗಿದ್ದವು. ತೀವ್ರ ಕೋಲಾಹಲ ಸೃಷ್ಟಿಸಿದ್ದ ಈ ಪ್ರಕರಣದ ತನಿಖೆಯನ್ನು ಆಗಿನ ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ವಹಿಸಿತ್ತು.
2005ರಲ್ಲಿ ನೋಯ್ಡಾದ ಸೆಕ್ಟರ್ 31ರಲ್ಲಿ ಉದ್ಯಮಿ ಮೊನೀಂದರ್ ಸಿಂಗ್ ಪಂಧೇರ್ ಮನೆ ಸಮೀಪದಿಂದ ಬಾಲಕಿಯೊಬ್ಬಳು ಕಾಣೆಯಾಗಿದ್ದಳು. ಆಕೆಯ ತಂದೆ ಪ್ರಕರಣ ದಾಖಲಿಸಿದ್ದರು. ಪೊಲೀಸರು ಪಂಧೇರ್ ಮತ್ತು ಅವರ ಸಹಾಯಕ ಕೋಲಿಯನ್ನು ಬಂಧಿಸಿದ್ದರು. 2006ರ ಡಿ. 29ರಂದು ನೋಯ್ಡಾದ ನಿಥಾರಿಯಲ್ಲಿರುವ ಪಂಧೇರ್ ಅವರ ಮನೆಯ ಸಮೀಪದ ಚರಂಡಿಯಲ್ಲಿ ಬಾಲಕಿ ಸೇರಿದಂತೆ ಹಲವರ ಅಸ್ಥಿಪಂಜರಗಳು ಪತ್ತೆಯಾಗಿದ್ದವು.
ಇತರ ಅಸ್ಥಿಪಂಜರಗಳು ಇದೇ ಪ್ರದೇಶದಿಂದ ನಾಪತ್ತೆಯಾಗಿದ್ದ ಬಡ ಮಕ್ಕಳು ಹಾಗೂ ಯುವತಿಯರದ್ದು ಎಂದು ತನಿಖೆಯಿಂದ ತಿಳಿದುಬಂದಿತ್ತು. ಇದಾದ 10 ದಿನಗಳಲ್ಲಿ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು.
ಈ ಇಬ್ಬರು ಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಅವರ ಕೊಲೆಗೈದು ನಂತರ ತುಂಡು ತುಂಡಾಗಿ ಕತ್ತರಿಸಿ ಚರಂಡಿ ಎಸೆಯುವ ಮೂಲಕ ಸಾಕ್ಷ್ಯ ನಾಶ ಮಾಡಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ಈ ಗಂಭೀರ ಪ್ರಕರಣದ ಬೆನ್ನು ಹತ್ತಿದ ಸಿಬಿಐ, ಪಂಧೇರ್ ಹಾಗೂ ಕೋಲಿ ವಿರುದ್ಧ 19 ಪ್ರಕರಣಗಳನ್ನು ದಾಖಲಿಸಿತ್ತು.
ಕೊಲೆಯಾದ ಮಕ್ಕಳ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದು ನಂತರ ನರಭಕ್ಷಣೆಯನ್ನೂ ಮಾಡಲಾಗಿತ್ತು ಎಂದು ಕೋಲಿ ವಿಚಾರಣೆ ವೇಳೆ ಹೇಳಿದ್ದ ಎಂಬುದೂ ವರದಿಯಾಗಿತ್ತು. ಆದರೆ ಇದನ್ನು ಸಾಭೀತುಪಡಿಸಲು ಅಗತ್ಯ ಸಾಕ್ಷ್ಯಗಳು ಇಲ್ಲದ ಕಾರಣ ಇಬ್ಬರನ್ನೂ ನ್ಯಾಯಾಲಯ ದೋಷಮುಕ್ತಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಪ್ರಕರಣ ಬೆಳಕಿಗೆ ಬಂದದ್ದು ಹೀಗೆ..2005–06ರಲ್ಲಿ ವ್ಯಕ್ತಿಯೊಬ್ಬರು ಕೆಲಸ ಹುಡುಕಿಕೊಂಡು ಬರಲು ಹೋಗಿದ್ದ ತನ್ನ ಮಗಳು ವಾಪಸ್ ಮನೆಗೆ ಬಂದಿಲ್ಲ ಎಂದು ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿದಾಗ ಪಂಧೇರ್ ಮತ್ತು ಕೋಲಿ ನಿವಾಸವಿರುವ ಹಿಂಭಾಗದ ಚರಂಡಿಯಲ್ಲಿ ಎಂಟು ಮಕ್ಕಳ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಈ ಮೂಲಕ ಈ ಕೊಲೆ ಪ್ರಕರಣವು ಬಯಲಿಗೆ ಬಂದಿತ್ತು.
ಈ ಸಂಬಂಧ 2007ರಲ್ಲಿ ಸಿಬಿಐ ಈ ಇಬ್ಬರ ವಿರುದ್ಧ ಒಟ್ಟು 19 ಪ್ರಕರಣಗಳನ್ನು ದಾಖಲಿಸಿತ್ತು. ಈ ಪ್ರಕರಣದ ಬಗ್ಗೆ 305 ದಿನಗಳ ಕಾಲ ತನಿಖೆ ನಡೆಸಿದ್ದ ಸಿಬಿಐ 38 ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು.
ನಿಥಾರಿ ಸರಣಿ ಹತ್ಯೆ | 17 ವರ್ಷಗಳ ನಂತರ ಪಂಧೇರ್, ಕೋಲಿ ದೋಷಮುಕ್ತ: HC ಆದೇಶನಿಥಾರಿ ಸರಣಿ ಹತ್ಯೆ: ಅಪರಾಧಿಗಳಿಗೆ ಮತ್ತೊಂದು ಪ್ರಕರಣದಲ್ಲಿ ಗಲ್ಲು
ನವದೆಹಲಿ: ಆ್ಯಪಲ್ ಸಂಸ್ಥೆಯ ಬಹುನಿರೀಕ್ಷಿತ 'ಐಫೋನ್ 18 ಪ್ರೊ' ಮತ್ತು 'ಐಫೋನ್ 18 ಪ್ರೊ ಮ್ಯಾಕ್ಸ್' ಸ್ಮಾರ್ಟ್ಫೋನ್ಗಳ ಮಾರಾಟ ಭಾರತದಲ್ಲಿ ಅಧಿಕೃತವಾಗಿ ಇಂದಿನಿಂದ ಆರಂಭವಾಗಿದೆ.
ದೇಶದಾದ್ಯಂತ ಇರುವ ಆ್ಯಪಲ್ ಸ್ಟೋರ್ಗಳ ಮುಂದೆ ಗ್ರಾಹಕರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದಿವೆ.
ಆ್ಯಪಲ್ನ ಅಧಿಕೃತ ಆನ್ಲೈನ್ ಸ್ಟೋರ್ ಸೇರಿದಂತೆ ದೇಶದ ಪ್ರಮುಖ ಕೆಲವು ಚಿಲ್ಲರೆ ಮಳಿಗೆಗಳಲ್ಲಿ ಈ ಹೊಸ ಫೋನ್ಗಳು ಲಭ್ಯವಿವೆ.
ಪ್ರಕೃತಿ ಮಡಿಲು: ಆರೋಗ್ಯದ ಕಾಳಜಿ ಇಲ್ಲದೆ ಹೆಚ್ಚುತ್ತಿದೆ ಅರಣ್ಯದ ವಿಸ್ತೀರ್ಣದೇಹದ ಆಕಾರ ನೋಡಿ ಅವಮಾನಿಸುವುದು ತಪ್ಪು: ಕತ್ರಿನಾ ಪರ ಧ್ವನಿ ಎತ್ತಿದ ನಟಿ ರಮ್ಯಾ10 ರಿಂದ12 ಗಂಟೆ ಸರತಿ ಸಾಲಿನಲ್ಲಿ ನಿಂತ ಗ್ರಾಹಕ!
ಮಹಾರಾಷ್ಟ್ರದ ಮಳಿಗೆಯೊಂದರ ಮುಂದೆ ಮೊದಲ ಫೋನ್ ಖರೀದಿಸಲು ಗ್ರಾಹಕರೊಬ್ಬರು ಸುಮಾರು 10 ರಿಂದ 12 ಗಂಟೆಗಳ ಕಾಲ ಕಾದು ನಿಂತಿದ್ದರು. ಫೋನ್ ಖರೀದಿಸಿದ ಬಳಿಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಬೆಳಗಿನ ಜಾವ 5 ಗಂಟೆಗೆ ಸಾಲು
ಬೆಂಗಳೂರಿನ ಗ್ರಾಹಕ ರಾಹುಲ್ ಎಂಬುವರು ಬೆಳಗಿನ ಜಾವ 5 ರಿಂದ ಕ್ಯೂನಲ್ಲಿ ನಿಂತಿದ್ದು, ಪ್ರತಿಯೊಂದು ಐಫೋನ್ ಬಿಡುಗಡೆಯೂ ತಮಗೆ 'ಹಬ್ಬದ ವಾತಾವರಣ'ದಂತೆ ಭಾಸವಾಗುತ್ತದೆ ಎಂದಿದ್ದಾರೆ.
‘ಜೆನ್–ಝಿ’ಗಳು ಧರ್ಮದ ಬಗ್ಗೆ ಚರ್ಚಿಸುತ್ತಿರುವುದು ಸಂತಸದ ವಿಚಾರ: ಮೋಹನ್ ಭಾಗವತ್ಅಮೃತಧಾರೆ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್: ಬಡ್ಡಿ ಬಂಗಾರಮ್ಮ ಅವತಾರದಲ್ಲಿ ಭೂಮಿಕಾಅಪ್ಗ್ರೇಡ್ ಖುಷಿ
ನೊಯ್ಡಾದ ಗ್ರಾಹಕರೊಬ್ಬರು ಬೆಳಿಗ್ಗೆ 6 ಗಂಟೆಯಿಂದ ಕ್ಯೂನಲ್ಲಿ ನಿಂತು ಮೊದಲ ಐಫೋನ್ 18 ಪ್ರೊ ಮ್ಯಾಕ್ಸ್ ಪಡೆದುಕೊಂಡರು. ‘ನಾನು ಐಫೋನ್ 13 ಬಳಸುತ್ತಿದ್ದೆ, ಅದಕ್ಕೆ ಹೋಲಿಸಿದರೆ ಇದರಲ್ಲಿ ಹಲವು ಹೊಸ ಫೀಚರ್ಗಳಿದ್ದು ಅಪ್ಗ್ರೇಡ್ ಮಾಡಿಕೊಂಡಿದ್ದು ಖುಷಿ ನೀಡಿದೆ‘ ಎಂದಿದ್ದಾರೆ.
ಐಫೋನ್ 18 ಪ್ರೋ ಸರಣಿಯ ವಿಶೇಷತೆಗಳು
ಈ ಹೊಸ ಫೋನ್ಗಳು ಕಪ್ಪು, ಬೆಳ್ಳಿ, ಗ್ಲೇಸಿಯರ್ ಮತ್ತು ಬರ್ಗಂಡಿ ಬಣ್ಣಗಳಲ್ಲಿ ಲಭ್ಯವಿವೆ. ಇವುಗಳಲ್ಲಿ ವೇರಿಯಬಲ್ ಅಪಾರ್ಚರ್ ಹೊಂದಿರುವ 48MP ಫ್ಯೂಷನ್ ಕ್ಯಾಮೆರಾ, A20 ಪ್ರೋ ಚಿಪ್ಸೆಟ್, ಎಐ ಫೀಚರ್ಗಳು, ಉತ್ತಮ ಬ್ಯಾಟರಿ ಲೈಫ್ ಮತ್ತು ಹೀಟ್ ಕಂಟ್ರೋಲ್ಗಾಗಿ 'ವೇಪರ್ ಚೇಂಬರ್' ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
#WATCH | Maharashtra: A customer says, "I’ve got the first phone. I’m really excited. I was trying to get the first one; I’d been waiting here for about 10 to 12 hours for this. Finally, the first phone is in my hands..." https://t.co/X4UWZztFjb pic.twitter.com/l0rHsCtjMs
— ANI (@ANI) September 18, 2026#WATCH | Noida, UP: A buyer says, "I bought two iPhone 18 Pro Max. I came from Punjab and have been standing in the queue since 6 AM. Mine was the very first booking; I am the first one who has got the phone..." https://t.co/ZfhLUMhw5i pic.twitter.com/rVR3U5CNZI
— ANI (@ANI) September 18, 2026
ರಾಮನಗರ: ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ (Siddaramaiah) ಅವರಿಗೆ ರೆಸ್ಟ್ ಗ್ಯಾರಂಟಿ ಕೊಟ್ಟಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ವ್ಯಂಗ್ಯವಾಡಿದರು.
ಡಿ.ಕೆ.ಶಿವಕುಮಾರ್ (D.K.Shivakumar) ಮುಖ ನೋಡಿ ಒಕ್ಕಲಿಗರು ವೋಟ್ ಹಾಕಲ್ಲ ಎಂದು ಅವರದೇ ಪಕ್ಷದ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕರಿಬೇವು ಸೊಪ್ಪಿನಂತೆ ಒಗ್ಗರಣೆಗೆ ಬಳಸಿ ಸೈಡಿಗೆ ಇಟ್ಟಿದೆ. ಅವರ ಬಾಯಿ ಮುಚ್ಚಿಸಲಾಗಿದ್ದು, ಮೈಸೂರಿನ ಮನೆಯಲ್ಲಿ ರೆಸ್ಟ್ ಗ್ಯಾರಂಟಿ ಮಾಡುವ ಸ್ಥಿತಿಗೆ ತರಲಾಗಿದೆ ಎಂದು ಕುಟುಕಿದರು. ಇದನ್ನೂ ಓದಿ: ತುಳುವರ ಕನಸು ನನಸು – ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷಾ ಮಾನ್ಯತೆ ಘೋಷಣೆ
ಮಂಗಳೂರಿನಲ್ಲಿ ಮೊದಲ ಬಾರಿಗೆ ಸರ್ಕಾರ ಕ್ಯಾಬಿನೆಟ್ ಮೀಟಿಂಗ್ ನಡೆಸುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಸಾಲದಲ್ಲಿ ಮುಳುಗಿದ್ದು, ಹೊಸ ಘೋಷಣೆಗೆ ಹಣ ಎಲ್ಲಿಂದ ತರುತ್ತೆ? ಕಾಂಗ್ರೆಸ್ ಸರ್ಕಾರ ಮೂರೇ ವರ್ಷಗಳಲ್ಲಿ 1.5 ಲಕ್ಷ ಕೋಟಿ ಸಾಲ ಮಾಡಲು ಹೊರಟಿದೆ. ಪ್ರಸ್ತುತ ವರ್ಷಕ್ಕೆ 35,000 ದಿಂದ 40,000 ಕೋಟಿ ಬಡ್ಡಿ ಕಟ್ಟುವ ಸ್ಥಿತಿ ಎದುರಾಗಿದೆ. ಸಾಲ ಮಾಡದೇ ಬಜೆಟ್ ಮಂಡಿಸಿ ತೋರಿಸಲಿ ಎಂದು ಸಿಎಂಗೆ ಅಶೋಕ್ ಸವಾಲು ಹಾಕಿದರು.
ಬೊಮ್ಮಾಯಿ ಸರ್ಕಾರ ಉಳಿತಾಯದ ಬಜೆಟ್ ನೀಡಿದ್ದರೆ, ಈ ಸರ್ಕಾರ ದಿವಾಳಿಯಾದ ಬಜೆಟ್ ನೀಡಿದೆ. ಕೆಎಸ್ಆರ್ಟಿಸಿಗೆ 5,000 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದ್ದು, ಸಿಬ್ಬಂದಿಗೆ ಸಂಬಳ ಹಾಗೂ ಡೀಸೆಲ್ಗೂ ಹಣವಿಲ್ಲದಂತಾಗಿದೆ. ಕ್ರಷರ್ಗಳಿಂದ ವರ್ಷಕ್ಕೆ 1 ಕೋಟಿ ಕಮಿಷನ್ ಬೇಡಿಕೆ ಇಟ್ಟಿರುವುದರಿಂದ ಜೆಲ್ಲಿ, ಎಂ-ಸ್ಯಾಂಡ್ ಸಿಗದೆ ರಸ್ತೆ ಕಾಮಗಾರಿಗಳು ಸ್ಥಗಿತಗೊಂಡಿವೆ. ಆಸ್ಪತ್ರೆಗಳಲ್ಲಿ ಔಷಧಿಯಿಲ್ಲ, ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಏರಿಕೆಯಾಗಿಲ್ಲ ಮತ್ತು ರೈತರಿಗೆ ಸೂಕ್ತ ಬರ ಪರಿಹಾರ ತಲುಪಿಲ್ಲ. ಹಿಂದೆ ಕಲಬುರಗಿಯಲ್ಲಿ ನಡೆಸಿದ ಕ್ಯಾಬಿನೆಟ್ ಸಭೆಯ ಘೋಷಣೆಗಳು ಒಂದೂ ಜಾರಿಯಾಗಿಲ್ಲ. ಈಗ ಮಂಗಳೂರಿನ ರೆಸಾರ್ಟ್ನಲ್ಲಿ ಮೀನು, ಏಡಿಕಾಯಿ ತಿಂದುಕೊಂಡು ಕ್ಯಾಬಿನೆಟ್ ನಡೆಸಿ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ತೆರವುಗೊಳಿಸಿದ್ದ ಫುಟ್ಪಾತ್ ಮೇಲೆ ಮತ್ತೆ ವ್ಯಾಪಾರ ಮಾಡಿದ್ರೆ FIR: ಕೃಷ್ಣ ಬೈರೇಗೌಡ
ಗಣೇಶ ಚತುರ್ಥಿಯ ಸಂಭ್ರಮ ದೇಶದೆಲ್ಲೆಡೆ ಮನೆಮಾಡಿದ್ದು, ಗಲ್ಲಿ ಗಲ್ಲಿಗಳಲ್ಲೂ ವಿಧವಿಧದ ಗಣಪತಿಯ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ. ಆದರೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿಶಿಷ್ಟ ಗಣೇಶ ಮೂರ್ತಿಗಳು ಭಕ್ತರ ಮನಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರಿ ಸದ್ದು ಮಾಡುತ್ತಿವೆ. ಪರಿಸರ ಜಾಗೃತಿ ಮತ್ತು ಕಲಾತ್ಮಕತೆಯನ್ನು ಮೇಳೈಸಿ ಭಕ್ತರು ನಿರ್ಮಿಸಿರುವ ‘ಕೀವಿ ಹಣ್ಣಿನ ಗಣೇಶ’ ಹಾಗೂ ‘ಗೋಡಂಬಿ ಗಣೇಶ’ ಸದ್ಯ ಸಾರ್ವಜನಿಕರ ಗಮನಸೆಳೆಯುತ್ತಿದ್ದಾರೆ.
200 ಕೆಜಿ ಕೀವಿ ಹಣ್ಣಿನ ‘ಪ್ರಸಾದ ಗಣೇಶ’ಕಾಕಿನಾಡದ ಉಲ್ಲಿಂಕಲ ವಾರಿ ವೀಧಿಯಲ್ಲಿ ಭಕ್ತರಾದ ಟೇಕುಮೂಡಿ ಪೆದ್ದಬಾಬು ಅವರ ನೇತೃತ್ವದಲ್ಲಿ ಸುಮಾರಾಗಿ 200 ಕೆಜಿ ಒಣ ಕೀವಿ (Dry Kiwi) ಹಣ್ಣುಗಳನ್ನು ಬಳಸಿ ಈ ಅಪರೂಪದ ಗಣೇಶ ಮೂರ್ತಿಯನ್ನು ಸಿದ್ಧಪಡಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಬಳಕೆಯಿಂದಾಗುವ ಪರಿಸರ ಮಾಲಿನ್ಯವನ್ನು ತಡೆಯುವುದು ಮತ್ತು ಭಕ್ತಿಗೆ ಆರೋಗ್ಯದ ಸ್ಪರ್ಶ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ವಿಸರ್ಜನೆಯ ದಿನ ಹಾಗೂ ನಂತರದ ದಿನಗಳಲ್ಲಿ ವಿಗ್ರಹ ತಯಾರಿಕೆಗೆ ಬಳಸಲಾದ ಈ 200 ಕೆಜಿ ಕೀವಿ ಹಣ್ಣುಗಳನ್ನು ಭಕ್ತರಿಗೆ ಆರೋಗ್ಯಕರ ಪ್ರಸಾದವಾಗಿ ವಿತರಿಸಲಾಗುವುದು ಎಂಬುದು ಇಲ್ಲಿನ ವಿಶೇಷತೆಯಾಗಿದೆ.
500 ಕೆಜಿ ಗೋಡಂಬಿಯಿಂದ ಅಲಂಕೃತ ಗಣಪತಿ:ಮತ್ತೊಂದೆಡೆ, ಕಾಕಿನಾಡದ ಜಗನ್ನಾಥಪುರಂ ವ್ಯಾಪ್ತಿಯ ಜಮ್ಮಿಚೆಟ್ಟು ಸೆಂಟರ್ನಲ್ಲಿ ಬರೋಬ್ಬರಿ 500 ಕೆಜಿ ಉತ್ತಮ ಗುಣಮಟ್ಟದ ಗೋಡಂಬಿಯನ್ನು ಬಳಸಿ ಮೂರ್ತಿಯನ್ನು ನಿರ್ಮಿಸಲಾಗಿದೆ. ವಿಗ್ರಹದ ಪ್ರತಿಯೊಂದು ಅಂಗದಲ್ಲೂ ಅತ್ಯಂತ ನೈಪುಣ್ಯತೆಯಿಂದ ಗೋಡಂಬಿಯನ್ನು ಜೋಡಿಸಲಾಗಿದ್ದು, ಸಾಂಪ್ರದಾಯಿಕ ಹಾಗೂ ಕಲಾತ್ಮಕ ಸ್ಪರ್ಶ ನೀಡಲಾಗಿದೆ. ಈ ಶೋಭಾಯಮಾನ ಗಣೇಶನನ್ನು ಕಣ್ಣುತುಂಬಿಕೊಳ್ಳಲು ಜನಸಾಗರವೇ ಹರಿದುಬರುತ್ತಿದೆ.
ಇದನ್ನೂ ಓದಿ: ಜಪಾನ್ನಲ್ಲಿದೆ ‘ಡಿವೋರ್ಸ್ ಟೆಂಪಲ್’: ಗಂಡನ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಆಸರೆಯಾಗುವ 700 ವರ್ಷ ಹಳೆಯ ಕ್ಷೇತ್ರ!
ಭಕ್ತರ ಉತ್ಸಾಹ – ಸೆಲ್ಫಿ ಕ್ರೇಜ್:ಪ್ರಕೃತಿದತ್ತ ಹಾಗೂ ಭಿನ್ನ ಸಾಮಗ್ರಿಗಳಿಂದ ಮೂರ್ತಿಗಳನ್ನು ನಿರ್ಮಿಸಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಅಪರೂಪದ ಗಣೇಶ ವಿಗ್ರಹಗಳ ಮುಂದೆ ಭಕ್ತರು ಸಾಲುಗಟ್ಟಿ ನಿಂತು ಫೋಟೋ ಹಾಗೂ ವೀಡಿಯೊಗಳನ್ನು ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಒಟ್ಟಿನಲ್ಲಿ, ಈ ಬಾರಿಯ ಗಣೇಶೋತ್ಸವದಲ್ಲಿ ಕಾಕಿನಾಡದ ಈ ಸೃಜನಶೀಲ ಗಣಪತಿ ರಾಜ್ಯಾದ್ಯಂತ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು: ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸಲು ಎಲ್ಲಾ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ದಾರರಿಗೆ ಸರ್ಕಾರ ಖಡಕ್ ಸೂಚನೆ ನೀಡಿದೆ. ಇದರ ಬೆನ್ನಲ್ಲೇ, ಇ-ಕೆವೈಸಿ ಮಾಡಿಸಲು ಜನರು ತಮ್ಮ ಕೆಲಸ ಕಾರ್ಯ ಬಿಟ್ಟು ನ್ಯಾಯಬೆಲೆ ಅಂಗಡಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಆದರೆ, ಅತಿಯಾದ ಜನದಟ್ಟಣೆ ಮತ್ತು ಸರ್ವರ್ ಡೌನ್ ಸಮಸ್ಯೆಯಿಂದಾಗಿ ಭಾರೀ ಹೈರಾಣಾಗಿದ್ದಾರೆ. ಹಾಗಾಗಿ, ರಾಜ್ಯಸರ್ಕಾರವು ಇ-ಕೆವೈಸಿ ಪೂರ್ಣಗೊಳಿಸಲು ಇದ್ದ ಕೊನೆಯ ದಿನಾಂಕವನ್ನು ಅಕ್ಟೋಬರ್ 20 ರವರೆಗೆ ವಿಸ್ತರಿಸಿ ಮಹತ್ವದ ಆದೇಶ ಹೊರಡಿಸಿತ್ತು. ಆದರೂ, ತಮ್ಮ ಕೆಲಸ ಕಾರ್ಯ ಬಿಟ್ಟು ಕ್ಯೂ ನಿಲ್ಲಬೇಕಲ್ಲ ಎಂದು ನ್ಯಾಯಬೆಲೆ ಅಂಗಡಿಯ ಗ್ರಾಹಕರಲ್ಲಿ ಬೇಸರವಿತ್ತು. ಆದರೆ, ಇದಕ್ಕೆ ಪರಿಹಾರ ಕಂಡುಕೊಂಡಿರುವ ಸರ್ಕಾರ, ನ್ಯಾಯಬೆಲೆ ಅಂಗಡಿಗಳ (ರೇಷನ್ ಅಂಗಡಿ) ಕಾರ್ಯನಿರ್ವಹಣಾ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಇನ್ಮೇಲೆ ರೇಷನ್ ಅಂಗಡಿಗಳಿಗೆ ಹೊಸ ಟೈಮ್!
ದಿನಗೂಲಿ ನೌಕರರು, ಕಟ್ಟಡ ಕಾರ್ಮಿಕರು, ಆಟೋ ಚಾಲಕರು ಸೇರಿದಂತೆ ದುಡಿಯುವ ವರ್ಗದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಅವರು, ಅಕ್ಟೋಬರ್ 1, 2026 ರಿಂದ ರಾಜ್ಯಾದ್ಯಂತ ಅಧಿಕೃತವಾಗಿ ಜಾರಿಗೆ ಬರುವಂತೆ, ನ್ಯಾಯಬೆಲೆ ಅಂಗಡಿಗಳ ಸಮಯವನ್ನು 8 ಗಂಟೆಗಳ ಕಾಲ ಎರಡು ಶಿಫ್ಟ್ಗಳಲ್ಲಿ ಕಾರ್ಯನಿರ್ವಹಿಸುವಂತೆ ಸಮಯ ಬದಲಾವಣೆ ಮಾಡಿದ್ದಾರೆ.
ರೇಷನ್ ಅಂಗಡಿಗಳಿಗೆ ದಿನಕ್ಕೆ 2 ಶಿಫ್ಟ್
ಬೆಳಗಿನ ಶಿಫ್ಟ್: ಬೆಳಿಗ್ಗೆ 7:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯವರೆಗೆ.
ಸಂಜೆಯ ಶಿಫ್ಟ್: ಸಂಜೆ 4:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ.
To make ration collection more convenient for working families, the operating hours of Fair Price Shops have been revised from October 1, 2026:
7:00 AM – 12:00 PM
4:00 PM – 8:00 PM
This will allow workers to collect their entitled ration before or after work, at a time… pic.twitter.com/hwYqtfWSH9
ಈ ಬದಲಾವಣೆಗೆ ಪ್ರಮುಖ ಕಾರಣವೇನು?
ಈ ಹಿಂದೆ ರೇಷನ್ ಅಂಗಡಿಗಳ ಸಮಯದಿಂದಾಗಿ ಕಾರ್ಮಿಕ ವರ್ಗದ ಜನರು ತಮ್ಮ ಇಡೀ ದಿನದ ಕೆಲಸ ಮತ್ತು ಕೂಲಿಯನ್ನು ಕಳೆದುಕೊಂಡು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾಗುತ್ತಿತ್ತು. ಆದರೆ, ಹೊಸ ಸಮಯದಿಂದಾಗಿ ಕಾರ್ಮಿಕರು ಕೆಲಸಕ್ಕೆ ಹೋಗುವ ಮುನ್ನ ಅಥವಾ ಕೆಲಸ ಮುಗಿಸಿ ಬಂದ ನಂತರ ತಮ್ಮ ಅನುಕೂಲಕ್ಕೆ ತಕ್ಕಂತೆ ಪಡಿತರ ಪಡೆಯಬಹುದು.
ಮುಂದುವರೆದು, ಹೊಸ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ಎಲ್ಲಾ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಸೂಚಿಸಿದೆ. ನಿಗದಿಪಡಿಸಿದ ಸಮಯಕ್ಕೆ ಅಂಗಡಿಗಳನ್ನು ತೆರೆಯದಿದ್ದರೆ ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದರೆ ಅಂತಹ ವಿತರಕರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
Ration Card e-KYC ಮಾಡಿಸಲು ಮುಗಿಬಿದ್ದ ಜನರಿಗೆ ಕೊನೆಗೂ ಸಿಕ್ತು ಬಿಗ್ ರಿಲೀಫ್! ಇ-ಕೆವೈಸಿ ಗಡುವು ವಿಸ್ತರಿಸಿದ ಸರ್ಕಾರ; ಕೊನೆಯ ದಿನಾಂಕ ಯಾವಾಗ?
ಕೋಲ್ಕತಾ: ಟಿಎಂಸಿ ಚಿಹ್ನೆ ವಿಚಾರವಾಗಿ ಈಗಾಗಲೇ ಚುನಾವಣಾ ಆಯೋಗದಿಂದ ಭಾರಿ ಆಘಾತ ಎದುರಿಸಿರುವ ಪಶ್ಚಿಮ ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಮತ್ತೊಂದು ಆಘಾತ ಎದುರಾಗಿದೆ.
ಹೌದು.. ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ಬಣದಿಂದ ಕಣಕ್ಕಿಳಿದಿದ್ದ ಸಂಚಿತಾ ಪ್ರಧಾನ ದೇ ಶುಕ್ರವಾರ ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ.
ನಾಮಪತ್ರ ಹಿಂಪಡೆಯಲು ನಿಗದಿಪಡಿಸಿದ್ದ ಗಡುವಿಗೆ ಒಂದು ದಿನ ಬಾಕಿ ಇರುವಾಗ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ನಾಮಪತ್ರ ಹಿಂಪಡೆಯುವ ಮುನ್ನ ಸಂಚಿತಾ ಪ್ರಧಾನ ದೇ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ರಾಜ್ಯ ಸಚಿವಾಲಯ ‘ನಬಣ್ಣ’ದಲ್ಲಿ ಭೇಟಿಯಾಗಿದ್ದರು.
ಪತಿ ಸತ್ಯಜಿತ್ ಅವರೊಂದಿಗೆ ನಬಣ್ಣಕ್ಕೆ ತೆರಳಿದ್ದ ಸಂಚಿತಾ, ಬಳಿಕ ಚುನಾವಣಾ ಕಣದಿಂದ ಹಿಂದೆ ಸರಿದರು. ಇದರೊಂದಿಗೆ ನಂದಿಗ್ರಾಮ ಉಪಚುನಾವಣೆಯಲ್ಲಿ ಮಮತಾ ಬಣಕ್ಕೆ ಅಭ್ಯರ್ಥಿ ಇಲ್ಲದಂತಾಗಿದೆ.
TMC ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಆದೇಶಕ್ಕೆ ತೀವ್ರ ಆಕ್ರೋಶ; 'ಪ್ರತಿಭಟನೆಯೊಂದಿಗೆ' ಹೊಸ ಹೆಸರು, ಚಿಹ್ನೆ ಸಲ್ಲಿಸಿದ ಮಮತಾ ಬ್ಯಾನರ್ಜಿ!ಹೊಸ ಹೆಸರು, ಚಿಹ್ನೆ ಘೋಷಣೆಯ ಬೆನ್ನಲ್ಲೇ ಬೆಳವಣಿಗೆ
ಮಮತಾ ಬಣದ ಅಭ್ಯರ್ಥಿ ನಾಮಪತ್ರ ಹಿಂಪಡೆದಿರುವ ಬೆಳವಣಿಗೆ, ಚುನಾವಣಾ ಆಯೋಗವು ತೃಣಮೂಲ ಕಾಂಗ್ರೆಸ್ನ ಎರಡು ಬಣಗಳಿಗೆ ಪ್ರತ್ಯೇಕ ಹೆಸರು ಮತ್ತು ಚುನಾವಣಾ ಚಿಹ್ನೆಗಳನ್ನು ನೀಡಿದ ಕೆಲವೇ ಗಂಟೆಗಳ ಬಳಿಕ ನಡೆದಿದೆ.
ಅಕ್ಟೋಬರ್ 6ರಂದು ನಡೆಯಲಿರುವ ನಂದಿಗ್ರಾಮ ಮತ್ತು ರೇಜಿನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಆಯೋಗ ಈ ಮಧ್ಯಂತರ ವ್ಯವಸ್ಥೆ ಮಾಡಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ‘ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಎಂಬ ಹೆಸರು ಮತ್ತು ‘ಫುಟ್ಬಾಲ್ ಆಟಗಾರ’ ಚಿಹ್ನೆಯನ್ನು ನೀಡಲಾಗಿದೆ.
ಮತ್ತೊಂದು ಬಣಕ್ಕೆ ‘ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್’ ಎಂಬ ಹೆಸರು ಮತ್ತು ‘ಲಕೋಟೆ’ ಚಿಹ್ನೆ ನೀಡಲಾಗಿದೆ.
'ಮಮತಾ ಬ್ಯಾನರ್ಜಿ ಸ್ಪರ್ಧಿಸಿದರೆ, ನಾವು ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ': ತೃಣಮೂಲ ಕಾಂಗ್ರೆಸ್ ಬಂಡಾಯ ಬಣಇದಕ್ಕೂ ಮುನ್ನ ಚುನಾವಣಾ ಆಯೋಗವು ಎರಡೂ ಬಣಗಳಿಗೆ ‘ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಎಂಬ ಮೂಲ ಪಕ್ಷದ ಹೆಸರು ಹಾಗೂ ‘ಹೂವು-ಹುಲ್ಲು’ ಚಿಹ್ನೆಯನ್ನು ಮುಂಬರುವ ಉಪಚುನಾವಣೆಗಳಲ್ಲಿ ಬಳಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು.
ಪಕ್ಷದ ಸಂಘಟನಾತ್ಮಕ ನಿಯಂತ್ರಣ ಹಾಗೂ ಹೆಸರು-ಚಿಹ್ನೆಯ ಹಕ್ಕಿನ ಕುರಿತ ವಿವಾದದ ಅಂತಿಮ ನಿರ್ಧಾರ ಬಾಕಿಯಿದೆ.
ಅಂದಹಾಗೆ ನಂದಿಗ್ರಾಮ ಮತ್ತು ರೇಜಿನಗರ ಕ್ಷೇತ್ರಗಳಿಗೆ ಅಕ್ಟೋಬರ್ 6ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 9ರಂದು ಮತ ಎಣಿಕೆ ನಡೆಯಲಿದೆ.
ಯುವರಾಜ್ ಸಿಂಗ್, ಈ ಹೆಸರು ಕೇಳಿದಾಕ್ಷಣ ನೆನಪಿಗೆ ಬರುವುದು 2007ರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ನಲ್ಲಿ ಬಾರಿಸಿದ ಆರು ಸಿಕ್ಸರ್ಗಳು. ಸ್ಫೋಟಕ ಬ್ಯಾಟರ್, ಸಿಕ್ಸರ್ ಕಿಂಗ್, ಅಂತಲೇ ಕರೆಸಿಕೊಂಡಿದ್ದ ಪಂಜಾಬ್ ಕಾ ಪುತ್ತರ್ ಯುವರಾಜ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಸುಮಾರು 7 ವರ್ಷಗಳೇ ಕಳೆದಿವೆ. ಆದರೆ, ಅದೇ ಪಂಜಾಬ್ ನೆಲದಿಂದ ಬಂದ ಇನ್ನೋರ್ವ ಬ್ಯಾಟರ್ ಯುವರಾಜ್ ಸಿಂಗ್ ಅವರ ಆಟವನ್ನೇ ನೆನಪಿಸುವಂತೆ ಬ್ಯಾಟಿಂಗ್ ಮಾಡುತ್ತಾರೆ.
ಅಂದಹಾಗೆ, ಅವರು ಬೇರೆ ಯಾರೂ ಅಲ್ಲ ಭಾರತ ಟಿ20 ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ.
ಟಿ20 ಕ್ರಿಕೆಟ್ನಲ್ಲಿ ವೇಗದ ಅರ್ಧಶತಕ ಸಿಡಿಸಿರುವ ದಾಖಲೆ ಯುವರಾಜ್ ಸಿಂಗ್ ಅವರ ಹೆಸರಿನಲ್ಲಿದೆ. ಇದೀಗ ಯುವರಾಜ್ ಸಿಂಗ್ ಅವರ ಗರಡಿಯಲ್ಲಿ ಬೆಳೆದಿರುವ ಅಭಿಷೇಕ್ ಶರ್ಮಾ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಭಾರತದ ಪರವಾಗಿ ವೇಗದ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಅಫ್ಗಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ (35 ಎಸೆತಗಳಲ್ಲಿ ಶತಕ) ಅವರ ಹೆಸರಿನಲ್ಲಿದ್ದ ವೇಗದ ಶತಕದ ದಾಖಲೆಯನ್ನು ಮುರಿದಿದ್ದಾರೆ.
ಅಂತಿಮವಾಗಿ 34 ಎಸೆತಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ 11 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 108 ರನ್ ಬಾರಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಅಭಿಷೇಕ್ ಬಾರಿಸಿದ ಈ ಶತಕ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ಆಟಗಾರರ ಪೈಕಿ ಇದು ಅತ್ಯಂತ ವೇಗದ ಟಿ20 ಶತಕವಾಗಿದೆ. ಒಟ್ಟಾರೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೂರನೇ ವೇಗದ ಶತಕವಾಗಿದೆ.
ಒಂದೇ ಪಂದ್ಯದಲ್ಲಿ ಹಲವು ಮೈಲುಗಲ್ಲುಅಭಿಷೇಕ್ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮುಂದಿನ 13 ಎಸೆತಗಳಲ್ಲಿ ಮತ್ತೊಂದು 50 ರನ್ಗಳನ್ನು ಸೇರಿಸಿ ಶತಕ ತಲುಪಿದರು. 30 ಎಸೆತಗಳ ಶತಕದೊಂದಿಗೆ 2017ರಲ್ಲಿ ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ದಾಖಲೆನ್ನು ಮುರಿದರು.
ಮೂರು ಪಂದ್ಯಗಳಲ್ಲಿ 229 ರನ್
ಅಭಿಷೇಕ್ ಅವರ ಆಟ ಇದೊಂದೇ ಪಂದ್ಯಕ್ಕೆ ಸೀಮಿತವಾಗಿರಲಿಲ್ಲ. ಬದಲಾಗಿ ಅಫ್ಗಾನಿಸ್ತಾನ ವಿರುದ್ಧದ ಮೂರು ಪಂದ್ಯಗಳಲ್ಲಿ ಅವರು ಮಿಂಚಿನ ಪ್ರದರ್ಶನ ತೋರಿಸಿದ್ದಾರೆ. ಮೊದಲ ಪಂದ್ಯದಲ್ಲಿ 82, ಎರಡನೇ ಪಂದ್ಯದಲ್ಲಿ 39 ಮತ್ತು ಅಂತಿಮ ಪಂದ್ಯದಲ್ಲಿ 108 ರನ್ ಗಳಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಒಟ್ಟು 229 ರನ್ ಸಿಡಿಸಿ ಸರಣಿಯ ಗರಿಷ್ಠ ರನ್ ಸ್ಕೋರರ್ ಆದರು.
ಅತೀ ಹೆಚ್ಚು ಶತಕಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ ದಾಖಲೆಯನ್ನು ಅಭಿಷೇಕ್ ಶರ್ಮಾ ಸರಿಗಟ್ಟಿದ್ದಾರೆ. ವಿರಾಟ್ ಟಿ20 ಯಲ್ಲಿ ಆಡಿರುವ 413 ಇನಿಂಗ್ಸ್ಗಳಿಂದ 10 ಶತಕ ಸಿಡಿಸಿದ್ದಾರೆ. ಕೇವಲ 205 ಇನಿಂಗ್ಸ್ಗಳಲ್ಲಿ ಅಷ್ಟೇ ಶತಕ ಸಿಡಿಸಿರುವ ಅಭಿಷೇಕ್ ಶರ್ಮಾ ಅವರು ಕೊಹ್ಲಿ ದಾಖಲೆ ಸರಿಗಟ್ಟಿದ್ದಾರೆ.
22 ಶತಕ ಸಿಡಿಸಿರುವ ಕ್ರಿಸ್ ಗೇಲ್ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರೆ, 13 ಶತಕ ಸಿಡಿಸಿರುವ ಪಾಕಿಸ್ತಾನದ ಬಾಬರ್ ಆಝಂ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಅಭಿಷೇಕ್, ಅಷ್ಟೇ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.
ಟಿ20 ಕ್ರಿಕೆಟ್ನ ಅನಭಿಷಕ್ತ ದೊರೆ ಅಭಿಷೇಕ್ ಶರ್ಮಾ
ಟಿ20 ಕ್ರಿಕೆಟ್ನಲ್ಲಿ ಅಭಿಷೇಕ್ ಅವರದ್ದು ಸಾಟಿಯಿಲ್ಲದ ಬ್ಯಾಟಿಂಗ್ 2025ರ ಏಷ್ಯಾ ಕಪ್ನಲ್ಲಿ 315 ರನ್ ಗಳಿಸಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ನಂತರ ನಡೆದ ಟಿ20 ವಿಶ್ವಕಪ್ನಲ್ಲಿ ಕಳಪೆ ಫಾರ್ಮ್ಗೆ ಒಳಗಾಗಿದ್ದರು. ಜಿಂಬಾಬ್ವೆ ವಿರುದ್ಧವೂ ನಿರೀಕ್ಷಿತ ಮಟ್ಟದಲ್ಲಿ ಆಡಿರಲಿಲ್ಲ. ಹೀಗಾಗಿ ಅಫ್ಗಾನಿಸ್ತಾನ ಸರಣಿಯು ಅವರ ಕಮ್ಬ್ಯಾಕ್ ಜೊತೆಗೆ ತಂಡದ ಆರಂಭಿಕ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನವೂ ಆಗಿತ್ತು.
ಯುವರಾಜ್ ಸಿಂಗ್ ಮಾರ್ಗದರ್ಶನಅಭಿಷೇಕ್ ಶರ್ಮಾ ಉತ್ತಮ ಪ್ರದರ್ಶನ ತೋರಿದಾಗಲೆಲ್ಲಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಹೆಸರು ಪದೇಪದೇ ಕೇಳಿ ಬರುತ್ತದೆ. ಈ ಇಬ್ಬರ ನಡುವಿನ ಸಂಬಂಧ ಕೇವಲ ಹಿರಿಯ–ಕಿರಿಯ ಆಟಗಾರರದ್ದಲ್ಲ. ಬದಲಾಗಿ, ಯುವರಾಜ್ ಅವರು ಹಲವು ವರ್ಷಗಳಿಂದ ಅಭಿಷೇಕ್ ಶರ್ಮಾ ಅವರಿಗೆ ಮಾರ್ಗದರ್ಶಕರಾಗಿದ್ದಾರೆ.
ಯುವರಾಜ್ ಅವರನ್ನು ‘ಮೆಂಟರ್, ಅಣ್ಣ ಮತ್ತು ಸ್ಫೂರ್ತಿ’ ಎಂದು ಅಭಿಷೇಕ್ ಶರ್ಮಾ 2025ರ ವಿಶ್ವಕಪ್ ಸಂದರ್ಭದಲ್ಲಿ ಬಣ್ಣಿಸಿದ್ದರು. ಆಟದಲ್ಲಿ ನಿರ್ಭೀತ ಮನೋಭಾವ ಬೆಳೆಸಿಕೊಳ್ಳಲು ಯುವರಾಜ್ ಅವರ ಮಾರ್ಗದರ್ಶನವೇ ಪ್ರಮುಖ ಕಾರಣ ಎನ್ನುತ್ತಾರೆ ಅಭಿಷೇಕ್ ಶರ್ಮಾ.
ಅಭಿಷೇಕ್ ಅವರ ಬ್ಯಾಟಿಂಗ್ನಲ್ಲಿರುವ ಆಕ್ರಮಣಕಾರಿ ಸ್ವಭಾವಕ್ಕೂ ಯುವರಾಜ್ ಅವರ ಆಟಕ್ಕೂ ಹೋಲಿಕೆ ಕಾಣಿಸುತ್ತದೆ. ಆದರೆ ಯುವರಾಜ್ ನೀಡಿರುವ ಸಲಹೆ ಕೇವಲ ಸಿಕ್ಸರ್ ಬಾರಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಡಾಟ್ ಬಾಲ್ ಆಗದಂತೆ ನೋಡಿಕೊಂಡು ಸಿಂಗಲ್ಸ್, ಡಬಲ್ಸ್ ಕದಿಯುವ ಮುಲಕ ಹೇಗೆ ಇನಿಂಗ್ಸ್ ಕಟ್ಟಬೇಕು ಎಂಬುದನ್ನು ತಿಳಿಸಿರುವುದಾಗಿ ಅಭಿಷೇಕ್ ಹೇಳಿದ್ದಾರೆ.
ಅಫ್ಗಾನ್ ಪಂದ್ಯಕ್ಕೂ ಮುನ್ನ ಯುವಿ ಕಳಿಸಿದ್ದರು ಸಂದೇಶಅಫ್ಗಾನಿಸ್ತಾನ ವಿರುದ್ಧದ ಮೂರನೇ ಪಂದ್ಯಕ್ಕೂ ಮುನ್ನ ಯುವರಾಜ್ ಸಿಂಗ್ ಅವರು ಸಂದೇಶ ಕಳಿಸಿರುವುದಾಗಿ ಅಭಿಷೇಕ್ ಶರ್ಮಾ ಪಂದ್ಯದ ಬಳಿಕ ಬಹಿರಂಗಪಡಿಸಿದ್ದರು. ‘ಪ್ರತೀ ಎಸೆತವನ್ನು ಬೌಂಡರಿಗೆ ಅಟ್ಟುವ ಅಗತ್ಯವಿಲ್ಲ. ಅವಕಾಶವಿಲ್ಲದಾಗ ಒಂದು–ಎರಡು ರನ್ಗಳ ಪಡೆದುಕೊಳ್ಳಬೇಕು. ಕೆಟ್ಟ ಎಸೆತಗಳಿಗೆ ದಂಡಿಸಬೇಕು’ ಎಂದು ಯುವರಾಜ್ ಹೇಳಿದ್ದರು ಎಂದು ಅಭಿಷೇಕ್ ತಿಳಿಸಿದ್ದಾರೆ.
‘ಭಯವಿಲ್ಲದೆ ಆಡು’ ಎಂಬ ಪಾಠ
ಯುವರಾಜ್ ಮತ್ತು ಅಭಿಷೇಕ್ ನಡುವಿನ ಬಾಂಧವ್ಯದ ಮತ್ತೊಂದು ಆಯಾಮ ಮಾನಸಿಕ ಸಿದ್ಧತೆ. ಯುವರಾಜ್ ಅವರ ಮಾರ್ಗದರ್ಶನದಲ್ಲಿ ತಾಂತ್ರಿಕ ಸುಧಾರಣೆಯ ಜತೆಗೆ ಆತ್ಮವಿಶ್ವಾಸ, ಶಿಸ್ತು ಮತ್ತು ಒತ್ತಡವನ್ನು ಎದುರಿಸುವ ಸಾಮರ್ಥ್ಯಕ್ಕೂ ಒತ್ತು ಸಿಕ್ಕಿದೆ. 2025ರಲ್ಲಿ ಅಭಿಷೇಕ್, ಕಠಿಣ ಪರಿಸ್ಥಿತಿಯಲ್ಲಿ ತಾಳ್ಮೆಯಿಂದ ಇರುವುದು ಹೇಗೆ ಎಂಬುದನ್ನು ಯುವರಾಜ್ ಸಿಂಗ್ ಹೇಳಿಕೊಟ್ಟಿದ್ದಾರೆ ಎಂದು ತಿಳಿಸಿದ್ದರು.
ಯುವ ಪ್ರತಿಭೆ ಶ್ರೀರಾಮ್ ಗಂಧರ್ವ ಸಾರಥ್ಯದಲ್ಲಿ ಮೂಡಿಬಂದಿರುವ ನವಿರಾದ ಪ್ರೇಮಕಥೆಯ ‘ಕನಸಲು…’ ಆಲ್ಬಂ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರೋದ್ಯಮದ ಹಲವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಡನ್ನು ಪ್ರದರ್ಶಿಸಿ ಶುಭಕೋರಲಾಯಿತು. ಸಾಧಾರಣ ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಸುಂದರ ಪ್ರೇಮಕಥೆ ಈ ಹಾಡಿನಲ್ಲಿದೆ. ಟೈಲರಿಂಗ್ ಅಂಗಡಿಯಲ್ಲಿ ಕೆಲಸ ಮಾಡುವ ಯುವಕ, ಅಲ್ಲಿಗೆ ಬರುವ ಮೀರಾ ಎಂಬ ಯುವತಿಯ ಪ್ರೀತಿಯಲ್ಲಿ ಬೀಳುತ್ತಾನೆ. ಆತನ ಪ್ರಾಮಾಣಿಕತೆಗೆ ಒಲಿಯುವ ಯುವತಿಯ ಪ್ರತಿಕ್ರಿಯೆ ಏನು ಎಂಬುದನ್ನು ಹಾಡಿನ ಕೊನೆಯಲ್ಲಿ ಕುತೂಹಲಕಾರಿಯಾಗಿ ತೋರಿಸಲಾಗಿದೆ.
ಶ್ರೀರಾಮ್ ಗಂಧರ್ವ ಅವರು ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿ, ಸ್ವತಃ ಹಾಡಿ ನಿರ್ದೇಶನವನ್ನೂ ಮಾಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿರ್ದೇಶಕನಾಗಿ ತಮ್ಮ ಮೂರು ಸಿನಿಮಾಗಳು ಸಿದ್ಧವಾಗುತ್ತಿವೆ ಎಂದು ತಿಳಿಸಿದರು. ಕಿಶೋರ್, ರವಿಶಂಕರ್ ಗೌಡ ನಟನೆಯ ಚಿತ್ರಗಳು ಹಾಗೂ ಒಂದು ಬಾಲಿವುಡ್ ಸಿನಿಮಾ ಕೂಡ ಅದರಲ್ಲಿ ಸೇರಿದೆ ಎಂದು ಅವರು ಹೇಳಿದರು.
ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ‘ಕಂಗ್ರಾಜುಲೇಶನ್ಸ್ ಬ್ರದರ್ಸ್’ ಚಿತ್ರದ ನಾಯಕ ರಕ್ಷಿತ್ ನಾಗ್ ಮಾತನಾಡಿ, ‘ಜನರು ಬೇಗ ಮರೆಯುವುದರಿಂದ ಶ್ರೀರಾಮ್ ಅವರು ನಿರಂತರವಾಗಿ ಇಂತಹ ಉತ್ತಮ ಹಾಡುಗಳನ್ನು ನೀಡುತ್ತಿರಬೇಕು’ ಎಂದು ಸಲಹೆ ನೀಡಿದರು. ಖ್ಯಾತ ಜಾನಪದ ಗಾಯಕ ಜೋಗಿಲಾ ಸಿದ್ಧರಾಜು ಮಾತನಾಡಿ, ‘ಕನ್ನಡದಲ್ಲಿ ಹೆಚ್ಚಾಗಿ ಹೊರಗಿನ ಗಾಯಕರನ್ನೇ ಬಳಸಿಕೊಳ್ಳಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಶ್ರೀರಾಮ್ ಅವರಂತಹ ಸ್ಥಳೀಯ ಬಹುಮುಖ ಪ್ರತಿಭೆಗಳು ಹೊರಬರಲು ಇಂತಹ ಆಲ್ಬಮ್ಗಳು ಅಗತ್ಯ’ ಎಂದರು.
‘ಕನಸಲು..’ ಆಲ್ಬಂ ಗೀತೆ:ಶ್ರೀರಾಮ್ ಅವರ ತಂದೆ ಗಂಧರ್ವ ಅವರು ಮಾತನಾಡಿ, ‘ಎರಡೂವರೆ ಗಂಟೆಯ ಸಿನಿಮಾದಲ್ಲಿ ಹೇಳಲಾಗದ ಭಾವನೆಯನ್ನು ಕೆಲವೇ ನಿಮಿಷಗಳ ಆಲ್ಬಮ್ನಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಮಗನ ತಂಡವನ್ನು ಹಾರೈಸಿದರು. ಪ್ರಿಯಕರನಾಗಿ ಅಭಿನಯಿಸಿರುವ ದರ್ಶನ್ ಅವರಿಗೆ ಇದು ಮೊದಲ ಕ್ಯಾಮೆರಾ ಅನುಭವವಾದರೆ, ಪ್ರೇಯಸಿ ಮೀರಾ ಪಾತ್ರದಲ್ಲಿ ನಟಿಸಿರುವ ಗಗನಾ ಅವರಿಗೆ ಇದು ಮೊದಲ ಆಲ್ಬಮ್ ಹಾಡಾಗಿದೆ.
ಇದನ್ನೂ ಓದಿ: ಡ್ರೋನ್ನಲ್ಲಿ ಚಿತ್ರಿತವಾಯ್ತು ‘ಗಗನ ಮಿಲನ’ ರೊಮ್ಯಾಂಟಿಕ್ ಆಲ್ಬಂ ಗೀತೆ
‘ಡಾಲಿ ಪಿಕ್ಚರ್ಸ್’ ಬ್ಯಾನರ್ನಲ್ಲಿ ರಿಚರ್ಡ್ ಅವರು ‘ಕನಸಲು..’ ಆಲ್ಬಂ ಗೀತೆಯನ್ನು ನಿರ್ಮಿಸಿದ್ದಾರೆ. ರವಿಕುಮಾರ್ ಬಿ.ಎಮ್. ಅವರು ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಈ ಹಾಡಿನ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ‘ಆನಂದ್ ಆಡಿಯೋ’ ಮೂಲಕ ಈ ಹಾಡು ಬಿಡುಗಡೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮಂಗಳೂರು, (ಸೆಪ್ಟೆಂಬರ್ 18): ಮಂಗಳೂರು, (ಸೆಪ್ಟೆಂಬರ್ 18): ಡಿಕೆ ಶಿವಕುಮಾರ್ ನೇತೃತ್ವದಲ್ಲಿಂದು ಮಂಗಳೂರಿನಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ, ತುಳು 2ನೇ ಆಡಳಿತ ಭಾಷೆಯಾಗಿ ಘೋಷಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇದರೊಂದಿಗೆ ತುಳು ಭಾಷಿಕರ ಹಲವು ದಶಕಗಳ ಹೋರಾಟ ಹಾಗೂ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಐತಿಹಾಸಿಕ ಜಯ ಸಿಕ್ಕಂತಾಗಿದ್ದು. ಶ್ರೀಮಂತ ಪರಂಪರೆಯ ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡುವುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು (ಸೆಪ್ಟೆಂಬರ್ 18) ನಡೆದ ಮಹತ್ವದ ಸಚಿವ ಸಂಪುಟ ಸಭೆಯ ಬಳಿಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ತೀರ್ಮಾನವನ್ನು ಘೋಷಣೆ ಮಾಡಿದರು.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯಿಕ ಸಮೃದ್ಧತೆಯನ್ನು ಹೊಂದಿರುವ ಅಪೂರ್ವ ಭಾಷೆ. ರಾಜ್ಯ ಸರ್ಕಾರದಿಂದ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ಲಭಿಸಿರುವುದು, ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸುವ ಹೋರಾಟಕ್ಕೆ ಪ್ರಬಲ ವೇದಿಕೆಯಾಗಲಿದೆ.
ತುಳು ಭಾಷೆಗೆ ಐತಿಹಾಸಿಕ ಗೌರವ – ಕರ್ನಾಟಕದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಣೆ
ತುಳು ಕೇವಲ ಒಂದು ಭಾಷೆಯಲ್ಲ, ಕರಾವಳಿಯ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಅಸ್ಮಿತೆಯ ಜೀವನಾಡಿ. ತುಳು ಭಾಷೆಯ ಐತಿಹಾಸಿಕ ಮಹತ್ವವನ್ನು ಗೌರವಿಸಿ, ಕರ್ನಾಟಕ ಸರ್ಕಾರ ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ತುಳುವನ್ನು ಘೋಷಿಸಿದೆ. ಉಡುಪಿ ಮತ್ತು… pic.twitter.com/q5slyXAZOZ
— DK Shivakumar (@DKShivakumar) September 18, 2026
ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮಾತನಾಡುವ ತುಳುವಿಗೆ ಹೆಚ್ಚುವರಿ ಅಧಿಕೃತ ಭಾಷಾ ಮಾನ್ಯತೆ ನೀಡಬೇಕೆಂದು ದಶಕಗಳಿಂದ ತುಳು ಸಾಹಿತ್ಯ ಅಕಾಡೆಮಿ, ತುಳು ಪರ ಸಂಘಟನೆಗಳು, ಸಾಹಿತಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನಿರಂತರವಾಗಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು.
ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಸಾಧಕ-ಬಾಧಕಗಳನ್ನು ಪರಿಶೀಲಿಸಲು ಹಿರಿಯ ಶಿಕ್ಷಣ ತಜ್ಞ ಡಾ. ಎಂ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಹೊರ ರಾಜ್ಯಗಳಲ್ಲಿನ ಭಾಷಾ ನೀತಿ ಮಾದರಿಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿತ್ತು.
ಮಂಗಳೂರು: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ಪ್ರಾಚೀನ ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ರಾಜ್ಯ ಸರ್ಕಾರ ಘೋಷಿಸಿದೆ.
ಮಂಗಳೂರಿನಲ್ಲಿ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ವಿಚಾರ ಪ್ರಕಟಿಸಿದರು.
ಆಡಳಿತದಲ್ಲಿ ಕನ್ನಡ ಭಾಷೆಯ ಜೊತೆಗೆ ತುಳು ಭಾಷೆಯನ್ನು ಸರ್ಕಾರಿ ಉದ್ದೇಶಗಳಿಗಾಗಿ ಕರ್ನಾಟಕ ರಾಜ್ಯದ ಹೆಚ್ಚುವರಿ ಆಡಳಿತ ಭಾಷೆ ಎಂದು ಘೋಷಣೆ ಮಾಡಲು ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಅನ್ವಯವಾಗುವಂತೆ ಈ ಘೋಷಣೆ ಮಾಡಲು ತೀರ್ಮಾನಿಸಲಾಗಿದೆ. ತುಳು ಭಾಷೆ ಎರಡು ಸಾವಿರ ವರ್ಷಗಳಿಗೂ ಹಳೆದಾಗಿದ್ದು, ತಜ್ಞರು ಮತ್ತು ಅಧಿಕಾರಿಗಳಿಂದ ಈ ಬಗ್ಗೆ ವರದಿ ಪಡೆಯಲಾಗಿತ್ತು ಎಂದರು.
ಮಂಗಳೂರು: ತುಳು ಅಭಿವೃದ್ಧಿ ನಿಗಮ ಸ್ಥಾಪನೆಗೆ ತುಳು ಪರಿಷತ್ ಮನವಿತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಲು ಸರ್ಕಾರಕ್ಕೆ ಆಗ್ರಹ
ಚಿತ್ರರಂಗದ ಅತ್ಯುನ್ನತ ಗೌರವವಾಗಿರುವ ಆಸ್ಕರ್ ಪ್ರಶಸ್ತಿ ರೇಸ್ಗೆ ಭಾರತದ ಫೇಮಸ್ ಮರಾಠಿ ಥ್ರಿಲ್ಲರ್ ಸಿನಿಮಾ ‘ಗೊಂಧಳ್’ (Gondhal) ಅಧಿಕೃತವಾಗಿ ಆಯ್ಕೆಯಾಗಿದೆ.
ಈ ಸಂತಸದ ವಿಷಯವನ್ನು ಭಾರತೀಯ ಚಲನಚಿತ್ರ ಒಕ್ಕೂಟ (FFI) ಶುಕ್ರವಾರ ಪ್ರಕಟಿಸಿದೆ. ಸಂತೋಷ್ ದವಾಖರ್ ನಿರ್ದೇಶನದ ಈ ಚಿತ್ರವು 99ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದ ‘ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ’ (Best International Feature Film) ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿದೆ.
ಖ್ಯಾತ ಕನ್ನಡ ನಿರ್ದೇಶಕ ಪಿ. ಶೇಷಾದ್ರಿ ಅವರ ನೇತೃತ್ವದ ತೀರ್ಪುಗಾರರ ಸಮಿತಿಯಲ್ಲಿ ಈ ಸಿನಿಮಾವನ್ನು ಆಸ್ಕರ್ಗೆ ಅಂತಿಮಗೊಳಿಸಿದೆ. ಇದನ್ನೂ ಓದಿ: ಕತ್ರೀನಾ ಬಾಡಿ ಶೇಮಿಂಗ್ ವಿಚಾರಕ್ಕೆ ರಮ್ಯಾ ಧಗ ಧಗ
ಪೈಪೋಟಿಯಲ್ಲಿ ಗೆದ್ದ ‘ಗೊಂಡಾಲ್’
ಈ ಬಾರಿ ಆಸ್ಕರ್ ರೇಸ್ಗಾಗಿ ಭಾರತದಿಂದ ಒಟ್ಟು 33 ಚಲನಚಿತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 14 ಹಿಂದಿ, ತಲಾ 4 ಮರಾಠಿ, ತೆಲುಗು ಮತ್ತು ಗುಜರಾತಿ, 3 ತಮಿಳು ಹಾಗೂ ಮಲಯಾಳಂ ಮತ್ತು ನಾಗಮೀಸ್ ಭಾಷೆಯ ತಲಾ ಒಂದು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ವಿಶೇಷವೆಂದರೆ ಈ ಬಾರಿ ಒಂದು ಮೂಕಿ ಚಿತ್ರವೂ ಸಹ ರೇಸ್ನಲ್ಲಿತ್ತು. ಈ ಎಲ್ಲಾ ಚಿತ್ರಗಳನ್ನು ಹಿಂದಿಕ್ಕಿ ‘ಗೊಂಧಳ್’ ಆಸ್ಕರ್ ರೇಸ್ಗೆ ಆಯ್ಕೆಯಾಗಿದೆ. ಇದನ್ನೂ ಓದಿ: ಕನ್ನಡ ಸಿನಿಮಾ ರಂಗಕ್ಕೆ ಮರಾಠಿ ಸೂಪರ್ ಸ್ಟಾರ್ ಉಪೇಂದ್ರ ಲಿಮಾಯೆ ಎಂಟ್ರಿ
ಅರಣ್ಯವೆಂದರೆ ಮರಗಳ ಸಂಖ್ಯೆ ಮಾತ್ರವಲ್ಲ; ಅದು ನೀರು, ಮಣ್ಣು, ವನ್ಯಜೀವಿ, ಜೀವವೈವಿಧ್ಯ, ಹವಾಮಾನ ಮತ್ತು ಮಾನವ ಬದುಕನ್ನು ಜೋಡಿಸುವ ಜೀವಂತ ವ್ಯವಸ್ಥೆ. ಈ ವ್ಯವಸ್ಥೆ ರೂಪುಗೊಳ್ಳಬೇಕಾಗಿರುವುದು ಅತ್ಯಗತ್ಯ. ಇಂತಹ ಸಂದರ್ಭದಲ್ಲಿ ಭಾರತದ ಅರಣ್ಯ ವಿಸ್ತೀರ್ಣ ಹೆಚ್ಚುತ್ತಿದೆ. ಆದರೆ ಅರಣ್ಯದ ಆರೋಗ್ಯ ಎಷ್ಟರ ಮಟ್ಟಿಗೆ ಉಳಿದಿದೆ? ಈ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.
ಅರಣ್ಯ ಉಳಿದರೆ ನೀರು ಉಳಿಯುತ್ತದೆ. ನೀರು ಉಳಿದರೆ ಕೃಷಿ ಉಳಿಯುತ್ತದೆ. ಕೃಷಿ ಉಳಿದರೆ ಮಾನವ ಬದುಕು ಉಳಿಯುತ್ತದೆ. ಹೀಗಾಗಿ ಅರಣ್ಯವೆಂಬುದು ಕೇವಲ ಮರಗಳ ಸಮೂಹವಲ್ಲ; ಅದು ಒಂದು ಸಂಪೂರ್ಣ ಜೀವವ್ಯವಸ್ಥೆ. ಭಾರತದ ಅರಣ್ಯ ವಿಸ್ತೀರ್ಣ ಹೆಚ್ಚುತ್ತಿದೆ. ಅಂದರೆ, ಅರಣ್ಯಗಳು ಸುರಕ್ಷಿತವಾಗಿವೆ ಎಂದು ತೀರ್ಮಾನಿಸಬಹುದೇ? ಅರಣ್ಯ ಪ್ರದೇಶ ಹೆಚ್ಚಾಗಿದೆ ಎಂದರೆ ನೈಸರ್ಗಿಕ ಅರಣ್ಯವೂ ಹೆಚ್ಚಾಗಿದೆ ಎಂದರ್ಥವೇ? ಹೊಸದಾಗಿ ನೆಡಲಾದ ಮರಗಳ ವಿಸ್ತೀರ್ಣವನ್ನು ಶತಮಾನಗಳಿಂದ ಬೆಳೆದು ಬಂದ ನೈಸರ್ಗಿಕ ಅರಣ್ಯದ ಪರಿಸರ ಮೌಲ್ಯಕ್ಕೆ ಸಮಾನವೆಂದು ಪರಿಗಣಿಸಬಹುದೇ?
ಪ್ರಕೃತಿ ಮಡಿಲು: ಎಚ್ಚರ, ಭೂಮಿಯ ಆರೋಗ್ಯ ಅಪಾಯದಲ್ಲಿದೆಪ್ರಕೃತಿ ಮಡಿಲು: ಪರಿಸರ ಕಾರ್ಯಕ್ಷಮತೆಯಲ್ಲಿ ಭಾರತಕ್ಕೆ ಕೊನೆಯಿಂದ 2ನೇ ಸ್ಥಾನಅರಣ್ಯ ವಿಸ್ತರಣೆಯ ಜೊತೆಗೆ ಮರದ ಬಳಕೆ ಮತ್ತು ಅರಣ್ಯ ಸಂಪನ್ಮೂಲಗಳ ಮೇಲಿನ ಒತ್ತಡವೂ ಮುಂದುವರಿದಿರುವುದರಿಂದ ಈ ಪ್ರಶ್ನೆಗಳು ಉದ್ಭವಿಸುತ್ತಿವೆ. ಜಾಗತಿಕ ಅರಣ್ಯನಾಶದ ವೇಗ ಇಳಿದಿದ್ದರೂ, ಅರಣ್ಯ ಪರಿವರ್ತನೆ ಮತ್ತು ಅದರಿಂದ ಉಂಟಾಗುವ ಕಾರ್ಬನ್ ಹೊರಸೂಸುವಿಕೆ ಇನ್ನೂ ನಿಂತಿಲ್ಲ. ಜಾಗತಿಕ ಅರಣ್ಯ ಸಂಪನ್ಮೂಲ ಮೌಲ್ಯಮಾಪನ–2025ರ ಪ್ರಕಾರ, ಒಟ್ಟು ಅರಣ್ಯ ಪ್ರದೇಶದಲ್ಲಿ ಭಾರತ ಜಗತ್ತಿನಲ್ಲಿ 9ನೇ ಸ್ಥಾನಕ್ಕೇರಿದೆ; ನಿವ್ವಳ ವಾರ್ಷಿಕ ಅರಣ್ಯ ಪ್ರದೇಶದ ಹೆಚ್ಚಳದಲ್ಲೂ 3ನೇ ಸ್ಥಾನದಲ್ಲಿದೆ. ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಭಾರತದ ಅರಣ್ಯಗಳು ವರ್ಷಕ್ಕೆ ಸುಮಾರು 150 ಮಿಲಿಯನ್ ಟನ್ ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತಿವೆ. ಭಾರತದ ಈ ಅರಣ್ಯ ಸಾಧನೆಯನ್ನು ಕೇವಲ ‘ಎಷ್ಟು ಅರಣ್ಯ ಹೆಚ್ಚಾಗಿದೆ?’ ಎಂಬ ಪ್ರಶ್ನೆಯಿಂದ ಅಳೆಯುವುದು ಸಾಲದು. ‘ಎಷ್ಟು ನೈಸರ್ಗಿಕ ಅರಣ್ಯ ಉಳಿದಿದೆ? ಅದರ ಜೀವವೈವಿಧ್ಯ ಎಷ್ಟು ಸುರಕ್ಷಿತವಾಗಿದೆ? ಅರಣ್ಯದ ನೀರು, ಮಣ್ಣು ಮತ್ತು ಕಾರ್ಬನ್ ಸಂಗ್ರಹ ಸಾಮರ್ಥ್ಯ ಎಷ್ಟು ಬಲವಾಗಿದೆ?’ ಎಂಬ ಪ್ರಶ್ನೆಗಳಿಗೂ ಉತ್ತರ ಬೇಕಾಗಿದೆ.
ಭಾರತದ ಅರಣ್ಯಗಳ ಕುರಿತು Global Forest Resources Assessment (GFRA) 2025 ವರದಿ ನೀಡಿರುವ ಅಂಕಿಅಂಶಗಳು ಮೇಲ್ನೋಟಕ್ಕೆ ಆಶಾದಾಯಕವಾಗಿವೆ. ಭಾರತವು ಒಟ್ಟು ಅರಣ್ಯ ಪ್ರದೇಶದ ಪ್ರಮಾಣದಲ್ಲಿ ಜಾಗತಿಕವಾಗಿ 9ನೇ ಸ್ಥಾನಕ್ಕೇರಿದೆ. ನಿವ್ವಳ ವಾರ್ಷಿಕ ಅರಣ್ಯ ಪ್ರದೇಶದ ಹೆಚ್ಚಳದಲ್ಲಿ 3ನೇ ಸ್ಥಾನವನ್ನು ಕಾಯ್ದುಕೊಂಡಿದೆ. 2021ರಿಂದ 2025ರ ಅವಧಿಯಲ್ಲಿ ಭಾರತದ ಅರಣ್ಯಗಳು ವರ್ಷಕ್ಕೆ ಸುಮಾರು 150 ಮಿಲಿಯನ್ ಟನ್ CO₂ ಅನ್ನು ವಾತಾವರಣದಿಂದ ಶೋಷಿಸಿವೆ. ಆದರೆ ಇಲ್ಲೊಂದು ಮೂಲಭೂತ ಪ್ರಶ್ನೆ ಇದೆ: ಅರಣ್ಯದ ವಿಸ್ತೀರ್ಣ ಹೆಚ್ಚಿದರೆ ಮಾತ್ರ ಅರಣ್ಯ ಸುರಕ್ಷಿತವಾಗಿದೆ ಎಂದು ಹೇಳಬಹುದೇ? ಈ ಪ್ರಶ್ನೆಗೆ ಉತ್ತರ ಹುಡುಕಿದಾಗ ಅರಣ್ಯದ ಮೇಲಿರುವ ಒತ್ತಡದ ಮತ್ತೊಂದು ಚಿತ್ರಣ ಗೋಚರಿಸುತ್ತದೆ.
ಪ್ರಕೃತಿ ಮಡಿಲು: ಇಪಿಆರ್ ವ್ಯವಸ್ಥೆ ನ್ಯೂನತೆ, ಸ್ಥಳೀಯ ಸಂಸ್ಥೆಗಳಿಗೆ ಹೊರೆಪ್ರಕೃತಿ ಮಡಿಲು: ಅಂತರ್ಜಲ ಕುಸಿತ– ಕಣ್ಣಿಗೆ ಕಾಣದ ನೀರಿನ ಬಿಕ್ಕಟ್ಟುGFRA 2025ರ ಪ್ರಕಾರ ವಿಶ್ವದ ಒಟ್ಟು ಅರಣ್ಯ ಪ್ರದೇಶ ಸುಮಾರು 4.14 ಬಿಲಿಯನ್ ಹೆಕ್ಟೇರ್. ಇದು ಭೂಮಿಯ ಒಟ್ಟು ಭೂಪ್ರದೇಶದ ಸುಮಾರು 32 ಪ್ರತಿಶತ. ಭಾರತವು ಸುಮಾರು 72.739 ಮಿಲಿಯನ್ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಹೊಂದಿದ್ದು, ಜಾಗತಿಕ ಅರಣ್ಯ ಪ್ರದೇಶದಲ್ಲಿ ಸುಮಾರು 2 ಪ್ರತಿಶತ ಪಾಲು ಹೊಂದಿದೆ. ಹಿಂದಿನ ಮೌಲ್ಯಮಾಪನದಲ್ಲಿ 10ನೇ ಸ್ಥಾನದಲ್ಲಿದ್ದ ಭಾರತ ಇದೀಗ 9ನೇ ಸ್ಥಾನಕ್ಕೇರಿದೆ. ವಾರ್ಷಿಕ ನಿವ್ವಳ ಅರಣ್ಯ ಪ್ರದೇಶದ ಹೆಚ್ಚಳದಲ್ಲಿ 3ನೇ ಸ್ಥಾನವನ್ನು ಭಾರತ ಉಳಿಸಿಕೊಂಡಿದೆ.ಅರಣ್ಯವನ್ನು ಅಳೆಯುವಾಗ ಪ್ರದೇಶದ ವಿಸ್ತೀರ್ಣ ಒಂದು ಪ್ರಮುಖ ಸೂಚಕ. ಆದರೆ ಅದು ಒಂದೇ ಸೂಚಕವಲ್ಲ. GFRA ಅರಣ್ಯಗಳನ್ನು ಮುಖ್ಯವಾಗಿ ನೈಸರ್ಗಿಕವಾಗಿ ಪುನರುತ್ಪಾದನೆಯಾಗುವ ಅರಣ್ಯಗಳು ಮತ್ತು ನೆಡಲಾದ ಅರಣ್ಯಗಳು ಎಂದು ಗುರುತಿಸುತ್ತದೆ. ನೈಸರ್ಗಿಕವಾಗಿ ಪುನರುತ್ಪಾದನೆಯಾಗುವ ಅರಣ್ಯಗಳಲ್ಲಿ ಸ್ಥಳೀಯ ಪ್ರಭೇದಗಳನ್ನು ಹೊಂದಿರುವ ಪ್ರಾಥಮಿಕ ಅರಣ್ಯಗಳೂ ಸೇರಿವೆ. ಹೀಗಾಗಿ ಒಂದು ಪ್ರದೇಶದಲ್ಲಿ ಮರಗಳನ್ನು ನೆಟ್ಟು ಹಸಿರು ವ್ಯಾಪ್ತಿ ಹೆಚ್ಚಿಸಿದರೂ, ಅದನ್ನು ನೈಸರ್ಗಿಕ ಅರಣ್ಯದ ಸಂಪೂರ್ಣ ಪರಿಸರ ಮೌಲ್ಯಕ್ಕೆ ಸಮಾನವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದು ವಿಶ್ಲೇಷಣೆಯಲ್ಲಿ ಗಮನಿಸಬೇಕಾದ ಅಂಶ. ನೈಸರ್ಗಿಕ ಅರಣ್ಯದಲ್ಲಿ ಒಂದೇ ಸಮಯದಲ್ಲಿ ಸಾವಿರಾರು ಜೀವಿಗಳು ಪರಸ್ಪರ ಅವಲಂಬಿತವಾಗಿ ಬದುಕುತ್ತವೆ. ಮರಗಳ ವಯಸ್ಸು, ಜಾತಿ ವೈವಿಧ್ಯತೆ, ಪೊದೆಗಳು, ಹುಲ್ಲು, ಬಳ್ಳಿಗಳು, ಕೀಟಗಳು, ಪಕ್ಷಿಗಳು ಮತ್ತು ಪ್ರಾಣಿಗಳು ಸೇರಿ ರೂಪಿಸುವ ಪರಿಸರ ವ್ಯವಸ್ಥೆ ಅದು. ಆದ್ದರಿಂದ: ‘ಎಷ್ಟು ಮರಗಳನ್ನು ನೆಟ್ಟಿದ್ದೇವೆ?’ ಎನ್ನುವುದಕ್ಕಿಂತ ‘ಎಷ್ಟು ನೈಸರ್ಗಿಕ ಅರಣ್ಯ ಉಳಿಸಿಕೊಂಡಿದ್ದೇವೆ?’ ಎಂಬ ಪ್ರಶ್ನೆ ಉತ್ತರ ಸಿಗಬೇಕಿದೆ.
ಬಿದಿರು ಅರಣ್ಯದ ವಿಸ್ತರಣೆಭಾರತದಲ್ಲಿ ಬಿದಿರು ಸಂಪನ್ಮೂಲದ ವಿಸ್ತೀರ್ಣ ಸುಮಾರು 11.8 ಮಿಲಿಯನ್ ಹೆಕ್ಟೇರ್ ಎಂದು ವರದಿ ತಿಳಿಸುತ್ತದೆ. ಜಾಗತಿಕವಾಗಿ ಬಿದಿರು ಅರಣ್ಯದ ವಿಸ್ತರಣೆ 1990ರಿಂದ 2025ರ ನಡುವೆ ಹೆಚ್ಚಿದ್ದು, ಚೀನಾ ಮತ್ತು ಭಾರತದ ವಿಸ್ತರಣೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಅದೇ ರೀತಿ ಭಾರತದಲ್ಲಿ ರಬ್ಬರ್ ತೋಟಗಳ ವಿಸ್ತೀರ್ಣ ಸುಮಾರು 831 ಸಾವಿರ ಹೆಕ್ಟೇರ್ ಎಂದು ವರದಿ ದಾಖಲಿಸಿದೆ. ಈ ಅಂಕಿಅಂಶಗಳು ನೆಡಲಾದ ಸಸ್ಯಾವರಣದ ಪ್ರಮಾಣವನ್ನು ತೋರಿಸುತ್ತವೆ. ಆದರೆ ನೈಸರ್ಗಿಕ ಅರಣ್ಯ ಮತ್ತು ಏಕಪ್ರಭೇದದ ತೋಟದ ಪರಿಸರ ಸೇವೆಗಳು ಒಂದೇ ರೀತಿಯಲ್ಲಿರಬೇಕೆಂದಿಲ್ಲ. ಹೀಗಾಗಿ ಅರಣ್ಯ ವಿಸ್ತರಣೆ ನೀತಿಯಲ್ಲಿ ಸ್ಥಳೀಯ ಮರಗಳ ಪ್ರಭೇದ, ಜೀವವೈವಿಧ್ಯ, ಪರಿಸರದ ಸ್ವರೂಪ ಮತ್ತು ನೈಸರ್ಗಿಕ ಪುನರುತ್ಪಾದನೆಗೆ ಆದ್ಯತೆ ನೀಡುವ ಅಗತ್ಯವಿದೆ.
wood removalsನಲ್ಲಿ 2ನೇ ಸ್ಥಾನGFRA 2025ರ ಮತ್ತೊಂದು ಗಮನಾರ್ಹ ಅಂಶವೆಂದರೆ 2023ರಲ್ಲಿ ಭಾರತವು ಜಾಗತಿಕ wood removalsನಲ್ಲಿ ಸುಮಾರು 9 ಪ್ರತಿಶತ ಪಾಲು ಹೊಂದಿತ್ತು. ಈ ಪ್ರಮಾಣದಲ್ಲಿ ಭಾರತ ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. Wood removalsನಲ್ಲಿ roundwood ಮತ್ತು fuelwood ಎರಡೂ ಸೇರಿವೆ. ಮರವು ಮಾನವ ಜೀವನದ ಅವಿಭಾಜ್ಯ ಸಂಪನ್ಮೂಲ. ಕಟ್ಟಡ ನಿರ್ಮಾಣದಿಂದ ಕಾಗದದವರೆಗೆ, ಇಂಧನದಿಂದ ವಿವಿಧ ಕೈಗಾರಿಕೆಗಳವರೆಗೆ ಮರದ ಬಳಕೆ ಇದೆ. ಆದರೆ ಅರಣ್ಯದ ಪುನರುತ್ಪಾದನಾ ಸಾಮರ್ಥ್ಯಕ್ಕಿಂತ ಬಳಕೆಯ ಪ್ರಮಾಣ ಹೆಚ್ಚಾದರೆ ಅದು ದೀರ್ಘಾವಧಿಯಲ್ಲಿ ಅರಣ್ಯದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ನಿರ್ಲಕ್ಷಿಸಲಾಗದು. ಹೀಗಾಗಿ ಮರದ ಬಳಕೆ ಮತ್ತು ಅರಣ್ಯ ಸಂರಕ್ಷಣೆ ನಡುವೆ ಸಮತೋಲನ ಅಗತ್ಯ.ಅರಣ್ಯನಾಶ ಕಡಿಮೆಯಾಗಿದೆ; ಆತಂಕ ಕಡಿಮೆಯಾಗಿಲ್ಲ. ಜಾಗತಿಕವಾಗಿ ಅರಣ್ಯನಾಶದ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿರುವುದು ವರದಿಯ ಪ್ರಮುಖ ಅಂಶ.
ಪ್ರಕೃತಿ ಮಡಿಲು: ಭೂಮಿಯ ಉಸಿರುಗಟ್ಟಿಸುತ್ತಿವೆ ಹಸಿರುಮನೆ ಅನಿಲಗಳುಪ್ರಕೃತಿ ಮಡಿಲು: ನೈಸರ್ಗಿಕ ಕವಚ ಮ್ಯಾಂಗ್ರೋವ್ ಕಾಡಿಗೆ ಅತಿಕ್ರಮಣದ ಆತಂಕ1990–2000ರ ಅವಧಿಯಲ್ಲಿ ವಾರ್ಷಿಕ ನಿವ್ವಳ ಅರಣ್ಯ ನಷ್ಟ ಸುಮಾರು 10.7 ಮಿಲಿಯನ್ ಹೆಕ್ಟೇರ್ ಇದ್ದರೆ, 2015–2025ರ ಅವಧಿಯಲ್ಲಿ ಅದು 4.12 ಮಿಲಿಯನ್ ಹೆಕ್ಟೇರ್ಗೆ ಇಳಿದಿದೆ. ಆದರೆ “ನಿವ್ವಳ ಅರಣ್ಯ ಹೆಚ್ಚಳ” ಎಂಬ ಅಂಕಿಅಂಶವನ್ನು ಅರ್ಥೈಸುವಾಗ ಎಚ್ಚರಿಕೆ ಅಗತ್ಯ. ಒಂದು ಕಡೆ ಹಳೆಯ ನೈಸರ್ಗಿಕ ಅರಣ್ಯ ನಷ್ಟವಾಗಬಹುದು; ಮತ್ತೊಂದು ಕಡೆ ಹೊಸ ಪ್ರದೇಶದಲ್ಲಿ ಮರ ನೆಡುವ ಮೂಲಕ ಅರಣ್ಯ ಪ್ರದೇಶ ಹೆಚ್ಚಾಗಬಹುದು. ಒಟ್ಟಾರೆ ಲೆಕ್ಕದಲ್ಲಿ ನಿವ್ವಳ ಹೆಚ್ಚಳ ಕಂಡರೂ, ಕಳೆದುಹೋದ ನೈಸರ್ಗಿಕ ಅರಣ್ಯದ ಪರಿಸರ ಮೌಲ್ಯವನ್ನು ಹೊಸ ನೆಡುವಿಕೆ ತಕ್ಷಣವೇ ಸಮನಾಗಿಸಬೇಕೆಂಬುದಿಲ್ಲ.ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಅರಣ್ಯದ ಪಾತ್ರ ಇನ್ನಷ್ಟು ಮಹತ್ವ ಪಡೆಯುತ್ತದೆ. GFRA 2025 ಪ್ರಕಾರ 2021–2025ರ ಅವಧಿಯಲ್ಲಿ ಜಗತ್ತಿನ ಅರಣ್ಯಗಳು ವರ್ಷಕ್ಕೆ ಸುಮಾರು 3.6 ಗಿಗಾಟನ್ CO₂ ಅನ್ನು ಶೋಷಿಸಿವೆ. ಇದೇ ಅವಧಿಯಲ್ಲಿ ಅರಣ್ಯ ಪರಿವರ್ತನೆಯಿಂದ ಸುಮಾರು 2.8 ಗಿಗಾಟನ್ CO₂ ಹೊರಸೂಸುವಿಕೆ ಸಂಭವಿಸಿದೆ. ಅಂತಿಮವಾಗಿ ಅರಣ್ಯ ಕಾರ್ಬನ್ ಸಂಗ್ರಹವು ವರ್ಷಕ್ಕೆ ಸುಮಾರು 0.8 ಗಿಗಾಟನ್ CO₂ ನಿವ್ವಳ ತೆಗೆದುಹಾಕುವಿಕೆಗೆ ಕಾರಣವಾಗಿದೆ.
ಭಾರತದ ಅರಣ್ಯಗಳು ವರ್ಷಕ್ಕೆ ಸುಮಾರು 150 ಮಿಲಿಯನ್ ಟನ್ CO₂ ಶೋಷಿಸುವ ಮೂಲಕ ಜಾಗತಿಕ ಕಾರ್ಬನ್ ಸಿಂಕ್ಗಳಲ್ಲಿ 5ನೇ ಸ್ಥಾನ ಪಡೆದಿವೆ. ಇದು ಅರಣ್ಯವನ್ನು ಉಳಿಸುವುದು ಎಂದರೆ ಹವಾಮಾನವನ್ನು ಉಳಿಸುವುದೂ ಹೌದು ಎಂಬುದನ್ನು ಸ್ಪಷ್ಟಪಡಿಸುತ್ತದೆ.ಅರಣ್ಯಗಳು ಅಪಾರ ಜೀವವೈವಿಧ್ಯಕ್ಕೆ ಆಶ್ರಯದೇಶದಲ್ಲಿ 106 ರಾಷ್ಟ್ರೀಯ ಉದ್ಯಾನಗಳು, 573 ವನ್ಯಜೀವಿ ಅಭಯಾರಣ್ಯಗಳು, 115 ಸಂರಕ್ಷಣಾ ಮೀಸಲು ಪ್ರದೇಶಗಳು ಮತ್ತು 220 ಸಮುದಾಯ ಮೀಸಲು ಪ್ರದೇಶಗಳು ಇವೆ ಎಂದು ವರದಿ ತಿಳಿಸುತ್ತದೆ. ಆದರೆ ಸಂರಕ್ಷಿತ ಪ್ರದೇಶಗಳ ಸಂಖ್ಯೆಯಷ್ಟೇ ಮುಖ್ಯವಲ್ಲ. ಅರಣ್ಯಗಳ ನಡುವಿನ ಸಂಪರ್ಕ ಕಡಿತವಾದರೆ ವನ್ಯಜೀವಿಗಳ ಸಹಜ ಸಂಚಾರಕ್ಕೆ ಅಡ್ಡಿಯಾಗಬಹುದು. ದೊಡ್ಡ ಅರಣ್ಯ ಪ್ರದೇಶ ಸಣ್ಣ ಸಣ್ಣ ತುಂಡುಗಳಾಗಿ ವಿಭಜನೆಯಾದಾಗ ವನ್ಯಜೀವಿಗಳ ವಾಸಸ್ಥಳ ಮತ್ತು ಆಹಾರ ಸರಪಳಿಯ ಮೇಲೂ ಒತ್ತಡ ಉಂಟಾಗಬಹುದು. ಆದ್ದರಿಂದ ಭವಿಷ್ಯದ ಅರಣ್ಯ ಸಂರಕ್ಷಣೆಯಲ್ಲಿ ವನ್ಯಜೀವಿ ಕಾರಿಡಾರ್ಗಳು ಮತ್ತು ಅರಣ್ಯಗಳ ಸಂಪರ್ಕತೆಯೂ ಪ್ರಮುಖ ಮಾನದಂಡವಾಗಬೇಕು.
ಪ್ರಕೃತಿ ಮಡಿಲು: ಭವಿಷ್ಯದ ಸಂಪತ್ತು ವೃದ್ಧಿಗೆ ‘ನೈಸರ್ಗಿಕ ಹೂಡಿಕೆ’ಯ ಮಹತ್ವ...ಪ್ರಕೃತಿ ಮಡಿಲು: ಬೆಂಗಳೂರು ಈಗ ‘ಉಷ್ಣ ದ್ವೀಪ’; ಉದ್ಯಾನ ನಗರಕ್ಕೆ ಹೊಸ ‘ಅಪ’ಖ್ಯಾತಿಅರಣ್ಯಗಳು ನೀರಿನ ಚಕ್ರದ ಪ್ರಮುಖ ಅಂಗಮಳೆಯ ನೀರನ್ನು ನೆಲಕ್ಕೆ ಇಳಿಸುವುದು, ಮಣ್ಣಿನ ಸವೆತವನ್ನು ನಿಯಂತ್ರಿಸುವುದು ಮತ್ತು ಜಲಮೂಲಗಳ ಸಂರಕ್ಷಣೆಗೆ ನೆರವಾಗುವುದು ಅರಣ್ಯದ ಪ್ರಮುಖ ಪರಿಸರ ಸೇವೆಗಳು. ಅರಣ್ಯ ಹಾನಿಯಾದಾಗ ಅದರ ಪರಿಣಾಮ ಕೇವಲ ಮರಗಳ ಮೇಲೆ ಮಾತ್ರ ಬೀಳುವುದಿಲ್ಲ. ನೀರಿನ ಲಭ್ಯತೆ, ಮಣ್ಣಿನ ಗುಣಮಟ್ಟ ಮತ್ತು ಸ್ಥಳೀಯ ಪರಿಸರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.Green India Mission ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ಹೆಚ್ಚಿಸುವುದರ ಜೊತೆಗೆ ಜೀವವೈವಿಧ್ಯ, ನೀರು ಮತ್ತು ಕಾರ್ಬನ್ ಸಂಗ್ರಹದಂತಹ ಪರಿಸರ ಸೇವೆಗಳನ್ನು ಹೆಚ್ಚಿಸುವ ಗುರಿ ಹೊಂದಿದೆ. ಜೊತೆಗೆ ಸುಮಾರು 30 ಲಕ್ಷ ಅರಣ್ಯ ಅವಲಂಬಿತ ಕುಟುಂಬಗಳ ಜೀವನೋಪಾಯ ಆದಾಯವನ್ನು ಸುಧಾರಿಸುವ ಗುರಿಯೂ ಇದೆ.
ಹೀಗಾಗಿ ಅರಣ್ಯ ಸಂರಕ್ಷಣೆಯ ಯಶಸ್ಸು ಸ್ಥಳೀಯ ಜನರ ಬದುಕಿನೊಂದಿಗೆ ನೇರವಾಗಿ ಸಂಬಂಧಿಸಿದೆ. ಅರಣ್ಯ ಉಳಿಸುವಾಗ ಅರಣ್ಯ ಅವಲಂಬಿತ ಸಮುದಾಯಗಳ ಹಕ್ಕುಗಳು, ಜೀವನೋಪಾಯ ಮತ್ತು ಭಾಗವಹಿಸುವಿಕೆಯನ್ನೂ ಪರಿಗಣಿಸುವುದು ಅಗತ್ಯ.
ಪ್ರಕೃತಿ ಮಡಿಲು: ಗಂಭೀರಮಟ್ಟ ಮೀರುತ್ತಿದೆ ನದಿ ಮಾಲಿನ್ಯ!ಪ್ರಕೃತಿ ಮಡಿಲು: ಹವಾಮಾನ ಬದಲಾವಣೆಗೆ ಕಟ್ಟಡವೂ ಕಾರಣGFRA 2025 ಭಾರತದ ಅರಣ್ಯ ಕ್ಷೇತ್ರದ ಪ್ರಗತಿಯ ಒಂದು ಮಹತ್ವದ ಚಿತ್ರಣವನ್ನು ನೀಡಿದೆ. ಅರಣ್ಯ ಪ್ರದೇಶದಲ್ಲಿ ನಿವ್ವಳ ಹೆಚ್ಚಳ, ಅರಣ್ಯೀಕರಣ ಮತ್ತು ಕಾರ್ಬನ್ ಶೋಷಣೆಯಂತಹ ಅಂಶಗಳು ಗಮನಾರ್ಹ. ಆದರೆ ಅರಣ್ಯದ ಭವಿಷ್ಯವನ್ನು ಕೇವಲ ಅಂಕಿಅಂಶಗಳ ಹಸಿರು ಬಣ್ಣದಲ್ಲಿ ನೋಡುವುದು ಸಾಲದು. ನೈಸರ್ಗಿಕ ಅರಣ್ಯ ಉಳಿದಿದೆಯೇ? ಜೀವವೈವಿಧ್ಯ ಉಳಿದಿದೆಯೇ? ವನ್ಯಜೀವಿಗಳ ವಾಸಸ್ಥಳ ಸುರಕ್ಷಿತವೇ? ನೀರಿನ ಮೂಲಗಳು ರಕ್ಷಿತವಾಗಿವೆಯೇ? ಮರದ ಬಳಕೆ ಸುಸ್ಥಿರವಾಗಿದೆಯೇ? ಅರಣ್ಯ ಅವಲಂಬಿತ ಜನರ ಬದುಕು ಸುರಕ್ಷಿತವಾಗಿದೆಯೇ? ಈ ಪ್ರಶ್ನೆಗಳಿಗೆ ಉತ್ತರವೇ ಅರಣ್ಯದ ನಿಜವಾದ ಆರೋಗ್ಯದ ಮಾನದಂಡ. ಅರಣ್ಯ ಸಂರಕ್ಷಣೆಯ ಗುರಿ ಇನ್ನು ಮುಂದೆ ಕೇವಲ ‘ಹೆಚ್ಚು ಹಸಿರು ಪ್ರದೇಶ‘ ಎನ್ನುವುದಾಗಿರಬಾರದು. ಅದು ‘ಹೆಚ್ಚು ಜೀವಂತ, ನೈಸರ್ಗಿಕ, ಸಂಪರ್ಕಿತ ಮತ್ತು ಆರೋಗ್ಯಕರ ಅರಣ್ಯ’ ಎಂಬ ಗುರಿಯಾಗಬೇಕು. ಏಕೆಂದರೆ— ಅರಣ್ಯ ಉಳಿಸುವುದು ಎಂದರೆ ಮರವನ್ನು ಉಳಿಸುವುದಷ್ಟೇ ಅಲ್ಲ; ಮನುಷ್ಯನ ಭವಿಷ್ಯವನ್ನು ಉಳಿಸುವುದು.
ಖೈಬರ್ ಪಖ್ತುಂಕ್ವಾ: ಪಾಕಿಸ್ತಾನದ ಖೈಬರ್ ಪಖ್ತುಂಕ್ವಾದ ಕೊಹಾಟ್ನಲ್ಲಿರುವ 'ಓಲ್ಡ್ ಪೊಲೀಸ್ ಲೈನ್ಸ್' ಬಳಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಹಾಗೂ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರ ಪೈಕಿ 5 ಮಂದಿ ಪೊಲೀಸ್ ಸಿಬ್ಬಂದಿ ಮತ್ತು 11 ಮಂದಿ ನಾಗರಿಕರು ಸೇರಿದ್ದಾರೆ ಎಂದು ಪಾಕಿಸ್ತಾನದ 'ಜಿಯೋ ನ್ಯೂಸ್' ನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸ್ಫೋಟಕಗಳನ್ನು ತುಂಬಿದ್ದ ವಾಹನವೊಂದು 'ಓಲ್ಡ್ ಪೊಲೀಸ್ ಲೈನ್ಸ್'ನ ಗೇಟ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಫೋಟ ಸಂಭವಿಸಿತು ಮತ್ತು ನಂತರ ಗುಂಡಿನ ದಾಳಿ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸ್ಫೋಟದಿಂದಾಗಿ ಮಸೀದಿಯ ಹೊರಗೆ ದೊಡ್ಡ ಗುಂಡಿ ಬಿದ್ದಿದ್ದು, ಕಟ್ಟಡದ ಹೊರಭಾಗಕ್ಕೆ ಹಾನಿಯಾಗಿದೆ ಮತ್ತು ಒಂದು ಗೋಡೆ ಕುಸಿದು ಬಿದ್ದಿದೆ.
ಖೈಬರ್ ಪಖ್ತುಂಖ್ವಾ: 'ಶಾಂತಿ ರ್ಯಾಲಿ' ವೇಳೆ ಆತ್ಮಹತ್ಯಾ ಬಾಂಬ್ ದಾಳಿ; 13 ಸಾವುಕೊಹಾಟ್ನ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಗಾಯಗೊಂಡ 25 ಮಂದಿಯನ್ನು ಕರೆತರಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಗಾಯಗೊಂಡವರಲ್ಲಿ ಪೊಲೀಸ್ ಸಿಬ್ಬಂದಿಯೂ ಸೇರಿದ್ದಾರೆ.
'ರೆಸ್ಕ್ಯೂ 1122' ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯವನ್ನು ಆರಂಭಿಸಿದವು.
ಕೊಹಾಟ್ನಲ್ಲಿರುವ ಪೊಲೀಸ್ ಕೇಂದ್ರವೊಂದರ ಬಳಿ ಸ್ಫೋಟ ಸಂಭವಿಸಿದೆ ಎಂದು ಪಾಕಿಸ್ತಾನದ ಗೃಹ ಸಚಿವಾಲಯವು 'ಎಕ್ಸ್' (X) ನಲ್ಲಿ ತಿಳಿಸಿದೆ. ಆದರೆ ಸಾವಿನ ಅಧಿಕೃತ ಸಂಖ್ಯೆಯನ್ನು ನೀಡಲಾಗಿಲ್ಲ.
ಶೋಧ ಮತ್ತು ತೆರವು ಕಾರ್ಯಾಚರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಪೊಲೀಸ್ ಮತ್ತು ಭದ್ರತಾ ಪಡೆಗಳು 'ಓಲ್ಡ್ ಪೊಲೀಸ್ ಲೈನ್ಸ್' ಪ್ರದೇಶವನ್ನು ಸುತ್ತುವರಿದಿವೆ (ನಿರ್ಬಂಧಿತ ವಲಯವನ್ನಾಗಿ ಮಾಡಿವೆ). ಕೊಹಾಟ್-ಹಂಗು ರಸ್ತೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಆ ಪ್ರದೇಶದ ಸುತ್ತಲೂ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.
ಸ್ಫೋಟದಿಂದಾಗಿ ಸಮೀಪದ ಕಟ್ಟಡಗಳಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ. ಸ್ಫೋಟಕ್ಕೆ ಕಾರಣವಾದ ಸನ್ನಿವೇಶಗಳು ಮತ್ತು ಇದಕ್ಕೆ ಹೊಣೆಗಾರರಾದವರ ಗುರುತಿನ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸ್ಫೋಟದ ನಂತರ ಗುಂಡಿನ ಸದ್ದು ಕೂಡ ಕೇಳಿಬಂದಿದೆ ಎಂದು ವರದಿಯಾಗಿದೆ.
ಮೃತರ ಖಚಿತ ಸಂಖ್ಯೆ ಮತ್ತು ದಾಳಿಯ ಸ್ವರೂಪ ಸೇರಿದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಭುವನೇಶ್ವರ: ಒಡಿಶಾದ ರೂರ್ಕೆಲಾ ಸರ್ಕ್ಯೂಟ್ ಹೌಸ್ನಲ್ಲಿ (ಸರ್ಕಾರಿ ಅತಿಥಿ ಗೃಹದಲ್ಲಿ) (Rourkela Circuit House) ನೀಲಿ ಚಿತ್ರ ತಾರೆ ಟೀನಾ ನಂದಿ (Tina Nandi) ವಾಸ್ತವ್ಯ ಹೂಡಿದ್ದ ವಿಡಿಯೋವೊಂದು ಸೋಷಿಯಲ್ ಹರಿದಾಡುತ್ತಿದೆ. ಇದು ವಿವಾದಕ್ಕೂ ಕಾರಣವಾಗಿದೆ.
View this post on Instagram
A post shared by Dainik News (@dainik_news_rourkela)
ಕಳೆದ ವರ್ಷದ ಡಿಸೆಂಬರ್ 1ರಂದು ರೂರ್ಕೆಲಾಕ್ಕೆ ಭೇಟಿ ನೀಡಿದ್ದ ವೇಳೆ ಸರ್ಕ್ಯೂಟ್ ಹೌಸ್ನಲ್ಲಿ ತಂಗಿದ್ದ ಟೀನಾ, ತಮಗೆ ವಿಶೇಷ ಆತಿಥ್ಯ ದೊರೆತಿತ್ತು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದರು. ಇದೀಗ ಸರ್ಕಾರಿ ವಸತಿ ಸೌಲಭ್ಯವನ್ನ ಅವರಿಗೆ ಹೇಗೆ ಒದಗಿಸಲಾಯಿತು? ನಿಗದಿತ ನಿಯಮಗಳನ್ನ ಪಾಲಿಸಲಾಗಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವರದಿಗಳ ಪ್ರಕಾರ, ವಸತಿ ವ್ಯವಸ್ಥೆಗೆ ಸಂಬಂಧಿಸಿದಂತೆ ನಿವೃತ್ತ ಎಸ್ಪಿ ಹುದ್ದೆಯ ಅಧಿಕಾರಿಯ ಪುತ್ರ ಸೇರಿದಂತೆ ಕನಿಷ್ಠ ಮೂವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸರ್ಕಾರಿ ಅತಿಥಿ ಗೃಹ ನೀಡಲು ಯಾರು ಶಿಫಾರಸು ಮಾಡಿದ್ದರು ಹಾಗೂ ಅಗತ್ಯ ಅನುಮತಿ ಪಡೆಯಲಾಗಿತ್ತೇ ಎಂಬುದನ್ನೂ ಸಹ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಟೀನಾ ನಂದಿ ಜಾರ್ಸುಗುಡಾ ವಿಮಾನ ನಿಲ್ದಾಣದಿಂದ ರೂರ್ಕೆಲಾಕ್ಕೆ ಐಷಾರಾಮಿ ಆಡಿ ಕಾರಿನಲ್ಲಿ ಪ್ರಯಾಣಿಸಿದ್ದರು. ರೂರ್ಕೆಲಾದ ಖಾಸಗಿ ಕಂಪನಿಯೊಂದರ ಸಿಇಒ ತಮ್ಮನ್ನ ರಿಸೀವ್ ಮಾಡಲು ಬರುತ್ತಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದರು. ಕಂಪನಿಯ ಪ್ರಚಾರ ಕಾರ್ಯಕ್ರಮಕ್ಕಾಗಿ ನಗರಕ್ಕೆ ಬಂದಿದ್ದಾಗಿ ರೀಲ್ಸ್ನಲ್ಲಿ ಹೇಳಿದ್ದರು.
ವಾಹನ ವ್ಯವಸ್ಥೆಯ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಸ್ಥಳೀಯ ಟ್ರಾವೆಲ್ ಆಪರೇಟರ್ವೊಬ್ಬರು ಖಾಸಗಿ ಕಂಪನಿಯ ಹಿರಿಯ ಅಧಿಕಾರಿಯ ಮನವಿಯ ಮೇರೆಗೆ ಕಾರು ಒದಗಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಟೀನಾ ವಾಸ್ತವ್ಯ ಮತ್ತು ಸಾರಿಗೆ ವ್ಯವಸ್ಥೆಯ ನಡುವೆ ಯಾವುದೇ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಸರ್ಕ್ಯೂಟ್ ಹೌಸ್ನಲ್ಲಿ ಸಾಮಾನ್ಯವಾಗಿ ಹಿರಿಯ ಸರ್ಕಾರಿ ಅಧಿಕಾರಿಗಳು, ಸಚಿವರು, ಶಾಸಕರು, ಮಾನ್ಯತೆ ಪಡೆದ ಪತ್ರಕರ್ತರು ಹಾಗೂ ಇತರ ಗಣ್ಯರು ವಾಸ್ತವ್ಯ ಹೂಡಲು ಅವಕಾಶವಿದೆ. ನಿಯಮದಂತೆ ಸಂಬಂಧಿತ ಅಧಿಕಾರಿಗಳ ಅನುಮತಿ ಇದ್ದರಷ್ಟೇ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಆದ್ರೆ ಟೀನಾ ನೀಲಿ ತಾರೆಯಾಗಿದ್ದು ನಿಯಮಗಳನ್ನು ಪಾಲಿಸಲಾಗಿತ್ತೇ ಅನ್ನೋದು ತನಿಖೆಗೆ ಕಾರಣವಾಗಿದೆ.
ಇದೇ ಸರ್ಕ್ಯೂಟ್ ಹೌಸ್ಗೆ ಸಂಬಂಧಿಸಿದ ಮತ್ತೊಂದು ಘಟನೆ ಆಗಸ್ಟ್ನಲ್ಲಿ ನಡೆದಿತ್ತು. ಪೊಲೀಸರು 7 ಮಂದಿಯನ್ನು ಬಂಧಿಸಿ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಂಡಿದ್ದರು. ಬಂಧಿತರಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಲ್ ಓರಂ ಅವರೊಂದಿಗೆ ಸಂಪರ್ಕ ಹೊಂದಿದ್ದ ಬಿಜೆಪಿ ಯುವ ಮುಖಂಡ ಪ್ರಕಾಶ್ ಪಾಸ್ವಾನ್ ಕೂಡ ಇದ್ದರು. ಬಳಿಕ ಬಿಜೆಪಿ ಪಾಸ್ವಾನ್ ಅವರನ್ನು ಅಮಾನತುಗೊಳಿಸಿತ್ತು.
ಉಜ್ಜಯಿನಿ (ಮಧ್ಯಪ್ರದೇಶ): ಸಾಮಾನ್ಯವಾಗಿ ಧರ್ಮ ಎಂಬುದು ಕೇವಲ ವಯಸ್ಸಾದವರಿಗೆ ಸಂಬಂಧಿಸಿದ್ದು ಎಂದು ಭಾವಿಸುವ ಈ ಕಾಲಘಟ್ಟದಲ್ಲಿ, ಇಂದಿನ ಯುವ ಪೀಳಿಗೆಯು (ಜೆನ್–ಝಿ) ಅದರ ಬಗ್ಗೆ ಚರ್ಚಿಸುತ್ತಿರುವುದನ್ನು ಕಂಡು ನನಗೆ ಸಂತಸವಾಗಿದೆ ಎಂದು ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ 'ರಾಷ್ಟ್ರೀಯ ಯುವ ಧರ್ಮ ಸಂಸದ್' ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ‘ಧರ್ಮ ಎನ್ನುವುದು ಕೇವಲ ಆಚರಣೆಯಲ್ಲ, ಅದು ನಮ್ಮ ನಡವಳಿಕೆ ಹಾಗೂ ಡಿಎನ್ಎಯಲ್ಲೇ ಇದೆ. ಅಲ್ಲದೇ ಅದು ನಮ್ಮ ಕ್ರಿಯೆಗಳಿಗೆ ಮಾರ್ಗದರ್ಶನ ನೀಡುತ್ತದೆ' ಎಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸುಮಾರು 1,700 ಯುವ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಧರ್ಮದ ನಿಜವಾದ ಸಾರವನ್ನು ಅರ್ಥಮಾಡಿಕೊಳ್ಳಲು ಬಯಸುವ ಪ್ರತಿಯೊಬ್ಬ ಯುವಕನೂ ತನ್ನ ಮನಸ್ಸಿನಲ್ಲಿರುವ ಪೂರ್ವಗ್ರಹ ಪೀಡಿತ ಕಲ್ಪನೆಗಳನ್ನು ತೊರೆದು ಮುಕ್ತ ಮನಸ್ಸಿನಿಂದ ಆಲೋಚಿಸಬೇಕು ಎಂದೂ ಅವರು ಕರೆ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ 300ಕ್ಕೂ ಹೆಚ್ಚು ವಿದ್ವಾಂಸರು, ಸಂಶೋಧಕರು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 19 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್ ಎದುರಾಗಿದೆ. ಭೂಮಿಕಾ ಈಗ ಬಡ್ಡಿ ಬಂಗಾರಮ್ಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿ ಸಾಮಾಜಿಕ ಮಾಧ್ಯಮದಲ್ಲಿ ಅಮೃತಧಾರೆ ಹೊಸ ಅಧ್ಯಾಯ ಎಂದು ಪ್ರೋಮೊವೊಂದನ್ನು ಹಂಚಿಕೊಂಡಿದೆ.
ಅಮೃತಧಾರೆ: ಕ್ಯಾನ್ಸರ್ ವಿರುದ್ಧ ಗೆದ್ದ ಭೂಮಿಕಾ ಮುಖದಲ್ಲಿ ನಗುವಿನ ಹಣತೆಭೂಮಿಕಾಗೆ ಕ್ಯಾನ್ಸರ್: ಅಮೃತಧಾರೆ ಧಾರಾವಾಹಿಯಲ್ಲಿ ಊಹಿಸಲಾಗದ ಟ್ವಿಸ್ಟ್ View this post on Instagramಪ್ರೋಮೊ ನೋಡಿದ ವೀಕ್ಷಕರು ಅಚ್ಚರಿಗೊಂಡಿದ್ದಾರೆ. ಭೂಮಿಕಾ ಪಾತ್ರದಲ್ಲಿ ಅಭಿನಯಿಸುತ್ತಿದ್ದ ನಟಿ ಛಾಯಾ ಸಿಂಗ್ ಇದೀಗ ದೀಪಿಕಾ ಆಗಿ ಬದಲಾಗಿದ್ದಾರೆ. ಪ್ರೋಮೊದಲ್ಲಿ ಭೂಮಿಕಾ, ‘ನೀವು ಪ್ರೀತಿ ಕೊಟ್ಟು ಬೆಳೆಸಿದ ಗೌತಮ್ ಮತ್ತು ಭೂಮಿಕಾಳ ಬದುಕಿನ ಹಾದಿ ಸುಲಭದ್ದಲ್ಲ. ಕಲ್ಲು, ಮುಳ್ಳು, ಬೆಂಕಿ, ಬಿರುಗಾಳಿ, ಎಲ್ಲದಕ್ಕೂ ಎದೆಯೊಡ್ಡಿ ನಿಂತೆವು. ಅವಳಿ ಜವಳಿ ಮಕ್ಕಳನ್ನು ಹೆತ್ತವಳು ನಾನು, ಆದರೆ ನನ್ನದೇ ಪ್ರತಿರೂಪ ನನ್ನ ಕಣ್ಣಿಗೆ ಬೀಳಲಿಲ್ಲ. ಊಹಿಸುವುದಕ್ಕೆ ಆಗದೇ ಇರುವುದು, ಕಲ್ಪನೆಗೆ ಮೀರಿದ್ದು ಅಮೃತಧಾರೆ ಹೊಸ ಅಧ್ಯಾಯ’ ಎಂದಿದ್ದಾರೆ.
ಇನ್ಮುಂದೆ ದೀಪಿಕಾ ಎಂಬ ಪಾತ್ರದ ಮೂಲಕ ಬಡ್ಡಿ ಬಂಗಾರಮ್ಮ ಆಗಿ ಛಾಯಾ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಪ್ರೋಮೊದಲ್ಲಿ ‘ನಾನು ಸಾಲ ಕೊಡೋದು ಕೆಲಸಕ್ಕೆ, ಶೋಕಿಯಾಗಿ ಅಲ್ಲ ಎನ್ನುತ್ತಲೇ ದೀಪಿಕಾ ಆಗಮನವಾಗಿದೆ. ಇದೇ ಪ್ರೋಮೊ ನೋಡಿದ ವೀಕ್ಷಕರು, ‘ಭೂಮಿಕಾ ಡಬಲ್ ಧಮಾಕಾ’, ‘ಜೈದೇವ್, ಶಕುಂತಲಾಗೆ ಮುಂದೆ ಇದೆ ಮಾರಿ ಹಬ್ಬ’ ಎಂದು ಕಮೆಂಟ್ ಹಾಕಿದ್ದಾರೆ.
ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಗಾಜುವಾಕದಲ್ಲಿ ಪ್ರತಿಷ್ಠಾಪಿಸಲಾಗಿರುವ ಬೃಹತ್ ಗಣೇಶ ಮೂರ್ತಿಯ ಉತ್ಸವವು ಇದೀಗ ಭಾರಿ ಸಾರ್ವಜನಿಕ ಆಕ್ರೋಶ ಹಾಗೂ ಕಾನೂನು ವಿವಾದಕ್ಕೆ ಕಾರಣವಾಗಿದೆ. ಶ್ರೀನಗರ ಗ್ರೌಂಡ್ನಲ್ಲಿ 1ಕೋಟಿ ಬಳೆಗಳನ್ನು ಬಳಸಿ ನಿರ್ಮಿಸಲಾಗಿರುವ 89 ಅಡಿ ಎತ್ತರದ ಬೃಹತ್ ಮಹಾಗಣಪತಿಯ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಗಣೇಶೋತ್ಸವದ ಆವರಣದಲ್ಲಿ ಆಯೋಜಕರು ನಡೆಸುತ್ತಿರುವ ವಾಣಿಜ್ಯ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಸೆಟ್ಗಳ ವಸೂಲಿ ದಂಧೆ ಅಧಿಕಾರಿಗಳ ಕಣ್ಣು ಕೆಂಪಗಾಗಿಸಿದೆ.
ಉಚಿತ ದರ್ಶನ, ಆದರೆ ಸೆಟ್ಗಳಿಗೆ ಭಾರಿ ಪ್ರವೇಶ ಶುಲ್ಕ:ಗಾಜುವಾಕದ ಶ್ರೀನಗರ ಗ್ರೌಂಡ್ನಲ್ಲಿ 21 ದಿನಗಳ ಕಾಲ ಭಕ್ತರ ದರ್ಶನಕ್ಕಾಗಿ ಈ ಬೃಹತ್ ಗಣೇಶ ಮೂರ್ತಿಯನ್ನು ಇರಿಸಲು ಆಯೋಜಕರು ವ್ಯವಸ್ಥೆ ಮಾಡಿದ್ದಾರೆ. ದೇವರಿಗೆ ಉಚಿತ ದರ್ಶನವಿದ್ದರೂ, ಮಂಟಪದ ಎರಡೂ ಬದಿಗಳಲ್ಲಿ ಮನರಂಜನೆಗಾಗಿ ನಿರ್ಮಿಸಲಾದ ಸೆಟ್ಗಳಿಗೆ ಭಾರಿ ಧನ ಸಂಗ್ರಹ ಮಾಡಲಾಗುತ್ತಿದೆ. ಸಿನಿಮಾ ಸೆಟ್ ಮಾದರಿಯ ಯಮಲೋಕದ ಸೆಟ್ಗೆ 100 ರೂ. ಹಾಗೂ ಡೈನೋಸಾರ್ ಪಾರ್ಕ್ಗೆ 80 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ಶೀಘ್ರ ದರ್ಶನದ ಹೆಸರಿನಲ್ಲಿ ಹಣ ವಸೂಲಿ?ಯಮಲೋಕದ ಸೆಟ್ಗೆ ಟಿಕೆಟ್ ಖರೀದಿಸಿದ ಭಕ್ತರಿಗೆ ಅಲ್ಲಿನ ಒಳಗಿನ ಮಾರ್ಗದ ಮೂಲಕ ಗಣೇಶನ ಶೀಘ್ರ (VIP) ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಾಮಾನ್ಯ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಭಕ್ತರು ಅನಿವಾರ್ಯವಾಗಿ ಟಿಕೆಟ್ಗಳನ್ನು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಮೈದಾನದಲ್ಲಿ ಹಲವು ತಾತ್ಕಾಲಿಕ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಆಯೋಜಕರು ಭಾರಿ ಆದಾಯ ಗಳಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಜಪಾನ್ನಲ್ಲಿದೆ ‘ಡಿವೋರ್ಸ್ ಟೆಂಪಲ್’: ಗಂಡನ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಆಸರೆಯಾಗುವ 700 ವರ್ಷ ಹಳೆಯ ಕ್ಷೇತ್ರ!
ಜಂಟಿ ಸಮಿತಿಯಿಂದ ದಿಢೀರ್ ತಪಾಸಣೆ ಮತ್ತು ಉದ್ವಿಗ್ನತೆ:ಉತ್ಸವದ ಹೆಸರಿನಲ್ಲಿ ಹಣ ವಸೂಲಿ ಹಾಗೂ ವಾಣಿಜ್ಯ ಚಟುವಟಿಕೆ ನಡೆಸಬಾರದು ಎಂಬ ನಿಯಮವಿದ್ದರೂ, ಈ ಮಂಟಪಕ್ಕೆ ಯಾವುದೇ ಅಧಿಕೃತ ಅನುಮತಿಯನ್ನು ಪಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೂರುಗಳು ಬಂದ ಹಿನ್ನೆಲೆಯಲ್ಲಿ ಕಂದಾಯ, ಪೊಲೀಸ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ಜಂಟಿ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಹೈವೇ ಸರ್ವಿಸ್ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹಾಗೂ ಭದ್ರತಾ ನಿಯಮಗಳ ಉಲ್ಲಂಘನೆ ಕಂಡುಬಂದಿದ್ದರಿಂದ, ತಪಾಸಣೆ ವೇಳೆ ಆಯೋಜಕರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆದು ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಸೆಟ್ಗಳು ಹಾಗೂ ವಾಣಿಜ್ಯ ಮಳಿಗೆ ತೆರವುಗೊಳಿಸಲು ಕಟ್ಟುನಿಟ್ಟಿನ ನೋಟಿಸ್:ಜಂಟಿ ಸಮಿತಿಯ ವರದಿ ಆಧರಿಸಿ ಗ್ರೇಟರ್ ವಿಶಾಖಪಟ್ಟಣಂ ಮಹಾನಗರ ಪಾಲಿಕೆ (GVMC) ಅಧಿಕಾರಿಗಳು ಆಯೋಜಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಯಮಲೋಕ, ಡೈನೋಸಾರ್ ಸೆಟ್ಗಳು ಹಾಗೂ ಅನಧಿಕೃತ ವಾಣಿಜ್ಯ ಮಳಿಗೆಗಳನ್ನು ನಿಗದಿತ ಗಡುವಿನೊಳಗೆ ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು, ಇಲ್ಲವಾದಲ್ಲಿ ಸರ್ಕಾರಿ ಯಂತ್ರಾಂಗದ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ನಾವು ಭಕ್ತಿಯಿಂದ ಈ ವ್ಯವಸ್ಥೆ ಮಾಡಿದ್ದೇವೆಯೇ ಹೊರತು ವ್ಯಾಪಾರಕ್ಕಾಗಿ ಅಲ್ಲ ಎಂದು ಆಯೋಜಕರು ವಾದಿಸಿದರೂ, ನಿಯಮ ಉಲ್ಲಂಘನೆಯನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಸಾಮಾನ್ಯ ಭಕ್ತರ ದರ್ಶನಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಯಿಯಾದ ಬಳಿಕ ಇತ್ತೀಚಿಗೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಹೆರಿಗೆಯ ಬಳಿಕ ಹೆಣ್ಣಿನ ದೇಹದಲ್ಲಿ ಒಂದಷ್ಟು ಬದಲಾವಣೆ ಸಾಮಾನ್ಯ. ಅದರಂತೆ ಕತ್ರಿನಾ ದೇಹದ ತೂಕ ಏರಿಕೆಯಾಗಿದೆ.
ಇದೇ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಅಲ್ಲದೆ ಕತ್ರಿನಾ ಅವರ ಹಳೆಯ ಫೋಟೊಗಳಿಗೆ ಹೋಲಿಸಿ, ‘ಆಗ ಹೇಗಿದ್ದರು, ಈಗ ಹೇಗಾಗಿದ್ದಾರೆ’ ಎಂದು ಬಾಡಿ ಶೇಮಿಂಗ್ ಮಾಡಿದ್ದಾರೆ.
ಸದ್ಯ, ಕತ್ರಿನಾ ಬಗ್ಗೆ ಕೇಳಿಬಂದಿರುವ ಕಮೆಂಟ್ಗಳು ಚರ್ಚೆಗೆ ಗ್ರಾಸವಾಗಿದೆ. ಹಲವು ನಟ–ನಟಿಯರು ಕತ್ರಿನಾ ಪರವಾಗಿ ಮಾತನಾಡಿದ್ದು, ‘ಮೇಲ್ನೋಟದ ಸೌಂದರ್ಯವನ್ನು ಮೀರಿ ಮಹಿಳೆಯರನ್ನು ಗೌರವಿಸಿ‘ ಎಂದು ಪಾಕಿಸ್ತಾನ ಗಾಯಕ, ನಟ ಅಲಿ ಜಾಫರ್ ಹೇಳಿದ್ದಾರೆ.
ಕತ್ರಿನಾ ಅವರ ಹಳೆಯ ಫೋಟೊಗಳಿಗೆ ಹೋಲಿಕೆ ಮಾಡಿರುವುದನ್ನು ಹಂಚಿಕೊಂಡು, ಆಕ್ರೋಶ ವ್ಯಕ್ತಪಡಿಸಿರುವ ಕನ್ನಡದ ನಟಿ ರಮ್ಯಾ, ‘ದೇಹದ ಆಕಾರವನ್ನು ನೋಡಿ ಅವಮಾನಿಸುವುದು ತಪ್ಪು’ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ರಮ್ಯಾ, ‘ ಇದು ಅವಳ ಅತ್ಯುತ್ತಮ ಹಂತ‘ ಎನ್ನುವ ಮೂಲಕ ಮಹಿಳೆಯರಿಗೆ ಅವಧಿ ಮುಗಿಯುವ ದಿನಾಂಕ ಇರುವಂತೆ ಮಾತನಾಡುತ್ತಾರೆ. ನಿಯತಕಾಲಿಕೆಯ ಮುಖಪುಟದಲ್ಲಿ ಮಾಡೆಲ್ನಂತೆ ಕಾಣುವ ಕೆಲವೇ ವರ್ಷಗಳು ಮಾತ್ರ ಮಹಿಳೆಯ ‘ಅತ್ಯುತ್ತಮ ಹಂತ’ ಎಂದು ನಿರ್ಧರಿಸಿದವರು ಯಾರು? ಗರ್ಭಧಾರಣೆ, ಋತುಬಂಧದ ಪೂರ್ವದ ಹಂತ ಅಥವಾ ಜೀವನದ ಪಯಣದಲ್ಲಿ ಅನೇಕ ಸಂದರ್ಭಗಳಲ್ಲಿ ನಮ್ಮ ದೇಹ ಬದಲಾಗುತ್ತಲೇ ಇರುತ್ತದೆ. ಅದು ಅವನತಿಯಲ್ಲ; ಅದು ಬದುಕುವ ಕ್ರಮ’ ಎಂದಿದ್ದಾರೆ.
‘ಅತ್ಯುತ್ತಮ ಹಂತ’ ಎಂದರೆ ಕೇವಲ ಸೊಂಟದ ಅಳತೆಯಲ್ಲ. ಅದು ಶಕ್ತಿ, ವಿವೇಕ, ಕೆಲಸ, ಸಂತೋಷ ಮತ್ತು ಬದುಕಿನಲ್ಲಿ ಅಳವಡಿಸಿಕೊಂಡಿರುವ ಎಲ್ಲವೂ ಆಗಿದೆ. ಕತ್ರಿನಾ ತಮ್ಮ ಅತ್ಯುತ್ತಮ ಹಂತದಲ್ಲಿದ್ದಾರೆ. ಇದನ್ನು ಓದುತ್ತಿರುವ ಪ್ರತಿಯೊಬ್ಬ ಮಹಿಳೆಯೂ ಅಷ್ಟೇ. ಹುಟ್ಟಿದ ದಿನದಿಂದ ಹಿಡಿದು ಜೀವನದ ಕೊನೆಯ ದಿನದವರೆಗೂ ಮಹಿಳೆ ತನ್ನ ಅತ್ಯುತ್ತಮ ಹಂತದಲ್ಲಿಯೇ ಇರುತ್ತಾಳೆ. ಇನ್ನು, ‘ಆಕೆಯ ಬ್ಯಾಂಕ್ ಬ್ಯಾಲೆನ್ಸ್ ನೋಡಿ’ ಎಂದು ಹೇಳುವವರಿಗೆ, ಹಾಗಾದರೆ ಕಡಿಮೆ ಹಣವಿರುವ ಮಹಿಳೆಯನ್ನು ದೇಹದ ಆಕಾರದ ಕಾರಣಕ್ಕೆ ಅವಮಾನಿಸಬಹುದೇ?. ಆಕೆಗೆ ಮಗುವಾಗಿದೆ, ಹಾಗಾಗಿ ಆ ತೂಕ ಸರಿ ಎನ್ನುವವರಿಗೆ, ಒಂದು ವೇಳೆ ಮಗು ಆಗಿರದಿದ್ದರೆ ಆ ತೂಕ ತಪ್ಪಾಗುತ್ತಿತ್ತೇ? ಇದ್ಯಾವ ರೀತಿಯ ಅರ್ಥಹೀನ ಸಮರ್ಥನೆ’ ಎಂದು ಪ್ರಶ್ನಿಸಿದ್ದಾರೆ.
‘ಮಹಿಳೆಯೊಬ್ಬಳನ್ನು ದೇಹದ ಆಕಾರದ ಕಾರಣಕ್ಕೆ ಅವಮಾನಿಸಬಾರದು ಎನ್ನಲು ಬ್ಯಾಂಕ್ ಬ್ಯಾಲೆನ್ಸ್ ಅಥವಾ ನಿರ್ದಿಷ್ಟ ಕಾರಣದ ಅಗತ್ಯವಿಲ್ಲ. ಇದಕ್ಕೆ ಯಾವುದೇ ಷರತ್ತುಗಳಾಗಲಿ, ವಿನಾಯಿತಿಗಳಾಗಲಿ ಇಲ್ಲ. ದೇಹದ ಆಕಾರವನ್ನು ನೋಡಿ ಅವಮಾನಿಸುವುದು ತಪ್ಪು. ಅಷ್ಟೇ’ ಎಂದಿದ್ದಾರೆ.
ಕತ್ರಿನಾ ಮತ್ತು ವಿಕ್ಕಿ ಕೌಶಲ್, ಕಳೆದ ನವೆಂಬರ್ನಲ್ಲಿ ಗಂಡು ಮಗುವನ್ನು ಸ್ವಾಗತಿಸಿದ್ದರು. ಮಗನಿಗೆ ವಿಹಾನ್ ಎಂದು ನಾಮಕರಣ ಮಾಡಿದ್ದಾರೆ. ಮಗು ಹುಟ್ಟಿದ ಬಳಿಕ ಇದೇ ಮೊದಲ ಬಾರಿ ಗಣೇಶ ಚತುರ್ಥಿ ಸಮಯದಲ್ಲಿ ಕತ್ರಿನಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.
“In her prime," as if women come with an expiry date. Who decided a woman's prime is the handful of years she looks like a magazine cover? Our bodies change through pregnancy, perimenopause and life itself. That isn't decline. That's living.
Prime isn't a waistline. It's… pic.twitter.com/GSgqUWWwr8
ಮಂಗಳೂರು: ತುಳು ಭಾಷಿಕರ ಹಲವು ದಶಕಗಳ ಹೋರಾಟ ಹಾಗೂ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಐತಿಹಾಸಿಕ ಜಯ ಸಿಕ್ಕಿದೆ. ಶ್ರೀಮಂತ ಪರಂಪರೆಯ ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡುವುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯ ಬಳಿಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ತೀರ್ಮಾನವನ್ನು ಪ್ರಕಟಿಸಿದರು.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯಿಕ ಸಮೃದ್ಧತೆಯನ್ನು ಹೊಂದಿರುವ ಅಪೂರ್ವ ಭಾಷೆ. ರಾಜ್ಯ ಸರ್ಕಾರದಿಂದ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ಲಭಿಸಿರುವುದು, ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸುವ ಹೋರಾಟಕ್ಕೆ ಪ್ರಬಲ ವೇದಿಕೆಯಾಗಲಿದೆ. ಇದನ್ನೂ ಓದಿ: ಕದ್ರಿ ಶ್ರೀ ಮಂಜುನಾಥನ ದರ್ಶನ ಪಡೆದ ಸಿಎಂ ಡಿಕೆಶಿ – ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ
ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮಾತನಾಡುವ ತುಳುವಿಗೆ ಹೆಚ್ಚುವರಿ ಅಧಿಕೃತ ಭಾಷಾ ಮಾನ್ಯತೆ ನೀಡಬೇಕೆಂದು ದಶಕಗಳಿಂದ ತುಳು ಸಾಹಿತ್ಯ ಅಕಾಡೆಮಿ, ತುಳು ಪರ ಸಂಘಟನೆಗಳು, ಸಾಹಿತಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನಿರಂತರವಾಗಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು.
ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಸಾಧಕ-ಬಾಧಕಗಳನ್ನು ಪರಿಶೀಲಿಸಲು ಹಿರಿಯ ಶಿಕ್ಷಣ ತಜ್ಞ ಡಾ. ಎಂ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಹೊರ ರಾಜ್ಯಗಳಲ್ಲಿನ ಭಾಷಾ ನೀತಿ ಮಾದರಿಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿತ್ತು.
ನವದೆಹಲಿ: ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ನಟಿ ದೀಪಿಕಾ ಪಡುಕೋಣೆ ಇದೀಗ ತಮ್ಮ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದು, ಇಂದು ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದಂಪತಿ ರಣವೀರ್ ಸಿಂಗ್ ಅವರ ಪೋಷಕರೊಂದಿಗೆ ದೇಗುಲಕ್ಕೆ ಆಗಮಿಸಿದ್ದರು.
ದೀಪಿಕಾ ಪಡುಕೋಣೆ ಕಿತ್ತಳೆ ಮತ್ತು ನೇರಳೆ ಬಣ್ಣದ ಕುರ್ತಾ ಸೆಟ್ ಧರಿಸಿದ್ದರೆ, ರಣವೀರ್ ಸಿಂಗ್ ನೇರಳೆ ಬಣ್ಣದ ಕುರ್ತಾ ಹಾಗೂ ಬಿಳಿ ಬಣ್ಣದ ಪ್ಯಾಂಟ್ (ಟ್ರಸರ್) ಧರಿಸಿದ್ದರು.
ಈ ದಂಪತಿ ಇತ್ತೀಚೆಗೆ ತಮ್ಮ ಬೇಬಿ ಬಂಪ್ ಫೋಟೋಶೂಟ್ನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಕುತೂಹಲಕಾರಿ ವಿಷಯವೆಂದರೆ, ಎರಡು ವರ್ಷಗಳ ಹಿಂದೆ ತಮ್ಮ ಮಗಳು 'ದುವಾ'ಳ ಜನನಕ್ಕೆ ಕೇವಲ ಎರಡು ದಿನಗಳ ಮೊದಲು, ದಂಪತಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದರು.
ರಣವೀರ್ ಸಿಂಗ್ ಇಂದು ಮುಂಜಾನೆ ಮುಂಬೈನ ಪ್ರಸಿದ್ಧ 'ಲಾಲ್ಬಾಗ್ಚಾ ರಾಜ'ನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಗುಲಾಬಿ ಬಣ್ಣದ ಕುರ್ತಾ ಧರಿಸಿದ್ದ ರಣವೀರ್ ಸಿಂಗ್, ದೇವತೆಯ ವಿಗ್ರಹದ ಮುಂದೆ ಕೈಮುಗಿದು 'ಬಪ್ಪ'ನ ಆಶೀರ್ವಾದ ಪಡೆಯುತ್ತಿರುವುದು ಕಂಡುಬಂತು. ಅವರ ಶಾಂತ, ಸಂಯಮದ ಮತ್ತು 'ಪಕ್ವ'ವಾದ ಸಾರ್ವಜನಿಕ ವರ್ತನೆಯು ನೆಟ್ಟಿಗರ ಗಮನ ಸೆಳೆಯಿತು.
ಸೆಪ್ಟೆಂಬರ್ 8 ರಂದು ತಮ್ಮ ಮೊದಲ ಮಗಳು 'ದುವಾ'ಳ ಎರಡನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಸುಂದರವಾದ ಕೌಟುಂಬಿಕ ಚಿತ್ರಗಳನ್ನು ಹಂಚಿಕೊಂಡರು. ಮಗಳು 'ದುವಾ' ಮತ್ತು ರಣವೀರ್ ಸಿಂಗ್ ಅವರ ಮುಖದ ಹೋಲಿಕೆಗಳು ಅಂತರ್ಜಾಲದಲ್ಲಿ ಹೆಚ್ಚು ಗಮನ ಸೆಳೆದಿವೆ.
View this post on Instagram 2ನೇ ಮಗುವಿನ ಬೇಬಿ ಬಂಪ್ ಪ್ರದರ್ಶಿಸಿದ ದೀಪಿಕಾ ಪಡುಕೋಣೆ: ಪುತ್ರಿ-ಪತಿ ಜೊತೆಗಿನ ಮುದ್ದಾದ Photosದೀಪಿಕಾ ಮತ್ತು ರಣವೀರ್ ತಮ್ಮ ಎರಡನೇ ಗರ್ಭಧಾರಣೆಯ ಸುದ್ದಿಯನ್ನು ಏಪ್ರಿಲ್ 19 ರಂದು ಹಂಚಿಕೊಂಡಿದ್ದರು.
ದೀಪಿಕಾ ಮತ್ತು ರಣವೀರ್ 2018ರ ನವೆಂಬರ್ 14ರಂದು ಇಟಲಿಯ ಲೇಕ್ ಕೋಮೋದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ವಿವಾಹವಾದರು. ದೀಪಿಕಾ ಅವರ ಕೊಂಕಣಿ ಸಂಪ್ರದಾಯ ಮತ್ತು ರಣವೀರ್ ಅವರ ಸಿಂಧಿ ಸಂಪ್ರದಾಯದಂತೆ ನಡೆಯಿತು.
ಈ ಜೋಡಿಯ ಪಯಣ 2013ರಲ್ಲಿ 'ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ' ಚಿತ್ರದ ಚಿತ್ರೀಕರಣದ ವೇಳೆ ಆರಂಭವಾಯಿತು. ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಅವರು 2015ರಲ್ಲಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡರು. ದೀಪಿಕಾ ಮತ್ತು ರಣವೀರ್ 2024ರ ಸೆಪ್ಟೆಂಬರ್ 8ರಂದು ತಮ್ಮ ಮೊದಲ ಮಗು 'ದುವಾ'ಳನ್ನು ಬರಮಾಡಿಕೊಂಡರು.
ಕೋಹಾತ್, ಸೆಪ್ಟೆಂಬರ್ 18: ಪಾಕಿಸ್ತಾನದ ಕೋಹಾತ್ನಲ್ಲಿ ಇಂದು (ಶುಕ್ರಾವರ) ಪ್ರಾರ್ಥನೆಯ ವೇಳೆ ಮಸೀದಿಯೊಂದರ ಸಮೀಪ ಸಂಭವಿಸಿದ ಭೀಕರ ಸ್ಫೋಟದಲ್ಲಿ 15 ಜನರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಐವರು ಸೈನಿಕರು ಕೂಡ ಸೇರಿದ್ದಾರೆ. ಈ ಘಟನೆ ತಿಳಿಯುತ್ತಿದ್ದಂತೆಯೇ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಈ ಸ್ಫೋಟವು ಕೋಹಾತ್ನ ಹಳೆಯ ಪೊಲೀಸ್ ಲೈನ್ಸ್ ಕಾಂಪೌಂಡ್ನ ಒಳಗಿರುವ ಮಸೀದಿಯ ಬಳಿ ಸಂಭವಿಸಿದೆ. ಘಟನೆಯ ಬೆನ್ನಲ್ಲೇ ಪೊಲೀಸ್ ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿದ್ದು, ತುರ್ತು ಕಾರ್ಯಾಚರಣೆ ಕೈಗೊಂಡಿವೆ.
ಬಾಂಬ್ ಸ್ಫೋಟದ ಬಗ್ಗೆ ಮಾಹಿತಿ ಪಡೆದ ನಂತರ ತಂಡಗಳು ಸ್ಥಳಕ್ಕೆ ಆಗಮಿಸಿವೆ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ರೆಸ್ಕ್ಯೂ 1122 ವಕ್ತಾರ ಬಿಲಾಲ್ ಅಹ್ಮದ್ ಫೈಜಿ ತಿಳಿಸಿದ್ದಾರೆ. ಜನರು ಮಸೀದಿಯಲ್ಲಿ ಇಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಸ್ಫೋಟವು ಎಷ್ಟು ಪ್ರಬಲವಾಗಿತ್ತೆಂದರೆ ಅದು ಇಡೀ ಪ್ರದೇಶವನ್ನು ನಡುಗಿಸಿತು. ಮಸೀದಿ ಸೇರಿದಂತೆ ಹತ್ತಿರದ ಹಲವಾರು ಕಟ್ಟಡಗಳು ಹಾನಿಗೊಳಗಾದವು. ಅನೇಕ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಭಾರತದ ನಿಷೇಧಿತ ಉಗ್ರ ಸಂಘಟನೆಯ ಪಟ್ಟಿಗೆ ಸೇರಿದ ಪಾಕಿಸ್ತಾನದ ಶಹಜಾದ್ ಭಟ್ಟಿ ನೆಟ್ವರ್ಕ್; ಸರ್ಕಾರ ಘೋಷಣೆ
ಸ್ಫೋಟದ ನಿಖರ ಸ್ವರೂಪ ಮತ್ತು ಕಾರಣ ತಕ್ಷಣವೇ ಸ್ಪಷ್ಟವಾಗಿಲ್ಲವಾದರೂ, ಅಧಿಕಾರಿಗಳು ಸಂಪೂರ್ಣ ಪ್ರದೇಶವನ್ನು ಮುತ್ತಿಗೆ ಹಾಕಿ ಪೊಲೀಸ್ ಲೈನ್ಸ್ ಸುತ್ತಮುತ್ತಲಿನ ರಸ್ತೆಗಳನ್ನು ವಾಹನ ಸಂಚಾರಕ್ಕೆ ಬಂದ್ ಮಾಡಿದ್ದಾರೆ. ಆರಂಭಿಕ ವರದಿಗಳಲ್ಲಿ ಮೃತರ ಸಂಖ್ಯೆಯ ಬಗ್ಗೆ ಬೇರೆ ಬೇರೆ ಅಂಕಿ-ಅಂಶಗಳು ಬಂದಿದ್ದವು. ಆದರೆ, ಸ್ಥಳೀಯ ಅಧಿಕಾರಿಗಳ ನಂತರದ ಮಾಹಿತಿಯಂತೆ, ಸ್ಫೋಟದಲ್ಲಿ ಮೃತರ ಸಂಖ್ಯೆ 15ಕ್ಕೇರಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
#PAKISTAN : KOHAT POLICE LINES MOSQUE BLAST
पाकिस्तान के खैबर पख्तूनख्वा के कोहाट में Police Lines के पास मस्जिद में जोरदार धमाका।
शुरुआती रिपोर्टों के अनुसार धमाका शुक्रवार की नमाज के दौरान हुआ।
धमाके के बाद इलाके में गोलीबारी की भी खबरें सामने आईं।
ताज़ा रिपोर्टों में कम से… pic.twitter.com/dQS3wzTnjB
— Abhishek Dwivedi /अभिषेक द्विवेदी (@Dubeyjilive) September 18, 2026
ಖೈಬರ್ ಪಖ್ತುನ್ಖ್ವಾ ಮುಖ್ಯಮಂತ್ರಿ ಸೊಹೈಲ್ ಅಫ್ರಿದಿ ಈ ಘಟನೆಯನ್ನು ಖಂಡಿಸಿದ್ದಾರೆ. ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡಿರುವುದು ವಿಷಾದಕರ ಮತ್ತು ಹೇಯ ಕೃತ್ಯ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸ್ಫೋಟದ ತನಿಖೆಗೆ ಆದೇಶಿಸಿ, ಸಂಬಂಧಿತ ಪೊಲೀಸ್ ಅಧಿಕಾರಿಗಳಿಂದ ವಿವರವಾದ ವರದಿ ಕೇಳಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಇಂಧನದ ಬಿಕ್ಕಟ್ಟಿಗೆ ಕಂಗೆಟ್ಟ ಪಾಕಿಸ್ತಾನ; ಅಧಿಕಾರಿಗಳ ವಿದೇಶ ಪ್ರವಾಸ ನಿಷೇಧ, ಮದುವೆಗೆ ಒಂದೇ ಖಾದ್ಯ
ರಕ್ಷಣಾ ಕಾರ್ಯಾಚರಣೆ ಚುರುಕು:
ಗಾಯಾಳುಗಳನ್ನು ತಕ್ಷಣವೇ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ರವಾನಿಸಲಾಗಿದ್ದು, ರೋಗಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈ ಸ್ಥಳದಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ, ಹಾಗೂ ಕೋಹಾತ್-ಹಂಗು ರಸ್ತೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂದ್ ಮಾಡಲಾಗಿದೆ. ತನಿಖಾ ಸಂಸ್ಥೆಗಳು ಸ್ಫೋಟಕ್ಕೆ ಕಾರಣವಾದ ಅಂಶಗಳ ಕುರಿತು ಶೋಧ ಆರಂಭಿಸಿದ್ದು, ತನಿಖೆ ಮುಂದುವರಿದಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿನ ಬಿಕ್ಕಟ್ಟು ತೀವ್ರಗೊಂಡಿದೆ. ನಿಜವಾದ ಟಿಎಂಸಿ ತಮ್ಮದೇ ಎಂದು ಹೋರಾಟ ನಡೆಸುತ್ತಿರುವ ಎರಡೂ ಬಣಗಳಿಗೆ ಚುನಾವಣಾ ಆಯೋಗವು ಹೊಸ ಹೆಸರು ಮತ್ತು ಚಿಹ್ನೆಯನ್ನು ಹಂಚಿಕೆ ಮಾಡಿದೆ.
ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಣಕ್ಕೆ 'ಮಮತಾ ಅಖಿಲ ಭಾರತ ತೃಣಮೂಲ ಕಾಂಗ್ರೆಸ್' ಎಂಬ ಹೆಸರು ನೀಡಿದ್ದು, ‘ಫುಟ್ಬಾಲ್ ಆಟಗಾರ’ನ ಚಿಹ್ನೆಯನ್ನು ನೀಡಿದೆ. ಹಾಗೆಯೇ, ರುತಬ್ರತಾ ಬ್ಯಾನರ್ಜಿ ಬಣಕ್ಕೆ ‘ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್’ ಎಂಬ ಹೆಸರು ಮತ್ತು ‘ಲಕೋಟೆ’ ಚಿಹ್ನೆಯನ್ನು ಹಂಚಿಕೆ ಮಾಡಿದೆ.
ಪಶ್ಚಿಮ ಬಂಗಾಳದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 6ರಂದು ಉಪಚುನಾವಣೆ ನಿಗದಿಯಾಗಿದೆ. ವಿವಾದದ ಭಾಗವಾಗಿರುವ ಎರಡೂ ಬಣಗಳು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಹೆಸರು ಮತ್ತು ಚಿಹ್ನೆಯನ್ನು ಬಳಕೆ ಮಾಡದಂತೆ ನಿರ್ಬಂಧಿಸಿ ಆಯೋಗವು ಗುರುವಾರ ರಾತ್ರಿ ಆದೇಶ ಹೊರಡಿಸಿತ್ತು.
ಅದರಂತೆ, ಮತಪತ್ರದಿಂದ ಎಐಟಿಸಿಯ ಹೆಸರು ಹಾಗೂ ಅದರ ‘ಹೂ ಮತ್ತು ಹುಲ್ಲು’ ಚಿಹ್ನೆಯನ್ನು ಆಯೋಗವು ತೆಗೆದುಹಾಕಿದೆ.
ಶುಕ್ರವಾರ ಬೆಳಿಗ್ಗೆ 11ರ ವೇಳೆಗೆ ತಮಗೆ ಬೇಕಾದ ಹೆಸರು, ಚಿಹ್ನೆಗೆ ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ತಾವು ಸೂಚಿಸುವ ಹೆಸರು ಎಐಟಿಸಿಯನ್ನು ಹೋಲುವಂತಿರಬೇಕು. ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ಲಭ್ಯವಿರುವ ಮುಕ್ತ ಚಿಹ್ನೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಿತ್ತು.
ಉಪ ಚುನಾವಣೆ: ಆಯೋಗಕ್ಕೆ ಹೊಸ ಹೆಸರು, ಚಿಹ್ನೆ ಸಲ್ಲಿಸಿದ ಮಮತಾ ನೇತೃತ್ವದ ಟಿಎಂಸಿಪಕ್ಷದ ಹೆಸರು, ಚಿಹ್ನೆ ಬಳಕೆಗೆ ಟಿಎಂಸಿಯ ಉಭಯ ಬಣಗಳಿಗೆ ಚುನಾವಣಾ ಆಯೋಗ ನಿರ್ಬಂಧಸೋಲಿನ ಬಳಿಕ ಒಡಕು
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಭಾರಿ ಮುಖಭಂಗ ಅನುಭವಿಸಿತ್ತು. 294 ಸದಸ್ಯ ಬಲದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 208 ಸ್ಥಾನಗಳಲ್ಲಿ ಜಯಿಸಿತ್ತು. ಟಿಎಂಸಿಗೆ 80 ಕಡೆ ಮಾತ್ರವೇ ಗೆಲುವು ದಕ್ಕಿತ್ತು. ಅದಾದ ನಂತರ, ಪಕ್ಷದಲ್ಲಿ ಒಡಕು ಮೂಡಿತ್ತು.
ಸುಮಾರು 58 ಬಂಡಾಯ ಶಾಸಕರು ರುತಬ್ರತಾ ಬ್ಯಾನರ್ಜಿ ಅವರನ್ನು ತಮ್ಮ ನಾಯಕ ಎಂದು ಘೋಷಿಸಿ, ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಇದಕ್ಕೆ ವಿಧಾನಸಭಾ ಸ್ಪೀಕರ್ ಅವರಿಂದ ಮಾನ್ಯತೆಯನ್ನೂ ಪಡೆದಿದ್ದರು.
ಬಂಡಾಯದ ಬಿಸಿ ವಿಧಾನಸಭೆ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ, ಸಂಸತ್ತಿನವರೆಗೂ ತಲುಪಿತು. ಟಿಎಂಸಿಯಿಂದ ಲೋಕಸಭೆಗೆ ಚುನಾಯಿತರಾಗಿರುವ 20 ಸಂಸದರು, ಪಕ್ಷವನ್ನು ತ್ರಿಪುರಾದ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್ಸಿಪಿಐ) ಜೊತೆ ವಿಲೀನಗೊಳಿಸುವುದಾಗಿ ಘೋಷಿಸಿದ್ದರು. ಸದನದಲ್ಲಿ ಪ್ರತ್ಯೇಕ ಮಾನ್ಯತೆ ನೀಡಬೇಕು ಎಂದೂ ಮನವಿ ಮಾಡಿದ್ದರು. ಇದು, ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ.
ನವದೆಹಲಿ: ಶಿಶು ಪೋಷಕಾಂಶ ಉತ್ಪನ್ನಗಳಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ನೆಸ್ಲೆ ಇಂಡಿಯಾ ಲಿಮಿಟೆಡ್ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಾನೂನು ಕ್ರಮ ಆರಂಭಿಸಿದೆ.
'ನಾನ್ ಎಕ್ಸೆಲ್ಲಾ ಪ್ರೋ ಸ್ಟೇಜ್ 1' (NAN Excella Pro Stage 1), 'ಲ್ಯಾಕ್ಟೋಜೆನ್ ಪ್ರೋ 1' (Lactogen Pro 1) ಉತ್ಪನ್ನಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ 'ನ್ಯಾನ್ ಎಕ್ಸೆಲ್ಲಾ ಪ್ರೋ' ಉತ್ಪನ್ನದ ಮೇಲಿದ್ದ ‘5HMOs‘ ಮತ್ತು ‘ವ್ಹೇ ಪ್ರೋಟೀನ್‘ ಹಾಗೂ 'ಲ್ಯಾಕ್ಟೋಜೆನ್ ಪ್ರೋ 1' ಉತ್ಪನ್ನದಲ್ಲಿ ‘ವ್ಹೇ ಪ್ರೋಟೀನ್ ಜೀರ್ಣಿಸಿಕೊಳ್ಳಲು ಸುಲಭ‘ ಎಂಬ ಪ್ರಚಾರದ ಹೇಳಿಕೆಗಳನ್ನು ಎಫ್ಎಸ್ಎಸ್ಎಐ ಪ್ರಶ್ನಿಸಿದೆ.
ಬಂಜಾರ ಶೈಲಿ ಬ್ಯಾಗ್ಗೆ ₹8.3 ಲಕ್ಷ; ಭಾರತೀಯ ಕಲೆಯ ನಕಲು ಮಾಡಿತೇ ‘ಫೆಂಡಿ’?ಶೀಘ್ರವೇ ಭಾರತದಲ್ಲಿ ಆ್ಯಪಲ್ ಪೇ ಆರಂಭ? ಆ್ಯಕ್ಸಿಸ್ ಬ್ಯಾಂಕ್ ಜತೆ ಒಪ್ಪಂದಶಿಶು ಪೋಷಕಾಂಶ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಚಾರದ ವಾಕ್ಯಗಳನ್ನು ಬಳಸುವುದು, ಆಹಾರ ಸುರಕ್ಷತಾ ಕಾಯ್ದೆ-2020 ಹಾಗೂ 1992ರ ಶಿಶು ಹಾಲಿನ ಪರ್ಯಾಯ ಉತ್ಪನ್ನಗಳ ನಿಯಂತ್ರಣ ಕಾಯ್ದೆಯಡಿ ನಿಷೇಧಿಸಲಾಗಿದೆ. ನೆಸ್ಲೆ ಸಂಸ್ಥೆಯು ಈ ನಿಯಮಗಳನ್ನು ಮೀರಿ ಪ್ರಚಾರ ಮಾಡಿದೆ ಎಂದು ಪ್ರಾಧಿಕಾರ ತಿಳಿಸಿದೆ.
ನೆಸ್ಲೆಯ ಫಾಲೋ-ಅಪ್ ಫಾರ್ಮುಲಾದ ಮಾದರಿ ಪರೀಕ್ಷಿಸಿದಾಗ ಅದರಲ್ಲಿ ಅಗತ್ಯಕ್ಕಿಂತ ಕಡಿಮೆ ಪ್ರಮಾಣದ 'ಬಯೋಟಿನ್' ಇರುವುದು ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದೆ.
ಈ ಉತ್ಪನ್ನಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ನೆಸ್ಲೆ ಇಂಡಿಯಾ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಪ್ರತ್ಯೇಕ ಪ್ರಕರಣ ದಾಖಲಿಸಿದೆ.
ಉಪ ಚುನಾವಣೆ: ಆಯೋಗಕ್ಕೆ ಹೊಸ ಹೆಸರು, ಚಿಹ್ನೆ ಸಲ್ಲಿಸಿದ ಮಮತಾ ನೇತೃತ್ವದ ಟಿಎಂಸಿಬಿಗ್ ಬಾಸ್ ದಯಮಾಡಿ ನನ್ನ ಹೊರಗೆ ಕಳುಹಿಸಿ: ಏಕಾಏಕಿ ಸಿಡಿದೆದ್ದ ಅವಿನಾಶ್ಷೇರು ಮಾರುಕಟ್ಟೆ ಮೇಲಿನ ಪ್ರಭಾವ
ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಬಿಎಸ್ಇ (BSE) ಮಾರುಕಟ್ಟೆಯಲ್ಲಿ ನೆಸ್ಲೆ ಇಂಡಿಯಾ ಷೇರುಗಳ ಮೌಲ್ಯ ಸುಮಾರು ಶೇ 2ರಷ್ಟು ಕುಸಿತ ಕಂಡು, ₹1,345.45 ತಲುಪಿದೆ.
-ವ್ಯಾಪಾರಿಗಳ ವಸ್ತು ವಶಪಡಿಸಿಕೊಳ್ಳಲು ಸೂಚನೆ
ಬೆಂಗಳೂರು: ಪುಟ್ಪಾತ್ (Footpath) ತೆರವು ಆದ ಜಾಗದಲ್ಲಿ ಮತ್ತೆ ವ್ಯಾಪಾರ ಮಾಡುವ ವ್ಯಾಪಾರಸ್ಥರ ವಸ್ತುಗಳನ್ನ ವಶಪಡಿಸಿಕೊಂಡು, ಅವರ ಮೇಲೆ ಎಫ್ಐಆರ್ (FIR) ದಾಖಲು ಮಾಡೋದಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ (GBA) ಸಚಿವ ಕೃಷ್ಣ ಬೈರೇಗೌಡ (Krishna Byregowda) ಸೂಚನೆ ನೀಡಿದ್ದಾರೆ.
ಬೀದಿಬದಿ ವ್ಯಾಪಾರಿಗಳಿಂದ ಪಾದಚಾರಿ ಮಾರ್ಗಗಳು ಮರು ಒತ್ತುವರಿಯಾಗದಂತೆ ನಿರಂತರವಾಗಿ ನಿಗಾ ವಹಿಸಬೇಕು, ಒಂದು ವೇಳೆ ವ್ಯಾಪಾರಿಗಳು ಒತ್ತುವರಿಗೆ ಮುಂದಾದರೆ ಅವರ ವಸ್ತುಗಳನ್ನು ವಶಕ್ಕೆ ಪಡೆದು ದಂಡ ವಿಧಿಸಬೇಕು ಹಾಗೂ ಎಫ್ಐಆರ್ ದಾಖಲಿಸುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಫೋನ್ ರಿಸೀವ್ ಮಾಡ್ಲಿಲ್ಲ ಅಂತ ಪತ್ನಿ ಕೊಲೆ; ಕುದಿಯೋ ಎಣ್ಣೆ ಸುರಿದು ಸಾಕ್ಷ್ಯನಾಶಕ್ಕೆ ಯತ್ನ
ಐದೂ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ 1,373.32 ಕಿ.ಮೀ ರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸಿ, ಪಾದಾಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ. ಆದರೆ, ನಗರದ ಹಲವೆಡೆ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ್ದರೂ, ಸಹ ಕೆಲವು ಭಾಗಗಳಲ್ಲಿ ವ್ಯಾಪಾರಿಗಳು ಮತ್ತೆ ಒತ್ತುವರಿಗೆ ಮುಂದಾಗಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗುತ್ತಿದೆ. ಇದು ನಿಜಕ್ಕೂ ಕಳವಳಕಾರಿಯಾಗಿದ್ದು, ಪ್ರತಿ ನಗರಪಾಲಿಕೆ ವ್ಯಾಪ್ತಿಯಲ್ಲಿ ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳ ಸಮನ್ವಯದೊಂದಿಗೆ ಜಂಟಿ ಟಾಸ್ಕ್ಫೋರ್ಸ್ ರಚಿಸಬೇಕು ಎಂದಿದ್ದಾರೆ.
ತೆರವುಗೊಳಿಸಿದ ಪಾದಚಾರಿ ಮಾರ್ಗಗಳಲ್ಲಿ ನಿಯಮಿತ ಹಾಗೂ ಅನಿರೀಕ್ಷಿತ ಪರಿಶೀಲನೆ ನಡೆಸಿ, ಮರು ಒತ್ತುವರಿ ಕಂಡುಬಂದ ಕೂಡಲೇ ಸ್ಥಳದಲ್ಲೇ ಕ್ರಮಕೈಗೊಳ್ಳುವ ವ್ಯವಸ್ಥೆ ರೂಪಿಸಬೇಕು. ಜೊತೆಗೆ ಮರು ಒತ್ತುವರಿ ಪ್ರಕರಣಗಳನ್ನು ತಕ್ಷಣ ಗುರುತಿಸಿ, ಫೋಟೋ ಹಾಗೂ ಜಿಯೋ-ಟ್ಯಾಗ್ ಮಾಹಿತಿಯೊಂದಿಗೆ ವರದಿ ಮಾಡುವ ವ್ಯವಸ್ಥೆ ಮಾಡಬೇಕು. ಮಾರ್ಷಲ್ಗಳು ಹಾಗೂ ಬೀಟ್ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ನಿಯಮಿತವಾಗಿ ಪರಿಶೀಲನೆ ನಡೆಸಬೇಕು. ಮರು ಒತ್ತುವರಿಗೆ ಎಫ್ಐಆರ್, ವಸ್ತುಗಳನ್ನು ವಶಕ್ಕೆ ಪಡೆದು ದಂಡ ಹಾಕೋದಕ್ಕೆ ಸೂಚಿಸಿದ್ದಾರೆ.ಇದನ್ನೂ ಓದಿ: ನಮಾಜ್ ವೇಳೆ ಪಾಕಿಸ್ತಾನದ ಮಸೀದಿಯಲ್ಲಿ ಭಾರೀ ಸ್ಫೋಟ – 16 ಮಂದಿ ದುರ್ಮರಣ
ನಟ ಉಪೇಂದ್ರ ಅವರು ಇಂದು (ಸೆಪ್ಟೆಂಬರ್ 18) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಅವರ ಮನೆ ಬಳಿ ಬಂದು ಜನ್ಮದಿನಕ್ಕೆ ವಿಶ್ ಮಾಡಿದ್ದಾರೆ. ನೋಟಿನ ಹಾರವನ್ನು ಹಾಕಲಾಗಿದೆ. ಬಗೆಬಗೆಯ ಕೇಕ್ ತಂದು ಕತ್ತರಿಸಲಾಗಿದೆ. ಇದೇ ವೇಳೆ, ಉಪೇಂದ್ರ ನಟಿಸಲಿರುವ ಹೊಸ ಸಿನಿಮಾದ ಪೋಸ್ಟರ್ ಅನಾವರಣ ಮಾಡಲಾಗಿದೆ. ‘ನೆಕ್ಸ್ಟ್ ಲೆವೆಲ್’ ಎಂಬುದು ಈ ಚಿತ್ರದ ಶೀರ್ಷಿಕೆ. ಅರವಿಂದ್ ಕೌಶಿಕ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ತರುಣ್ ಶಿವಪ್ಪ ಮತ್ತು ಮಾನಸಾ ತರುಣ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಅಭಿಮಾನಿಗಳ ಸಮ್ಮುಖದಲ್ಲಿ ಈ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ. ‘ಈ ದಿನವನ್ನು ನಾನು ಜನ್ಮದಿನ ಅಂತ ಕರೆಯಲ್ಲ. ಫ್ಯಾನ್ಸ್ ಡೇ ಎನ್ನುತ್ತೇನೆ. ಚಿಕ್ಕ ವಯಸ್ಸಿನಲ್ಲಿ ನಾವು ಬರ್ತ್ಡೇ ಮಾಡಿಕೊಂಡವರೇ ಅಲ್ಲ. ಚಿತ್ರರಂಗಕ್ಕೆ ಬಂದ ಮೇಲೆ ಈ ದಿನವನ್ನು ಜ್ಞಾಪಿಸಿದ್ದೇ ಅಭಿಮಾನಿಗಳು’ ಎಂದು ಉಪೇಂದ್ರ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ನವದೆಹಲಿ: 'ಗೊಂಡಲ್' (Gondhal) ಎಂಬ ಮರಾಠಿ ಥ್ರಿಲ್ಲರ್ ಚಲನಚಿತ್ರ 2027ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ ಎಂದು 'ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ' (FFI) ಶುಕ್ರವಾರ ಘೋಷಿಸಿದೆ.
ಸಂತೋಷ್ ದವಖರ್ ನಿರ್ದೇಶನದ ಈ ಚಿತ್ರ 99ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ 'ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ' (Best International Feature) ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿದೆ. ಈ ಚಲನಚಿತ್ರ ನಿರ್ಮಾಪಕರು 'ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ' (IFFI) 2025ರಲ್ಲಿ 'ಸಿಲ್ವರ್ ಪೀಕಾಕ್ ಪ್ರಶಸ್ತಿ'ಯನ್ನು ಗೆದ್ದಿದ್ದರು.
ಮರಾಠಿ ಕುರಿತ ಹೇಳಿಕೆ: ಮಹಾರಾಷ್ಟ್ರ ಸಚಿವರನ್ನು ಮುಜುಗರಕ್ಕೆ ಸಿಲುಕಿಸಿದ ಬಾಲಿವುಡ್ ನಟ ಸಂಜಯ್ ದತ್!ಈ ಆಯ್ಕೆ ಸಮಿತಿಯಲ್ಲಿ ಪಿ. ಶೇಷಾದ್ರಿ, ವಿಜಯ್ ಪಾಟ್ಕರ್, ಹುಟು ಕನೋಡಿಯಾ, ಶಾಂತಿ ಕುಮಾರ್, ಸಂದೀಪ್ ಪರಾಶರ್, ಸಂಜಯ್ ಪಾಟೀಲ್, ಸಾಬು ಜೋಸೆಫ್, ಅನಿಲ್ ಥಾಮಸ್, ವಿವೇಕ್ ವಸ್ವಾನಿ, ಬಿಜೋನ್ ದಾಸ್ಗುಪ್ತ, ಹಾಸನ್, ವಸನ್ ಮತ್ತು ತನಿಷ್ಠಾ ಚಟರ್ಜಿ ಅವರು ಸದಸ್ಯರಾಗಿದ್ದರು.
ಒಟ್ಟು 33 ಚಲನಚಿತ್ರಗಳನ್ನು ಪರಿಶೀಲನೆಗೆ ಸಲ್ಲಿಸಲಾಗಿತ್ತು. ಇವುಗಳಲ್ಲಿ 14 ಹಿಂದಿ, ತಲಾ ನಾಲ್ಕು ಮರಾಠಿ, ತೆಲುಗು ಮತ್ತು ಗುಜರಾತಿ, ಮೂರು ತಮಿಳು ಹಾಗೂ ತಲಾ ಒಂದು ಮಲಯಾಳಂ ಮತ್ತು ನಾಗಾಮೀಸ್ ಭಾಷೆಯ ಚಿತ್ರಗಳಿದ್ದವು. ಇದರಲ್ಲಿ ಒಂದು ಮೂಕ ಚಿತ್ರವೂ ಸೇರಿತ್ತು.
ಕಳೆದ ವರ್ಷ, ನೀರಜ್ ಘಯವಾನ್ ನಿರ್ದೇಶನದ ಕೋವಿಡ್-ಪರಿಣಾಮದ ಕುರಿತಾದ 'ಹೋಮ್ಬೌಂಡ್' (Homebound) ಚಿತ್ರವು ಆಸ್ಕರ್ಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿತ್ತು. ಇಶಾನ್ ಖಟ್ಟರ್ ಮತ್ತು ವಿಶಾಲ್ ಜೆಟ್ವಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರವು ಆಸ್ಕರ್ನ 'ದೀರ್ಘ ಪಟ್ಟಿ'ಯನ್ನು (long list) ತಲುಪುವಲ್ಲಿ ವಿಫಲವಾಗಿತ್ತು.
99ನೇ ಆವೃತ್ತಿಯ ಅಕಾಡೆಮಿ ಪ್ರಶಸ್ತಿ ಸಮಾರಂಭ 2027ರ ಮಾರ್ಚ್ 14ರಂದು ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆಯಲಿದೆ.
ದಶಕಗಳ ಅಂತರದಲ್ಲಿ, ದೆಹಲಿಯ ಒಂದೇ ಆಸ್ಪತ್ರೆಯಲ್ಲಿ ಮೂರು ಮಗು ಹುಟ್ಟುತ್ತವೆ.
ಮೊದಲ ಮಗು 1970 ರಲ್ಲಿ ಜನಿಸುತ್ತದೆ. ಅಂದಿನ ಕಾನೂನಿನ ಪ್ರಕಾರ, ಆ ಮಗುವಿನ ಪೋಷಕರು ಯಾರು ಅಥವಾ ಎಲ್ಲಿಂದ ಬಂದಿದ್ದಾರೆ ಎಂಬುದನ್ನು ಪರಿಗಣಿಸದೆ, ಹುಟ್ಟಿದ ತಕ್ಷಣವೇ ಅದು ಭಾರತೀಯ ಪೌರತ್ವವನ್ನು ಪಡೆಯುತ್ತದೆ.
ಎರಡನೇ ಮಗು 1995 ರಲ್ಲಿ ಜನಿಸುತ್ತದೆ. ಅಷ್ಟರಲ್ಲಿ ಕಾನೂನು ಬದಲಾಗಿರುತ್ತದೆ. ಮಗುವಿನ ತಂದೆ-ತಾಯಿಯಲ್ಲಿ ಕನಿಷ್ಠ ಒಬ್ಬರಾದರೂ ಈಗಾಗಲೇ ಭಾರತದ ಪೌರರಾಗಿದ್ದರೆ ಮಾತ್ರ ಆ ಮಗುವಿಗೆ ಪೌರತ್ವ ಸಿಗುತ್ತದೆ.
ಮೂರನೇ ಮಗು 2010 ರಲ್ಲಿ ಜನಿಸುತ್ತದೆ. ಈ ಬಾರಿ ನಿಯಮ ಇನ್ನಷ್ಟು ಬಿಗಿಯಾಗಿದೆ. ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಪೌರರಾಗಿರಬೇಕು, ಅಥವಾ ಒಬ್ಬರು ಪೌರರಾಗಿದ್ದು ಇನ್ನೊಬ್ಬರು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿಲ್ಲ ಎಂದು ದೃಢಪಟ್ಟಿರಬೇಕು.
ಇದನ್ನೂ ಓದಿ: ಒಂದು ದೇಶ, ಬಹುವಾಸ್ತವಗಳು; ಭಾರತದೊಳಗೆ ಇವೆ ಹಲವು ಭಾರತಗಳು
ಒಂದೇ ಆಸ್ಪತ್ರೆ. ಒಂದೇ ನಗರ. ಆದರೆ ‘ಭಾರತೀಯ’ ಎಂಬ ಒಂದೇ ಗುರಿಯನ್ನು ತಲುಪಲು ಮೂರು ಸಂಪೂರ್ಣ ಭಿನ್ನವಾದ ಕಾನೂನು ಮಾರ್ಗಗಳು!
ನಮ್ಮಲ್ಲಿ ಹೆಚ್ಚಿನವರು ಇದರ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ, ಏಕೆಂದರೆ ನಮಗೆ ಆ ಅಗತ್ಯವೇ ಬಂದಿರುವುದಿಲ್ಲ. ಬಹುತೇಕ ಭಾರತೀಯರಿಗೆ ಪೌರತ್ವ ಎಂಬುದು ನಾವು ಬೆಳೆದ ವಾತಾವರಣದಷ್ಟೇ ಸಹಜವಾದದ್ದು. ಆದರೆ ಎಲ್ಲೋ ಒಂದು ನಿರ್ದಿಷ್ಟ ಅರ್ಜಿ ನಮೂನೆಯಲ್ಲಿನ ದಿನಾಂಕವು, ನಮ್ಮಲ್ಲಿ ಪ್ರತಿಯೊಬ್ಬರೂ ಪೌರತ್ವಕ್ಕೆ ಹೇಗೆ ಅರ್ಹರಾಗುತ್ತೇವೆ ಎಂಬುದನ್ನು ನಿಖರವಾಗಿ ನಿರ್ಧರಿಸಿದೆ. ಆ ಅರ್ಜಿ ನಮೂನೆಯನ್ನು ಮೂಲತಃ ಯಾವುದರ ಆಧಾರದ ಮೇಲೆ ನಿರ್ಮಿಸಲಾಗಿದೆ ಎಂದು ತಿಳಿದುಕೊಳ್ಳುವುದು ಅಗತ್ಯ.
ಇದರ ಮೂಲ ಬಿಂದು ಇರುವುದು ಸ್ವತಃ ನಮ್ಮ ಸಂವಿಧಾನದಲ್ಲಿ — ಜನವರಿ 26, 1950 ರಂದು ಅಳವಡಿಸಿಕೊಂಡ ವಿಧಿಗಳು (Articles) 5 ರಿಂದ 11 ರವರೆಗೆ. ಈ ವಿಧಿಗಳನ್ನು ಎಂದಿಗೂ ಶಾಶ್ವತ ವ್ಯವಸ್ಥೆಯಾಗಿ ಮಾಡಲು ಉದ್ದೇಶಿಸಿರಲಿಲ್ಲ. ಲಕ್ಷಾಂತರ ಜನರನ್ನು ಹೊಸದಾಗಿ ರಚಿಸಲಾದ ಗಡಿಯಾದ್ಯಂತ ಚದುರಿಸಿದ ದೇಶ ವಿಭಜನೆಯ ನಂತರ, ಸಂವಿಧಾನ ಜಾರಿಗೆ ಬಂದ ದಿನದಂದು ಯಾರು ಪೌರರಾಗಿದ್ದರು ಎಂಬುದನ್ನು ಇತ್ಯರ್ಥಪಡಿಸುವ ಒಂದು ಬಾರಿಯ ನಿರ್ಧಾರ ಅದಾಗಿತ್ತು. ತದನಂತರ, ವಿಧಿ 11 ಪ್ರಸ್ತುತ ನಿಯಮಾವಳಿಗಳನ್ನು ರಚಿಸುವ ನಿರಂತರ ಜವಾಬ್ದಾರಿಯನ್ನು ಸಂಸತ್ತಿಗೆ ನೀಡಿತು. ಸಂಸತ್ತು ಆ ಕೆಲಸವನ್ನು 1955 ರಲ್ಲಿ ‘ಪೌರತ್ವ ಕಾಯ್ದೆ’ಯ (Citizenship Act) ಮೂಲಕ ಮಾಡಿತು ಮತ್ತು ಅಂದಿನಿಂದ ಹಲವಾರು ಬಾರಿ ಅದನ್ನು ತಿದ್ದುಪಡಿ ಮಾಡಿದೆ — ಮುಖ್ಯವಾಗಿ 1986, 2003 ಮತ್ತು 2019 ರಲ್ಲಿ.
ಆ ನಿಯಮಾವಳಿಯು ಭಾರತೀಯ ಪೌರತ್ವವನ್ನು ಪಡೆಯಲು ಐದು ಬಾಗಿಲುಗಳನ್ನು ಒದಗಿಸುತ್ತದೆ: ಜನನದ ಮೂಲಕ (by birth), ವಂಶಪಾರಂಪರ್ಯದ ಮೂಲಕ (by descent), ನೋಂದಣಿಯ ಮೂಲಕ (by registration), ದೇಶೀಕರಣದ ಮೂಲಕ (by naturalisation) ಅಥವಾ ಹೊಸ ಪ್ರದೇಶವನ್ನು ಭಾರತಕ್ಕೆ ಸೇರಿಸಿಕೊಳ್ಳುವ ಮೂಲಕ (by incorporation of territory).
ಜನನದ ನಿಯಮಗಳು ಹೆಚ್ಚು ಬದಲಾವಣೆಗೆ ಒಳಪಟ್ಟಿವೆ. ಅದನ್ನು ನಮ್ಮ ಮೂರು ಮಕ್ಕಳು ಅನುಭವಿಸಿದ ರೀತಿಯಲ್ಲೇ ಕಾಣಬಹುದು — ಆರಂಭಿಕ ದಶಕಗಳಲ್ಲಿ ಇದ್ದ ಮುಕ್ತ ‘ಜಸ್ ಸೋಲಿ’ (jus soli – ಹುಟ್ಟಿದ ಸ್ಥಳದ ಆಧಾರ) ಮಾನದಂಡದಿಂದ, ಇಂದಿನ ಹೆಚ್ಚು ಷರತ್ತುಬದ್ಧ ವ್ಯವಸ್ಥೆಯವರೆಗೆ, ಇದು ‘ಜಸ್ ಸ್ಯಾಂಗ್ವಿನಿಸ್’ (jus sanguinis – ರಕ್ತಸಂಬಂಧ/ಪೋಷಕರ ಪೌರತ್ವದ ಆಧಾರ) ನಿಯಮಕ್ಕೆ ಹತ್ತಿರದಲ್ಲಿದೆ. ಅಂದರೆ ನೀವು ಎಲ್ಲೋ ಜನಿಸಿದ ತಕ್ಷಣ ಪೌರತ್ವ ಸಿಗುವುದಿಲ್ಲ, ಬದಲಿಗೆ ನಿಮ್ಮ ಪೋಷಕರ ಪೌರತ್ವದ ಸ್ಥಿತಿಯನ್ನು ಆಧರಿಸಿ ನಿರ್ಧರಿಸಲಾಗುತ್ತದೆ.
ಈ ಉದ್ದಕ್ಕೂ ಒಂದು ತತ್ವವು ಬದಲಾಗದೆ ಉಳಿದಿದೆ: ಭಾರತವು ಏಕ ಪೌರತ್ವವನ್ನು (Single Citizenship) ಮಾತ್ರ ಗುರುತಿಸುತ್ತದೆ. ಬೇರೆ ದೇಶಗಳಲ್ಲಿ ಒಬ್ಬ ವ್ಯಕ್ತಿಯು ಅಮೆರಿಕ ಮತ್ತು ಬ್ರಿಟನ್ ಎರಡೂ ಪಾಸ್ಪೋರ್ಟ್ಗಳನ್ನು ಹೊಂದಿರುವಂತೆ, ಇಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲ. ಒಬ್ಬ ಭಾರತೀಯ ಪೌರನು ಸ್ವಇಚ್ಛೆಯಿಂದ ಮತ್ತೊಂದು ದೇಶದ ಪೌರತ್ವವನ್ನು ಪಡೆದರೆ, ಭಾರತೀಯ ಕಾನೂನು ಅವರ ಭಾರತೀಯ ಪೌರತ್ವವನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸುತ್ತದೆ. ಇದೇ ಕಾರಣಕ್ಕೆ, ‘ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ’ (OCI) ಕಾರ್ಡ್ನಲ್ಲಿ “ಸಿಟಿಜನ್” (ಪೌರ) ಎಂಬ ಪದವಿದ್ದರೂ, ಅದು ನಿಜವಾದ ಪೌರತ್ವವಲ್ಲ. ಇದು ಆಜೀವ ವೀಸಾ ಮತ್ತು ಕೆಲವು ಪ್ರಾಯೋಗಿಕ ಹಕ್ಕುಗಳನ್ನು ನೀಡುತ್ತದೆಯೇ ಹೊರತು ಮತದಾನದ ಹಕ್ಕು, ಪಾಸ್ಪೋರ್ಟ್ ಅಥವಾ ಸಂವಿಧಾನದ ಅಡಿಯಲ್ಲಿ ಪೂರ್ಣ ಪ್ರಮಾಣದ ಸ್ಥಾನಮಾನವನ್ನು ನೀಡುವುದಿಲ್ಲ.
ಇದನ್ನೂ ಓದಿ: ಸರ್ಕಾರಕ್ಕೆ ಪಾವತಿಸುವ ಜನರ ತೆರಿಗೆ ಹಣ ವಾಸ್ತವದಲ್ಲಿ ಎಲ್ಲಿಗೆ ಹೋಗುತ್ತದೆ, ಏನಾಗುತ್ತದೆ? ಇಲ್ಲಿದೆ ಅದರ ಕುತೂಹಲಕಾರಿ ಪಯಣ
ಇತ್ತೀಚಿನ ಪ್ರಮುಖ ಬದಲಾವಣೆಯೆಂದರೆ 2019 ರ ‘ಪೌರತ್ವ ತಿದ್ದುಪಡಿ ಕಾಯ್ದೆ’ (CAA). ಇದು ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ 2014 ರ ಅಂತ್ಯದ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ವಲಸಿಗರಿಗೆ ಪೌರತ್ವ ಪಡೆಯಲು ವೇಗದ ಮಾರ್ಗವನ್ನು ತೆರೆಯಿತು. ಇದು ಇತ್ತೀಚಿನ ಭಾರತೀಯ ರಾಜಕೀಯದಲ್ಲಿ ಅತ್ಯಂತ ಚರ್ಚಿತ ವಿಷಯಗಳಲ್ಲಿ ಒಂದಾಗಿದೆ. ಆಶ್ರಯವಿಲ್ಲದ ಪೀಡಿತ ಅಲ್ಪಸಂಖ್ಯಾತರಿಗೆ ಇದು ಸುರಕ್ಷಿತ ಕಾನೂನು ಮಾರ್ಗವನ್ನು ಒದಗಿಸುತ್ತದೆ ಎಂದು ಬೆಂಬಲಿಸುವವರು ವಾದಿಸುತ್ತಾರೆ. ಆದರೆ, ಧರ್ಮವನ್ನು ಆಧಾರವಾಗಿಟ್ಟುಕೊಂಡು ಪೌರತ್ವ ನೀಡುವುದು ಸಂವಿಧಾನದ ಸಮಾನತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ವಿಮರ್ಶಕರು ವಾದಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇಬ್ಬರೂ ಒಂದೇ ಸಂವಿಧಾನವನ್ನು ವಿಭಿನ್ನವಾಗಿ ಅರ್ಥೈಸಿಕೊಂಡು ತಮ್ಮ ವಾದಗಳನ್ನು ಮಂಡಿಸುತ್ತಿದ್ದಾರೆ. ಆ ಚರ್ಚೆ ಇಂದಿಗೂ ಇತ್ಯರ್ಥವಾಗಿಲ್ಲ, ಮತ್ತು ಅದನ್ನು ಇತ್ಯರ್ಥಪಡಿಸುವುದು ಈ ಲೇಖನದ ಉದ್ದೇಶವಲ್ಲ.
ಎಲ್ಲಾ ತಿದ್ದುಪಡಿಗಳು ಮತ್ತು ವಾದಗಳ ನಡುವೆ ಗಮನಿಸಬೇಕಾದ ಮೂಲಭೂತ ಸತ್ಯವೇನೆಂದರೆ: ಭಾರತದಲ್ಲಿ ಪೌರತ್ವವನ್ನು ಎಂದಿಗೂ ಕೇವಲ ಜನಾಂಗೀಯ ಅಥವಾ ಧಾರ್ಮಿಕ ಪರಂಪರೆಯಾಗಿ ಹಸ್ತಾಂತರಿಸಲಾಗಿಲ್ಲ. ಅದನ್ನು ಒಂದು ಕಾನೂನಾಗಿ ಬರೆಯಲಾಗಿದೆ, ಮರುಬರೆಯಲಾಗಿದೆ ಮತ್ತು ಚರ್ಚಿಸಲಾಗಿದೆ; ಅದಕ್ಕಾಗಿಯೇ ಅಧಿಕಾರ ನೀಡಿದ ಸಂವಿಧಾನದ ಅಡಿಯಲ್ಲಿ ಸಂಸತ್ತು ಈ ಕಾರ್ಯವನ್ನು ಮಾಡಿದೆ. ಇದು ಹಿಂದೆ ಬದಲಾಗಿದೆ. ಮುಂದೆ ಮತ್ತೆ ಬದಲಾಗಬಹುದು.
ಈಗಲೂ ಎಲ್ಲೋ ಒಂದು ಆಸ್ಪತ್ರೆಯಲ್ಲಿ ಮತ್ತೊಂದು ಮಗು ಜನಿಸುತ್ತಿದೆ — ನಮ್ಮಲ್ಲಿ ಯಾರೂ ಬರೆಯದ ಮತ್ತು ನಮ್ಮಲ್ಲಿ ಕೆಲವೇ ಜನರು ಮಾತ್ರ ಓದಿರುವ ನಿಯಮದ ಪ್ರಕಾರ ಆ ಮಗು ಭಾರತದ ಪೌರನಾಗುತ್ತಿದೆ.
ಆ ನಿಯಮದ ಬಗ್ಗೆ ಮುಂದಿನ ಅಭಿಪ್ರಾಯಕ್ಕೆ ಬರುವ ಮೊದಲು, ಕನಿಷ್ಠ ಒಮ್ಮೆಯಾದರೂ ಅದನ್ನು ಓದುವುದು ಒಳ್ಳೆಯದು.
ಆಧಾರಗಳು: ಭಾರತದ ಸಂವಿಧಾನ, ವಿಧಿಗಳು 5-11; ಪೌರತ್ವ ಕಾಯ್ದೆ, 1955, ಮತ್ತು ಅದರ 1986, 2003 ಮತ್ತು 2019 ರ ತಿದ್ದುಪಡಿಗಳು; ಗೃಹ ಸಚಿವಾಲಯ, ಭಾರತ ಸರ್ಕಾರ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಗ್ಬಾಸ್ ಸೀಸನ್ 13 ಎರಡನೇ ವಾರದ ಅಂತ್ಯದಲ್ಲಿದೆ. ಬಿಗ್ ಬಾಸ್ ಅಭ್ಯರ್ಥಿಗಳಿಗೆ ಈ ಸೀಸನ್ ಮೊದಲ ಕ್ಯಾಪ್ಟನ್ಸಿ ಟಾಸ್ಕ್ ನೀಡಿದ್ದಾರೆ. ಸಂಗೀತಾ ಹಾಗೂ ಆಸಿಯಾ ನಡುವೆ ಕ್ಯಾಪ್ಟನ್ ಪಟ್ಟಕ್ಕಾಗಿ ಪೈಪೋಟಿ ನಡೆದಿದೆ.
View this post on Instagramಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ಸಂಗೀತಾ ಹಾಗೂ ಆಸಿಯಾ ಕ್ಯಾಪ್ಟನ್ಸಿ ಓಟದಲ್ಲಿದ್ದಾರೆ. ಪ್ರೋಮೊದಲ್ಲಿ, ’ಸಹಾಯಕರು ಏಣಿಗೆ ಕಟ್ಟಿರುವ ಹಗ್ಗದಿಂದ ಅಭ್ಯರ್ಥಿ ಬೀಳದಂತೆ ಸಂಭಾಳಿಸಬೇಕು. ಅಂತಿಮ ಸ್ಥಾನದಲ್ಲಿರುವ ಬಿಲ್ಲೆಗಳ ಚೀಲವನ್ನು ಪಡೆದು ಮರಳಿ ಬರಬೇಕು. ಎಲ್ಲಾ ಬಿಲ್ಲೆಗಳನ್ನು ಸಾಲಾಗಿ ಜೋಡಿಸಿ, ಎದುರಾಳಿ ಅಭ್ಯರ್ಥಿಯ ಫೋಟೊ ಇರುವ ಬಿಲ್ಲೆಗಳು ಈಜು ಕೋಳಕ್ಕೆ ಬೀಳಿಸುವವರು ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾಗಲಿದ್ದಾರೆ’ ಎಂದು ಹೇಳಲಾಗಿದೆ.
ಸದ್ಯ ಪ್ರೋಮೊದಲ್ಲಿ ಸಂಗೀತಾ ಹಾಗೂ ಆಸಿಯಾ ಇಬ್ಬರು ಕ್ಯಾಪ್ಟನ್ಸಿ ಓಟದಲ್ಲಿ ಮುಂಚೂಣಿಯಲ್ಲಿ ಇರುವ ಹಾಗೇ ತೋರಿಸಲಾಗಿದೆ. ಇಂದು (ಸೆ.18) ರಾತ್ರಿ ಪ್ರಸಾರವಾಗುವ ಸಂಚಿಕೆಯಲ್ಲಿ ಈ ಸೀಸನ್ನ ಮೊದಲ ಮಹಿಳಾ ಕ್ಯಾಪ್ಟನ್ ಯಾರಾಗಲಿದ್ದಾರೆ ಗೊತ್ತಾಗಲಿದೆ.
ಕಳೆದ ವಾರ ಪ್ರಥಮಾ ಪ್ರಸಾದ್ ಹೊರ ಹೋಗಿದ್ದರು. ಬಳಿಕ ಅನಾರೋಗ್ಯದ ಕಾರಣದಿಂದ ಓಂ ಪ್ರಕಾಶ್ ಅವರು ಹೊರ ಬರಬೇಕಾಯಿತು. ಈಗ ಬಿಗ್ ಬಾಸ್ ಮನೆಯಲ್ಲಿ 14 ಮಂದಿ ಉಳಿದುಕೊಂಡಿದ್ದಾರೆ.
ಮಂಗಳೂರು, (ಸೆಪ್ಟೆಂಬರ್ 18): ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆದಿದ್ದು, ಕರಾವಳಿಗರ ಹಲವು ಬೇಡಿಕೆಗಳು ಈಡೇರುವ ಸಾಧ್ಯತೆಗಳಿವೆ. ನಗರದ ಪಡೀಲ್ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ದಲ್ಲಿ ನಡೆಯಲಿರುವ ಐತಿಹಾಸಿಕ ಸಚಿವ ಸಂಪುಟ ಸಭೆ ಅಂತ್ಯವಾಗಿದ್ದು, ಉಡುಪಿ, ಮಂಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಹಾಗಾದ್ರೆ, ಸಭೆಯಲ್ಲಿ ಏನೆಲ್ಲಾ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎನ್ನುವುದನ್ನು ಸ್ವತಃ ಸಿಎಂ ಡಿಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಳ್ಳುತ್ತಿರುವುದನ್ನು ನೇರ ಪ್ರಸಾರದಲ್ಲಿ ನೋಡಿ.
ನವದೆಹಲಿ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಸೋಲಿನ ನಂತರ ಒಡೆದು ಎರಡು ಹೊಳಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಜೋಡಾ ಘಾಸ್ ಫೂಲ್' (ಹುಲ್ಲು ಮತ್ತು ಎರಡು ಹೂವುಗಳು) ಚಿಹ್ನೆಯನ್ನು ಕೇಂದ್ರ ಚುನಾವಣಾ ಆಯೋಗವು ತಾತ್ಕಾಲಿಕವಾಗಿ ಫ್ರೀಜ್ ಮಾಡಿದೆ. ಇದರ ಬೆನಲ್ಲೇ, ಮುಂಬರುವ ಅಕ್ಟೋಬರ್ 6 ರ ವಿಧಾನಸಭಾ ಉಪಚುನಾವಣೆಗಾಗಿ ಚುನಾವಣಾ ಆಯೋಗವು ಇಂದು ಎರಡೂ ಬಣಗಳಿಗೆ ಹೊಸ ಮಧ್ಯಂತರ ಹೆಸರು ಮತ್ತು ಗುರುತುಗಳನ್ನು ಮಂಜೂರು ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
ಮಮತಾ ಬಣಕ್ಕೆ ಫುಟ್ಬಾಲ್, ಬಂಡಾಯ ಬಣಕ್ಕೆ ಲಕೋಟೆ
ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸ್ಥಾಪಕಿ ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (Mamata All India Trinamool Congress) ಎಂದು ಹೆಸರಿಡಲಾಗಿದೆ. ಇದರೊಂದಿಗೆ, ಈ ಬಣಕ್ಕೆ ಆಯೋಗವು ಫುಟ್ಬಾಲ್ ಆಟಗಾರ ಗುರುತನ್ನು ನೀಡಿದೆ. ಅದರಲ್ಲೂ, ಮಮತಾ ಬ್ಯಾನರ್ಜಿ ಅವರ ಬಂಗಾಳದ ಜನಪ್ರಿಯ ಖೇಲಾ ಹೋಬೆ (ಆಟ ಶುರುವಾಗಲಿದೆ) ಎಂಬ ಘೋಷಣೆಗೆ ಪೂರಕವಾಗಿ ಈ ಗುರುತು ಸಿಕ್ಕಿರುವುದು ವಿಶೇಷ.
ಮತ್ತೊಂದೆಡೆ, ದೀದಿ ನೇತೃತ್ವದ ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಅರುಪ್ ರಾಯ್ ಮತ್ತು ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್ (Democratic Trinamool Congress) ಎಂಬ ಹೆಸರನ್ನು ನೀಡಲಾಗಿದೆ. ಜೊತೆಗೆ ಈ ಬಂಡಾಯ ಬಣಕ್ಕೆ ಆಯೋಗವು ಲಕೋಟೆ ಗುರುತನ್ನು ಅಧಿಕೃತವಾಗಿ ಹಂಚಿಕೆ ಮಾಡಿದೆ.
ಈ ದಿಢೀರ್ ಬದಲಾವಣೆಗೆ ಕಾರಣವೇನು?
ಕಳೆದ ಮೇ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲನ್ನು ಅನುಭವಿಸಿದ ನಂತರ ಪಕ್ಷದಲ್ಲಿ ಆಂತರಿಕ ಕಲಹ ತೀವ್ರಗೊಂಡಿತ್ತು. ಈ ವೇಳೆ, ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಣವು ತಮಗೇ ಬಹುಸಂಖ್ಯಾತ ಶಾಸಕರ ಬೆಂಬಲವಿದೆ ಎಂದು ಹೇಳಿ ಪಕ್ಷದ ಅಧಿಕೃತ ಹೆಸರು ಮತ್ತು ಚಿಹ್ನೆಗಾಗಿ ಚುನಾವಣಾ ಆಯೋಗದ ಮೆಟ್ಟಿಲೇರಿತ್ತು.
TMC ಪಕ್ಷದ ಹೆಸರು, ಚಿಹ್ನೆ ಫ್ರೀಜ್ ಮಾಡಿದ ಚುನಾವಣಾ ಆಯೋಗ: ಉಪಚುನಾವಣೆ ಹೊತ್ತಲ್ಲೇ ದೀದಿಗೆ ಶಾಕ್, ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ..!ಇದರ ನಡುವೆ, ಅಕ್ಟೋಬರ್ 6, 2026 ರಂದು, ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ವೇಳೆ, ಉಭಯ ಬಣಗಳು ತಾವೇ ನಿಜವಾದ ಟಿಎಂಸಿ ಎಂದು ಹಕ್ಕು ಮಂಡಿಸಿದ್ದರಿಂದ, ಆಯೋಗವು ಸೆಪ್ಟೆಂಬರ್ 17 ರಂದು ಟಿಎಂಸಿಯ ಮೂಲ ಹೆಸರನ್ನು ಹಾಗೂ ಅದರ ಪ್ರಸಿದ್ಧ ಜೋಡಿ ಹೂವು ಮತ್ತು ಹುಲ್ಲು ಗುರುತನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿತ್ತು. ಇದಾದ ನಂತರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಎರಡೂ ಬಣಗಳಿಗೆ ತಲಾ 3 ಹೆಸರು ಮತ್ತು ಗುರುತುಗಳ ಆಯ್ಕೆಯನ್ನು ನೀಡುವಂತೆ ಆಯೋಗ ಸೂಚಿಸಿತ್ತು. ಅದರ ಅನ್ವಯ ಈ ಹೊಸ ತೀರ್ಪನ್ನು ನೀಡಲಾಗಿದ್ದು, ಇವೆರಡೂ ಸದ್ಯಕ್ಕೆ ತಾತ್ಕಾಲಿಕ ಗುರುತುಗಳಾಗಿರಲಿವೆ.
ಒಟ್ಟಾರೆಯಾಗಿ, ಇದೀಗ ಎರಡೂ ಬಣಗಳಿಗೆ ಹೊಸದಾಗಿ ಸಿಕ್ಕಿರುವ ಈ 'ಫುಟ್ಬಾಲ್ ಆಟಗಾರ' ಮತ್ತು 'ಲಕೋಟೆ' ಚಿಹ್ನೆಗಳು ಮುಂಬರುವ ನಂದಿಗ್ರಾಮ್ ಮತ್ತು ರೆಜಿನಗರ ಉಪಚುನಾವಣೆಗಳಲ್ಲಿ ಪ್ರಮುಖ ಹಣಾಹಣಿಗೆ ಸಾಕ್ಷಿಯಾಗಲಿವೆ.
ಪಶ್ಚಿಮ ಬಂಗಾಳ ಉಪಚುನಾವಣೆ: ನಂದಿಗ್ರಾಮದಲ್ಲಿ ಹತ್ಯೆಗೀಡಾದ ಸಿಎಂ ಸುವೇಂದು ಆಪ್ತ ಸಹಾಯಕನ ತಾಯಿ ಕಣಕ್ಕೆ!
ಅತಿ ಹೆಚ್ಚು ಹುಲಿ, ಆನೆಗಳ ಸಹಿತ ವನ್ಯಸಂಪತ್ತು, ಪ್ರಮುಖ ಮಳೆ ಕಾಡುಗಳಲ್ಲಿ ಒಂದಾದ ನಾಗರಹೊಳೆ ಹುಲಿ ಧಾಮವನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಿಸುವ ಪ್ರಕ್ರಿಯೆ ಮತ್ತೊಮ್ಮೆ ಶುರುವಾಗಿದೆ.
ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ದಶಕದ ಹಿಂದೆಯೇ ಸೂಕ್ಷ್ಮ ಪರಿಸರ ವಲಯ ಘೋಷಣೆ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಒತ್ತು ನೀಡಿ ಅನಗತ್ಯ ವಾಣಿಜ್ಯ ಚಟುವಟಿಕೆ ಹಾಗೂ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಆಗಿದ್ದವು.
ಆದರೆ, ಪರಿಸರ ಸೂಕ್ಷ್ಮ ವಲಯ ಘೋಷಣೆಯಿಂದ ಸ್ಥಳೀಯ ಜನಸಮುದಾಯದ ಮೇಲೆ ಆಗಬಹುದಾದ ಪರಿಣಾಮದ ಕುರಿತು ಆತಂಕ ಎದುರಾಗಿದ್ದರಿಂದ ಸೂಕ್ಷ್ಮ ವಲಯ ಜಾರಿಯಾಗಿರಲಿಲ್ಲ. ಈಗ ಈ ಪ್ರಕ್ರಿಯೆಗೆ ಮರು ಚಾಲನೆ ದೊರೆತಿದ್ದು, ಹೊಸ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಬಂಡೀಪುರದಲ್ಲಿ ಆಗಲೇ ಜಾರಿ
14 ವರ್ಷದ ಹಿಂದೆಯೇ ಬಂಡೀಪುರ ಹುಲಿ ಯೋಜಿತ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಣೆ ಮಾಡಲಾಗಿತ್ತು. ಆಗ ಹುಲಿ ಯೋಜನೆ ನಿರ್ದೇಶಕರಾಗಿದ್ದ ಬಿ.ಜೆ. ಹೊಸಮಠ, ಬಂಡೀಪುರ ನಿರ್ದೇಶಕರಾಗಿದ್ದ ಈಗಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ ಪುಷ್ಕರ್ ಅವರು ಹಾಗೂ ಅವರ ತಂಡದ ಪ್ರಯತ್ನದ ಫಲವಾಗಿ ಜನಪ್ರತಿನಿಧಿಗಳು ಹಾಗೂ ಸ್ಥಳೀಯರ ಮನ ಒಲಿಸಿ ಪರಿಸರ ಸೂಕ್ಷ್ಮ ವಲಯವನ್ನು ಘೋಷಣೆ ಮಾಡಲಾಗಿತ್ತು.
ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಭಾಗವನ್ನು ಹೊಂದಿರುವ ಬಂಡೀಪುರ ಹುಲಿ ಯೋಜಿತ ಪ್ರದೇಶ ಪರಿಸರ ಸೂಕ್ಷ್ಮ ವಲಯವಾಗಿ ಘೋಷಣೆಯಾದ ನಂತರ ದೊಡ್ಡಮಟ್ಟದ ಗಣಿಗಾರಿಕೆಗೆ ತಡೆ ಬಿದ್ದಿದೆ.
ನಾಗರಹೊಳೆಗೂ ಅನ್ವಯ
ಇದೇ ಮಾದರಿಯನ್ನು ಕೊಡಗು ಹಾಗೂ ಮೈಸೂರು ಜಿಲ್ಲೆಯ ಭಾಗವಾಗಿರುವ ನಾಗರಹೊಳೆಯಲ್ಲಿ ಜಾರಿಗೊಳಿಸಬೇಕು ಎನ್ನುವ ಪ್ರಯತ್ನಗಳು ಹೊಸಮಠ ಅವರೇ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದಾಗ ಆರಂಭವಾಯಿತು. ಸ್ಥಳೀಯ ಜನಪ್ರತಿನಿಧಿಗಳ ಜತೆಗೆ ಅರಣ್ಯದೊಂದಿಗೆ ಶತಮಾನಗಳ ನಂಟು ಹೊಂದಿರುವ ಕಾಡಿನಂಚಿನ ಗ್ರಾಮಸ್ಥರನ್ನು ಮನಒಲಿಸುವ ಪ್ರಯತ್ನ ನಡೆಯಿತು. ಆದರೆ, ಪರಿಸರ ಸೂಕ್ಷ್ಮ ವಲಯ ಎಷ್ಟು ಕಿ.ಮೀ ಮಿತಿಯಲ್ಲಿ ಇರಬೇಕು. ಸೂಕ್ಷ್ಮ ವಲಯ ಜಾರಿಯಿಂದ ಸ್ಥಳೀಯರ ಬದುಕಿಗೆ ತೊಂದರೆಯಾಗುವುದಿಲ್ಲ ಎನ್ನುವ ವಿಶ್ವಾಸ ತುಂಬುವಲ್ಲಿ ಅರಣ್ಯ ಇಲಾಖೆಯೂ ಯಶಸ್ವಿಯಾಗಿಲಿಲ್ಲ. ಜನಪ್ರತಿನಿಧಿಗಳು ಬಲವಾಗಿ ವಿರೋಧಿಸಿದ್ದರಿಂದ ನಾಗರಹೊಳೆ ಹುಲಿಧಾಮ ಇದರಿಂದ ದೂರವೇ ಉಳಿಯಿತು.
ಈಗ ಹತ್ತು ವರ್ಷ ಕಳೆದು ಹೋಗಿದೆ. ಸುಪ್ರೀಂ ಕೋರ್ಟ್ ಕೂಡ ಕಾಲಮಿತಿಯೊಳಗೆ ಇದನ್ನು ಜಾರಿಗೊಳಿಸಬೇಕು ಎನ್ನುವ ಸೂಚನೆ ನೀಡಿರುವ ನಂತರ ಈ ಪ್ರಕ್ರಿಯೆ ಕೆಲ ವರ್ಷದಿಂದ ನಡೆದೇ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 2023ರಿಂದಲೂ ಪ್ರಕ್ರಿಯೆಗಳು ಜಾರಿಯಲ್ಲಿವೆ. ಆಗಲೇ ಸಚಿವ ಸಂಪುಟ ಒಪ್ಪಿಗೆ ನೀಡಿಯೂ ಆಗಿದೆ. ಆದರೂ, ನಾನಾ ಕಾರಣಗಳಿಂದ ಜಾರಿ ವಿಳಂಬವಾಗಿದೆ.
ಈಗಿನ ಅಧಿಸೂಚನೆಯಲ್ಲಿ ಏನಿದೆ
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2ನೇ ಬಾರಿಗೆ ನಾಗರಹೊಳೆ ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು2026ರ ಸೆಪ್ಟೆಂಬರ್ 2 ರಂದು ಹೊರಡಿಸಿದೆ. ಇದಕ್ಕೂ ಮೊದಲು ಅಂದರೆ 2017ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಇದಕ್ಕಾಗಿ ಮೂರ್ನಾಲ್ಕು ವರ್ಷದಿಂದಲೂ ಸಿದ್ದತೆಗಳು ನಡೆದಿದ್ದವು. ಮೊದಲ ಬಾರಿ ಹೊರಡಿಸಿದ್ದ ಕರಡು ಅಧಿಸೂಚನೆಗಿಂತಲೂ ಈ ಬಾರಿ ಕೆಲವು ತಿದ್ದುಪಡಿಗಳನ್ನು ಈಗಿನ ಅಧಿಸೂಚನೆಯಲ್ಲಿ ಮಾಡಲಾಗಿದೆ.
ಹತ್ತು ವರ್ಷದ ಹಿಂದೆ ನಾಗರಹೊಳೆ ಹುಲಿ ಯೋಜಿತ ( ಹುಣಸೂರು ವನ್ಯಜೀವಿ ವಿಭಾಗ) ಪ್ರದೇಶದ ವ್ಯಾಪ್ತಿ 573.95 ಚದರ ಕಿ.ಮೀ ಪ್ರದೇಶ ಇತ್ತು. ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ಕೆಲ ಭಾಗ ನಾಗರಹೊಳೆ ವ್ಯಾಪ್ತಿಗೆ ಸೇರಿದ ನಂತರ 843.96 ಚದರ ಕಿ.ಮೀಗೆ ವಿಸ್ತರಣೆಯಾಗಿದೆ. ಆದರೂ, ಹಿಂದೆ ಇದ್ದ 573.95 ಚದರ ಕಿ.ಮೀ ವ್ಯಾಪ್ತಿಗೆ ಅಧಿಸೂಚನೆ ಅನ್ವಯವಾಗಲಿದೆ.
ನಾಗರಹೊಳೆಯು ಮುಖ್ಯವಾಗಿ ಕೊಡಗು ಜಿಲ್ಲೆ, ಮೈಸೂರು ಜಿಲ್ಲೆಯಲ್ಲಿ ಹಂಚಿಕೊಂಡಿದ್ದರೆ ಪಕ್ಕದ ಕೇರಳಂನ ವಯನಾಡು ಗಡಿಗೆ ಹೊಂದಿಕೊಂಡಿದೆ. ಬಂಡೀಪುರ ಹಾಗೂ ವಯನಾಡು ವನ್ಯಜೀವಿ ವಿಭಾಗಗಳೊಂದಿಗೆ ನಾಗರಹೊಳೆಗೆ ನಂಟಿದೆ.
ಈಗ ಹೊರಡಿಸಿರುವ ಅಧಿಸೂಚನೆಯಲ್ಲಿ ಪರಿಸರ ಸೂಕ್ಷ್ಮ ವಲಯವನ್ನು ಆಗ್ನೇಯ, ದಕ್ಷಿಣ ಮತ್ತು ನೈಋತ್ಯ ದಿಕ್ಕುಗಳಲ್ಲಿ 0 ಕಿ.ಮೀ ನಿಂದ ಪ್ರಾರಂಭಿಸಿ, ಪಶ್ಚಿಮ ಭಾಗದಲ್ಲಿ 1 ಕಿ.ಮೀ, ಪೂರ್ವ ಭಾಗದಲ್ಲಿ 7.4 ಕಿ.ಮೀ ಮತ್ತು ವಾಯುವ್ಯ ಭಾಗದಲ್ಲಿ 24.08 ಕಿ.ಮೀ ವರೆಗೆ ವಿಸ್ತರಿಸಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಮತ್ತು ವಯನಾಡು ಅಭಯಾರಣ್ಯದೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಸ್ಥಳಗಳಲ್ಲಿ ಈ ವಲಯದ ಅಂತರವನ್ನು 0 ಕಿ.ಮೀಗೆ ಇಳಿಸಲಾಗಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತಲಿನ ಪರಿಸರ ಸೂಕ್ಷ್ಮ ವಲಯ (ESZ)ಎಂದು ಗುರುತಿಸಿ, ವಾಣಿಜ್ಯ ಚಟುವಟಿಕೆ ನಿಯಂತ್ರಿಸುವ ವಿಶೇಷ ಒತ್ತು ನೀಡಲಾಗಿದೆ. ಪರಿಸರ ಸೂಕ್ಷ್ಮ ವಲಯ ಅಧಿಸೂಚನೆ ಹೊಸ ಆದೇಶದ ದಿನಾಂಕದಿಂದ ಜಾರಿಗೊಳ್ಳುವುದರಿಂದ ಹಿಂದೆ ಇದ್ದ ಚಟುವಟಿಕೆಗಳಿಗೆ ಅಡ್ಡಿಯಾಗುವುದಿಲ್ಲ. ಜನವಸತಿ ಭಾಗಕ್ಕೂ ಅಡ್ಡಿಯಾಗುವುದಿಲ್ಲ. ಗಣಿಗಾರಿಕೆ ಸಹಿತ ಹಲವು ಚಟುವಟಿಕೆಗಳಿಗೆ ಇದು ತಡೆಯೊಡ್ಡಲಿದೆ.
@font-face{font-family:'PrajavaniTextRegular';src:url('https://fea.assettype.com/tpml/assets/PrajavaniTextRegular.woff2') format('woff2');font-weight:400;font-style:normal;font-display:swap;}@font-face{font-family:'PvHeadlineSemibold3';src:url('https://fea.assettype.com/tpml/assets/PvHeadlineSemibold3.woff2') format('woff2');font-weight:600;font-style:normal;font-display:swap;} .dh-inline-infographic{max-width:900px;margin:0 auto;background-color:#ffffff;border-radius:8px;box-shadow:0 2px 8px rgba(0,0,0,0.1);overflow:hidden;font-family:'PrajavaniTextRegular',serif;text-align:left;position:relative} .dh-inline-infographic .embed-header{background-color:#B82831;color:#ffffff;padding:18px;text-align:center} .dh-inline-infographic .embed-header h2{margin:0;font-family:'PvHeadlineSemibold3',serif;font-size:20.02px;line-height:1.3} .dh-inline-infographic .main-concept{padding:14px 18px;border-left:4px solid #FFC314;margin:12px 18px 4px;background-color:#FFF4DB;font-size:18.2px} .dh-inline-infographic .main-concept-title{font-weight:bold;margin-bottom:4px;text-transform:uppercase;letter-spacing:0;font-size:15.600000000000001px;color:#A32530} .dh-inline-infographic .main-concept-text{font-size:18.2px;line-height:1.5} .dh-inline-infographic .section-label{padding:4px 18px 0;font-size:15.600000000000001px;text-transform:uppercase;letter-spacing:0;color:#666} .dh-inline-infographic .section-label.stats-section{padding:0 18px 0;margin-top:-10px} .dh-inline-infographic .stats-grid{display:flex;flex-wrap:wrap;gap:6px;padding:4px 18px 4px;background-color:#ffffff;margin-bottom:0} .dh-inline-infographic .stat-card{flex:1 1 calc(20% - 6px);min-width:120px;background:linear-gradient(90deg,#B82831 0%,#8B1F29 100%);color:#ffffff;border-radius:6px;padding:8px 8px;text-align:center;box-shadow:0 2px 6px rgba(184,40,49,0.22);transition:transform 0.2s ease,box-shadow 0.2s ease} .dh-inline-infographic .stat-value{font-size:26px;font-weight:700;font-family:'PvHeadlineSemibold3',serif;margin-bottom:2px;line-height:1.1} .dh-inline-infographic .stat-label{font-size:11.700000000000001px;text-transform:uppercase;letter-spacing:0;color:rgba(255,255,255,0.9);opacity:1;line-height:1.2} .dh-inline-infographic .stat-card:hover{transform:translateY(-1px);box-shadow:0 3px 8px rgba(184,40,49,0.26)} .dh-inline-infographic .inf-disclaimer{padding:0 18px 0;text-align:center;font-size:11px;color:#999;font-style:italic} .dh-inline-infographic .inf-collapsible{border:2px solid #B82831;border-radius:8px;margin:0;padding:0;display:block;overflow:hidden;background-color:#ffffff} .dh-inline-infographic .inf-collapsible:not([open]){border-color:transparent;background:linear-gradient(#ffffff,#ffffff) padding-box,linear-gradient(90deg,#B82831,#FFC314,#B82831,#FFC314,#B82831) border-box;background-size:100% 100%,300% 300%;animation:inf-border-move 6s linear infinite} .dh-inline-infographic .inf-collapsible[open]{border-color:#B82831;background:#ffffff;animation:none} .dh-inline-infographic .inf-summary{list-style:none;cursor:pointer;display:block;margin:0;padding:0;width:100%} .dh-inline-infographic .inf-summary::-webkit-details-marker{display:none} .dh-inline-infographic .inf-summary::marker{content:""} .dh-inline-infographic .inf-collapsed-card{display:flex;align-items:stretch;justify-content:flex-start;gap:0;padding:0;background:linear-gradient(135deg,#FFF4DB 0%,#FFF8E1 100%);border-bottom:1px solid rgba(0,0,0,0.06)} .dh-inline-infographic .inf-collapsed-title{font-family:'PvHeadlineSemibold3',serif;font-size:20.02px;color:#8B1F29;letter-spacing:0;text-transform:uppercase;margin:0 0 4px} .dh-inline-infographic .inf-collapsed-subtitle{font-family:'PrajavaniTextRegular',serif;font-size:14.559999999999999px;color:#4b4b4b} .dh-inline-infographic .inf-collapsed-text{min-width:0;flex:1 1 auto;padding:14px 18px} .dh-inline-infographic .inf-collapsed-title,.dh-inline-infographic .inf-collapsed-subtitle{overflow-wrap:anywhere} .dh-inline-infographic .inf-toggle-shell{flex:0 0 58px;min-width:58px;display:flex;align-items:center;justify-content:center;background-color:#FFF4DB;border-left:1px solid rgba(255,195,20,0.25)} .dh-inline-infographic .inf-collapsed-btn{background-color:transparent;color:#8B1F29;padding:0;border-radius:0;font-size:16px;line-height:1;letter-spacing:0.02em;flex:1 1 auto;text-align:center;min-width:0;display:inline-flex;align-items:center;justify-content:center;transition:background-color 0.2s ease,transform 0.2s ease} .dh-inline-infographic .inf-less{display:none} .dh-inline-infographic details[open] .inf-more{display:none} .dh-inline-infographic details[open] .inf-less{display:inline} .dh-inline-infographic .inf-body{padding-bottom:4px} .dh-inline-infographic .inf-summary:focus-visible{outline:3px solid #FFC314;outline-offset:-3px} .dh-inline-infographic .inf-arrow{width:14px;height:14px;display:block;stroke:currentColor;stroke-width:2.2;fill:none;stroke-linecap:round;stroke-linejoin:round;transform-origin:50% 50%;transition:transform 0.3s ease,filter 0.3s ease,stroke-width 0.3s ease,width 0.3s ease,height 0.3s ease} .dh-inline-infographic .inf-summary:hover .inf-collapsed-card{background:linear-gradient(135deg,#FFEEB3 0%,#FFF4DB 100%)} .dh-inline-infographic .inf-summary:hover .inf-toggle-shell{background-color:#FFE9A0} .dh-inline-infographic .inf-summary:hover .inf-arrow{transform:translateY(2px)} .dh-inline-infographic .inf-header-toggle{display:none} .dh-inline-infographic .inf-summary .embed-header{display:none} .dh-inline-infographic details[open] .inf-collapsed-card{display:none} .dh-inline-infographic details[open] .inf-summary{display:grid;grid-template-columns:minmax(0,1fr) 58px;align-items:stretch;margin:0;padding:0} .dh-inline-infographic details[open] .inf-summary .embed-header{display:block;grid-column:1;grid-row:1;padding-right:18px} .dh-inline-infographic details[open] .inf-header-toggle{display:inline-flex;grid-column:2;grid-row:1;position:static;z-index:5;align-self:stretch;width:58px;height:auto;min-height:100%;align-items:center;justify-content:center;border-radius:0;background-color:#B82831;border-left:2px solid rgba(255,195,20,0.25);color:#ffffff;box-shadow:inset 0 0 0 1px rgba(255,255,255,0.1);transition:all 0.3s ease} .dh-inline-infographic details[open] .inf-header-toggle:hover{background-color:#B82831;border-left-color:rgba(255,195,20,0.35);box-shadow:inset 0 0 0 1px rgba(255,255,255,0.2)} .dh-inline-infographic details[open] .inf-header-toggle .inf-arrow{transform:rotate(180deg);width:16px;height:16px;stroke-width:2.5;filter:drop-shadow(0 1px 2px rgba(0,0,0,0.15))} .dh-inline-infographic details[open] .inf-header-toggle:hover .inf-arrow{transform:rotate(180deg) translateY(2px)} .dh-inline-infographic .faq-list{display:flex;flex-direction:column;padding:8px 18px 6px;gap:12px;background-color:#ffffff;margin:0 0 18px}.dh-inline-infographic .faq-item{border-radius:8px;background-color:#FFF8E1;box-shadow:0 1px 4px rgba(0,0,0,0.06);overflow:hidden;transition:transform 0.2s ease,box-shadow 0.2s ease,background-color 0.2s ease}.dh-inline-infographic .faq-item:hover{background-color:#FFEEB3;transform:translateY(-2px);box-shadow:0 2px 6px rgba(0,0,0,0.12)}.dh-inline-infographic .faq-row{list-style:none;display:grid;grid-template-columns:minmax(0,1fr) 24px;gap:10px;align-items:start;padding:12px 12px 8px;cursor:pointer}.dh-inline-infographic .faq-row::-webkit-details-marker{display:none}.dh-inline-infographic .faq-row::marker{content:""}.dh-inline-infographic .faq-copy{min-width:0}.dh-inline-infographic .faq-question{margin:0;font-family:'PvHeadlineSemibold3',serif;font-size:19.5px;line-height:1.32;color:#8B1F29;overflow-wrap:anywhere;word-break:break-word}.dh-inline-infographic .faq-toggle{display:flex;align-items:center;justify-content:center;align-self:start;color:#A32530;width:24px;height:24px}.dh-inline-infographic .faq-arrow{width:16px;height:16px;display:block;stroke:currentColor;stroke-width:2.2;fill:none;stroke-linecap:round;stroke-linejoin:round;transition:transform 0.25s ease}.dh-inline-infographic .faq-item[open] .faq-arrow{transform:rotate(180deg)}.dh-inline-infographic .faq-answer-shell{padding:0 12px 12px}.dh-inline-infographic .faq-answer{margin:0;font-size:16.900000000000002px;line-height:1.6;color:#23424a;overflow-wrap:anywhere;word-break:break-word} @keyframes inf-border-move{0%{background-position:0 0,0% 50%}100%{background-position:0 0,100% 50%}} @media (prefers-color-scheme: dark){ .dh-inline-infographic{background-color:#1a1a1a;box-shadow:0 2px 8px rgba(0,0,0,0.5);color:#e0e0e0} .dh-inline-infographic .embed-header{background-color:#8B1F29} .dh-inline-infographic .main-concept{background-color:#2a2418;border-left-color:#FFC314} .dh-inline-infographic .main-concept-title{color:#FF5055} .dh-inline-infographic .main-concept-text{color:#e0e0e0} .dh-inline-infographic .section-label{color:#aaa} .dh-inline-infographic .stats-grid{background-color:#1a1a1a} .dh-inline-infographic .stat-card{background:linear-gradient(90deg,#B8911A 0%,#8B1F29 100%);box-shadow:0 2px 6px rgba(0,0,0,0.4)} .dh-inline-infographic .inf-disclaimer{color:#777} .dh-inline-infographic .inf-collapsible{background-color:#1a1a1a;border-color:#8B1F29} .dh-inline-infographic .inf-collapsible[open]{background:#1a1a1a;border-color:#8B1F29} .dh-inline-infographic .inf-collapsed-card{background:linear-gradient(135deg,#2a2418 0%,#22201a 100%);border-bottom-color:rgba(255,255,255,0.08)} .dh-inline-infographic .inf-collapsed-title{color:#FF5055} .dh-inline-infographic .inf-collapsed-subtitle{color:#bbb} .dh-inline-infographic .inf-toggle-shell{background-color:#2a2418;border-left-color:#8B6914} .dh-inline-infographic .inf-collapsed-btn{color:#FFC314} .dh-inline-infographic details[open] .inf-header-toggle{background-color:#8B1F29} .dh-inline-infographic .inf-summary:hover .inf-collapsed-card{background:linear-gradient(135deg,#3a2f1f 0%,#2a2418 100%)} .dh-inline-infographic .inf-summary:hover .inf-toggle-shell{background-color:#3a2f1f} .dh-inline-infographic .faq-list{background-color:#1a1a1a}.dh-inline-infographic .faq-item{background-color:#2d2d2d;box-shadow:0 1px 4px rgba(0,0,0,0.3);border:1px solid rgba(255,255,255,0.06)}.dh-inline-infographic .faq-question{color:#FF5055}.dh-inline-infographic .faq-toggle{color:#FF5055}.dh-inline-infographic .faq-answer{color:#e0e0e0}.dh-inline-infographic .faq-item:hover{background-color:#383838;box-shadow:0 2px 6px rgba(0,0,0,0.4)} } @media (max-width:700px){ .dh-inline-infographic .main-concept{margin-left:12px;margin-right:12px;padding-left:12px;padding-right:12px} .dh-inline-infographic .section-label,.dh-inline-infographic .section-label.stats-section,.dh-inline-infographic .stats-grid,.dh-inline-infographic .inf-disclaimer{padding-left:12px;padding-right:12px} .dh-inline-infographic .stat-card{flex:1 1 calc(33.333% - 6px);min-width:100px} .dh-inline-infographic .inf-collapsed-card{gap:0;padding:0} .dh-inline-infographic .inf-collapsed-text{padding:12px} .dh-inline-infographic .inf-collapsed-title{font-size:17.94px} .dh-inline-infographic .inf-collapsed-subtitle{font-size:13.520000000000001px} .dh-inline-infographic .inf-toggle-shell{flex-basis:50px;min-width:50px} .dh-inline-infographic details[open] .inf-summary{grid-template-columns:minmax(0,1fr) 50px} .dh-inline-infographic details[open] .inf-summary .embed-header{padding-right:12px} .dh-inline-infographic details[open] .inf-header-toggle{width:50px} .dh-inline-infographic .faq-list{padding-left:12px;padding-right:12px} .dh-inline-infographic .main-concept{margin-left:10px;margin-right:10px;padding:12px 12px 12px 14px}.dh-inline-infographic .main-concept-title{font-size:14.3px}.dh-inline-infographic .main-concept-text{font-size:16.900000000000002px;line-height:1.55}.dh-inline-infographic .section-label{padding-top:8px;padding-bottom:4px}.dh-inline-infographic .faq-list{gap:10px;padding-left:10px;padding-right:10px}.dh-inline-infographic .faq-item{border-radius:10px}.dh-inline-infographic .faq-row{grid-template-columns:minmax(0,1fr) 22px;gap:8px;padding:11px 11px 6px}.dh-inline-infographic .faq-question{font-size:19.5px;line-height:1.28}.dh-inline-infographic .faq-toggle{width:22px;height:22px}.dh-inline-infographic .faq-arrow{width:14px;height:14px}.dh-inline-infographic .faq-answer-shell{padding:0 11px 11px}.dh-inline-infographic .faq-answer{font-size:16.25px;line-height:1.58}.dh-inline-infographic .stats-grid{padding-left:10px;padding-right:10px;gap:8px}.dh-inline-infographic .stat-card{flex:1 1 100%;min-width:0;padding:10px 10px}.dh-inline-infographic .stat-value{font-size:23.400000000000002px}.dh-inline-infographic .stat-label{font-size:11.700000000000001px} }ಸಂಕ್ಷಿಪ್ತ ಮಾಹಿತಿ – ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶNagarahole ECZ:ನಾಗರಹೊಳೆ ಪರಿಸರ ಸೂಕ್ಷ್ಮ ವಲಯ ಹೊಸ ಅಧಿಸೂಚನೆ, ಬದಲಾವಣೆ ಏನಿವೆ?ಒಂದು ಸಾಲಿನಲ್ಲಿನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತಲ ಪರಿಸರ ಸೂಕ್ಷ್ಮ ವಲಯದ ಹೊಸ ಕರಡು ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದ್ದು, ವಾಣಿಜ್ಯ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.ಏನು? ಏಕೆ? ಹೇಗೆ?ನಾಗರಹೊಳೆ ಪರಿಸರ ಸೂಕ್ಷ್ಮ ವಲಯದ ಹೊಸ ಅಧಿಸೂಚನೆ ಎಂದರೇನು?ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಸೆಪ್ಟೆಂಬರ್ 2, 2026ರಂದು ಹೊಸ ಕರಡು ಅಧಿಸೂಚನೆ ಹೊರಡಿಸಿದೆ.
ಈ ಅಧಿಸೂಚನೆಯಲ್ಲಿ ಯಾವೆಲ್ಲಾ ಚಟುವಟಿಕೆಗಳಿಗೆ ನಿರ್ಬಂಧವಿದೆ?ಉಷ್ಣ ಅಥವಾ ಜಲವಿದ್ಯುತ್ ಯೋಜನೆಗಳು, ವಾಣಿಜ್ಯ ಗಣಿಗಾರಿಕೆ, ಮಾಲಿನ್ಯ ಉಂಟುಮಾಡುವ ಕೈಗಾರಿಕೆಗಳು, ಹೊಸ ಸಾಮಿಲ್ಗಳು ಮತ್ತು ತ್ಯಾಜ್ಯ ವಿಲೇವಾರಿ ಕೇಂದ್ರಗಳ ಸ್ಥಾಪನೆ ಸೇರಿದಂತೆ ಒಟ್ಟು 11 ಬಗೆಯ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಎಷ್ಟು ಗ್ರಾಮಗಳು ಬರುತ್ತವೆ?ಕೊಡಗಿನ ವೀರಾಜಪೇಟೆ, ಗೋಣಿಕೊಪ್ಪಲು ಹಾಗೂ ಮೈಸೂರಿನ ಪಿರಿಯಾಪಟ್ಟಣ, ಹುಣಸೂರು ಮತ್ತು ಎಚ್.ಡಿ ಕೋಟೆ ತಾಲ್ಲೂಕಿನ ಗಡಿ ಭಾಗದ 101 ಗ್ರಾಮಗಳು ಈ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಡುತ್ತವೆ.
ಸ್ಥಳೀಯರು ತಮ್ಮ ಆಕ್ಷೇಪಣೆಗಳನ್ನು ಹೇಗೆ ಸಲ್ಲಿಸಬಹುದು?ಅಧಿಸೂಚನೆ ಪ್ರಕಟವಾದ 60 ದಿನಗಳ ಒಳಗೆ ಸ್ಥಳೀಯರು ತಮ್ಮ ಆಕ್ಷೇಪಣೆ ಅಥವಾ ಸಲಹೆಗಳನ್ನು ಅಂಚೆ ಮೂಲಕ ಅಥವಾ esz-mef@nic.in ಇಮೇಲ್ ಮೂಲಕ ಕೇಂದ್ರ ಪರಿಸರ ಮಂತ್ರಾಲಯಕ್ಕೆ ಸಲ್ಲಿಸಬಹುದು.
ಹೊಸ ಅಧಿಸೂಚನೆಯಲ್ಲಿನ ವಿಸ್ತೀರ್ಣದ ಬದಲಾವಣೆ ಏನು?ಹತ್ತು ವರ್ಷಗಳ ಹಿಂದೆ 573.95 ಚದರ ಕಿ.ಮೀ ಇದ್ದ ನಾಗರಹೊಳೆ ಹುಲಿ ಯೋಜಿತ ಪ್ರದೇಶದ ವ್ಯಾಪ್ತಿಯು, ಈಗ 843.96 ಚದರ ಕಿ.ಮೀಗೆ ವಿಸ್ತರಣೆಯಾಗಿದೆ.
(function(){var script=document.currentScript;var list=script&&script.previousElementSibling;if(!list||list.__faqAccordionBound)return;list.__faqAccordionBound=true;list.addEventListener("toggle",function(event){var item=event.target;if(!item||!item.classList||!item.classList.contains("faq-item")||!item.open)return;var items=list.querySelectorAll(".faq-item[open]");for(var i=0;i
ಬೆಂಗಳೂರು: ಕಾಲ್ ಪಿಕ್ ಮಾಡಿಲ್ಲವೆಂದು ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ ಪತಿರಾಯ, ಕುದಿಯೋ ಎಣ್ಣೆ ಸುರಿದು ಸಾಕ್ಷ್ಯನಾಶಕ್ಕೆ ಯತ್ನಿಸಿ ಅರೆಸ್ಟ್ ಆಗಿರುವ ಘಟನೆ ಬೆಂಗಳೂರಿನ (Bengaluru) ಮೈಕೋ ಲೇಔಟ್ನ ಬಿಳೇಕಹಳ್ಳಿಯಲ್ಲಿ ನಡೆದಿದೆ.
ಬಿಹಾರ ಮೂಲದ ರಂಜಿತ್ ಕುಮಾರ್ ಗುಪ್ತಾ ಬಂಧಿತ ಆರೋಪಿ. ಈತ ತನ್ನ ಪತ್ನಿ ಗುಂಜಾ ಮದೇಷಿಯಾ (38) ಜೊತೆ ಮೈಕೋ ಲೇಔಟ್ನ ಬಿಳೇಕಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ. ಫೋನ್ ಕರೆ ಸ್ವೀಕರಿಸುವುದಿಲ್ಲ ಎಂಬ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ನಿನ್ನೆ ಬೆಳಿಗ್ಗೆ ಮಕ್ಕಳು ಶಾಲೆಗೆ ತೆರಳಿದ ಬಳಿಕ ಮತ್ತೆ ಗಲಾಟೆ ಶುರುವಾಗಿದೆ.
ಆಕ್ರೋಶಗೊಂಡ ರಂಜಿತ್, ಪತ್ನಿ ಮೇಲೆ ಹಲ್ಲೆ ನಡೆಸಿ ವೇಲ್ ಹಾಗೂ ಸೀರೆಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಇದನ್ನ ಆಕಸ್ಮಿಕ ಸಾವು ಎಂದು ಬಿಂಬಿಸಲು ಮತ್ತು ಮೃತದೇಹ ವಿರೂಪಗೊಳಿಸಲು ದೇಹದ ಮೇಲೆ ಬಿಸಿ ಎಣ್ಣೆ ಎರಚಿ ಚರ್ಮ ಸುಲಿಯಲು ಯತ್ನಿಸಿದ್ದಾನೆ. ಇದನ್ನೂ ಓದಿ: ಕಡವೆ ಬೇಟೆಯಾಡಿ ಮಾಂಸ ಕತ್ತರಿಸುವಾಗ ಅಧಿಕಾರಿಗಳ ದಾಳಿ – ಮೂವರು ಅರೆಸ್ಟ್
ದಂಪತಿಯ ಜಗಳದ ಬಗ್ಗೆ ಮನೆ ಮಾಲೀಕರು ನೀಡಿದ ಮಾಹಿತಿಯನ್ನಾಧರಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಸದ್ಯ ಆರೋಪಿಯನ್ನು ಮೈಕೋ ಲೇಔಟ್ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈತನ ಕೋಪಕ್ಕೆ ಇತ್ತ ಅಪ್ಪನೂ ಇಲ್ಲದೇ ಅಮ್ಮನೂ ಇಲ್ಲದೆ ಮಕ್ಕಳು ಮಾತ್ರ ಬಡವಾಗಿವೆ. ಇದನ್ನೂ ಓದಿ: ಭೀಕರ ಬರ ಎದುರಿಸುತ್ತಿದ್ದರೂ ರಾಮದುರ್ಗ, ಸವದತ್ತಿಯನ್ನು ಕೈಬಿಟ್ಟ ಸರ್ಕಾರ – ಅನ್ನದಾತರಿಗೆ ಆಘಾತ
ಇಸ್ಲಾಮಾಬಾದ್: ಖೈಬರ್ ಪಖ್ತುಂಕ್ವಾದ ಕೊಹಟ್ ಜಿಲ್ಲೆಯಲ್ಲಿರೋ ಮಸೀದಿಯಲ್ಲಿ (Mosque) ಪ್ರಾರ್ಥನೆ ವೇಳೆ ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ.
ಖೈಬರ್ ಪಖ್ತುಂಕ್ವಾದಲ್ಲಿರೋ (Khyber Pakhtunkhwa) ಪೊಲೀಸ್ ಲೈನ್ಸ್ ಬಳಿಯ ಮಸೀದಿಯಲ್ಲಿ ಶುಕ್ರವಾರ (ಇಂದು) ಪ್ರಾರ್ಥನೆ ವೇಳೆ ಸ್ಫೋಟ ಸಂಭವಿಸಿದೆ. ಪ್ರಬಲ ಸ್ಫೋಟದಲ್ಲಿ (Mega Explosion) ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬೆನ್ನಲ್ಲೇ ಸ್ಫೋಟದ ತೀವ್ರತೆಯನ್ನ ತೋರಿಸುವ ಹಲವಾರು ವಿಡಿಯೋಗಳು ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸ್ಫೋಟ ಸಂಭವಿಸಿದ ಬೆನ್ನಲ್ಲೇ ಸ್ಥಳೀಯರು ಕೂಡ ನೆರವಿಗೆ ಧಾವಿಸಿರೋದು ವಿಡಿಯೋದಲ್ಲಿ ಕಂಡುಬಂದಿದೆ.
ಈಗಾಗಲೇ ಸ್ಥಳೀಯ ಆಡಳಿತ ಮತ್ತು ಪೊಲೀಸರನ್ನೊಳಗೊಂಡ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪರಿಸ್ಥಿತಿಯನ್ನ ಅವಲೋಕಿಸುತ್ತಿದ್ದು, ಗಾಯಾಳುಗಳನ್ನ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ‘ರೆಸ್ಕ್ಯೂ 1122 ಖೈಬರ್ ಪಖ್ತುಂಕ್ವಾ’ದ ವಕ್ತಾರ ಬಿಲಾಲ್ ಅಹ್ಮದ್ ಫೈಜಿ ತಿಳಿಸಿದ್ದಾರೆ.
ಸದ್ಯಕ್ಕೆ ಯಾವುದೇ ಗುಂಪು ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ, ಇದು ‘ಇತ್ತೆಹಾದ್-ಉಲ್-ಮುಜಾಹಿದೀನ್ ಪಾಕಿಸ್ತಾನ’ (IMP) ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿ ಇರಬೇಕು ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿದೆ.
ಕಳೆದ ವರ್ಷದ ಏಪ್ರಿಲ್ನಲ್ಲಿ ರಚನೆಯಾದ ಈ ಉಗ್ರ ಸಂಘಟನೆಯು ಪಾಕಿಸ್ತಾನದ ಭದ್ರತಾ ಪಡೆಗಳ ವಿರುದ್ಧ ಸಮರ ಸಾರಿದೆ. ‘ತೆಹ್ರೀಕ್-ಎ-ತಾಲೀಬಾನ್ ಪಾಕಿಸ್ತಾನ’ (TTP) ದ ಪ್ರತಿಸ್ಪರ್ಧಿಯಾಗಿದೆ.
– ಧರ್ಮ ಜನರನ್ನು ಒಗ್ಗೂಡಿಸುತ್ತದೆ, ಬಂಧಿಸುವುದಿಲ್ಲ ಎಂದ RSS ಮುಖ್ಯಸ್ಥ
ಭೋಪಾಲ್: ಧರ್ಮ ಎನ್ನುವುದು ಜನರನ್ನು ಬಂಧಿಸುವುದಲ್ಲ, ಬದಲಾಗಿ ಎಲ್ಲರನ್ನು ಒಗ್ಗೂಡಿಸುವ ಶಕ್ತಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಹೇಳಿದರು. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ‘ಯುವ ಧರ್ಮ ಸಂಸತ್–2026’ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಧರ್ಮ ಮತ್ತು ‘ರಿಲಿಜನ್’ ನಡುವೆ ದೊಡ್ಡ ವ್ಯತ್ಯಾಸವಿದೆ ಎಂದು ಭಾಗವತ್ ವಿವರಿಸಿದರು. ‘ರಿಲಿಜನ್’ ಎಂಬ ಪದದ ಅರ್ಥ ಹಾಗೂ ಧರ್ಮದ ಪರಿಕಲ್ಪನೆ ಒಂದೇ ಅಲ್ಲ. ಧರ್ಮವನ್ನು ಅದರ ಮೂಲ ಅರ್ಥದಿಂದ ಬೇರ್ಪಡಿಸಿ ನೋಡಿದಾಗ ಸಾಮಾಜಿಕ ಹಾಗೂ ಸಾಂಪ್ರದಾಯಿಕ ಸಂಘರ್ಷಗಳಿಗೆ ಕಾರಣವಾಗಬಹುದು ಎಂದು ಅವರು ಹೇಳಿದರು. ಇದನ್ನೂ ಓದಿ: ನಿವೃತ್ತಿಯ ದಿನವೇ 1.01 ಕೋಟಿ ದೇಣಿಗೆ – PM CARESಗೆ ನ್ಯಾ.ಅವನೀಂದ್ರ ಕುಮಾರ್ ಸಿಂಗ್ ಕೊಡುಗೆ
ಭಾರತದ ಪರಂಪರೆಯಲ್ಲಿ ಧರ್ಮವು ಸತ್ಯ, ಕರ್ತವ್ಯ, ನೈತಿಕತೆ ಮತ್ತು ಎಲ್ಲರ ಕಲ್ಯಾಣದೊಂದಿಗೆ ಸಂಬಂಧ ಹೊಂದಿದೆ. ‘ನಾವು ಬದುಕಬೇಕು, ಎಲ್ಲರನ್ನೂ ಬದುಕಲು ಬಿಡಬೇಕು’ ಎಂಬುದು ಭಾರತೀಯ ಚಿಂತನೆಯ ಪ್ರಮುಖ ಅಂಶವಾಗಿದೆ. ಧರ್ಮದ ಉದ್ದೇಶ ಜನರನ್ನು ವಿಭಜಿಸುವುದಲ್ಲ, ಸಮಾಜವನ್ನು ಒಗ್ಗೂಡಿಸುವುದಾಗಿದೆ ಎಂದು ಪ್ರತಿಪಾದಿಸಿದರು.
ಯುವಕರು ಧರ್ಮದ ಬಗ್ಗೆ ಚಿಂತನೆ ನಡೆಸುತ್ತಿರುವುದು ಸಂತಸದ ವಿಚಾರ. ಧರ್ಮದ ಅರಿವು ವಯಸ್ಸಾದ ಬಳಿಕ ಪಡೆಯಬೇಕಾದ ವಿಷಯವಲ್ಲ. ಜೀವನದ ಆರಂಭದಿಂದಲೇ ಧರ್ಮವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಯಬೇಕು ಎಂದು ಭಾಗವತ್ ಹೇಳಿದರು.
ಮನುಷ್ಯ ತನ್ನ ಇಚ್ಛೆಯಂತೆ ಎಲ್ಲವೂ ನಡೆಯಬೇಕು ಎಂಬ ಭಾವನೆಯಲ್ಲಿರುತ್ತಾನೆ. ಆದರೆ ಸೃಷ್ಟಿ ತನ್ನದೇ ಆದ ಪ್ರಕೃತಿ ಮತ್ತು ಧರ್ಮದ ಶಾಶ್ವತ ನಿಯಮಗಳಂತೆ ನಡೆಯುತ್ತದೆ. ಹೀಗಾಗಿ ಯುವಕರು ‘ಎಲ್ಲವೂ ನನಗೆ ಗೊತ್ತು’ ಎಂಬ ಅಹಂಕಾರವನ್ನು ಬದಿಗಿಟ್ಟು, ಮನಸ್ಸನ್ನು ತೆರೆದಿಟ್ಟುಕೊಂಡು ಸತ್ಯವನ್ನು ಅರಿಯುವ ಪ್ರಯತ್ನ ಮಾಡಬೇಕು ಎಂದು ಭಾಗವತ್ ಸಲಹೆ ನೀಡಿದರು. ಧರ್ಮವನ್ನು ಅರ್ಥ ಮಾಡಿಕೊಳ್ಳುವುದು ಜೀವನಪೂರ್ತಿ ನಡೆಯುವ ಅನ್ವೇಷಣೆಯಾಗಿದೆ ಎಂದರು. ಇದನ್ನೂ ಓದಿ: ನಿಠಾರಿ ಸರಣಿ ಮಕ್ಕಳ ಹತ್ಯಾಕಾಂಡ ಕೇಸ್ – ಖುಲಾಸೆಯಾಗಿದ್ದ ಸುರೇಂದರ್ ಕೋಲಿ ಆತ್ಮಹತ್ಯೆಗೆ ಶರಣು
ಧರ್ಮದ ಕುರಿತು ಅರಿವು ಪಡೆಯುವ ಮುನ್ನ ಮನಸ್ಸನ್ನು ಪೂರ್ವಗ್ರಹಗಳಿಂದ ಮುಕ್ತಗೊಳಿಸಬೇಕು. ವಿನಯ, ಆತ್ಮಚಿಂತನೆ ಮತ್ತು ನಿರಂತರ ಕಲಿಕೆಯ ಮೂಲಕ ಧರ್ಮದ ನಿಜವಾದ ಅರ್ಥವನ್ನು ಅರಿಯಬಹುದು ಎಂದು ಅವರು ಹೇಳಿದರು.
ಭೋಪಾಲ್: ಭಾರತದ ಚೀತಾ ಸಂರಕ್ಷಣಾ ಯೋಜನೆಗೆ ಮತ್ತೊಂದು ಮಹತ್ವದ ಮೈಲಿಗಲ್ಲು ದೊರೆತಿದ್ದು, ಭಾರತದಲ್ಲೇ ಹುಟ್ಟಿದ ಹೆಣ್ಣು ಚೀತಾ KGP12 ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.
ಹೌದು.. ಪ್ರಾಜೆಕ್ಟ್ ಚೀತಾ ಆರಂಭವಾಗಿ ನಾಲ್ಕು ವರ್ಷ ಪೂರ್ಣಗೊಂಡ ಬೆನ್ನಲ್ಲೇ ಈ ಸಂತಸದ ಸುದ್ದಿ ಹೊರಬಿದ್ದಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಭಾರತದಲ್ಲೇ ಹುಟ್ಟಿದ ಹೆಣ್ಣು ಚೀತಾ KGP12 ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.
ಈ ಮೂಲಕ ಭಾರತದಲ್ಲಿ ಹುಟ್ಟಿ, ಇಲ್ಲಿನ ಕಾಡಿನಲ್ಲೇ ಸಂತಾನೋತ್ಪತ್ತಿ ಮಾಡಿದ ಚೀತಾ ಎಂಬ ಹೆಗ್ಗಳಿಕೆಗೆ KGP12 ಪಾತ್ರವಾಗಿದೆ. ಸೆಪ್ಟೆಂಬರ್ 17, 2022ರಂದು ಭಾರತದಲ್ಲಿ ಚೀತಾಗಳ ಪುನರ್ಪರಿಚಯ ಯೋಜನೆ ಆರಂಭವಾಗಿತ್ತು.
ಇದೀಗ ಭಾರತದಲ್ಲೇ ಹುಟ್ಟಿದ ಚೀತಾ ಕಾಡಿನ ನೈಸರ್ಗಿಕ ಪರಿಸರದಲ್ಲಿ ಮರಿಗಳಿಗೆ ಜನ್ಮ ನೀಡಿರುವುದು ಯೋಜನೆಯ ಮುಂದಿನ ಹಂತಕ್ಕೆ ಮಹತ್ವದ ಬೆಳವಣಿಗೆಯಾಗಿದೆ.
ಲೇಹ್ನಲ್ಲಿ ಚೀತಾ ಹೆಲಿಕಾಪ್ಟರ್ ಅಪಘಾತ: ಪವಾಡಸದೃಶ್ಯ ಬದುಕುಳಿದ ಮೇಜರ್ ಜನರಲ್; ಸೆಲ್ಫಿ ವೈರಲ್!KGP12 ಹಿನ್ನಲೆ
KGP12, ಗಾಮಿನಿ ಎಂಬ ಹೆಣ್ಣು ಚೀತಾದ ಮೊದಲ ಸಂತತಿಯ ಎರಡನೇ ಮರಿಯಾಗಿದೆ. ಗಾಮಿನಿಯನ್ನು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿತ್ತು. KGP12ಗೆ ಸುಮಾರು 25 ತಿಂಗಳ ವಯಸ್ಸಿದ್ದಾಗಲೇ ಅದು ಕಾಡಿನಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವಾಲಯದ ಅಧಿಕೃತ ಮಾಹಿತಿ ತಿಳಿಸಿದೆ.
ಕಾಡಿನಲ್ಲೇ ಚೀತಾ ಮರಿಗಳ ಜನನ
ಚೀತಾಗಳನ್ನು ಭಾರತಕ್ಕೆ ಪುನರ್ಪರಿಚಯಿಸಿದ ಬಳಿಕ ಕಾಡಿನ ನೈಸರ್ಗಿಕ ಪರಿಸರದಲ್ಲಿ ದಾಖಲಾಗಿರುವ ಮೊದಲ ಸಂತಾನೋತ್ಪತ್ತಿ ಘಟನೆ ಇದಾಗಿದೆ. ಅದರಲ್ಲೂ ಭಾರತದಲ್ಲೇ ಹುಟ್ಟಿದ ಹೆಣ್ಣು ಚೀತಾ ಕಾಡಿನಲ್ಲಿ ಮರಿಗಳಿಗೆ ಜನ್ಮ ನೀಡಿರುವುದು ಯೋಜನೆಯ ಪ್ರಮುಖ ಗುರಿಯಾದ ನೈಸರ್ಗಿಕ ಪರಿಸ್ಥಿತಿಯಲ್ಲಿ ಚೀತಾಗಳ ಬದುಕುಳಿಯುವಿಕೆ ಮತ್ತು ಸಂತಾನೋತ್ಪತ್ತಿ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ವನ್ಯಜೀವಿ ತಜ್ಞರ ಪ್ರಕಾರ, ಕಾಡಿನಲ್ಲಿ ಸ್ವಾಭಾವಿಕವಾಗಿ ಸಂತಾನೋತ್ಪತ್ತಿ ನಡೆಯುವುದು ಚೀತಾಗಳು ಭಾರತೀಯ ಪರಿಸರಕ್ಕೆ ಹೊಂದಿಕೊಳ್ಳುತ್ತಿರುವುದರ ಪ್ರಮುಖ ಸೂಚಕವಾಗಿದೆ. KGP12 ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಡಿನಲ್ಲೇ ವಾಸಿಸುತ್ತಿದ್ದು, ಇದೀಗ ತನ್ನ ಮೊದಲ ಸಂತಾನಕ್ಕೆ ಜನ್ಮ ನೀಡಿದೆ.
ಭಾರತದಲ್ಲಿ ಚೀತಾಗಳ ಸಂಖ್ಯೆ ಏರಿಕೆ
ಈ ನಾಲ್ಕು ಮರಿಗಳ ಜನನದೊಂದಿಗೆ ದೇಶದಲ್ಲಿನ ಚೀತಾಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಕುನೋ ರಾಷ್ಟ್ರೀಯ ಉದ್ಯಾನ ಹಾಗೂ ಮಧ್ಯಪ್ರದೇಶದ ಇತರ ಚೀತಾ ವಾಸಸ್ಥಳಗಳಲ್ಲಿ ಚೀತಾ ಸಂರಕ್ಷಣಾ ಕಾರ್ಯಕ್ರಮ ವಿಸ್ತರಿಸುತ್ತಿದೆ. ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಈ ಬೆಳವಣಿಗೆಯನ್ನು ಚೀತಾ ಸಂರಕ್ಷಣಾ ಪ್ರಯತ್ನಗಳಲ್ಲಿನ ಮಹತ್ವದ ಸಾಧನೆ ಎಂದು ಬಣ್ಣಿಸಿದ್ದಾರೆ.
ಕುನೋ ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು, ವನ್ಯಜೀವಿ ನಿರ್ವಹಣಾ ಸಿಬ್ಬಂದಿ, ಪಶುವೈದ್ಯರು ಮತ್ತು ಕ್ಷೇತ್ರ ಸಿಬ್ಬಂದಿಯ ನಿರಂತರ ಪರಿಶ್ರಮವನ್ನು ಅವರು ಶ್ಲಾಘಿಸಿದ್ದಾರೆ.
2022ರಲ್ಲಿ ನಮೀಬಿಯಾದಿಂದ ಚೀತಾಗಳನ್ನು ಭಾರತಕ್ಕೆ ಕರೆತರುವ ಮೂಲಕ ಆರಂಭವಾದ ಪ್ರಾಜೆಕ್ಟ್ ಚೀತಾ ಇದೀಗ ಭಾರತದಲ್ಲೇ ಹುಟ್ಟಿದ ಎರಡನೇ ತಲೆಮಾರಿನ ಚೀತಾಗಳ ಸಂತಾನೋತ್ಪತ್ತಿಯ ಹಂತ ತಲುಪಿದೆ. KGP12ಗೆ ಜನಿಸಿರುವ ನಾಲ್ಕು ಮರಿಗಳು ಈ ಯೋಜನೆಯ ಮುಂದಿನ ಪಯಣಕ್ಕೆ ಹೊಸ ನಿರೀಕ್ಷೆ ಮೂಡಿಸಿವೆ.
ಈ ಮರಿಗಳ ಜನನದೊಂದಿಗೆ ಭಾರತದಲ್ಲಿ ಹುಟ್ಟಿ ಬದುಕುಳಿದಿರುವ ಚೀತಾಗಳ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಸದ್ಯ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 53 ಚೀತಾಗಳಿದ್ದು, ಗಾಂಧಿ ಸಾಗರ್ ವನ್ಯಜೀವಿ ಅಭಯಾರಣ್ಯದಲ್ಲಿ 3 ಚೀತಾಗಳಿವೆ. ಚೀತಾಗಳಿಗೆ ಮೂರನೇ ತಾಣವಾಗಿ ರಾಣಿ ದುರ್ಗಾವತಿ ಹುಲಿ ಸಂರಕ್ಷಿತ ಪ್ರದೇಶವನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಚೀತಾಗಳನ್ನು ಅಲ್ಲಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಲಿದೆ.
– 70 ಕೆಜಿ ಮಾಂಸ, ಬಂದೂಕು ಜಪ್ತಿ
ಚಿಕ್ಕಮಗಳೂರು: ಲಕ್ಕವಳ್ಳಿ (Lakkavalli) ವಲಯದ ಎಂ.ಸಿ.ಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ಕಡವೆ (Sambar Deer) ಬೇಟೆಯಾಡಿ, ಮಾಂಸವನ್ನು ಕತ್ತರಿಸುತ್ತಿದ್ದ ವೇಳೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಎಂಸಿ ಹಳ್ಳಿಯ ಕಿರಣ್, ಗೋವಿಂದರಾಜು ಹಾಗೂ ಭದ್ರಾವತಿಯ ಮಣಿಕಂಠ ಬಂಧಿತ ಆರೋಪಿಗಳು. ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಾಲ್ವರು ಪರಾರಿಯಾಗಿದ್ದು, ಅವರ ಪತ್ತೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ. ಈ ಸಂಬಂಧ ಎಂಸಿ ಹಳ್ಳಿ ಕ್ವಾಟ್ರಸ್ನ ಪ್ರವೀಣ್, ಪ್ರಭು ಸೇರಿದಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹೊಸನಗರ | ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್
ದಾಳಿ ವೇಳೆ, ಸುಮಾರು 70 ಕೆಜಿ ಕಡವೆ ಮಾಂಸ, ತಲೆ ಹಾಗೂ ಕಾಲುಗಳ ಸಮೇತ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಒಂದು ನಾಡ ಬಂದೂಕು, ಒಂದು ದ್ವಿಚಕ್ರ ವಾಹನ, ಬೇಟೆಗೆ ಬಳಸಿದ್ದ ಕತ್ತಿ, ಚಾಕು, ಚೂರಿ ಹಾಗೂ ಹೆಡ್ಲೈಟ್ ಸೇರಿದಂತೆ ವಿವಿಧ ವಸ್ತುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಲಕ್ಕವಳ್ಳಿ ವಲಯದ, ವಲಯ ಅರಣ್ಯಾಧಿಕಾರಿ ಇಂದು ಜಿ.ಎಸ್, ಎಂ.ಸಿ.ಹಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಚನ್ನೇಗೌಡ ಜಿ.ಟಿ, ಲಕ್ಕವಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮನೋಜ್ ಕೆ.ಎಸ್, ಎಂ.ಸಿ.ಹಳ್ಳಿ ಗಸ್ತಿನ ಗಸ್ತು ಅರಣ್ಯ ಪಾಲಕ ಸಂತೋಷ್ ಎಂ.ಬಿ, ಲಕ್ಕವಳ್ಳಿ ಗಸ್ತಿನ ಗಸ್ತು ಅರಣ್ಯ ಪಾಲಕರಾದ ಬಾಲರಾಜ್, ಪುನೀತ್, ವಿಶ್ವನಾಥ್, ಅರಣ್ಯ ವೀಕ್ಷಕಿ ಕುಮಾರಿ ಶೋಭಾ ಸೇರಿದಂತೆ ಲಕ್ಕವಳ್ಳಿ ವಲಯದ ಸಿಬ್ಬಂದಿ ಭಾಗಿಯಾಗಿದ್ದರು. ಇದನ್ನೂ ಓದಿ: ವಿದ್ಯುತ್ ಹಾಯಿಸಿ ಎರಡು ಜಿಂಕೆಗಳ ಬೇಟೆ – ಮೂವರು ಆರೋಪಿಗಳು ಅರೆಸ್ಟ್
ಬಲಿಷ್ಠ ಭಾರತ ತಂಡದ ವಿರುದ್ಧದ ಟಿ20 ಸರಣಿಯಲ್ಲಿ 0-3 ಅಂತರದ ಸೋಲು ಕಂಡ ನಂತರ, ತಮ್ಮ ತಂಡದ ಸಾಮರ್ಥ್ಯವನ್ನು ಭಾರತವು ಅಳೆದು ಪರೀಕ್ಷಿಸಿದೆ ಎಂದು ಅಫ್ಘಾನಿಸ್ತಾನದ ಮುಖ್ಯ ಕೋಚ್ ರಿಚರ್ಡ್ ಪೈಬಸ್ ಹೇಳಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ತಂಡವು ಕೇವಲ 94 ರನ್ಗಳಿಗೆ ಆಲೌಟ್ ಆದ ಬಳಿಕ, ತಮ್ಮ ವೈಫಲ್ಯವನ್ನು ಮರೆಮಾಚಲು ಯಾವುದೇ ದಾರಿ ಉಳಿದಿಲ್ಲ ಎಂದು ಅವರು ಒಪ್ಪಿಕೊಂಡರು.
ಫೆಬ್ರುವರಿಯಲ್ಲಿ ನಡೆದ ಟಿ20 ವಿಶ್ವಕಪ್ನ ಗುಂಪು ಹಂತದ ಪಂದ್ಯದ ನಂತರ ಅಫ್ಘಾನಿಸ್ತಾನ ತಂಡವು ದೀರ್ಘಕಾಲದ ವಿರಾಮದ ಬಳಿಕ ಆಡಿದೆ; ಭಾರತ ವಿರುದ್ಧದ ಈ ಸೋಲು, ಕ್ರಿಕೆಟ್ನ ಅತಿ ಚಿಕ್ಕ ಮಾದರಿಯಲ್ಲಿ ತಂಡವು ಸದ್ಯ ಯಾವ ಹಂತದಲ್ಲಿದೆ ಎಂಬುದನ್ನು ತೋರಿಸಿದೆ. 'ನಾವು ಇನ್ನೂ ಸಾಕಷ್ಟು ಸುಧಾರಣೆಗಳನ್ನು ಮಾಡಿಕೊಳ್ಳಬೇಕಿದೆ. ವಿಶ್ವಕಪ್ ನಂತರ ಇದೇ ನಮ್ಮ ಮೊದಲ ಟಿ20 ಸರಣಿ ಎಂದು ನಾನು ಈ ಹಿಂದೆ ಹೇಳಿದ್ದೆ. ಇದು ನಿಜಕ್ಕೂ ದೀರ್ಘ ವಿರಾಮವಾಗಿತ್ತು. ತಂಡದ ಕೆಲ ಆಟಗಾರರು ಅಂದಿನಿಂದ ಇದೇ ಮೊದಲ ಬಾರಿಗೆ ತಂಡಕ್ಕೆ ಮರಳಿದ್ದಾರೆ. ನಮ್ಮ ಸಾಮರ್ಥ್ಯವನ್ನು ಅಳೆಯಲಾಗಿದೆ ಮತ್ತು ಪರೀಕ್ಷಿಸಲಾಗಿದೆ; ನಮ್ಮಲ್ಲಿರುವ ಕೊರತೆಗಳು ಎಲ್ಲಿವೆ ಎಂಬುದು ನಮಗೆ ಈಗ ತಿಳಿದಿದೆ. ಇನ್ನು ನಾವು ಆ ಕೊರತೆಗಳನ್ನು ಸರಿಪಡಿಸುವ ಕೆಲಸ ಆರಂಭಿಸಬೇಕಿದೆ' ಎಂದರು.
'ನಮ್ಮ ಪ್ರದರ್ಶನ ಕಳಪೆಯಾಗಿತ್ತು. ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ಅವಕಾಶ ಸಿಕ್ಕಿದ್ದು ನಮಗೆ ಸಂತೋಷ ತಂದಿತ್ತು. ಆರಂಭಿಕ 10 ಓವರ್ಗಳಲ್ಲಿ ಬೌಲಿಂಗ್ ಮೇಲೆ ನಮಗೆ ನಿಯಂತ್ರಣವಿರಲಿಲ್ಲ; ಆ ಸಮಯದಲ್ಲಿ ಅಭಿಷೇಕ್ ಮತ್ತು ಸಂಜು ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು. ಆದರೆ, 10 ರಿಂದ 20ನೇ ಓವರ್ಗಳ ಅವಧಿಯಲ್ಲಿ ನಾವು ತೋರಿದ ಚೇತರಿಕೆ ನನಗೆ ನಿಜಕ್ಕೂ ತೃಪ್ತಿ ನೀಡಿತು. ನಮ್ಮ ಆಟದಲ್ಲಿ ಕಂಡುಬಂದ ಆ ಹೋರಾಟದ ಮನೋಭಾವ ಅದ್ಭುತವಾಗಿತ್ತು; ಫೀಲ್ಡಿಂಗ್ನಲ್ಲಿ ನಮ್ಮ ಕೌಶಲ ಮತ್ತು ಉದ್ದೇಶಗಳು ಕೂಡ ಉತ್ತಮವಾಗಿದ್ದವು' ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಪೈಬಸ್ ಹೇಳಿದರು.
ಭಾರತದ ಇನಿಂಗ್ಸ್ನ ಅಂತಿಮ 60 ಎಸೆತಗಳಲ್ಲಿ ಅಫ್ಘಾನಿಸ್ತಾನ 79 ರನ್ಗಳನ್ನು ಬಿಟ್ಟುಕೊಟ್ಟಿತಾದರೂ ವಿಶೇಷವಾಗಿ ಅಭಿಷೇಕ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್ನಿಂದಾಗಿ ಪವರ್-ಪ್ಲೇನಲ್ಲೇ 100 ರನ್ಗಳು ಬಂದವು. ಬೌಲಿಂಗ್ನಲ್ಲಿನ ಅಸ್ಥಿರತೆ ಬಗ್ಗೆ ಪೈಬಸ್ ಅಸಮಾಧಾನ ವ್ಯಕ್ತಪಡಿಸಿದರು. 'ಅಂತಿಮ 10 ಓವರ್ಗಳಲ್ಲಿ ನಮ್ಮ ಫೀಲ್ಡಿಂಗ್ ಅತ್ಯುತ್ತಮವಾಗಿತ್ತು ಎಂದು ನನಗೆ ಅನ್ನಿಸಿತು. ರಶೀದ್ ಅದಕ್ಕೆ ಮುಂಚೂಣಿಯಲ್ಲಿದ್ದರು; ಅವರ ಪ್ರದರ್ಶನ ಅದ್ಭುತವಾಗಿತ್ತು. ಇನ್ನು ಬ್ಯಾಟಿಂಗ್ ವಿಷಯಕ್ಕೆ ಬಂದರೆ, ನಾವು 220 ರನ್ಗಳ ಗುರಿಯನ್ನು ಬೆನ್ನಟ್ಟಬೇಕಿತ್ತು' ಎಂದರು.
India vs Afghanistan: ಅಭಿಷೇಕ್ ಅಬ್ಬರಕ್ಕೆ ಅಫ್ಘಾನ್ ಧೂಳೀಪಟ; 127 ರನ್ಗಳ ಭರ್ಜರಿ ಜಯ, T20 ಸರಣಿ ಕ್ಲೀನ್ ಸ್ವೀಪ್'ಗುರಿಯನ್ನು ಬೆನ್ನಟ್ಟಿ ತಲುಪುವುದೇ ಇಂಟೆಂಟ್ ಆಗಿರುತ್ತದೆ. ಸ್ಕೋರ್ಬೋರ್ಡ್ನ ಒತ್ತಡವಿರುತ್ತದೆ ಮತ್ತು ಪ್ರತಿ ಓವರ್ಗೆ 11 ರನ್ಗಳ ವೇಗದಲ್ಲಿ ಆಡಬೇಕಾಗುತ್ತದೆ; ಇಲ್ಲಿ ತಪ್ಪಿಸಿಕೊಳ್ಳಲು ಯಾವುದೇ ದಾರಿಯಿರುವುದಿಲ್ಲ. ಅಂತಿಮವಾಗಿ ಗುರಿ ತಲುಪಲು ವಿಫಲರಾದರೆ, 150 ರನ್ ಗಳಿಸಿದರೂ ರನ್-ರೇಟ್ನಲ್ಲಿ ಹಿಂದುಳಿದಿದ್ದರೆ ವ್ಯರ್ಥವಾಗುತ್ತದೆ' ಎಂದು ಹೇಳಿದರು.
'ನಾವು ನಮ್ಮ ಆಟದ ಯೋಜನೆಯನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಬೇಕಿತ್ತು. ಆದರೆ ನಮಗೆ ಅದರಲ್ಲಿ ಯಶಸ್ಸು ಸಿಗಲಿಲ್ಲ. ಆರಂಭಿಕ ಆಟಗಾರರಾದ ಇಬ್ರಾಹಿಂ ಮತ್ತು ಗುರ್ಬಾಜ್ ಅವರ ವಿಷಯದಲ್ಲಿ, ಆಕ್ರಮಣಕಾರಿ ಆಟವಾಡುವ ನಮ್ಮ ಉದ್ದೇಶ ಮತ್ತು ಮನಸ್ಥಿತಿ ಉತ್ತಮವಾಗಿತ್ತು ಎಂದು ನನಗೆ ಅನ್ನಿಸಿತು. ಭಾರತದ ಆರಂಭಿಕ ಬೌಲರ್ಗಳ ವಿರುದ್ಧ ನಾವು ಉತ್ತಮವಾಗಿ ಆಡಿದೆವು. ಆದರೆ ಆ ಸ್ಥಿರತೆಯನ್ನು ಕಾಯ್ದುಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ' ಎಂದು ಅವರು ತಿಳಿಸಿದರು.
'ಸಮಸ್ಯೆಯು ಬ್ಯಾಟಿಂಗ್ ಕ್ರಮಾಂಕಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಒತ್ತಡದ ಪರಿಸ್ಥಿತಿಯಲ್ಲಿ ಆಟವನ್ನು ಕಾರ್ಯಗತಗೊಳಿಸುವುದಕ್ಕೆ (execution) ಸಂಬಂಧಿಸಿದ್ದು. ಆರಂಭಿಕರಾಗಿ ಇಬ್ರಾಹಿಂ ಮತ್ತು ಗುರ್ಬಾಜ್ ಈಗಾಗಲೇ ನೆಲೆಗೊಂಡಿರುವ ಜೋಡಿಯಾಗಿದ್ದಾರೆ. ನಮ್ಮ ಆಟದ ಧೋರಣೆ ಅಥವಾ ಉದ್ದೇಶವು ಈ ಬಾರಿ ಉತ್ತಮವಾಗಿತ್ತು ಎಂದು ನನಗೆ ಅನ್ನಿಸಿತು. ಹಿಂದಿನ ಪಂದ್ಯದಲ್ಲಿ ನಾವು ಅತಿಯಾದ ನಿಷ್ಕ್ರಿಯತೆಯನ್ನು ತೋರಿದ್ದೆವು ಮತ್ತು ಭಾರತೀಯ ಬೌಲರ್ಗಳಿಗೆ ನಮ್ಮ ಮೇಲೆ ಸುಲಭವಾಗಿ ಹಿಡಿತ ಸಾದಿಸಲು ಅವಕಾಶ ನೀಡಿದ್ದೆವು ಎಂದು ನನಗೆ ಅನಿಸಿತ್ತು. ಹಾಗಾಗಿ, ಭಾರತದ ಬೌಲಿಂಗ್ ದಾಳಿಯನ್ನು ನಾವು ಎದುರಿಸಿದ ರೀತಿ ನನಗೆ ತೃಪ್ತಿ ತಂದಿದೆ. 220 ರನ್ಗಳ ಗುರಿಯನ್ನು ಬೆನ್ನಟ್ಟುವಾಗ ನೀವು ನಿರಂತರವಾಗಿ ಮುನ್ನಡೆಯುತ್ತಲೇ ಇರಬೇಕು. ಹೀಗಾಗಿ, ನಮ್ಮ ಎಲ್ಲ ಆಟಗಾರರು ಸುಧಾರಿಸಿಕೊಳ್ಳಬೇಕಾದ ಅಂಶಗಳಿವೆ. ಬೌಲಿಂಗ್ನ ವಿಷಯದಂತೆಯೇ, ಭಾರತದಂತಹ ಪ್ರಬಲ ಬೌಲಿಂಗ್ ಪಡೆಯ ವಿರುದ್ಧ ಆಡುವಾಗ—ಅದರಲ್ಲೂ ಜಸ್ಪ್ರೀತ್ ಮತ್ತು ಅಕ್ಷರ್ ಅವರಂತಹ ವಿಶ್ವದರ್ಜೆಯ ಬೌಲರ್ಗಳನ್ನು ಎದುರಿಸುವಾಗ—ನಿಮ್ಮ ಆಟದ ಯೋಜನೆಗಳ ಬಗ್ಗೆ ನೀವು ಅತ್ಯಂತ ಸ್ಪಷ್ಟತೆಯನ್ನು ಹೊಂದಿರಬೇಕಾಗುತ್ತದೆ' ಎಂದರು.
'ಹಾಗಾಗಿ ನಮಗೆ ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ. ಇಲ್ಲಿಗೆ ಬಂದು, ವಿಶ್ವದ ಅತ್ಯುತ್ತಮ T20 ತಂಡದ ವಿರುದ್ಧ ಆಡುವುದು ಮತ್ತು ಒತ್ತಡದ ಪರಿಸ್ಥಿತಿಯಲ್ಲಿ ಆಡುವುದು ಹೇಗಿರುತ್ತದೆ ಎಂಬುದನ್ನು ಅರಿಯುವುದು ಬಹಳ ಮುಖ್ಯ; ಏಕೆಂದರೆ ಇದು ಲೀಗ್ ಕ್ರಿಕೆಟ್ ಅಲ್ಲ ಅಥವಾ ಕೆಳ ಶ್ರೇಯಾಂಕದ ತಂಡಗಳ ವಿರುದ್ಧದ ಅಂತರರಾಷ್ಟ್ರೀಯ ಪಂದ್ಯವೂ ಅಲ್ಲ. ಇದೊಂದು ಅತ್ಯುನ್ನತ ಮಟ್ಟದ ಪರೀಕ್ಷೆಯಾಗಿದೆ. ಹೀಗಾಗಿ, ನಾವು ಯಾವ ವಿಷಯಗಳಲ್ಲಿ ಸುಧಾರಣೆ ಮಾಡಿಕೊಳ್ಳಬೇಕು ಎಂಬುದು ನಮಗೆ ಸ್ಪಷ್ಟವಾಗಿ ಅರಿವಾಗುತ್ತಿದೆ. ಪಂದ್ಯದ ಮೇಲೆ ಹಿಡಿತ ಸಾಧಿಸಲು ಯಾವ ರೀತಿಯ ಕೌಶಲಗಳು ಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ನಮ್ಮ ಕ್ರಿಕೆಟಿಗರಿಗೆ, ಅದರಲ್ಲೂ ವಿಶೇಷವಾಗಿ ನಮ್ಮ ಬೌಲರ್ಗಳಿಗೆ ಇದೊಂದು ಉತ್ತಮ ಅವಕಾಶ. ಇಂತಹ ಅನುಭವ ಸಿಗುವವರೆಗೂ, ಆ ವಿಷಯದ ನೈಜ ಸ್ವರೂಪ ಏನೆಂಬುದು ನಮಗೆ ತಿಳಿಯುವುದಿಲ್ಲ'
ಬೆಂಗಳೂರು: ರಾಜ್ಯದ ಜನರಿಗೆ ದಿನೇ ದಿನೇ ಒಂದಿಲ್ಲೊಂದು ರೀತಿಯಲ್ಲಿ ಬೆಲೆ ಏರಿಕೆ ಬಿಸಿ ತಟ್ಟುತ್ತಲೇ ಇದೆ. ಇದೀಗ ಹಾಲು ಉತ್ಪಾದಕರ ಒಕ್ಕೂಟ ಲೀಟರ್ ಹಾಲಿಗೆ 8 ರೂ. ಏರಿಕೆ (Milk Price) ಮಾಡುವಂತೆ ಡಿಮ್ಯಾಂಡ್ ಮಾಡಿದೆ.
ಈಗಾಗಲೇ ಅಗತ್ಯ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಗಳಿಂದ ಕಂಗಾಲಾಗಿರುವ ಜನ ಸಾಮಾನ್ಯರಿಗೆ ಮತ್ತೊಂದು ಆಘಾತ ಕಾದಿದೆ. ಕಳೆದ ವರ್ಷವಷ್ಟೇ ಏರಿಕೆ ಕಂಡಿದ್ದ ನಂದಿನಿ ಹಾಲಿನ (Nandini Milk) ದರ ಈಗ ಮತ್ತೆ ಬೆಲೆ ಏರಿಕೆಗೆ ಸೈಲೈಂಟ್ ಆಗಿ ಸಜ್ಜಾಗಿದೆ. ಬರೋಬ್ಬರಿ ಲೀಟರ್ಗೆ 8 ರೂ ಏರಿಕೆಗೆ ಹಾಲು ಉತ್ಪಾದಕರ ಸಂಘ ಪ್ರಸ್ತಾವನೆ ಇಟ್ಟಿದೆ. ಇದನ್ನೂ ಓದಿ: ಭೀಕರ ಬರ ಎದುರಿಸುತ್ತಿದ್ದರೂ ರಾಮದುರ್ಗ, ಸವದತ್ತಿಯನ್ನು ಕೈಬಿಟ್ಟ ಸರ್ಕಾರ – ಅನ್ನದಾತರಿಗೆ ಆಘಾತ
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಂಡ್ಯ, ಶಿವಮೊಗ್ಗ, ಚಾಮರಾಜನಗರ, ತುಮಕೂರು ಸೇರಿದಂತೆ ಹಲವು ಹಾಲು ಉತ್ಪಾದಕರ ಒಕ್ಕೂಟ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಪ್ರತಿ ಲೀಟರ್ ಹಾಲಿಗೆ 8 ರೂ. ಹಾಗೂ ರೈತರ ಪ್ರೋತ್ಸಾಹ ಧನವನ್ನು 8 ರೂ.ಗೆ ಏರಿಸಲು ಒತ್ತಾಯಿಸಿದೆ. ಕಳೆದ 8 ತಿಂಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ರೈತರ ಹಿತ ಕಾಪಾಡಬೇಕು. ಹೀಗಾಗಿ ದರ ಏರಿಕೆ ಮಾಡಬೇಕು. ಬೆಲೆ ಹೆಚ್ಚಳ ಮಾಡದಿದ್ದರೆ ಮೂರು ದಿನದಲ್ಲಿ ವಿಧಾನಸೌಧ ಚಲೋ ಮಾಡ್ತೀವಿ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಇನ್ನು ಹಾಲಿನ ದರ ಏರಿಕೆ ಪ್ರಸ್ತಾವನೆಗೆ ಒಕ್ಕೂಟ ನಾನಾ ಕಾರಣಗಳನ್ನು ನೀಡಿದೆ. ರಾಜ್ಯದಲ್ಲಿ ತೀವ್ರ ಬರಗಾಲ ಇದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರೈತರಿಗೆ ನೆರವಾಗಲು ದರ ಏರಿಕೆ ಮಾಡಬೇಕೆಂದು ಆಗ್ರಹಿಸಿವೆ.ಇದನ್ನೂ ಓದಿ: ನಿವೃತ್ತಿಯ ದಿನವೇ 1.01 ಕೋಟಿ ದೇಣಿಗೆ – PM CARESಗೆ ನ್ಯಾ.ಅವನೀಂದ್ರ ಕುಮಾರ್ ಸಿಂಗ್ ಕೊಡುಗೆ
ಹಾಲಿನ ದರ ಏರಿಕೆ ಪ್ರಸ್ತಾವನೆಗೆ ಕಾರಣ:
ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಶೇ.70ರಷ್ಟು ಮಳೆ ಕೊರತೆ ಉಂಟಾಗಿದೆ. ಇದರಿಂದ ಹುಲ್ಲಿನ ಕೊರತೆಯಾಗಿದ್ದು, ಪಶು ಆಹಾರದ ಕಚ್ಚಾ ಸಾಮಗ್ರಿ, ಮೆಕ್ಕೆಜೋಳ, ಇಂಡಿ-ಬೂಸಾದ ದರ ಶೇ.25ರಷ್ಟು ಏರಿಕೆಯಾಗಿದೆ. ರಾಸುಗಳಿಗೆ ಬಳಸುವ ನೆಲಹಾಸು ದರ ಹೆಚ್ಚಳವಾಗಿದ್ದು, ಪೆಟ್ರೋಲ್, ಡೀಸೆಲ್ ದರವೂ ಏರಿಕೆಯಾಗಿದೆ. ಹೀಗಾಗಿ ದರ ಏರಿಕೆ ಮಾಡಬೇಕು ಎಂದು ಒಕ್ಕೂಟ ಪ್ರಸ್ತಾವನೆ ಇಟ್ಟಿದೆ. ಒಟ್ಟಾರೆ, ರಾಜ್ಯದ ಜನರಿಗೆ ದರ ಏರಿಕೆಯ ಬಿಸಿ ಸುಡುತ್ತಿರುವಾಗಲೇ ಮತ್ತೊಂದು ಶಾಕ್ ಸಿಗೋದು ಬಹುತೇಕ ಖಚಿತವಾಗಿದೆ.ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ಇನ್ಸ್ಟಾದಲ್ಲಿ ಅವಹೇಳನ; ಯುವಕನಿಗೆ ಹೈಕೋರ್ಟ್ ತರಾಟೆ
ರಾಜ್ಯದಲ್ಲಿ ಒಕ್ಕಲಿಗ ಮತಗಳನ್ನು ಕೇವಲ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಭಾವದಿಂದಲೇ ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಗುರುವಾರ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಜನರು ಕೇವಲ ಶಿವಕುಮಾರ್ ಅವರನ್ನು ನೋಡಿ ಮತ ಹಾಕುವುದಿಲ್ಲ.
ದೇವೇಗೌಡರನ್ನೂ ನೋಡಿಕೊಂಡು ಮತ ಹಾಕುತ್ತಾರೆ. ಸಿದ್ದರಾಮಯ್ಯ ಬಲಿಷ್ಠರಾಗಿದ್ದರೆ ಕಾಂಗ್ರೆಸ್ ಬಲಿಷ್ಠವಾಗಿರುತ್ತದೆ.
ಸಿದ್ದರಾಮಯ್ಯ ದುರ್ಬಲರಾದರೆ ಕಾಂಗ್ರೆಸ್ ದುರ್ಬಲವಾಗುತ್ತದೆ. ಅಷ್ಟೇ ಎಂದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
ಬೆಂಗಳೂರು: ರಾಜ್ಯದಲ್ಲಿ ಗ್ರಾಹಕರಿಗೆ ಮತ್ತೆ ಹಾಲಿನ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದ್ದು, ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ ₹8 ರಿಂದ ₹10 ರವರೆಗೆ ಹೆಚ್ಚಿಸಬೇಕು ಎಂದು ಹಾಲು ಒಕ್ಕೂಟಗಳು ರಾಜ್ಯ ಸರ್ಕಾರ ಹಾಗೂ ಕೆಎಂಎಫ್ಗೆ ಪ್ರಸ್ತಾವನೆ ಸಲ್ಲಿಸಿದೆ. ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ ಹಾಗೂ ಬೆಂಗಳೂರು ಹಾಲು ಒಕ್ಕೂಟ ಜಂಟಿಯಾಗಿ ಈ ಬೇಡಿಕೆಯನ್ನು ಇಟ್ಟಿದ್ದು, ರೈತರ ಹಿತರಕ್ಷಣೆಗಾಗಿ ದರ ಹೆಚ್ಚಳ ಅನಿವಾರ್ಯ ಎಂದು ಹೇಳಿವೆ. ಆ ಕುರಿತ ವರದಿ ಇಲ್ಲಿದೆ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಮೂಲ್ ರಾಮನಗರ ಕ್ಷೇತ್ರದ ನಿರ್ದೇಶಕ ಪಿ. ನಾಗರಾಜು, ತೀವ್ರ ಸಂಕಷ್ಟದಲ್ಲಿರುವ ಹೈನುಗಾರರನ್ನು ಮತ್ತು ಹಾಲಿನ ಒಕ್ಕೂಟಗಳನ್ನು ನಷ್ಟದಿಂದ ರಕ್ಷಿಸಲು ನಂದಿನಿ ಹಾಲಿನ ದರವನ್ನು ತಕ್ಷಣವೇ ಕನಿಷ್ಠ ₹8 ರಿಂದ ₹10 ರಷ್ಟು ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು. ಅದರಂತೆ, ಈ ದರ ಏರಿಕೆ ಬೇಡಿಕೆಯನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ 3 ದಿನಗಳ ಕಾಲಾವಕಾಶ (ಡೆಡ್ಲೈನ್) ನೀಡಿದ್ದು, ಒಂದು ವೇಳೆ ಸರ್ಕಾರ ದರ ಹೆಚ್ಚಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ಸೆಪ್ಟೆಂಬರ್ 22 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆಗೂ ರೈತ ಸಂಘಟನೆಗಳು ಸಜ್ಜಾಗಿವೆ.
ದರ ಏರಿಕೆಯ ಬೇಡಿಕೆಗೆ ಕಾರಣವೇನು?
ಮೇವಿನ ತೀವ್ರ ಕೊರತೆ: ರಾಜ್ಯದಲ್ಲಿ ಎದುರಾಗಿರುವ ಬರಗಾಲದ ಪರಿಸ್ಥಿತಿಯಿಂದಾಗಿ ದನಕರುಗಳಿಗೆ ಮೇವಿನ ತೀವ್ರ ಅಭಾವ ಸೃಷ್ಟಿಯಾಗಿದೆ.
ಉತ್ಪಾದನಾ ವೆಚ್ಚ ಹೆಚ್ಚಳ: ಪಶು ಆಹಾರದ ಬೆಲೆಗಳು ಗಗನಕ್ಕೇರಿವೆ. ಹಸುಗಳ ಹಟ್ಟಿಗೆ ಬಳಸುವ ರಬ್ಬರ್ ಮ್ಯಾಟ್ ಸೇರಿದಂತೆ ಹೈನುಗಾರಿಕೆಗೆ ಬೇಕಾಗುವ ಪರಿಕರಗಳ ವೆಚ್ಚ ದುಪ್ಪಟ್ಟಾಗಿದೆ.
ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ದರ: ನೆರೆಹೊರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಇಂದಿಗೂ ತುಂಬಾ ಕಡಿಮೆಯಿದ್ದು, ಪ್ರಸ್ತುತ ವೆಚ್ಚ ನಿಭಾಯಿಸುವುದು ಹೈನುಗಾರರಿಗೆ ನಷ್ಟದ ಹಾದಿಯಾಗಿದೆ ಎಂದು ಒಕ್ಕೂಟಗಳು ವಾದಿಸಿವೆ.
ಮುಂದುವರೆದು, ಹಾಲು ಒಕ್ಕೂಟಗಳ ಈ ಪ್ರಸ್ತಾವನೆಗೆ ಸರ್ಕಾರ ಇನ್ನೂ ಅಧಿಕೃತ ಅಸ್ತು ಎಂದಿಲ್ಲ. ಆದರೆ, ಒಂದು ವೇಳೆ ಸರ್ಕಾರ ಒಕ್ಕೂಟಗಳ ಒತ್ತಡಕ್ಕೆ ಮಣಿದು ದರ ಏರಿಕೆಗೆ ಅನುಮತಿ ನೀಡಿದರೆ, ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರ ಹಾಗೂ ಮಧ್ಯಮ ವರ್ಗದ ಜೇಬಿಗೆ ಮತ್ತೊಂದು ಭಾರಿ ಹೊರೆ ಬೀಳಲಿದೆ. ಅದರಂತೆ, ಕೆಎಂಎಫ್ ಮನವಿಯ ಮೇರೆಗೆ ಮುಖ್ಯಮಂತ್ರಿಗಳು ಹಾಗೂ ಸಹಕಾರ ಸಚಿವರು ಚರ್ಚಿಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಹೊರಬೀಳಬೇಕಿದೆ.
Ration Card e-KYC ಮಾಡಿಸಲು ಮುಗಿಬಿದ್ದ ಜನರಿಗೆ ಕೊನೆಗೂ ಸಿಕ್ತು ಬಿಗ್ ರಿಲೀಫ್! ಇ-ಕೆವೈಸಿ ಗಡುವು ವಿಸ್ತರಿಸಿದ ಸರ್ಕಾರ; ಕೊನೆಯ ದಿನಾಂಕ ಯಾವಾಗ?ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಉತ್ತೇಜಿಸಲು ರಿಲಯನ್ಸ್ ಫೌಂಡೇಶನ್ (Reliance Foundation) 2026-27ನೇ ಶೈಕ್ಷಣಿಕ ಸಾಲಿನ ‘ಯುಜಿ (UG) ವಿದ್ಯಾರ್ಥಿವೇತನ’ಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ದೇಶಾದ್ಯಂತ ಒಟ್ಟು 5,000 ವಿದ್ಯಾರ್ಥಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರು ನಿಗದಿತ ದಿನಾಂಕದೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಹತಾ ಮಾನದಂಡಗಳು:- ಕೋರ್ಸ್: 2026-27ನೇ ಶೈಕ್ಷಣಿಕ ವರ್ಷದಲ್ಲಿ ಯಾವುದೇ ವಿಭಾಗದಲ್ಲಿ (Degree Streams) ನಿಯಮಿತ ಹಾಗೂ ಪೂರ್ಣಾವಧಿ (Regular Full-time) ಪದವಿಯ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು.
- ಶೈಕ್ಷಣಿಕ ಅಂಕಗಳು: 12ನೇ ತರಗತಿ ಅಥವಾ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 60 ರಷ್ಟು ಅಂಕಗಳನ್ನು ಗಳಿಸಿರಬೇಕು.
- ಆದಾಯ ಮಿತಿ: ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ. 2.5 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಆಯ್ಕೆಯಾದ 5,000 ವಿದ್ಯಾರ್ಥಿಗಳಿಗೆ ಅವರ ಪದವಿ ಅಧ್ಯಯನದ ಅವಧಿಯಲ್ಲಿ ಗರಿಷ್ಠ ರೂ. 2 ಲಕ್ಷದವರೆಗೆ ವಿದ್ಯಾರ್ಥಿವೇತನ ಸಹಾಯಧನ ಸಿಗಲಿದೆ. ಈ ಮೊತ್ತವನ್ನು ಕಾಲೇಜು ಶುಲ್ಕ, ಹಾಸ್ಟೆಲ್ ವೆಚ್ಚ, ಪುಸ್ತಕಗಳು ಅಥವಾ ಲ್ಯಾಪ್ಟಾಪ್ ಖರೀದಿಯಂತಹ ಶೈಕ್ಷಣಿಕ ಅಗತ್ಯಗಳಿಗೆ ಬಳಸಿಕೊಳ್ಳಬಹುದು.
ಇದನ್ನೂ ಓದಿ: ಕಾಲೇಜಿನಲ್ಲಿ ರಾತ್ರಿ ಕಾವಲುಗಾರನ ಕೆಲಸ ಮಾಡುತ್ತಲೇ ಓದಿ ಸತತ 3 ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಸಾಧಕ!
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?ಅಭ್ಯರ್ಥಿಗಳ ಆಯ್ಕೆಯನ್ನು ಮುಖ್ಯವಾಗಿ ‘ಮೆರಿಟ್-ಕಮ್-ಮೀನ್ಸ್’ (ಪ್ರತಿಭೆ ಮತ್ತು ಆರ್ಥಿಕ ಸ್ಥಿತಿ) ಆಧಾರದ ಮೇಲೆ ನಡೆಸಲಾಗುತ್ತದೆ. ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಆನ್ಲೈನ್ ಆಪ್ಟಿಟ್ಯೂಡ್ ಟೆಸ್ಟ್ (Aptitude Test) ಗೆ ಹಾಜರಾಗಬೇಕಿರುತ್ತದೆ. ಆಪ್ಟಿಟ್ಯೂಡ್ ಪರೀಕ್ಷೆಯ ಅಂಕಗಳು, 12ನೇ ತರಗತಿಯ ಸಾಧನೆ ಮತ್ತು ಅರ್ಜಿ ನಮೂನೆಯಲ್ಲಿ ನೀಡಲಾದ ವೈಯಕ್ತಿಕ ವಿವರಗಳನ್ನು ಮೌಲ್ಯಮಾಪನ ಮಾಡಿ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ:ಅರ್ಹ ಅಭ್ಯರ್ಥಿಗಳು scholarships.reliancefoundation.org ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 5 ಕೊನೆಯ ದಿನಾಂಕವಾಗಿದೆ. ಆನ್ಲೈನ್ ಅರ್ಜಿಯ ಜೊತೆಗೆ ಸಾಮರ್ಥ್ಯ ಪರೀಕ್ಷೆಯನ್ನು (Aptitude Test) ಪೂರ್ಣಗೊಳಿಸಿದರೆ ಮಾತ್ರ ಅರ್ಜಿಯನ್ನು ಸಂಪೂರ್ಣವೆಂದು ಪರಿಗಣಿಸಲಾಗುತ್ತದೆ.
ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ ಬಾಸ್ ಕನ್ನಡ ಮನೆ ಆಟ ಮತ್ತು ಗಲಾಟೆಗಳಿಗೆ ಹೆಸರುವಾಸಿಯಾಗಿದೆ. ಇದೀಗ ಹೊಸ ಪ್ರೋಮೋ ಹೊರಬಿದ್ದಿದ್ದು, ಟಾಸ್ಕ್ ಒಂದರಲ್ಲಿ ಸಂಚಾಲಕರ ನಿರ್ಧಾರವೇ ದೊಡ್ಡ ಗೊಂದಲ ಹಾಗೂ ಮಾತಿನ ಚಕಮಕಿಗೆ ಕಾರಣವಾಗಿದೆ. ಅಲ್ಲದೆ, ಗಗನ್ ಚಿನ್ನಪ್ಪ ಅವರ ನಿರ್ಧಾರ ಸಾಕಷ್ಟು ಕುತೂಹಲ ಮೂಡಿಸಿದೆ.
ಗಗನ್ ಅವರು ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದಾರೆ. ಅಲ್ಲದೆ, ಉಸ್ತುವಾರಿಯ ನಿರ್ಧಾರ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಉಸ್ತುವಾರಿ ವೈಷ್ಣವಿ ಅವರು ಜಗದೀಶ್ ಬಂದು ಬಜರ್ ಒತ್ತಿದರು ಎಂದು ಘೋಷಿಸಿದ್ದಾರೆ. ಆದರೆ, ಇದಕ್ಕೆ ಒಪ್ಪದ ಗಗನ್ ಚಿನ್ನಪ್ಪ ತಾವು ಮೊದಲು ಬಜರ್ ಒತ್ತಿದ್ದಾಗಿ ಪ್ರಬಲವಾಗಿ ವಾದಿಸಿದ್ದಾರೆ.
‘ನಾನು ಯಾವತ್ತೂ ಗೇಮ್ನಲ್ಲಿ ಮೋಸ ಮಾಡಲ್ಲ’ ಎಂದು ಗಗನ್ ಕಿರುಚಾಡುತ್ತಾ ತಮ್ಮ ಪಾಯಿಂಟ್ ಅನ್ನು ಸಮರ್ಥಿಸಿಕೊಂಡರು. ಆ ಬಳಿಕ ತಾಂಡವ್ ಮೊದಲು ಬಜರ್ ಒತ್ತಿದ್ದರು. ಈ ವೇಳೆ ವೈಷ್ಣವಿ, ಗಗನ್ ಚಿನ್ನಪ್ಪ ಮೊದಲು ಬಜರ್ ಒತ್ತಿದ್ದು ಎಂದರು. ಆಗ ಗಗನ್ ಸೈಲೆಂಟ್ ಆಗಿ ಇದ್ದರು. ಇದು ಪ್ರಶ್ನೆಯನ್ನು ಹುಟ್ಟುಹಾಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅಭಿಷೇಕ್ ಶರ್ಮಾ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಕೇವಲ 34 ಎಸೆತಗಳನ್ನು ಎದುರಿಸಿದ ಅಭಿಷೇಕ್ 11 ಸಿಕ್ಸರ್ಗಳು ಮತ್ತು 9 ಬೌಂಡರಿಗಳ ಸಹಿತ 108 ರನ್ಗಳ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್ಗಾಗಿ ಅಭಿಷೇಕ್ಗೆ ‘ಪಂದ್ಯಶ್ರೇಷ್ಠ' ಮತ್ತು ‘ಸರಣಿಶ್ರೇಷ್ಠ' ಪ್ರಶಸ್ತಿಯೂ ಲಭಿಸಿತು. ಹಾಗೆಯೇ ಅಭಿಷೇಕ್ ಬರೋಬ್ಬರಿ 7 ದಾಖಲೆಗಳನ್ನು ನಿರ್ಮಿಸಿದರು(PC-PTI).
ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿದರು. ಈ ಮೂಲಕ ಭಾರತದ ಪರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆ ಅಭಿಷೇಕ್ ಪಾಲಾಗಿದೆ. ಇದಕ್ಕೂ ಮೊದಲು ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. 2017 ರಲ್ಲಿ ಇಂದೋರ್ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು(PC-PTI).
ಇದರ ಜೊತೆಗೆ ಐಸಿಸಿಯ ಪೂರ್ಣಾವಧಿ ಸದಸ್ಯತ್ವ ಹೊಂದಿರುವ ತಂಡಗಳ ಪಟ್ಟಿಯಲ್ಲಿ ಅತಿ ವೇಗದ ಟಿ20 ಶತಕ ಬಾರಿಸಿದ ದಾಖಲೆಯೂ ಅಭಿಷೇಕ್ ಪಾಲಾಗಿದೆ. ಇದಕ್ಕೂ ಮೊದಲು, ಈ ದಾಖಲೆಯನ್ನು ಸಿಕಂದರ್ ರಜಾ ಮತ್ತು ಫಿನ್ ಅಲೆನ್ ಜಂಟಿಯಾಗಿ ಹೊಂದಿದ್ದರು. ಇವರಿಬ್ಬರು ತಲಾ 33 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಹಾಗೆಯೇ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಮೂರನೇ ಅತಿ ವೇಗದ ಶತಕವೂ ಇದಾಗಿದೆ(PC-PTI).
ಈ ಪಂದ್ಯದಲ್ಲಿ ಮೊದಲ ಆರು ಓವರ್ಗಳಲ್ಲಿ ಅಂದರೆ ಪವರ್ಪ್ಲೇನಲ್ಲಿ ಅಭಿಷೇಕ್ ಅದ್ಭುತ ಬ್ಯಾಟಿಂಗ್ ಮಾಡಿದರು. ಪವರ್ಪ್ಲೇನಲ್ಲಿ ಕೇವಲ 22 ಎಸೆತಗಳಲ್ಲಿ 76 ರನ್ ಬಾರಿಸಿದರು. ಈ ಮೂಲಕ ಪುರುಷರ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಪವರ್ಪ್ಲೇ ಸಮಯದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು. ಇದಕ್ಕೂ ಮೊದಲು, ಈ ದಾಖಲೆ ಪೋರ್ಚುಗಲ್ನ ಕುಲ್ದೀಪ್ ಘೋಲಿಯಾ ಅವರ ಹೆಸರಿನಲ್ಲಿತ್ತು. 2023 ರಲ್ಲಿ ಮಾಲ್ಟಾ ವಿರುದ್ಧದ ಪವರ್ಪ್ಲೇನಲ್ಲಿ ಅವರು 25 ಎಸೆತಗಳಲ್ಲಿ 74 ರನ್ ಸಿಡಿಸಿದ್ದರು(PC-PTI).
ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್, 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಅಭಿಷೇಕ್ 6ನೇ ಬಾರಿಗೆ 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ(PC-PTI).
ಇದು ಟಿ20 ಕ್ರಿಕೆಟ್ನಲ್ಲಿ ಅಭಿಷೇಕ್ ಶರ್ಮಾ ಅವರ 10 ನೇ ಶತಕವಾಗಿದ್ದು, ಈ ಮೂಲಕ ವಿರಾಟ್ ಕೊಹ್ಲಿ ಅವರ 10 ಟಿ20 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಭಿಷೇಕ್ ಈಗ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್ಮನ್ ಆಗುವ ಅವಕಾಶವನ್ನು ಹೊಂದಿದ್ದಾರೆ. ಹಾಗೆ ಮಾಡಲು ಅವರಿಗೆ ಇನ್ನೂ ಒಂದು ಶತಕದ ಅಗತ್ಯವಿದೆ(PC-PTI).
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಅಭಿಷೇಕ್ ಶರ್ಮಾ ಒಟ್ಟು 22 ಸಿಕ್ಸರ್ಗಳನ್ನು ಬಾರಿಸಿದರು. ಈ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಭಾರತೀಯ ಬ್ಯಾಟ್ಸ್ಮನ್ ಒಬ್ಬರು ಬಾರಿಸಿದ ಅತಿ ಹೆಚ್ಚು ಸಿಕ್ಸರ್ಗಳ ದಾಖಲೆಯನ್ನು ಅಭಿಷೇಕ್ ಸರಿಗಟ್ಟಿದ್ದಾರೆ. ಈ ಮೊದಲು ಅಂದರೆ 2025 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಭಿಷೇಕ್ ಅವರೇ 22 ಸಿಕ್ಸರ್ಗಳನ್ನು ಬಾರಿಸಿದ್ದರು(PC-PTI).
ಅಭಿಷೇಕ್ ಶರ್ಮಾ ತಮ್ಮ ಶತಕದ ಶೇಕಡಾ 94.44 ರಷ್ಟು ರನ್ಗಳನ್ನು ಬೌಂಡರಿಗಳ ಮೂಲಕವೇ ಕಲೆಹಾಕಿದರು. ಇದರೊಂದಿಗೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಶತಕ ಗಳಿಸಿದ ಬ್ಯಾಟ್ಸ್ಮನ್ಗಳಲ್ಲಿ ಬೌಂಡರಿಗಳ ಮೂಲಕ ಗಳಿಸಿದ ಅತಿ ಹೆಚ್ಚು ರನ್ ಇದಾಗಿದೆ. ಈ ವಿಷಯದಲ್ಲಿ ಅಭಿಷೇಕ್ ಟರ್ಕಿಯ ಮೊಹಮ್ಮದ್ ಫಹಾದ್ ಅವರನ್ನು ಹಿಂದಿಕ್ಕಿದ್ದಾರೆ(PC-PTI).
ಡೆಹ್ರಾಡೂನ್: 2006ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿಥಾರಿ ಹತ್ಯಾಕಾಂಡ ಪ್ರಕರಣದೊಂದಿಗೆ ಸುಮಾರು ಎರಡು ದಶಕಗಳಿಂದ ಗುರುತಿಸಿಕೊಂಡಿದ್ದ ಆರೋಪಿ ಸುರೇಂದ್ರ ಕೋಲಿ (50) ಹರಿದ್ವಾರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಶುಕ್ರವಾರ ಭೂಪತ್ವಾಲಾ ಪ್ರದೇಶದ ಚಹಾ ಅಂಗಡಿಯೊಂದರಲ್ಲಿ ಆತನ ಮೃತದೇಹ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಸಾವಿಗೆ ಕಾರಣ ಹಾಗೂ ಸುತ್ತಮುತ್ತಲಿನ ಪರಿಸ್ಥಿತಿಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿದ್ವಾರ ಸಿಟಿ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲ್ ಮಾತಾ ದೇವಸ್ಥಾನದ ಎದುರಿನ ಚಹಾ ಅಂಗಡಿಯಲ್ಲಿ ಕೋಲಿಯ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮೃತದೇಹವನ್ನು ವಶಕ್ಕೆ ಪಡೆದು, ಸುತ್ತಮುತ್ತಲಿನವರನ್ನು ವಿಚಾರಣೆ ನಡೆಸಿದ್ದಾರೆ.
ಪೊಲೀಸರ ಪ್ರಕಾರ, ಕೋಲಿ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಭಿಕಿಯಾಸೈನ್ ಪ್ರದೇಶದ ಮಂಗ್ರುಖಾಲ್ ಗ್ರಾಮದ ಶಂಕು ರಾಮ್ ಅವರ ಪುತ್ರ. ಪ್ರಾಥಮಿಕವಾಗಿ ಇದು ಆತ್ಮಹತ್ಯೆ ಪ್ರಕರಣವೆಂದು ಕಂಡುಬರುತ್ತಿದೆ. ಆದರೆ ಸಾವಿಗೆ ಕಾರಣ ಹಾಗೂ ಅದಕ್ಕೆ ಕಾರಣವಾದ ಪರಿಸ್ಥಿತಿಗಳ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ- ಚಾಕುವಿನಿಂದ ಇರಿದು ಕೊಲೆ; ನಾಯಿಗಳು ಭಾಗಶಃ ತಿಂದಿದ್ದ ಮೃತದೇಹ ಹೊಲದಲ್ಲಿ ಪತ್ತೆ!ಆತ್ಮಹತ್ಯೆಗೆ ಕಾರಣವಾಗಿರಬಹುದಾದ ಯಾವುದೇ ನಿರ್ದಿಷ್ಟ ವಿಚಾರವನ್ನು ಪೊಲೀಸರು ಸದ್ಯ ಬಹಿರಂಗಪಡಿಸಿಲ್ಲ.
ಪ್ರಾಥಮಿಕ ವಿಚಾರಣೆಯ ಪ್ರಕಾರ, ಕೋಲಿ ಕಳೆದ ಕೆಲವು ತಿಂಗಳುಗಳಿಂದ ಹರಿದ್ವಾರದಲ್ಲಿ ವಾಸಿಸುತ್ತಿದ್ದ. ಇದಕ್ಕೂ ಮೊದಲು ರೋಷನಾಬಾದ್ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ನಾಲ್ಕು ದಿನಗಳ ಹಿಂದಷ್ಟೇ ಭೂಪತ್ವಾಲಾ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದ ಆತ, ಮೃತದೇಹ ಪತ್ತೆಯಾದ ಚಹಾ ಅಂಗಡಿಯನ್ನು ನಡೆಸಲು ಆರಂಭಿಸಿದ್ದ ಎಂದು ತಿಳಿದುಬಂದಿದೆ.
ಕಳೆದ ಕೆಲವು ವಾರಗಳಲ್ಲಿ ಕೋಲಿಯ ಸಂಪರ್ಕದಲ್ಲಿದ್ದವರು ಯಾರು, ಆತನ ಚಲನವಲನ ಹೇಗಿತ್ತು ಮತ್ತು ಯಾವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹತ್ಯಾಕಾಂಡ
ನೋಯ್ಡಾದ ಸೆಕ್ಟರ್ 31ರ ಉದ್ಯಮಿ ಮೊನಿಂದರ್ ಸಿಂಗ್ ಪಂಧೇರ್ ಮನೆಯಲ್ಲಿ ಕೋಲಿ ಮನೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ. 2006ರ ಡಿಸೆಂಬರ್ 29ರಂದು ಪಂಧೇರ್ ಅವರ ಮನೆಯ ಹಿಂಭಾಗದ ಚರಂಡಿಯಲ್ಲಿ ಹಲವು ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಅವುಗಳಲ್ಲಿ ಮಕ್ಕಳು ಮತ್ತು ನಿಥಾರಿ ಪ್ರದೇಶದಿಂದ ಕಾಣೆಯಾಗಿದ್ದ ಯುವತಿಯರ ಅವಶೇಷಗಳೂ ಇದ್ದವು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ಅವಶೇಷಗಳ ಪತ್ತೆ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಪ್ರಕರಣದ ತನಿಖೆ ಹಲವು ವರ್ಷಗಳ ಕಾಲ ಮುಂದುವರಿದು, ಅನೇಕ ಪ್ರಕರಣಗಳಲ್ಲಿ ವಿಚಾರಣೆ ನಡೆಯಿತು. ಹಲವಾರು ಪ್ರಕರಣಗಳಲ್ಲಿ ಕೋಲಿಗೆ ಮರಣದಂಡನೆ ವಿಧಿಸಲಾಗಿತ್ತು. ಆದರೆ 2023ರ ಅಕ್ಟೋಬರ್ನಲ್ಲಿ ಅಲಹಾಬಾದ್ ಹೈಕೋರ್ಟ್, ಗಂಭೀರ ತನಿಖಾ ಲೋಪಗಳು ಹಾಗೂ ಸಾಕಷ್ಟು ಸಾಕ್ಷ್ಯಗಳ ಕೊರತೆಯನ್ನು ಉಲ್ಲೇಖಿಸಿ, ತನ್ನ ಮುಂದೆ ವಿಚಾರಣೆಗೆ ಬಂದಿದ್ದ ಪ್ರಕರಣಗಳಲ್ಲಿ ಕೋಲಿ ಮತ್ತು ಪಂಧೇರ್ ಅವರನ್ನು ಖುಲಾಸೆಗೊಳಿಸಿತ್ತು.
2025ರ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಉಳಿದಿದ್ದ ಪ್ರಕರಣದಲ್ಲಿಯೂ ಕೋಲಿಯನ್ನು ಖುಲಾಸೆಗೊಳಿಸಿ ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಇದರೊಂದಿಗೆ ಹಲವು ವರ್ಷಗಳ ಕಾನೂನು ಹೋರಾಟದ ಬಳಿಕ ಕೋಲಿಗೆ ಕಾನೂನಾತ್ಮಕ ಸ್ವಾತಂತ್ರ್ಯ ದೊರೆತಿತ್ತು.
ಆರು ತಿಂಗಳ ಮಗುವಿನ ಮೇಲೆ ಪಿಟ್ ಬುಲ್ ನಾಯಿ ದಾಳಿ: ರಸ್ತೆಯಲ್ಲಿ ಎಳೆದಾಡಿ ಗಾಯಗೊಳಿಸಿದ ರಕ್ಕಸ ರೂಪದ ಶ್ವಾನ; ವಿಡಿಯೋ ವೈರಲ್ಕುಟುಂಬಕ್ಕೂ ತೀವ್ರ ಸಂಕಷ್ಟ
ಕಾನೂನಾತ್ಮಕವಾಗಿ ಬಿಡುಗಡೆಯಾದರೂ, ನಿಥಾರಿ ಪ್ರಕರಣದ ಕಳಂಕದ ನೆರಳು ಕೋಲಿಯ ಕುಟುಂಬದ ಮೇಲೂ ವರ್ಷಗಳ ಕಾಲ ಉಳಿದಿತ್ತು ಎನ್ನಲಾಗಿದೆ. ಕೋಲಿಯ ತಾಯಿ ಕುಂತಿ ದೇವಿ ಸುಮಾರು ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಪತ್ನಿ ಶಾಂತಿ ದೇವಿ ಸುಮಾರು ಒಂದು ದಶಕದ ಹಿಂದೆ ಇಬ್ಬರು ಮಕ್ಕಳೊಂದಿಗೆ ಮಂಗ್ರುಖಾಲ್ ಗ್ರಾಮವನ್ನು ತೊರೆದಿದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
“ಕುಟುಂಬಕ್ಕೆ ಈ ಅವಮಾನವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟವಾಗಿತ್ತು. ಅವರು ನಿರಂತರವಾಗಿ ಅವಮಾನ ಎದುರಿಸುತ್ತಿದ್ದರು” ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ಗ್ರಾಮದಲ್ಲಿರುವ ಕೋಲಿಯ ಕುಟುಂಬದ ಪೂರ್ವಿಕರ ಮನೆ ಇದೀಗ ಪಾಳುಬಿದ್ದ ಸ್ಥಿತಿಯಲ್ಲಿದೆ. 2014ರಲ್ಲಿ ಕೋಲಿಯ ಗಲ್ಲು ಶಿಕ್ಷೆ ಜಾರಿಯಾಗುವ ಸಾಧ್ಯತೆ ಎದುರಾದ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ್ ಸಿಂಗ್ ರಾವತ್ ಕಾನೂನು ನೆರವಿಗೆ ಮುಂದಾಗಿದ್ದರು.
“ನಾನು ವಕೀಲರನ್ನು ಸಂಪರ್ಕಿಸಿ, ತಡರಾತ್ರಿಯಲ್ಲಿಯೂ ನ್ಯಾಯಾಲಯ ತೆರೆಯುವಂತೆ ಮಾಡಿದ್ದೆ. ಒಂದು ಪ್ರಕರಣದಲ್ಲಿ ಗಲ್ಲು ಶಿಕ್ಷೆ ಜಾರಿಗೊಳಿಸಿದರೆ ಉಳಿದ ಪ್ರಕರಣಗಳ ವಿಚಾರಣೆಯ ಮೇಲೆ ಪರಿಣಾಮ ಬೀರಬಹುದು ಎಂದು ವಾದಿಸಿದ್ದೆವು. ನ್ಯಾಯಾಲಯ ನಮ್ಮ ವಾದವನ್ನು ಪರಿಗಣಿಸಲು ಒಪ್ಪಿಕೊಂಡಿತ್ತು” ಎಂದು ರಾವತ್ ಸ್ಮರಿಸಿಕೊಂಡಿದ್ದಾರೆ.
ನಿಥಾರಿ ಹತ್ಯಾಕಾಂಡ ಪ್ರಕರಣವು ದೇಶದ ಅತ್ಯಂತ ಕಳವಳಕಾರಿ ಅಪರಾಧ ತನಿಖೆಗಳಲ್ಲಿ ಒಂದಾಗಿ ಉಳಿದಿದ್ದು, ಅದರ ಸಂತ್ರಸ್ತರ ಕುಟುಂಬಗಳನ್ನು ಇಂದಿಗೂ ಕಾಡುತ್ತಿದೆ. ಇದೀಗ ಸುರೇಂದ್ರ ಕೋಲಿಯ ಸಾವಿನೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ದುರಂತ ಅಧ್ಯಾಯ ಅಂತ್ಯಗೊಂಡಿದೆ.
ಅಮಿತಾಬ್ ಬಚ್ಚನ್, ಭಾರತೀಯ ಚಿತ್ರರಂಗದ ದಿಗ್ಗಜ ನಟ. ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿ. ಜೊತೆಗೆ ಅಪಾರ ದೈವ ಭಕ್ತರೂ ಸಹ. ಅಯೋಧ್ಯೆ ರಾಮಮಂದಿರ ನಿರ್ಮಾಣದ ಸಂದರ್ಭದಲ್ಲಿ ಅಪಾರ ಸಂತಸವನ್ನು ಹಂಚಿಕೊಂಡಿದ್ದ ಅಮಿತಾಬ್ ಬಚ್ಚನ್, ಇದೀಗ ಅಯೋಧ್ಯೆಯಲ್ಲಿ ಮಹತ್ಕಾರ್ಯವೊಂದನ್ನು ಮಾಡಲು ಮುಂದಾಗಿದ್ದಾರೆ. ಸೇವಾ ಕಾರ್ಯವೊಂದಕ್ಕೆ ಅಮಿತಾಬ್ ಬಚ್ಚನ್ ಕೈ ಹಾಕಿದ್ದು, ತಂದೆಯ ಹೆಸರಿನಲ್ಲಿ ಕಾರ್ಯವೊಂದನ್ನು ಅಮಿತಾಬ್ ಅವರು ಕೈಗೆತ್ತಿಕೊಂಡಿದ್ದಾರೆ.
ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ಜಮೀನು ತೆಗೆದುಕೊಂಡಿದ್ದು ಕೆಲ ತಿಂಗಳುಗಳ ಹಿಂದೆ ಸಾಕಷ್ಟು ಸುದ್ದಿ ಆಗಿತ್ತು. ಅಮಿತಾಬ್ ಬಚ್ಚನ್ ಮಾತ್ರವೇ ಅಲ್ಲದೆ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಅಯೋಧ್ಯೆಯಲ್ಲಿ ಜಮೀನು ಖರೀದಿಸಿದ್ದರು. ಈ ಬಗ್ಗೆ ಸಾಕಷ್ಟು ಟೀಕೆಯೂ ವ್ಯಕ್ತವಾಗಿತ್ತು. ಆದರೆ ಇದೀಗ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ಜನಪರವಾದ, ವಿಶೇಷವಾಗಿ ರಾಮಭಕ್ತರಿಗೆ ಅನುಕೂಲ ಆಗುವಂತೆ ಕಾರ್ಯವೊಂದನ್ನು ಮಾಡಲು ಮುಂದಾಗಿದ್ದಾರೆ. ಅಯೋಧ್ಯೆಯಲ್ಲಿ ಬಚ್ಚನ್ ಅವರು ಧರ್ಮಶಾಲೆಯೊಂದನ್ನು ನಿರ್ಮಿಸುತ್ತಿದ್ದಾರೆ.
ತಮ್ಮ ತಂದೆಯವರಾದ ಕವಿ ಹರಿವಂಶರಾಯ್ ಬಚ್ಚನ್ ಅವರ ಸ್ಮರಣಾರ್ಥ ಅಯೋಧ್ಯೆಯಲ್ಲಿ ಧರ್ಮಶಾಲೆಯನ್ನು ಅಮಿತಾಬ್ ಬಚ್ಚನ್ ನಿರ್ಮಿಸಲಿದ್ದಾರೆ. ಪ್ರಸ್ತಾವಿತ ಕಟ್ಟಡದ ವಿನ್ಯಾಸಕ್ಕೆ ಅನುಮೋದನೆ ಕೋರಿ ಈಗಾಗಲೇ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಅನುಮೋದನೆ ಸಿಕ್ಕೊಡನೆ ಧರ್ಮಶಾಲೆ ನಿರ್ಮಾಣ ಪ್ರಾರಂಭ ಆಗಲಿದೆ.
ಇದನ್ನೂ ಓದಿ:‘ಧುರಂಧರ್ 2’ ಸಿನಿಮಾದಿಂದ ನಿಂತೇ ಹೋಯ್ತು ಅಮಿತಾಬ್ ಬಚ್ಚನ್ ಸಿನಿಮಾ
ಈ ಪ್ರಸ್ತಾವಿತ ಧರ್ಮಶಾಲೆಯು 20ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರಲಿದ್ದು, ದಶರಥ ಪಥದ ಉದ್ದಕ್ಕೂ ಇರುವ ‘ದಿ ಸರಾಯು’ ಯೋಜನೆಯ ಭಾಗವಾಗಿ ಅಮಿತಾಬ್ ಬಚ್ಚನ್ ಅವರು ಸುಮಾರು 15 ಕೋಟಿ ರೂ.ಗಳಿಗೆ ಖರೀದಿಸಿದ ಜಾಗದಲ್ಲಿ ಈ ಧರ್ಮಶಾಲೆಯನ್ನು ನಿರ್ಮಾಣ ಮಾಡುವ ಕುರಿತಾಗಿ ಯೋಜನೆ ಸಿದ್ಧವಾಗುತ್ತಿದೆ. ಅನುಮೋದನೆಗೆ ಸಲ್ಲಿಸಿರುವ ನಕ್ಷೆಯ ಬಗ್ಗೆ ಆಕ್ಷೇಪಣೆಗಳಿದ್ದರೆ 15 ದಿನಗಳೊಳಗೆ ಸಲ್ಲಿಸುವಂತೆ ಕೋರಿ ಎಡಿಎ ಸಾರ್ವಜನಿಕ ಅಧಿಸೂಚನೆಯನ್ನು ಹೊರಡಿಸಿದೆ. ಈ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಪ್ರಾಧಿಕಾರವು ಅನುಮೋದನೆ ನೀಡುವ ನಿರೀಕ್ಷೆಯಿದೆ.
ದೇಶದ ವಿವಿಧ ಭಾಗಗಳ ಅನೇಕ ಗಣ್ಯರು ಅಯೋಧ್ಯೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ಎಡಿಎ ಉಪಾಧ್ಯಕ್ಷ ಅನುರಾಗ್ ಜೈನ್ ತಿಳಿಸಿದ್ದಾರೆ. 20ಕ್ಕೂ ಹೆಚ್ಚು ಕೊಠಡಿಗಳ ಧರ್ಮಶಾಲೆಗಾಗಿ ಬಚ್ಚನ್ ಅವರ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಪ್ರಸ್ತುತ ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಮುಕ್ತವಾಗಿರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅಯೋಧ್ಯೆಗೆ ಭೇಟಿ ನೀಡುವ ಭಕ್ತರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ, ಸರಿಯಾದ ಪ್ರಕ್ರಿಯೆಯ ನಂತರ ನಕ್ಷೆಗೆ ಅನುಮೋದನೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೋಲ್ಕತ್ತಾ, ಸೆಪ್ಟೆಂಬರ್ 18: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ನಲ್ಲಿ ಭುಗಿಲೆದ್ದಿರುವ ತೀವ್ರ ಆಂತರಿಕ ಬಂಡಾಯ ಮತ್ತು ಪಕ್ಷದ ನಿಯಂತ್ರಣದ ಜಟಾಪಟಿಯ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ಮಹತ್ವದ ಆದೇಶ ಹೊರಡಿಸಿದೆ. ಪಕ್ಷದ ಮೂಲ ಹೆಸರು ‘ಅಖಿಲ ಭಾರತ ತೃಣಮೂಲ ಕಾಂಗ್ರೆಸ್’ ಮತ್ತು ಸಾಂಪ್ರದಾಯಿಕ ಚಿಹ್ನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ . ಮುಂಬರುವ ಉಪಚುನಾವಣೆಗಳಿಗಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ‘ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಹೆಸರು ಹಾಗೂ ‘ಫುಟ್ಬಾಲ್ ಆಟಗಾರ’ ಚಿಹ್ನೆ ನೀಡಲಾಗಿದ್ದರೆ, ಋತಬ್ರತಾ ಬ್ಯಾನರ್ಜಿ ಮತ್ತು ಅರೂಪ್ ರಾಯ್ ಬೆಂಬಲಿತ ಬಂಡಾಯ ಬಣಕ್ಕೆ ‘ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್’ ಹೆಸರು ಹಾಗೂ ‘ಲಕೋಟೆ’ (Envelope) ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ.
ಮಧ್ಯಂತರ ಮತ್ತು ತಾತ್ಕಾಲಿಕ ಆದೇಶ: ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಎರಡೂ ಬಣಗಳನ್ನು ಮಾನ್ಯತೆ ಪಡೆದ ಪಕ್ಷಗಳೆಂದು ಪರಿಗಣಿಸಲಾಗಿದ್ದು, ಅಕ್ಟೋಬರ್ 6 ರಂದು ನಡೆಯಲಿರುವ ನಂದಿಗ್ರಾಮ ಮತ್ತು ರೆಜಿನಗರ ಉಪಚುನಾವಣೆಗಳಿಗೆ ಈ ಹೊಸ ಹೆಸರು ಮತ್ತು ಚಿಹ್ನೆಗಳು ಅನ್ವಯಿಸಲಿವೆ.
ವಿವಾದದ ಮೂಲ ಕಾರಣ: ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಿಂಧುತ್ವ ಮತ್ತು ಸಾಂಸ್ಥಿಕ ಅಧಿಕಾರವೇ ಕಿತ್ತಾಟಕ್ಕೆ ಕಾರಣ. ಹಾಲಿ ಸಮಿತಿಯ ಅವಧಿ 2025ರ ಫೆಬ್ರವರಿಯಲ್ಲೇ ಮುಕ್ತಾಯಗೊಂಡಿದೆ ಎಂದು ಬಂಡಾಯ ಬಣ ವಾದಿಸಿದರೆ, ಸಂವಿಧಾನ ತಿದ್ದುಪಡಿ ಮೂಲಕ ಸಮಿತಿಯ ಅಧಿಕಾರಾವಧಿಯನ್ನು 3 ರಿಂದ 5 ವರ್ಷಕ್ಕೆ ವಿಸ್ತರಿಸಲಾಗಿದೆ ಎಂದು ಮಮತಾ ಬಣದ ಪರವಾಗಿ ಸಂಸದ ಡೆರೆಕ್ ಒ’ಬ್ರೇನ್ ವಾದಿಸಿದ್ದರು.
Election Commission allotted separate names and electoral symbols to the rival factions of the Trinamool Congress party.
This will allow the groups led by #MamataBanerjee and #ArupRoy to contest the by-elections under new identities.
The group led by Arup Roy has been… pic.twitter.com/gbDzClBnta
— All India Radio News (@airnewsalerts) September 18, 2026
ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶ 1968 ರ ಪ್ಯಾರಾಗ್ರಾಫ್ 15 ರ ಅಡಿಯಲ್ಲಿ ಅಂತಿಮ ತೀರ್ಪು ಬರುವವರೆಗೂ ಉಭಯ ಬಣಗಳು ನೀಡಿದ ಆದ್ಯತೆಯ ಪಟ್ಟಿಯ ಆಧಾರದ ಮೇಲೆ ಈ ಮಧ್ಯಂತರ ಚಿಹ್ನೆಗಳನ್ನು ನಿಗದಿಪಡಿಸಲಾಗಿದೆ.
ಮತ್ತಷ್ಟು ಓದಿ: ಸುವೇಂದು ರಾಜೀನಾಮೆಯಿಂದ ತೆರವಾದ ನಂದಿಗ್ರಾಮದಲ್ಲಿ ಮತ್ತೆ ಮಮತಾ ಸ್ಪರ್ಧೆ ಸಾಧ್ಯತೆ: ಟಿಎಂಸಿ ಚಿಹ್ನೆ ಜಟಾಪಟಿಯ ನಡುವೆ ಕದನ ಕುತೂಹಲ
ರಾಹುಲ್ ಗಾಂಧಿ ಆರೋಪ: ಮೊದಲು ಶಿವಸೇನೆ, ನಂತರ ಎನ್ಸಿಪಿ, ಈಗ ಟಿಎಂಸಿ. ಪ್ರಜಾಪ್ರಭುತ್ವವನ್ನು ಹಾಳುಮಾಡಲು ಬಿಜೆಪಿ ಮತ್ತು ಚುನಾವಣಾ ಆಯೋಗ ಪ್ರತಿಪಕ್ಷಗಳನ್ನು ಒಡೆಯುತ್ತಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಾಬುಲ್ ಸುಪ್ರಿಯೋ ಪ್ರಶ್ನೆ: ಪಕ್ಷಾಂತರ ಮತ್ತು ಆಂತರಿಕ ಬಂಡಾಯದ ರಾಜಕೀಯ ನೈತಿಕತೆಯನ್ನು ಪ್ರಶ್ನಿಸಿ, ಸ್ವಯಂಚಾಲಿತ ಅನರ್ಹತೆಯ ಕಾನೂನು ಅಗತ್ಯ ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ತಿರುಗೇಟು: ಟಿಎಂಸಿ ತನ್ನದೇ ಆಂತರಿಕ ಭ್ರಷ್ಟಾಚಾರ ಮತ್ತು ಕಲಹದಿಂದ ಒಡೆದುಹೋಗುತ್ತಿದ್ದು, ಆಯೋಗ ನಿಯಮಾನುಸಾರ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ಮುಖಂಡ ದಿಲೀಪ್ ಘೋಷ್ ಸಮರ್ಥಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಮಾದರಿಯ ಪುನರಾವರ್ತನೆ: ಮಹಾರಾಷ್ಟ್ರದಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ vs ಏಕನಾಥ್ ಶಿಂಧೆ) ಮತ್ತು ಎನ್ಸಿಪಿ (ಶರದ್ ಪವಾರ್ vs ಅಜಿತ್ ಪವಾರ್) ನಡುವಿನ ತಿಕ್ಕಾಟದ ಸಂದರ್ಭದಲ್ಲೂ ಚುನಾವಣಾ ಆಯೋಗವು ಮೂಲ ಚಿಹ್ನೆಗಳನ್ನು ಫ್ರೀಜ್ ಮಾಡಿ ಇದೇ ರೀತಿಯ ಮಧ್ಯಂತರ ಹೆಸರು ಹಾಗೂ ಚಿಹ್ನೆಗಳನ್ನು ನೀಡಿತ್ತು. ಆ ನಂತರ ಶಾಸಕಾಂಗ ಹಾಗೂ ಸಂಘಟನಾ ಬಲದ ಆಧಾರದ ಮೇಲೆ ಅಂತಿಮ ನಿರ್ಧಾರ ಪ್ರಕಟಿಸಲಾಗಿತ್ತು.
ನಂದಿಗ್ರಾಮ ಉಪಚುನಾವಣೆಯ ಮಹತ್ವ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ನಂದಿಗ್ರಾಮ ಅತ್ಯಂತ ಹೈವೋಲ್ಟೇಜ್ ಕ್ಷೇತ್ರವಾಗಿದ್ದು, ಈ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಬಣ ಮತ್ತು ಬಂಡಾಯ ಬಣ ಪರಸ್ಪರ ಹೊಸ ಚಿಹ್ನೆಗಳೊಂದಿಗೆ ಮುಖಾಮುಖಿಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
‘ಫುಟ್ಬಾಲ್’ ಮತ್ತು ‘ಖೇಲಾ ಹೋಬೆ’ ನಂಟು: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಅತ್ಯಂತ ಜನಪ್ರಿಯ ರಾಜಕೀಯ ಘೋಷಣೆ ‘ಖೇಲಾ ಹೋಬೆ’ (ಆಟ ಶುರುವಾಗಿದೆ). ಇದೀಗ ಕಾಕತಾಳೀಯ ಎಂಬಂತೆ ಮಮತಾ ಬಣಕ್ಕೆ ‘ಫುಟ್ಬಾಲ್ ಆಟಗಾರ’ನ ಚಿಹ್ನೆಯೇ ಸಿಕ್ಕಿರುವುದು ಅವರ ಬೆಂಬಲಿಗರಲ್ಲಿ ಪ್ರಚಾರದ ಹೊಸ ಅಸ್ತ್ರವಾಗಿ ಮಾರ್ಪಟ್ಟಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಸೆಪ್ಟೆಂಬರ್ 18: ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಠಿಣ ನಿಲುವು ತಳೆದಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್ಟಿಎ) ಆಡಳಿತ ಶೈಲಿ ಮತ್ತು ಪರೀಕ್ಷಾ ಸುರಕ್ಷತೆಯನ್ನು ಖುದ್ದಾಗಿ ಪರಿಶೀಲಿಸಲು, ಸುಪ್ರೀಂ ಕೋರ್ಟ್ ಎನ್ಟಿಎ ಕಚೇರಿಗೆ ಸ್ವತಃ ಭೇಟಿ ನೀಡುವ ಚಿಂತನೆ ನಡೆಸಿದೆ. ಇದರ ಜೊತೆಗೆ, ಸಂಸ್ಥೆಯ ಮೂಲಭೂತ ಸುಧಾರಣೆಗಾಗಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ಇದುವರೆಗಿನ ಸುಧಾರಣಾ ಪ್ರಗತಿಯ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ನ್ಯಾಯಪೀಠ ನಿರ್ದೇಶಿಸಿದೆ.
ಎನ್ಟಿಎ ಕಚೇರಿಗೆ ಸದ್ಯದಲ್ಲೇ ಭೇಟಿ:
ಎನ್ಟಿಎ ಪರೀಕ್ಷೆಗಳನ್ನು ನಡೆಸುವ ವಿಧಾನ, ತಂತ್ರಜ್ಞಾನ ವ್ಯವಸ್ಥೆ ಮತ್ತು ದತ್ತಾಂಶ ಭದ್ರತೆಯ ನೈಜ ಸ್ಥಿತಿಯನ್ನು ಪರಿಶೀಲಿಸಲು ತನಿಖಾಧಿಕಾರಿಗಳು ಹಾಗೂ ನ್ಯಾಯಪೀಠದ ಪ್ರತಿನಿಧಿಗಳು ಕಚೇರಿಗೆ ನೇರವಾಗಿ ಭೇಟಿ ನೀಡುವ ಕುರಿತು ಸುಪ್ರೀಂ ಕೋರ್ಟ್ ಸುಳಿವು ನೀಡಿದೆ. ಪರೀಕ್ಷೆಯನ್ನು ನಡೆಸಲು ಮಾಡಿದ ಸುಧಾರಣೆಗಳನ್ನು ನಿಜವಾಗಿಯೂ ಅನುಷ್ಠಾನಗೊಳಿಸಲಾಗಿದೆಯೇ ಎಂದು ನೋಡಲು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು ಎನ್ಟಿಎ ಕಚೇರಿಗೆ ವೈಯಕ್ತಿಕವಾಗಿ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಸೂಚಿಸಿದೆ. ವಿಚಾರಣೆಯ ಸಮಯದಲ್ಲಿ, ಪರೀಕ್ಷೆಯನ್ನು ನಡೆಸಲು ವಿನ್ಯಾಸಗೊಳಿಸಲಾದ ವ್ಯವಸ್ಥೆಯು ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ, ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಮತ್ತು ಅದಕ್ಕೆ ಸಾಕಷ್ಟು ಮಾನವಶಕ್ತಿ ಮತ್ತು ಇತರ ಅಗತ್ಯ ವ್ಯವಸ್ಥೆಗಳು ಲಭ್ಯವಿದೆಯೇ ಎಂದು ನೋಡಲು ಬಯಸುವುದಾಗಿ ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ: ‘ನಮ್ಮ ಮುಂದೆ ಎಲ್ಲರೂ ಸಮಾನರು’; ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ತುರ್ತು ವಿಚಾರಣೆ ಕೋರಿಕೆಗೆ ಸುಪ್ರೀಂ ಕೋರ್ಟ್ ಅಸಮಾಧಾನ
ಎನ್ಟಿಎ ತಾಂತ್ರಿಕ ಹಾಗೂ ಕಾರ್ಯಾಚರಣೆಯ ಸುಧಾರಣೆಗಾಗಿ ರಚಿಸಲಾದ ನಂದನ್ ನಿಲೇಕಣಿ ಸಮಿತಿಯು, ಪರೀಕ್ಷಾ ಭದ್ರತೆಯನ್ನು ಬಲಪಡಿಸಲು ಕೈಗೊಂಡಿರುವ ಕ್ರಮಗಳ ವಿವರವಾದ ಪ್ರಗತಿ ವರದಿಯನ್ನು ಸಲ್ಲಿಸಲು ಕೋರ್ಟ್ ಸೂಚಿಸಿದೆ. ಹಾಗೇ, ಈ ಶಿಫಾರಸುಗಳು ಕೇವಲ ವರದಿಗೆ ಸೀಮಿತವಾಗಿರಬಾರದು, ಇದನ್ನು ಅನುಷ್ಠಾನಕ್ಕೂ ತರಬೇಕು ಎಂದು ಕೋರ್ಟ್ ಹೇಳಿದೆ.
ಎನ್ಟಿಎ ತನ್ನ ಸುಧಾರಣಾ ವರದಿಗಳು ಮತ್ತು ಅಫಿಡವಿಟ್ಗಳನ್ನು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು, ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮುಂಬರುವ ಪರೀಕ್ಷೆಗಳ ಭದ್ರತೆಯ ಕುರಿತು ವಿಶ್ವಾಸ ಮೂಡುತ್ತದೆ ಎಂದು ಕೋರ್ಟ್ ತಿಳಿಸಿದೆ.
ಇದನ್ನೂ ಓದಿ: NEET-PG 2026: ನೀಟ್–ಪಿಜಿ ಪರೀಕ್ಷೆಯ ವೇಳೆ ವಿದ್ಯುತ್ ಕಡಿತ; ಸೆಪ್ಟೆಂಬರ್ 5ಕ್ಕೆ ಮರುಪರೀಕ್ಷೆ ನಡೆಸಲು ನಿರ್ಧಾರ!
ಹಂತ-ಹಂತದ ಅನುಷ್ಠಾನ:
ಕೇವಲ ವರದಿಗಳನ್ನು ಸಿದ್ಧಪಡಿಸುವುದಷ್ಟೇ ಸಾಲದು, ಮುಂದಿನ ವರ್ಷದ ನೀಟ್-ಯುಜಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳು ಆರಂಭವಾಗುವ ಮೊದಲೇ ಎಲ್ಲಾ ಡಿಜಿಟಲ್ ಹಾಗೂ ಭದ್ರತಾ ಸುಧಾರಣೆಗಳು ಸಂಪೂರ್ಣವಾಗಿ ಜಾರಿಗೆ ಬರಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇತ್ತೀಚಿನ ದಿನಗಳಲ್ಲಿ ಬಹುತೇಕ ಕಾರುಗಳಲ್ಲಿ (Car) 4 ಸಿಲಿಂಡರ್ ಎಂಜಿನ್ಗಳನ್ನು ಕಾಣಬಹುದು. ಸಣ್ಣ ಹ್ಯಾಚ್ಬ್ಯಾಕ್ ಕಾರುಗಳಿಂದ ಹಿಡಿದು ಎಸ್ಯುವಿ ಮತ್ತು ದೊಡ್ಡ ವಾಹನಗಳವರೆಗೂ ಈ ರೀತಿಯ ಎಂಜಿನ್ ಬಳಕೆಯಲ್ಲಿದೆ. ಹಿಂದೆ 6 ಅಥವಾ 8 ಸಿಲಿಂಡರ್ಗಳ ದೊಡ್ಡ ಎಂಜಿನ್ಗಳಿಗೆ ಹೆಚ್ಚು ಆದ್ಯತೆ ಇತ್ತು. ಆದರೆ ಇಂಧನ ಉಳಿತಾಯ, ಕಡಿಮೆ ತೂಕ ಮತ್ತು ಸಮತೋಲಿತ ಕಾರ್ಯಕ್ಷಮತೆಯಂತಹ ಕಾರಣಗಳಿಂದ 4 ಸಿಲಿಂಡರ್ ಎಂಜಿನ್ಗಳು ಹೆಚ್ಚು ಸಾಮಾನ್ಯವಾಗಿವೆ. ಹಾಗಾದರೆ 4 ಸಿಲಿಂಡರ್ ಎಂಜಿನ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ?.
ಎಂಜಿನ್ನಲ್ಲಿರುವ ಸಿಲಿಂಡರ್ ಎಂದರೇನು?ಸರಳವಾಗಿ ಹೇಳುವುದಾದರೆ, ಸಿಲಿಂಡರ್ ಎಂದರೆ ಎಂಜಿನ್ನೊಳಗೆ ಇಂಧನದಿಂದ ಶಕ್ತಿ ಉತ್ಪತ್ತಿಯಾಗುವ ಪ್ರಮುಖ ಭಾಗ. ಇದರೊಳಗೆ ಪಿಸ್ಟನ್ ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತಿರುತ್ತದೆ. ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ನಲ್ಲಿ ಗಾಳಿ ಮತ್ತು ಇಂಧನದ ದಹನದಿಂದ ಉಂಟಾಗುವ ಒತ್ತಡ ಪಿಸ್ಟನ್ನ್ನು ಚಲಿಸುತ್ತದೆ. ಪಿಸ್ಟನ್ನ ಈ ಚಲನೆಯನ್ನು ಕ್ರ್ಯಾಂಕ್ಶಾಫ್ಟ್ ಚಕ್ರದ ರೀತಿಯ ತಿರುಗುವ ಚಲನೆಯಾಗಿ ಪರಿವರ್ತಿಸುತ್ತದೆ. ಇದೇ ಶಕ್ತಿ ಮುಂದಿನ ಹಂತದಲ್ಲಿ ವಾಹನದ ಚಕ್ರಗಳನ್ನು ತಿರುಗಿಸಲು ಸಹಾಯ ಮಾಡುತ್ತದೆ.
ಪ್ರತಿಯೊಂದು ಸಿಲಿಂಡರ್ನಲ್ಲೂ ಪಿಸ್ಟನ್, ಗಾಳಿ ಒಳಗೆ ಬರಲು ಮತ್ತು ಹೊರಹೋಗಲು ಸಹಾಯ ಮಾಡುವ ಕವಾಟಗಳು ಸೇರಿದಂತೆ ಹಲವು ಪ್ರಮುಖ ಭಾಗಗಳಿರುತ್ತವೆ. ಪೆಟ್ರೋಲ್ ಎಂಜಿನ್ನಲ್ಲಿ ಸ್ಪಾರ್ಕ್ ಪ್ಲಗ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.
4 ಸಿಲಿಂಡರ್ ಎಂಜಿನ್ ಹೇಗೆ ಕೆಲಸ ಮಾಡುತ್ತದೆ?4 ಸಿಲಿಂಡರ್ ಎಂಜಿನ್ನಲ್ಲಿ ನಾಲ್ಕು ಸಿಲಿಂಡರ್ಗಳಿರುತ್ತವೆ. ಸಾಮಾನ್ಯವಾಗಿ ಇವುಗಳನ್ನು ಒಂದೇ ಸಾಲಿನಲ್ಲಿ ಜೋಡಿಸಲಾಗಿರುತ್ತದೆ. ಇದನ್ನು ಇನ್ಲೈನ್ 4 ಅಥವಾ ಸ್ಟ್ರೇಟ್ 4 ಎಂಜಿನ್ ಎಂದು ಕರೆಯಲಾಗುತ್ತದೆ. ನಾಲ್ಕು ಸಿಲಿಂಡರ್ಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುವುದರಿಂದ ಎಂಜಿನ್ನ ಕಾರ್ಯಾಚರಣೆ ಹೆಚ್ಚು ಸಮತೋಲಿತವಾಗಿರುತ್ತದೆ.
ಚೀನಾದ ಟಾಪ್ 10 ಕಾರುಗಳಲ್ಲಿ ಒಂದೂ ಪೆಟ್ರೋಲ್ ಕಾರಿಲ್ಲ; ಹಾಗಾದ್ರೆ ಯಾವ ಕಾರು?
ಎಂಜಿನ್ ಕೆಲಸ ಮಾಡುವಾಗ ಪ್ರತಿಯೊಂದು ಸಿಲಿಂಡರ್ನಲ್ಲೂ ಮುಖ್ಯವಾಗಿ ನಾಲ್ಕು ಹಂತಗಳು ನಡೆಯುತ್ತವೆ. ಮೊದಲ ಹಂತದಲ್ಲಿ ಗಾಳಿ ಮತ್ತು ಇಂಧನ ಒಳಗೆ ಬರುತ್ತದೆ. ಎರಡನೇ ಹಂತದಲ್ಲಿ ಪಿಸ್ಟನ್ ಮೇಲಕ್ಕೆ ಚಲಿಸಿ ಅದನ್ನು ಸಂಕುಚಿತಗೊಳಿಸುತ್ತದೆ. ಮೂರನೇ ಹಂತದಲ್ಲಿ ದಹನದಿಂದ ಉಂಟಾಗುವ ಒತ್ತಡ ಪಿಸ್ಟನ್ನ್ನು ಕೆಳಕ್ಕೆ ತಳ್ಳುತ್ತದೆ. ಇದರಿಂದ ಎಂಜಿನ್ಗೆ ಶಕ್ತಿ ಸಿಗುತ್ತದೆ. ನಾಲ್ಕನೇ ಹಂತದಲ್ಲಿ ಉರಿದ ಅನಿಲಗಳು ಎಂಜಿನ್ನಿಂದ ಹೊರಗೆ ಹೋಗುತ್ತವೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
4 ಸಿಲಿಂಡರ್ ಎಂಜಿನ್ನ ಪ್ರಯೋಜನಗಳೇನು?ಈ ಎಂಜಿನ್ಗಳ ಪ್ರಮುಖ ಪ್ರಯೋಜನವೆಂದರೆ ಗಾತ್ರ ಮತ್ತು ಕಾರ್ಯಕ್ಷಮತೆಯ ನಡುವೆ ಉತ್ತಮ ಸಮತೋಲನ ಸಿಗುವುದು. 6 ಅಥವಾ 8 ಸಿಲಿಂಡರ್ ಎಂಜಿನ್ಗಳಿಗೆ ಹೋಲಿಸಿದರೆ 4 ಸಿಲಿಂಡರ್ ಎಂಜಿನ್ ಸಾಮಾನ್ಯವಾಗಿ ಹಗುರವಾಗಿರುತ್ತದೆ. ಇದರಿಂದ ವಾಹನದ ಒಟ್ಟಾರೆ ತೂಕ ಕಡಿಮೆಯಾಗಲು ಸಹಾಯವಾಗುತ್ತದೆ. ಕಡಿಮೆ ತೂಕದ ಜೊತೆಗೆ ಇಂಧನ ಬಳಕೆಯೂ ಕಡಿಮೆಯಾಗುತ್ತದೆ.
ಇದಲ್ಲದೆ, ಇಂತಹ ಎಂಜಿನ್ಗಳನ್ನು ತಯಾರಿಸುವುದು ಮತ್ತು ನಿರ್ವಹಿಸುವುದು ದೊಡ್ಡ ಎಂಜಿನ್ಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಕಡಿಮೆ ವೆಚ್ಚದಾಯಕವಾಗಿರುತ್ತದೆ. ದೈನಂದಿನ ನಗರ ಸಂಚಾರ ಮತ್ತು ದೀರ್ಘ ಪ್ರಯಾಣ ಎರಡಕ್ಕೂ 4 ಸಿಲಿಂಡರ್ ಎಂಜಿನ್ ಹೊಂದಿರುವ ಹಲವು ಕಾರುಗಳು ಸೂಕ್ತವಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, (ಸೆಪ್ಟೆಂಬರ್ 18): ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅಕ್ರಮ ಸಂಪತ್ತು ಮತ್ತು ಶೋಕಿ ಜೀವನದ ಒಂದೊಂದೇ ಕರಾಳ ಮುಖಗಳು ಸಿಐಡಿ ತನಿಖೆಯಲ್ಲಿ ಬಯಲಾಗುತ್ತಿವೆ. ಲೂಟಿ ಮಾಡಿದ ಹಣದಲ್ಲಿ ಗೆಳತಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕೊಡಿಸಿರುವುದು ಹಾಗೂ ಆಪ್ತರಿಂದ ವಿದೇಶ ಪ್ರವಾಸದ ಆಫರ್ ಪಡೆದುಕೊಂಡಿರುವುದು ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಹೌದು… ಈ ಹಿಂದೆ ಜುಲೈ ತಿಂಗಳಲ್ಲಿ ಬೆಂಗಳೂರಿನ ಪ್ರತಿಷ್ಠಿತ ಜ್ಯುವೆಲ್ಲರಿಯೊಂದರಲ್ಲಿ ಖರೀದಿಸಿದ್ದ 26 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಸಿಐಡಿ ಅಧಿಕಾರಿಗಳು ಈಗಾಗಲೇ ಜಪ್ತಿ ಮಾಡಿದ್ದರು.. ಈಗ ಓಂ ಲಕ್ಷ್ಮಿ ಕೋ-ಆಪರೇಟಿವ್ ಸೊಸೈಟಿಯ ಅನುಮಾನಾಸ್ಪದ ಹಣ ವರ್ಗಾವಣೆ ಪರಿಶೀಲನೆ ನಡೆಸುವಾಗ, ಅದೇ ಗೆಳತಿಗೆ ಮತ್ತೆ 30 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಖರೀದಿಸಿಕೊಟ್ಟಿರುವುದು ಪತ್ತೆಯಾಗಿದೆ.
ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಒಲಿಂಪಿಕ್ಸ್ನಲ್ಲಿ ಪದಕ ಗೆದ್ದವರು, ವಿಶ್ವ ಚಾಂಪಿಯನ್ಷಿಪ್ನಲ್ಲಿ ಮಿಂಚಿದವರು, ಹಿಂದಿನ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪದಕದ ಬೇಟೆಗೆ ಬಲ ತುಂಬಿದವರು... ಹೀಗೆ ಅನುಭವ ಜೊತೆ ಯುವ ಪ್ರತಿಭೆಗಳ ಸಂಗಮದೊಂದಿಗೆ ಭಾರತ 2026ರ ಏಷ್ಯನ್ ಗೇಮ್ಸ್ ಆಡಲು ಸಜ್ಜಾಗಿದೆ.
ಜಪಾನ್ನ ಐಚಿ–ನಗೋಯಾದಲ್ಲಿ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ 20ನೇ ಏಷ್ಯನ್ ಗೇಮ್ಸ್ ನಡೆಯಲಿದೆ. 2023ರ ಹಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಭಾರತ 28 ಚಿನ್ನ ಸೇರಿ ದಾಖಲೆಯ 107 ಪದಕಗಳನ್ನು ಗೆದ್ದಿತ್ತು. ಹೀಗಾಗಿ ಈ ಬಾರಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನದ ಮೇಲೆ ನಿರೀಕ್ಷೆ ಹೆಚ್ಚಿದೆ.
ಭಾರತ ಕಳಿಸಿರುವ ಏಷ್ಯನ್ ಗೇಮ್ಸ್ನಲ್ಲಿ ಒಲಿಂಪಿಕ್ ಪದಕ ವಿಜೇತರಾದ ಪಿ.ವಿ. ಸಿಂಧು, ಮನು ಭಾಕರ್, ಮೀರಾಬಾಯಿ ಚಾನು, ಲವ್ಲಿನಾ ಬೊರ್ಗೊಹೈನ್ ಮತ್ತು ಅಮನ್ ಸೆಹ್ರಾವತ್ ಸೇರಿದಂತೆ ಹಲವು ಪ್ರಮುಖ ಕ್ರೀಡಾಪಟುಗಳಿದ್ದಾರೆ.
ಮನು ಭಾಕರ್: ಒಲಿಂಪಿಕ್ನಲ್ಲಿ ಎರಡು ಪದಕಶೂಟಿಂಗ್ನಲ್ಲಿ ಭಾರತದ ಪ್ರಮುಖ ಕ್ರೀಡಾಪಟು ಆಗಿರುವ ಮನು ಭಾಕರ್ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಹಾಗೂ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಒಂದೇ ಒಲಿಂಪಿಕ್ಸ್ನಲ್ಲಿ ಎರಡು ಪದಕ ಪಡೆದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಹಾಂಗ್ಝೌ ಏಷ್ಯನ್ ಗೇಮ್ಸ್ನ ಮಹಿಳೆಯರ 25 ಮೀ. ಪಿಸ್ತೂಲ್ ತಂಡ ವಿಭಾಗದಲ್ಲೂ ಮನು ಚಿನ್ನ ಗೆದ್ದಿದ್ದರು. ಈಗ ಮತ್ತೊಂದು ಏಷ್ಯನ್ ಗೇಮ್ಸ್ನಲ್ಲಿ ಅವರು ಭಾರತದ ಶೂಟಿಂಗ್ ತಂಡದ ಪ್ರಮುಖ ಆಟಗಾರ್ತಿಯಾಗಿದ್ದಾರೆ.
@font-face{font-family:'PrajavaniTextRegular';src:url('https://fea.assettype.com/tpml/assets/PrajavaniTextRegular.woff2') format('woff2');font-weight:400;font-style:normal;font-display:swap;}@font-face{font-family:'PvHeadlineSemibold3';src:url('https://fea.assettype.com/tpml/assets/PvHeadlineSemibold3.woff2') format('woff2');font-weight:600;font-style:normal;font-display:swap;} .dh-inline-infographic{max-width:900px;margin:0 auto;background-color:#ffffff;border-radius:8px;box-shadow:0 2px 8px rgba(0,0,0,0.1);overflow:hidden;font-family:'PrajavaniTextRegular',serif;text-align:left;position:relative} .dh-inline-infographic .embed-header{background-color:#B82831;color:#ffffff;padding:18px;text-align:center} .dh-inline-infographic .embed-header h2{margin:0;font-family:'PvHeadlineSemibold3',serif;font-size:20.02px;line-height:1.3} .dh-inline-infographic .main-concept{padding:14px 18px;border-left:4px solid #FFC314;margin:12px 18px 4px;background-color:#FFF4DB;font-size:18.2px} .dh-inline-infographic .main-concept-title{font-weight:bold;margin-bottom:4px;text-transform:uppercase;letter-spacing:0;font-size:15.600000000000001px;color:#A32530} .dh-inline-infographic .main-concept-text{font-size:18.2px;line-height:1.5} .dh-inline-infographic .section-label{padding:4px 18px 0;font-size:15.600000000000001px;text-transform:uppercase;letter-spacing:0;color:#666} .dh-inline-infographic .section-label.stats-section{padding:0 18px 0;margin-top:-10px} .dh-inline-infographic .stats-grid{display:flex;flex-wrap:wrap;gap:6px;padding:4px 18px 4px;background-color:#ffffff;margin-bottom:0} .dh-inline-infographic .stat-card{flex:1 1 calc(20% - 6px);min-width:120px;background:linear-gradient(90deg,#B82831 0%,#8B1F29 100%);color:#ffffff;border-radius:6px;padding:8px 8px;text-align:center;box-shadow:0 2px 6px rgba(184,40,49,0.22);transition:transform 0.2s ease,box-shadow 0.2s ease} .dh-inline-infographic .stat-value{font-size:26px;font-weight:700;font-family:'PvHeadlineSemibold3',serif;margin-bottom:2px;line-height:1.1} .dh-inline-infographic .stat-label{font-size:11.700000000000001px;text-transform:uppercase;letter-spacing:0;color:rgba(255,255,255,0.9);opacity:1;line-height:1.2} .dh-inline-infographic .stat-card:hover{transform:translateY(-1px);box-shadow:0 3px 8px rgba(184,40,49,0.26)} .dh-inline-infographic .inf-disclaimer{padding:0 18px 0;text-align:center;font-size:11px;color:#999;font-style:italic} .dh-inline-infographic .inf-collapsible{border:2px solid #B82831;border-radius:8px;margin:0;padding:0;display:block;overflow:hidden;background-color:#ffffff} .dh-inline-infographic .inf-collapsible:not([open]){border-color:transparent;background:linear-gradient(#ffffff,#ffffff) padding-box,linear-gradient(90deg,#B82831,#FFC314,#B82831,#FFC314,#B82831) border-box;background-size:100% 100%,300% 300%;animation:inf-border-move 6s linear infinite} .dh-inline-infographic .inf-collapsible[open]{border-color:#B82831;background:#ffffff;animation:none} .dh-inline-infographic .inf-summary{list-style:none;cursor:pointer;display:block;margin:0;padding:0;width:100%} .dh-inline-infographic .inf-summary::-webkit-details-marker{display:none} .dh-inline-infographic .inf-summary::marker{content:""} .dh-inline-infographic .inf-collapsed-card{display:flex;align-items:stretch;justify-content:flex-start;gap:0;padding:0;background:linear-gradient(135deg,#FFF4DB 0%,#FFF8E1 100%);border-bottom:1px solid rgba(0,0,0,0.06)} .dh-inline-infographic .inf-collapsed-title{font-family:'PvHeadlineSemibold3',serif;font-size:20.02px;color:#8B1F29;letter-spacing:0;text-transform:uppercase;margin:0 0 4px} .dh-inline-infographic .inf-collapsed-subtitle{font-family:'PrajavaniTextRegular',serif;font-size:14.559999999999999px;color:#4b4b4b} .dh-inline-infographic .inf-collapsed-text{min-width:0;flex:1 1 auto;padding:14px 18px} .dh-inline-infographic .inf-collapsed-title,.dh-inline-infographic .inf-collapsed-subtitle{overflow-wrap:anywhere} .dh-inline-infographic .inf-toggle-shell{flex:0 0 58px;min-width:58px;display:flex;align-items:center;justify-content:center;background-color:#FFF4DB;border-left:1px solid rgba(255,195,20,0.25)} .dh-inline-infographic .inf-collapsed-btn{background-color:transparent;color:#8B1F29;padding:0;border-radius:0;font-size:16px;line-height:1;letter-spacing:0.02em;flex:1 1 auto;text-align:center;min-width:0;display:inline-flex;align-items:center;justify-content:center;transition:background-color 0.2s ease,transform 0.2s ease} .dh-inline-infographic .inf-less{display:none} .dh-inline-infographic details[open] .inf-more{display:none} .dh-inline-infographic details[open] .inf-less{display:inline} .dh-inline-infographic .inf-body{padding-bottom:4px} .dh-inline-infographic .inf-summary:focus-visible{outline:3px solid #FFC314;outline-offset:-3px} .dh-inline-infographic .inf-arrow{width:14px;height:14px;display:block;stroke:currentColor;stroke-width:2.2;fill:none;stroke-linecap:round;stroke-linejoin:round;transform-origin:50% 50%;transition:transform 0.3s ease,filter 0.3s ease,stroke-width 0.3s ease,width 0.3s ease,height 0.3s ease} .dh-inline-infographic .inf-summary:hover .inf-collapsed-card{background:linear-gradient(135deg,#FFEEB3 0%,#FFF4DB 100%)} .dh-inline-infographic .inf-summary:hover .inf-toggle-shell{background-color:#FFE9A0} .dh-inline-infographic .inf-summary:hover .inf-arrow{transform:translateY(2px)} .dh-inline-infographic .inf-header-toggle{display:none} .dh-inline-infographic .inf-summary .embed-header{display:none} .dh-inline-infographic details[open] .inf-collapsed-card{display:none} .dh-inline-infographic details[open] .inf-summary{display:grid;grid-template-columns:minmax(0,1fr) 58px;align-items:stretch;margin:0;padding:0} .dh-inline-infographic details[open] .inf-summary .embed-header{display:block;grid-column:1;grid-row:1;padding-right:18px} .dh-inline-infographic details[open] .inf-header-toggle{display:inline-flex;grid-column:2;grid-row:1;position:static;z-index:5;align-self:stretch;width:58px;height:auto;min-height:100%;align-items:center;justify-content:center;border-radius:0;background-color:#B82831;border-left:2px solid rgba(255,195,20,0.25);color:#ffffff;box-shadow:inset 0 0 0 1px rgba(255,255,255,0.1);transition:all 0.3s ease} .dh-inline-infographic details[open] .inf-header-toggle:hover{background-color:#B82831;border-left-color:rgba(255,195,20,0.35);box-shadow:inset 0 0 0 1px rgba(255,255,255,0.2)} .dh-inline-infographic details[open] .inf-header-toggle .inf-arrow{transform:rotate(180deg);width:16px;height:16px;stroke-width:2.5;filter:drop-shadow(0 1px 2px rgba(0,0,0,0.15))} .dh-inline-infographic details[open] .inf-header-toggle:hover .inf-arrow{transform:rotate(180deg) translateY(2px)} .dh-inline-infographic .faq-list{display:flex;flex-direction:column;padding:8px 18px 6px;gap:12px;background-color:#ffffff;margin:0 0 18px}.dh-inline-infographic .faq-item{border-radius:8px;background-color:#FFF8E1;box-shadow:0 1px 4px rgba(0,0,0,0.06);overflow:hidden;transition:transform 0.2s ease,box-shadow 0.2s ease,background-color 0.2s ease}.dh-inline-infographic .faq-item:hover{background-color:#FFEEB3;transform:translateY(-2px);box-shadow:0 2px 6px rgba(0,0,0,0.12)}.dh-inline-infographic .faq-row{list-style:none;display:grid;grid-template-columns:minmax(0,1fr) 24px;gap:10px;align-items:start;padding:12px 12px 8px;cursor:pointer}.dh-inline-infographic .faq-row::-webkit-details-marker{display:none}.dh-inline-infographic .faq-row::marker{content:""}.dh-inline-infographic .faq-copy{min-width:0}.dh-inline-infographic .faq-question{margin:0;font-family:'PvHeadlineSemibold3',serif;font-size:19.5px;line-height:1.32;color:#8B1F29;overflow-wrap:anywhere;word-break:break-word}.dh-inline-infographic .faq-toggle{display:flex;align-items:center;justify-content:center;align-self:start;color:#A32530;width:24px;height:24px}.dh-inline-infographic .faq-arrow{width:16px;height:16px;display:block;stroke:currentColor;stroke-width:2.2;fill:none;stroke-linecap:round;stroke-linejoin:round;transition:transform 0.25s ease}.dh-inline-infographic .faq-item[open] .faq-arrow{transform:rotate(180deg)}.dh-inline-infographic .faq-answer-shell{padding:0 12px 12px}.dh-inline-infographic .faq-answer{margin:0;font-size:16.900000000000002px;line-height:1.6;color:#23424a;overflow-wrap:anywhere;word-break:break-word} @keyframes inf-border-move{0%{background-position:0 0,0% 50%}100%{background-position:0 0,100% 50%}} @media (prefers-color-scheme: dark){ .dh-inline-infographic{background-color:#1a1a1a;box-shadow:0 2px 8px rgba(0,0,0,0.5);color:#e0e0e0} .dh-inline-infographic .embed-header{background-color:#8B1F29} .dh-inline-infographic .main-concept{background-color:#2a2418;border-left-color:#FFC314} .dh-inline-infographic .main-concept-title{color:#FF5055} .dh-inline-infographic .main-concept-text{color:#e0e0e0} .dh-inline-infographic .section-label{color:#aaa} .dh-inline-infographic .stats-grid{background-color:#1a1a1a} .dh-inline-infographic .stat-card{background:linear-gradient(90deg,#B8911A 0%,#8B1F29 100%);box-shadow:0 2px 6px rgba(0,0,0,0.4)} .dh-inline-infographic .inf-disclaimer{color:#777} .dh-inline-infographic .inf-collapsible{background-color:#1a1a1a;border-color:#8B1F29} .dh-inline-infographic .inf-collapsible[open]{background:#1a1a1a;border-color:#8B1F29} .dh-inline-infographic .inf-collapsed-card{background:linear-gradient(135deg,#2a2418 0%,#22201a 100%);border-bottom-color:rgba(255,255,255,0.08)} .dh-inline-infographic .inf-collapsed-title{color:#FF5055} .dh-inline-infographic .inf-collapsed-subtitle{color:#bbb} .dh-inline-infographic .inf-toggle-shell{background-color:#2a2418;border-left-color:#8B6914} .dh-inline-infographic .inf-collapsed-btn{color:#FFC314} .dh-inline-infographic details[open] .inf-header-toggle{background-color:#8B1F29} .dh-inline-infographic .inf-summary:hover .inf-collapsed-card{background:linear-gradient(135deg,#3a2f1f 0%,#2a2418 100%)} .dh-inline-infographic .inf-summary:hover .inf-toggle-shell{background-color:#3a2f1f} .dh-inline-infographic .faq-list{background-color:#1a1a1a}.dh-inline-infographic .faq-item{background-color:#2d2d2d;box-shadow:0 1px 4px rgba(0,0,0,0.3);border:1px solid rgba(255,255,255,0.06)}.dh-inline-infographic .faq-question{color:#FF5055}.dh-inline-infographic .faq-toggle{color:#FF5055}.dh-inline-infographic .faq-answer{color:#e0e0e0}.dh-inline-infographic .faq-item:hover{background-color:#383838;box-shadow:0 2px 6px rgba(0,0,0,0.4)} } @media (max-width:700px){ .dh-inline-infographic .main-concept{margin-left:12px;margin-right:12px;padding-left:12px;padding-right:12px} .dh-inline-infographic .section-label,.dh-inline-infographic .section-label.stats-section,.dh-inline-infographic .stats-grid,.dh-inline-infographic .inf-disclaimer{padding-left:12px;padding-right:12px} .dh-inline-infographic .stat-card{flex:1 1 calc(33.333% - 6px);min-width:100px} .dh-inline-infographic .inf-collapsed-card{gap:0;padding:0} .dh-inline-infographic .inf-collapsed-text{padding:12px} .dh-inline-infographic .inf-collapsed-title{font-size:17.94px} .dh-inline-infographic .inf-collapsed-subtitle{font-size:13.520000000000001px} .dh-inline-infographic .inf-toggle-shell{flex-basis:50px;min-width:50px} .dh-inline-infographic details[open] .inf-summary{grid-template-columns:minmax(0,1fr) 50px} .dh-inline-infographic details[open] .inf-summary .embed-header{padding-right:12px} .dh-inline-infographic details[open] .inf-header-toggle{width:50px} .dh-inline-infographic .faq-list{padding-left:12px;padding-right:12px} .dh-inline-infographic .main-concept{margin-left:10px;margin-right:10px;padding:12px 12px 12px 14px}.dh-inline-infographic .main-concept-title{font-size:14.3px}.dh-inline-infographic .main-concept-text{font-size:16.900000000000002px;line-height:1.55}.dh-inline-infographic .section-label{padding-top:8px;padding-bottom:4px}.dh-inline-infographic .faq-list{gap:10px;padding-left:10px;padding-right:10px}.dh-inline-infographic .faq-item{border-radius:10px}.dh-inline-infographic .faq-row{grid-template-columns:minmax(0,1fr) 22px;gap:8px;padding:11px 11px 6px}.dh-inline-infographic .faq-question{font-size:19.5px;line-height:1.28}.dh-inline-infographic .faq-toggle{width:22px;height:22px}.dh-inline-infographic .faq-arrow{width:14px;height:14px}.dh-inline-infographic .faq-answer-shell{padding:0 11px 11px}.dh-inline-infographic .faq-answer{font-size:16.25px;line-height:1.58}.dh-inline-infographic .stats-grid{padding-left:10px;padding-right:10px;gap:8px}.dh-inline-infographic .stat-card{flex:1 1 100%;min-width:0;padding:10px 10px}.dh-inline-infographic .stat-value{font-size:23.400000000000002px}.dh-inline-infographic .stat-label{font-size:11.700000000000001px} }ಸಂಕ್ಷಿಪ್ತ ಮಾಹಿತಿ – ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶAsian Games: ಸಿಂಧು, ಮನು, ಮೀರಾಬಾಯಿ, ಕ್ರಿಕೆಟ್ ತಂಡಗಳ ಮೇಲೆ ಎಲ್ಲರ ಕಣ್ಣುಒಂದು ಸಾಲಿನಲ್ಲಿಜಪಾನ್ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ಗೆ ಪಿ.ವಿ. ಸಿಂಧು, ಮನು ಭಾಕರ್ ಸೇರಿದಂತೆ ಅನುಭವಿ ಮತ್ತು ಯುವ ಕ್ರೀಡಾಪಟುಗಳೊಂದಿಗೆ ಭಾರತ ಭರ್ಜರಿಯಾಗಿ ಸಜ್ಜಾಗಿದೆ.ಏನು? ಏಕೆ? ಹೇಗೆ?2026ರ ಏಷ್ಯನ್ ಗೇಮ್ಸ್ ಯಾವಾಗ ಮತ್ತು ಎಲ್ಲಿ ನಡೆಯಲಿದೆ?20ನೇ ಏಷ್ಯನ್ ಗೇಮ್ಸ್ ಜಪಾನ್ನ ಐಚಿ-ನಗೋಯಾದಲ್ಲಿ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ನಡೆಯಲಿದೆ.
ಭಾರತೀಯ ಕ್ರೀಡಾಪಟುಗಳ ಮೇಲೆ ಈ ಬಾರಿ ಏಕೆ ಹೆಚ್ಚಿನ ನಿರೀಕ್ಷೆ ಇದೆ?2023ರ ಹಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಭಾರತ 28 ಚಿನ್ನದ ಪದಕಗಳೊಂದಿಗೆ ಒಟ್ಟು 107 ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದರಿಂದ ಈ ಬಾರಿ ನಿರೀಕ್ಷೆ ಹೆಚ್ಚಿದೆ.
ಪದಕದ ಭರವಸೆ ನೀಡಿರುವ ಪ್ರಮುಖ ಕ್ರೀಡಾಪಟುಗಳು ಯಾರು?ಪಿ.ವಿ. ಸಿಂಧು, ಮನು ಭಾಕರ್, ಮೀರಾಬಾಯಿ ಚಾನು, ಲವ್ಲಿನಾ ಬೊರ್ಗೊಹೈನ್, ಅಮನ್ ಸೆಹ್ರಾವತ್, ಲಕ್ಷ್ಯ ಸೇನ್ ಮತ್ತು ಜ್ಯೋತಿ ಸುರೇಖಾ ವೆನ್ನಂ ಅವರಂತಹ ತಾರೆಯರು ತಂಡದಲ್ಲಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ಯಾರು ವಹಿಸಿದ್ದಾರೆ?ಮಹಿಳಾ ತಂಡವನ್ನು ಹರ್ಮನ್ಪ್ರೀತ್ ಕೌರ್ ಮತ್ತು ಪುರುಷರ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದಾರೆ; ಎರಡೂ ತಂಡಗಳು ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿವೆ.
ನೀರಾಜ್ ಚೋಪ್ರಾ ಏಕೆ ಏಷ್ಯನ್ ಗೇಮ್ಸ್ನಿಂದ ಹೊರಗುಳಿದಿದ್ದಾರೆ?ಅಭ್ಯಾಸದ ವೇಳೆ ಗಾಯಗೊಂಡಿರುವ ಕಾರಣ ನೀರಾಜ್ ಚೋಪ್ರಾ ಅವರು ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸುತ್ತಿಲ್ಲ.
(function(){var script=document.currentScript;var list=script&&script.previousElementSibling;if(!list||list.__faqAccordionBound)return;list.__faqAccordionBound=true;list.addEventListener("toggle",function(event){var item=event.target;if(!item||!item.classList||!item.classList.contains("faq-item")||!item.open)return;var items=list.querySelectorAll(".faq-item[open]");for(var i=0;iನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಯಶಸ್ಸು ಕಂಡವರು ದುನಿಯಾ ವಿಜಯ್. ಈ ಮೊದಲು ‘ಸಲಗ’ ಹಾಗೂ ‘ಭೀಮ’ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ಈಗ ‘ಸಿಟಿ ಲೈಟ್ಸ್’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಮೊದಲೆರಡು ಸಿನಿಮಾಗಳಲ್ಲಿ ನಿರ್ದೇಶನದ ಜೊತೆಗೆ ಸ್ವತಃ ನಟಿಸಿದ್ದ ಅವರು ಈಗ ಸಂಪೂರ್ಣವಾಗಿ ತೆರೆಹಿಂದೆ ನಿಂತು ಕೆಲಸ ಮಾಡಿದ್ದಾರೆ. ವಿಜಯ್ ಮತ್ತು ವಿಕ್ರಮ್ ಆರ್ಯ ಅವರು ಒಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ‘ಸಿಟಿ ಲೈಟ್ಸ್’ ಸಿನಿಮಾ ಹೇಗಿದೆ ಎಂಬುದನ್ನು ತಿಳಿಯಲು ಈ ವಿಮರ್ಶೆ ಓದಿ..
‘ಸಿಟಿ ಲೈಟ್ಸ್’ ಸಿನಿಮಾದ ಮೂಲಕ ದುನಿಯಾ ವಿಜಯ್ ಅವರ ಎರಡನೇ ಪುತ್ರಿ ಮೋನಿಷಾ ವಿಜಯ್ ಕುಮಾರ್ ಅವರು ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ನೀಡಿದ್ದಾರೆ. ಅವರಿಗೆ ಜೋಡಿಯಾಗಿ ವಿನಯ್ ರಾಜ್ಕುಮಾರ್ ಅವರು ಅಭಿನಯಿಸಿದ್ದಾರೆ. ಉಮಾಶ್ರೀ ಕೂಡ ಒಂದು ಪ್ರಮುಖವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನೋದ್ ಮಾಸ್ಟರ್, ಪುನೀತ್, ವೀರ ದೇವರಾಜ್, ವಸಂತಾ ಕೃಷ್ಣಮೂರ್ತಿ ಮುಂತಾದ ಕಲಾವಿದರು ಪಾತ್ರವರ್ಗದಲ್ಲಿ ಇದ್ದಾರೆ.
ದುನಿಯಾ ವಿಜಯ್ ಅವರ ನಿರ್ದೇಶನದ ಸಿನಿಮಾಗಳಲ್ಲಿ ಕಥೆ ಮತ್ತು ಪಾತ್ರಗಳ ಹಿನ್ನೆಲೆ ಬಹಳ ಭಿನ್ನವಾಗಿರುತ್ತದೆ ಎಂಬುದು ಖಚಿತ. ‘ಸಲಗ’ ಮತ್ತು ‘ಭೀಮ’ ಸಿನಿಮಾಗಳನ್ನು ನೋಡಿದವರಿಗೆ ಅದು ಸ್ಪಷ್ಟವಾಗಿ ತಿಳಿದಿರುತ್ತದೆ. ಈಗ ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಕೂಡ ಅವರು ಅಂಥದ್ದೇ ಒಂದು ಡಿಫರೆಂಟ್ ಲೋಕವನ್ನು ಅನಾವರಣ ಮಾಡಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ಬಗ್ಗೆ ಒಂದಷ್ಟು ಸಿನಿಮಾಗಳಲ್ಲಿ ಈಗಾಗಲೇ ತೋರಿಸಲಾಗಿದೆ. ಆದರೆ ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಮೆಜೆಸ್ಟಿಕ್ ಏರಿಯಾದ ಇನ್ನೊಂದು ಕರಾಳ ಮುಖವನ್ನು ತೆರೆದಿಡಲಾಗಿದೆ. ಮೋನಿಷಾ ಅವರಿಗೆ ಮೊದಲ ಸಿನಿಮಾದಲ್ಲಿಯೇ ಡಿಫರೆಂಟ್ ಆದಂತಹ ಪಾತ್ರ ಸಿಕ್ಕಿದೆ. ಅದನ್ನು ಅವರು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮೋನಿಷಾ ಅವರು ಕಾಣಿಸಿಕೊಳ್ಳುವುದೇ ಮಧ್ಯಂತರದ ವೇಳೆಗೆ. ಆದರೂ ಕೂಡ ಅವರ ಪಾತ್ರವೇ ಸಿನಿಮಾದಲ್ಲಿ ಹೈಲೈಟ್ ಆಗಿದೆ.
ಊರಿನಿಂದ ಕೆಲಸ ಹುಡುಕಿಕೊಂಡು ಮೆಜೆಸ್ಟಿಕ್ಗೆ ಬರುವ ಶಿವ ಎಂಬ ಯುವಕನಾಗಿ ವಿನಯ್ ರಾಜ್ಕುಮಾರ್ ಅವರು ನಟಿಸಿದ್ದಾರೆ. ಅಲ್ಲಿ ಶಿವನಿಗೆ ಹಲವು ತಾಪತ್ರಯಗಳು ಎದುರಾಗುತ್ತವೆ. ಅದರ ನಡುವೆಯೇ, ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕುವ ಅಮಾಯಕ ಹೆಣ್ಣು ಮಗಳಾಗಿ ಮೋನಿಷಾ ಕಾಣಿಸಿಕೊಂಡಿದ್ದಾರೆ. ಈ ಎರಡೂ ಪಾತ್ರಗಳು ಆಕಸ್ಮಿಕವಾಗಿ ಭೇಟಿ ಆಗುತ್ತವೆ. ಅಲ್ಲಿಂದ ಮುಂದೇನಾಗುತ್ತದೆ ಎಂಬುದೇ ‘ಸಿಟಿ ಲೈಟ್ಸ್’ ಕಹಾನಿ.
ಒಂದು ಲವ್ ಸ್ಟೋರಿ, ತೃತೀಯ ಲಿಂಗಿಗಳ ತಳಮಳ, ಪುಡಿ ರೌಡಿಗಳ ಅಟ್ಟಹಾಸ, ರಾಜಕೀಯದವರ ಭ್ರಷ್ಟಾಚಾರ, ಪೊಲೀಸರ ಕಳ್ಳಾಟ, ವೇಶ್ಯೆಯರ ಬದುಕಿನ ಸಂಕಟ ಸೇರಿದಂತೆ ಹಲವು ಅಂಶಗಳನ್ನು ಬೆರೆಸಿ ‘ಸಿಟಿ ಲೈಟ್ಸ್’ ಸಿನಿಮಾ ಮಾಡಲಾಗಿದೆ. ಎಲ್ಲವನ್ನೂ ಒಂದಕ್ಕೊಂದು ತಳುಕು ಹಾಕಿಕೊಂಡಿರುವ ರೀತಿಯಲ್ಲಿ ಕಥೆ ಹೆಣೆಯಲಾಗಿದೆ. ಸಸ್ಪೆನ್ಸ್ ಮೂಡಿಸುತ್ತಾ, ಆ್ಯಕ್ಷನ್ ತೋರಿಸುತ್ತಾ, ಸಂದೇಶ ನೀಡುತ್ತಾ ಈ ಕಥೆ ಸಾಗುತ್ತದೆ. ಹಲವು ಅಂಶಗಳ ಮಿಶ್ರಣದ ಬದಲು ನಿರ್ದಿಷ್ಟ ವಿಷಯದ ಮೇಲೆ ಕಥೆ ಕೇಂದ್ರೀಕೃತ ಆಗಿದ್ದರೆ ಸಿನಿಮಾ ಇನ್ನಷ್ಟು ಆಪ್ತವೆಸಿಕೊಳ್ಳುತ್ತಿತ್ತು. ಕೆಲವು ದೃಶ್ಯಗಳಲ್ಲಿ ಸ್ವಲ್ಪ ವಿವರಣೆ ಬೇಕಿತ್ತು ಎನಿಸುತ್ತದೆ.
ಇದನ್ನೂ ಓದಿ: ‘ಸಿಟಿ ಲೈಟ್ಸ್’ ಬೆಂಬಲಿಸಿದ ದೊಡ್ಮನೆಯವರಿಗೆ ದುನಿಯಾ ವಿಜಯ್ ಧನ್ಯವಾದ: ವಿಡಿಯೋ
ಪಟಪಟನೆ ಸಾಗುವ ಗುಣ ಈ ಸಿನಿಮಾಗಿದೆ. 2 ಗಂಟೆ 9 ನಿಮಿಷಗಳ ಅವಧಿಯಲ್ಲಿ ಎಲ್ಲವನ್ನೂ ತೋರಿಸಲಾಗಿದೆ. ಗೊಂದಲಕ್ಕೆ ಅವಕಾಶ ನೀಡದ ರೀತಿಯಲ್ಲಿ ನಿರ್ದೇಶಕ ದುನಿಯಾ ವಿಜಯ್ ಅವರು ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಹಾಸ್ಯಕ್ಕಾಗಿಯೂ ಒಂದಷ್ಟು ದೃಶ್ಯಗಳನ್ನು ಮೀಸಲಿಡಲಾಗಿದೆ. ಆದರೆ ಲವ್, ಸೆಂಟಿಮೆಂಟ್, ಕ್ರೈಂ ಹಾಗೂ ಆ್ಯಕ್ಷನ್ ದೃಶ್ಯಗಳಿಗೆ ಹೋಲಿಸಿದರೆ ಕಾಮಿಡಿ ದೃಶ್ಯಗಳು ಅಷ್ಟೇನೂ ಕೈ ಹಿಡಿದಿಲ್ಲ. ಆ ಬಗ್ಗೆ ಸ್ವಲ್ಪ ಗಮನ ಹರಿಸುವ ಅವಶ್ಯಕತೆ ಇತ್ತು.
ಇತರೆ ಸಿನಿಮಾಗಳಲ್ಲಿ ಕಾಣಿಸುವ ಪಾತ್ರಗಳಿಗಿಂತ ದುನಿಯಾ ವಿಜಯ್ ನಿರ್ದೇಶನದ ಸಿನಿಮಾಗಳಲ್ಲಿ ಇರುವ ಪಾತ್ರಗಳು ಡಿಫರೆಂಟ್ ಆಗಿರುತ್ತವೆ. ಅಂಥ ಪಾತ್ರಗಳು ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಕೂಡ ಮುಂದುವರಿದಿವೆ. ಆ ರೀತಿಯ ಪಾತ್ರಗಳ ಕಾರಣದಿಂದಲೇ ಈ ಚಿತ್ರಕ್ಕೆ ಬೇರೆ ರೀತಿಯ ಫೀಲ್ ಸಿಕ್ಕಿದೆ. ಇನ್ನು, ತಾಂತ್ರಿಕ ವರ್ಗದಲ್ಲಿ ಚರಣ್ ರಾಜ್ ಅವರ ಸಂಗೀತ, ಶಿವ ಸೇನಾ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಅವರ ಸಂಕಲನ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇಟಲಿಯ ಐಷಾರಾಮಿ ಫ್ಯಾಷನ್ ಉತ್ಪನ್ನಗಳ ಕಂಪನಿ ‘ಫೆಂಡಿ’ ಇತ್ತೀಚಿಗೆ ₹8.3 ಲಕ್ಷದಿಂದ ₹9 ಲಕ್ಷವರೆಗಿನ ಹ್ಯಾಂಡ್ಬ್ಯಾಗ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಬ್ಯಾಗ್ ಸಂಪೂರ್ಣವಾಗಿ ಬಣ್ಣ ಬಣ್ಣದ ಕಸೂತಿ, ಕನ್ನಡಿ, ಮಣಿಗಳಿಂದ ಕೂಡಿದೆ. ಅಲ್ಲದೇ ಥೇಟ್ ಬಂಜಾರ ಸಮುದಾಯದ ಸಾಂಪ್ರದಾಯಿಕ ಬ್ಯಾಗ್ಗಳನ್ನೇ ಹೋಲುವಂತಿದೆ. ನವರಾತ್ರಿ ಸಮಯದಲ್ಲಿ ₹500ಕ್ಕೆ ಗುಜರಾತ್ ಮತ್ತು ರಾಜಸ್ಥಾನದಲ್ಲಿ ಇದೇ ರೀತಿಯ ಬ್ಯಾಗ್ಗಳ ಅಂಗಡಿಗಳನ್ನು ಕಾಣಬಹುದು.
ಇದೇ ಕಾರಣಕ್ಕೆ ಸದ್ಯ ‘ಫೆಂಡಿ’ ಕಂಪನಿಯ ಬ್ಯಾಗ್ ಚರ್ಚೆಗೆ ಗ್ರಾಸವಾಗಿದೆ. ಭಾರತದ ಕಸುಬುದಾರಿಕೆಯಿಂದ ಸ್ಪೂರ್ತಿ ಪಡೆದು, ಯಾವುದೇ ಕ್ರೆಡಿಟ್ ಕೊಡದೆ ಫೆಂಡಿ, ಈ ಬ್ಯಾಗ್ಗಳನ್ನು ಬಿಡುಗಡೆ ಮಾಡಿದೆ ಎಂದು ಇತರ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ಗಳು ಆರೋಪಿಸಿವೆ.
ಧ್ವನಿಯೆತ್ತಿದ ಭಾರತದ ಉದ್ಯಮಿಗಳು
ಫೆಂಡಿ ಬ್ಯಾಗ್ ಬಗ್ಗೆ ಆರ್ಪಿಜಿ ಗ್ರೂಪ್ನ ಮುಖ್ಯಸ್ಥ ಹರ್ಷ್ ಗೋಯೆಂಕಾ ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಭಾರತೀಯ ಕುಶಲಕರ್ಮಿಗಳಿಗೆ ಮನ್ನಣೆ ನೀಡದಿರುವ ವಿಷಯವಿದು. ‘ಪ್ರಡಾ‘ ಸಂಸ್ಥೆಯ ಕೊಲ್ಹಾಪುರಿ ಚಪ್ಪಲಿ ವಿವಾದದಂತೆ ಇದು ನಿಜವಾಗಿಯೂ ಸಾಂಸ್ಕೃತಿಕ ಸ್ವಾಧೀನತೆ ಪ್ರಕರಣವೇ, ಅಥವಾ ಇದರ ಹಿಂದೆ ಇನ್ನೂ ಹೆಚ್ಚಿನ ವಿಷಯವಿದೆಯೇ ಎಂದು ಪ್ರಶ್ನೆಯೆತ್ತಿದ್ದಾರೆ.
This is a case of cultural appropriation & not in good taste. Repackaging India’s traditional craft as luxury, without credit to the artisans who created and preserved it, undermines our authentic talent and heritage. Indian craftsmanship deserves recognition, not imitation. https://t.co/42pENpp10F
— Kiran Mazumdar-Shaw (@kiranshaw) September 15, 2026ಫೆಂಡಿ ಪರಿಚಯಿಸಿದ ಬ್ಯಾಗ್ ಹೇಗಿದೆ?
ಅಧಿಕೃತ ವೆಬ್ಸೈಟ್ನಲ್ಲಿ ಬ್ಯಾಗ್ನ ಬಗ್ಗೆ ಬರೆದುಕೊಂಡಿರುವ ಫೆಂಡಿ, ‘ಇದು ಕಸೂತಿ ಮತ್ತು ಕನ್ನಡಿಗಳನ್ನು ಹೊಂದಿರುವ ‘ಮಲ್ಟಿಕಲರ್ ರೀ-ಎಡಿಷನ್ ಬ್ಯಾಗ್’ ಅಥವಾ ‘ಬ್ಯಾಗೆಟ್ 26424’ (Baguette 26424) ಆಗಿದೆ. ಇದು 1997ರಲ್ಲಿ ಮೊದಲ ಬಾರಿಗೆ ಪರಿಚಯಿಸಲ್ಪಟ್ಟಿತ್ತು. ಇದೀಗ ಇದರ ಮೂಲ ಆವೃತ್ತಿಯಾದ ‘26424’ ಆಧರಿಸಿ, ‘ಫಾಲ್/ವಿಂಟರ್ 2026-27’ ಎನ್ನುವ ಹೊಸ ರೂಪದಲ್ಲಿ ಮರುಸೃಷ್ಟಿಸಲಾಗಿದೆ’ ಎಂದು ಬರೆದುಕೊಂಡಿದೆ.
‘ಈ ಬ್ಯಾಗ್ಅನ್ನು ಕೈಗಳ ಮೂಲಕ ರೂಪಿಸಲಾಗಿದೆ. ಇದರಲ್ಲಿ 39,500 ಮಣಿಗಳು ಮತ್ತು 475 ಕನ್ನಡಿಗಳಿವೆ. ಇದನ್ನು ತಯಾರಿಸಲು 138 ಗಂಟೆ ಸಮಯ ಹಿಡಿದೆ. ಈ ಬ್ಯಾಗ್ ಕೇವಲ ಕಸೂತಿಯಿಂದ ಕೂಡಿಲ್ಲ, ಬದಲಾಗಿ ಕರುವಿನ ಚರ್ಮದಿಂದ ತಯಾರಿಸಿದ ಗಾಢ ಕಂದು ಬಣ್ಣದ ಭುಜದ ಪಟ್ಟಿಯನ್ನು ಹೊಂದಿದೆ. ಇದನ್ನು ಇಟಲಿಯಲ್ಲಿ ತಯಾರಿಸಲಾಗಿದೆ’ ಎಂದು ವೆಬ್ಸೈಟ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಫೆಂಡಿ, ಇದನ್ನು ‘ನವರಾತ್ರಿ ಬ್ಯಾಗ್’ ಎಂದು ಹೇಳಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇದು ‘ನವರಾತ್ರಿ ಬ್ಯಾಗ್’ ಎಂದು ಹೆಸರು ಪಡೆದುಕೊಂಡಿದೆ.
ಏಪ್ರಿಲ್ನಲ್ಲೇ ವಿಡಿಯೊ ಹಂಚಿಕೊಂಡಿದ್ದ ಫೆಂಡಿ
ಬ್ಯಾಗ್ ತಯಾರಿಕೆಯ ಬಗ್ಗೆ ಕಳೆದ ಏಪ್ರಿಲ್ನಲ್ಲಿ ವಿಡಿಯೊ ಹಂಚಿಕೊಂಡಿದ್ದ ಫೆಂಡಿ, ‘ಕಸುಬುದಾರಿಕೆಯು ವಿನ್ಯಾಸವಾಗಿ ಪರಿವರ್ತನೆಗೊಂಡಾಗ, ‘ಚಾಣಕ್ಯ’ದ ನುರಿತ ಕುಶಲಕರ್ಮಿಗಳ ಕೈಚಳಕದಿಂದ ಮಣಿಗಳು ಮತ್ತು ಕನ್ನಡಿಗಳು ಹೇಗೆ ವಿಶಿಷ್ಟ ಕಲಾಕೃತಿಗಳಾಗಿ ರೂಪುಗೊಳ್ಳುತ್ತವೆ ಎಂಬುದನ್ನು ಕಂಡುಕೊಳ್ಳಿ’ ಎಂದು ಬರೆದುಕೊಂಡಿತ್ತು.
ಅಂದಹಾಗೆ ವರದಿಗಳ ಪ್ರಕಾರ 'ಚಾಣಕ್ಯ ಇಂಟರ್ನ್ಯಾಷನಲ್’ ಎನ್ನುವುದು ಮುಂಬೈ ಮೂಲದ ಕರಕುಶಲ ಸಂಸ್ಥೆಯಾಗಿದೆ. ಹೀಗಾಗಿ ಇದನ್ನೂ ಭಾರತೀಯರೇ ಸಂಯೋಜನೆಯಲ್ಲಿ ತಯಾರಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಕಂಪನಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
When craftsmanship becomes design
Discover how sequins, beads, and mirrors are transformed into unique works of art through the skilled hands of Chanakya artisans#FENDI pic.twitter.com/SzcVBIwVcM
ಚಾಮರಾಜನಗರ, ಸೆಪ್ಟೆಂಬರ್ 18: ಇತ್ತೀಚೆಗೆ ಹನೂರು ಅರಣ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶೂಟೌಟ್ಗೆ ಮೂವರು ಬೇಟೆಗಾರರು ಮೃತಪಟ್ಟ ಘಟನೆ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆ ಬಳಿಕವೂ ಅರಣ್ಯದಲ್ಲಿ ಕಳ್ಳಬೇಟೆ ಮುಂದುವರಿದಿದೆ ಎನ್ನಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲೇ 40ಕ್ಕೂ ಹೆಚ್ಚು ಬೇಟೆಗಾರರು ಇನ್ನು ಸಕ್ರೀಯರಾಗಿದ್ದಾರೆ ಎನ್ನುವ ಸ್ಫೋಟಕ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ನಿಟ್ಟಿನಲ್ಲಿ ಕಾಡುಗಳ್ಳರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಅರಣ್ಯ ಸಿಬ್ಬಂದಿ ಇದೀಗ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿದೆ. ಆ ಮೂಲಕ ಕರ್ನಾಟಕದ ಕಾಡುಗಳ ರಕ್ಷಣೆಗೆ ವಿಶೇಷ ತರಬೇತಿ ಪಡೆದ ‘ಬೆಲ್ಜಿಯನ್ ಸ್ನಿಫರ್ ಡಾಗ್’ಗಳ ಬಲ ಲಭಿಸಿದೆ.
ಮೇಲುಕಾಮನಹಳ್ಳಿ ಕ್ಯಾಂಪ್ನಲ್ಲಿ ಕಠಿಣ ತರಬೇತಿರಾಜ್ಯದ ಅರಣ್ಯಗಳಲ್ಲಿ ಹೆಚ್ಚಿರುವ ಕಳ್ಳಬೇಟೆ ಮತ್ತು ಕಾಡುಗಳ್ಳತನವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಅರಣ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ಬಂಡೀಪುರದ ಮೇಲುಕಾಮನಹಳ್ಳಿ ಕ್ಯಾಂಪ್ನಲ್ಲಿ ಅರಣ್ಯ ಸಿಬ್ಬಂದಿ 10 ಹೆಣ್ಣು ಬೆಲ್ಜಿಯನ್ ಸ್ನಿಫರ್ ಶ್ವಾನಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.
ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಬೇಟೆಗಾರರು ಇನ್ನು ಸಕ್ರೀಯ: ಸ್ಫೋಟಕ ವಿಚಾರ ಬೆಳಕಿಗೆ
ಇನ್ನು ಇದಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕಾಡುಗಳ್ಳತನ ಹೆಚ್ಚಾದ ಹಿನ್ನಲೆ ಅರಣ್ಯ ಸಿಬ್ಬಂದಿ ಹೊಸ ತಂತ್ರ ಕೂಡ ಬಳಸುತ್ತಿದ್ದಾರೆ.
ಐದು ಹುಲಿ ಸಂರಕ್ಷಿತ ಪ್ರದೇಶಗಳಿಗೆ ಶ್ವಾನಗಳ ನಿಯೋಜನೆತರಬೇತಿ ಪಡೆದ ಈ ಸ್ನಿಫರ್ ಡಾಗ್ಗಳನ್ನು ರಾಜ್ಯದ ಪ್ರಮುಖ ಐದು ಹುಲಿ ಸಂರಕ್ಷಿತ ಪ್ರದೇಶಗಳ ಕಾವಲಿಗೆ ಹಂಚಿಕೆ ಮಾಡಲಾಗುತ್ತಿದೆ. ಬಂಡೀಪುರ, ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್ಟಿ), ಭದ್ರಾ, ಕಾಳಿ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಿಗೆ ತಲಾ ಐದು ಶ್ವಾನಗಳನ್ನು ವಿತರಿಸಲಾಗುತ್ತಿದೆ.
.liveTvWebbx { background: #fff; margin-bottom: 10px; } .liveTvWebbx span { display: flex; align-items: center; justify-content: center; background: #dc0000; padding: 5px 0; } .liveTvWebbx span a { color: #fff; font-size: 22px; display: flex; align-items: center; justify-content: center; font-weight: 600; line-height: 28px; text-decoration: none; } .liveTvWebbx span a:hover{color:#fff;} .liveTvWebbx span a svg { width: 2rem; height: 2rem; margin-right: 5px; display: inline-block; flex-shrink: 0; vertical-align: middle; fill: none; stroke: #fff; stroke-width: 2; stroke-linecap: round; stroke-linejoin: round; transform-origin: center; animation: livePulse 1.3s ease-in-out infinite; } @keyframes livePulse { 0% { transform: scale(1); opacity: 1; } 50% { transform: scale(1.08); opacity: 1; } 100% { transform: scale(1); opacity: 1; } } .liveTvWebbx iframe, .liveTvWebbx amp-iframe { width: 100%; height: auto; aspect-ratio: 16 / 9; display: block; border: none; } LIVE TV document.addEventListener('DOMContentLoaded', function () { let liveTV = document.querySelector('.live-tv-tracking'); if (liveTV) { liveTV.addEventListener('click', function () { if (typeof dataLayer !== 'undefined') { dataLayer.push({ 'event': 'article_live_tv_click', 'widget_name': 'article_live_tv', 'click_location': 'article' }); } }); } }); ಅಪರಾಧ ಪತ್ತೆಯಲ್ಲಿ ಮುಂಚೂಣಿ; ಕಾಡುಗಳ್ಳರಲ್ಲಿ ನಡುಕಇನ್ನು ಈ ಬೆಲ್ಜಿಯನ್ ಸ್ನಿಫರ್ ತಳಿಯ ಶ್ವಾನಗಳು ಅತ್ಯಂತ ತೀಕ್ಷ್ಣವಾದ ವಾಸನೆ ಗ್ರಹಿಸುವ ಶಕ್ತಿ ಹಾಗೂ ಅತಿ ವೇಗವಾಗಿ ಓಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿವೆ. ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಮುಂಚೂಣಿಯಲ್ಲಿರುವ ಈ ಶ್ವಾನಗಳ ಆಗಮನದಿಂದಾಗಿ, ಅರಣ್ಯ ಪ್ರದೇಶದಲ್ಲಿ ಅಕ್ರಮ ಕೃತ್ಯವೆಸಗುವ ಕಾಡುಗಳ್ಳರಿಗೆ ನಡುಕ ಶುರುವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ನವದೆಹಲಿ: ನೀಟ್ (NEET) ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸುವ ಮತ್ತು ಸುಧಾರಣೆ ಮಾಡುವ ಉದ್ದೇಶದಿಂದ ಉದ್ಯಮಿ ನಂದನ್ ನಿಲೇಕಣಿ ನೇತೃತ್ವದಲ್ಲಿ 'ಉನ್ನತ ಮಟ್ಟದ ಕಾರ್ಯಪಡೆ'ಯನ್ನು ರಚಿಸಲಾಗಿದೆ. ಈ ಸಮಿತಿಯು ವ್ಯಾಪಕ ಸಮಾಲೋಚನೆಗಳನ್ನು ನಡೆಸಿದ್ದು, ಈ ತಿಂಗಳ ಅಂತ್ಯದ ವೇಳೆಗೆ ತನ್ನ ಮೊದಲ ಮಧ್ಯಂತರ ವರದಿಯನ್ನು ಸಲ್ಲಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
'ಸ್ವೀಕರಿಸಲಾದ ಎಲ್ಲ ಸಲಹೆಗಳು ಮತ್ತು ಪ್ರಸ್ತಾವನೆಗಳನ್ನು ಪರಿಶೀಲನೆಗಾಗಿ ಸಮಿತಿಗೆ ನೀಡಲಾಗಿದೆ. ಇಸ್ರೋ (ISRO) ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್ ಅವರ ನೇತೃತ್ವದ ಹಿಂದಿನ ಸಮಿತಿ ಸದಸ್ಯರೊಂದಿಗೂ ಈ ಸಮಿತಿಯು ಚರ್ಚಿಸಿದೆ ಎಂದು ಸರ್ಕಾರದ ಹಿರಿಯ ವಕೀಲರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠಕ್ಕೆ ತಿಳಿಸಿದರು.
ಈವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವಂತೆ ಪೀಠವು ನೀಲೇಕಣಿ ಸಮಿತಿಗೆ ನೆರವಾಗುತ್ತಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (DoPT) ಜಂಟಿ ಕಾರ್ಯದರ್ಶಿಗೆ ಸೂಚಿಸಿತು.
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (NEET) ನಡೆಸುವ ಸಂಪೂರ್ಣ ಪ್ರಕ್ರಿಯೆಯನ್ನು ಸಾಂಸ್ಥಿಕಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಗಮನಹರಿಸಬೇಕೆಂಬುದೇ ಈ ವಿಷಯದಲ್ಲಿ ಅತ್ಯಂತ ಪ್ರಮುಖವಾದ ಅಂಶವಾಗಿದೆ ಎಂದು ಪೀಠವು ಮೆಹ್ತಾ ಅವರಿಗೆ ತಿಳಿಸಿತು.
'ಸಂಪೂರ್ಣ ವ್ಯವಸ್ಥೆಯ ಸ್ಥಿರತೆಯೇ ಅತ್ಯಂತ ಮುಖ್ಯ ಎಂಬುದನ್ನು ನೀವು ಅರಿಯಬೇಕು. ಇಲ್ಲಿ ಶಾಶ್ವತ ವ್ಯವಸ್ಥೆ, ಶಾಶ್ವತ ಸಿಬ್ಬಂದಿ ಮತ್ತು ಶಾಶ್ವತ ವಿಭಾಗಗಳು ಇರಬೇಕು. ನಿಯೋಜನೆ ಮೂಲಕದ ನೇಮಕಾತಿಗಳು ಅತ್ಯಂತ ಕಡಿಮೆ ಇರಬೇಕು. ಆಗ ಮಾತ್ರ ಒಂದು ಶಾಶ್ವತ ಸ್ವರೂಪದ ವ್ಯವಸ್ಥೆ ರೂಪುಗೊಳ್ಳಲು ಸಾಧ್ಯ' ಎಂದು ನ್ಯಾಯಪೀಠ ಮೆಹ್ತಾ ಅವರಿಗೆ ಹೇಳಿತು.
ಪರೀಕ್ಷಾ ವ್ಯವಸ್ಥೆ ಸುಧಾರಣೆ: ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚನೆ; ಪ್ರಧಾನಿ ಮೋದಿ ಘೋಷಣೆ! Videoಎನ್ಟಿಎ (NTA)ಯ ನೂತನ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪರಿಶೀಲಿಸಲು, ಅದರ ಹೊಸದಾಗಿ ಮೇಲ್ದರ್ಜೆಗೇರಿಸಲಾದ ಕೇಂದ್ರ ಅಥವಾ ಸೌಲಭ್ಯಕ್ಕೆ ತಾವೂ ಹಾಗೂ ನ್ಯಾಯಮೂರ್ತಿ ಅರಾಧೆ ಅವರೂ ಖುದ್ದಾಗಿ ಭೇಟಿ ನೀಡಿ ವೀಕ್ಷಿಸಲು ಬಯಸುವುದಾಗಿ ನ್ಯಾಯಮೂರ್ತಿ ನರಸಿಂಹ ಹೇಳಿದರು.
ಶಿಕ್ಷಣ ಇಲಾಖೆಯು ಹೊಸ ಹಾಗೂ ಉನ್ನತೀಕರಿಸಿದ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದೆ.
'ಈ ರಚನೆಯ ಶಾಶ್ವತತೆಯನ್ನು ಖಚಿತಪಡಿಸಲಾಗಿದೆ. ಆದಾಗ್ಯೂ, ಸದ್ಯಕ್ಕೆ ಮಾನವ ಸಂಪನ್ಮೂಲದ ಲಭ್ಯತೆಯನ್ನು ಭಾಗಶಃ ಮಾತ್ರ ಖಚಿತಪಡಿಸಿಕೊಳ್ಳಲಾಗಿದೆ' ಎಂದು ಮೆಹ್ತಾ ಹೇಳಿದರು.
NTAಯಲ್ಲಿನ ಸುಧಾರಣೆಗಳನ್ನು ಸಾಂಸ್ಥಿಕಗೊಳಿಸುವ ಅಗತ್ಯವನ್ನು ಗಮನಿಸಿದ ಸುಪ್ರೀಂ ಕೋರ್ಟ್, ಆಗಸ್ಟ್ 19 ರಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನವೊಂದನ್ನು ನೀಡಿತು. ರಾಧಾಕೃಷ್ಣನ್ ಸಮಿತಿ ಮತ್ತು ನಿಲೇಕಣಿ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ಕೈಗೊಂಡ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
'ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್' (FAIMA) ಪರವಾಗಿ ವಕೀಲೆ ತನ್ವಿ ದುಬೆ ಅವರು ಸಲ್ಲಿಸಿದ್ದ ಅರ್ಜಿಯನ್ನೂ ಒಳಗೊಂಡಂತೆ, ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.
ಬಿಮಾನ ಬಾಂಗ್ಲಾದೇಶ ಏರ್ಲೈನ್ಸ್ನ ವಿಮಾನದೊಳಗೆ ಇಬ್ಬರು ಪ್ರಯಾಣಿಕರು ಹೊಡೆದಾಡಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಮಾನವು ಲಂಡನ್ನಿಂದ ಬಾಂಗ್ಲಾದೇಶಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇಬ್ಬರು ಪ್ರಯಾಣಿಕರ ನಡುವಿನ ವಾಗ್ವಾದ ಬಳಿಕ ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಿರುಗಿತು.
ಈ ಘಟನೆಯಿಂದ ವಿಮಾನದಲ್ಲಿದ್ದ ಇತರ ಪ್ರಯಾಣಿಕರಲ್ಲಿ, ಅದರಲ್ಲೂ ಮಕ್ಕಳು ಮತ್ತು ವೃದ್ಧರಲ್ಲಿ ಆತಂಕ ಉಂಟಾಯಿತು. ಸೆಪ್ಟೆಂಬರ್ 16, 2026ರಂದು ತಾನು ಆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದುದಾಗಿ ತಿಳಿಸಿರುವ ಉದ್ದಿನ್ ಅಲಿಮ್ ಎಂಬ ವ್ಯಕ್ತಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ದುಬೈಗೆ ತೆರಳಬೇಕಿದ್ದ ಸ್ಪೈಸ್ಜೆಟ್ ವಿಮಾನಗಳ ವಿಳಂಬ: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ!ಫೇಸ್ಬುಕ್ನಲ್ಲಿ ವಿಡಿಯೊ ಹಂಚಿಕೊಂಡ ಅಲಿಮ್, “ನಾನು ಸೆಪ್ಟೆಂಬರ್ 16ರಂದು ಬಿಮಾನ ಬಾಂಗ್ಲಾದೇಶ ಏರ್ಲೈನ್ಸ್ನ ವಿಮಾನದಲ್ಲೇ ಇದ್ದೆ. ವಿಮಾನ ಹಾರಾಟದಲ್ಲಿದ್ದಾಗ ಅತ್ಯಂತ ಆತಂಕಕಾರಿ ಘಟನೆಯೊಂದಕ್ಕೆ ನಾನು ಸಾಕ್ಷಿಯಾದೆ. ಪ್ರಯಾಣಿಕರ ನಡುವೆ ಹೊಡೆದಾಟ ಆರಂಭವಾಗಿ, ವಿಮಾನದೊಳಗೆ ಭಯದ ವಾತಾವರಣ ನಿರ್ಮಾಣವಾಯಿತು ಎಂದು ಬರೆದಿದ್ದಾರೆ.
ವಿಮಾನದಲ್ಲಿ ಮಕ್ಕಳು ಮತ್ತು ವೃದ್ಧರು ಇದ್ದಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಆತಂಕಕಾರಿಯಾಗಿಸಿತು. ಈ ಘಟನೆಯೊಂದಿಗೆ ಅವರಿಗೆ ಯಾವುದೇ ಸಂಬಂಧವಿರಲಿಲ್ಲ. ಆದರೂ ಅವರು ಈ ವರ್ತನೆಯನ್ನು ಕಣ್ಣಾರೆ ನೋಡಬೇಕಾಯಿತು ಹಾಗೂ ಇದರಿಂದ ಉಂಟಾದ ಭಯ ಮತ್ತು ಒತ್ತಡವನ್ನು ಎದುರಿಸಬೇಕಾಯಿತು. ಸಾವಿರಾರು ಅಡಿ ಎತ್ತರದಲ್ಲಿ ಹಾರುತ್ತಿರುವಾಗ, ಅಪಾಯಕಾರಿ ಪರಿಸ್ಥಿತಿಯಿಂದ ಸುಮ್ಮನೆ ದೂರ ಸರಿಯಲು ಸಾಧ್ಯವಾಗದ ಸ್ಥಿತಿಯನ್ನು ಊಹಿಸಿ ನೋಡಿ ಎಂದು ಅಲಿಮ್ ಹೇಳಿದ್ದಾರೆ.
A mid-air fistfight broke out aboard a Biman Bangladesh Airlines flight from London to Dhaka. Two passengers got into a heated argument that escalated into a physical fight, reports said.
A video circulating online shows two men exchanging blows as fellow passengers looked on… pic.twitter.com/5grjg8vvAn
ವಿಮಾನ ಹತ್ತುವಾಗ ಪ್ರತಿಯೊಬ್ಬರೂ ಸುರಕ್ಷಿತವಾಗಿರುವ ಭಾವನೆಯನ್ನು ನಿರೀಕ್ಷಿಸುತ್ತಾರೆ. ಆದರೆ, ಏಕಾಏಕಿ ಪ್ರಯಾಣಿಕರು ಪರಸ್ಪರ ಹೊಡೆದಾಡಿಕೊಳ್ಳುವುದನ್ನು ನೋಡುವುದು ಅತ್ಯಂತ ಭಯಾನಕ ಅನುಭವ ಎಂದು ಅವರು ಹೇಳಿದ್ದಾರೆ. ತಾನು ಅಲ್ಲಿಯೇ ಇದ್ದು, ನಡೆದ ಘಟನೆಯನ್ನು ಸ್ವತಃ ಕಣ್ಣಾರೆ ನೋಡಿದ್ದೇನೆ ಎಂದು ಅಲಿಮ್ ತಿಳಿಸಿದ್ದಾರೆ.
ವಿಡಿಯೊದಲ್ಲಿ ಇಬ್ಬರು ವ್ಯಕ್ತಿಗಳು ಮೊದಲು ವಾಗ್ವಾದ ನಡೆಸಿ, ಬಳಿಕ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಹೊಡೆದಾಟದ ವೇಳೆ ಒಂದು ಹಂತದಲ್ಲಿ ಪ್ರಯಾಣಿಕರೊಬ್ಬರ ಟಿ-ಶರ್ಟ್ ಹರಿದುಹೋಗಿದೆ.
ನಂತರ ಕ್ಯಾಬಿನ್ ಸಿಬ್ಬಂದಿ ಹಾಗೂ ಇತರ ಪ್ರಯಾಣಿಕರು ಮಧ್ಯಪ್ರವೇಶಿಸಿ, ಇಬ್ಬರನ್ನೂ ಬೇರ್ಪಡಿಸಲು ಪ್ರಯತ್ನಿಸಿದ್ದಾರೆ.
ಈ ಕುರಿತು ಬಿಮಾನ ಬಾಂಗ್ಲಾದೇಶ ಏರ್ಲೈನ್ಸ್ನ ಸಾರ್ವಜನಿಕ ಸಂಪರ್ಕ ವಿಭಾಗದ ಜನರಲ್ ಮ್ಯಾನೇಜರ್ ಮಹಬುಬುದ್ದೀನ್ ಅಹ್ಮದ್ , ‘ಢಾಕಾ ಟ್ರಿಬ್ಯೂನ್’ಗೆ ಪ್ರತಿಕ್ರಿಯಿಸಿ, ಈ ವಿಚಾರದ ಬಗ್ಗೆ ನನಗೆ ಇನ್ನೂ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಬಾಲಿವುಡ್ನ ಪ್ರಸಿದ್ಧ ನಟ ವಿಕ್ರಾಂತ್ ಮಾಸ್ಸಿ ತಮ್ಮ ‘ಮುಸಾಫಿರ್ ಕೆಫೆ’ ಯಶಸ್ಸಿನ ನಂತರ ಉದ್ಯಮ ರಂಗಕ್ಕೆ ಕಾಲಿಡುತ್ತಿದ್ದಾರೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಸುಂದರ ಮಡಿಲಲ್ಲಿ ‘ಮುಸಾಫಿರ್ ಕೆಫೆ’ ಮಾದರಿಯ ಎರಡು ಕೆಫೆಗಳನ್ನು ತೆರೆಯಲು ಅವರು ಸಜ್ಜಾಗಿದ್ದಾರೆ. ಈ ಕೆಫೆಗಳ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದ್ದು ಪ್ರೇಕ್ಷಕರಲ್ಲಿ ಮತ್ತು ಪ್ರವಾಸಿಗರಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ.
ವಿಕ್ರಾಂತ್ ಮಾಸ್ಸಿ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಾದ ‘ಹೋಮ್ ಮೇಡ್ ಸ್ಟೋರೀಸ್’ ಮೂಲಕ ಈ ಯೋಜನೆ ಜಾರಿಗೆ ತರುತ್ತಿದ್ದಾರೆ. ಸರಣಿಯಲ್ಲಿ ಕಾಣಿಸಿಕೊಂಡಿದ್ದ ಕೆಫೆಯನ್ನೇ ಹೋಲುವಂತೆ ಈ ನೈಜ ಕೆಫೆಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ತೆರೆಯ ಮೇಲೆ ಕಂಡ ರಮಣೀಯ ವಾತಾವರಣವನ್ನು ಪ್ರವಾಸಿಗರು ನೇರವಾಗಿ ಅನುಭವಿಸಲು ಈ ಕೆಫೆಗಳು ಸಾಕ್ಷಿಯಾಗಲಿವೆ.
ಈ ವಿಶೇಷ ಕೆಫೆಗಳ ಜೊತೆಗೆ ಸುಮಾರು 20 ಕೊಠಡಿಗಳನ್ನು ಸಹ ನಿರ್ಮಿಸಲಾಗುತ್ತಿದೆ. ದೇಶದ ನಾನಾ ಭಾಗಗಳಿಂದ ಬರುವ ಕಲಾವಿದರು ಇಲ್ಲಿ ತಂಗಲು ವ್ಯವಸ್ಥೆ ಮಾಡಲಾಗುತ್ತದೆ. ಕಲಾವಿದರು ತಮ್ಮ ಹೊಸ ಯೋಜನೆಗಳ ಮೇಲೆ ಕೆಲಸ ಮಾಡಲು ಈ ಸ್ಥಳ ಅತ್ಯಂತ ಸೂಕ್ತ ವಾತಾವರಣ ಒದಗಿಸಲಿದೆ.
ಆರಂಭದಿಂದಲೂ ಹಿಮಾಚಲ ಪ್ರದೇಶದಲ್ಲಿ ಕೆಫೆ ತೆರೆಯುವುದು ವಿಕ್ರಾಂತ್ ಅವರ ಕನಸಾಗಿತ್ತು. ಅವರ ಪತ್ನಿ ಶೀತಲ್ ಠಾಕೂರ್ ಹಿಮಾಚಲ ಪ್ರದೇಶದ ಮೂಲದವರಾಗಿದ್ದಾರೆ. ಧರ್ಮಕೋಟ್ ಅಥವಾ ಧರ್ಮಶಾಲಾ ಸುತ್ತಮುತ್ತ ಕೆಫೆ ಆರಂಭಿಸುವ ಇಚ್ಛೆಯನ್ನು ಅವರು ಈ ಹಿಂದೆ ಹಂಚಿಕೊಂಡಿದ್ದರು.
ಇದನ್ನೂ ಓದಿ: ‘ನೆನಪಿಟ್ಟುಕೊಳ್ಳಿ, ಹಣ ಇದ್ರೆ ಮಾತ್ರ ನಿಮಗೆ ಗೌರವ’; ಯುವ ಜನತೆ ಎಚ್ಚರಿಸಿದ ವಿಕ್ರಾಂತ್ ಮಾಸ್ಸಿ
ನೆಟ್ಫ್ಲಿಕ್ಸ್ನಲ್ಲಿ ಬಂದ ‘ಮುಸಾಫಿರ್ ಕೆಫೆ’ ಸರಣಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೇ ಶೈಲಿಯ ಕೆಫೆಗಳು ಇದೀಗ ನೈಜ ರೂಪ ಪಡೆಯುತ್ತಿರುವುದು ಅಭಿಮಾನಿಗಳಿಗೆ ತೀವ್ರ ಸಂತಸ ತಂದಿದೆ. ಬಣ್ಣದ ಲೋಕದ ಜೊತೆಗೆ ನಟ ವಿಕ್ರಾಂತ್ ಮಾಸ್ಸಿ ಉದ್ಯಮದಲ್ಲೂ ಹೊಸ ಹೆಜ್ಜೆ ಇಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಏಷ್ಯನ್ ಗೇಮ್ಸ್ 2026 ರ ಮಹಿಳಾ ಕ್ರಿಕೆಟ್ ಕ್ವಾರ್ಟರ್ ಫೈನಲ್ನಲ್ಲಿ ಇಂದು ಭಾರತ ಹಾಗೂ ಜಪಾನ್ ಮಹಿಳಾ ತಂಡಗಳು ಎದುರಾಗಿದ್ದವು. ಐಸಿಸಿ ರ್ಯಾಂಕಿಂಗ್ನಲ್ಲಿ 39ನೇ ಸ್ಥಾನದಲ್ಲಿರುವ ಜಪಾನ್, ಮೂರನೇ ಸ್ಥಾನದಲ್ಲಿರುವ ಟೀಂ ಇಂಡಿಯಾಕ್ಕೆ ಸುಲಭ ತುತ್ತಾಗಲಿದೆ ಎಂಬುದು ಈ ಮೊದಲೇ ಗೊತ್ತಿತ್ತು. ಅದರಂತೆ ಏಕಪಕ್ಷೀಯವಾಗಿ ಜಪಾನ್ ತಂಡವನ್ನು ಮಣಿಸಿದ ಹರ್ಮನ್ಪ್ರೀತ್ ಕೌರ್ ಪಡೆ ಸೆಮಿಫೈನಲ್ಗೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಪಾನ್ ಕೇವಲ 57 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 8 ವಿಕೆಟ್ಗಳ ಜಯ ಸಾಧಿಸಿತು.
ಸ್ಪಿನ್ ದಾಳಿಗೆ ನಲುಗಿದ ಜಪಾನ್ಮೊದಲು ಬ್ಯಾಟಿಂಗ್ ಮಾಡಿದ ಜಪಾನ್ ತಂಡಕ್ಕೆ ಭಾರತದ ಸ್ಪಿನ್ನರ್ಗಳ ಮುಂದೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಅದರಲ್ಲೂ ಅದ್ಭುತ ಫಾರ್ಮ್ನಲ್ಲಿರುವ ಎಡಗೈ ಸ್ಪಿನ್ನರ್ ಶ್ರೀ ಚರಣಿ ಸ್ಪಿನ್ಗೆ ಜಪಾನ್ ತಂಡದ ಬಳಿ ಉತ್ತರವಿರಲಿಲ್ಲ. ಚರಣಿ ಕೇವಲ 10 ರನ್ ನೀಡಿ 4 ವಿಕೆಟ್ಗಳನ್ನು ಪಡೆದು ತಮ್ಮ ಟಿ20 ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದರು. ಇತ್ತ ಜಪಾನ್ ತಂಡದ ಇಡೀ ಇನ್ನಿಂಗ್ಸ್ನಲ್ಲಿ ಕೇವಲ ಮೂರು ಬೌಂಡರಿಗಳು ಮಾತ್ರ ದಾಖಲಾಗಿದ್ದು, ಭಾರತದ ಭಿಗಿ ಬೌಲಿಂಗ್ಗೆ ಹಿಡಿದ ಕೈಗನ್ನಡಿಯಾಗಿತ್ತು.
ಜಪಾನ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳದಿದ್ದರೂ, ಇತ್ತ ಸರಾಗವಾಗಿ ರನ್ ಕೂಡ ಕಲೆಹಾಕಲಿಲ್ಲ. ಮೊದಲ ವಿಕೆಟ್ಗೆ 24 ರನ್ ಕಲೆಹಾಕಿತು. ಈ 24 ರನ್ ಬಾರಿಸಲು ಮೊದಲ ಆರು ಓವರ್ಗಳನ್ನು ವ್ಯಯಿಸಲಾಯಿತು. ನಂತರ ಏಳನೇ ಓವರ್ನಲ್ಲಿ ದಾಳಿಗಿಳಿದ ಶ್ರೀ ಚರಣಿ ಸತತ ಎಸೆತಗಳಲ್ಲಿ ಆರಂಭಿಕ ಆಟಗಾರ್ತಿ ಹರುಣ ಇವಾಸಕಿ ಮತ್ತು ನಾಯಕಿ ಮೈ ಯಾನಗಿಡಾ ಅವರನ್ನು ಔಟ್ ಮಾಡಿದರು. ಇನ್ನೊಂದು ತುದಿಯಿಂದ ಅರೆಕಾಲಿಕ ಆಫ್-ಸ್ಪಿನ್ನರ್ ಶಫಾಲಿ ವರ್ಮಾ ಕೂಡ ಬಿಗಿಯಾದ ಬೌಲಿಂಗ್ ಮಾಡಿ 13 ರನ್ಗಳಿಗೆ 2 ವಿಕೆಟ್ಗಳನ್ನು ಪಡೆದರು.
ಏಷ್ಯನ್ ಗೇಮ್ಸ್ಗೆ ಟೀಂ ಇಂಡಿಯಾದಲ್ಲಿ 1 ಬದಲಾವಣೆ
ಶಫಾಲಿ ಬಿರುಗಾಳಿಯ ಇನ್ನಿಂಗ್ಸ್ಈ ಗುರಿಗೆ ಪ್ರತಿಯಾಗಿ, ಶಫಾಲಿ ವರ್ಮಾ ಭಾರತಕ್ಕೆ ತ್ವರಿತ ಆರಂಭ ನೀಡಿದರು. ಆದಾಗ್ಯೂ, ಇನ್ನೊಂದು ತುದಿಯಲ್ಲಿ ಎರಡು ವಿಕೆಟ್ಗಳು ಬೇಗನೆ ಬಿದ್ದವು. ನಂತರ ಶಫಾಲಿ ವರ್ಮಾ, ರಿಚಾ ಘೋಷ್ ಅವರೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಇನ್ನಿಂಗ್ಸ್ನಲ್ಲಿ, ಶೆಫಾಲಿ ವರ್ಮಾ 15 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ಗಳನ್ನು ಒಳಗೊಂಡಂತೆ 40 ರನ್ ಬಾರಿಸಿ ಅಜೇಯರಾಗಿ ಉಳಿದರೆ, ರಿಚಾ ಘೋಷ್ 6 ಎಸೆತಗಳಲ್ಲಿ ಅಜೇಯ 12 ರನ್ಗಳ ಇನ್ನಿಂಗ್ಸ್ ಆಡಿದರು. ಪರಿಣಾಮವಾಗಿ, ಭಾರತ 5 ಓವರ್ಗಳಲ್ಲಿ (30 ಎಸೆತಗಳು) 2 ವಿಕೆಟ್ಗಳ ನಷ್ಟಕ್ಕೆ ಈ ಗುರಿ ತಲುಪಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿಮಂಡ್ಯ, (ಸೆಪ್ಟೆಂಬರ್ 18): ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರು ಫ್ಲೈಓವರ್ ಮೇಲಿಂದ ಕೆಳಕ್ಕೆ ಬಿದ್ದಿದೆ. ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಮಂಡ್ಯ ಸಮೀಪದ ಉಮ್ಮಡಹಳ್ಳಿ ಗೇಟ್ ಬಳಿ ಇರುವ ಫ್ಲೈಓವರ್ ಮೇಲೆ ಕಾರು ವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಫ್ಲೈಓವರ್ನಿಂದ ಕೆಳಗೆ ಬಿದ್ದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಂಜನಾ(32) ಸಾವಪ್ಪಿದ್ದಾರೆ. ಫ್ಲೈಓವರ್ನಿಂದ ಕಾರು ಕೆಳಗೆ ಬಿದ್ದಾಗ ಅಂಜನಾ ತಲೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮಂಡ್ಯ ಸೆಂಟ್ರಲ್ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು ಕೇಂದ್ರ ಕಾರಾಗೃಹ ಅಂದರೆ ಪರಪ್ಪನ ಅಗ್ರಹಾರದಲ್ಲಿ ಸರ್ಕಾರಕ್ಕೆ ಆದಾಯ ತರಲು ಹಾಗೂ ಖೈದಿಗಳು ಬಿಡುಗಡೆಯಾದ ನಂತರ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ 'ನವ ಸಂಕಲ್ಪ ಬೇಕರಿ' ಎಂಬ ನೂತನ ಬೇಕರಿ ಘಟಕವನ್ನು ಆರಂಭಿಸಲಾಗಿದೆ.
ಬಂದಿಖಾನೆ ಮತ್ತು ಸುಧಾರಣಾ ಸೇವೆಗಳ ಪೊಲೀಸ್ ಮಹಾನಿರ್ದೇಶಕ (DGP) ಅಲೋಕ್ ಕುಮಾರ್ ನಿನ್ನೆ ಸೆಪ್ಟೆಂಬರ್ 17ರಂದು ಈ ಬೇಕರಿ ಘಟಕವನ್ನು ಉದ್ಘಾಟಿಸಿದರು. HCL ಫೌಂಡೇಶನ್ ಸಹಯೋಗದೊಂದಿಗೆ ‘ನವ ಸಂಕಲ್ಪ ಬೇಕರಿ ಆನ್ ವೀಲ್ಸ್’ (ಸಂಚಾರಿ ಬೇಕರಿ) ಸೇವೆಯನ್ನು ಸಹ ಪರಪ್ಪನ ಅಗ್ರಹಾರದ ಗರಿಷ್ಠ ಭದ್ರತಾ ಕಾರಾಗೃಹದಲ್ಲಿ ಆರಂಭಿಸಲಾಗಿದೆ.
ಪ್ರಿಯಾಂಕ್ ಖರ್ಗೆ ಪರಪ್ಪನ ಅಗ್ರಹಾರ ಜೈಲು ಸೇರುವ ಕಾಲ ಹತ್ತಿರ ಬಂದಿದೆ: ಪ್ರತಾಪ್ ಸಿಂಹ ತಿರುಗೇಟುಈ ಸಂಚಾರಿ ಬೇಕರಿ ಮೂಲಕ ಉತ್ತಮ ಗುಣಮಟ್ಟದ ಬೇಕರಿ ಉತ್ಪನ್ನಗಳನ್ನು ಬೆಂಗಳೂರಿನ ವಿವಿಧ ನ್ಯಾಯಾಲಯಗಳ ಆವರಣ ಮತ್ತು ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ಸೂಚಿಸಲಾಗಿದೆ.
ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ತರಬೇತಿ ಪೂರ್ಣಗೊಳಿಸಿದ ಶಿಕ್ಷೆಗೊಳಗಾದ ಖೈದಿಗಳಿಗೆ ತರಬೇತಿ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು. ಡಿಜಿಪಿ ಅಲೋಕ್ ಕುಮಾರ್ ಅವರು ಬೇಕರಿ ಉತ್ಪನ್ನಗಳನ್ನು ಪರಿಶೀಲಿಸಿ, ಅವುಗಳ ರುಚಿ ಮತ್ತು ಗುಣಮಟ್ಟವನ್ನು ಮೆಚ್ಚಿದರು. ಖೈದಿಗಳೊಂದಿಗೆ ಸಂವಾದ ನಡೆಸಿ ಉತ್ಪನ್ನಗಳ ತಯಾರಿಕೆಯಲ್ಲಿ ನೈರ್ಮಲ್ಯ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ಈ ಯೋಜನೆಯು ದೇಶದ ಜೈಲಿನಲ್ಲಿ ಸ್ಥಾಪಿಸಲಾದ ಆಧುನಿಕ ಬೇಕರಿ ಘಟಕಗಳಲ್ಲಿ ಒಂದಾಗಿದ್ದು, ಖೈದಿಗಳಲ್ಲಿ ಕೌಶಲ್ಯ ಬೆಳಸುವ ಜೊತೆಗೆ ಅವರ ಭವಿಷ್ಯಕ್ಕೆ ಹೊಸ ಭರವಸೆ ನೀಡುವ ಉದ್ದೇಶ ಹೊಂದಿದೆ.
ಡಾರ್ಜಿಲಿಂಗ್: ಸುಂದರ ಕ್ಷಣಗಳನ್ನು ಕಳೆಯಲು ಡಾರ್ಜಿಲಿಂಗ್ನ ಸಿತಾಂಗ್ಗೆ ಹನಿಮೂನ್ಗೆ ತೆರಳಿದ್ದ ನವವಿವಾಹಿತ ದಂಪತಿಗಳ ಬದುಕು ಕ್ಷಣಾರ್ಧದಲ್ಲಿ ನರಕ ಸದೃಶವಾಗಿದೆ.
ಅಲ್ಲಿನ ಖಾಸಗಿ ಹೋಮ್ಸ್ಟೇಯೊಂದರಲ್ಲಿ ನಡೆದ ಭೀಕರ ಬೆಂಕಿ ಅವಘಡದಲ್ಲಿ ನವವಿವಾಹಿತೆ ನಿಕಿತಾ ಸಹಾ ತೀವ್ರವಾಗಿ ಗಾಯಗೊಂಡಿದ್ದು, ಶೇಕಡಾ 60 ರಷ್ಟು ಸುಟ್ಟ ಗಾಯಗಳೊಂದಿಗೆ ಸಿಲಿಗುರಿ ಆಸ್ಪತ್ರೆಯ ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಹೊಸದಾಗಿ ವಿವಾಹವಾಗಿದ್ದ ಸೌವಿಕ್ ದಾಸ್ ಮತ್ತು ನಿಖಿತಾ ಸಹಾ ದಂಪತಿ ಸೆಪ್ಟೆಂಬರ್ 13, 2026ರಂದು ಕೂರ್ಸಿಯಾಂಗ್ನ ಸಿಟ್ಟಾಂಗ್ ಔರಾ ಹೋಂಸ್ಟೇಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಹೋಮ್ಸ್ಟೇಯ ಹೊರಾಂಗಣದಲ್ಲಿ ಬಾರ್ಬೆಕ್ಯೂ ವ್ಯವಸ್ಥೆಯ ಬಳಿ ದಂಪತಿಗಳು ಕುಳಿತಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಉರಿಯುತ್ತಿದ್ದ ಬೆಂಕಿಗೆ ನೇರವಾಗಿ ಲೈಟರ್ ಫ್ಲೂಯಿಡ್ ಸುರಿದಿದ್ದಾನೆ.
ಇದರ ಪರಿಣಾಮವಾಗಿ ಕ್ಷಣಾರ್ಧದಲ್ಲಿ ಭಾರಿ ಬೆಂಕಿಯ ಜ್ವಾಲೆಯು (Fireball) ನಿಕಿತಾ ಅವರ ಮೇಲೆ ಚಿಮ್ಮಿ, ಅವರನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ.
ಮದುವೆಯಾದ ಎರಡು ದಿನಕ್ಕೇ ಕುಟುಂಬಸ್ಥರಿಂದಲೇ ನವವಿವಾಹಿತೆ ಕಿಡ್ನಾಪ್; Video ವೈರಲ್ಈ ಅವಘಡದಲ್ಲಿ ನಿಖಿತಾ ಅವರಿಗೆ ಸುಮಾರು ಶೇ.60ರಷ್ಟು ಸುಟ್ಟ ಗಾಯಗಳಾಗಿದ್ದು, ಅವರನ್ನು ತುರ್ತು ಚಿಕಿತ್ಸೆಗಾಗಿ ಸಿಲಿಗುರಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ನಡುವೆ ಘಟನೆ ವೇಳೆ ಪತ್ನಿಯನ್ನು ರಕ್ಷಿಸಲು ಮುಂದಾದ ಸೌವಿಕ್ ಅವರ ಕೈಗೂ ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಇಡೀ ಭೀಕರ ದೃಶ್ಯವು ಹೋಮ್ಸ್ಟೇಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಬೆನ್ನಲ್ಲೇ ಸೌವಿಕ್ ಅವರು ಹೋಂಸ್ಟೇ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಹೋಂಸ್ಟೇಯಲ್ಲಿ ಅಗ್ನಿಶಾಮಕ ಸಾಧನಗಳು ಇರಲಿಲ್ಲ ಹಾಗೂ ಅವಘಡದ ಬಳಿಕ ನೆರವು ನೀಡಲು ವಿಳಂಬ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರು ಬೆನ್ನಲ್ಲೇ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಹೋಂಸ್ಟೇಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೆ, ಹೋಂಸ್ಟೇ ಮ್ಯಾನೇಜರ್, ಅಲ್ಲಿನ ಸಿಬ್ಬಂದಿ ತಮ್ಮಿಂದ ಸಾಧ್ಯವಾದಷ್ಟು ತಕ್ಷಣವೇ ನೆರವು ನೀಡಲು ಪ್ರಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆಪಲ್ನ (Apple) ಹೊಸ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಸ್ಮಾರ್ಟ್ಫೋನ್ಗಳು ಇಂದಿನಿಂದ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಿವೆ. ಸೆಪ್ಟೆಂಬರ್ 9ರಂದು ಬಿಡುಗಡೆಯಾದ ಈ ಫೋನ್ಗಳ ಮುಂಗಡ ಬುಕ್ಕಿಂಗ್ ಸೆಪ್ಟೆಂಬರ್ 12ರಂದು ಆರಂಭವಾಗಿತ್ತು. ಇದೀಗ ಗ್ರಾಹಕರು ಆಪಲ್ ಮಳಿಗೆಗಳು, ವಿವಿಧ ಆನ್ಲೈನ್ ತಾಣಗಳು ಹಾಗೂ ಎಲೆಕ್ಟ್ರಾನಿಕ್ಸ್ ಮಳಿಗೆಗಳಿಂದ ಫೋನ್ ಖರೀದಿಸಬಹುದು. ಬ್ಲಿಂಕಿಟ್ ಮತ್ತು ಜೆಪ್ಟೊದಂತಹ ತ್ವರಿತ ವಿತರಣಾ ಸೇವೆಗಳ ಮೂಲಕವೂ ಐಫೋನ್ 18 ಪ್ರೊ ಸರಣಿಯನ್ನು ಖರೀದಿಸುವ ಅವಕಾಶವಿದೆ.
ಐಫೋನ್ 18 ಪ್ರೊ ಬೆಲೆ ಎಷ್ಟು?ಭಾರತದಲ್ಲಿ ಐಫೋನ್ 18 ಪ್ರೊ 256 ಜಿಬಿ ಸಂಗ್ರಹ ಸಾಮರ್ಥ್ಯದ ಮಾದರಿಗೆ ರೂ. 1,64,900 ಆರಂಭಿಕ ಬೆಲೆ ನಿಗದಿಪಡಿಸಲಾಗಿದೆ. 512 ಜಿಬಿ ಮಾದರಿಗೆ ರೂ. 1,89,900, 1 ಟಿಬಿ ಮಾದರಿಗೆ ರೂ. 2,39,900 ಹಾಗೂ 2 ಟಿಬಿ ಮಾದರಿಗೆ ರೂ. 3,14,900 ಬೆಲೆ ಇದೆ.
ಇನ್ನು ಐಫೋನ್ 18 ಪ್ರೊ ಮ್ಯಾಕ್ಸ್ 256 ಜಿಬಿ ಮಾದರಿಗೆ ರೂ. 1,79,900 ಆರಂಭಿಕ ಬೆಲೆ ಇದೆ. 512 ಜಿಬಿ ಮಾದರಿಗೆ ರೂ. 2,04,900, 1 ಟಿಬಿ ಮಾದರಿಗೆ ರೂ. 2,54,900 ಹಾಗೂ 2 ಟಿಬಿ ಮಾದರಿಗೆ ರೂ. 3,29,900 ಬೆಲೆ ನಿಗದಿಯಾಗಿದೆ.
ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಆಫರ್:ಐಫೋನ್ 18 ಪ್ರೊ ಸರಣಿ ಖರೀದಿಸುವವರಿಗೆ ವಿವಿಧ ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ಗಳ ಮೂಲಕ ರೂ. 7,000ವರೆಗೆ ಹಣ ವಾಪಸ್ ಪಡೆಯುವ ಅವಕಾಶವಿದೆ. ಅಮೆರಿಕನ್ ಎಕ್ಸ್ಪ್ರೆಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಎಸ್ಬಿಐ ಕಾರ್ಡ್ಗಳ ಮೇಲೆ ಈ ಕೊಡುಗೆ ಲಭ್ಯವಿದೆ.
ಇದರ ಜತೆಗೆ ಅರ್ಹ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮೂಲಕ ಆರು ತಿಂಗಳವರೆಗೆ ಬಡ್ಡಿ ರಹಿತ ಕಂತಿನ ಸೌಲಭ್ಯವನ್ನೂ ಪಡೆಯಬಹುದು. ಹಳೆಯ ಫೋನ್ ಬದಲಾಯಿಸಿ ಹೊಸ ಐಫೋನ್ ಖರೀದಿಸುವವರಿಗೆ ಆಪಲ್ನ ಬದಲಾವಣೆ ಯೋಜನೆಯಡಿ ಸಾಧನದ ಸ್ಥಿತಿ ಮತ್ತು ಮಾದರಿಯನ್ನು ಆಧರಿಸಿ ರೂ. 81,500ವರೆಗೆ ಮೌಲ್ಯ ಸಿಗಬಹುದು.
ಐಫೋನ್ 18 ಪ್ರೋ, ಮ್ಯಾಕ್ಸ್ ಫೋನ್ಗಳು ಇಂದು ಬಿಡುಗಡೆ; ದೇಶಾದ್ಯಂತ ಆ್ಯಪಲ್ ಸ್ಟೋರ್ಗಳಲ್ಲಿ ಫೋನ್ಪ್ರಿಯರ ದಂಡು
ಎಲ್ಲೆಲ್ಲಿ ಖರೀದಿಸಬಹುದು?ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಅನ್ನು ಆಪಲ್ನ ಅಧಿಕೃತ ಮಳಿಗೆಗಳ ಜತೆಗೆ ಅಮೆಜಾನ್, ಫ್ಲಿಪ್ಕಾರ್ಟ್ ಮತ್ತು ಇತರ ಆನ್ಲೈನ್ ಮಾರಾಟ ತಾಣಗಳಲ್ಲೂ ಖರೀದಿಸಬಹುದು. ಬ್ಲಿಂಕಿಟ್, ಜೆಪ್ಟೊ ಸೇರಿದಂತೆ ತ್ವರಿತ ವಿತರಣಾ ಸೇವೆಗಳಲ್ಲೂ ಫೋನ್ ಲಭ್ಯವಿದೆ. ಆಫ್ಲೈನ್ನಲ್ಲಿ ಆಪಲ್ನ ಅಧಿಕೃತ ಮಾರಾಟಗಾರರು ಹಾಗೂ ಕ್ರೋಮಾ, ವಿಜಯ್ ಸೇಲ್ಸ್ನಂತಹ ಪ್ರಮುಖ ಎಲೆಕ್ಟ್ರಾನಿಕ್ಸ್ ಮಳಿಗೆಗಳಲ್ಲಿ ಖರೀದಿಸಬಹುದು.
ಒಟ್ಟಿನಲ್ಲಿ, ಐಫೋನ್ 18 ಪ್ರೊ ಸರಣಿಯ ಮಾರಾಟ ಭಾರತದಲ್ಲಿ ಆರಂಭವಾಗಿದ್ದು, ಸಾಮಾನ್ಯ ಮಳಿಗೆಗಳ ಜತೆಗೆ ತ್ವರಿತ ವಿತರಣಾ ಸೇವೆಗಳಲ್ಲೂ ಖರೀದಿಗೆ ಲಭ್ಯವಾಗಿರುವುದು ಈ ಬಾರಿಯ ವಿಶೇಷತೆ. ವಿವಿಧ ಬ್ಯಾಂಕ್ಗಳ ಕೊಡುಗೆ, ಕಂತಿನ ಸೌಲಭ್ಯ ಮತ್ತು ಹಳೆಯ ಫೋನ್ ಬದಲಾವಣೆ ಯೋಜನೆಯನ್ನೂ ಗ್ರಾಹಕರು ಬಳಸಿಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಸೆಪ್ಟೆಂಬರ್ 18: ರಾಜ್ಯದಲ್ಲಿ ಹಾಲಿನ ದರ ಮತ್ತೆ ಏರಿಕೆಯಾಗುವ ಸಾಧ್ಯತೆಗಳಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆ ಬೀಳುವ ಆತಂಕ ಎದುರಾಗಿದೆ. ಹಾಲು ಉತ್ಪಾದಕರು ಪ್ರತಿ ಲೀಟರ್ಗೆ 8 ರೂ. ದರ ಹೆಚ್ಚಳ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈಗಾಗಲೇ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಳಲುತ್ತಿರುವ ಗ್ರಾಹಕರಿಗೆ ಹಾಲಿನ ದರ ಏರಿಕೆಯು ನೇರವಾಗಿ ಪರಿಣಾಮ ಬೀರಲಿದೆ. ಹಾಲು ಉತ್ಪಾದಕರಾದ ಬಮುಲ್, ಚಮುಲ್, ಮಂಡ್ಯ ಮಿಲ್ಕ್ ಹಾಗೂ ತುಮಕೂರು ಸೇರಿದಂತೆ ವಿವಿಧ ಹಾಲು ಒಕ್ಕೂಟಗಳು ದರ ಏರಿಕೆಗೆ ಆಗ್ರಹಿಸಿವೆ.
ದರ ಏರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ಹಾಲು ಉತ್ಪಾದಕರು ಸಿದ್ಧತೆ ನಡೆಸಿದ್ದಾರೆ. ಸೆಪ್ಟೆಂಬರ್ 22ರಂದು ರಾಜ್ಯಾದ್ಯಂತ ರೈತರು ಒಗ್ಗಟ್ಟಾಗಿ ಒತ್ತಡ ಹೇರಲು ಕರೆ ನೀಡಲಾಗಿದೆ. ಮೂರು ದಿನಗಳ ಒಳಗೆ ಬೆಲೆ ಏರಿಕೆ ಮಾಡಿಲ್ಲ ಅಂದರೆ ಪ್ರತಿ ಜಿಲ್ಲೆಯಿಂದ ‘ವಿಧಾನ ಸೌಧ ಚಲೋ’ ಮಾಡ್ತೀವಿ ಎಂದು ಸರ್ಕಾರಕ್ಕೆ ಹಾಲು ಒಕ್ಕೂಟಗಳು ಗಡುವು ವಿಧಿಸಿರುವುದಾಗಿ ಕೆಎಂಎಫ್ ಮಾಜಿ ನಿರ್ದೇಶಕ ವೀರಭದ್ರಬಾಬು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ತೀವ್ರ ಬರಗಾಲ, ಶೇ 70 ರಷ್ಟು ಮಳೆ ಕೊರತೆ, ಹೀಗಾಗಿ ಹುಲ್ಲಿನ ಕೊರತೆ ಕೊರತೆ, ಪಶುಆಹಾರದ ಕಚ್ಚಾ ಸಾಮಾಗ್ರಿ ಮೆಕ್ಕೆ ಜೋಳ, ಇಂಡಿ ಬೂಸಾ, ಕಾಕಂಬಿ ದರ ಶೇ25 ರಷ್ಟು ಏರಿಕೆ, ರಾಸುಗಳಿಗೆ ಬಳಸುವ ನೆಲಹಾಸು ದರ ಏರಿಕೆ, ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಕಚ್ಚಾತೈಲ ಪೆಟ್ರೋಲ್ ಡಿಸೇಲ್ ದರ ವೂ ಏರಿಕೆಯಾಗಿದೆ. ಈ ಕಾರಣಗಳಿಂದ ಹಾಲಿನ ದರ ಹೆಚ್ಚಿಸಬೇಕು ಎಂಬುದು ಉತ್ಪಾದಕರ ಆಗ್ರಹವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು: ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಪದ್ಮಭೂಷಣ ಅನಂತ್ ನಾಗ್ ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ಈ ವಿಷಯ ಹಂಚಿಕೊಂಡಿರುವ 78 ವರ್ಷದ ಹಿರಿಯ ನಟ, ತಮ್ಮ ನಿವೃತ್ತಿಯ ನಿರ್ಧಾರಕ್ಕೂ ತಮ್ಮ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾದ್ರೆ, ದಶಕಗಳ ಕಾಲ ತಮ್ಮ ನೈಜ ಅಭಿನಯದ ಮೂಲಕ ಜನಮನ ಗೆದ್ದಿದ್ದ ಈ ಅದ್ಭುತ ಪ್ರತಿಭೆ, ಇದ್ದಕ್ಕಿದ್ದಂತೆ ನಟನೆಯಿಂದ ದೂರವಾಗಲು ಕಾರಣವೇನು? ಆ ಕುರಿತ ವರದಿ ಇಲ್ಲಿದೆ:
ಅನಂತ್ ನಾಗ್ ಚಿತ್ರರಂಗದಿಂದ ದೂರವಾಗಿದ್ಯಾಕೆ?
ಕಳದೆ ಮೂರು ನಾಲ್ಕು ವರ್ಷಗಳಿಂದ ಅನಂತ್ ನಾಗ್ ಅವರು ಚಿತ್ರರಂಗದಿಂದ ದೂರ ಇರುವುದನ್ನು ನೋಡಿ ಅನೇಕರು ಅವರಿಗೆ ಆರೋಗ್ಯ ಸಮಸ್ಯೆ ಇರಬಹುದು ಎಂದುಕೊಂಡಿದ್ದರು. ಆದರೆ ಇದನ್ನು ಸ್ಪಷ್ಟವಾಗಿ ನಿರಾಕರಿಸಿರುವ ಅವರು, "ನನ್ನ ನಿರ್ಧಾರಕ್ಕೂ ನನ್ನ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ, ನಾನು ಆರೋಗ್ಯವಾಗಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಇಂದಿನ ಸಿನಿಮಾಗಳು ಕೇವಲ ಕೋಟಿಗಟ್ಟಲೆ ಬಾಕ್ಸ್ ಆಫೀಸ್ ಕಲೆಕ್ಷನ್, ಕೋಟಿಗಳ ಲೆಕ್ಕಾಚಾರ ಮತ್ತು ಬಜೆಟ್ ಮೇಲಷ್ಟೇ ಗಮನ ಹರಿಸುತ್ತಿವೆಯೇ ಹೊರತು ಕಥೆಯ ಆಳಕ್ಕಲ್ಲ ಎಂದು ಬೇಸರ ವ್ಯಕ್ತಪಡಿಸಿ, "ಒಂದು ಕಾಲದಲ್ಲಿ ಸಿನಿಮಾಗಳು ಜ್ಞಾನ, ಶಿಕ್ಷಣ ಮತ್ತು ಮನರಂಜನೆಯ ಸಮತೋಲನವಾಗಿದ್ದವು, ಆದರೆ ಈಗ ಆ ಮೌಲ್ಯಗಳು ಕಣ್ಮರೆಯಾಗಿದ್ದು, ಈ ರೀತಿಯ ಕೇವಲ ಹಣದ ಬೆನ್ನಟ್ಟುವ ವಾತಾವರಣ ತಮಗೆ ಇಷ್ಟವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಮುಂದುವರೆದು, 2021 ಮತ್ತು 2022 ರ ಅವಧಿಯಲ್ಲಿ ಅನಂತ್ ನಾಗ್ ನಟಿಸಿದ ಐದೂ ಸಿನಿಮಾಗಳು ವಾಣಿಜ್ಯಿಕವಾಗಿ ಸೋತವು. ಆ ಸಮಯದಲ್ಲಿ ಅವರು, "ಇಷ್ಟೇ ಸಾಕು, ಇನ್ಮುಂದೆ ನಾನು ನಟಿಸುವುದಿಲ್ಲ" ಎಂದು ತಾವಾಗಿಯೇ ಚಿತ್ರರಂಗದಿಂದ ದೂರ ಸರಿದರು ಎನ್ನಲಾಗಿದೆ. ಸದ್ಯ ಕಳೆದ 3 ವರ್ಷಗಳಿಂದ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ.
'ಪ್ರಶಸ್ತಿಯನ್ನು ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಅರ್ಪಿಸುತ್ತೇನೆ': ಹಿರಿಯ ನಟ ಅನಂತ್ ನಾಗ್ಏತನ್ಮಧ್ಯೆ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಅನಂತ್ ನಾಗ್ ಅವರು 'ಅಂಕುರ್' ನಂತಹ ಕಲಾತ್ಮಕ ಸಿನಿಮಾಗಳಿಂದ ಹಿಡಿದು 'ಕೆಜಿಎಫ್: ಚಾಪ್ಟರ್ 1' ನಂತಹ ಬ್ಲಾಕ್ಬಸ್ಟರ್ ವಾಣಿಜ್ಯ ಸಿನಿಮಾಗಳವರೆಗೆ ತಮ್ಮ ಅದ್ಭುತ ನಟನೆಯಿಂದ ಮನೆಮಾತಾಗಿದ್ದಾರೆ. ಜೊತೆಗೆ, ಅವರ 50 ವರ್ಷಗಳ ಸುದೀರ್ಘ ಸಿನಿ ಪಯಣವನ್ನು ಗೌರವಿಸಿ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಅವರಿಗೆ ದೇಶದ ಅತ್ಯುನ್ನತ ಚಲನಚಿತ್ರ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಿದ್ದು, ಇದನ್ನು ಗುಜರಾತ್ನ ಕೆವಾಡಿಯಾದಲ್ಲಿ ನಡೆಯಲಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ಸಜ್ಜನ-ಸರಳ ವ್ಯಕ್ತಿತ್ವದ ಅನಂತ್ ನಾಗ್ ಮೇಲೆ ಕೊಲೆ ಯತ್ನ: ಮಗಳನ್ನ ಶಾಲೆಗೆ ಕರೆದೊಯ್ಯುತ್ತಿದ್ದಾಗಲೇ ದಾಳಿ; ಅಂದು ನಡೆದ ಘಟನೆಗೆ ಬೆಚ್ಚಿ ಬಿದ್ದ ಕುಟುಂಬ!ಕೇಂದ್ರ ಲೋಕಸೇವಾ ಆಯೋಗವು (UPSC) 2027ರ ಸಂಯೋಜಿತ ಭೂ-ವಿಜ್ಞಾನಿ (Combined Geo-Scientist) ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿಯ ಮೂಲಕ ಗಣಿ ಸಚಿವಾಲಯದ ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ಹಾಗೂ ಜಲಶಕ್ತಿ ಸಚಿವಾಲಯದ ಕೇಂದ್ರೀಯ ಅಂತರ್ಜಲ ಮಂಡಳಿ (CGWB) ಯಲ್ಲಿ ಖಾಲಿಯಿರುವ ಒಟ್ಟು 127 ಗ್ರೂಪ್ A ಮತ್ತು ಗ್ರೂಪ್ B ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 22 ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ವಿಭಾಗದ ಹುದ್ದೆಗಳು:ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI – ವರ್ಗ I) ಅಡಿಯಲ್ಲಿ ಒಟ್ಟು 111 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಗ್ರೂಪ್-ಎ ವಿಭಾಗದಲ್ಲಿ 29 ಭೂವಿಜ್ಞಾನಿ (Geologist) ಹಾಗೂ 07 ಕೆಮಿಸ್ಟ್ (Chemist) ಹುದ್ದೆಗಳಿವೆ. ಇವುಗಳ ಜೊತೆಗೆ ಗ್ರೂಪ್-ಬಿ ವಿಭಾಗದಲ್ಲಿ 34 ಸಹಾಯಕ ಭೂವಿಜ್ಞಾನಿ (Assistant Geologist), 35 ಸಹಾಯಕ ಭೂಭೌತಶಾಸ್ತ್ರಜ್ಞ (Assistant Geophysicist) ಹಾಗೂ 06 ಸಹಾಯಕ ರಸಾಯನಶಾಸ್ತ್ರಜ್ಞ (Assistant Chemist) ಹುದ್ದೆಗಳು ಸೇರಿವೆ.
ಕೇಂದ್ರೀಯ ಅಂತರ್ಜಲ ಮಂಡಳಿ (CGWB) ವಿಭಾಗದ ಹುದ್ದೆಗಳು:ಕೇಂದ್ರೀಯ ಅಂತರ್ಜಲ ಮಂಡಳಿ (CGWB – ವರ್ಗ II) ಅಡಿಯಲ್ಲಿ ಒಟ್ಟು 16 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಗ್ರೂಪ್-ಎ ವಿಭಾಗದಡಿಯಲ್ಲಿ 05 ವಿಜ್ಞಾನಿ-ಬಿ/ಜಲಭೂವಿಜ್ಞಾನ (Scientist-B / Hydrogeology), 01 ವಿಜ್ಞಾನಿ-ಬಿ/ರಾಸಾಯನಿಕ (Scientist-B / Chemical) ಮತ್ತು 01 ವಿಜ್ಞಾನಿ-ಬಿ/ಜಿಯೋಫಿಸಿಕ್ಸ್ (Scientist-B / Geophysics) ಹುದ್ದೆಗಳಿವೆ. ಗ್ರೂಪ್-ಬಿ ವಿಭಾಗದಲ್ಲಿ 07 ಸಹಾಯಕ ಜಲವಿಜ್ಞಾನಿ (Assistant Hydrogeologist), 01 ಸಹಾಯಕ ರಸಾಯನಶಾಸ್ತ್ರಜ್ಞ ಹಾಗೂ 01 ಸಹಾಯಕ ಭೂಭೌತಶಾಸ್ತ್ರಜ್ಞ ಹುದ್ದೆಗಳು ಖಾಲಿಯಿವೆ.
ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ವಿವರ:ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಭೂವಿಜ್ಞಾನ, ಅನ್ವಯಿಕ ಭೂವಿಜ್ಞಾನ, ಭೂಭೌತಶಾಸ್ತ್ರ, ಅನ್ವಯಿಕ ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ಜಲಭೂವಿಜ್ಞಾನ ಮುಂತಾದ ಸಂಬಂಧಿತ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ (M.Sc) ಅಥವಾ ಸಂಯೋಜಿತ ಎಂ.ಎಸ್ಸಿ (Integrated M.Sc) ಪೂರ್ಣಗೊಳಿಸಿರಬೇಕು. ಅರ್ಜಿದಾರರ ವಯಸ್ಸು ಜನವರಿ 1, 2027 ಕ್ಕೆ ಅನ್ವಯಿಸುವಂತೆ 21 ರಿಂದ 32 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಾವಳಿಗಳ ಪ್ರಕಾರ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಇದನ್ನೂ ಓದಿ: ಕಾಲೇಜಿನಲ್ಲಿ ರಾತ್ರಿ ಕಾವಲುಗಾರನ ಕೆಲಸ ಮಾಡುತ್ತಲೇ ಓದಿ ಸತತ 3 ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಸಾಧಕ!
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ:ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಪುರುಷ ಅಭ್ಯರ್ಥಿಗಳಿಗೆ ರೂ. 200 ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಮಹಿಳೆಯರು, ಎಸ್ಸಿ, ಎಸ್ಟಿ ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ. ಆಯ್ಕೆ ಪ್ರಕ್ರಿಯೆಯು 3 ಹಂತಗಳಲ್ಲಿ ನಡೆಯಲಿದೆ: ಮೊದಲಿಗೆ 400 ಅಂಕಗಳ ವಸ್ತುನಿಷ್ಟ ಮಾದರಿಯ ಪೂರ್ವಭಾವಿ ಪರೀಕ್ಷೆ (Prelims) ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/3 ರಷ್ಟು ಋಣಾತ್ಮಕ ಅಂಕ ಕಡಿತಗೊಳಿಸಲಾಗುತ್ತದೆ. ನಂತರ 600 ಅಂಕಗಳ ಲಿಖಿತ ಮುಖ್ಯ ಪರೀಕ್ಷೆ (Mains) ಹಾಗೂ 200 ಅಂಕಗಳ ವ್ಯಕ್ತಿತ್ವ ಪರೀಕ್ಷೆ (Interview) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 22 ಕೊನೆಯ ದಿನಾಂಕವಾಗಿದೆ. ಪೂರ್ವಭಾವಿ ಪರೀಕ್ಷೆಯು (Prelims) ಜನವರಿ 10, 2027 ರಂದು ಹಾಗೂ ಮುಖ್ಯ ಪರೀಕ್ಷೆಯು (Mains) 2027ರ ಜೂನ್ 19 ಮತ್ತು 20 ರಂದು ನಡೆಯಲಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಸೆಪ್ಟೆಂಬರ್ 18: ಬೈಕ್ಗೆ ಡಿಕ್ಕಿ ಹೊಡೆದ ಬಳಿಕವೂ ಕಾರು ನಿಲ್ಲಿಸದೆ ಬೈಕ್ ಸಮೇತ ಸವಾರನನ್ನು ಕಾರಿನಲ್ಲಿ ಎಳೆದೊಯ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ನೀಲಿ ಬಣ್ಣದ ಹೋಂಡಾ ಅಮೇಜ್ ಸೆಡಾನ್ ಕಾರು ರಸ್ತೆಯಲ್ಲಿ ಕಿಡಿಗಳನ್ನು ಹೊತ್ತಿಸುತ್ತಾ ಸಾಗುತ್ತಿದ್ದ ದೃಶ್ಯವನ್ನು ಹಿಂಬದಿಯ ಸ್ಕೂಟರ್ ಸವಾರರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಕಾರು ನಿಲ್ಲಿಸಿದ ತಕ್ಷಣವೇ ಸಾರ್ವಜನಿಕರು 73 ವರ್ಷದ ಚಾಲಕನನ್ನು ಹೊರಗೆಳೆದು ತರಾಟೆಗೆ ತೆಗೆದುಕೊಂಡಿದ್ದು, ಪೊಲೀಸರು ಆತನನ್ನು ಬಂಧಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಗುರುವಾರ ತಡರಾತ್ರಿ ರಸ್ತೆ ಬದಿಯಲ್ಲಿ ತಪಸ್ ಎಂಬ ಯುವಕ ಬೈಕ್ ಮೇಲೆ ಹೋಗುತ್ತಿದ್ದಾಗ ಈ ಕಾರು ರಭಸವಾಗಿ ಬಂದು ಡಿಕ್ಕಿ ಹೊಡೆದಿದೆ. ಆಘಾತಕ್ಕೆ ಸವಾರ ಕೆಳಗೆ ಬಿದ್ದರೂ, ಬೈಕ್ ಕಾರಿನ ಕೆಳಭಾಗದಲ್ಲಿ ಸಿಲುಕಿಕೊಂಡಿದೆ. ಆದರೂ ಕಾರು ನಿಲ್ಲಿಸದ ವೃದ್ಧ, ಅರ್ಧ ಕಿಲೋಮೀಟರ್ ದೂರ ಬೈಕನ್ನು ರಸ್ತೆಗೆ ಉಜ್ಜುತ್ತಾ ಎಳೆದೊಯ್ದಿದ್ದಾರೆ.
ಹಿಂದಿನಿಂದ ಬಂದ ಸ್ಕೂಟರ್ ಸವಾರರು ಕಾರು ನಿಲ್ಲಿಸು ಎಂದು ಕೂಗುತ್ತಾ ಬೆನ್ನಟ್ಟಿದ್ದಾರೆ. ಕಾರು ನಿಂತ ತಕ್ಷಣವೇ ಮಹಿಳೆಯೊಬ್ಬರು ಬಾಗಿಲು ತೆರೆದು ವೃದ್ಧನನ್ನು ಹೊರಗೆ ಎಳೆದಿದ್ದಾರೆ. ವಸಂತ್ ಕುಂಜ್ ನಿವಾಸಿ ವೇಣು ಗೋಪಾಲ್ (73) ಎಂದು ಗುರುತಿಸಲಾದ ಆ ವೃದ್ಧ, ಕಾರಿನೊಳಗೆ ಕೈಮುಗಿದು ಕುಳಿತಿದ್ದರೂ ಕುಪಿತಗೊಂಡ ಜನರು ಕಾಲರ್ ಹಿಡಿದು ಹೊರಗೆ ಎಳೆದು ತಳ್ಳಾಡಿ ಹಲ್ಲೆ ನಡೆಸಿದ್ದಾರೆ. ತಪ್ಪಾಗಿದ್ದರೆ ಕಾರು ನಿಲ್ಲಿಸಬೇಕಿತ್ತು, ನಾನೇನಾದರೂ ಕಾರಿನಡಿ ಸಿಲುಕಿದ್ದರೆ ಸಾಯುತ್ತಿದ್ದೆ ಎಂದು ಬೈಕ್ ಸವಾರ ಆಕ್ರೋಶ ಹೊರಹಾಕಿದ್ದಾನೆ.
ಮತ್ತಷ್ಟು ಓದಿ: ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಯುವತಿಯ ಕಿಡ್ನಾಪ್ಗೆ ಯತ್ನ, ಪೊಲೀಸ್-ಜಡ್ಜ್ ಕಾರು ಸೇರಿ ನೂರಾರು ವಾಹನಗಳಿಗೆ ಡಿಕ್ಕಿ!
ಮದ್ಯ ಸೇವಿಸಿರಲಿಲ್ಲ: ಘಟನಾ ಸ್ಥಳಕ್ಕೆ ಬಂದ ದೆಹಲಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆತ ಮದ್ಯ ಸೇವಿಸಿರಲಿಲ್ಲ ಎಂಬುದು ದೃಢಪಟ್ಟಿದೆ. ಅಪಘಾತದ ಆಘಾತ ಮತ್ತು ಗಾಬರಿಯಿಂದ ಆತ ಕಾರು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿರಬಹುದು ಎಂದು ಶಂಕಿಸಲಾಗಿದೆ.
ವಿಡಿಯೋ
CAR DRAGS BIKE FOR SEVERAL METRES IN DELHI’S RK PURAM
A video from RK Puram, Delhi shows a car dragging a motorcycle trapped underneath it on Africa Avenue Road.
The incident took place on September 17. Delhi Police said the motorcycle rider fell after the car hit his parked… pic.twitter.com/Dkfx8CEXQu
— contentkikamii (@contentkikamii) September 18, 2026
ಕಾನೂನು ಕ್ರಮ: ಆರೋಪಿ ವೇಣು ಗೋಪಾಲ್ ವಿರುದ್ಧ ಅತಿವೇಗ ಮತ್ತು ಅಜಾಗರೂಕ ಚಾಲನೆ ಹಾಗೂ ಇತರರ ಜೀವಕ್ಕೆ ಅಪಾಯ ತಂದೊಡ್ಡಿರುವ ಆರೋಪದಡಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೆಹಲಿಯಲ್ಲಿ ವಾಹನಗಳ ಕೆಳಗೆ ಸಿಲುಕಿದವರನ್ನು ಕಿಲೋಮೀಟರ್ಗಟ್ಟಲೆ ಎಳೆದೊಯ್ಯುವ ಇಂತಹ ಘಟನೆಗಳು ಈ ಹಿಂದೆಯೂ ನಡೆದಿವೆ. 2023 ರ ಕುಖ್ಯಾತ ಕಾಂಝಾವಾಲಾ ಪ್ರಕರಣದಲ್ಲಿ ಯುವತಿಯೊಬ್ಬಳನ್ನು ಕಾರಿನ ಕೆಳಗೆ ಹಲವು ಕಿಲೋಮೀಟರ್ ಎಳೆದೊಯ್ದು ಆಕೆ ದಾರುಣವಾಗಿ ಸಾವನ್ನಪ್ಪಿದ್ದ ಘಟನೆಯನ್ನು ಮತ್ತೆ ನೆನಪಿಸಿದೆ.
ಪೊಲೀಸರ ಎಚ್ಚರಿಕೆ: ಅಪಘಾತ ಸಂಭವಿಸಿದಾಗ ಭಯದಿಂದ ವಾಹನ ನಿಲ್ಲಿಸದೆ ಓಡಿಸಲು ಪ್ರಯತ್ನಿಸುವುದು ಇನ್ನಷ್ಟು ಭೀಕರ ಅನಾಹುತಗಳಿಗೆ ಕಾರಣವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ವಾಹನ ನಿಲ್ಲಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇಡೀ ಕುಟುಂಬಕ್ಕೆ ಇಷ್ಟವಾಗುವಂತಹ ವಿಭಿನ್ನ ರುಚಿಯ ಖಾದ್ಯ ಸವಿಯಬೇಕೆಂದರೆ ಫಿಶ್ ಫ್ರೈಡ್ ರೈಸ್ ಒಮ್ಮೆ ಪ್ರಯತ್ನಿಸಿ. ಮಸಾಲೆಯುಕ್ತ ಮೀನಿನ ತುಂಡುಗಳೊಂದಿಗೆ ತರಕಾರಿ, ಅನ್ನ ಸೇರಿ ಸಿದ್ಧವಾಗುವ ಈ ಖಾದ್ಯ ರುಚಿಯಲ್ಲಿ ಯಾವುದೇ ಹೋಟೆಲ್ ಶೈಲಿಯ ಫ್ರೈಡ್ ರೈಸ್ಗಿಂತ ಕಡಿಮೆಯಿಲ್ಲ. ಕಡಿಮೆ ಸಮಯದಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ರೆಸಿಪಿ ಮೀನು ಪ್ರಿಯರಿಗೆ ಖಂಡಿತ ಇಷ್ಟವಾಗುತ್ತದೆ.
ಬೇಕಾಗುವ ಪದಾರ್ಥಗಳು...
ಬಾಸ್ಮತಿ ಅಕ್ಕಿ – 2 ಬಟ್ಟಲು
ಮೀನು – 250 ಗ್ರಾಂ
ಈರುಳ್ಳಿ – 1
ಕ್ಯಾರೆಟ್ – 1
ಕ್ಯಾಪ್ಸಿಕಂ – 1
ಹಸಿಮೆಣಸಿನಕಾಯಿ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಸೋಯಾ ಸಾಸ್ – 1 ಚಮಚ
ಮೆಣಸಿನ ಪುಡಿ – 1 ಚಮಚ
ಅರಿಶಿನ – ¼ ಚಮಚ
ಗರಂ ಮಸಾಲೆ – ½ ಚಮಚ
ನಿಂಬೆಹಣ್ಣಿನ ರಸ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯವಿರುವಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ...
ಮೊದಲು ಮೀನು ತುಂಡುಗಳನ್ನು ಸ್ವಚ್ಛವಾಗಿ ತೊಳೆದು ಅದಕ್ಕೆ ಉಪ್ಪು, ಅರಿಶಿನ, ಮೆಣಸಿನ ಪುಡಿ ಮತ್ತು ನಿಂಬೆಹಣ್ಣಿನ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 15–20 ನಿಮಿಷ ಮ್ಯಾರಿನೇಟ್ ಮಾಡಿ.
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮ್ಯಾರಿನೇಟ್ ಮಾಡಿದ ಮೀನು ತುಂಡುಗಳನ್ನು ಹಾಕಿ ಎರಡೂ ಬದಿಗಳೂ ಚೆನ್ನಾಗಿ ಬೇಯುವವರೆಗೆ ಹುರಿದು ತೆಗೆದಿಡಿ.
ಬಾಸ್ಮತಿ ಅಕ್ಕಿಯನ್ನು ಬೇಯಿಸಿ ಅನ್ನವನ್ನು ತಣ್ಣಗಾಗಲು ಬಿಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಬಳಿಕ ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಸೇರಿಸಿ ಹೆಚ್ಚಿನ ಉರಿಯಲ್ಲಿ ಕೆಲವು ನಿಮಿಷ ಹುರಿಯಿರಿ.
ಇದಕ್ಕೆ ಸೋಯಾ ಸಾಸ್, ಸ್ವಲ್ಪ ಉಪ್ಪು ಮತ್ತು ಗರಂ ಮಸಾಲೆ ಹಾಕಿ ಮಿಶ್ರಣ ಮಾಡಿ. ನಂತರ ಬೇಯಿಸಿದ ಅನ್ನವನ್ನು ಸೇರಿಸಿ ಅನ್ನ ನುಣ್ಣಗಾಗದಂತೆ ನಿಧಾನವಾಗಿ ಕಲಸಿ. ಕೊನೆಯಲ್ಲಿ ಹುರಿದ ಮೀನು ತುಂಡುಗಳನ್ನು ಸಣ್ಣದಾಗಿ ಮುರಿದು ಅನ್ನಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಕರವಾದ ಫಿಶ್ ಫ್ರೈಡ್ ರೈಸ್ ಸವಿಯಲು ಸಿದ್ಧ.
ಬೆಂಗಳೂರು: ಟಿ. ನರಸೀಪುರದ ಪ್ರಕರಣ ಕಾಂಗ್ರೆಸ್ ಸರ್ಕಾರದ ಸಂವಿಧಾನ ವಿರೋಧಿ ಮತ್ತು ಹಿಂದೂ ವಿರೋಧಿ ಆಡಳಿತ ಮನಸ್ಥಿತಿಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಈಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಶಾಂತಿ ಸಭೆಯನ್ನು ವರದಿ ಮಾಡಲು ಸ್ಥಳೀಯ ಮಾಧ್ಯಮದ ಪ್ರತಿನಿಧಿಯನ್ನು ಠಾಣೆಯಿಂದಲೇ ಕರೆಯಲಾಗಿತ್ತು. ಅದೇ ಸಭೆಯ ವಿಡಿಯೋ ಪ್ರಸಾರವಾದ ಬಳಿಕ, ಇದೀಗ ಆ ವಿಡಿಯೋ ಮಾಡಿದ್ದ ಪತ್ರಕರ್ತನ ಮೇಲೆಯೇ FIR ದಾಖಲಿಸಲಾಗಿದೆ. ಇದು ಯಾವ ನ್ಯಾಯ? ಮಾನ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಉತ್ತರಿಸಿ ಎಂದಿದ್ದಾರೆ.
ವಿಡಿಯೋದಲ್ಲಿನ ಪೊಲೀಸ್ ಅಧಿಕಾರಿಯ ಹೇಳಿಕೆ ಸರಿಯಾಗಿತ್ತು, ಕಾನೂನುಬದ್ಧವಾಗಿತ್ತು ಎಂದು ಇಡೀ ರಾಜ್ಯ ಕಾಂಗ್ರೆಸ್ ಸರ್ಕಾರವೇ ಸಮರ್ಥಿಸಿಕೊಳ್ಳುತ್ತಿದ್ದರೆ, ಆ ಹೇಳಿಕೆಯನ್ನು ವರದಿ ಮಾಡಿದ ಪತ್ರಕರ್ತನ ವಿರುದ್ಧ FIR ದಾಖಲಿಸಿರುವುದರ ಆಧಾರವೇನು? ಸಭೆಯಲ್ಲಿ ಆಡಿದ ಮಾತನ್ನೇ ದಾಖಲಿಸಿ ಪ್ರಸಾರ ಮಾಡಲಾಗಿದೆ. ಮಾಧ್ಯಮದ ಬಾಯಿ ಮುಚ್ಚಿಸಲು FIR ಎಂಬ ಅಸ್ತ್ರ ಪ್ರಯೋಗಿಸುವುದು ಯಾವ ಪಾಳೇಗಾರಿಕೆ ಮನಸ್ಥಿತಿ? ಎಂದು ಪ್ರಶ್ನಿಸಿದ್ದಾರೆ,
ಇದು ಕೇವಲ ಒಬ್ಬ ಪತ್ರಕರ್ತನ ವಿಷಯವಲ್ಲ. ಇದು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ. ಮಾಧ್ಯಮ ಸ್ವಾತಂತ್ರ್ಯ ಎಲ್ಲಿದೆ ಪ್ರಶ್ನಿಸುವ ಹಕ್ಕು ಎಲ್ಲಿದೆ? ಸರ್ಕಾರದ ಕ್ರಮಗಳನ್ನು ವರದಿ ಮಾಡುವ ಸ್ವಾತಂತ್ರ್ಯ ಎಲ್ಲಿದೆ?
ಟಿ. ನರಸೀಪುರದ ಈ ಪ್ರಕರಣ ಕಾಂಗ್ರೆಸ್ ಸರ್ಕಾರದ ಸಂವಿಧಾನ ವಿರೋಧಿ ಮತ್ತು ಹಿಂದೂ ವಿರೋಧಿ ಆಡಳಿತ ಮನಸ್ಥಿತಿಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.
ಶಾಂತಿ ಸಭೆಯನ್ನು ವರದಿ ಮಾಡಲು ಸ್ಥಳೀಯ ಮಾಧ್ಯಮದ ಪ್ರತಿನಿಧಿಯನ್ನು ಠಾಣೆಯಿಂದಲೇ ಕರೆಯಲಾಗಿತ್ತು. ಅದೇ ಸಭೆಯ ವಿಡಿಯೋ ಪ್ರಸಾರವಾದ ಬಳಿಕ, ಇದೀಗ ಆ ವಿಡಿಯೋ ಮಾಡಿದ್ದ ಪತ್ರಕರ್ತನ ಮೇಲೆಯೇ FIR… pic.twitter.com/kugf1Gszgi
ಇದೇನು ತುರ್ತು ಪರಿಸ್ಥಿತಿ ಕಾಲವೇ? ಹಿಂದೂಗಳು ತಮ್ಮ ಹಬ್ಬಗಳನ್ನು ಆಚರಿಸಲು ಸರ್ಕಾರದ ಅನುಮತಿ, ಅಧಿಕಾರಿಗಳ ಅನುಮತಿ, ಪೊಲೀಸರ ಅನುಮತಿ ಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಧಿಕಾರಿಗಳು ಆಡಿದ ಮಾತುಗಳನ್ನು ಮಾಧ್ಯಮದಲ್ಲಿ ಪ್ರಸಾರ ಮಾಡಿದರೆ ಪತ್ರಕರ್ತರ ಮೇಲೆ FIr ಎಂದು ಕಿಡಿ ಕಾರಿದ್ದಾರೆ.
ಹಿಂದೂಗಳ ಹಕ್ಕುಗಳ ಮೇಲೆ ನಿರ್ಬಂಧ, ಪ್ರಶ್ನಿಸುವ ಮಾಧ್ಯಮದ ಮೇಲೆ ಪ್ರಕರಣ — ಇದೇನಾ ಕಾಂಗ್ರೆಸ್ ಸರ್ಕಾರದ ‘ಜಾತ್ಯತೀತ’ ಆಡಳಿತ, ಇತ್ತೀಚೆಗೆ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿದಾಗ, ನನ್ನ ವಿರುದ್ಧ ಜಾತಿಯ ವಿಚಾರವನ್ನು ಮುಂದಿಟ್ಟಿದ್ದ ಇದೇ ಕಾಂಗ್ರೆಸ್ ಸರ್ಕಾರ ಇಂದು ಒಬ್ಬ ದಲಿತ ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಿರುವುದು ಎಷ್ಟು ಸರಿ? ದಲಿತರ ಹೆಸರಿನಲ್ಲಿ ರಾಜಕೀಯ ಬೆಳೆ ಬೇಯಿಸಲು ಯತ್ನಿಸುವ ಕಾಂಗ್ರೆಸ್ಗೆ ದಲಿತ ಪತ್ರಕರ್ತನ ಅಭಿವ್ಯಕ್ತಿ ಸ್ವಾತಂತ್ರ್ಯ ಮಾತ್ರ ಕಾಣುವುದಿಲ್ಲವೇ ಅಥವಾ ಕುರುಡನಂತೆ ನಾಟಕ ಮಾಡುತ್ತಿದೆಯೇ..??
ನಾನು ವಿರೋಧ ಪಕ್ಷದ ನಾಯಕನಾಗಿ ಸ್ಪಷ್ಟವಾಗಿ ಹೇಳುತ್ತೇನೆ. ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತಂದರೆ, ಪತ್ರಕರ್ತರನ್ನು ಬೆದರಿಸಿದರೆ, ಪ್ರಶ್ನಿಸುವ ಧ್ವನಿಯನ್ನು FIR ಮೂಲಕ ಹತ್ತಿಕ್ಕಲು ಪ್ರಯತ್ನಿಸಿದರೆ, ನಾನು ಮಾಧ್ಯಮದವರೊಂದಿಗೆ ಸದಾ ನಿಲ್ಲುತ್ತೇನೆ. ಮಾನ್ಯ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಪತ್ರಕರ್ತ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ತನಿಖೆ ನಡೆಯಲಿ. ಆದರೆ ಅಧಿಕಾರಿಗಳ ಹೇಳಿಕೆಯನ್ನು ದಾಖಲಿಸಿ ವರದಿ ಮಾಡಿದ ಕಾರಣಕ್ಕೆ ಪತ್ರಕರ್ತನನ್ನೇ ಆರೋಪಿ ಮಾಡುವ ಕ್ರಮ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಮೊದಲು ಹಿಂದೂಗಳ ಹಕ್ಕುಗಳ ಬಗ್ಗೆ ಉತ್ತರಿಸಲಿ. ನಂತರ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಉತ್ತರಿಸಲಿ. ಕೊನೆಗೆ ಸಂವಿಧಾನವನ್ನು ಗೌರವಿಸುತ್ತೀರೋ, ಅಥವಾ ಅಧಿಕಾರದ ಅಹಂಕಾರವನ್ನೇ ಸಂವಿಧಾನಕ್ಕಿಂತ ಮೇಲಿಡುತ್ತೀರೋ ಎಂಬುದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಲಿ. ಸರ್ಕಾರ ಕೂಡಲೇ ಈ ಪ್ರಕರಣದ ಬಗ್ಗೆ ಪಾರದರ್ಶಕ ತನಿಖೆ ನಡೆಸಿ, FIR ದಾಖಲಿಸಿರುವ ಆಧಾರವನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು.ಮಾಧ್ಯಮದ ಧ್ವನಿಯನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವವನ್ನು ಸದ್ದಡಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.